Tag: ಫ್ರೆಂಚ್ ಫ್ರೈಯಿಸ್

  • ಫ್ರೆಂಚ್ ಫ್ರೈಸ್ ಮಾಡುವ ವಿಧಾನ

    ಫ್ರೆಂಚ್ ಫ್ರೈಸ್ ಮಾಡುವ ವಿಧಾನ

    ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನರು ಸಹ 2021ರ ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕೊರೊನಾ ಹಿನ್ನೆಲೆ ಸರ್ಕಾರ ನಿಷೇಧಾಜ್ಞೆ ವಿಧಿಸಿದೆ. ಇಂದು ಸಂಜೆಯಿಂದಲೇ ಬಹುತೇಕ ಬಂದ್ ವಾತಾವಾರಣ ನಿರ್ಮಾಣವಾಗೋದು ಖಚಿತ. ಹಾಗಾಗಿ ಮೆನೆಯಲ್ಲಿಯೇ ಸಂಜೆಯ ಸ್ನ್ಯಾಕ್ಸ್ ಮಾಡಿಕೊಳ್ಳಿ. ಫ್ರೆಂಚ್ ಫ್ರೈಸ್ ಮಾಡುವ ವಿಧಾನ ಇಲ್ಲಿದೆ

    ಬೇಕಾಗುವ ಸಾಮಾಗ್ರಿಗಳು
    * ಆಲೂಗಡ್ಡೆ – 250 ಗ್ರಾಂ
    * ಚಾಟ್ ಮಸಲಾ – 3 ರಿಂದ 4 ಟೀಸ್ಪೂನ್
    * ಎಣ್ಣೆ ಕರಿಯಲು
    * ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದವಾಗಿ ಫ್ರೆಂಚ್ ಫ್ರೈಸ್ ಶೇಪ್ ನಲ್ಲಿ ಕಟ್ ಮಾಡ್ಕೊಂಡು 5 ರಿಂದ 6 ನಿಮಿಷ ನೀರಿನಲ್ಲಿ ನೆನೆಸಿ ತೊಳೆದು ಎತ್ತಿಟ್ಟುಕೊಳ್ಳಿ.
    * ಸ್ಟೌವ್ ಆನ್ ಮಾಡಿಕೊಂಡು ಪ್ಯಾನ್ ಇರಿಸಿ. ಪ್ಯಾನ್ ಒಂದರಿಂದ ಎರಡು ಕಪ್ ನಷ್ಟು ನೀರು ಹಾಕಿ. ನೀರು ಕುದಿಯುತ್ತಿದ್ದಂತೆ ಕತ್ತರಿಸಿ ತೊಳೆದಿಟ್ಟುಕೊಂಡಿರುವ ಆಲೂಗಡ್ಡೆ ಪೀಸ್ ಮತ್ತು ಒಂದು ಟೀ ಸ್ಪೂನ್ ಉಪ್ಪು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿ.

    * ಆಲೂಗಡ್ಡೆಯನ್ನ ನೀರಿನಿಂದ ಬೇರ್ಪಡಿಸಿ ತಣ್ಣಗಾಗಲು ಬಿಡಿ.
    * ಸ್ಟೌವ್ ಮೇಲೆ ಮತ್ತೊಂದು ಪ್ಯಾನ್ ಇರಿಸಿ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ.
    * ತಣ್ಣಗಾಗಿರುವ ಆಲೂಗಡ್ಡೆ ಪೀಸ್ ಗಳನ್ನ ಕಾಟನ್ ಬಟ್ಟೆಯಿಂದ ಮೃದುವಾಗಿ ಒರೆಸಿ ಡ್ರೈ ಮಾಡಿಕೊಳ್ಳಿ.
    * ಎಣ್ಣೆ ಬಿಸಿಯಾಗುತ್ತಿದ್ದಂತೆ ಒಂದೊಂದಾಗಿ ಆಲೂಗಡ್ಡೆ ಪೀಸ್ ಹಾಕಿ ಗೋಲ್ಡನ್ ಕಲರ್ ಬರೋವರೆಗೆ ಫ್ರೈ ಮಾಡಿ, ಸರ್ವಿಂಗ್ ಪ್ಲೇಟ್ ಹಾಕಿ ಚಾಟ್ ಮಸಾಲಾ ಉದುರಿಸಿದ್ರೆ ನಿಮ್ಮ ಫ್ರೆಂಚ್ ಫ್ರೈಸ್ ರೆಡಿ. (ನೀವು ಖಾರ ಪ್ರಿಯರಾಗಿದ್ರೆ ಅಚ್ಚ ಖಾರದ ಪುಡಿ ಸಹ ಉದುರಿಸಿಕೊಳ್ಳಬಹುದು)