Tag: ಫ್ಯಾಷನ್ ಡಿಸೈನರ್

  • ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೆ ಒಳಗಾದ `ಬಿಗ್ ಬಾಸ್’ ಖ್ಯಾತಿಯ ರೋಹಿತ್ ವರ್ಮಾ

    ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೆ ಒಳಗಾದ `ಬಿಗ್ ಬಾಸ್’ ಖ್ಯಾತಿಯ ರೋಹಿತ್ ವರ್ಮಾ

    ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಿಗೆ ಫ್ಯಾಷನ್ ಡಿಸೈನಿಂಗ್ ಮೂಲಕ ಗುರುತಿಸಿಕೊಂಡಿರುವ `ಬಿಗ್ ಬಾಸ್’ ಖ್ಯಾತಿಯ ರೋಹಿತ್ ವರ್ಮಾ (Rohit Verma) ತಮ್ಮ ಬಾಲ್ಯದ ಕರಾಳ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ತನ್ನ ಚಿಕ್ಕಪ್ಪನಿಂದಲೇ ತಮ್ಮ 8ನೇ ವಯಸ್ಸಿಗೆ ಅತ್ಯಾಚಾರಕ್ಕೆ ಒಳಗಾಗಿದ್ದ ವಿಚಾರವನ್ನ ಬಹಿರಂಗಪಡಿಸಿದ್ದಾರೆ.

     

    View this post on Instagram

     

    A post shared by Rohit K Verma (@rohitkverma)

    `ಬಿಗ್ ಬಾಸ್’ (Bigg Boss) ಖ್ಯಾತಿಯ ರೋಹಿತ್ ವರ್ಮಾ ಇದೀಗ ತಮ್ಮ ಖಾಸಗಿ ವಿಚಾರದ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ಬಗ್ಗೆ ಮತ್ತ ತಮ್ಮ ಮೇಲೆ ನಡೆದಿರುವ ಲೈಂಗಿಕ ಕಿರುಕುಳದ ಬಗ್ಗೆ ಮುಕ್ತವಾಗಿ ಚಾಟ್ ಶೋವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ತಮ್ಮ ಮನೆಗೆ ಚಿಕ್ಕಪ್ಪ ಭೇಟಿ ನೀಡುತ್ತಿದ್ದರು. ಬಾಲ್ಯದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದರು. ಈ ವಿಚಾರವನ್ನ ತನ್ನ ತಾಯಿಯ ಬಳಿ ಹೇಳಿಕೊಳ್ಳಲು ಗಾಬರಿಗೊಂಡಿದ್ದೆ, ಮತ್ತು ಈ ಕೃತ್ಯ ಮೂರು ನಾಲ್ಕು ವರ್ಷಗಳವೆರೆಗೆ ಮುಂದುವರೆದಿತ್ತು. ಆಗ ಚಿಕ್ಕಪ್ಪ ನನಗೆ ಸೀರೆ ಹೊದಿಸಿ, ಬಿಸಿ ಮೇಣವನ್ನು ಸುರಿದು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ತಮಗಾದ ಸಂಕಷ್ಟವನ್ನ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ನಾನು ಅಧ್ಯಯನದಲ್ಲಿ ಉತ್ತಮವಾಗಿಲ್ಲದ ಕಾರಣ, ನಾನು ಮನೆಯಲ್ಲಿ ಸಾಕಷ್ಟು ಹಿಂಸೆಗೆ ಒಳಗಾಗಿದ್ದೇನೆ. ಆಗ ನನಗೆ ಲೈಂಗಿಕತೆ ಬಗ್ಗೆ ತಿಳಿದಿರಲಿಲ್ಲ ಮತ್ತು ನನ್ನನ್ನು ನಾನು ಏಕೆ ಮಹಿಳೆ ಎಂದು ಭಾವಿಸುತ್ತೇನೆ ಎಂಬುದು ನನಗೆ ಅರ್ಥವಾಗಿದೆ. ಬಹುಶಃ ಬಾಲ್ಯದಲ್ಲಿ ನನ್ನ ಮೇಲೆ ನಡೆದಿರುವ ಅತ್ಯಾಚಾರ ಎಂದು ಭಾವಿಸುತ್ತೇನೆ ಎಂದು ಬಾಲ್ಯದಲ್ಲಿ ತನ್ನ ಕರಾಳ ಕಥೆಯನ್ನ ರೋಹಿತ್ (Rohit Verma) ಹಂಚಿಕೊAಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಹೇಳಿದ್ದು ಹೀಗೆ.?

    ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಹೇಳಿದ್ದು ಹೀಗೆ.?

    ಬಾಲಿವುಡ್‌ನಲ್ಲಿ ವಿಚಿತ್ರ ಉಡುಪಿನ ಮೂಲಕ ಗಮನ ಸೆಳೆದಿರುವ ನಟಿ ಉರ್ಫಿ ಜಾವೇದ್ ಬಟ್ಟೆಯ ಆಯ್ಕೆಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಫ್ಯಾಷನ್ ಡಿಸೈನರ್ ಆಗಿ ಬಿಟೌನ್‌ನಲ್ಲಿ ಗುರುತಿಸಿಕೊಂಡಿರುವ ಮಸಾಬ ಗುಪ್ತಾ ಸದ್ಯ ವೆಬ್ ಸಿರೀಸ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. `ಮಸಾಬ ಮಸಾಬ ಸಿರೀಸ್ 2’ಗೆ ಭರ್ಜರಿ ಪ್ರಚಾರ ನೀಡ್ತಿದ್ದಾರೆ ನಟಿ ಮಸಾಬ ಗುಪ್ತಾ. ಈ ಕುರಿತು ಸಂಬಂಧಿಸಿದ ಸಂದರ್ಶನವೊಂದರಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿರುವ ಮಸಾಬ ಉರ್ಫಿ ಡ್ರೆಸ್ ಸೆನ್ಸ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ನಿಜಕ್ಕೂ ಫ್ಯಾಷನ್ ಕುರಿತು ನಾನು ಕೂಡ ಉರ್ಫಿ ಅವರಿಂದ ಕಲಿಯುವುದು ಸಾಕಷ್ಟಿದೆ. ಉರ್ಫಿ ಅವರ ಫ್ಯಾಷನ್ ಕುರಿತು ಬಹಳಷ್ಟು ತಿಳಿದುಕೊಂಡಿದ್ದಾರೆ. ಯಾವುದೇ ಡಿಸೈನರ್, ಬ್ರ್ಯಾಂಡ್‌ಗಿಂತ ಹೆಚ್ಚಾಗಿ ಉರ್ಫಿ ಕೆಲಸ ಮಾಡ್ತಿದ್ದಾರೆ. ನಿಜಕ್ಕೂ ಉರ್ಫಿ ಅವರ ಶ್ರಮ ಬಹಳಷ್ಟಿದೆ. ಉರ್ಫಿ ಬಟ್ಟೆಯ ಆಯ್ಕೆಗೆ ನಾನು 10/10 ರೇಟ್ ಮಾಡುತ್ತೇನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತೆಲಂಗಾಣದ ಸೆಲೆಬ್ರಿಟಿ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾನಾಸ್ಪದ ಸಾವು

    ತೆಲಂಗಾಣದ ಸೆಲೆಬ್ರಿಟಿ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾನಾಸ್ಪದ ಸಾವು

    ಖ್ಯಾತ ಸೆಲೆಬ್ರಿಟಿ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಿಂದಿ ಮತ್ತು ಟಾಲಿವುಡ್ ಸಾಕಷ್ಟು ಸೆಲೆಬ್ರಿಟಿಗಳಿಗೆ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಪ್ರತ್ಯೂಷಾ ಗರಿಮೆಲ್ಲಾ ಸಾವನ್ನಪ್ಪಿದ್ದಾರೆ. ಬಂಜಾರಾ ಹಿಲ್ಸ್‌ನಲ್ಲಿ ತಮ್ಮ ನಿವಾಸದಲ್ಲಿ ಶನಿವಾರ (ಜೂ.11) ಶವ ಪತ್ತೆಯಾಗಿದೆ. ತಮ್ಮ ನಿವಾಸದಲ್ಲಿ ಹಬೆಯೊಂದಿಗೆ ಕಾರ್ಬನ್ ಮಾನಾಕ್ಸೈಡ್ ಸೇವಿಸಿದ್ದಾರೆ. ಇದು ಅವರ ಸಾವಿಗೆ ಕಾರಣವಾಯಿತು. ಆಕೆಯ ಮಲಗುವ ಕೋಣೆಯಲ್ಲಿದ್ದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನುಮಾನಾಸ್ಪದ ಸಾವಿನ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಶ್ರೀಯಾ ಶರಣ್, ಕಾಜಲ್ ಅಗರ್‌ವಾಲ್, ರಾಕುಲ್, ಕೃತಿ ಶೆಟ್ಟಿ, ಸಾನಿಯಾ ಮಿರ್ಜಾ, ರಾಣಾ ದಗ್ಗುಭಾಟಿ ಹೀಗೆ ಸಾಕಷ್ಟು ಸಿನಿಮಾ ತಾರೆಯರಿಗೆ ಡಿಸೈನರ್ ಆಗಿ ಕೆಲಸ ಮಾಡಿದ್ದ ಪ್ರತ್ಯೂಷಾ ಸಾವಿಗೆ ಇದೀಗ ಚಿತ್ರರಂಗದವರು, ಆಪ್ತರು ಮತ್ತು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.‌

  • ಒಂಟಿ ಜೀವನಕ್ಕೆ ಜೆಕೆ ಗುಡ್ ಬೈ : ಇವರೇ ಜೆಕೆ ಮದುವೆ ಆಗುತ್ತಿರುವ ಹುಡುಗಿ

    ಒಂಟಿ ಜೀವನಕ್ಕೆ ಜೆಕೆ ಗುಡ್ ಬೈ : ಇವರೇ ಜೆಕೆ ಮದುವೆ ಆಗುತ್ತಿರುವ ಹುಡುಗಿ

    ಸ್ಯಾಂಡಲ್ ವುಡ್ ನಲ್ಲಿ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ‘ಅಶ್ವಿನಿ ನಕ್ಷತ್ರ’ದಲ್ಲಿ ‘ಹೆಂಡ್ತಿ..’ ಡೈಲಾಗ್ ಮೂಲಕವೇ ಇವರು ಫೇಮಸ್ ಆಗಿದ್ದರು. ಈಗ ಹೆಂಡತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಪ್ತಪದಿ ತುಳಿಯುತ್ತಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಜೆಕೆ ಅಭಿಮಾನಿಗಳು ಅವರನ್ನು ಕೇಳುತ್ತಿದ್ದ ಪ್ರಶ್ನೆ ಎಂದರೆ, ‘ಯಾವಾಗ ಮದುವೆ ಆಗುತ್ತೀರಿ?’ ಎಂದು. ಈ ಪ್ರಶ್ನೆಗೆ ಜೆಕೆ ಫ್ಯಾಷನ್ ಡಿಸೈನರ್ ಚೆಲುವೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತರಿಸಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುವ ಮೂಲಕ ಭಾವಿ ಪತ್ನಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಅಂದಹಾಗೆ ಜೆಕೆ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಅರ್ಪಣ. ವೃತ್ತಿಯಲ್ಲಿ ನುರಿತ ಫ್ಯಾಷನ್ ಡಿಸೈನರ್. ಫ್ಯಾಷನ್ ಲೋಕಕ್ಕೆ ಈಗಾಗಲೇ ಚಿರಪರಿಚಿತ ಆಗಿರುವ ಅಪರ್ಣ, ಸಾಕಷ್ಟು ಮಾಡೆಲ್ ಗಳಿಗೆ ಹೊಸ ರೀತಿಯ ಫ್ಯಾಷನ್ ಡಿಸೈನ್ ಮಾಡಿದ್ದಾರೆ. ಅಲ್ಲದೇ, ಸಿಲೆಬ್ರಿಟಿಗಳ ನೆಚ್ಚಿನ ಡಿಸೈನರ್ ಕೂಡ ಇವರಾಗಿದ್ದಾರೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ತಾವು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಪರ್ಣ ಸಮಂತ್, ತಮ್ಮಿಬ್ಬರ ಫೋಟೋ ಜೊತೆಗೆ ಲೈಫ್ ಲೈನ್ ಎಂದು ಬರೆದುಕೊಂಡು, ಮದುವೆ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

  • ತಮ್ಮ ನಿವಾಸದ ಬಾತ್‍ರೂಮಿನಲ್ಲೇ ಖ್ಯಾತ ಫ್ಯಾಷನ್ ಡಿಸೈನರ್ ಮೃತದೇಹ ಪತ್ತೆ

    ತಮ್ಮ ನಿವಾಸದ ಬಾತ್‍ರೂಮಿನಲ್ಲೇ ಖ್ಯಾತ ಫ್ಯಾಷನ್ ಡಿಸೈನರ್ ಮೃತದೇಹ ಪತ್ತೆ

    – ವಿಶೇಷವಾಗಿ ಪುರುಷರ ಉಡುಪನ್ನು ತಯಾರಿಸುತ್ತಿದ್ರು

    ಕೋಲ್ಕತ್ತಾ: ಖ್ಯಾತ ಫ್ಯಾಷನ್ ಡಿಸೈನರ್ ಶರ್ಬಾರಿ ದತ್ತಾ (63) ಮೃತದೇಹ ಅವರ ಮನೆಯಲ್ಲಿನ ಬಾತ್‍ರೂಮಿನಲ್ಲಿಯೇ ಪತ್ತೆಯಾಗಿದೆ.

    ಕೋಲ್ಕತ್ತಾದ ಬೋರ್ಡ್ ಸ್ಟ್ರೀಟ್‍ನಲ್ಲಿರುವ ನಿವಾಸದ ಬಾತ್‍ರೂಮಿನಲ್ಲಿ ಶರ್ಬಾರಿ ದತ್ತಾ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12.25ಕ್ಕೆ ಪತ್ತೆಯಾಗಿದ್ದು, ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಮರಣೋತ್ತರ ವರದಿಯ ನಂತರವೇ ಶರ್ಬಾರಿ ದತ್ತಾ ಸಾವಿಗೆ ನಿಖರ ಕಾರಣ ತಿಳಿದು ಬರುತ್ತದೆ.

    ಈ ಬಗ್ಗೆ ಮಾಹಿತಿ ಪಡೆದ ನಂತರ ಕೋಲ್ಕತಾ ಪೊಲೀಸರು ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ. ಶರ್ಬಾರಿ ದತ್ತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಯಾವುದೇ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ ಎಂದು ಶರ್ಬಾರಿ ದತ್ತಾ ಕುಟುಂಬ ಸದಸ್ಯರು ತಿಳಿಸಿದ್ದಾರೆ.

    ಶರ್ಬಾರಿ ದತ್ತಾ ಬಂಗಾಳಿ ಕವಿ ಅಜಿತ್ ದತ್ತಾ ಅವರ ಪುತ್ರಿಯಾಗಿದ್ದು, ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದಿದ್ದರು. ನಂತರ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶರ್ಬಾರಿ ದತ್ತಾ ವಿದ್ಯಾರ್ಥಿಯಾಗಿದ್ದಾಗ ಅನೇಕ ನೃತ್ಯ, ನಾಟಕಗಳಲ್ಲಿ ಭಾಗವಹಿಸಿದ್ದರು. ಬಳಿಕ ದತ್ತಾ ಫ್ಯಾಷನ್ ಉದ್ಯಮದಲ್ಲಿ ಅದರಲ್ಲೂ ವಿಶೇಷವಾಗಿ ಪುರುಷರ ಉಡುಪುಗಳ ತಯಾರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು.

    ದತ್ತಾ ಅವರು ಬಣ್ಣ ಬಣ್ಣದ ಬಂಗಾಳಿ ಧೋತಿಗಳು ಮತ್ತು ಡಿಸೈನರ್ ಪಂಜಾಬಿ ಕುರ್ತಾಗಳನ್ನು ಕಸೂತಿಯೊಂದಿಗೆ ತಯಾರಿಸುತ್ತಿದ್ದರು. ಇವರು ತಯಾರಿಸಿದ್ದ ಉಡುಪನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನೂ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಧರಿಸಿದ್ದರು.

    ಶರ್ಬಾರಿ ದತ್ತಾ ನಿಧನದ ನಂತರ ಸೋಶಿಯಲ್ ಮೀಡಿಯಾದಲ್ಲಿ ಗಾಯಕರು, ನಟ-ನಟಿಯರು, ನಿರ್ದೇಶಕರು ಮತ್ತು ಅಭಿಮಾನಿಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

  • ನನ್ನೊಂದಿಗೆ ಮಲಗಲು ನಿರಾಕರಿಸಿದ್ರೆ ಫೋಟೋ ವೈರಲ್ – ಫ್ಯಾಷನ್ ಡಿಸೈನರ್‌ಗೆ ಕಿರುಕುಳ

    ನನ್ನೊಂದಿಗೆ ಮಲಗಲು ನಿರಾಕರಿಸಿದ್ರೆ ಫೋಟೋ ವೈರಲ್ – ಫ್ಯಾಷನ್ ಡಿಸೈನರ್‌ಗೆ ಕಿರುಕುಳ

    – ವಿಡಿಯೋ ಕಾಲ್ ಮಾಡಿದ್ದೇ ತಪ್ಪಾಯ್ತು

    ಮುಂಬೈ: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 42 ವರ್ಷದ ಫ್ಯಾಷನ್ ಡಿಸೈನರ್‌ಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಆರೋಪಿಯನ್ನು ಕೇರಳ ಮೂಲದ ರಾಹುಲ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಆರೋಪಿ ಸಿನಿಮಾಕ್ಕಾಗಿ ಸ್ಕ್ರೀನ್ ಟೆಸ್ಟ್ ಸಮಯದಲ್ಲಿ ನನ್ನ ಫೋಟೋಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ಅಶ್ಲೀಲ ಚಿತ್ರಗಳಾಗಿ ಮಾರ್ಫ್ ಮಾಡಿದ್ದಾನೆ. ಬಳಿಕ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಬೇಕು, ಇಲ್ಲವಾದರೆ ಮಾರ್ಫ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಏನಿದು ಪ್ರಕರಣ?
    ಶ್ರೀವಾಸ್ತವ ಮತ್ತು ಫ್ಯಾಷನ್ ಡಿಸೈನರ್ ಇಬ್ಬರಿಗೂ ವಾಟ್ಸಪ್ ಗ್ರೂಪಿನ ಮೂಲಕ ಪರಿಚಯವಾಗಿದೆ. ನಂತರ ಶ್ರೀವಾಸ್ತವ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಸಂತ್ರಸ್ತೆಗೆ ಹೇಳಿದ್ದಾನೆ. ಅಲ್ಲದೇ ಆ ಸಿನಿಮಾವನ್ನು ತಾನೇ ನಿರ್ದೇಶಿಸುತ್ತಿದ್ದೇನೆಂದು ಹೇಳಿಕೊಂಡಿದ್ದನು. ಬಳಿಕ ನಗರದ ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಸಮೀರ್ ಎಂಬತಾನ ಜೊತೆ ಚರ್ಚೆ ಮಾಡಿದ್ದನು.

    ಕೆಲವು ದಿನಗಳ ನಂತರ ಶ್ರೀವಾಸ್ತವ ಸಂತ್ರಸ್ತೆಯನ್ನು ಸ್ಕ್ರೀನ್ ಟೆಸ್ಟ್ ನಡೆಸಲು ಮುಂಬೈಗೆ ಬರಲು ಹೇಳಿದ್ದನು. ಸಂತ್ರಸ್ತೆ ಮುಂಬೈಗೆ ಬರಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ. ನಂತರ ವಿಡಿಯೋ ಕಾಲ್ ಮೂಲಕ ಮಾಡಿನಾಡಿದ್ದಾರೆ. ಈ ವೇಳೆ ಆರೋಪಿ ಸ್ಕ್ರೀನ್‍ಶಾಟ್‍ಗಳನ್ನು ತೆಗೆದುಕೊಂಡು ಅದನ್ನ ಮಾರ್ಫಿಂಗ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶ್ರೀವಾಸ್ತವ ಮಾರ್ಫಡ್ ಫೋಟೋಗಳನ್ನು ನನಗೆ ಕಳುಹಿಸಿದ್ದನು. ಅಲ್ಲದೇ ನನ್ನೊಂದಿಗೆ ಮಲಗಲು ನಿರಾಕರಿಸಿದರೆ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಆದರೆ ನಾನು ಆತನ ಬೇಡಿಕೆಯನ್ನು ನಿರಾಕರಿಸಿದೆ. ಇದರಿಂದ ಕೋಪಗೊಂಡು ಒಂದು ಫೋಟೋವನ್ನು ವಾಟ್ಸಪ್ ಗ್ರೂಪ್‍ಗೆ ಕಳುಹಿಸಿದ್ದನು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಕೊನೆಗೆ ಮಹಿಳೆ ಶ್ರೀವಾಸ್ತವ ಇದ್ದ ವಾಟ್ಸಪ್ ಗ್ರೂಪಿನಿಂದ ನಿರ್ಗಮಿಸಿ, ಆತನ ನಂಬರನ್ನು ಬ್ಲಾಕ್ ಮಾಡಿದ್ದಾರೆ. ಆದರೂ ಬೇರೆ ಬೇರೆ ನಂಬರ್ ಮೂಲಕ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಮಹಿಳೆಗೆ ಕಳುಹಿಸುತ್ತಿದ್ದನು. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ರಾಹುಲ್ ಶ್ರೀವಾಸ್ತವ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಫ್ಯಾಷನ್ ಡಿಸೈನರ್, ಸಹಾಯಕನ ಕೊಲೆ- ಮೂವರು ಅರೆಸ್ಟ್

    ಫ್ಯಾಷನ್ ಡಿಸೈನರ್, ಸಹಾಯಕನ ಕೊಲೆ- ಮೂವರು ಅರೆಸ್ಟ್

    ನವದೆಹಲಿ: ಫ್ಯಾಷನ್ ಡಿಸೈನರ್ ಹಾಗೂ ಸಹಾಯಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

    ಫ್ಯಾಷನ್ ಡಿಸೈನರ್ ಮಾಲಾ ಲಖನಿ (53) ಹಾಗೂ ಆಕೆಯ ಸೇವಕ ಬಹದ್ದೂರ್ (50) ಹತ್ಯೆಯಾದವರು. ಫ್ಯಾಷನ್ ಡಿಸೈನರ್ ಟೈಲರ್ ರಾಹುಲ್ ಅನ್ವರ್ ಸೇರಿದಂತೆ ಮೂವರು ಹತ್ಯೆ ಮಾಡಿದ ಆರೋಪಿಗಳು.

    ವಸಂತ್ ಕುಂಜಾ ಪ್ರದೇಶದ ಮಾಲಾ ಅವರ ಹಳೆಯ ನಿವಾಸದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಚಾಕುನಿಂದ ಇರಿದು ಕೊಲೆ ಮಾಡಿದ್ದಾರೆ. ಪ್ರಕರಣದ ಕುರಿತು ಇಂದು ಬೆಳಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಾಲಾ ಲಖನಿ ಹಾಗೂ ಬಹದ್ದೂರ್ ಮೃತದೇವು ರಕ್ತದ ಮಡವಿನಲ್ಲಿ ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರಾಹುಲ್ ಅನ್ವರ್ ಫ್ಯಾಷನ್ ಡಿಸೈನರ್ ವರ್ಕ್‍ಶಾಪ್ ನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ತನ್ನ ಇಬ್ಬರು ಸಂಬಂಧಿಕರ ಜೊತೆ ಸೇರಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಜಯ್ ಚೌಧರಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews