Tag: ಫ್ರಾನ್ಸ್‌ ಪೊಲೀಸ್‌

  • ಫ್ರಾನ್ಸ್‌ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್‌

    ಫ್ರಾನ್ಸ್‌ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್‌

    ಪ್ಯಾರಿಸ್‌: 17 ವರ್ಷದ ಹುಡುಗನನ್ನು ಗುಂಡಿಟ್ಟು ಹತ್ಯೆ ಮಾಡಿದ ನಂತರ ಫ್ರಾನ್ಸ್‌ನಲ್ಲಿ (France) ಜನಾಕ್ರೋಶ ಭುಗಿಲೆದ್ದಿದೆ. ಟ್ರಾಫಿಕ್‌ ತಪಾಸಣೆ ವೇಳೆ ಹುಡುಗನ ಮೇಲೆ ಪೊಲೀಸರು ಗುಂಡು ಹಾರಿಸಿ ಹತ್ಯೆಗೈದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಂಗಳವಾರ ರಾತ್ರಿಯಿಂದಲೇ ಪ್ರತಿಭಟನೆ (France Protest) ಭುಗಿಲೆದ್ದಿದೆ.

    ಫ್ರಾನ್ಸ್‌ನ ಪ್ರತಿಭಟನೆ ಶನಿವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೀದಿ ಬೀದಿಗಳಲ್ಲಿ ಪೊಲೀಸ್‌ (France Police) ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 3 ಟ್ರಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್‌

    ಪ್ರತಿಭಟನಾಕಾರರ ಆಕ್ರೋಶಕ್ಕೆ 2,000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈವರೆಗೆ ಸುಮಾರು 994 ಮಂದಿಯನ್ನು ಬಂಧಿಸಲಾಗಿದೆ. ಪ್ಯಾರಿಸ್‌ ಸಹಿತ ಹಲವು ನಗರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದ್ದರೂ ಗಲಭೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ 17ರ ಹುಡುಗರನ್ನು ಹತ್ಯೆ ಮಾಡಿದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ.

    ಫ್ರಾನ್ಸ್‌ನ ಪಶ್ಚಿಮ ಪ್ಯಾರಿಸ್‌ನ ನಾಂಟೇರ್‌ನಲ್ಲಿ ಟ್ರಾಫಿಕ್‌ ತಪಾಸಣೆ ವೇಳೆ ಪೊಲೀಸರು 17 ವರ್ಷದ ನಹೆಲ್ ಎಂಬ ಹುಡುಗನನ್ನ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವುದರಿಂದ ಶೀಘ್ರವೇ ಶಮನಗೊಳಿಸಲು ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೇ ಪರಿಸ್ಥಿತಿ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿರುವುದರಿಂದ ಸರ್ಕಾರ 45 ಸಾವಿರ ಪೊಲೀಸರನ್ನ ನಿಯೋಜನೆ ಮಾಡಿದೆ. ಮತ್ತೆ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಅಧ್ಯಕ್ಷ ಇಮಾನ್ಯುಯಲ್‌ ಮ್ಯಾಕ್ರನ್‌ (Emmanuel Macron) ಹರಸಾಹಸ ನಡೆಸುತ್ತಿದ್ದಾರೆ. ಈ ನಡುವೆ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಖ್ಯಾತ ಪಾಕಿಸ್ತಾನಿ ಸ್ನೂಕರ್ ಆಟಗಾರ ಮರ ಕಡಿಯುವ ಯಂತ್ರ ಬಳಸಿ ಆತ್ಮಹತ್ಯೆ

    ಏಕೆ ಇಷ್ಟು ಆಕ್ರೋಶ?
    ಅಲ್ಜೇರಿಯನ್‌ ಮೂಲದ 17 ವರ್ಷದ ಹುಡುಗ ನಹೆಲ್‌ ಎಂಬಾತ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ಹತ್ಯೆ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಆತ ಕಾರ್ ಚಲಾಯಿಸುವ ವೇಳೆ ನಿಯಮ ಉಲ್ಲಂಘಿಸಿದ್ದಾಗ ಕಾರ್‌ನಿಂದ ಹೊರಕ್ಕೆ ಇಳಿಸಲು ಪ್ರಯತ್ನಿಸಿದ್ದರು. ಫ್ರಾನ್ಸ್‌ನಲ್ಲಿ ವಾಹನ ಚಲಾಯಿಸಲು ಪರವಾನಗಿ ಹೊಂದುವಷ್ಟು ಆತನಿಗೆ ವಯಸ್ಸಾಗಿರಲಿಲ್ಲ. ಸಂಚಾರ ದೀಪದ ಅಡಿ ಮರ್ಸಿಡಿಸ್ ಕಾರು ನಿಲ್ಲಿಸಬೇಕಿತ್ತು. ಕಾರು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಬಂದೂಕು ತೋರಿಸಿದರೂ ಚಾಲಕ ಕಾರು ನಿಲ್ಲಿಸಿ ಇಳಿಯಲಿಲ್ಲ. ಇದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ಚಾಲಕನ ಕೈ ಹಾಗೂ ಎದೆಗೆ ಹೊಕ್ಕಿದೆ. ಆತನಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಸಫಲವಾಗಿರಲಿಲ್ಲ.

    ಫ್ರಾನ್ಸ್‌ನಲ್ಲಿ 2017ರಲ್ಲಿ ಇಲ್ಲಿನ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತಂದು 5 ಗಂಭೀರ ಬಗೆಯ ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ವಾಹನ ಸವಾರರ ಮೇಲೆ ಗುಂಡು ಹಾರಿಸುವ ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಜನರ ವಿರೋಧವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಂಡ್ತಿಗೆ ಡ್ರಗ್ಸ್ ಕೊಟ್ಟು ಬೇರೆ ಪುರುಷರಿಂದ ರೇಪ್ ಮಾಡಿಸ್ತಿದ್ದ ಪತಿ – ವೀಡಿಯೋ ಕೂಡ ರೆಕಾರ್ಡ್ ಮಾಡ್ತಿದ್ನಂತೆ

    ಹೆಂಡ್ತಿಗೆ ಡ್ರಗ್ಸ್ ಕೊಟ್ಟು ಬೇರೆ ಪುರುಷರಿಂದ ರೇಪ್ ಮಾಡಿಸ್ತಿದ್ದ ಪತಿ – ವೀಡಿಯೋ ಕೂಡ ರೆಕಾರ್ಡ್ ಮಾಡ್ತಿದ್ನಂತೆ

    – 10 ವರ್ಷದಿಂದ ರೇಪ್, 92 ಕೇಸ್, 59 ಮಂದಿ ಅರೆಸ್ಟ್

    ಪ್ಯಾರಿಸ್: ಅನುಮಾನಗೊಂಡು ತನ್ನ ಪತ್ನಿಗೆ (Wige) ಪ್ರತಿದಿನ ಡ್ರಗ್ಸ್ ಕೊಟ್ಟು ಬೇರೆ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ಘಟನೆ ಫ್ರಾನ್ಸ್‌ನಲ್ಲಿ (French) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇದು 10 ವರ್ಷಗಳ ಕಾಲ ಮುಂದುವರಿದಿದ್ದು, 92 ಅತ್ಯಾಚಾರ ಪ್ರಕರಣವನ್ನ ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ರಿಂದ 53 ವರ್ಷದೊಳಗಿನ 59 ಪುರುಷರನ್ನ ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಅವರಲ್ಲಿ ಅಗ್ನಿಶಾಮಕ ಸಿಬ್ಬಂದಿ, ಲಾರಿ ಚಾಲಕ, ಪಾಲಿಕೆ ಕೌನ್ಸಿಲರ್, ಬ್ಯಾಂಕ್‌ನಲ್ಲಿ IT ಉದ್ಯೋಗಿ, ಜೈಲು ಸಿಬ್ಬಂದಿ, ನರ್ಸ್ ಮತ್ತು ಪತ್ರಕರ್ತರೂ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಡೊಮಿನಿಕ್, ಫ್ರಾಂಕೋಯಿಸ್ (ಮಹಿಳೆ ಹೆಸರು ಬದಲಿಸಲಾಗಿದೆ) ಮದುವೆಯಾಗಿ 50 ವರ್ಷ ಕಳೆದಿದ್ದು, ದಂಪತಿಗೆ 3 ಮಕ್ಕಳಿದ್ದಾರೆ. ಪತಿ ಡೊಮಿನಿಕ್ ವ್ಯಕ್ತಿ ಪ್ರತಿದಿನ ರಾತ್ರಿ ಹೆಂಡತಿಗೆ ಊಟದಲ್ಲಿ ಲೊರಾಜೆಪಮ್ ಆಂಟಿ-ಆಂಗ್ಲೇಶನ್ ಡ್ರಗ್ ಬೆರಸಿಕೊಡುತ್ತಿದೆ. ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ ನಂತರ ಬೇರೆ ಪುರುಷರನ್ನ ತನ್ನ ಮನೆಗೆ ಕರೆಸಿ ಹೆಂಡ್ತಿ ಮೇಲೆ ಅತ್ಯಾಚಾರ ಮಾಡಿಸುತ್ತಿದ್ದ. ಅದನ್ನು ತಾನೇ ವೀಡಿಯೋನಲ್ಲಿ ರೆಕಾರ್ಡ್ (Video Record) ಮಾಡಿಕೊಂಡು ಡ್ರೈವ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದ ಎಂಬುದು ತಿಳಿದುಬಂದಿದೆ. 2011ರಿಂದ 2020ರ ಅವಧಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರ ತನಿಖೆಯಲ್ಲಿ (Police Investigation) ತಿಳಿದುಬಂದಿದೆ. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

    ತನಿಖಾಧಿಕಾರಿಗಳು ಹೇಳಿದ್ದೇನು?
    ಪತಿ ಡೊಮಿನಿಕ್ ತನ್ನ ಹೆಂಡತಿ ಬೇಗನೆ ಎಚ್ಚರವಾಗದಂತೆ ನೋಡಿಕೊಳ್ಳಲು ಬರುವವರಿಗೆ ತಂಬಾಕು ಹಾಗೂ ಪರ್ಫ್ಯೂಮ್ ಬಳಸಬೇಡಿ ಅಂತಾ ಹೇಳಿದ್ದ. ತಕ್ಷಣ ತಾಪಮಾನ ಬದಲಾವಣೆ ತಪ್ಪಿಸಲು ಬಿಸಿನೀರಿನಲ್ಲಿ ಕೈತೊಳೆಯುವಂತೆ ಬರುವವರಿಗೆ ಹೇಳ್ತಿದ್ದ. ಅಡುಗೆ ಮನೆಯಲ್ಲಿ, ಸ್ನಾನಗೃಹದಲ್ಲಿ ಬಟ್ಟೆ ಬಿಚ್ಚಿಡುವುದನ್ನ ತಪ್ಪಿಸಿದ್ದ. ವಾಹನಗಳನ್ನು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ವಾಹನಗಳನ್ನು ನಿಲ್ಲಿಸುವಂತೆ ನೋಡಿಕೊಳ್ಳುತ್ತಿದ್ದ. ಸ್ಥಳೀಯರಿಗೆ ಅನುಮಾನ ಬರಬಾರದು ಅಂತಾ ಕತ್ತಲಲ್ಲೇ ಈ ಕೆಲಸ ಮಾಡಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

    ಅಲ್ಲದೇ ಅತ್ಯಾಚಾರ ಮಾಡಿರುವ ಕೆಲವರು, ಅವನ ಹೆಂಡತಿಗೆ ಇದು ಒಪ್ಪಿಗೆ ಇರಲಿಲ್ಲ ಅನ್ನೋ ವಿಷಯ ನಮಗೆ ಗೊತ್ತಿಲ್ಲ ಎಂದು ಹೇಳಿದರೆ, ಇನ್ನೂ ಕೆಲವರು ಅವನ ಹೆಂಡತಿ, ಅವಳನ್ನ ಇಷ್ಟಪಡುವವನೊಂದಿಗೆ ಮಾಡಿದ್ರೆ ತಪ್ಪಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 4,000 ವರ್ಷಗಳ ಹಿಂದಿನ ಪುರಾತನ ಸಮಾಧಿ ಪತ್ತೆ – ಸಮಾಧಿಯಲ್ಲಿತ್ತು ಬೆಲೆ ಬಾಳುವ ವಸ್ತು

    ತನಿಖೆ ಸಂದರ್ಭದಲ್ಲಿ ಡೊಮಿನಿಕ್ ಅತ್ಯಾಚಾರ ವೀಡಿಯೋ ಮಾಡಿರುವ ಬಗ್ಗೆ ತಿಳಿದುಕೊಂಡರು. ಜೊತೆಗೆ ಬಟ್ಟೆ ಬದಲಾಯಿಸುತ್ತಿದ್ದ ಕೋಣೆಗಳಲ್ಲೂ ಸೀಕ್ರೆಟ್ ಕ್ಯಾಮೆರಾಗಳನ್ನಿಟ್ಟು ವೀಡಿಯೋ ರೆಕಾರ್ಡ್ ಮಾಡುತ್ತಿದ್ದ. ಈ ಬಗ್ಗೆ ಮಹಿಳೆಗೆ ತಿಳಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾಳೆ.