Tag: ಫ್ರೀಡ್ಜ್

  • 20 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಕುಳಿತು ಭೂಕುಸಿತದಿಂದ ಪಾರಾದ ಬಾಲಕ

    20 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಕುಳಿತು ಭೂಕುಸಿತದಿಂದ ಪಾರಾದ ಬಾಲಕ

    ಮನಿಲಾ: ಫಿಲಿಪೀನ್ಸ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ವರ್ಷದ ಬಾಲಕನೊಬ್ಬ ಫ್ರಿಡ್ಜ್‌ನೊಳಗೆ ಇದ್ದು ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ.

    ಸಿ.ಜೆ.ಜಸ್ಮೆ(11) ಬದುಕುಳಿದ ಬಾಲಕ. ಭಾರೀ ಬಿರುಗಾಳಿಯಿಂದ ಭೂ ಕುಸಿತ ಸಂಭವಿಸಿತ್ತು. ಆ ವೇಳೆಗೆ ಜಸ್ಮೆ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದ. ಆದರೆ ಭೂಕುಸಿತದಿಂದಾಗಿ ಆತ ಫ್ರಿಡ್ಜ್‌ನೊಳಗೆ ಕುಳಿತುಕೊಂಡಿದ್ದ. ಸತತ 20 ಗಂಟೆಗಳ ನಂತರ ಅಧಿಕಾರಿಗಳು ಕಾರ್ಯಾಚರಣೆ ಮಾಡುವಾಗ ಸಿಕ್ಕಿದ್ದಾನೆ.

    ಚಂಡಮಾರುತದ ಹಿನ್ನೆಲೆಯಲ್ಲಿ ಲೇಯ್ಟ್ ಪ್ರಾಂತ್ಯದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವೇಶೇಷಗಳ ಅಡಿಯಲ್ಲಿ ಫ್ರಿಡ್ಜ್ ಸಿಕ್ಕಿದೆ. ಅದನ್ನು ಸಾಗಿಸುವಾಗ ತೂಕ ಹೆಚ್ಚಾಗಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ನಂತರ ಬಾಗಿಲು ತೆರೆದಾಗ ಬಾಲಕ ಪ್ರತ್ಯಕ್ಷವಾಗಿದ್ದಾನೆ. ತಕ್ಷಣ ಆತನನ್ನು ಫ್ರೀಡ್ಜ್‌ನಿಂದ ತೆಗೆದು ರಕ್ಷಿಸಿದ್ದಾರೆ. ನಂತರ ಅವನಿಗೆ ನೀರನ್ನು ನೀಡಿ ಉಳಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಆಗ ಜಸ್ಮೆ ನಾನು ಒಬ್ಬನೇ ಉಳಿದಿದ್ದೇನೆ ಎಂದು ಭಾವುಕನಾದನು. ಇದನ್ನೂ ಓದಿ: ವರ್ಗಾವಣೆ ಆದೇಶ ರದ್ದುಗೊಳಿಸುವಂತೆ 24 ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ ಶಿಕ್ಷಕರು

    ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಘಟನೆಯಿಂದಾಗಿ ಜಸ್ಮೆಯ ಕಾಲು ಮುರಿದಿದೆ. ಇದರಿಂದಾಗಿ ಆತನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು. ಇದೀಗ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: 15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ – ಹಲಾಲ್ ಉತ್ಪನ್ನ ನಿಷೇಧಿಸುವಂತೆ ಸುಪ್ರೀಂನಲ್ಲಿ ಅರ್ಜಿ

  • ಯೋಧನ ಕುಟುಂಬದ ಮೇಲೆ ಹಲ್ಲೆ – ಜಿಲ್ಲಾಧಿಕಾರಿಗಳ ಮೊರೆ ಹೋದ ಸೈನಿಕ

    ಯೋಧನ ಕುಟುಂಬದ ಮೇಲೆ ಹಲ್ಲೆ – ಜಿಲ್ಲಾಧಿಕಾರಿಗಳ ಮೊರೆ ಹೋದ ಸೈನಿಕ

    ಬೆಳಗಾವಿ: ಯೋಧರೊಬ್ಬರ ಮನೆಯ ಮೇಲೆ ಕಲ್ಲುಗಳನ್ನು ಎಸೆದು ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಮಹಾನಗರದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಗೌಂಡವಾಡ ಗ್ರಾಮದಲ್ಲಿ ಕರ್ತವ್ಯನಿರತರಾಗಿರುವ ಯೋಧ ದೀಪಕ್ ಪಾಟೀಲ್ ಎಂಬವರ ಮನೆಯ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಯಲ್ಲಿದ್ದ ಫ್ರಿಡ್ಜ್ – ಟಿವಿ ಸೇರಿದಂತೆ ಇತರ ವಸ್ತುಗಳನ್ನು ಧ್ವಂಸ ಮಾಡಿ ಇಡೀ ಕುಟುಂಬವನ್ನು ಊರಿನವರು ಬಹಿಷ್ಕಾರ ಹಾಕಿದ್ದಾರೆ.

    ಸದ್ಯ ಈ ಕಿರುಕಳ ಸಹಿಸಲಾರದೆ ದೇಶ ಕಾಯುವ ಯೋಧನ ಕುಟುಂಬ ಕಾಕತಿ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದರೂ ಅಲ್ಲಿನ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ ಮಕ್ಕಳು ದಿನಸಿ ಅಂಗಡಿಗೆ ಹೋಗಿ ಬಿಸ್ಕತ್ತು ಕೊಡಿ ಎಂದರೆ ಅಂಗಡಿಯವರು ನಮ್ಮಲ್ಲಿ ಬಿಸ್ಕತ್ತು ಇಲ್ಲ ಎಂದು ಮಕ್ಕಳಿಗೆ ಹೇಳಿ ಮರಳಿ ಕಳಿಸುತ್ತಾರೆ. ನಂತರ ಮಕ್ಕಳು ಅಮ್ಮನ ಬಳಿ ಬಂದು ಅಳುತ್ತಾರೆ. ಜೊತೆಗೆ ದೀಪಕ್ ಪಾಟೀಲ್‍ರವರ ದ್ವಿಚಕ್ರ ವಾಹನಕ್ಕೂ ಗ್ರಾಮಸ್ಥರು ಬೆಂಕಿ ಇಟ್ಟಿರುವುದಾಗಿ ಆರೋಪಿಸಿದ್ದಾರೆ.

    ಯೋಧ ದೀಪಕ್ ಸಂಬಂಧಿ ಅಶೋಕ್ ಪಾಟೀಲ್ ಅವರಿಗೆ ಸೇರಿದ ಐದು ಎಕರೆ ಜಮೀನು ವಿವಾದದಲ್ಲಿದ್ದು, ಗ್ರಾಮಸ್ಥರಿಗೂ ಹಾಗೂ ಯೋಧನ ಕುಟುಂಬಕ್ಕೆ ಜಗಳವಾಗಿದೆ ಎಂದು ಹೇಳಲಾಗುತ್ತಿದೆ. ಈಗ ಯೋಧ ನ್ಯಾಯಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ