Tag: ಫ್ರೆಂಡ್

  • ಮಾಡೆಲ್ ಮಾಡೋದಾಗಿ ಮಹಿಳೆಗೆ ಫೇಸ್‍ಬುಕ್ ಫ್ರೆಂಡ್‍ನಿಂದ ವಂಚನೆ!

    ಮಾಡೆಲ್ ಮಾಡೋದಾಗಿ ಮಹಿಳೆಗೆ ಫೇಸ್‍ಬುಕ್ ಫ್ರೆಂಡ್‍ನಿಂದ ವಂಚನೆ!

    ಬೆಂಗಳೂರು: ಗುರುತು ಪರಿಚಯ ಇಲ್ಲದೇ ಇರೋರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಗೊತ್ತು ಗುರಿ ಇಲ್ಲದವರನ್ನ ಫ್ರೆಂಡ್ಸ್ ಮಾಡ್ಕೊಂಡು ನನ್ ಎಫ್‍ಬಿಯಲ್ಲಿ ಮೂರ್ ಸಾವಿರ, ನಾಲ್ಕು ಸಾವಿರ ಫ್ರೆಂಡ್ಸ್ ಇದ್ದಾರೆ ಅಂತಾ ಬೀಗೋರೆಲ್ಲಾ ಈ ಸ್ಟೋರಿ ಓದಿ.

    ಫೇಸ್ ಬುಕ್ ಫ್ರೆಂಡ್ ಒಬ್ಬನನ್ನು ನಂಬಿ ಮಹಿಳೆ ಮೋಸ ಹೋಗಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಕಳೆದ ವರ್ಷ ಮಹಿಳೆಯೊಬ್ಬರಿಗೆ ವಾದಿರಾಜ್ ಎನ್ನುವ ವ್ಯಕ್ತಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದನು. ಮಹಿಳೆ ಇಂದೂ ಮುಂದೂ ನೋಡದೆ ಅಕ್ಸೆಪ್ಟ್ ಕೂಡ ಮಾಡಿಕೊಂಡರು. ವಾದಿರಾಜ್ ಮೆಸೆಂಜರ್ ನಲ್ಲಿ ನಿಧಾನವಾಗಿ ಚಾಟ್ ಮಾಡುವುದಕ್ಕೆ ಆರಂಭಿಸಿ ಮಹಿಳೆಯ ಸ್ನೇಹ ಸಂಪಾದಿಸಿದ್ದ. ನೀವು ನೋಡೋಕೆ ಚೆನ್ನಾಗಿದ್ದೀರಾ, ಯಾಕೆ ಸೀರಿಯಲ್, ಸಿನಿಮಾಗಳಲ್ಲಿ ನಟನೆ ಮಾಡಬಾರದು ಎಂದು ಹೇಳುತ್ತಿದ್ದನು. ಈತನ ಬಣ್ಣದ ಮಾತುಗಳಿಗೆ ಮಹಿಳೆ ಅದಾಗಲೇ ಮಾರುಹೋಗಿದ್ದರು.

    ಅಲ್ಲದೇ ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ಕೂಡ ಕೊಟ್ಟಿದ್ದನು. ಫೋಟೋ ಶೂಟ್ ಅಂತಾ ತಾನಿದ್ದ ಯಶವಂತಪುರದ ಲಾಡ್ಜ್ ಗೆ ಮಹಿಳೆಯನ್ನು ಕರೆಸಿಕೊಂಡಿದ್ದನು. ಅದಾದ ಮೇಲೆ ಮೂರು ದಿನಗಳ ಕಾಲ ಮಹಿಳೆಯನ್ನು ಮಡಿಕೇರಿಗೂ ಸಹ ಕರೆದೊಯ್ದಿದ್ದನು. ಮದುವೆಯಾಗ್ತಿದ್ದೇವೆ ಮನೆ ಮಾಡಬೇಕು ಹಣ ಇಲ್ಲ. ಸ್ವಲ್ಪ ಹಣ ಕೊಡು ಅಂದಿದ್ದನು. ಇದರಿಂದ ಮಹಿಳೆ ತನ್ನ ಒಡವೆಗಳನ್ನ ಅಡ ಇಟ್ಟು ಐದು ಲಕ್ಷ ಹಣ ಹೊಂದಿಸಿಕೊಟ್ಟಿದ್ದರು.

    ನಂತರ ಸರ್ಕಾರದಿಂದ ಕೇವಲ ಎರಡು ಲಕ್ಷಕ್ಕೆ ಸೈಟ್ ಕೊಡಿಸ್ತೀನಿ ನಿನ್ನ ಸಂಬಂಧಿಕರಿದ್ರೆ ಹೇಳು ಅಂದಿದ್ದನು. ಈತನ ಮಾತನ್ನ ನಂಬಿ ಈ ಮಹಿಳೆ ಸಾಕಷ್ಟು ಸ್ನೇಹಿತರು ಹಾಗು ಸಂಬಂಧಿಕರನ್ನ ವಾದಿರಾಜ್‍ಗೆ ಪರಿಚಯಿಸಿದ್ದರು. ಪ್ರತಿಯೊಬ್ಬರಿಂದ ಎರಡು ಲಕ್ಷದಂತೆ ಒಟ್ಟು 90 ಲಕ್ಷ ಹಣ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಮಹಿಳೆಗೆ ಮೋಸ ಹೋಗಿರೋದು ಗೊತ್ತಾದ ನಂತರ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ಅರೆಸ್ಟ್ ಮಾಡಿದಾಗ ಈತನ ನಿಜ ಹೆಸರು ಸತೀಶ್ ಎಂಬುದು ತಿಳಿದುಬಂತು. ಹಲವಾರು ಫೇಸ್‍ಬುಕ್ ಅಕೌಂಟ್‍ಗಳಿಂದ ಸತೀಶ್ 30ಕ್ಕೂ ಹೆಚ್ಚು ಮಹಿಳೆಗೆ ಇದೇ ರೀತಿಯಾಗಿ ವಂಚನೆ ಮಾಡಿದ್ದಾನೆ.

    ಸದ್ಯ ಈತನನ್ನು ಅರೆಸ್ಟ್ ಮಾಡಿರುವ ಯಶವಂತಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv