Tag: ಫ್ರೀಜರ್

  • ಮಹಿಳೆಯ ಶವ ಫ್ರೀಜರ್‌ನಲ್ಲಿ ಪತ್ತೆ – ಪತಿಯ ಮೇಲೆ ಸಹೋದರನಿಂದ ಕೊಲೆ ಆರೋಪ

    ಮಹಿಳೆಯ ಶವ ಫ್ರೀಜರ್‌ನಲ್ಲಿ ಪತ್ತೆ – ಪತಿಯ ಮೇಲೆ ಸಹೋದರನಿಂದ ಕೊಲೆ ಆರೋಪ

    ಭೋಪಾಲ್: ಮಹಿಳೆಯ ಶವವನ್ನು ಆಕೆಯ ಪತಿ ಮನೆಯ ಫ್ರೀಜರ್‌ನಲ್ಲಿ (Freezer) ಇರಿಸಿದ್ದು, ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ರೇವಾ (Reva) ಜಿಲ್ಲೆಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಸುಮಿತ್ರಿ (40) ಎಂದು ಗುರುತಿಸಲಾಗಿದ್ದು, ಆಕೆಯ ಸಹೋದರ ಅಕ್ಕನ ಪತಿಯೇ ಆಕೆಯನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾನೆ. ಬಳಿಕ ಆಕೆ ಜಾಂಡಿಸ್‌ನಿಂದ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪತಿ ತಿಳಿಸಿದ್ದಾನೆ. ಇದನ್ನೂ ಓದಿ: ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಮದುವೆ ನಿರಾಕರಣೆ- ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ದುರ್ಮರಣ

    CRIME

    ತನ್ನ ಪತ್ನಿ ಜಾಂಡಿಸ್‌ನಿಂದ ಬಳಲುತ್ತಿದ್ದು, ಜೂನ್ 30ರ ಶುಕ್ರವಾರ ಮರಣಹೊಂದಿದ್ದಾಳೆ. ಆಕೆಯ ಅಂತ್ಯಕ್ರಿಯೆ ಮಾಡುವ ಸಲುವಾಗಿ ಪುತ್ರ ಮುಂಬೈನಿಂದ (Mumbai) ಆಗಮಿಸಬೇಕಿತ್ತು. ಆತ ಮರಳುವವರೆಗೆ ಆಕೆಯ ಶವವನ್ನು ಫ್ರೀಜರ್‌ನಲ್ಲಿ ಇಟ್ಟಿದ್ದೇನೆ ಎಂದು ಮೃತ ಮಹಿಳೆಯ ಪತಿ ತಿಳಿಸಿದ್ದಾನೆ. ಮಹಿಳೆಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆಕೆಯ ಸಾವಿನ ರಹಸ್ಯವನ್ನು ಪತ್ತೆಹಚ್ಚುವ ಸಲುವಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಡಿಪೋ ಆವರಣದಲ್ಲಿ ನೇಣಿಗೆ ಶರಣಾದ ಸಾರಿಗೆ ನೌಕರ

    ಮಹಿಳೆಯ ಸಹೋದರ ಅಭಯ್ ತಿವಾರಿ ಅಕ್ಕನನ್ನು ತನ್ನ ಭಾವ ಯಾರಿಗೂ ತಿಳಿಯದಂತೆ ಕೊಂದಿದ್ದಾರೆ ಎಂದು ದೂರು ನೀಡಿದ ಬಳಿಕ ಪೊಲೀಸರು ಶವ ವಶಪಡಿಸಿಕೊಂಡಿರುವುದಾಗಿ ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಜಯ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ಹರಿದು 60 ಮೇಕೆಗಳು ದಾರುಣ ಸಾವು

    ಅಕ್ಕನ ನಿಧನದ ಬಗ್ಗೆ ಭಾವ ಅಥವಾ ಅವರ ಕುಟುಂಬದವರು ನಮಗೆ ಮತ್ತು ನಮ್ಮ ಕುಟುಂಬದವರಿಗೆ ಯಾರಿಗೂ ತಿಳಿಸಲಿಲ್ಲ. ಈ ಕುರಿತು ಇಂದು ಬೆಳಗ್ಗೆ ನನಗೆ ಮಾಹಿತಿ ತಿಳಿದಿದೆ. ಅಲ್ಲದೇ ಭಾವ ಅಕ್ಕನನ್ನು ಥಳಿಸುತ್ತಿದ್ದರು. ಇದರಿಂದ ಆಕೆ ಸಾವನ್ನಪ್ಪಿರಬಹುದು ಎಂದು ಆರೋಪಿಸಿ ದೂರು ನೀಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗುವಿನ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿಯಲ್ಲಿ ಶವ ವಿಲೇವಾರಿ ಮಾಡಿದ ತಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ಬ್ರೆಸಿಲಿಯಾ: 3 ದಿನದಲ್ಲಿ ಮುಗಿಯಬೇಕಿದ್ದ ಮೀನುಗಾರಿಕೆ ಈ ರೀತಿ ಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಆ ವ್ಯಕ್ತಿಗೆ ತಿಳಿದಿರಲಿಲ್ಲವೇನೋ. ಈಜು ಬರದ ಬ್ರೆಜಿಲ್‌ನ ವ್ಯಕ್ತಿ ಅಟ್ಲಾಂಟಿಕ್ ಮಹಾಸಾಗರದಲ್ಲಿ 11 ದಿನಗಳ ಕಾಲ ಕೇವಲ ಒಂದು ತೇಲುವ ಫ್ರೀಜರ್ ಮೂಲಕ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಕೊನೆಗೂ ಆತನನ್ನು ಬೇರೊಂದು ಮೀನುಗಾರರ ಗುಂಪು ರಕ್ಷಿಸಿದೆ.

    11 ದಿನ ಸಮುದ್ರದಲ್ಲಿ ಈ ರೀತಿಯ ಕಷ್ಟದಲ್ಲೂ ಬದುಕಿ ಬಂದ ವ್ಯಕ್ತಿ ರೊಮಾಲ್ಡೋ ಮ್ಯಾಸೆಡೊ ರಾಡ್ರಿಗಸ್ ಈ ಬಗ್ಗೆ ಮಾಧ್ಯಮದವರೊಂದಿಗೆ ವಿವರಿಸುತ್ತಾ, ನಾನು ಆಗಸ್ಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದೆ. ಮೀನುಗಾರಿಕೆಯ ಮಧ್ಯದಲ್ಲಿ ನಾನಿದ್ದ ದೋಣಿ ಸಮುದ್ರದಲ್ಲಿ ಮುಳುಗಲಾರಂಭಿಸಿತ್ತು. ಆದರೂ ನಾನು ನನ್ನ ಆತ್ಮವನ್ನು ಮುಳುಗಲು ಬಿಡಲಿಲ್ಲ. ಅದರಂತೆಯೇ ದೇವರು ನನಗೆ ಒಂದು ಅವಕಾಶ ಕೊಟ್ಟ ಎಂದು ಹೇಳಿದರು.

    ನನ್ನ ದೋಣಿ ಮುಳುಗಲಾರಂಭಿಸಿದರೂ ಅದರಲ್ಲಿದ್ದ ತೇಲುವ ಫ್ರೀಜರ್ ಮುಳುಗುತ್ತಿರಲಿಲ್ಲ. ಒಂದು ಬಾರಿ ನನಗೆ ದೇವರೇ ಅದನ್ನು ವರವಾಗಿ ನೀಡಿದ್ದ ಎನಿಸಿತು. ನಾನು ಫ್ರೀಜರ್‌ನಲ್ಲಿದ್ದ 11 ದಿನ ಹಲವು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಒಂದು ಬಾರಿ ಫ್ರೀಜರ್‌ನಲ್ಲೂ ನೀರು ಹೊಕ್ಕಿತ್ತು. ಅದನ್ನು ನಾನು ತನ್ನ ಕೈಯಿಂದಲೇ ತೆಗೆದು ಹೊರ ಹಾಕಿದ್ದೆ. ಇನ್ನೊಂದು ಬಾರಿ ದೊಡ್ಡ ದೊಡ್ಡ ಶಾರ್ಕ್ ಮೀನುಗಳು ನನ್ನನ್ನು ಸುತ್ತುವರಿದಿದ್ದವು. ಆದರೂ ನಾನು ನನ್ನ ಕುಟುಂಬದವರನ್ನು ನೆನೆಸಿಕೊಂಡು, ಆ ಪರಿಸ್ಥಿತಿಯನ್ನು ಎದುರಿಸಿದೆ. ಅನ್ನ, ನೀರಿಲ್ಲದಿದ್ದರೂ 11 ದಿನ ನಾನು ಜೀವಂತವಾಗಿದ್ದೆ ಎಂದು ವಿವರಿಸಿದ್ದಾರೆ.

    11 ದಿನಗಳ ಸಾವು ಬದುಕಿನ ಹೋರಾಟದ ಬಳಿಕ ಕೊನೆಗೂ ನಾನಿದ್ದ ಸ್ಥಳಕ್ಕೆ ಒಂದು ದೋಣಿ ಬಂದೇ ಬಿಟ್ಟಿತು. ಆ ದೋಣಿಯಲ್ಲಿದ್ದವರು ಫ್ರೀಜರ್‌ನಲ್ಲಿ ಯಾರೂ ಇಲ್ಲ ಎಂದು ಊಹಿಸುವುದು ಬೇಡವೆಂದು ನಾನು ನನ್ನ ಕೈ, ಕಾಲುಗಳನ್ನು ಮೇಲೆತ್ತಿ, ಸಹಾಯಕ್ಕಾಗಿ ಕರೆದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು

    ಕೊನೆಗೂ ತನ್ನ ಜೀವವನ್ನು ಉಳಿಸಿಕೊಂಡ ರಾಡ್ರಿಗಸ್‌ನನ್ನು ಆ ದೋಣಿಯಲ್ಲಿದ್ದವರು ಸುರಿನಾಮ್ ದೇಶದ ದಡಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಆತನ ಬಳಿ ಯಾವುದೇ ವಲಸೆಯ ದಾಖಲೆಗಳಿಲ್ಲದಿದ್ದರಿಂದ ಅಲ್ಲಿನ ಪೊಲೀಸರು ಬಳಿಕ ಆತನನ್ನು 2 ವಾರಗಳ ಕಾಲ ವಶಕ್ಕೆ ಪಡೆದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • 10 ವರ್ಷ ತಾಯಿಯ ಶವವನ್ನ ಫ್ರೀಜರ್ ನಲ್ಲಿಟ್ಟ ಮಗಳು

    10 ವರ್ಷ ತಾಯಿಯ ಶವವನ್ನ ಫ್ರೀಜರ್ ನಲ್ಲಿಟ್ಟ ಮಗಳು

    – ಪ್ರಕರಣ ಬೆಳಕಿಗೆ ಬಂದಾಗ ಹೇಳಿದ್ಳು ‘ಮನೆ’ ಕಥೆ

    ಟೋಕಿಯೋ: ಮಹಿಳೆಯೊಬ್ಬಳು 10 ವರ್ಷಗಳ ಕಾಲ ತಾಯಿಯ ಶವವನ್ನ ಫ್ರೀಜರ್ ನಲ್ಲಿಟ್ಟ ವಿಚಿತ್ರ ಪ್ರಕರಣವೊಂದು ಜಪಾನ್ ನಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡು, ಮಗಳನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    48 ವರ್ಷದ ಯುಮಿ ಯೊಶಿನೋ ಬಂಧಿತ ಮಹಿಳೆ. ಕಳೆದ 10 ವರ್ಷಗಳಿಂದ ಫ್ರೀಜರ್ ನಲ್ಲಿಟ್ಟಿಕೊಂಡಿದ್ದಳು. ತಾಯಿಗೆ 60 ವರ್ಷವಿದ್ದಾಗಲೇ ಆಕೆ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತಾಯಿ ಸಾವನ್ನಪ್ಪಿರುವ ವಿಷಯ ತಿಳಿದ್ರೆ ತನ್ನನ್ನು ಮನೆಯಿಂದ ಹೊರ ಹಾಕುತ್ತಾರೆ ಭಯದಿಂದ ಈ ರೀತಿ ಮಾಡಿದ್ದಾಳೆ ಎಂದು ವರದಿಯಾಗಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಯುಮಿ ವಾಸವಾಗಿರುವ ಮನೆಗೆ ಬಾಡಿಗೆ ಪಾವತಿಸಿರಲಿಲ್ಲ. ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದಾಗ ಯುಮಿ ಹೊರ ಬಂದಿದ್ದಳು. ಮನೆಯ ಸ್ವಚ್ಛಗೊಳಿಸುವಾಗ ಕ್ಲೀನರ್ ಗೆ ಫ್ರೀಜರ್ ನಲ್ಲಿ ಶವ ಕಂಡಿದೆ.

    ಮೃತ ಮಹಿಳೆಗೆ ಟೋಕಿಯೋ ಮಹಾನಗರ ಪಾಲಿಕೆಯ ವಸತಿ ಯೋಜನೆ ಅಡಿಯಲ್ಲಿ ಫ್ಲ್ಯಾಟ್ ನೀಡಲಾಗಿತ್ತು. ತಾಯಿಯ ಮನೆಯಲ್ಲಿಯೇ ಯುಮಿ ವಾಸವಾಗಿದ್ದಳು. ತಾಯಿ ಸಾವನ್ನಪ್ಪಿರುವ ವಿಷಯ ತಿಳಿದರೆ ತನ್ನನ್ನು ಹೊರಗೆ ಹಾಕುತ್ತಾರೆ ಎಂದು ಸಾವಿನ ಸುದ್ದಿಯನ್ನ ಯುಮಿ ಯಾರಿಗೂ ಹೇಳಿರಲಿಲ್ಲ. ಮಹಿಳೆಯ ಸಾವು ಹೇಗಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಸದ್ಯ ಯುಮಿಯನ್ನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

  • ಹೆಂಡ್ತಿಯನ್ನ 70 ಪೀಸ್ ಮಾಡಿ 2 ತಿಂಗ್ಳು ಫ್ರೀಜರ್‍ನಲ್ಲಿಟ್ಟ ಟೆಕ್ಕಿಗೆ ಜೀವಾವಧಿ ಶಿಕ್ಷೆ

    ಹೆಂಡ್ತಿಯನ್ನ 70 ಪೀಸ್ ಮಾಡಿ 2 ತಿಂಗ್ಳು ಫ್ರೀಜರ್‍ನಲ್ಲಿಟ್ಟ ಟೆಕ್ಕಿಗೆ ಜೀವಾವಧಿ ಶಿಕ್ಷೆ

    ನವದೆಹಲಿ: 7 ವರ್ಷಗಳ ಹಿಂದೆ ಹೆಂಡತಿಯನ್ನ ಕೊಲೆಗೈದು ಆಕೆಯ ದೇಹವನ್ನ ಪೀಸ್ ಪೀಸ್ ಮಾಡಿ ಡೀಪ್ ಫ್ರೀಜರ್‍ನಲ್ಲಿಟ್ಟ ಸಾಫ್ಟ್ ವೇರ್ ಎಂಜಿನಿಯರ್ ಮೇಲಿನ ಆರೋಪ ಸಾಬೀತಾಗಿದ್ದು ಡೆಹ್ರಾಡೂನ್ ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

    ದೆಹಲಿಯ ರಾಜೇಶ್ ಗುಲಾಟಿ ಶಿಕ್ಷೆಗೊಳಗಾಗಿರುವ ವ್ಯಕ್ತಿ. ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 201(ಸಾಕ್ಷಿಯನ್ನು ಬಚ್ಚಿಟ್ಟಿದ್ದು) ಅಡಿಯಲ್ಲಿ ರಾಜೇಶ್ ಆರೋಪಿಯಾಗಿದ್ದ. ಇದೀಗ ಈತನ ಮೇಲಿನ ಆರೋಪ ಸಾಬೀತಾಗಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿನೋದ್ ಕುಮಾರ್ ತೀರ್ಪು ಪ್ರಕಟಿಸಿದ್ದಾರೆ. ರಾಜೇಶ್‍ಗೆ ಜೀವಾವಧಿ ಶಿಕ್ಷೆ ಜೊತೆಗೆ 15 ಲಕ್ಷ ರೂ. ದಂಡ ವಿಧಿಸಲಾಗಿದೆ. 7 ವರ್ಷ ಹಳೆಯದಾದ ಈ ಪ್ರಕರಣ ಉತ್ತರಾಖಂಡ್‍ನ ಅತ್ಯಂತ ಘೋರ ಘಟನೆಗಳಲ್ಲೊಂದು ಎಂದು ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು.

    ಏನಿದು ಪ್ರಕರಣ?: 2010ರ ಅಕ್ಟೋಬರ್ 17ರ ರಾತ್ರಿ ರಾಜೇಶ್ ಹಾಗೂ ಪತ್ನಿ ಅನುಪಮಾ ನಡುವೆ ಜಗಳವಾಗಿತ್ತು. ನಂತರ ರಾಜೇಶ್ ಪತ್ನಿಯನ್ನ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಎಲೆಕ್ಟ್ರಿಕ್ ಗರಗಸವನ್ನು ಬಳಸಿ ಹೆಂಡತಿಯ ಮೃತದೇಹವನ್ನ 70 ತುಂಡುಗಳಾಗಿಸಿದ್ದ. ನಂತರ ಪ್ಲಾಸ್ಟಿಕ್ ಕವರ್‍ಗಳಲ್ಲಿ ದೇಹದ ತುಂಡುಗಳನ್ನ ತುಂಬಿ ಡೀಪ್ ಫ್ರೀಜರ್‍ನಲ್ಲಿ ಇಟ್ಟಿದ್ದ. ತನ್ನ 4 ವರ್ಷದ ಅವಳಿ ಮಕ್ಕಳಿಗೆ ಅಮ್ಮ ದೆಹಲಿಯಲ್ಲಿದ್ದಾರೆಂದು ರಾಜೇಶ್ ಸುಳ್ಳು ಹೇಳಿದ್ದ.

     

    ಕೊಲೆ ಬಗ್ಗೆ ಗೊತ್ತಾಗಿದ್ದು ಹೇಗೆ?: ರಾಜೇಶ್ ಒಂದೊಂದೇ ಪ್ಲಾಸ್ಟಿಕ್ ಬ್ಯಾಗ್‍ಗಳನ್ನ ನಗರದ ಹೊರವಲಯದಲ್ಲಿ ಎಸೆಯಲು ಆರಂಭಿಸಿದ್ದ. 2 ತಿಂಗಳವರೆಗೆ ಈ ಭೀಕರ ಕೊಲೆ ಬೆಳಕಿಗೆ ಬಂದಿರಲಿಲ್ಲ. 2010ರ ಡಿಸೆಂಬರ್‍ನಲ್ಲಿ ಅನುಪಮಾ ಸಹೋದರ ಸುಜನ್ ಪ್ರಧಾನ್ ಮನೆಗೆ ಬಂದಾಗ ಅನುಪಮಾ ಇರಲಿಲ್ಲವಾದ್ದರಿಂದ ಅನುಮಾನಗೊಂಡಿದ್ದರು. ರಾಜೇಶ್‍ಗೆ ಈ ಬಗ್ಗೆ ಕೇಳಿದಾಗ ಆತ ಸರಿಯಾಗಿ ಉತ್ತರಿಸಿರಲಿಲ್ಲ. ಹಾಗೇ ಸುಜನ್‍ರನ್ನು ಮನೆಯೊಳಗೆ ಬರಲು ಬಿಟ್ಟಿರಲಿಲ್ಲ. ಹೀಗಾಗಿ ಸುಜನ್ ತನ್ನ ಸಹೋದರಿ ಕಾಣೆಯಾಗಿದ್ದಾರೆಂದು ಪೊಲಿಸ್ ಠಾಣೆಯಲ್ಲೂ ದೂರು ದಾಖಲಿಸಿದ್ದರು. ನಂತರ ಕಂಟೋನ್ಮೆಂಟ್ ಪೊಲೀಸರು ರಾಜೇಶ್ ಮನೆ ಮೇಲೆ ದಾಳಿ ಮಾಡಿದಾಗ ಲಾಕ್ ಆಗಿದ್ದ ಡೀಪ್ ಫ್ರೀಜರ್ ಪತ್ತೆಯಾಗಿತ್ತು. ಫ್ರೀಜರ್‍ನಿಂದ ಅನುಪಮಾ ಮೃತದೇಹದ ಪೀಸ್‍ಗಳನ್ನ ವಶಪಡಿಸಿಕೊಳ್ಳಲಾಗಿತ್ತು. ರಾಜೇಶ್ ಅದಾಗಲೇ ದೇಹದ ಕೆಲವು ಭಾಗಗಳನ್ನ ಮುಸ್ಸೋರಿ ರಸ್ತೆಯ ಚರಂಡಿಯಲ್ಲಿ ಎಸೆದಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿತ್ತು.

    ಎರಡನೇ ಮುದವೆಯಾಗಿದ್ದ: ರಾಜೇಶ್‍ಗೆ ಕೋಲ್ಕತ್ತಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಅನುಪಮಾ ನಂಬಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳವಾಗ್ತಿತ್ತು. ಆದ್ರೆ ತನ್ನ ಪತ್ನಿ ಅನುಪಮಾಗೆ ಅಮೆರಿಕದಲ್ಲಿ ತನ್ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ರಾಜೇಶ್ ವಿಚಾರಣೆ ವೇಳೆ ಹೇಳಿಕೊಂಡಿದ್ದ. ಅಲ್ಲದೆ ತಾನು ಅಮೆರಿಕದಿಂದ ಬಂದ ನಂತರ ಕೋಲ್ಕತ್ತಾದಲ್ಲಿ ಮಹಿಳೆಯೊಬ್ಬಳನ್ನು ಮದುವೆಯಾಗಿರೋದಾಗಿ ಒಪ್ಪಿಕೊಂಡಿದ್ದ.

    ಇಷ್ಟೆಲ್ಲಾ ಆದ್ರೂ ರಾಜೇಶ್ ಮಾತ್ರ ಯಾವುದೇ ಪಶ್ಚಾತ್ತಾಪವಿಲ್ಲದೆ, ಹೆಂಡತಿಯಿಂದ ಮುಕ್ತಿ ಸಿಕ್ಕಿದ್ದಕ್ಕೆ ನನಗೆ ನೆಮ್ಮದಿಯಾಗಿದೆ ಎಂದಿದ್ದ. ನಾನು ಏನೇ ಮಾಡಿದ್ರೂ ಮಕ್ಕಳಿಗಾಗಿ ಮಾಡಿದ್ದೇನೆ ಎಂದು ಹೇಳಿದ್ದ.

    ಇದನ್ನು ಅತ್ಯಂತ ಅಪರೂಪದ ಪ್ರಕರಣ ಎಂದು ಪರಿಗಣಿಸಬೇಕು. ರಾಜೇಶ್‍ಗೆ ಮರಣದಂಡನೆ ವಿಧಿಸಬೇಕು ಎಂದು ಸುಜನ್ ಪ್ರಧಾನ್ ಪರ ವಕೀಲರಾದ ಎಸ್‍ಕೆ ಮೊಹಂತಿ ಕೋರ್ಟ್‍ನಲ್ಲಿ ವಾದಿಸಿದ್ದರು. ಇದೀಗ ರಾಜೇಶ್‍ಗೆ ಜೀವಾವಧಿ ಶಿಕ್ಷೆಯಾಗಿದ್ದು, ನಾವೀಗ ಉತ್ತಾರಾಖಂಡ್ ಹೈಕೋರ್ಟ್ ಮೊರೆ ಹೋಗಿ ರಾಜೇಶ್‍ಗೆ ಮರಣದಂಡನೆ ನೀಡಬೇಕೆಂದು ಮನವಿ ಸಲ್ಲಿಸಲಿದ್ದೇವೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.