Tag: ಫ್ರೀ ಕಾಶ್ಮೀರ ಫಲಕ

  • ನ್ಯಾಯಾಲಯಕ್ಕೆ ಬನ್ನಿ – ಸಿದ್ದುಗೆ ಪತ್ರ ಬರೆದು ಸವಾಲೆಸೆದ ಹಿರಿಯ ವಕೀಲ

    ನ್ಯಾಯಾಲಯಕ್ಕೆ ಬನ್ನಿ – ಸಿದ್ದುಗೆ ಪತ್ರ ಬರೆದು ಸವಾಲೆಸೆದ ಹಿರಿಯ ವಕೀಲ

    ಮೈಸೂರು: ಫ್ರೀ ಕಾಶ್ಮೀರ ಫಲಕ ಪ್ರದರ್ಶನ ವಿಚಾರದಲ್ಲಿ ಆರೋಪಿ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಹಿರಿಯ ವಕೀಲ ಪಿ.ಜೆ. ರಾಘವೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ.

    ಇತ್ತೀಚೆಗೆ ಸಿದ್ದರಾಮಯ್ಯ ಅವರು ಫ್ರೀ ಕಾಶ್ಮೀರ ಫಲಕ ಹಿಡಿದರೆ ಅದು ದೇಶದ್ರೋಹವಲ್ಲ ಎಂದು ಹೇಳಿದ್ದರು. ಹೀಗಾಗಿ ಹಿರಿಯ ನ್ಯಾಯಾವದಿ ಪಿ.ಜೆ. ರಾಘವೇಂದ್ರ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ನ್ಯಾಯಾಲಯಕ್ಕೆ ಆಹ್ವಾನಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಫ್ರೀ ಕಾಶ್ಮೀರ ಫಲಕ ಹಿಡಿದರೆ ದೇಶದ್ರೋಹವಲ್ಲ ಎಂದಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯನವರೂ ಕಾನೂನು ಪದವೀಧರರು, ವಕೀಲರಾಗಿದ್ದವರು. ಈಗಲೂ ವಕೀಲರಾಗಿ ಕಾರ್ಯ ನಿರ್ವಹಿಸಬಲ್ಲವರು.

    ಫ್ರೀ ಕಾಶ್ಮೀರ ಫಲಕ ಹಿಡಿದರೆ ದೇಶದ್ರೋಹವಲ್ಲ ಎಂದು ಸಿದ್ದರಾಮಯ್ಯನವರು ಮಾಧ್ಯಮಗಳ ಮುಂದೆ ಗುಡುಗುವ ಬದಲಾಗಿ ಅವರೇ ಕರಿಕೋಟು ಧರಿಸಿ ನ್ಯಾಯಾಲಯದಲ್ಲಿ ಆಪಾದಿತೆಯಾದ ನಳಿನಿಯ ಪರವಾಗಿ ವಕಾಲತ್ತು ವಹಿಸಲಿ. ಆಕೆಯ ವಿರುದ್ಧ ದಾಖಲಾದ ಪ್ರಕರಣವನ್ನೇ ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ವಾದ ಮಂಡಿಸುವುದರ ಜೊತೆಗೆ ಈ ಪ್ರಕರಣವನ್ನು ದಾಖಲಿಸಿದ ಪೊಲೀಸರು ಮತ್ತು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ ಆ ದಂಡದ ಮೊತ್ತವನ್ನು ಪರಿಹಾರದ ರೂಪದಲ್ಲಿ ಆಪಾದಿತೆ ನಳಿನಿಗೆ ದೊರಕಿಸುವಂತೆ ಸಂವಿಧಾನಬದ್ಧವಾಗಿ ಹೋರಾಟ ನಡೆಸಲಿ ಎಂದು ಬರೆದಿದ್ದಾರೆ.