Tag: ಫ್ರೆಂಚ್‌ ಫ್ರೈಸ್‌

  • ಫ್ರೆಂಚ್‌ ಫ್ರೈಸ್‌ ತಿನ್ನಲು ಅನುಮತಿ ನೀಡದ್ದಕ್ಕೆ ದೂರು – ಪತಿ ವಿರುದ್ಧ ಕ್ರೌರ್ಯದ ಕೇಸ್‌ ತನಿಖೆಗೆ ಹೈಕೋರ್ಟ್‌ ತಡೆ

    ಫ್ರೆಂಚ್‌ ಫ್ರೈಸ್‌ ತಿನ್ನಲು ಅನುಮತಿ ನೀಡದ್ದಕ್ಕೆ ದೂರು – ಪತಿ ವಿರುದ್ಧ ಕ್ರೌರ್ಯದ ಕೇಸ್‌ ತನಿಖೆಗೆ ಹೈಕೋರ್ಟ್‌ ತಡೆ

    ಬೆಂಗಳೂರು: ಫ್ರೆಂಚ್‌ ಫ್ರೈಸ್‌ (French Fries) ತಿನ್ನಲು ಅನುಮತಿ ನೀಡದ್ದಕ್ಕೆ ಪತ್ನಿಯಿಂದ (Wife) ಕ್ರೌರ್ಯದ ಪ್ರಕರಣ ಎದುರಿಸುತ್ತಿದ್ದ ಪತಿಗೆ (Husband) ಕರ್ನಾಟಕ ಹೈಕೋರ್ಟ್‌ (Karnataka High Court) ತಾತ್ಕಾಲಿಕ ರಿಲೀಫ್‌ ನೀಡಿದೆ.

    ದೂರಿನಲ್ಲಿರುವ ಕಾರಣಗಳು ಕ್ಷುಲ್ಲಕವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ನಾಗಪ್ರಸನ್ನ ಅವರಿದ್ಧ ಏಕಸದಸ್ಯ ಪೀಠ ತನಿಖೆಗೆ ತಡೆ ನೀಡಿ ಉದ್ಯೋಗ ಸಂಬಂಧ ಪತಿಗೆ ಅಮೆರಿಕಕ್ಕೆ ತೆರಳಲು ಅನುಮತಿ ನೀಡಿತು.

    ವಕೀಲ ಶಾಂತಿ ಭೂಷಣ್ ಹೆಚ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಪತಿ ತನ್ನ ವಿರುದ್ಧದ ದೂರು ಕ್ಷುಲ್ಲಕವಾಗಿದೆ ಎಂದು ಆರೋಪಿಸಿ ತನಿಖೆಗೆ ತಡೆ ನೀಡುವಂತೆ ಕೋರಿದ್ದರು.  ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್‌ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?

    ಕಕ್ಷಿದಾರ ಮತ್ತು ಅವರ ಪೋಷಕರ ವಿರುದ್ಧ ಐಪಿಸಿಯ ಸೆಕ್ಷನ್ 498 ಎ (ಕ್ರೌರ್ಯ) ಅಡಿಯಲ್ಲಿ ಪತ್ನಿ ದೂರು ದಾಖಲಿಸಿದ್ದಾರೆ. ಕಕ್ಷಿದಾರರಿಗೆ ಅಮೆರಿಕದಲ್ಲಿ (USA) ಉದ್ಯೋಗವಿದೆ. ಆದರೆ ಆದರೆ ನ್ಯಾಯವ್ಯಾಪ್ತಿಯ ನ್ಯಾಯಾಲಯವು ಪತ್ನಿಯ ದೂರಿನ ನಂತರ ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿದ್ದರಿಂದ ಅಮೆರಿಕಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಪೋಷಕರ ವಿರುದ್ಧದ ತನಿಖೆಗೆ ಕೋರ್ಟ್‌ ತಡೆ ನೀಡಿತ್ತು ಎಂದು ವಕೀಲರು ವಾದಿಸಿದರು.

    ಎರಡನೇ ಮಗುವಿಗೆ ಜನ್ಮ ನೀಡಿದ ಕೂಡಲೇ ಫ್ರೆಂಚ್ ಫ್ರೈಸ್, ಅಕ್ಕಿ ಮತ್ತು ಮಾಂಸವನ್ನು ತಿನ್ನಲು ಪತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಪತ್ನಿ ಕ್ರೌರ್ಯದ ಅಡಿ ಪತಿ ವಿರುದ್ಧ ದೂರು ನೀಡಿದ್ದರು.

    ಇನ್ನೊಂದು ಕಡೆ ಮಗು ಹುಟ್ಟುಗ ಮೊದಲು ನಾವು ಅಮೆರಿಕದಲ್ಲಿ 6 ವರ್ಷ ನೆಲೆಸಿದ್ದೆವು. ಈ ಸಮಯದಲ್ಲಿ ಮನೆಯ ಎಲ್ಲಾ ಕೆಲಸವನ್ನು ನಾನೇ ಮಾಡುತ್ತಿದ್ದೆ. ಆಕೆ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಈ ವೇಳೆ ಪಾಕಿಸ್ತಾನಿ ನಾಟಕ ಹೆಚ್ಚು ವೀಕ್ಷಿಸುತ್ತಿದ್ದಳು. ಪತ್ನಿ ಟಿವಿ ನೋಡುತ್ತಾ ಬಾತ್‌ ರೂಂ ಸ್ವಚ್ಛ ಮಾಡುವಂತೆ ಮತ್ತು ಪಾತ್ರೆ ತೊಳೆಯುವಂತೆ ನನಗೆ ಸೂಚಿಸುತ್ತಿದ್ದಳು ಎಂದು ಪತಿ ನ್ಯಾಯಾಲಯಕ್ಕೆ ಉತ್ತರ ನೀಡಿದ್ದರು.

    ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಇದು ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ ಮತ್ತು ಪ್ರಕರಣದಲ್ಲಿ ಎಲ್ಒಸಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟು ಪತಿ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಿತು.