Tag: ಫ್ರೀ ಬಸ್‌ ಪ್ರಯಾಣ

  • ಇಂದಿನಿಂದ ಮಹಿಳೆಯರಿಗೆ ಬಸ್ ಫ್ರೀ- ನಗರದಾದ್ಯಂತ 2,000 ಹೋಮ್‍ಗಾರ್ಡ್ಸ್ ನಿಯೋಜನೆ

    ಇಂದಿನಿಂದ ಮಹಿಳೆಯರಿಗೆ ಬಸ್ ಫ್ರೀ- ನಗರದಾದ್ಯಂತ 2,000 ಹೋಮ್‍ಗಾರ್ಡ್ಸ್ ನಿಯೋಜನೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇವತ್ತು ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಲಿದ್ದಾರೆ. ಮೊದಲ ಬಾರಿಗೆ ಮಹಿಳೆಯರಿಗೆ ರಾಜ್ಯಾದ್ಯಂತ ಬಸ್ ಫ್ರೀ ಜೊತೆಗೆ ಒಂದಷ್ಟು ಕಿರಿಕ್ ಗಳು ನಡೆಯೋ ಸಾಧ್ಯತೆ ಕೂಡ ಇದೆ. ಇದಕ್ಕೆ ಪೊಲೀಸ್ ಇಲಾಖೆ (Police Department) ಕೂಡ ಮುಂಜಾಗ್ರತೆ ಕ್ರಮ ಕೈಗೊಂಡಿದೆ.

    ಹೌದು. ಇಂದಿನಿಂದ ರಾಜ್ಯಾದ್ಯಂತ ಮಹಿಳೆಯರು ಫ್ರೀ ಆಗಿ ಓಡಾಡೋಕೆ ಖುಷಿಯಿಂದ ಕಾತರರಾಗಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆದರೆ ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ ವೋಟರ್ ಐಡಿ, ರೇಷನ್ ಕಾರ್ಡ್ ಹಾಗೂ ಅಧಾರ್ ಕಾರ್ಡ್ (Adhar card) ಸೇರಿದಂತೆ ಯಾವುದಾರು ಒಂದು ದಾಖಲೆ ಇಟ್ಟುಕೊಳ್ಳಬೇಕಿದೆ. ಹಾಗಾಗಿ ಈ ವಿಚಾರದಲ್ಲಿ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ನಡುವೆ ಕಿರಿಕ್ ಆಗೋ ಸಾಧ್ಯತೆಗಳಿವೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.

    ಬೆಂಗಳೂರಿನದ್ಯಂತ ಸುಮಾರು ಎರಡು ಸಾವಿರ ಹೋಮ್ ಗಾರ್ಡ್‍ಗಳನ್ನು ನಿಯೋಜನೆ ಮಾಡಿದ್ದು, ಪ್ರತಿ ಬಸ್‍ನಲ್ಲಿ ಇಬ್ಬರು ಹೋಮ್ ಗಾಡ್ರ್ಸ್, ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಹೋಮ್ ಗಾರ್ಡ್‍ಗಳ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು – ಸಿಎಂ ಪ್ರಶ್ನೆ

    ಪ್ರಯಾಣಿಕರು ಹಾಗೂ ಸಿಬ್ಬಂದಿ ನಡುವೆ ಯಾವುದೇ ಗಲಾಟೆಗಳು, ಗೊಂದಲಗಳು ನಡೆಯದಂತೆ ಎಚ್ಚರಿಕೆ ವಹಿಸಲು ಬೆಂಗಳೂರು ಪೊಲೀಸ್ ಕಮಿಷನರ್ ಸಂಬಂಧಪಟ್ಟ ಡಿವಿಜನ್‍ಗಳ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಪ್ರತಿ ಡಿವಿಜನ್‍ಗೆ 350 ಹೋಮ್ ಗಾರ್ಡ್‍ಗಳಂತೆ 8 ಡಿವಿಷನ್‍ಗಳಲ್ಲಿ 2 ಸಾವಿರ ಹೋಮ್‍ಗಳನ್ನು ಭದ್ರೆತೆ ನಿಯೋಜನೆ ಮಾಡಲಾಗಿದೆ. ಪೊಲೀಸರು ಕೂಡ ಸಾಥ್ ನೀಡಲಿದ್ದು, ಬಸ್ ನಿಲ್ದಾಣಗಳು, ಮತ್ತು ರಸ್ತೆಗಳಲ್ಲಿ ಹೆಚ್ಚಿನ ಗಸ್ತು ತಿರುಗಲಿದ್ದಾರೆ.

    ಒಟ್ಟಿನಲ್ಲಿ ಇಂದು 1 ಗಂಟೆ ನಂತರ ಮಹಿಳೆಯರು ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಓಡಾಡಬಹುದಾಗಿದೆ. ಯಾವುದೇ ಗೊಂದಲ, ಗಲಾಟೆಗಳು ಆಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

  • ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!

    ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!

    ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Ticket For Women) ವಿಚಾರ ಚರ್ಚೆಯಲ್ಲಿರುವಾಗಲೇ ಪುರುಷರಿಗೆ ಟೆನ್ಶನ್ ಶುರುವಾಗಿದೆ.

    ಹೌದು. ಮಹಿಳೆಯರಿಗೆ ಉಚಿತ ಪ್ರಯಾಣದ ಆಫರ್ ನಿಂದಾಗಿ ಪುರುಷರಿಗೆ ಬಸ್ ನಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಆತಂಕ ಆರಂಭವಾಗಿದೆ. ಮಹಿಳೆಯರಿಗೆ ಮೀಸಲಾಗಿರುವ ಸೀಟಿನಲ್ಲಷ್ಟೇ ಮಹಿಳೆಯರು ಕೂರಲಿ, ಹಿಂದೆ ಸೀಟಿನಲ್ಲಿ ಕೂತ್ರೆ ದಂಡ ಹಾಕಲಿ ಅಂತಾ ನಯಾ ಬೇಡಿಕೆಯೊಂದು ಎದ್ದಿದೆ.

     

    ಪುರುಷರ ಆಸನದಲ್ಲಿಯೂ ಉಚಿತ ಪ್ರಯಾಣ ಅಂತಾ ಮಹಿಳೆಯರು ಕೂತರೆ ನಾವೆಲ್ಲಿ ಹೋಗೋಣ ಅಂತಾ ಪುರುಷ ಪ್ರಯಾಣಿಕರು ಹೇಳುತ್ತಿದ್ದಾರೆ. ಕೆಲವು ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ನಮ್ಮ ಸೀಟು ನಮಗೇ ಇರಲಿ ಅಂತಾ ಬೇಡಿಕೆ ಇಟ್ಟಿದ್ದಾರೆ. ಒಟ್ಟಿನಲ್ಲಿ ಮಹಿಳೆಯರ ಫ್ರೀ ಬಸ್ ಪ್ರಯಾಣದಿಂದ ಪುರುಷರಿಗೆ ಸೀಟ್ ಟೆನ್ಶನ್ (Men Seat Tension) ಎದುರಾಗಿರುವುದು ಸುಳ್ಳಲ್ಲ.

    ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯಾಗಿದ್ದು, ಈ ಗ್ಯಾರಂಟಿ ಜಾರಿಗೆ ಸರ್ಕಾರಕ್ಕೆ `ಮನಿ’ ಟೆನ್ಷನ್ ಕೂಡ ಶುರುವಾಗಿದೆ. ನಾಳಿನ ಕ್ಯಾಬಿನೆಟ್‍ (Cabinet) ಗೂ ಮುನ್ನ ಆದಾಯ ಕ್ರೂಢೀಕರಣದ ಟೆನ್ಶನ್ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy) ನೇತೃತ್ವದಲ್ಲಿ ಸರಣಿ ಸಭೆ ನಡೆಸಲಾಗಿದೆ. ನಿಗಮಗಳ ಕಚೇರಿಯಲ್ಲಿ ಬ್ಯಾಕ್ ಟು ಬ್ಯಾಕ್ ಹೈವೋಲ್ಟೇಜ್ ಸಭೆ ನಡೆಯುತ್ತಿದೆ. ಮೊನ್ನೆ 4 ನಿಗಮಗಳ ಎಂಡಿಗಳನ್ನ ಕರೆದು ಸಭೆ ನಡೆಸಿದ್ದ ಸಚಿವರು, ಇಂದು ಮತ್ತೆ ಪ್ರತ್ಯೇಕವಾಗಿ ನಿಗಮಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.