Tag: ಫ್ರೆಂಡ್ ಶಿಪ್

  • ಚೈತ್ರಾ ಆಚಾರ್ ಗೆ  ಬೆಸ್ಟ್ ಗಿಫ್ಟ್ ಅಂದರೆ ರುಕ್ಮಿಣಿ ವಸಂತ್

    ಚೈತ್ರಾ ಆಚಾರ್ ಗೆ ಬೆಸ್ಟ್ ಗಿಫ್ಟ್ ಅಂದರೆ ರುಕ್ಮಿಣಿ ವಸಂತ್

    ಪ್ತ ಸಾಗರದಾಚೆ ಎಲ್ಲೋ  ಸಿನಿಮಾದಲ್ಲಿ ಒಟ್ಟಾಗಿ ನಟಿಸಿದವರು ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ ವಸಂತ್ (Rukmini Vasant). ಈ ಜೋಡಿಯು ಚಿತ್ರದಲ್ಲಿ ಸಖತ್ ಮೋಡಿ ಮಾಡಿತ್ತು. ಅಲ್ಲಿಂದ ಈ ಜೋಡಿ ಸದಾ ಜೊತೆಯಾಗಿಯೇ ಇರುತ್ತದೆ. ಒಬ್ಬರಿಗೊಬ್ಬರ ಸಿನಿಮಾಗಳನ್ನು ಪ್ರಮೋಟ್ ಮಾಡ್ತಾ, ಇತರರ ಚಿತ್ರಗಳಿಗೂ ಪ್ರೋತ್ಸಾಹ ನೀಡುತ್ತಾ ತಮ್ಮ ಗೆಳೆತನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ರುಕ್ಮಿಣಿ ವಸಂತ್ ಜೊತೆಗಿರುವ ಫೋಟೋವೊಂದನ್ನು ಚೈತ್ರಾ ಆಚಾರ್ ಪೋಸ್ಟ್ ಮಾಡಿ, ನನ್ನ ಜೀವನದಲ್ಲಿ ಸಿಕ್ಕಿ ಬೆಸ್ಟ್ ಗಿಫ್ಟ್ ಅಂದರೆ ಅದು ರುಕ್ಮಿಣಿ ವಸಂತ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರುಕ್ಮಿಣಿ ಅವರಿಗೆ ತಮ್ಮ ಜೀವನದಲ್ಲಿ ಯಾವ ರೀತಿಯ ಮಹತ್ವವನ್ನು ನೀಡಲಾಗಿದೆ ಎನ್ನುವುದನ್ನು ಸಾರಿದ್ದಾರೆ.

    ಚೈತ್ರಾ ಆಚಾರ್ ಅವರು ಹೊಸ ಹೊಸ ಪಾತ್ರಗಳಿಗೆ ಕಾದು ಕೂತಿದ್ದರೆ, ರುಕ್ಮಿಣಿ ವಸಂತ್ ಈಗಾಗಲೇ ರಾಜ್ಯದ ಗಡಿದಾಟಿ ಬೇರೆ ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಮಿಳು ಸಿನಿಮಾವೊಂದರ ಶೂಟಿಂಗ್ ನಲ್ಲೂ ಅವರು ಭಾಗಿಯಾಗಿದ್ದಾರೆ.

  • ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ: ದರ್ಶನ್ ಬಗ್ಗೆ ಸುದೀಪ್ ಮಾತು

    ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ: ದರ್ಶನ್ ಬಗ್ಗೆ ಸುದೀಪ್ ಮಾತು

    ಕಿಚ್ಚ ಸುದೀಪ್ (Sudeep) ಮತ್ತು ದರ್ಶನ್ (Darshan) ಸ್ನೇಹದ (Friendship) ವಿಚಾರವಾಗಿ ಹಲವು ವರ್ಷಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ ದೂರವಾಗಿರುವ ವಿಚಾರ ಗುಟ್ಟಿನದ್ದೇನಲ್ಲ. ಆದರೂ, ಇಬ್ಬರು ಮತ್ತೆ ಒಂದಾಗುತ್ತಾರೆ, ಮತ್ತೆ ಮೊದಲಿನಂತೆ ಸ್ನೇಹಿತರಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾಯುವಿಕೆ ಇಬ್ಬರ ಅಭಿಮಾನಿಗಳಲ್ಲೂ ಇದೆ. ಮೊನ್ನೆ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತು. ಆದರೂ, ಇಬ್ಬರೂ ಮಾತಾಡಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇತ್ತು.

    ಈ ಕುರಿತು ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಕುರಿತಾಗಿ ಮಾತನಾಡಿದ ಕಿಚ್ಚ, ‘ನಾನು ಸುಮಲತಾ ಅವರ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದೆ. ಮುಂಚೆನೇ ದರ್ಶನ್ ಇರ್ತಾರೆ ಅಂತ ನಂಗೂ ಗೊತ್ತಿತ್ತು. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನೋದು ಕಲ್ಪನೆ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ನನ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ. ಪ್ರಶ್ನೆಗಳು ಬರ್ತಾವೆ, ಒಳ್ಳೇದು, ಕೆಟ್ಟದು ಇರ್ತಾವೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ. ಇಬ್ರು matured ಇದೀವಿ. ಎಲ್ಲವೂ ಸರಿ ಹೋಗ್ಬೇಕು, ಅಂದಾಗ ಸರಿ ಹೋಗುತ್ತೆ’ ಎಂದರು.

     

    ಸುದೀಪ್ ಮತ್ತು ದರ್ಶನ್ ಯಾವ ಕಾರಣಕ್ಕೆ ದೂರವಾದರು ಎನ್ನುವುದು ಈಗಲೂ ಯಕ್ಷ ಪ್ರಶ್ನೆ. ಆದರೂ, ದರ್ಶನ್ ಬಗ್ಗೆ ಸುದೀಪ್ ಅವರಿಗೆ ಈಗಲೂ ಅದೇ ಸ್ನೇಹವಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋವಿದೆ. ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಫ್ರೆಂಡ್ ಶಿಪ್’ಗಾಗಿ ತಮಿಳು ಚಿತ್ರರಂಗಕ್ಕೆ ಬಂದ ಹರ್ಭಜನ್ ಸಿಂಗ್

    ‘ಫ್ರೆಂಡ್ ಶಿಪ್’ಗಾಗಿ ತಮಿಳು ಚಿತ್ರರಂಗಕ್ಕೆ ಬಂದ ಹರ್ಭಜನ್ ಸಿಂಗ್

    ಬೆಂಗಳೂರು: ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ತಮಿಳು ಚಿತ್ರವೊಂದರಲ್ಲಿ ನಟಿಸಲು ಕಾಲಿವುಡ್‍ಗೆ ಬಂದಿದ್ದಾರೆ.

    ಸದ್ಯ ಕ್ರಿಕೆಟ್ ಪಂದ್ಯಗಳಲ್ಲಿ ಸಕ್ರಿಯವಾಗಿ ಇಲ್ಲದ ಹರ್ಭಜನ್ ಸಿಂಗ್ ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹೌದು ಭಾರತದ ದೂಸ್ರಾ ಸ್ಪೆಶಲಿಸ್ಟ್ ಬಜ್ಜಿ ಈಗ ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಫ್ರೆಂಡ್ ಶಿಪ್’ ಚಿತ್ರದಲ್ಲಿ ನಟಿಸಲಿದ್ದಾರೆ.

    ಕ್ರಿಕೆಟ್‍ಗೆ ಅಲ್ಪ ವಿರಾಮವಿಟ್ಟಿರುವ ಹರ್ಭಜನ್ ಸಿಂಗ್ ಅವರು ಸದ್ಯ ಹಲವಾರು ಟಿವಿ ಶೋನಲ್ಲಿ ಗೆಸ್ಟ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಪತ್ನಿ ಗೀತಾ ಬಸ್ರಾ ಅಭಿನಯದ ಸೆಕೆಂಡ್ ಹ್ಯಾಂಡ್ ಹಸ್ಬೆಂಡ್ ಚಿತ್ರದಲ್ಲಿ ಸ್ಪೆಶಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಫ್ರೆಂಡ್ ಶಿಪ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಜ್ಜಿ ಚಿತ್ರದ ಮೊದಲ ಪೋಸ್ಟರ್ ಅನ್ನು ಹಾಕಿ ತಮಿಳಿನಲ್ಲೇ ತಮಿಳುಚಿತ್ರರಂಗಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಫ್ರೆಂಡ್ ಶಿಪ್ ಸಿನಿಮಾವನ್ನು ಜಾನ್ ಪೌಲ್ ಮತ್ತು ಶ್ಯಾಮ್ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಬಿಡುಗಡೆಯಾಗಿರುವ ಮೊದಲ ಪೋಸ್ಟರ್ ಸಖತ್ ಟ್ರೆಂಡಿಯಾಗಿದೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಪೋಸ್ಟರ್ ಅಲ್ಲಿ ಇಬ್ಬರು ವ್ಯಕ್ತಿಗಳ ಕೈಗೆ ಒಂದೇ ಬೇಡಿಯನ್ನು ಹಾಕಿದ್ದಾರೆ. ಬಜ್ಜಿ ನಟನೆಯ ಮೊದಲ ತಮಿಳು ಸಿನಿಮಾದ ಪೋಸ್ಟರ್ ಗೆ ಪ್ರೇಕ್ಷಕನಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಫ್ರೆಂಡ್ ಶಿಪ್ ಚಿತ್ರದ ಪೋಸ್ಟರ್ ಅನ್ನು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಮೊದಲ ಬಾರಿಗೆ ಭಾರತದ ಚಿತ್ರರಂಗದಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಫ್ರೆಂಡ್ ಶಿಪ್ ಎಂಬ ಚಿತ್ರದಲ್ಲಿ ಲೀಡ್ ರೋಲ್‍ನಲ್ಲಿ ಅಭಿನಯಿಸಲಿದ್ದಾರೆ. ಇದೇ 2020 ಕ್ಕೆ ಈ ಸಿನಿಮಾ ದೇಶಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

    ಹರ್ಭಜನ್ ಸಿಂಗ್ ಅವರು ಜೊತೆಗೆ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಮೊದಲ ಬಾರಿಗೆ ಇದೇ ವರ್ಷ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇರ್ಫಾನ್ ಪಠಾಣ್ ಅವರು ವಿಕ್ರಮ್ ನಟನೆಯ ‘ವಿಕ್ರಮ್ 58’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ಸಿನಿಮಾದ ನಿರ್ದೇಶಕ ಅಜಯ್ ಜ್ಞಾನಮುತ್ತು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.