Tag: ಫ್ಯಾಶನ್ ಶೋ

  • ಬೆಂಗಳೂರಿನಲ್ಲಿ ನಡೆಯಿತು Sustainable Fashion Week

    ಬೆಂಗಳೂರಿನಲ್ಲಿ ನಡೆಯಿತು Sustainable Fashion Week

    ಬೆಂಗಳೂರು: ವಿಶ್ವಾದ್ಯಂತ ಖ್ಯಾತಿಗಳಿಸಿರುವ ಯುಕೆಯ ಸಸ್ಟೈನಬಲ್ ಫ್ಯಾಶನ್ ವೀಕ್ (SFW) ಸಂಸ್ಥೆಯ ಈ ವರ್ಷದ ಸಸ್ಟೈನಬಲ್ ಫ್ಯಾಶನ್ ವೀಕ್ ಕಾರ್ಯಕ್ರಮ ಬೆಂಗಳೂರಿನ (Bengaluru) ಖಾಸಗಿ ಹೋಟೆಲಿನಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ವಿನ್ಯಾಸಕರೊಂದಿಗೆ ಚರ್ಚೆ ಕಾರ್ಯಕ್ರಮವನ್ನು ಒಳಗೊಂಡಿತ್ತು. ಬಳಿಕ ಸುಸ್ಥಿರ ಫ್ಯಾಷನ್ ಪ್ರದರ್ಶಿಸುವ ಫ್ಯಾಶನ್ ಶೋ (Fashion Show) ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು ಮತ್ತು ಫ್ಯಾಷನ್ ಲೋಕದ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ನಿಮ್ಮ ಸೌಂದರ್ಯ ಹೆಚ್ಚಿಸಲಿದೆ ಈ ಮಾಡ್ರನ್ ಬ್ಲೌಸ್‌ಗಳು

     

    ಸಸ್ಟೈನಬಲ್ ಫ್ಯಾಶನ್ ವೀಕ್ ಸಮುದಾಯವನ್ನು ಸಶಕ್ತಗೊಳಿಸಿ ಕೌಶಲ್ಯವನ್ನು ನೀಡುತ್ತದೆ. ಅಲ್ಲದೇ ಉತ್ತಮ ಫ್ಯಾಷನ್ ಆಯ್ಕೆಗಳನ್ನು ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ. ಸಸ್ಟೈನಬಲ್ ಫ್ಯಾಶನ್ ವೀಕ್ ಇಂಡಿಯಾದ ಸಹ-ಸಂಸ್ಥಾಪಕರಾದ ಲಗ್ನ ಗೌಡ (Laghna Gowda)ಮತ್ತು ಪ್ರಿಯಾಂಕಾ ಅಭಿಷೇಕ್ (Priyanka Abhishek) ಅವರು ಫ್ಯಾಶನ್ ಜಗತ್ತಿನ ಹೊಸ ಟ್ರೆಂಡ್‌ಗಳ ಮಾಹಿತಿ ನೀಡಿದರು. ಇದನ್ನೂ ಓದಿ: ಇಂಟರ್‌ನೆಟ್ ಲೋಕದಲ್ಲಿ 1 ಮಿನಿಟ್ ಸೀರೆಗೆ ಹೆಚ್ಚಿದ ಬೇಡಿಕೆ

    ಈಗಾಗಲೇ ಜೀನ್ಸ್ ಮತ್ತು ಡೆನಿಮ್ ಅಪ್‌ಸೈಕ್ಲಿಂಗ್, ಬಟ್ಟೆ ವಿನಿಮಯ, ಸುಸ್ಥಿರ ಫ್ಯಾಷನ್‌ನ ಪಾಪ್-ಅಪ್‌ಗಳು ಮತ್ತು ಹೊಲಿಗೆ ಮತ್ತು ಕಸೂತಿಗಾಗಿ ಕಾರ್ಯಾಗಾರಗಳಂತಹ ವಿವಿಧ ಕಾರ್ಯಕ್ರಮಗಳನ್ನು ಸಸ್ಟೈನಬಲ್ ಫ್ಯಾಶನ್ ವೀಕ್ ಸಂಸ್ಥೆ ಆಯೋಜಿಸಿದೆ. ಇದನ್ನೂ ಓದಿ: ಸಸ್ಟೈನಬಲ್ ಫ್ಯಾಷನ್ ವೀಕ್ – ಫ್ಯಾಷನ್ ಪಾಪ್ ಅಪ್ ಮಾರಾಟ ಮೇಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈಜಿಪ್ಟ್‌ನಲ್ಲಿ ನಡೆಯಲಿರುವ ಫ್ಯಾಶನ್ ಶೋಗೆ ಧಾರವಾಡದ ಯುವತಿ ಆಯ್ಕೆ

    ಈಜಿಪ್ಟ್‌ನಲ್ಲಿ ನಡೆಯಲಿರುವ ಫ್ಯಾಶನ್ ಶೋಗೆ ಧಾರವಾಡದ ಯುವತಿ ಆಯ್ಕೆ

    ಧಾರವಾಡ: ಧಾರವಾಡ ಯುವತಿಯೊಬ್ಬರು ಈಜಿಪ್ಟ್‌ನಲ್ಲಿ ನಡೆಯಲಿರುವ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

    Dharwad

    ನಗರದ ಏಕನಾಥ ಟಿಕಾರೆ ಹಾಗೂ ಶೈಲಾ ದಂಪತಿಯ ಹಿರಿಯ ಪುತ್ರಿಯಾಗಿರುವ ಖುಷಿ ಪಿಯುಸಿ ಓದುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದೇ ಡಿಸೆಂಬರ್ 10 ರಿಂದ 21 ರವರೆಗೆ ಈಜಿಪ್ಟ್ ದೇಶದ ಲುಕ್ಸಾನ್‍ನಲ್ಲಿ ನಡೆಯಲಿರುವ ಮಿಸ್ ಇಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಈ ಬಾರಿ ಭಾರತದಿಂದ ಖುಷಿ ಆಯ್ಕೆಯಾಗಿದ್ದಾರೆ. ಒಟ್ಟು 35 ದೇಶಗಳ ಸ್ಪರ್ಧಿಗಳು ಫ್ಯಾಶನ್ ಶೋನಲ್ಲಿ ಭಾಗವಹಿಸಲಿದ್ದಾರೆ.  ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ

    Dharwad women

    ಇತ್ತೀಚೆಗೆ ಬೆಂಗಳೂರಿನ ಆರ್ಕಿಡ್ ಇಂಟರ್ ನ್ಯಾಷನಲ್ ಆರ್ಗನೈಝೇಶನ್ ನಡೆಸಿದ್ದ ಸ್ಪರ್ಧೆಯಲ್ಲಿ ಖುಷಿ ಪ್ರಥಮ ಸ್ಥಾನ ಪಡೆದು ಈ ಹಂತಕ್ಕೆ ಏರಿದ್ದಾರೆ. ಈ ಸ್ಪರ್ಧೆಯಲ್ಲಿ ಫಿಟ್ ನೆಸ್ ರೌಂಡ್, ಟ್ಯಾಲೆಂಟ್ ರೌಂಡ್, ಇಕೋ ಡ್ರೆಸ್ ರೌಂಡ್ ಸೇರಿ ಅನೇಕ ಸುತ್ತುಗಳಿವೆ. ಜೊತೆಗೆ ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಡ್ರೆಸ್ ಧರಿಸಿ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿದ್ದು ಪ್ರತಿಯೊಬ್ಬ ಸ್ಪರ್ಧಿಯೂ ಪರಿಸರಕ್ಕೆ ಸಂಬಂಧಿಸಿದ ಒಂದೊಂದು ವಿಷಯ ವಸ್ತುವನ್ನು ಹೊಂದಿರಬೇಕು. ಈ ವಿಚಾರವಾಗಿ ಖುಷಿ ಸುಸ್ಥಿರ ಪರಿಸರ ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ

    Dharwad women

    ಖುಷಿ ತಂದೆ ಟೈಲರ್ ಆಗಿದ್ದು, ಮಧ್ಯಮ ವರ್ಗದ ಕುಟುಂಬದ ಯುವತಿಯೊಬ್ಬರು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದು, ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳುತ್ತಿರುವ ವಿಚಾರ ಹೆತ್ತವರಿಗೆ ಬಹಳ ಸಂತಸತಂದಿದೆ.

  • ಫ್ಯಾಶನ್ ಲೋಕದಲ್ಲಿ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’ ಹೊಸ ಹೆಜ್ಜೆ – ದೇಸಿ ಕಲೆಗೆ ಹೊಸ ಘಮ

    ಫ್ಯಾಶನ್ ಲೋಕದಲ್ಲಿ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’ ಹೊಸ ಹೆಜ್ಜೆ – ದೇಸಿ ಕಲೆಗೆ ಹೊಸ ಘಮ

    ಫ್ಯಾಶನ್ ಲೋಕದಲ್ಲಿ ಅತಿದೊಡ್ಡ ನೇಮ್ ಫೇಮ್ ಹೊಂದಿರುವ ಸಂಸ್ಥೆ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’. ಈ ಕಂಪೆನಿ ಇಟ್ಟಿರುವ ಹೊಸ ಹೆಜ್ಜೆಯೊಂದು ಜನಮೆಚ್ಚುಗೆಗೆ ಪಾತ್ರವಾಗಿದೆ. ಕುಶಲ ಕಲೆ ಹಾಗೂ ಕುಶಲಕರ್ಮಿಗಳ ಉತ್ತೇಜನದ ದೃಷ್ಟಿಯನ್ನು ಪ್ರಧಾನವಾಗಿಟ್ಟುಕೊಂಡು ಹೊಸದಾದ ಸ್ಟುಡಿಯೋವೊಂದನ್ನು ಸಿಲಿಕಾನ್ ಸಿಟಿಯಲ್ಲಿ ಲೋಕಾರ್ಪಣೆ ಮಾಡಿದೆ.

    ಕುಶಲಕರ್ಮಿಗಳಿಗೆಂದೇ ಪ್ರತ್ಯೇಕವಾಗಿ ನಿರ್ಮಾಣವಾದ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’ ಹೊಸ ಶಾಖೆ ಇತ್ತೀಚೆಗೆ ಉದ್ಘಾಟನೆಯಾಗಿದೆ. ಯಾವ ಹೈಟೆಕ್ ಸ್ಟುಡಿಯೋಗೂ ಸಾಟಿಯಿಲ್ಲ ಎಂಬಂತೆ ಸ್ಟುಡಿಯೋ ನಿರ್ಮಾಣವಾಗಿದ್ದು, ಟಾಪ್ ಟು ಬಾಟಮ್ ಫ್ಯಾಶನ್, ಸ್ಟೈಲಿಂಗ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಸುಸಜ್ಜಿತವಾಗಿದೆ. ಈ ಮೂಲಕ ಕುಶಲಕರ್ಮಿಗಳ ಹೊಸ ಹೊಸ ವಿನ್ಯಾಸಗಳನ್ನು ಫ್ಯಾಶನ್ ಲೋಕಕ್ಕೆ ಪರಿಚಯಿಸಿ ಸಾವಿರಾರು ಜನರ ಕುಲ ಕಸುಬಿಗೆ ಉಸಿರಾಗಲು, ಹೊಸ ಮಾರುಕಟ್ಟೆ ಕಲ್ಪಿಸುವ ಸಾಹಸಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ.

    Cream Colours Studios Bengaluru

    ಇದರ ಜೊತೆಗೆ ಫ್ಯಾಶನ್ ಜಗತ್ತಿನಲ್ಲಿ ಆಸಕ್ತಿ ಹೊಂದಿರುವ ವಿನ್ಯಾಸಕಾರರಿಗೆ ಈ ಸ್ಟುಡಿಯೋ ಮೂಲಕವೇ ತರಬೇತಿ ನೀಡುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ. ಅಷ್ಟೇ ಅಲ್ಲ ಫೋಟೋಗ್ರಫಿ, ವೀಡಿಯೋಗ್ರಫಿ ಸೇರಿದಂತೆ ಮುಂತಾದವುಗಳಿಗೆ ಬಾಡಿಗೆ ಕೊಡುವ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಲಾಗಿದೆ.

    ಸ್ಟುಡಿಯೋ ಉದ್ಘಾಟನೆಯ ದಿನದಂದೇ ಜರುಗಿದ ಫ್ಯಾಶನ್ ಶೋ ನೆರೆದಿದ್ದವರ ಕಣ್ಮನ ಕೋರೈಸಿದೆ. ಇದಕ್ಕೆ ಕಾರಣ ಕುಶಲಕರ್ಮಿಗಳ ಕೈಯಲ್ಲಿ ಅರಳಿದ ಎಂತಹ ಬ್ರ್ಯಾಂಡನ್ನೂ ನಾಚಿಸುವ ಜಗಮಗ ಕಾಸ್ಟ್ಯೂಮ್‌ಗಳು. ಪರಿಸರ ಸ್ನೇಹಿ ಹಿತದೃಷ್ಟಿ ಹೊಂದಿರುವ ಈ ಬಟ್ಟೆಗಳು ಫ್ಯಾಶನ್ ಶೋ ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿವೆ.

    ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅನಿಲ್ ಆನಂದ್, ಸಿನಿ ತಾರೆಯರಾದ ನಂದಕಿಶೋರ್, ಸಿಂಧು ಲೋಕನಾಥ್, ಸಂಗೀತ ರಾಜೀವ್, ಅರು ಗೌಡ, ಮನೋಹರ್ ಜೋಷಿ ಮುಂತಾದವರು ಪಾಲ್ಗೊಂಡಿದ್ದರು. ಅದ್ಧೂರಿಯಾಗಿ ನಡೆದ ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ಮಾಡೆಲ್ಸ್‌ಗಳು ಹೆಜ್ಜೆ ಹಾಕುವ ಮೂಲಕ ರಂಗೇರಿಸಿದ್ದು, ನಟಿ ಸೋನು ಗೌಡ, ಭಾವನಾ ರಾವ್ ಮೊದಲಾದವರು ಕೂಡ ಭಾಗವಹಿಸಿದ್ದರು.

  • ಬ್ಯೂಟಿಸ್ ಜೊತೆ ಡಾಗಿಸ್ ಕ್ಯೂಟ್ ಕ್ಯಾಟ್ ವಾಕ್

    ಬ್ಯೂಟಿಸ್ ಜೊತೆ ಡಾಗಿಸ್ ಕ್ಯೂಟ್ ಕ್ಯಾಟ್ ವಾಕ್

    ಬೆಂಗಳೂರು: ಬೆಂಗಳೂರಿನ ಜನಕ್ಕೆ ಡಾಗ್ಸ್ ಅಂದ್ರೇ ಪಂಚಪ್ರಾಣ. ತಮ್ಮ ಸಾಕು ನಾಯಿಗಳನ್ನು ಮಕ್ಕಳಂತೆಯೇ ಸಾಕುತ್ತಾರೆ. ಪೆಟ್ಸ್ ಪ್ರಿಯರಿಗಾಗಿಯೇ ಫ್ಯಾಷನ್ ಶೋವೊಂದನ್ನ ಆಯೋಜಿಸಲಾಗಿತ್ತು.

    ನಗರದ ಶ್ವಾನಗಳಿಗಾಗಿ ಕಬ್ಬನ್ ಪಾರ್ಕ್‍ನಲ್ಲಿ ಸಂತ ಬೌ ವಾವ್ ಅನ್ನೋ ವಿಶೇಷ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ದಿ ಸಿಜೆ ಮೆಮೋರಿಯಲ್ ಟ್ರಸ್ಟ್, ಹಿಮಾಲಯ, ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಮತ್ತು ಟೀಂ ಸಹಭಾಗಿತ್ವದಲ್ಲಿ ಡಿಫೆರೆಂಟ್ ಆಗಿ ಕ್ರಿಸ್ಮಸ್ ಆಚರಿಸಲಾಯಿತು.

    ಇಲ್ಲಿ ಮಾಡೆಲ್‍ಗಳಿಗೆ ಸೆಡ್ಡು ಹೊಡೆಯುವ ರೀತಿಯ ಡಾಗ್‍ಗಳು ರೆಡಿಯಾಗಿದ್ದವು. ಜೊತೆಗೆ ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಗತ್ತು-ಗಮ್ಮತ್ತಿನಲ್ಲಿದ್ದವು. ವಿಶೇಷವೆಂದರೆ ಸೂಪರ್ ಮಾಡೆಲ್ ಗಳು ಶ್ವಾನಗಳ ಜೊತೆ ರ‍್ಯಾಂಪ್‌ ವಾಕ್ ಮಾಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದರು.

  • ಜಾನಪದ ಕಲೆ, ಆಧುನಿಕತೆಯ ಸೊಗಡಿನಲ್ಲಿ ವಿದ್ಯಾರ್ಥಿಗಳ ರ‍್ಯಾಂಪ್ ವಾಕ್

    ಜಾನಪದ ಕಲೆ, ಆಧುನಿಕತೆಯ ಸೊಗಡಿನಲ್ಲಿ ವಿದ್ಯಾರ್ಥಿಗಳ ರ‍್ಯಾಂಪ್ ವಾಕ್

    ಮಂಗಳೂರು: ವೇದಿಕೆಯ ಮೇಲೆ ಬಿರುಸಿನ ಹೆಜ್ಜೆಗಳನ್ನು ಹಾಕುತ್ತಿದ್ದ ಯುವತಿಯರು ತಾವು ಅಬಲೆಯರಲ್ಲ, ಸಬಲೆಯರು ಎಂದು ತೋರಿಸಿದ್ದರು. ಜಾನಪದ ಕಲೆ, ಆಧುನಿಕತೆಯ ಸೊಗಡಿನೊಂದಿಗೆ ಬೆರೆಯುವುದಲ್ಲದೇ ಫ್ಯಾಶನ್ ಲೋಕದಲ್ಲೂ ತಮ್ಮ ಛಾಪು ಮೂಡಿಸಲು ತಾವೆಷ್ಟು ಸಮರ್ಥರು ಎಂದು ಸಾಬೀತುಪಡಿಸಿದ್ದರು.

    ಹೌದು. ಮಂಗಳೂರಿನ ಕೊಟ್ಟಾರದಲ್ಲಿರುವ ಕರಾವಳಿ ಕಾಲೇಜಿನಲ್ಲಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಷ್ಟ್ರಮಟ್ಟದ ಫ್ಯಾಶನ್ ಫಿಯೆಸ್ಟಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದರು. ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಡ್ರೆಸ್‍ನಲ್ಲೇ ಶೋ ನಡೆದದ್ದು ವಿಶೇಷವಾಗಿತ್ತು.

    ಕುಳಿತವರ ಕಾಲನ್ನೂ ಹೆಜ್ಜೆ ಹಾಕಿಸುವಂತೆ ಮಾಡುತ್ತಿದ್ದ ಆ ಮ್ಯೂಸಿಕ್‍ಗೆ ವಿವಿಧ ರೀತಿಯ ಬಟ್ಟೆಗಳನ್ನು ತೊಟ್ಟ ಯುವತಿಯರು ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಿದ್ದರು. ಅವರ ಮುಖದಲ್ಲಿ ಗಂಭೀರತೆ, ಆತ್ಮವಿಶ್ವಾಸ ಹಾಗೂ ಗೆಲುವಿನ ಛಲವಿತ್ತು. ಆ ವೇದಿಕೆಯ ಮೇಲೆ ಮಂದಹಾಸದೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಿದರೆ ಅವರ ಸಾಮಥ್ರ್ಯ ಏನು ಎಂಬುದು ವ್ಯಕ್ತವಾಗುತ್ತಿತ್ತು. ಅವರ ಪ್ರತಿಭೆ ಕಂಡು ನೋಡುಗರು ಹುಬ್ಬೇರಿಸಿದ್ದರು.

    ಈ ಡಿಸೈನ್ ಫೆಸ್ಟಿವಲ್ ನಲ್ಲಿ ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಕರ್ನಾಟಕ ಸೇರಿದಂತೆ ದೇಶದ ನೂರಕ್ಕೂ ಅಧಿಕ ವಿದ್ಯಾರ್ಥಿಗಳ ತಂಡ ಭಾಗವಹಿಸಿತ್ತು. ಅಲ್ಲದೇ ವಿದ್ಯಾರ್ಥಿಗಳೇ ರ‍್ಯಾಂಪ್ ವಾಕ್ ನಡೆಸುವ ಮೂಲಕ ವಿವಿಧ ನೂತನ ಡಿಸೈನ್‍ಗಳನ್ನು ಪ್ರದರ್ಶಿಸಿದರು. ಆದರೆ ತೀರ್ಪುಗಾರರ ಮೆಚ್ಚುಗೆ ಗಳಿಸಿದ ಡಿಸೈನ್‍ಗಳು ಬಹುಮಾನಗಳನ್ನು ಬಾಚಿಕೊಂಡವು.

    ಕೇವಲ ಫ್ಯಾಶನ್ ಶೋ ಮಾತ್ರವಲ್ಲದೇ ಜಾನಪದ ನೃತ್ಯಗಳನ್ನು ಕೂಡಾ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದರು. ನೃತ್ಯದ ವಿವಿಧ ಹೆಜ್ಜೆಗಳು, ಆಕರ್ಷಕ ಸ್ಟಂಟ್ ಗಳು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತ್ತು. ಹೂಗಳ ಡೆಕೋರೇಷನ್ ನಡೆಸುವ ಮೂಲಕ ತಮ್ಮ ಕಲಾಸಕ್ತಿಯನ್ನು ಕೂಡಾ ವಿದ್ಯಾರ್ಥಿನಿಯರು ತೋರಿಸಿದ್ದರು.

    ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಭಾವ ಮೂಡಿಸುವುದರ ಜೊತೆಗೆ ವಿಭಿನ್ನ ಅಭಿರುಚಿ ಮೂಡಲು ಕರಾವಳಿ ಕಾಲೇಜು ವರ್ಷ ಪ್ರತಿ ಫ್ಯಾಷನ್ ಶೋ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸಹಾಯಕವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಡೆಲ್‍ಗಳಿಗೆ ಸೆಡ್ಡು- ಬ್ಯಾಗ್ ಹಿಡಿದು ರ‍್ಯಾಂಪ್ ಮೇಲೆ ಹಾರಿದ ಡ್ರೋನ್‍ಗಳು!

    ಮಾಡೆಲ್‍ಗಳಿಗೆ ಸೆಡ್ಡು- ಬ್ಯಾಗ್ ಹಿಡಿದು ರ‍್ಯಾಂಪ್ ಮೇಲೆ ಹಾರಿದ ಡ್ರೋನ್‍ಗಳು!

    ಮಿಲಾನ್: ಭವಿಷ್ಯದಲ್ಲಿ ಫ್ಯಾಶನ್ ಶೋಗಳು ಹೀಗಿರಲಿವೆಯಾ? ಈ ಫ್ಯಾಶನ್ ಶೋ ನೋಡಿದ ಮೇಲೆ ನಿಮಗೆ ಈ ರೀತಿಯ ಪ್ರಶ್ನೆ ಕಾಡದೆ ಇರದು.

    ಭಾನುವಾರದಂದು ಮಿಲಾನ್‍ನಲ್ಲಿ ನಡೆದ ಡಾಲ್ಚೆ&ಗಬ್ಬಾನಾ ಫ್ಯಾಶನ್ ಶೋ ನಲ್ಲಿ ರೂಪದರ್ಶಿಯರು ವೇದಿಕೆ ಮೇಲೆ ಹೆಜ್ಜೆ ಹಾಕಲಿಲ್ಲ. ಬದಲಿಗೆ ಡ್ರೋನ್‍ಗಳು ಮಾಡೆಲ್‍ಗಳು ರೀತಿಯಲ್ಲಿ ಬ್ಯಾಗ್‍ಗಳನ್ನ ಹಿಡಿದು ಹಾರಿದ್ವು.

     

    ಡಾಲ್ಚೆ&ಗಬ್ಬಾನಾದ ಹೊಸ ವಿನ್ಯಾಸದ ಬ್ಯಾಗ್‍ಗಳನ್ನ ಡ್ರೋನ್‍ಗಳು ಪ್ರದರ್ಶಿಸಿದ್ದನ್ನು ಕಂಡು ನೋಡುಗರು ಆಶ್ಚರ್ಯಪಟ್ಟರು. 2018-19ರ ಚಳಿಗಾಲದ ಕೆಲಕ್ಷನ್ ಪ್ರದರ್ಶನದ ವಿಡಿಯೋವನ್ನ ಡಾಲ್ಚೆ&ಗಬ್ಬಾನಾದ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಳ್ಳಲಾಗಿದೆ.

    ವೇದಿಕೆ ಮೇಲೆ ವಿನ್ಯಾಸಗೊಳಿಸಲಾಗಿದ್ದ ಚರ್ಚ್‍ನ ಬಾಗಿಲುಗಳು ತೆರೆದುಕೊಂಡು ಸಂಗೀತ ಶುರುವಾಗುತ್ತದೆ. ನಂತರ ಒಂದು ಸಣ್ಣ ಡ್ರೋನ್ ಕೆಂಪು ಬಣ್ಣದ ಬ್ಯಾಗ್ ಹಿಡಿದುಕೊಂಡು ಹಾರಿ ಬರುತ್ತದೆ. ಅನಂತರ ಒಂದರ ನಂತರ ಒಂದು ಹಲವಾರು ಡ್ರೋನ್‍ಗಳು ವಿವಿಧ ಬಣ್ಣದ ಬ್ಯಾಗ್‍ಗಳನ್ನ ಹಿಡಿದು ಹಿಂಬಾಲಿಸುತ್ತವೆ.

    ವರದಿಯ ಪ್ರಾಕಾರ ಫ್ಯಾಶನ್ ಶೋ ವೇಳೆ, ಡ್ರೋನ್ ಸಿಗ್ನಲ್‍ಗೆ ಅಡ್ಡಿಯಾಗಬಾರದೆಂದು ಅತಿಥಿಗಳ ಮೊಬೈಲ್ ವೈಫೈ ಸ್ವಿಚ್ ಆಫ್ ಮಾಡುವಂತೆ ಹೇಳಲಾಗಿತ್ತು. ಇದರಿಂದ ಸುಮಾರು 45 ನಿಮಿಷ ಗೊಂದಲ ಉಂಟಾಗಿ, ಲೌಡ್‍ಸ್ಪೀಕರ್ ಮೂಲಕ ಇನ್ನೂ ವೈಫೈ ಸ್ವಿಚ್ ಆಫ್ ಮಾಡದವರ ಯೂಸರ್ ನೇಮ್ ಕರೆದು, ನಿಮ್ಮ ಹಾಟ್‍ಸ್ಪಾಟ್ ಸ್ವಿಚ್ ಆಫ್ ಮಾಡಿ ಶೋ ಪ್ರಾರಂಭಿಸಲು ಅನುವು ಮಾಡಿಕೊಡಿ ಎಂದು ಹೇಳಲಾಗಿತ್ತು.

    ಶೋ ಆರಂಭವಾಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಅತಿಥಿಗಳು ಕಣ್ ಕಣ್ ಬಿಟ್ಟು ನೋಡುವಂತಾಗಿತ್ತು. ರೂಪದರ್ಶಿಗಳ ಬದಲು ಡ್ರೋನ್‍ಗಳು ರ‍್ಯಾಂಪ್ ವಾಕ್ ಮಾಡಿದ್ದು ನೋಡಿ ಎಲ್ಲರೂ ಹುಬ್ಬೇರಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.

    ಆದರೂ ಡ್ರೋನ್‍ಗಳು ವೇದಿಕೆ ಹಿಂಭಾಗಕ್ಕೆ ಹೋದ ಬಳಿಕ ರೂಪದರ್ಶಿಯರು ಕೂಡ ಹೆಜ್ಜೆ ಹಾಕಿ ಬ್ಯಾಗ್‍ಗಳನ್ನ ಪ್ರದರ್ಶಿಸಿದ್ದಾರೆ.

    https://twitter.com/MEENAVOGUEE/status/967773394665197571?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-drones-fly-down-the-runway-carrying-dolce-gabbana-handbags-1817390