Tag: ಫ್ಯಾಮಿಲಿ ಟೂರ್

  • ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

    ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

    ಬೆಂಗಳೂರು: ಸರ್ಕಾರಿ ಭರವಸೆಗಳ ಸಮಿತಿ ಸದಸ್ಯರು ಸರ್ಕಾರಿ ದುಡ್ಡಿನಲ್ಲಿ ಲೇಹ್-ಲಡಾಕ್‍ನಲ್ಲಿ ಫ್ಯಾಮಿಲಿ ಟೂರ್ ಮಾಡುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಮೊದಲು ಸುದ್ದಿ ಮಾಡಿದ್ದೇ ನಿಮ್ಮ ಪಬ್ಲಿಕ್ ಟಿವಿ. ವರದಿ ಬಳಿಕ ಇನ್ನಷ್ಟು ಸಮಿತಿಗಳ ಟೂರ್  ಗೆ ಬ್ರೇಕ್ ಬಿದ್ದಿದೆ.

    ಇದು ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್. ಮತ್ತಷ್ಟು ಸಮಿತಿಗಳು ಬೇರೆ ಬೇರೆ ರಾಜ್ಯಗಳಿಗೆ ಸ್ಟಡಿ ಟೂರ್ ಮಾಡಲು ಪ್ಲಾನ್ ಮಾಡ್ಕೊಂಡಿದ್ದವು. ಆದರೆ ಭರವಸೆಗಳ ಸಮಿತಿಯ ಲೇಹ್-ಲಡಾಕ್ ಟೂರ್ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಉಳಿದ ಸಮಿತಿಗಳು ಸದ್ದಿಲ್ಲದೇ ತಮ್ಮ ಟೂರ್ ಪೋಸ್ಟ್ ಪೋನ್ ಮಾಡಿಕೊಂಡಿವೆ. ಇದನ್ನೂ ಓದಿ: ತಲೆಗೂದಲು ಉದುರುವ ಸಮಸ್ಯೆಯಿಂದ ಬೇಸತ್ತು ಯುವತಿ ಆತ್ಮಹತ್ಯೆ

    ಇಷ್ಟೇ ಅಲ್ಲ ಖುದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶ ಮಾಡಿದ್ದಾರೆ. ಉಳಿದ ಸಮಿತಿಗಳ ಅನ್ಯ ರಾಜ್ಯ ಟೂರ್ ಪ್ಲಾನ್ ಗೊತ್ತಾಗಿದ್ದೇ ತಡ ಅದಕ್ಕೆ ಸ್ಪೀಕರ್ ಕಾಗೇರಿ ಬ್ರೇಕ್ ಹಾಕಿದ್ದಾರೆ. ಸದ್ಯಕ್ಕೆ ಯಾವುದೇ ಟೂರ್ ಪ್ಲಾನ್ ಹಾಕಿಕೊಳ್ಳದಂತೆ ಸಮಿತಿಗಳ ಅಧ್ಯಕ್ಷರಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಈ ನಡುವೆ ಲೇಹ್-ಲಡಾಕ್‍ನಲ್ಲಿ ಶಾಸಕರು ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಜಾಲಿಯಾಗಿ ಸುತ್ತಾಡ್ತಿದ್ದು, ಗ್ರೂಪಲ್ಲಿ ಫೋಟೋ ಶೂಟ್ ಸಹ ಮಾಡ್ಕೊಳ್ತಿದ್ದಾರೆ. ಶಾಸಕರ ಫೊಟೋ ಶೂಟ್ ಚಿತ್ರಗಳನ್ನು ಎಕ್ಸ್‍ಕ್ಲೂಸಿವ್ ಆಗಿ ಪಬ್ಲಿಕ್ ಟಿವಿ ನಿನ್ನೆಯೇ ಪ್ರಸಾರ ಮಾಡಿದೆ.

    Live Tv

  • ಸ್ನೇಹಿತರ ಐಷಾರಾಮಿ ಕಾರನ್ನು ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿ ಅರೆಸ್ಟ್

    ಸ್ನೇಹಿತರ ಐಷಾರಾಮಿ ಕಾರನ್ನು ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿ ಅರೆಸ್ಟ್

    ಬೆಂಗಳೂರು: ಗೆಳೆಯರಿಂದ ಕಾರು ಪಡೆದು ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

    ಕನಕಪುರ ರಸ್ತೆಯ ನಿವಾಸಿ ಚರಣ್ ರಾಜ್(30) ಬಂಧಿತ ಆರೋಪಿ. ಚರಣ್ ಬಳಿಯಿದ್ದ 12 ಕಾರುಗಳು ಹಾಗೂ 3 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ವಂಚನೆ ಹೇಗೆ?
    ಐಷಾರಾಮಿ ಕಾರು ಹೊಂದಿರುವ ವ್ಯಕ್ತಿಗಳನ್ನು ಹುಡುಕಿ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದ. ಚಾಟ್ ಮೂಲಕ ಹತ್ತಿರವಾಗಿ ಅವರನ್ನು ಮನಗೆ ಕರೆಯಿಸಿ ಕಾಫಿ ತಿಂಡಿ ನೀಡಿ ಅವರಲ್ಲಿ ವಿಶ್ವಾಸ ಗಿಟ್ಟಿಸುತ್ತಿದ್ದ. ಮೂರ್ನಾಲ್ಕು ತಿಂಗಳಲ್ಲಿ ತನ್ನ ಮಾತಿನ ಕೌಶಲ್ಯದಿಂದ ಮತ್ತಷ್ಟು ಹತ್ತಿರವಾಗುತ್ತಿದ್ದ.

    ತನ್ನ ಬಲೆಗೆ ಸ್ನೇಹಿತ ಬೀಳುತ್ತಿದ್ದಾನೆ ಎನ್ನುವುದು ಅರಿವಾಗುತ್ತಿದ್ದಂತೆ ಫ್ಯಾಮಿಲಿ ಟ್ರಿಪ್ ಹೋಗಬೇಕು. ದಯವಿಟ್ಟು ನಿಮ್ಮ ಕಾರನ್ನು ಒಮ್ಮೆ ನೀಡುತ್ತೀರಾ ಎಂದು ಮನವಿ ಮಾಡುತ್ತಿದ್ದ. ಮಾಲೀಕರು ಈತನ ನಡತೆಯನ್ನು ಮೆಚ್ಚಿಕೊಂಡಿದ್ದರಿಂದ ಕಾರನ್ನು ನೀಡುತ್ತಿದ್ದರು. ಕಾರ್ ಪಡೆಯುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ. ಇತ್ತ ಕಾರು ಇಲ್ಲ ಮೊಬೈಲ್ ಕೂಡ ಸ್ವಿಚ್ ಆಫ್ ಎಂಬುದನ್ನು ಅರಿತ ಸಂತ್ರಸ್ತರು ಪೊಲೀಸರ ಮೊರೆ ಹೋಗುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಇದೀಗ ಇದೇ ರೀತಿ ಮೋಸ ಹೋದ ರುದ್ರೇಶ್ ಎಂಬುವರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಗೆ ಇಳಿದು ಆರೋಪಿಯನ್ನು ಬಂಧಿಸಿದಾಗ ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಅಸಲಿ ವಿಚಾರ ಬೆಳಕಿಗೆ ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]