Tag: ಫ್ರಿಜ್

  • ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ – ಒಂದೇ ಕುಟುಂಬದ ಐವರು ಸಾವು!

    ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ – ಒಂದೇ ಕುಟುಂಬದ ಐವರು ಸಾವು!

    ಚಂಡೀಗಢ: ಮನೆಯೊಂದರಲ್ಲಿ ಫ್ರಿಡ್ಜ್‌ನ (Fridge) ಕಂಪ್ರೆಸರ್ (Compressor) ಸ್ಫೋಟಗೊಂಡು (Blast) ಮೂವರು ಮಕ್ಕಳು ಸೇರಿಂತೆ ಒಂದೇ ಕುಟುಂಬದ ಒಟ್ಟು ಐವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್‌ನಲ್ಲಿ (Jalandhar) ನಡೆದಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.

    ದುರ್ಘಟನೆ ಭಾನುವಾರ ರಾತ್ರಿ ನಡೆದಿದ್ದು, ಸ್ಫೋಟದಿಂದಾಗಿ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮೃತರನ್ನು ಯಶಪಾಲ್ ಘಾಯ್ (70), ರುಚಿ ಘಾಯ್ (40), ಮನ್ಶಾ (14), ದಿಯಾ (12) ಮತ್ತು ಅಕ್ಷಯ್ (10) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್

    ಸ್ಫೋಟಕ್ಕೆ ನಿಖರವಾದ ಕಾರಣ ಕಂಡುಹಿಡಿಯಲು ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಯಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ – 7 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಲೆಗೈದು ಪತ್ನಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್‍ನಲ್ಲಿಟ್ಟ ಪತಿ

    ಕೊಲೆಗೈದು ಪತ್ನಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್‍ನಲ್ಲಿಟ್ಟ ಪತಿ

    – ತುಂಡರಿಸಿದ ಭಾಗಗಳನ್ನು ಬಕೆಟ್‍ನಲ್ಲಿ ತುಂಬಿ ಚರಂಡಿಗೆ ಎಸೆದ
    – ಪತ್ನಿ ಶವದ ಜೊತೆಗೆ 2 ಮಕ್ಕಳದೊಂದಿಗೆ ಅದೇ ಮನೆಯಲ್ಲಿದ್ದ

    ಮುಂಬೈ: ಪತ್ನಿಯನ್ನು ಕೊಂದು ಆಕೆಯ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ 1 ವಾರ ಫ್ರಿಜ್‍ನಲ್ಲಿಟ್ಟು, ಬಳಿಕ ಅದನ್ನು ಚರಂಡಿಗೆ ಎಸೆದಿದ್ದ ಕ್ರೂರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸೋಮವಾರ ಆರೋಪಿ ಸಂಜಯ್ ರಂಗನಾಥ್ ಸಾಲ್ವೆ ಅಕ ಅಬ್ದುಲ್ ರೆಹಮಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಬ್ದುಲ್ ತನ್ನ ಪತ್ನಿ ರೇಷ್ಮಾ ಪಠಾನ್ ಅವರನ್ನು ಕೊಲೆಗೈದಿದ್ದನು. ಬಳಿಕ 1 ವಾರದಿಂದ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದನು. ಆದರೆ ಸೋಮವಾರ ಅಬ್ದುಲ್ ನಿಜಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವಕನ ಜೊತೆ ಮದ್ವೆಗೆ ವಿರೋಧ- ತಂದೆಯಿಂದ್ಲೇ ಮಗಳು ಪೀಸ್ ಪೀಸ್

    ಅಬ್ದುಲ್ 1 ವಾರದ ಹಿಂದೆಯೇ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯ ಫ್ರಿಜ್‍ನಲ್ಲಿ ಇಟ್ಟಿದ್ದನು. ಅಲ್ಲದೆ, ಅದೇ ಮನೆಯಲ್ಲಿ ತನ್ನ ಇಬ್ಬರು ಮಕ್ಕಳ ಜೊತೆಗೆ ಆರೋಪಿ ವಾಸವಿದ್ದನು. ಸೋಮವಾರ ಬೆಳಗ್ಗೆ ಔರಂಗಾಬಾದಿನ ಅಶೋಕ ನಗರದ ದೊಡ್ಡ ಚರಂಡಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮೃತದೇಹಗಳ ಭಾಗಗಳು ಪತ್ತೆಯಾಗಿತ್ತು. ಬೆಳಗ್ಗೆ ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಅಪ್ರಾಪ್ತೆ ಗೆಳತಿಯನ್ನ ಜೀವಂತವಾಗಿ ಸುಟ್ಟ ಪ್ರಿಯಕರ

    ಈ ಸಂಬಂಧ ತನಿಖೆ ನಡೆಸುತ್ತಿದ್ದ ವೇಳೆ ಮುಂಜಾನೆ ಓರ್ವ ವ್ಯಕ್ತಿ ಬಕೆಟ್ ಹಿಡಿದುಕೊಂದು ಇಬ್ಬರು ಮಕ್ಕಳ ಜೊತೆಗೆ ಇಲ್ಲಿಗೆ ಬಂದಿದ್ದ ಎಂದು ಸ್ಥಳೀಯರು ತಿಳಿಸಿದರು. ಆಗ ಪೊಲೀಸ್ ಅಧಿಕಾರಿ ಸೈಯದ್ ಸುಲೆಮನ್ ಘಟನೆ ನಡೆದಿರುವ ಪ್ರದೇಶದ ಸುತ್ತಮುತ್ತಲ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಸೋಮವಾರ ಮಧ್ಯಾಹ್ನದ ವೇಳೆಗೆ ಮೃತ ದೇಹದ ಇತರೆ ಭಾಗಗಳನ್ನೂ ಸಹ ಪೊಲೀಸರು ಆರೋಪಿ ಮನೆಯಿಂದ ವಶಪಡಿಸಿಕೊಂಡಿದ್ದಾರೆ.