Tag: ಫ್ರೀ ಟಿಕೆಟ್

  • ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್‌

    ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್‌

    – ಪುರುಷರ ಬಟ್ಟೆ ಧರಿಸಿ ಬಂದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಕಂಡಕ್ಟರ್ ಪರದಾಟ 

    ಯಾದಗಿರಿ: ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು ಬಸ್ ಕಂಡಕ್ಟರ್ (Conductor) ಪರದಾಡಿರುವ ಘಟನೆ ಯಾದಗಿರಿ (Yadgiri) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್‌ನಲ್ಲಿ (Bus) ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಕ್ಷ್ಮೀ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.

    ಆಧಾರ್ ಕಾರ್ಡ್‌ನಲ್ಲಿ ಲಕ್ಷ್ಮೀ ಎಂಬ ಹೆಸರಿದ್ರೂ ಲಿಂಗದ ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿತ್ತು. ಅದರ ಜೊತೆಗೆ ಲಕ್ಷ್ಮೀ ಪುರುಷರ ಬಟ್ಟೆ ಹಾಕಿದ್ದರಿಂದ ಕಂಡಕ್ಟರ್ ಕಂಪ್ಲೀಟ್ ಕನ್ಪ್ಯೂಸ್ ಆಗಿದ್ದರು. ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ ಸಂಚರಿಸ್ತಿವೆಯಾ ನಿರುಪಯುಕ್ತ ಬಸ್‌ಗಳು? – ಸಾರಿಗೆ ಅಧಿಕಾರಿಯಿಂದಲೇ ಹೊರಬಿತ್ತು ಸತ್ಯ

    ಹೆಸರು ಲಕ್ಷ್ಮೀ, ಲಿಂಗ ಪುರುಷ ಇದೇನಿದು ಎಂದು ಪ್ರಶ್ನಿಸಿದ ಕಂಡಕ್ಟರ್‌ಗೆ ಸಿಕ್ಕ ಉತ್ತರ ತೃತೀಯ ಲಿಂಗಿ ಎನ್ನೋದು. ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳಲ್ಲ. ಯಾವಾಗಲೂ ಪುರುಷರ ಬಟ್ಟೆನೇ ಧರಿಸುತ್ತೇನೆ ಎಂದು ಹೇಳಿದ್ದು, ಕೊನೆಗೂ ಮನವರಿಕೆ ಮಾಡಿಕೊಂಡ ಕಂಡಕ್ಟರ್ ಶಕ್ತಿ ಯೋಜನೆಯಡಿ (Shakti scheme) ಫ್ರೀ ಟಿಕೆಟ್ ಕೊಟ್ಟು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮಿರ್ಚಿ ಬಜ್ಜಿ ತಿನ್ನೋದಕ್ಕೆ ಅಂಬುಲೆನ್ಸ್‌ ಸೈರನ್‌ ದುರುಪಯೋಗ – ಎಮರ್ಜೆನ್ಸಿ ಅಂತ ಟ್ರಾಫಿಕ್‌ ಕ್ಲಿಯರ್‌ ಮಾಡಿದ್ದ ಪೊಲೀಸರೇ ಶಾಕ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಾನಿ ಜಾನಿ ಯೆಸ್ ಅಪ್ಪಾ, ಅಮ್ಮ-ಮಗಳ ಜೊತೇಲಿ ಸಿನೆಮಾ ನೋಡ್ರಪ್ಪಾ!

    ಜಾನಿ ಜಾನಿ ಯೆಸ್ ಅಪ್ಪಾ, ಅಮ್ಮ-ಮಗಳ ಜೊತೇಲಿ ಸಿನೆಮಾ ನೋಡ್ರಪ್ಪಾ!

    ಬೆಂಗಳೂರು: ಹೌದು, ಮನೆಮಂದಿಗೆ ಇಷ್ಟವಾಗೋ ಸ್ಟೈಲ್ ನ ಸಿನೆಮಾ ಇದಾಗಿರುವುದರಿಂದ ಕುಟುಂಬ ಸಮೇತ ಕೂತು ನೋಡುವ ವಿಶೇಷ ಪ್ರದರ್ಶನವೊಂದನ್ನು ಸಿನೆಮಾ ವೀಕ್ಷಿಸಿದ ಅಭಿಮಾನಿ ಬಳಗವೊಂದು ಅರೇಂಜ್ ಮಾಡಿದೆ. ಮೆಸೇಜ್ ಓರಿಯಂಟೆಡ್ ಸಿನೆಮಾ ಇದಾಗಿರುವುದರಿಂದ ‘ನಮ್ ಕನ್ನಡ ಸಿನ್ಮಾ ಸಪೋರ್ಟರ್ಸ್’ ತಂಡ ಈ ಪ್ರಯತ್ನಕ್ಕೆ ಕೈ ಹಾಕಿದೆ…

    ಏನಿದು ವಿಶೇಷ ಪ್ರದರ್ಶನ?!
    ನಿಮ್ಮ ಮನೆಯಲ್ಲಿ ನೀವು, ನಿಮ್ಮ ವೈಫು ಹಾಗೂ ನಿಮಗೆ ಪಿಯುಸಿ ಆಸುಪಾಸಿನ ಹೆಣ್ಣುಮಗಳು ಇದ್ದರೆ ಈಗಲೇ 9538000044 ನಂಬರಿಗೆ ವಾಟ್ಸಪ್ ಮಾಡಿ…ಪೋಟೋ ಇಲ್ಲ ಎಂದರೆ ಸಿನೆಮಾಗೆ ಪ್ರವೇಶವಿಲ್ಲ. ದುನಿಯಾ ವಿಜಿ ಹಾಗೂ ಅವರ ಮಗಳ ಜೊತೆ ಸಿನೆಮಾ ನೋಡುವ ಅವಕಾಶ ಇಲ್ಲ! ಈಗಲೇ ಗಂಡ ಹೆಂಡತಿ ಮತ್ತು ಮೊನ್ನೆ ತಾನೇ ಪಿಯುಸಿ ಮುಗಿಸಿರುವ ಮಗಳು ಅಕ್ಕ ಪಕ್ಕ ನಿಂತು ಸೆಲ್ಫೀ ತೆಗೆದು 9538000044 ಗೆ ವಾಟ್ಸಪ್ ಮಾಡಿ… ಮೊದಲು ಯಾವ 50 ಫೋಟೋಗಳು ವಾಟ್ಸಪ್ ಗೆ ಬಂದು ಸೇರುತ್ತದೆಯೋ ಆ ಫ್ಯಾಮಿಲಿಗೆ (50*3=150ಸೀಟುಗಳು ಮಾತ್ರ) ಮನೆ ಮನ ಗೆದ್ದ, ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಜಾನಿ ಜಾನಿ ಯೆಸ್ ಪಪ್ಪಾ ಸಿನೆಮಾವನ್ನ ಚಿತ್ರತಂಡದ ಜೊತೆ ನೋಡುವ ಅದೃಷ್ಟ… ಆ ಅದೃಷ್ಟ ನಿಮ್ಮ ಫ್ಯಾಮಿಲಿಗೂ ಲಭಿಸಬಹುದು, ಯಾರಿಗೆ ಗೊತ್ತು?

    ಈಗಲೇ ಗಂಡ ಹೆಂಡತಿ ಜೊತೆ ನಿಮ್ಮ ಪಿಯುಸಿ ಆಸುಪಾಸಿನ ಮಗಳ ಜೊತೆ ಒಂದು ಕ್ಲಿಕ್ ತೆಗೆದು ವಾಟ್ಸಪ್ ಮಾಡಿ. ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನೆಮಾ ನೋಡೋ ಅವಕಾಶ ಪಡೆಯಿರಿ.

    ನೀವು ನಿಮ್ಮ ಮಗಳ ಹಾಗೂ ಹೆಂಡತಿಯ ಜೊತೆಗೇ ಬಂದು ಸಿನೆಮಾ ನೋಡಿ ಅಂತ ಪರ್ಟಿಕ್ಯುಲರ್ ಆಗಿ ಹೇಳಲು ಒಂದು ರೀಸನ್ ಇದೆ. ಅದು ಏನು ಎಂದು ಸಿನೆಮಾ ನೋಡಿದ ನಂತರ ಖುದ್ದು ದುನಿಯಾ ವಿಜಯ್ ಅವರೇ ವಿವರಿಸುತ್ತಾರೆ.

    ಜಾನಿಜಾನಿ ಯೆಸ್ ಪಪ್ಪಾ… ಒಟ್ಗೇ ಕುಂತು ಸಿನ್ಮಾ ನೋಡೋಣ ಬನ್ನಿಪ್ಪಾ…

    ವಿಶೇಷ ಸೂಚನೆ: ಮೇಲಿರೋ ನಂಬರ್ ಗೆ ವಾಟ್ಸಪ್ ಮಾತ್ರ ಮಾಡಿ, ಮೊದಲು ಕಳಿಸಿದವರಿಗೆ ಮೊದಲ ಆದ್ಯತೆ. ಹಾಗೇ ಈ ಶೋ ನೋಡಲು ಆಯ್ಕೆಯಾದ ಗಂಡ ಹೆಂಡತಿ ಮಾತ್ರ ಟಿಕೆಟ್ ಖರೀದಿ ಮಾಡಿದ್ರೆ ಸಾಕು, ನಿಮ್ಮ ಮಗಳಿಗೆ ಟಿಕೆಟ್ ಉಚಿತ.