Tag: ಫ್ರೀ ಬಸ್

  • ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

    ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

    ಚಾಮರಾಜನಗರ: ನಾನು ಸಿಎಂ ಆಗಿರುವವರೆಗೆ ಎಲ್ಲಾ ವರ್ಗದ ಜನರ ಪರವಾಗಿ ಇರುತ್ತೇನೆ. ನಾನು ಒಂದು ಧರ್ಮದ ಪರವಾಗಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದರು.

    ಕನಕಭವನದ ಗುದ್ದಲಿ ಪೂಜೆ ನೆರವೇರಿಸಿ, ವೇದಿಕೆಯಲ್ಲಿ ಮಾತನಾಡಿದ ಅವರು, ಇಂದು ಜಾತಿಗೆ ಅಂಟಿಕೊಂಡಿಲ್ಲ. ನಮ್ಮ ಜನರನ್ನು ಮರೆಯುವುದಿಲ್ಲ. ಸಮಾಜದಲ್ಲಿ ಒಂದು ಧರ್ಮ, ಜಾತಿಯಿಂದ ನ್ಯಾಯ ಕೊಡಲು ಸಾಧ್ಯವಿಲ್ಲ. ಎಲ್ಲರ ಬೆಂಬಲ ಹಾಗೂ ಸಹಕಾರ ಮುಖ್ಯವಾಗಿದೆ. ಇಡೀ ರಾಜ್ಯದಲ್ಲಿ ಅಹಿಂದ ವರ್ಗದ ಜನರು ಹಾಗೂ ಬಡವರು ಸಹಾಯ ಮಾಡಿದ್ದಾರೆ. ಸಿಎಂ ಆಗುವುದು ಅಷ್ಟು ಸುಲಭದ ಕೆಲಸವಲ್ಲ ಎಂದರು. ಇದನ್ನೂ ಓದಿ: ಕಾವೇರಿ ಆರತಿ ಅಧ್ಯಯನ ಸಮಿತಿ ಶಿಫಾರಸು ಜಾರಿಗೆ ಸಮಿತಿ ರಚನೆ

    ಚಾಮರಾಜನಗರವು (Chamarajanagara) ಬಹಳ ಹಿಂದುಳಿದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕಡಿಮೆ. ಶಿಕ್ಷಣಕ್ಕೆ ಆದ್ಯತೆ ಕೊಡಬೇಕಾಗಿದೆ. ಸಮುದಾಯ ಭವನದಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಭವನವನ್ನು ಮಾಡಬೇಕು. ಅಲ್ಲದೇ ಚಾಮರಾಜನಗರದ ಎಲ್ಲಾ ಅಹಿಂದ ವರ್ಗದ ಜನರು ಮುಖ್ಯ ವಾಹಿನಿಗೆ ಬರಬೇಕು. ಇದಕ್ಕೆ ಸರ್ಕಾರ ಅನೇಕ ಕಾರ್ಯಕ್ರಮ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಪಹಲ್ಗಾಮ್‌ಗೆ ರಾಹುಲ್ ಗಾಂಧಿ ಭೇಟಿ – ಉಗ್ರರ ದಾಳಿ ವೇಳೆ ಗಾಯಗೊಂಡವರ ಆರೋಗ್ಯ ವಿಚಾರಣೆ

    ಶಕ್ತಿ ಯೋಜನೆಯಡಿ ಎಲ್ಲಾ ಜಾತಿಯ ಹೆಣ್ಣು ಮಕ್ಕಳು ಬಸ್‌ನಲ್ಲಿ ಉಚಿತವಾಗಿ ಓಡಾಡಬಹುದು. ಅದಕ್ಕೆ ಬಡತನ ಶ್ರೀಮಂತಿಕೆ ಇಲ್ಲ. ಎಲ್ಲಾ ಪಾರ್ಟಿ, ಧರ್ಮದ ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದರು.

  • ಡಯಾಲಿಸಿಸ್ ಒಳಗಾಗಿರುವ ಪುರುಷರಿಗೂ ಫ್ರೀ ಬಸ್ ವ್ಯವಸ್ಥೆ?

    ಡಯಾಲಿಸಿಸ್ ಒಳಗಾಗಿರುವ ಪುರುಷರಿಗೂ ಫ್ರೀ ಬಸ್ ವ್ಯವಸ್ಥೆ?

    – ಸಿಎಂಗೆ ಪತ್ರದ ಮೂಲಕ ಯು.ಟಿ.ಖಾದರ್ ಮನವಿ

    ಬೆಂಗಳೂರು: ರಾಜ್ಯದ ಶಕ್ತಿ ಯೋಜನೆಯನ್ನ ಡಯಾಲಿಸ್ (Dialysis) ಒಳಗಾಗಿರುವ ಗಂಡಸರಿಗೂ ವಿಸ್ತರಿಸುವಂತೆ ಕೂಗು ಕೇಳಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ (U T Khader) ಸಿಎಂಗೆ ಪತ್ರ ಬರೆದಿದ್ದಾರೆ.

    ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದ ಶಕ್ತಿ ಯೋಜನೆ, ಗಂಡಸರಿಗೂ ವಿಸ್ತರಿಸುವಂತೆ ಬೇಡಿಕೆಯೊಂದು ಬಂದಿದೆ. ಅದರಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಖುದ್ದು ಯು.ಟಿ.ಖಾದರ್ ಅವರೇ ಪತ್ರ ಬರೆದು ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು

    ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಿತ್ಯ ಪುರುಷರು ಸಾರಿಗೆ ಬಸ್ ಬಳಕೆ ಮಾಡುತ್ತಾರೆ. ಇದರಲ್ಲಿ ಅನೇಕ ಖಾಯಿಲೆ ಇರುವ ಪುರುಷ ಪ್ರಯಾಣಿಕರು ಕೂಡ ಸಂಚಾರ ಮಾಡುತ್ತಾರೆ. ಆ ಪೈಕಿ ಡಯಾಲಿಸಿಸ್‌ಗೆ ಒಳಗಾಗಿರೋ ಪುರುಷ ಪ್ರಯಾಣಿಕರನ್ನು ಶಕ್ತಿ ಯೋಜನೆಗೆ ತರುವಂತೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಕಾಡ್ಗಿಚ್ಚಿಗೆ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿ

    ವಾರಕ್ಕೆ 2-3 ಬಾರಿ ಡಯಾಲಿಸಿಸ್‌ಗಾಗಿ ಪುರುಷ ರೋಗಿಗಳು ಸಂಚಾರ ಮಾಡುವುದರಿಂದ ಹೆಚ್ಚು ಖರ್ಚಾಗುತ್ತದೆ. ಹೀಗಾಗಿ ಅಂತವರಿಗೆ ಅನೂಕೂಲ ಆಗುವ ನಿಟ್ಟಿನಲ್ಲಿ, ಶಕ್ತಿ ಯೋಜನೆ ವ್ಯಾಪ್ತಿಗೆ ತರಬೇಕೆಂದು ಆರ್‌ಟಿಐ ಕಾರ್ಯಕರ್ತ ಸೈಯದ್ ರೆಹಮಾನ್ ಸಮೀನ್, ಸ್ಪೀಕರ್ ಯು.ಟಿ.ಖಾದರ್‌ಗೆ ಪತ್ರ ಬರೆದಿದ್ದರು. ಇದನ್ನೂ ಓದಿ: ರಾಮನಗರ | ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ – 30 ಎಕರೆ ಸುಟ್ಟು ಭಸ್ಮ

    ಆರ್‌ಟಿಐ ಕಾರ್ಯಕರ್ತರ ಮನವಿ ಬಳಿಕ ಇದನ್ನ ಪರಿಶೀಲನೆ ನಡೆಸುವಂತೆ ಸಿಎಂಗೆ ಸ್ಪೀಕರ್ ಪತ್ರ ಬರೆದು, ಮನವಿ ಮಾಡಿದ್ದಾರೆ. ಕಿಡ್ನಿ ಸಮಸ್ಯೆ ಇರುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಸಂಚಾರ ಮಾಡಲು ಬೇಕಾದ ವ್ಯವಸ್ಥೆ ಮಾಡಲು ನಿರ್ದೇಶನ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

  • ಗಂಡಸರಿಗೂ ಫ್ರೀ ಬಸ್‌ ಕೊಟ್ರೆ KSRTC ಮುಚ್ಚಬೇಕಾಗುತ್ತೆ: ಸಿದ್ದರಾಮಯ್ಯ

    ಗಂಡಸರಿಗೂ ಫ್ರೀ ಬಸ್‌ ಕೊಟ್ರೆ KSRTC ಮುಚ್ಚಬೇಕಾಗುತ್ತೆ: ಸಿದ್ದರಾಮಯ್ಯ

    ಚಾಮರಾಜನಗರ: ಗಂಡಸರಿಗೂ ಫ್ರೀ ಕೊಟ್ರೆ ಕೆಎಸ್ಆರ್‌ಟಿಸಿ (KSRTC) ಮುಚ್ಚಬೇಕಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಚಾಮರಾಜನಗರ (Chamarajanagara) ಜಿಲ್ಲೆಯ ಯಳಂದೂರಲ್ಲಿ ಶನಿವಾರ ಸಂಜೆ 100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಮಹಿಳೆಯರಿಗೆ ಫ್ರೀ ಬಸ್‌ ವ್ಯವಸ್ಥೆ ಕುರಿತು ಮಾತನಾಡುವ ವೇಳೆ, ಗಂಡಸರಿಗೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಗಂಡಸರಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ರೆ KSRTC ಮುಚ್ಚಬೇಕಾಗುತ್ತೆ ಎಂದಿದ್ದಾರೆ.

    ನಂತರ ಕಾರ್ಯಕ್ರಮದ ಕುರಿತು ಮಾತನಾಡಿ, ಸರ್ಕಾರಿ ವೈದ್ಯರು ರೋಗಿಗಳ ಬಳಿ ಚೆನ್ನಾಗಿ ಮಾತನಾಡಿದರೇ ಅರ್ಧ ರೋಗ ಕಡಿಮೆಯಾಗತ್ತೆ. ನಮ್ಮ ವೈದ್ಯರು ಬಹಳಷ್ಟು ಮಂದಿ ಸರಿಯಾಗಿ ಮಾತನಾಡಿಸುವುದಿಲ್ಲ, ಇನ್ಮೇಲಾದರೂ ರೋಗಿಗಳ ಜೊತೆ ವೈದ್ಯರು ಚೆನ್ನಾಗಿ ಮಾತನಾಡಿಸಿ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಶಾಸಕರ ವಿರುದ್ಧ ಕ್ರಮದ ಅಧಿಕಾರ: ಸಿ.ಟಿ ರವಿ

    ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಬೇಕು, ತುರ್ತು ಚಿಕಿತ್ಸೆ ಕೊಡಿ, ರೋಗಿಗಳಿಂದ ವೈದ್ಯರು ಏನನ್ನೂ ನಿರೀಕ್ಷೆ ಮಾಡಬೇಡಿ, ಗೋಲ್ಡನ್ ಹವರ್‌ನಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಕೊಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು‌. ಇದೇ ವೇಳೆ ಪ್ರತಿ ಜಿಲ್ಲೆಯಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎಂದು ಯೋಚಿಸಿದ್ದೇನೆ, ಪ್ರತಿ ಜಿಲ್ಲಾಕೇಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬಗ್ಗೆ ಸರ್ಕಾರದ ಗಂಭೀರ ಚಿಂತನೆ ನಡೆಸಿದೆ ಎಂದರು. ಇದನ್ನೂ ಓದಿ: ಇಷ್ಟು ಕಾಲ ಸಹಿಸಿದ್ದೇವೆ, ಇನ್ಮುಂದೆ ಸಹಿಸಲು ಆಗಲ್ಲ: ಯತ್ನಾಳ್ ವಿರುದ್ಧ ವಿಜಯೇಂದ್ರ ಆಕ್ರೋಶ

    ನಾನು ಚಿಕ್ಕವನಿದ್ದಾಗ ಜ್ವರ ಬಂದರೆ ಚಿಕನ್ ಬಿರಿಯಾನಿ, ಮಟನ್ ಫ್ರೈ ತಿನ್ನುತ್ತಿದೆ, ಈಗ ಜ್ವರ ಬಂದಾಗ ಬಿರಿಯಾನಿ ತಿಂದ್ರೆ ಜ್ವರ ಜಾಸ್ತಿ ಆಗುತ್ತೆ. ಆಗ ಹಳ್ಳಿ ಜನರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತಿತ್ತು. ಈಗ ಕಡಿಮೆಯಾಗಿದೆ, ಜನರನ್ನು ಕೇಳಿದರೇ ಸಕ್ಕರೆ, ಬಿಪಿ ಇದೆ ಎನ್ನುತ್ತಾರೆ. ಬಹಳಷ್ಟು ಮಂದಿ ವ್ಯಾಯಾಮ ಮಾಡುತ್ತಿಲ್ಲ, ಹೊಲ ಉಳುವ ಜಾಗಕ್ಕೆ ಟ್ರ್ಯಾಕ್ಟರ್‌, ಟಿಲ್ಲರ್ ಬಂದಿದೆ. ವಿಜ್ಞಾನ ಬೆಳೆದಷ್ಟೂ ಹೊಸ ರೋಗಗಳು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ವಿಜಯೇಂದ್ರರನ್ನ ಪಕ್ಷದ ಅಧ್ಯಕ್ಷರಾಗಿ ಮಾಡಿರೋದು ಹೈಕಮಾಂಡ್‌ಗೆ ಔಚಿತ್ಯ: ರಾಧಾ ಮೋಹನದಾಸ್

  • ಫ್ರೀ ಬಸ್‌ ಹತ್ತಿ 33 ಗಂಟೆ ಸುತ್ತಾಟ – ಹಿಡಿದು ಪೋಷಕರಿಗೊಪ್ಪಿಸಿದ ಪೊಲೀಸರು!

    ಫ್ರೀ ಬಸ್‌ ಹತ್ತಿ 33 ಗಂಟೆ ಸುತ್ತಾಟ – ಹಿಡಿದು ಪೋಷಕರಿಗೊಪ್ಪಿಸಿದ ಪೊಲೀಸರು!

    ಹೈದರಾಬಾದ್‌: ಹಾಸ್ಟೆಲ್‌ಗೆ (Hostel) ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 12 ವರ್ಷದ ಬಾಲಕಿಯೊಬ್ಬಳು ಉಚಿತ ಬಸ್ ಸೇವೆ ಬಳಸಿಕೊಂಡು 33 ಗಂಟೆಗಳ ಕಾಲ ಪ್ರಯಾಣ ಮಾಡಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಬಾಲಕಿ ತಪ್ಪಿಸಿಕೊಂಡಿರುವುದಾಗಿ ನೀಡಲಾದ ದೂರನ್ನು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು (Police) ಬಾಲಕಿಯನ್ನು ಹೈದರಾಬಾದ್‌ನ (Hyderabad) ಜ್ಯೂಬಿಲಿ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ ಚಿತ್ರ ಬಳಸಿ ಅಪಮಾನ – ಕಾಂಗ್ರೆಸ್‌ನಿಂದ ದೂರು

    ಅಷ್ಟಕ್ಕೂ ನಡೆದಿದ್ದೇನು?
    ವಿದ್ಯಾರಣ್ಯಪುರಿಯ ನಿವಾಸಿಯಾದ ಬಾಲಕಿ ಖಾಸಗಿ ಶಾಲೆಯೊಂದರ ಹಾಸ್ಟೆಲ್ ನಲ್ಲಿದ್ದುಕೊಂಡು 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕ್ರಿಸ್ಮಸ್ ರಜೆಗಾಗಿ ಪೆದ್ದಪಳ್ಳಿಯಲ್ಲಿರುವ ತಾತನ ಮನೆಗೆ ತೆರಳಿದ್ದಳು. ರಜೆ ಮುಗಿದ ಬಳಿಕ ತಾತನ ಮನೆಯಿಂದ ಹೊರಟ ಬಾಲಕಿ ಹಾಸ್ಟೆಲ್‌ಗೆ ಹೋಗಲು ಇಷ್ಟವಿಲ್ಲದೇ ಒಂದಾದ ಮೇಲೋಂದು ಬಸ್ ಬದಲಾಯಿಸುತ್ತಾ ಸುಮಾರು 33 ಗಂಟೆ ಪ್ರಯಾಣ ಮಾಡಿದ್ದಾಳೆ.

    ಬಸ್ ಹತ್ತಿಸಿದ ಬಳಿಕ ಬಾಲಕಿ ಊರು ತಲುಪಿಲ್ಲ, ಹಾಸ್ಟೆಲ್‌ಗೂ ಸೇರಿಲ್ಲ ಎಂಬುದನ್ನ ತಿಳದು ಆತಂಕಗೊಂಡ ಆಕೆಯ ತಾತ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು

  • ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ

    ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ

    ಬೆಂಗಳೂರು: ಶಕ್ತಿ ಯೋಜನೆ (Shakthi Scheme) ಜಾರಿಯಾಗಿ ಇಂದಿಗೆ 22 ದಿನ. ಇಲ್ಲಿಯವರೆಗೂ ಉಚಿತವಾಗಿ 10 ಕೋಟಿಗೂ ಅಧಿಕ ಮಹಿಳೆಯರು ಉಚಿತ ಓಡಾಟ ಮಾಡಿದ್ದಾರೆ. ಈ ನಡುವೆ ಮಹಿಳೆಯರಿಗೆ ಉಚಿತ ನೀಡಿದ ಕಾರಣ ಪುರಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಅನ್ನೋ ಮಾತುಗಳಿದ್ದವು. ಆದರೆ ದೈನಂದಿನ ಓಡಾಟ ಮಾಡುತ್ತಿದ್ದ ಪುರುಷರ ಸಂಖ್ಯೆಗಿಂತಲೂ ಹೆಚ್ಚು ಪುರುಷರು ಪ್ರಯಾಣ ಮಾಡ್ತಿದ್ದಾರೆ. ಇಷ್ಟೇ ಅಲ್ಲದೆ ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್ ಆಗಿರೋದು ಮತ್ತೊಂದು ವಿಶೇಷ.

    ಶಕ್ತಿಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಪುರುಷರು ಸಾರಿಗೆ ಬಸ್‍ನಲ್ಲಿ (Male Passengers In Govt Bus) ಸಂಚರಿಸುತ್ತಿದ್ದರು. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಓಡಾಟ ಜಾಸ್ತಿಯಾಗಿದೆ. ಅಂದರೆ ದಿನಕ್ಕೆ ಸರಾಸರಿ 13 ಲಕ್ಷ ಹೆಚ್ಚಳವಾಗಿದ್ದು, ಗಮನಾರ್ಹ ಬೆಳವಣಿಕೆ. ಇದಕ್ಕೆ ಕಾರಣ ಕುಟುಂಬದವರು ಒಟ್ಟಾಗಿ ಪ್ರಯಾಣ ಮಾಡುವಾಗ ಮಹಿಳೆಯರಿಗೆ ಹೇಗೂ ಉಚಿತ ಅಂತ ಸಾರಿಗೆ ಬಸ್‍ನಲ್ಲಿ ಹೋಗ್ತಿದ್ದಾರೆ. ರಶ್ ಆದ್ರೂ ಏನು ಮಾಡೋಕೆ ಆಗದೇ ಅಡ್ಜೆಸ್ಟ್ ಮಾಡಿಕೊಂಡು ಅದೇ ಬಸ್ ನಲ್ಲಿ ಓಡಾಟ ಮಾಡ್ತಿದ್ದಾರೆ. ಇನ್ನೂ ಕೆಲವರು ಕಷ್ಟವಾದ್ರು ಸಾಮಾನ್ಯವಾಗಿ ದಿನನಿತ್ಯದಂತೆ ಸರ್ಕಾರಿ ಬಸ್‍ಗಳನ್ನೆ ಬಳಕೆ ಮಾಡುವವರು ಅದನ್ನೆ ಮುಂದುವರಿಸಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸದ್ಯ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.

    ಪುರುಷ ಪ್ರಯಾಣಿಕರ ಓಡಾಟ ಸಂಖ್ಯೆ ಹೆಚ್ಚಾದಂತೆ ಆದಾಯ ಕೂಡ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗೆ ಕಳೆದ 19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಬರುತ್ತಿತ್ತು. ಆಗ ಪುರುಷರ ಓಡಾಟದಿಂದ ಸಾರಿಗೆ ಸಂಸ್ಥೆಗೆ 12 ಕೋಟಿ ಆದಾಯ ಬರುತ್ತಿತ್ತು. ಈಗ 16.87 ಕೋಟಿ ಗೆ ಗಂಡಸರ ಸಂಚಾರದ ಆದಾಯ ಹೆಚ್ಚಾಗಿದೆ. ಒಟ್ಟಾರೆ ಒತ್ತಡ, ರಶ್, ಗಲಾಟೆ ಗದ್ದಲ ನಡುವೆಯೂ ಹೆಚ್ಚಿನ ಪುರುಷರು ಸಾರಿಗೆ ಬಸ್ ನಲ್ಲಿ ಓಡಾಡಿ, ನಿಗಮಗಳಿಗೆ ಇನ್ನಷ್ಟು ಲಾಭ ಹೆಚ್ಚಿಸಿರೋದು ನಿಜಕ್ಕೂ ವಿಶೇಷವೇ ಸರಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರೀ ಬಸ್ ಟಿಕೆಟ್ ಎಫೆಕ್ಟ್; ಚಾಮರಾಜನಗರದಲ್ಲಿ ಬಸ್ ಡೋರ್ ಮುರಿದ ಮಹಿಳೆಯರು!

    ಫ್ರೀ ಬಸ್ ಟಿಕೆಟ್ ಎಫೆಕ್ಟ್; ಚಾಮರಾಜನಗರದಲ್ಲಿ ಬಸ್ ಡೋರ್ ಮುರಿದ ಮಹಿಳೆಯರು!

    ಚಾಮರಾಜನಗರ: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾಗಿದೆ. ಇದೀಗ ಚಾಮರಾಜನಗರದಲ್ಲಿ (Chamarajanagar) ರಶ್ ಆಗಿ ಪ್ರಯಾಣಿಕರು ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ ಘಟನೆ ನಡೆದಿದೆ.

    ಸೋಮವಾರ ಅಮವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಲೆ ಮಹದೇಶ್ವರ (Male Mahadeshwara) ಬೆಟ್ಟದ ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಬಂದ ಬಸ್ ಏರಲು ನೂಕು ನುಗ್ಗಲು ಉಂಟಾಗಿದೆ. ಅಲ್ಲದೇ ಪ್ರಯಾಣಿಕರು ಬಸ್ ಏರುವಾಗ ಡೋರ್ ಮುರಿದು ಹೋಗಿದೆ. ಇದರಿಂದಾಗಿ ಕಂಡಕ್ಟರ್ ಪರದಾಡಿದ್ದಾರೆ. ಅದರಲ್ಲೂ ವಾರದ ಹಿಂದಷ್ಟೆ ಸಾರಿಗೆ ನಿಗಮ ಬಾಗಿಲು ಹಾಕದೇ ಬಸ್ ಓಡಿಸದಂತೆ ಆದೇಶ ನಿಡಿತ್ತು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಅಕ್ಷರ ಸಂತ ಹರೇಕಳ ಹಾಜಬ್ಬ ಮನವಿ

    ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಪರಿಣಾಮ ಯಾತ್ರಾ ಸ್ಥಳಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಅದೇ ರೀತಿ ಮಲೆ ಮಹದೇಶ್ವರ ದರ್ಶನಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದಾಗಿ ಕೆಎಸ್‍ಆರ್‌ಟಿಸಿ (KSRTC) ಬಸ್‍ಗಳು ತುಂಬಿ ತುಳುಕುತ್ತಿವೆ. ಕೊಳ್ಳೇಗಾಲದ (Kollegala) ಬಸ್ ನಿಲ್ದಾಣದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಬಸ್ ಹತ್ತಲು ಪ್ರಯಾಣಿಕರು ಪರದಾಡುವಂತಾಗಿದೆ.

    ಬೆಳಗ್ಗೆಯಿಂದ ಕಾದರೂ ಕೆಲವರಿಗೆ ರಷ್‍ನಿಂದ ಬಸ್ ಹತ್ತಲು ಆಗಿರಲಿಲ್ಲ. ನಿಲ್ದಾಣದಲ್ಲೇ ಕಾದು ನಿಲ್ಲುವಂತಾಗಿದೆ ಎಂದು ಕೆಲವರು ಗೋಳಾಡಿದ್ದಾರೆ. ಬಸ್‍ಗಳಲ್ಲಿ ಮಹಿಳೆಯರೇ ತುಂಬಿಕೊಳ್ಳುತ್ತಿದ್ದಾರೆ. ನಾವು ಹೇಗೆ ಹೋಗೋದು ಎಂದು ಪುರುಷರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: 15 ದಿನಗಳ ಹಿಂದಷ್ಟೇ ಡಿವೋರ್ಸ್- ಪತ್ನಿಯನ್ನು ಕೊಲ್ಲಲು ಪಿಸ್ತೂಲ್ ಖರೀದಿಸಿ ಅರೆಸ್ಟ್ ಆದ!

  • `ಶಕ್ತಿ’ಗೆ ನಮನ – ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ ಏರಿದ ಅಜ್ಜಿ

    `ಶಕ್ತಿ’ಗೆ ನಮನ – ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ ಏರಿದ ಅಜ್ಜಿ

    ಧಾರವಾಡ: ಮಹಿಳೆಯರ ಉಚಿತ ಬಸ್ ಪ್ರಯಾಣದ ನಾರಿ `ಶಕ್ತಿ’ ಯೋಜನೆಯನ್ನ (Shakti Scheme) ರಾಜ್ಯ ಸರ್ಕಾರ ಭಾನುವಾರ (ಜೂನ್ 11) ದಿಂದ ಜಾರಿಗೊಳಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆಶಿವಕುಮಾರ್ (DK Shivakumar) ಮೊದಲಾದ ಗಣ್ಯರು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ.

    ಧಾರವಾಡದಲ್ಲಿ (Dharwad) ಶಕ್ತಿ ಯೋಜನೆಗೆ ಚಾಲನೆ ನೀಡಿದ ವೇಳೆ ವೃದ್ಧೆಯೊಬ್ಬರು ಬಸ್ಸಿನ ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ಸಿನೊಳಗೆ ಪ್ರವೇಶಿಸಿದ ವಿಶೇಷ ಸನ್ನಿವೇಶವೊಂದು ಕಂಡುಬಂದಿದೆ. ಬಸ್ ಹತ್ತುವ ಮುನ್ನ ಅಜ್ಜಿ ತನ್ನ ತಲೆಯನ್ನು ಬಸ್ ಮೆಟ್ಟಿಲ ಮೇಲಿಟ್ಟು ನಮಸ್ಕರಿಸಿದ್ದು, ಅಜ್ಜಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಉಚಿತ ಬಸ್‌ ಪ್ರಯಾಣದ ಮೊದಲ ಟಿಕೆಟ್‌ ಪಡೆದ ಅದೃಷ್ಟಶಾಲಿ ಮಹಿಳೆ ಇವರೇ..!

    ಶಕ್ತಿಯೋಜನೆ ಜಾರಿಯಾದ ಮೊದಲ ದಿನವೇ ಮಹಿಳಾಮಣಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಉಚಿತ ಸಂಚಾರದ ಕೊಡುಗೆ ಲಭ್ಯ ಆಗಿರೋದಕ್ಕೆ ನಾರಿಮಣಿಯರು ಫುಲ್ ಖುಷಿಯಾಗಿದ್ದಾರೆ. ಕೆಲ ಮಹಿಳೆಯರು ಕುಣಿದು ಕುಪ್ಪಳಿಸಿ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. ಪ್ರವಾಸಿ ತಾಣಗಳಿಗೆ ತೆರಳುವ ಬಸ್‌ಗಳಲ್ಲಿ ಮಹಿಳೆಯಯರೇ ಹೆಚ್ಚು ಸಂಖ್ಯೆಯಲ್ಲಿದ್ದದ್ದು ಕಂಡುಬಂದಿದೆ. ಕೆಲವರು ಕುಟುಂಬದ ಜೊತೆ.. ಇನ್ನೂ ಕೆಲವರು ಬಂಧುಗಳ ಜೊತೆ.. ಇನ್ನೂ ಕೆಲವರು ಗೆಳೆತಿಯರ ಜೊತೆ ಟ್ರಿಪ್ ಹೊರಟಿದ್ದ ದೃಶ್ಯ ಕಂಡುಬಂದಿದೆ. ಇದನ್ನೂ ಓದಿ: ಶಕ್ತಿ ಯೋಜನೆ- ಮಂಜುನಾಥನ ಸನ್ನಿಧಿಗೆ ಮೊದಲ ಬಸ್ ಪ್ರಯಾಣ

    ಉಚಿತ ಪ್ರಯಾಣದ ಟಿಕೆಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮಹಿಳೆಯರು ಸಂಭ್ರಮಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಲ ಮಹಿಳೆಯರು, ʻʻಪತಿ ಜೊತೆಗೆ ಜಗಳ ಆದ್ರೆ ತವರಿಗೆ ಹೋಗಬಹುದು, ತವರಲ್ಲಿ ಜಗಳ ಆದ್ರೆ ಪತಿ ಮನೆಗೆ ಬರಬಹುದುʼʼ ಎಂದು ತಮಾಷೆ ಮಾಡಿದ್ದಾರೆ.  ಇದನ್ನೂ ಓದಿ: ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!