Tag: ಫ್ಯಾಷನ್ ಶೋ

  • ಶ್ರೀರಾಮ ಕಾಲೇಜಿನಲ್ಲಿ ಬುರ್ಕಾ ಧರಿಸಿ ವಿದ್ಯಾರ್ಥಿನಿಯರಿಂದ ರ‍್ಯಾಂಪ್‌ ವಾಕ್ – ಮುಸ್ಲಿಂ ಸಂಘಟನೆ ಕಿಡಿ

    ಶ್ರೀರಾಮ ಕಾಲೇಜಿನಲ್ಲಿ ಬುರ್ಕಾ ಧರಿಸಿ ವಿದ್ಯಾರ್ಥಿನಿಯರಿಂದ ರ‍್ಯಾಂಪ್‌ ವಾಕ್ – ಮುಸ್ಲಿಂ ಸಂಘಟನೆ ಕಿಡಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದ ಕಾಲೇಜಿನಲ್ಲಿ ಬುರ್ಕಾ (Burqa) ಧರಿಸಿ ವಿದ್ಯಾರ್ಥಿನಿಯರು ರ‍್ಯಾಂಪ್‌ ವಾಕ್‌ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರ ವಿರುದ್ಧ ಮುಸ್ಲಿಂ ಸಂಘಟನೆಯೊಂದು ಗರಂ ಆಗಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

    ಕೆಲವು ವಿದ್ಯಾರ್ಥಿನಿಯರು ತಮ್ಮ ಸೃಜನಶೀಲತೆ ಪ್ರದರ್ಶಿಸಲು ಹಾಗೂ ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವ ದೃಷ್ಟಿಯಿಂದ ಕಾಲೇಜಿನಲ್ಲಿ ಬುರ್ಕಾ ಧರಿಸಿ ರ‍್ಯಾಂಪ್‌ ವಾಕ್‌ ಮಾಡಿದ್ದರು. ಆದರೆ ಈ ಬೆಳವಣಿಗೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

    ಬುರ್ಕಾವು “ಪರ್ದಾ” (ಹೊದಿಕೆ) ಬಟ್ಟೆಯಾಗಿದೆ. ಫ್ಯಾಷನ್ ಶೋಗೆ ಬಳಸುವ ವಸ್ತುವಲ್ಲ ಎಂದು ಜಮಿಯತ್ ಉಲಮಾದ ಪ್ರತಿನಿಧಿ ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಪರ ನಿಂತಿದೆ. ದಾರುಲ್ ಉಲೂಮ್‌ನ ಪ್ರತಿನಿಧಿಯಿಂದ ಬೆಂಬಲ ವ್ಯಕ್ತವಾಗಿದೆ. ಫ್ಯಾಷನ್ ಶೋ ಒಂದು ರೀತಿಯ ಪ್ರಾತಿನಿಧ್ಯ ಎಂದು ಕಾಲೇಜು ತಿಳಿಸಿದೆ.

    ಭಾನುವಾರ ಮುಜಾಫರ್‌ನಗರದ ಶ್ರೀರಾಮ ಕಾಲೇಜಿನಲ್ಲಿ ನಡೆದ ಫ್ಯಾಷನ್ ಶೋನ ವಿಡಿಯೋ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಫ್ಯಾಷನ್ ಸ್ಪ್ಲಾಶ್ ಎಂಬ ಮೂರು ದಿನಗಳ ಈವೆಂಟ್‌ನಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಗುಂಪು ಬುರ್ಕಾಗಳನ್ನು ಧರಿಸಿ ರಾಂಪ್‌ನಲ್ಲಿ ನಡೆದರು. ಫ್ಯಾಷನ್ ಡಿಸೈನ್ ಓದುತ್ತಿರುವ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಮಾಜಿ ನಟ ಹಾಗೂ ಕಿರುತೆರೆ ನಟರೊಬ್ಬರು ಉಪಸ್ಥಿತರಿದ್ದರು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ವಿಡಿಯೋ ವೈರಲ್ ಆದ ನಂತರ ಪ್ರತಿಕ್ರಿಯಿಸಿದ ಜಮೀಯತ್ ಉಲಮಾದ ಜಿಲ್ಲಾ ಸಂಚಾಲಕ ಮೌಲಾನಾ ಮುಕರ್ರಂ ಖಾಸ್ಮಿ, ಕಾಲೇಜು ಧರ್ಮವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಕಾಲೇಜಿನವರು ಕ್ಷಮೆಯಾಚಿಸದಿದ್ದರೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ ಎಚ್ಚರಿಸಿದ್ದಾರೆ.

    ಈ ಘಟನೆಯನ್ನು ಖಂಡಿಸುತ್ತೇವೆ. ಬುರ್ಕಾ ಫ್ಯಾಷನ್‌ನ ವಸ್ತುವಲ್ಲ. ಅದನ್ನು ಪರ್ದಾಕ್ಕೆ ಬಳಸಲಾಗುತ್ತದೆ. ಇದು ಮುಸ್ಲಿಂ ಮಹಿಳೆಯರ ಘನತೆ ಮತ್ತು ಗೌರವದ ಸಂಕೇತವಾಗಿದೆ ಎಂದು ಬುರ್ಕಾವನ್ನು ಧರಿಸಲಾಗುತ್ತದೆ. ಇದರಿಂದ ಮಹಿಳೆಯರು ತಪ್ಪು ಉದ್ದೇಶಗಳನ್ನು ಹೊಂದಿರುವ ಪುರುಷರ ನೋಟವನ್ನು ತಪ್ಪಿಸಬಹುದು. ನಿರ್ದಿಷ್ಟ ಧರ್ಮವನ್ನು ಗುರಿಯಾಗಿಟ್ಟುಕೊಂಡು ಇನ್ನೊಬ್ಬರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಕಾಲೇಜು ಅಧಿಕಾರಿಗಳು ಯೋಗ್ಯವಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ – ಸಂಪುಟ ಸಭೆಯಲ್ಲಿ ಮೋದಿ ಮಹತ್ವದ ನಿರ್ಧಾರ

    ಕಾಲೇಜಿನ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಒಂದು ವೇಳೆ ಕೇಳದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳಲು ನಾವು ಹಿಂಜರಿಯುವುದಿಲ್ಲ. ಅವರು ಯಾವುದೇ ಧರ್ಮದ ಅನುಯಾಯಿಗಳಿಗೆ ಮತ್ತೆ ಈ ರೀತಿ ಮಾಡಬಾರದು ಎಂದು ಮೌಲಾನಾ ಹೇಳಿದ್ದಾರೆ.

  • ರ‍್ಯಾಂಪ್‌ವಾಕ್‌ ಮಾಡ್ತಿದ್ದಾಗ ಕಬ್ಬಿಣದ ಪಿಲ್ಲರ್‌ ಬಿದ್ದು 24ರ ಮಾಡೆಲ್‌ ದುರ್ಮರಣ

    ರ‍್ಯಾಂಪ್‌ವಾಕ್‌ ಮಾಡ್ತಿದ್ದಾಗ ಕಬ್ಬಿಣದ ಪಿಲ್ಲರ್‌ ಬಿದ್ದು 24ರ ಮಾಡೆಲ್‌ ದುರ್ಮರಣ

    ಲಕ್ನೋ: ಫ್ಯಾಷನ್‌ ರನ್‌ವೇನಲ್ಲಿ ರ‍್ಯಾಂಪ್‌ವಾಕ್‌ (Ramp Walk) ಮಾಡುತ್ತಿದ್ದ ವೇಳೆ ಕಬ್ಬಿಣದ ಪಿಲ್ಲರ್‌ ಬಿದ್ದು 24 ವರ್ಷದ ಮಾಡೆಲ್‌ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ.

    ಮೃತ ಮಾಡೆಲ್‌ ವಂಶಿಕಾ ಚೋಪ್ರಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್‌ 16ಎ ನಲ್ಲಿರುವ ಫಿಲ್ಮ್‌ ಸಿಟಿಯ (Noida Film City) ಲಕ್ಷ್ಮೀ ಸ್ಟುಡಿಯೋನಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ – ಗ್ರಾಪಂ ಸದಸ್ಯ ಸ್ಥಳದಲ್ಲೇ ಸಾವು

    ಲೈಟಿಂಗ್‌ ವ್ಯವಸ್ಥೆಗಾಗಿ ಕಬ್ಬಿಣದ ಪಿಲ್ಲರ್‌ ನಿರ್ಮಿಸಲಾಗಿತ್ತು. ಅದು ವೇದಿಕೆ ಮೇಲೆ ಬಿದ್ದು ಮಾಡೆಲ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಾಬಿ ರಾಜ್‌ ಎಂಬ ವ್ಯಕ್ತಿ ಸಹ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಷನ್ ಶೋ (Fashion Show) ಆಯೋಜಕರು ಮತ್ತು ಲೈಟಿಂಗ್ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡದಂತೆ ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆಗೆ ಯತ್ನಿಸಿದ ಪುಂಡ

    ವಂಶಿಕಾ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿರುವ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ, ಫ್ಯಾಷನ್ ಶೋಗೆ ಅನುಮತಿ ನೀಡಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.

  • ದುಬಾರಿ ಚಿನ್ನದುಡೆಗೆಯಲ್ಲಿ ಗಮನ ಸೆಳೆದ ನಟಿ ಕಾರಾ ಡಿಲಿವಿಂಗೆ : ಬೆಲೆ ಗಾಬರಿ ಮೂಡಿಸುತ್ತೆ

    ದುಬಾರಿ ಚಿನ್ನದುಡೆಗೆಯಲ್ಲಿ ಗಮನ ಸೆಳೆದ ನಟಿ ಕಾರಾ ಡಿಲಿವಿಂಗೆ : ಬೆಲೆ ಗಾಬರಿ ಮೂಡಿಸುತ್ತೆ

    ಜಗತ್ತಿನ ಅತೀ ದೊಡ್ಡ ಶ್ರೀಮಂತರು ಮತ್ತು ಖ್ಯಾತ ಮಾಡೆಲ್ ಗಳು ಪಾಲ್ಗೊಳ್ಳುವ ಜಗತ್ತಿನ ಏಕೈಕ ಶ್ರೀಮಂತ ಫ್ಯಾಷನ್ ಶೋಗಳಲ್ಲಿ ಮೆಟ್ ಗಾಲಾ ಕೂಡ ಒಂದು. ಬಹುತೇಕವಾಗಿ ಇಲ್ಲಿ ಶ್ರೀಮಂತ ಉದ್ಯಮಿಗಳೂ ಮತ್ತು ಹೆಸರಾಂತ ಮಾಡೆಲ್ ಗಳು ಈ ಶೋನಲ್ಲಿ ಭಾಗಿಯಾಗುತ್ತಾರೆ. ಅದೊಂದು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಇಂಥದ್ದೊಂದು ಶೋ ಈ ಬಾರಿ ಅಮೆರಿಕಾದ ನ್ಯೂಯಾರ್ಕನಲ್ಲಿ ನಡೆದಿದ್ದು, ನಟಿ ಕಾರಾ ಡಿಲಿವಿಂಗೆ ಸೇರಿದಂತೆ ಜಗತ್ತಿನ ಹೆಸರಾಂತ ರೂಪದರ್ಶಿಗಳು ಈ ಶೋನಲ್ಲಿ ಭಾಗಿಯಾಗಿದ್ದರು. ಒಬ್ಬರಿಗಿಂತ ಒಬ್ಬರು ಗಮನ ಸೆಳೆಯುವಂತಹ ಕಾಸ್ಟ್ಯೂಮ್ ಧರಿಸಿದ್ದರು. ಅದರಲ್ಲೂ ಸೂಪರ್ ಮಾಡೆಲ್ ಮತ್ತು ನಟಿ ಕಾರಾ ಡಿಲಿವಿಂಗ್ ಈ ಶೋನಲ್ಲಿ ಚಿನ್ನದುಡೆಗೆ ತೊಟ್ಟು ಗಮನ ಸೆಳೆದಿದ್ದಾರೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಕೆಂಪು ಪ್ಯಾಂಟ್ ಮೇಲೆ ಚಿನ್ನದುಡೆಗೆ ತೊಟ್ಟಿದ್ದ ಕಾರಾ ಡಿಲಿವಿಂಗ್ ಅತ್ಯಂತ ದುಬಾರಿ ಕಾಸ್ಟ್ಯೂಮ್ ತೊಡುವ ಮೂಲಕ ನೆರೆದಿದ್ದವರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದರು. 29ರ ವಯಸ್ಸಿನ ಈ ರೂಪದರ್ಶಿಯು ಈ ಬಾರಿ ಫ್ಯಾಷನ್ ಶೋನ ಕೇಂದ್ರಬಿಂದು ಕೂಡ ಆಗಿದ್ದರು. ಕಾರಾ ಡಿಲಿವಿಂಗ್ ತೊಟ್ಟ ಆ ಉಡುಗೆಯು ಕೋಟಿ ಮೊತ್ತದ್ದಾಗಿತ್ತು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ಕೆಂಪು ಪ್ಯಾಂಟ್ ಮತ್ತು ಚಿನ್ನದ ಟಾಪ್ ಫ್ಯಾಷನ್ ಲೋಕದ ಅಪರೂಪದ ಕಾಸ್ಟ್ಯೂಮ್ ಎನ್ನಲಾಗುತ್ತಿದ್ದು, ಅದನ್ನು ವಿಶೇಷವಾಗಿ ಡಿಸೈನ್ ಮಾಡಿದ್ದರಿಂದ ಕಾರಾ ಅವರ ಅಂದವನ್ನು ಅದು ಮತ್ತಷ್ಟು ಹೆಚ್ಚಿಸಿತ್ತು ಎಂದು ಫ್ಯಾಷಲ್ ಲೋಕದ ದಿಗ್ಗಜರು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾಸ್ಟ್ಯೂಮ್ ಕೇವಲ ಅಂದವನ್ನು ಮಾತ್ರ ಹೆಚ್ಚಿಸಿಲ್ಲ, ಆತ್ಮವಿಶ್ವಾಸವನ್ನೂ ಹೆಚ್ಚಿಸಿರುವುದಾಗಿ ವರದಿಯಾಗಿದೆ.

  • ಎಸ್‌ವಿ ಫಿದಾ ಕರ್ನಾಟಕ ಐಕಾನ್- ಧೀರಜ್, ಭಾವನಾ, ನಮ್ರತಾಗೆ ಪ್ರಥಮ ಸ್ಥಾನ

    ಎಸ್‌ವಿ ಫಿದಾ ಕರ್ನಾಟಕ ಐಕಾನ್- ಧೀರಜ್, ಭಾವನಾ, ನಮ್ರತಾಗೆ ಪ್ರಥಮ ಸ್ಥಾನ

    ಬೆಂಗಳೂರು: ಎಸ್‌ವಿ ಫಿದಾ ಕರ್ನಾಟಕ ಐಕಾನ್-2021 ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಕರ್ನಾಟಕ ಆಗಿ ಧೀರಜ್ ಎಸ್.ಗೌಡ, ಮಿಸ್ ಕರ್ನಾಟಕ ಆಗಿ ಭಾವನಾ ಭಾಗವತ್, ಮಿಸಸ್ ಕರ್ನಾಟಕ ಆಗಿ ನಮ್ರತಾ ಎ. ಪ್ರಥಮ ಸ್ಥಾನ ಪಡೆದಿದ್ದಾರೆ.

    ನಗರದಲ್ಲಿ ನಡೆದ ರಾಜ್ಯ ಮಟ್ಟದ ಎಸ್‌ವಿ ಫಿದಾ ಕರ್ನಾಟಕ ಐಕಾನ್-2021 ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಕರ್ನಾಟಕ ಆಗಿ ಧೀರಜ್ ಎಸ್. ಗೌಡ, ಮಿಸ್ ಕರ್ನಾಟಕ ಆಗಿ ಭಾವನಾ ಭಾಗವತ್, ಮಿಸ್ ಕರ್ನಾಟಕ ಆಗಿ ನಮ್ರತಾ ಎ.ಪ್ರಥಮ ಸ್ಥಾನ ಗಳಿಸುವ ಮೂಲಕ ಮಿಂಚಿದ್ದಾರೆ.

    ಕಲರ್‍ಫುಲ್ ಆಗಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ರಾಜ್ಯದ 1000ಕ್ಕೂ ಹೆಚ್ಚು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 2019ರ ಮಿಸ್ ಯೂನಿವರ್ಸ್ ಚಾರ್ಮ್ ಸುಧಾ ಎಂ. ಈ ಕಾರ್ಯಕ್ರಮ ಆಯೋಜಿಸಿದ್ದರು.

  • ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರಾಬಟ್: ಮೊರಕ್ಕೋದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬೆಕ್ಕೊಂದು ವಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

    ಮರಾಕೇಶ್‍ನಲ್ಲಿ ನಡೆದ ಕ್ರಿಶ್ಚಿಯನ್ ಡಿಯರ್ ಫ್ಯಾಷನ್ ಶೋ ನಡೆಯುವ ವೇಳೆ ಅಲ್ಲಿ ಬೆಕ್ಕೊಂದು ಮಾಡೆಲ್‍ಗಳ ಕ್ಯಾಟ್ ವಾಕ್ ವಿರುದ್ಧವಾಗಿ ನಡೆದುಕೊಂಡು ಹೋಗಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

    ಶೋಗೆ ಬಂದಿದ್ದ ಪ್ರೇಕ್ಷಕರ ಜೋರಾಗಿ ಕಿರುಚುವ ಶಬ್ದದ ನಡುವೆಯು ಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ನಡೆದುಕೊಂಡು ಮುಂದೆ ಪ್ರೇಕ್ಷಕರ ಗುಂಪಿನೊಳಗೆ ಹೋಗಿ ಮೂತ್ರವಿಸರ್ಜನೆ ಮಾಡಿ ಅಲ್ಲಿಂದ ಜನರೊಳಗೆ ಕಣ್ಮರೆಯಾಗಿದೆ.

    ಫ್ಯಾಷನ್ ಶೋಗಳಲ್ಲಿ ಪ್ರಾಣಿಗಳು ಕಾಣಿಸಿಕೊಂಡಿರುವುದು ಇದೇ ಮೊದಲೆನಲ್ಲ. ಜನವರಿ ತಿಂಗಳಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ನಟ ಸಿದ್ಧರ್ಥ್ ಮೊಲ್ಹೋತ್ರಾ ಪಾಲ್ಗೊಂಡಿದ್ದ ಫ್ಯಾಶನ್ ಶೋದಲ್ಲಿ ನಾಯಿಯೊಂದು ಭಾಗವಹಿಸಿತ್ತು.

  • ಮಾಡಲ್‍ಗಳಂತೆ ರ್‍ಯಾಂಪ್‌ವಾಕ್‌ ಮಾಡಿದ ಮಕ್ಕಳು

    ಮಾಡಲ್‍ಗಳಂತೆ ರ್‍ಯಾಂಪ್‌ವಾಕ್‌ ಮಾಡಿದ ಮಕ್ಕಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೀಕ್ ಎಂಡ್ ಬಂತು ಅಂದರೆ ಮೋಜು ಮಸ್ತಿಗೇನು ಕೊರತೆಯಿರಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇತಂಹದೊಂದು ಮಸ್ತ್ ಫ್ಯಾಷನ್ ಶೋಗೆ ಬೆಂಗಳೂರು ಇವತ್ತು ಸಾಕ್ಷಯಾಗಿದೆ.

    ಈ ಫ್ಯಾಷನ್ ಶೋ ಮಕ್ಕಳದ್ದು ಎನ್ನುವುದೇ ಮತ್ತೊಂದು ವಿಶೇಷ. ಜಗ-ಮಗ ಅಂತಾ ಮಿಂಚ್ತಿರುವ ಬೆಳಕಿನಲ್ಲಿ ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತಾ, ರಾಕಿಂಗ್ ಮ್ಯೂಸಿಕ್‍ಗೆ ಸೊಂಟ ಬಳುಕಿಸುತ್ತಾ, ಮಕ್ಕಳು ಕ್ಯಾಟ್ ವಾಕ್ ಮಾಡಿದ್ದಾರೆ. ನಾವೇನ್ ಯಾವ ಮಾಡಲ್‍ಗೂ ಕಮ್ಮಿಯಿಲ್ಲ ಅಂತಾ ತೋರಿಸಿದ್ದಾರೆ.

    ನಗರದ ಭಾರತೀಯ ಸಿಟಿಯಲ್ಲಿ ಕಿಡ್ಸ್ ಅಂಡ್ ಟಿನ್ಸ್ ಫ್ಯಾಷನ್ ಜೆವಿಎಫ್ ಸಂಸ್ಥೆಯವರು ಈ ಕಾರ್ಯಕ್ರಮ ಆಯೋಜಿಸಿದ್ದರು. ಇದರಲ್ಲಿ ಮಕ್ಕಳಷ್ಟೇ ಅಲ್ಲದೆ ತರುಣ-ತರುಣೀಯರು ಸಹ ರ್ಯಾಂಪ್ ವಾಕ್ ಮಾಡಿದರು. ಮನಮೋಹಕ ಫ್ಯಾಷನ್ ಶೋನಲ್ಲಿ ಮಕ್ಕಳು ಸಾಂಪ್ರದಾಯಿಕ ಸೇರಿದಂತೆ ವಿವಿಧ ಬಗೆಯ ಉಡುಪು ಧರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

    ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾರಾಂತ್ಯ ಬಂದರೇ ಸಾಕು ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ನೋಡುಗರನ್ನು ರಂಜಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ.

    ಈ ಬಾರಿಯ ವೀಕೆಂಡ್‍ನಲ್ಲಿ ನಗರದ ಪ್ರತಿಷ್ಠಿತ ಹೊಟೇಲೊಂದರಲ್ಲಿ ಆಯೋಜಿಸಿದ್ದ ಮಿಸ್ಟರ್ ಆ್ಯಂಡ್ ಮಿಸೆಸ್ ಐಕಾನ್ ಇಂಡಿಯಾ ಫ್ಯಾಷನ್ ಶೋ ಎಲ್ಲರ ಗಮನ ಸೆಳೆಯಿತು.

    ಜಗಮಗಿಸುವ ಲೈಟ್‍ಗಳ ನಡುವೆ ಮಾದಕ ಕಣ್ಣೋಟದ ಸುಂದರಿಯರು ರಾಕಿಂಗ್ ಮ್ಯೂಸಿಕ್ ಗೆ ಕ್ಯಾಟ್ ವಾಕ್ ಮಾಡುವ ಮೂಲಕ ಎಲ್ಲರನ್ನೂ ಒಂದು ಕ್ಷಣ ಮಾಯಾ ಪ್ರಪಂಚಕ್ಕೆ ಕರೆದುಕೊಂಡು ಹೋದರು. ಇಂಥದೊಂದು ಮನಮೋಹಕ ಫ್ಯಾಶನ್ ಶೋ ಅನಾವರಣಗೊಂಡಿದ್ದು ಬೆಂಗಳೂರಿನ `ದಿ ಕ್ಯಾಪಿಟಲ್ ಹೋಟೆಲ್’ ನಲ್ಲಿ.

    ಖಾಸಗಿ ಸಂಸ್ಥೆಯೊಂದು ಆಯೋಜನೆ ಮಾಡಿದ್ದ ಫ್ಯಾಷನ್ ಶೋವನ್ನು ಖ್ಯಾತ ನೃತ್ಯ ನಿರ್ದೇಶಕ ಡ್ಯಾನಿ ಹಾಗೂ ಸಟಿ ಸನಿಹಾ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ಮಾಡಿದರು. ಇನ್ನು ಈ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕೇರಳ ಮೂಲದ ನೂರಕ್ಕೂ ಹೆಚ್ಚು ಮಾಡೆಲ್ ಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ರ್ಯಾಪ್ ವಾಕ್ ಮಾಡುವ ಮೂಲಕ ಪ್ರದರ್ಶಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರನ್ನು ಹುರಿದುಂಬಿಸುವ ಸಲುವಾಗಿ ಬೆಲ್ಲಿ ಡ್ಯಾನ್ಸ್ ಏರ್ಪಡಿಸಲಾಗಿದ್ದು ಮತ್ತೊಂದು ವಿಶೇಷ. ಬೆಲ್ಲಿ ಡ್ಯಾನ್ಸ್ ಕಂಡ ಫ್ಯಾಷನ್ ಪ್ರಿಯರು ಮಾಗಿ ಚಳಿಯಲ್ಲೂ ಮೈ ಬಿಸಿಯಾದಂತೆ ಭಾಸವಾದ್ರು. ಇಷ್ಟೇ ಅಲ್ಲದೇ ಕೋರಿಯೊಗ್ರಾಫರ್ ಡ್ಯಾನಿ ಮಾಡಲ್ ಗಳ ಜೊತೆ ಹಿಂದಿ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ಮನಸೂರೆಗೊಳಿಸಿದರು. ಒಟ್ಟಿನಲ್ಲಿ ವೀಕೆಂಡ್ ಮಸ್ತಿಯಲ್ಲಿದ್ದ ಬೆಂಗಳೂರಿನ ಜನರಿಗೆ ಕಲರ್ ಫುಲ್ ರ್ಯಾಪ್ ವಾಕ್ ವಿಶೇಷ ಮನರಂಜನೆಯನ್ನು ನೀಡಿತು.