Tag: ಫ್ರಿಡ್ಜ್

  • ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಫ್ರಿಡ್ಜ್!- ವಿಡಿಯೋ

    ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಫ್ರಿಡ್ಜ್!- ವಿಡಿಯೋ

    ಬೀಜಿಂಗ್: ಸಾಮಾನ್ಯವಾಗಿ ಮೊಬೈಲ್ ಬ್ಲಾಸ್ಟ್ ಆಗಿರುವ ಸುದ್ದಿ ಕೇಳಿರ್ತೀರ. ಆದರೆ ಚೀನಾದ ಕೆಫೆಯೊಂದರಲ್ಲಿ ಫ್ರಿಡ್ಜ್ ವೊಂದು ಸ್ಫೋಟಗೊಂಡ ಘಟನೆ ನಡೆದಿದೆ.

    ಮಾರ್ಚ್ 19ರಂದು ಚೀನಾದ ಪಿಂಗ್‍ದಿನ್‍ಶಾನ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿದೆ. ಈ ವಿಡಿಯೋವನ್ನು ಇದೀಗ ಇಲ್ಲಿನ ಮಾಧ್ಯಮವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

    ಚೀನಾದ ಇಂಟರ್ ನೆಟ್ ಕೆಫೆಯೊಂದರಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿ ಇದೀಗ ವಿಡಿಯೋ ವೈರಲ್ ಆಗಿದೆ. ಈ ಘಟನೆಯಲ್ಲಿ ಕೆಫೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಹಾನಿ ಆಗಿಲ್ಲ ಎಂದು ವರದಿಯಾಗಿದೆ.

    ಈ ವಿಡಿಯೋ ಸುಮಾರು 30 ಸೆಕೆಂಡ್‍ಗಳಿದ್ದು, ಗ್ರಾಹಕರೊಬ್ಬರು ಕ್ಯಾಶ್ ಕೌಂಟರ್ ಬಳಿ ನಡೆದುಕೊಂಡು ಹೋಗುವಾಗ ಆತನ ಹಿಂದೆ ಇದ್ದ ಫ್ರಿಡ್ಜ್ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡು ಫ್ರಿಡ್ಜ್ ಸ್ಫೋಟವಾಗುತ್ತಿದ್ದಂತೆ ಅಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದಾರೆ.

    ಸದ್ಯ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

  • ಕೋಕಾ ಕೋಲಾ ಫ್ರಿಡ್ಜ್ ನಲ್ಲಿಯ ಸಿಲಿಂಡರ್ ಸ್ಫೋಟ -ಇಬ್ಬರು ಮಕ್ಕಳ ಸಾವು

    ಕೋಕಾ ಕೋಲಾ ಫ್ರಿಡ್ಜ್ ನಲ್ಲಿಯ ಸಿಲಿಂಡರ್ ಸ್ಫೋಟ -ಇಬ್ಬರು ಮಕ್ಕಳ ಸಾವು

    ವಿಜಯಪುರ: ವಿಜಯಪುರ ತಾಲೂಕಿನ ಉತ್ನಾಳ ತೋಟದ ಮನೆಯೊಂದರಲ್ಲಿ ಕೋಕಾ ಕೋಲಾ ಫ್ರಿಡ್ಜ್ ನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.

    ಸಂಜೀವ ಕುಮಾರ್ ಹೂಗಾರ್ (11) ಹಾಗೂ ಪವನ ಪ್ರಕಾಶ್ ಹೂಗಾರ್ (5) ಮೃತ ದುರ್ದೈವಿಗಳು. ಫ್ರಿಡ್ಜ್ ನಲ್ಲಿರುವ ಸಿಲಿಂಡರ್ ನ ಗ್ಯಾಸ್ ಲೀಕ್ ಆಗಿದ್ದರಿಂದ ಸ್ಫೋಟವಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.

    ಸಿಲಿಂಡರ್ ಸ್ಫೋಟದ ತೀವ್ರತೆಗೆ ಮಕ್ಕಳಿಬ್ಬರ ದೇಹಗಳು ಛಿದ್ರ ಛಿದ್ರವಾಗಿವೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಗೆ ನುಗ್ಗಿ ಫ್ರಿಡ್ಜ್ ಓಪನ್ ಮಾಡಿ ಆಹಾರ ತಿಂದ ಕರಡಿ: ವಿಡಿಯೋ ನೋಡಿ

    ಮನೆಗೆ ನುಗ್ಗಿ ಫ್ರಿಡ್ಜ್ ಓಪನ್ ಮಾಡಿ ಆಹಾರ ತಿಂದ ಕರಡಿ: ವಿಡಿಯೋ ನೋಡಿ

    ವಾಷಿಂಗ್ಟನ್: ಮನೆಯ ಮಾಲೀಕನೊಬ್ಬ ಗಾಢವಾದ ನಿದ್ದೆಯಲ್ಲಿದ್ದಾಗ ಹಸಿದಿದ್ದ ಕರಡಿಯೊಂದು ಮನೆಗೆ ಒಳನುಗ್ಗಿ ಫ್ರಿಡ್ಜ್ ನಲ್ಲಿ ಇದ್ದ ಬ್ರೆಡ್, ಜಾಮೂನು ಹಾಗೂ ಇನ್ನಿತರ ಆಹಾರವನ್ನು ತಿಂದ ವಿಡಿಯೋವೊಂದು ವೈರಲ್ ಆಗಿದೆ.

    ಹೌದು, ಅಮೆರಿಕಾದ ಕೊಲೊರಾಡೋದಲ್ಲಿ ಮನೆಗೆ ಒಳನುಗ್ಗಿ ಆಹಾರವನ್ನು ಕರಡಿಯೊಂದು ಸೇವಿಸಿದೆ. ಮಾಲೀಕ ಮಹಡಿಯಲ್ಲಿ ಮಲಗಿದ್ದ ವೇಳೆ ಕರಡಿ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿ ಸುಮಾರು 6 ಗಂಟೆಗಳಷ್ಟು ಕಾಲ ಇದ್ದು, ಫ್ರಿಡ್ಜ್ ಓಪನ್ ಮಾಡಿ ಆಹಾರವನ್ನು ಹುಡುಕಿದೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಇತರೇ ಆಹಾರಗಳನ್ನು ತಿಂದಿದೆ.

    ಇದೇ ಕರಡಿ ಜೂನ್ ನಲ್ಲಿಯೂ ಮನೆಯೊಂದಕ್ಕೆ ನುಗ್ಗಿ ಐಸ್ ಕ್ರೀಂ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದಿತ್ತು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕರಡಿ ಮನೆಯಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಸಿಲಿಂಡರ್ ಸ್ಫೋಟ- ಹೊಟೇಲ್‍ನಲ್ಲಿದ್ದ ವಸ್ತುಗಳು ಸುಟ್ಟು ಭಸ್ಮ

    ಸಿಲಿಂಡರ್ ಸ್ಫೋಟ- ಹೊಟೇಲ್‍ನಲ್ಲಿದ್ದ ವಸ್ತುಗಳು ಸುಟ್ಟು ಭಸ್ಮ

    ಹಾವೇರಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಹೊಟೇಲ್ ಸುಟ್ಟು ಭಸ್ಮವಾದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಫಕ್ಕೀರಪ್ಪ ಚಕ್ರಸಾಲಿ ಎಂಬವರಿಗೆ ಸೇರಿದ ಹೊಟೇಲ್ ಇದಾಗಿದೆ. ಬುಧವಾರ ತಡರಾತ್ರಿ ಹೊಟೇಲ್ ನಲ್ಲಿ ಯಾರೂ ಇಲ್ಲದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹೊಟೇಲ್ ನಲ್ಲಿದ್ದ ಫ್ರಿಡ್ಜ್, ಟಿವಿ ಸೇರಿದಂತೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಂಸಭಾವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.