Tag: ಫ್ರಾಕ್

  • ಮಕ್ಕಳಿಗೆ ಇಷ್ಟವಾಗುವ ಬಣ್ಣ, ಬಣ್ಣದ ಫ್ರಾಕ್ – ಆಯ್ಕೆ ಹೇಗಿರಬೇಕು ಗೊತ್ತಾ?

    ಮಕ್ಕಳಿಗೆ ಇಷ್ಟವಾಗುವ ಬಣ್ಣ, ಬಣ್ಣದ ಫ್ರಾಕ್ – ಆಯ್ಕೆ ಹೇಗಿರಬೇಕು ಗೊತ್ತಾ?

    ಸಾಮಾನ್ಯವಾಗಿ ಮನೆಗಳಲ್ಲಿ ಪುಟ್ಟ ಹೆಣ್ಣು ಮಕ್ಕಳಿದ್ದರೆ, ಅವಳಿಗೆ ಚೆಂದದ ಡ್ರೆಸ್ ತೊಡಿಸಿ, ಮೇಕಪ್ ಮಾಡಲು ಪೋಷಕರು ಬಯಸುತ್ತಾರೆ. ಅದರಲ್ಲಿಯೂ ಮಗಳಿಗೆ ಡ್ರೆಸ್ ಮಾಡವುದರಲ್ಲಿ ತಾಯಂದಿರಿಗೆ ಅದೇನೋ ಒಂದು ರೀತಿ ಸಖತ್ ಖುಷಿ ನೀಡುತ್ತದೆ. ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳಿಗೆ ಫ್ರಾಕ್, ಶಾರ್ಟ್ಸ್, ಸ್ಕರ್ಟ್ಸ್, ಪಾರ್ಟಿ ಡ್ರೆಸ್, ಸ್ಟಿಚೆಡ್ ಸೀರೆ ಹೀಗೆ ಸಾಕಷ್ಟು ನಾನಾ ರೀತಿಯ ಡ್ರೆಸ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

    ಸಾಮಾನ್ಯವಾಗಿ ಪುಟ್ ಮಕ್ಕಳು ತಮ್ಮ ತಾಯಿಯನ್ನು ಮಿಮಿಕ್ರಿ ಮಾಡುತ್ತಾರೆ. ತಾಯಿ ಹಿಡಿದುಕೊಳ್ಳುವಂತೆ ಹ್ಯಾಂಡ್ ಬ್ಯಾಗ್ ಹಿಡಿದುಕೊಳ್ಳುವುದು, ಡ್ರೆಸ್ ತೊಡುವುದು ಹೀಗೆ ಅನೇಕ ವಿಚಾರಗಳನ್ನು ಅನುಸರಿಸುತ್ತಾರೆ. ಅಂತಹ ಮಕ್ಕಳಿಗೆ ಡ್ರೆಸ್ ಜೊತೆಗೆ ಹ್ಯಾಂಡ್ ಬ್ಯಾಗ್ ಸಿಕ್ಕರೆ ಫ್ರಾಕ್ ಧರಿಸಲು ಮತ್ತಷ್ಟು ಆಸಕ್ತಿ ತೋರಿಸುತ್ತಾರೆ. ಅಲ್ಲದೇ ಫ್ರಾಕ್ ಧರಿಸುವುದರ ಜೊತೆಗೆ ಹ್ಯಾಂಡ್ ಬ್ಯಾಗ್ ಮಕ್ಕಳಿಗೆ ಚಾರ್ಮ್ ಜೊತೆಗೆ ಸ್ಟೈಲಿಷ್ ಲುಕ್ ನೀಡುತ್ತದೆ. ಅಂತಹ ಮಕ್ಕಳಿಗೆ ಫ್ರಾಕ್ ಜೊತೆಗೆ ಸೂಟ್ ಆಗುವಂತಹ ಒಂದಷ್ಟು ಹ್ಯಾಂಡ್‍ಬ್ಯಾಗ್‍ನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಫ್ಯಾನ್ಸಿ ಸ್ಲೀವ್‍ಲೆಸ್ ಮಿಡಿ ಫ್ರಾಕ್ ಡ್ರೆಸ್
    ಬಿಳಿ ಮತ್ತು ಗ್ರೀನ್ ಶಾರ್ಟ್ ಒನ್-ಪೀಸ್ ಫ್ರಾಕ್ ಉದ್ದವಾದ ಹ್ಯಾಂಡ್ ಬ್ಯಾಗ್‍ನೊಂದಿಗೆ ಸುಂದರವಾಗಿ ಕಾಣಿಸುತ್ತದೆ. ಸ್ಲೀವ್‍ಲೆಸ್ ಹಾಗೂ ಡಬಲ್ ಕಲರ್ ನೆಕ್‍ಲೈನ್ ನಿಂದ ಈ ಫ್ರಾಂಕ್ ವಿನ್ಯಾಸಗೊಳಿಸಲಾಗಿದ್ದು, ಸೊಂಟಕ್ಕೆ ಬೆಲ್ಟ್ ಕೂಡ ನೀಡಲಾಗಿದೆ ಮತ್ತು ಇದರೊಂದಿಗೆ ನೀಡಿರುವ ಹ್ಯಾಂಡ್ ಬ್ಯಾಗ್ ಬ್ಲ್ಯಾಕ್ ಆ್ಯಂಡ್ ಗ್ರೀನ್ ಕಲರ್‍ದಾಗಿದೆ. ಈ ಬ್ಲ್ಯಾಕ್ ಕಲರ್ ಫ್ರಾಕ್‍ಗೆ ಒಂದು ಶೋಲ್ಡರ್ ಸೈಡ್ ಮಾತ್ರ ಸ್ಲೀವ್ಸ್ ನೀಡಲಾಗಿದೆ. ಒಂದು ಸೈಡ್ ನೀಡಲಾಗಿರುವ ಸ್ಲೀವ್ಸ್ ಒಂದು ಕೈ ಕೊನೆಯವರೆಗೂ ಬರುತ್ತದೆ.

    ಒನ್ ಶೋಲ್ಡರ್ ಸ್ಲೀವ್ಸ್ ಫುಲ್ ಮಿಡಿ
    ಸ್ಯಾಟಿನ್ ಬಟ್ಟೆಯಿಂದ ಕಪ್ಪು ಬಾಡಿಕಾನ್ ಫ್ರಾಕ್ ಅನ್ನು ತಯಾರಿಸಲಾಗುತ್ತದೆ. ಒಂದು ಸೈಡ್ ಮಾತ್ರ ಈ ಫ್ರಾಕ್‍ಗೆ ಸ್ಲೀವ್ಸ್ ಇದ್ದು, ಅಂತ್ಯದವರೆಗೂ ಬರುತ್ತದೆ. ಫ್ರಾಕ್‍ನ ಮೇಲಿನ ಭಾಗವನ್ನು ಸೀಕ್ವಿನ್ ಮಾಡಲಾಗಿದೆ ಮತ್ತು ಇದಕ್ಕೆ ಮ್ಯಾಚ್ ಆಗುವಂತಹ ಹ್ಯಾಂಡ್ ಬ್ಯಾಗ್ ನೀಡಲಾಗಿದೆ. ಇದು ಉದ್ದ ಮಿಡಿಯಾಗಿದ್ದು, ಈ ಫ್ರಾಕ್ ಕೈನಲ್ಲಿಯೇ ತೊಳೆಯಬಹುದಾಗಿದೆ.  ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

    ಮೊಣಕಾಲಿನವರೆಗಿನ ಫ್ರಾಕ್
    ಈ ಫ್ರಾಕ್ ಕಾಟನ್ ಬಟ್ಟೆಯಿಂದ ತಯಾರಿಸಲಾಗಿದ್ದು, ಫ್ರಾಕ್ ತುದಿಗಳಲ್ಲಿ, ಸೊಂಟದ ಮೇಲೆ ರಫಲ್ಸ್ ನೀಡಲಾಗಿದೆ. ಈ ಸುಂದರವಾಗಿರುವ ಡ್ರೆಸ್‍ಗೆ ನೆಕ್‍ಬ್ಯಾಂಡ್ ಮತ್ತು ಬೆಲ್ಟ್‍ನಂತಿರುವ ಬ್ಯಾಂಡ್ ಸೊಂಟಕ್ಕೆ ನೀಡಲಾಗಿದೆ. ಇದಕ್ಕೆ ನೀಡಿರುವ ಹ್ಯಾಂಡ್ ಬ್ಯಾಗ್ ಹಸಿರು ಮತ್ತು ಕೆಂಪು ಬಣ್ಣಗಳಿಂದ ಕೂಡಿರುತ್ತದೆ.

    ಫ್ಲವರ್ ಪ್ರಿಂಟ್‍ನ ಮಲ್ಟಿ ಕಲರ್ ಫ್ರಾಕ್ ಮತ್ತು ಹ್ಯಾಂಡ್ ಬ್ಯಾಗ್
    ಹಳದಿ ಮತ್ತು ಗುಲಾಬಿ ಬಣ್ಣದ ಫ್ರಾಕ್ ಇದಾಗಿದ್ದು, ಕಿತ್ತಳೆ ಮತ್ತು ಬಿಳಿ ಬಣ್ಣದ ಫ್ಲವರ್ ಡಿಸೈನ್ ಅನ್ನು ಫ್ರಾಕ್ ಮೇಲೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಕಾಟನ್ ಫ್ರಾಕ್ ಟ್ರೆಡಿಷನಲ್ ಲುಕ್ ನೀಡುತ್ತದೆ. ಇದರ ಹ್ಯಾಂಡ್ ಬ್ಯಾಗ್ ಅನ್ನು ಸಹ ಫ್ರಾಕ್‍ಗೆ ಸೂಟ್ ಆಗುವಂತೆ ಹಳದಿ ಬಣ್ಣದಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಈ ಫ್ರಾಕ್‍ಗೆ ರೌಂಡ್ ನೆಕ್ ಡಿಸೈನ್ ನೀಡಲಾಗಿದ್ದು, ಕೈನಿಂದಲೇ ತೊಳೆಯಬಹುದಾಗಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

  • ಹದಿಹರೆಯದ ಯುವತಿಯರಿಗೆ ವೆರೈಟಿ ಫ್ರಾಕ್ ಡಿಸೈನ್‍ಗಳು

    ಹದಿಹರೆಯದ ಯುವತಿಯರಿಗೆ ವೆರೈಟಿ ಫ್ರಾಕ್ ಡಿಸೈನ್‍ಗಳು

    ಭಾರತೀಯ ಫ್ಯಾಷನ್ ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರೇರಿತಗೊಂಡಿದೆ. ಪ್ರತಿಯೊಬ್ಬ ಹುಡುಗಿಯರು ಜೀವನದಲ್ಲಿ ಒಂದು ಬಾರಿಯಾದರೂ ಫ್ರಾಕ್ ಧರಿಸಬೇಕೆಂಬ ಕನಸ್ಸನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಫ್ರಾಕ್ ಅನ್ನು ಎಲ್ಲಾ ವಯಸ್ಸಿನ ಮಹಿಳೆಯರು ಧರಿಸಬಹುದಾಗಿದ್ದು, ಫ್ರಾಕ್‍ಗಳಲ್ಲಿ ಸಾಕಷ್ಟು ಕಲರ್ ಹಾಗೂ ಡಿಸೈನ್‍ಗಳಿದೆ. ಸಾಮಾನ್ಯವಾಗಿ ಫ್ರಾಕ್ ಅನ್ನು ಗೌವ್ನ್ ಎಂದು ಕೂಡ ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ರಿಸೆಪ್ಷನ್ ವೇಳೆ ವಧು ಸಂಪ್ರದಾಯಿಕ ಲೆಹೆಂಗ ಧರಿಸುತ್ತಿದ್ದರು. ಆದರೆ ಈಗ ಹೆಚ್ಚಾಗಿ ಗೌವ್ನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಾರ್ಟಿಯಲ್ಲಿ ಗೌವ್ನ್ ಧರಿಸಲು ಸಿಂಪಲ್ ಆಗಿದ್ದು, ಗ್ರ್ಯಾಂಡ್ ವರ್ಕಿಂಗ್‍ನಿಂದ ಕೂಡಿರುತ್ತದೆ. ಈ ಫ್ರಾಕ್‍ಗಳ ಬಗ್ಗೆ ನಿಮಗೆ ತಿಳಿದಿರದ ಒಂದಷ್ಟು ಡಿಸೈನ್‍ಗಳ ಕುರಿತಂತೆ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ.

    Frock

    ಟ್ಯೂನಿಕ್ ಫ್ರಾಕ್:
    ಟ್ಯೂನಿಕ್ ಫ್ರಾಕ್ ಹದಿಹರೆಯದ ಯುವತಿಯರಿಗೆ ಹೆಚ್ಚು ಸುಂದರವಾಗಿ ಕಾಣಿಸುತ್ತದೆ ಮತ್ತು ಇದನ್ನು ಹೆಚ್ಚಾಗಿ ಪಾರ್ಟಿಗಳಲ್ಲಿ ಧರಿಸುತ್ತಾರೆ. ವಿಶೇಷವೆಂದರೆ ಈ ಫ್ರಾಕ್ ಅನ್ನು ಸ್ಪಾರ್ಕಿಂಗ್ ಮೆಟಿರಿಯಲ್‍ನಿಂದ ವಿನ್ಯಾಸಗೊಳಿಸಲಾಗಿದ್ದು, ಇದು ಬಹಳ ಬೇಗ ಎಲ್ಲರ ಗಮನ ಸೆಳೆಯುತ್ತದೆ. ಈ ಫ್ರಾಕ್ ಮೊಣಕಾಲುದ್ದ ಇದ್ದು, ಚಿಕ್ಕ ಸ್ಲೀವ್ಸ್ ಹಾಗೂ ರೌಂಡ್ ನೆಕ್ ಡಿಸೈನ್ ಹೊಂದಿದೆ. ಇದು ನಿಮಗೆ ಬೋಲ್ಡ್ ಲುಕ್ ನೀಡುತ್ತದೆ.

     Frock

    ಟ್ಯೂಬ್ ಫ್ರಾಕ್:
    ಟ್ಯೂಬ್ ಫ್ರಾಕ್‍ವೊಂದು ಶೋಲ್ಡರ್ ಲೆಸ್, ಲಾಂಗ್ ಫ್ರಾಕ್ ಆಗಿದೆ. ಇದನ್ನು ಕಾಟನ್ ಬಟ್ಟೆ ತಯಾರಿಸಲಾಗಿದ್ದು, ಇದರ ಮೇಲೆ ಹೂವಿನ ಡಿಸೈನ್‍ಗಳನ್ನು ಮುದ್ರಿಸಲಾಗಿದೆ. ಇದು ಮಹಿಳೆಯರಿಗೆ ಧರಿಸಲು ಬಹಳ ಆರಾಮದಾಯಕವಾಗಿದೆ. ಇದನ್ನು ಎದೆಯ ಭಾಗದತ್ತ ಸರಿಹೊಂದುವಂತೆ ಸ್ಟೀಚ್ ಮಾಡಲಾಗಿರುತ್ತದೆ.

     Frock

     

    ಶ್ಯೆತ್ ಫ್ರಾಕ್:
    ಇದೊಂದು ಮೊಣಕಾಲುದ್ದ ಬರುವ ಸಿಂಪಲ್ ಫ್ರಾಕ್ ಆಗಿದ್ದು, ವಿ ನೆಕ್ ಡಿಸೈನ್ ಹೊಂದಿದೆ. ಸೊಂಟದ ಮೇಲೆ ಬೆಲ್ಟ್ ಮಾದರಿ ವಿನ್ಯಾಸಗೊಳಿಸಲಾಗಿದ್ದು, ತುದಿಯಲ್ಲಿ ರಿಬ್ಬನ್ ಅಥವಾ ಬಿಲ್ಲಿನಿಂದ ಕಟ್ಟಲಾಗಿರುತ್ತದೆ. ಈ ಫ್ರಾಕ್ ಸ್ಲಿಮ್ ಆಗಿರುವಂತಹ ಹುಡುಗಿಯರಿಗೆ ಬಹಳ ಸುಂದರವಾಗಿ ಕಾಣಿಸುತ್ತದೆ. ಅಲ್ಲದೇ ಪೆನ್ಸಿಲ್ ಕಟ್ ಸ್ಯಾಂಡಲ್ ಜೊತೆ ಈ ಫ್ರಾಕ್ ಬಹಳ ಚೆನ್ನಾಗಿ ಮ್ಯಾಚ್ ಆಗುತ್ತದೆ. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

     Frock

    ಪೆನ್ಸಿಲ್ ಫ್ರಾಕ್:
    ಪೆನ್ಸಿಲ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ನೀಲಿ ಬಣ್ಣದ ಫ್ರಾಕ್ ಹದಿಹರೆಯದವರಿಗೆ ಸೂಟ್ ಆಗುತ್ತದೆ. ಸ್ಕೊಯರ್ ನೆಕ್ ಜೊತೆಗೆ ದೇಹಕ್ಕೆ ಫಿಟ್ ಆಗಿ ಕಾಣಿಸುವಂತೆ ಮತ್ತು ಮೊಣಕಾಲುದ್ದ ಬರುವಂತೆ ಈ ಫ್ರಾಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಫ್ರಾಕ್ ಸ್ಲಿಮ್ ಆಗಿರುವವರಿಗೆ ಅಂದವಾಗಿ ಕಾಣಿಸುತ್ತದೆ.

     Frock

    ಟ್ರೆಂಚ್ ಫ್ರಾಂಕ್:
    ದಪ್ಪವಾದ ಕಾಲರ್ ಮತ್ತು ಅರ್ಧ ತೋಳನ್ನು ಹೊಂದಿರುವ ರೆಟ್ರೋ ಶೈಲಿಯ ಫ್ರಾಕ್ ಇದಾಗಿದೆ. ಫ್ರಾಕ್ ಮೊದಲ ಅರ್ಧವನ್ನು ಬಟನ್‍ನಿಂದ ಜೋಡಿಸಲಾಗಿದ್ದು, ಎರಡು ಬದಿಯಲ್ಲಿ ಪಾಕೆಟ್‍ಗಳನ್ನು ಇರಿಸಲಾಗಿದೆ ಮತ್ತು ಸೊಂಟದ ಮಧ್ಯೆ ಬೆಲ್ಟ್ ಮೂಲಕ ಕಟ್ಟಲಾಗಿದೆ. ಇದು ನೋಡಲು ಸ್ಕೂಲ್ ಡ್ರೆಸ್‍ನಂತೆ ಕಾಣಿಸುತ್ತದೆ. ಇದನ್ನೂ ಓದಿ: ಮಂಕಿ ಕ್ಯಾಪ್ ಧರಿಸಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮ ಪರಾರಿ

     Frock