Tag: ಫ್ಯಾನ್ ಆಫ್ ರೆಬೆಲ್ ಸ್ಟಾರ್

  • ನಿಖಿಲ್ ರೆಬೆಲ್ ಸ್ಟಾರ್ ಫ್ಯಾನ್ ಅಲ್ವಾ?

    ನಿಖಿಲ್ ರೆಬೆಲ್ ಸ್ಟಾರ್ ಫ್ಯಾನ್ ಅಲ್ವಾ?

    ಬೆಂಗಳೂರು: ತರ್ಲೆ ನನ್ ಮಕ್ಳು ಮತ್ತು ಪತಿಬೇಕು ಡಾಟ್ ಕಾಮ್ ಸಿನಿಮಾವನ್ನು ನಿರ್ದೇಶನ ಮಾಡಿದ್ದವರು ನಿರ್ದೇಶಕ ರಾಕೇಶ್. ಸದ್ಯ ರಾಕೇಶ್ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಸಿನಿಮಾವನ್ನು ಆರಂಭಿಸುವ ಸಿದ್ದತೆಯಲ್ಲಿದ್ದಾರೆ. ಸದ್ಯ ಮಂಡ್ಯ ಲೋಕಸಭಾ ಚುನಾವಣೆ ಇಂಡಿಯಾದ ಲೆವೆಲ್ಲಿನಲ್ಲಿ ಟಾಕ್ ಕ್ರಿಯೇಟ್ ಮಾಡಿರುವ ಹೊತ್ತಿನಲ್ಲೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಾಕೇಶ್ ಬಿಡುಗಡೆ ಮಾಡಿದ್ದಾರೆ.

    ಒಂದು ಕಡೆ ಮಂಡ್ಯ, ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಮುಖ್ಯವಾಗಿ ಕೇಳಿಬರುತ್ತಿರೋ ಹೆಸರುಗಳು. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕನ್ನಡಚಿತ್ರರಂಗದ ಎಲ್ಲಾ ಹೀರೋಗಳ ಮುಖಗಳನ್ನೂ ನಮೂದಿಸಲಾಗಿದೆ. ಈ ಲಿಸ್ಟಿನಲ್ಲಿ ಎಲ್ಲಿ ಹುಡುಕಿದರೂ ನಿಖಿಲ್ ಕುಮಾರಸ್ವಾಮಿಯವರ ಫೇಸು ಕಾಣಸಿಗುತ್ತಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಮಾಡಿರೋದಾ ಅಥವಾ ಬೈ ಮಿಸ್ಟೇಕ್ ಮಿಸ್ ಆಗಿಬಿಟ್ಟಿದೆಯಾ ಗೊತ್ತಿಲ್ಲ. ಕೆಲವೇ ನಿಮಿಷಗಳ ಹಿಂದೆ ಬಿಡುಗಡೆಯಾಗಿರುವ ಈ ಪೋಸ್ಟರ್ ಸದ್ಯ ಟಾಕ್ ಆಫ್ ದಿ ಟೌನ್ ಎನ್ನುವಂತೆ ಬಗೆಬಗೆಯ ಚರ್ಚೆಗೆ ಕಾರಣವಾಗಿದೆ.

    ಇದರ ಹಿನ್ನೆಲೆ, ಉದ್ದೇಶಗಳೇನು ಅನ್ನೋದನ್ನು ಸ್ವತಃ ನಿರ್ದೇಶಕ ರಾಕೇಶ್ ಬಹಿರಂಗಗೊಳಿಸೋ ತನಕ ಇದು ಮತ್ತಷ್ಟು ಮಸಾಲೆ ಮಾತುಗಳೊಂದಿಗೆ ಬೆರೆತು ಗಾಳಿಸುದ್ದಿಗಳಿಗೆ ಆಹಾರವಾಗೋದಂತೂ ನಿಜ.

    ಅಂದಹಾಗೆ ಇಷ್ಟರಲ್ಲಿಯೇ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಸಿನಿಮಾ ಮಂಡ್ಯದಲ್ಲೇ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ಚುನಾವಣೆಗೂ ಮುನ್ನ ಶುರುವಾಗುವ ಈ ಸಿನಿಮಾದಲ್ಲಿ ನಾಯಕ ಯಾರು ಅನ್ನೋದು ಸದ್ಯದ ತನಕ ಟಾಪ್ ಸೀಕ್ರೇಟ್ ಆಗಿಯೇ ಉಳಿದಿದೆ. ಅದು ಅಂಬರೀಶ್ ಅವರ ಆಪ್ತ ನಟನೇ ಈ ಚಿತ್ರದ ಹೀರೋ ಅನ್ನೋದಷ್ಟೇ ಈತನಕದ ಮಾಹಿತಿಯಾಗಿದ್ದು, ರೆಬೆಲ್ ಸ್ಟಾರ್ ಫ್ಯಾನ್ ಆಗಿ ಯಾರು ನಟಿಸುತ್ತಾರೆ ಅನ್ನೋ ವಿಚಾರ ಮಂಡ್ಯದ ಸಮಾರಂಭದಲ್ಲಿಯೇ ಬಹಿರಂಗಗೊಳ್ಳಲಿದೆಯಂತೆ!

  • ಫ್ಯಾನ್ ಆಫ್ ರೆಬೆಲ್ ಸ್ಟಾರ್ ಶುರುವಾಗೋದು ಯಾವಾಗ?

    ಫ್ಯಾನ್ ಆಫ್ ರೆಬೆಲ್ ಸ್ಟಾರ್ ಶುರುವಾಗೋದು ಯಾವಾಗ?

    ಬೆಂಗಳೂರು: ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ನಿರ್ದೇಶಕ ರಾಕೇಶ್ ಹೊಸಾ ಚಿತ್ರಕ್ಕೆ ತಯಾರಿ ನಡೆಸಿರೋದು ಆ ಚಿತ್ರಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋ ವಿಚಾರ ಈಗಾಗಲೇ ಜಾಹೀರಾಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಹೆಸರೇ ಹೇಳುವಂತೆ ಮಂಡ್ಯದ ಗಂಡು ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಈ ಸಿನಿಮಾದ್ದು. ಈ ಸಿನಿಮಾದಲ್ಲಿ ಯಾರು ಹೀರೋ ಆಗಿ ನಟಿಸುತ್ತಾರೆ ಎಂಬುದನ್ನು ಈ ಕ್ಷಣಕ್ಕೂ ಗೌಪ್ಯವಾಗಿ ಇಡಲಾಗಿದೆ.

    ಒಂದು ಮೂಲದ ಪ್ರಕಾರ ಈ ಚಿತ್ರದ ಹೀರೋ ಅಂಬರೀಶ್ ಅವರ ಪರಮಾಪ್ತರಲ್ಲೊಬ್ಬರು ಅನ್ನೋ ಮಾತೂ ಕೇಳಿಬರುತ್ತಿದೆ. ಅವರು ಯಾರೆಂಬ ವಿಚಾರವನ್ನು ರಾಕೇಶ್ ಇಷ್ಟರಲ್ಲೇ ಜಾಹೀರು ಮಾಡಲಿದ್ದಾರಂತೆ. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಆಪ್ತ ವಲಯದಲ್ಲಿದ್ದ ಆ ಹೀರೋ ಯಾರೆಂಬ ಬಗ್ಗೆ ಈಗಾಗಲೇ ಜನ ಅಂದಾಜು ಊಹಿಸಲು ಶುರು ಮಾಡಿದ್ದಾರೆ. ಆದರೆ ಅವರ್ಯಾರೆಂದು ಕಂಡು ಹಿಡಿಯೋದು ಅಷ್ಟು ಸಲೀಸಿನ ವಿಚಾರವಲ್ಲ. ಯಾಕೆಂದರೆ ಅಂಬಿ ಬಳಗ ತುಂಬಾ ದೊಡ್ಡದು! ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದಲ್ಲಿ ಅಂಬಿ ಬದುಕಿನ ಕಥೆ ಇದೆಯಾ? ಅದು ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರವಾ ಅನ್ನೋದೂ ಕೂಡಾ ಹೀರೋ ಯಾರೆಂಬಷ್ಟೇ ನಿಗೂಢ. ಆದರೆ ಇದು ಮಂಡ್ಯಾ ಸೀಮೆಯ ಹಳ್ಳಿ ವಾತಾವರಣದಲ್ಲಿ ನಡೆಯೋ ಪಕ್ಕಾ ಗ್ರಾಮೀಣ ಸೊಗಡಿನ ಕಥೆ ಹೊಂದಿರೋ ಚಿತ್ರ ಅನ್ನೋದಂತೂ ಸತ್ಯ.

    ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯದ ಮೈದಾನದಲ್ಲಿ ಅಂತಿಮ ದರ್ಶನಕ್ಕಿಟ್ಟಿದ್ದ ಜಾಗದಲ್ಲೇ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದ ಆರಂಭಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಅನ್ನೋ ಮಾತು ಕೇಳಿಬರುತ್ತಿತ್ತು. ಅದು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಮಂಡ್ಯದ ಯಾವುದಾದರೂ ಪ್ರಮುಖ ಸ್ಥಳದಲ್ಲಿ ನಡೆಯೋದು ಖಚಿತ. ಅದು ಎಲೆಕ್ಷನ್ ಮುಗಿದ ನಂತರವಾ ಅಥವಾ ಅದಕ್ಕೆ ಮುಂಚೆಯೇ ಶುರುವಾಗುತ್ತದಾ ಅನ್ನುವುದರ ಮಾಹಿತಿಯಷ್ಟೇ ಹೊರಬೀಳಬೇಕು.

  • ಫ್ಯಾನ್ ಆಫ್ ರೆಬೆಲ್ ಸ್ಟಾರ್ ಯಾರೆಂಬ ಮಿಲಿಯನ್ ಡಾಲರ್ ಪ್ರಶ್ನೆ!

    ಫ್ಯಾನ್ ಆಫ್ ರೆಬೆಲ್ ಸ್ಟಾರ್ ಯಾರೆಂಬ ಮಿಲಿಯನ್ ಡಾಲರ್ ಪ್ರಶ್ನೆ!

    ಬೆಂಗಳೂರು:  ಪತಿಬೇಕು ಡಾಟ್ ಕಾಮ್ ಮೂಲಕ ಬೇರೆಯದ್ದೇ ಫ್ಲೇವರಿನ ಚಿತ್ರವೊಂದನ್ನು ಕೊಟ್ಟವರು ನಿರ್ದೇಶಕ ರಾಕೇಶ್. ಈ ಕಾರಣದಿಂದಲೇ ಅವರು ಮುಂದೆ ಯಾವ ಚಿತ್ರ ಮಾಡುತ್ತಾರೆಂಬ ಬಗ್ಗೆ ಕುತೂಹಲವಿತ್ತು. ಇದೀಗ ಹೊಸಾ ಚಿತ್ರಕ್ಕಾಗಿ ರಾಕೇಶ್ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ.

    ಈ ಚಿತ್ರಕ್ಕೆ ವಿಶೇಷವಾದ ಶೀರ್ಷಿಕೆಯೂ ಪಕ್ಕಾ ಆಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಎಂಬ ಕ್ಯಾಚೀ ಟೈಟಲ್ ರಿಜಿಸ್ಟರ್ ಕೂಡಾ ಆಗಿದೆ. ಆದರೆ ಈ ಸಿನಿಮಾದ ಹೀರೋ ಯಾರೆಂಬ ವಿಚಾರದಲ್ಲಿ ಮಾತ್ರ ನಿರ್ದೇಶಕ ರಾಕೇಶ್ ಮಹಾ ಕುತೂಹಲವೊಂದನ್ನು ಹುಟ್ಟು ಹಾಕಿ ಬಿಟ್ಟಿದ್ದಾರೆ!

    ಈ ಚಿತ್ರದಲ್ಲಿ ಹೀರೋ ಆಗಲಿರುವವರು ಅಂಬರೀಶ್ ಅವರ ಆಪ್ತ ವಲಯದಲ್ಲಿದ್ದವರಂತೆ. ಅಂಬಿಗೂ ಕೂಡಾ ಅವರಂದ್ರೆ ತುಂಬಾ ಇಷ್ಟವಿತ್ತು. ಸದ್ಯ ರಾಕೇಶ್ ಅವರು ಬಿಟ್ಟುಕೊಟ್ಟಿರೋದು ಇದೊಂದು ಹಿಂಟ್ ಮಾತ್ರ. ಇದೀಗ ಇದರ ಸುತ್ತಲೇ ನಾನಾ ದಿಕ್ಕಿನ ಚರ್ಚೆ ನಡೆಯುತ್ತಿದೆ. ಅಂಬರೀಶ್ ಆಪ್ತ ವಲಯದಲ್ಲಿದ್ದವರ ಚಿತ್ರಾವಳಿಗಳನ್ನ ಹಲವರು ರಿವೈಂಡ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಏನೇ ತಿಪ್ಪರಲಾಗ ಹೊಡೆದರೂ ಈ ಹೀರೋನನ್ನು ಕಂಡು ಹಿಡಿಯೋದು ಅಷ್ಟು ಸಲೀಸಿನ ಸಂಗತಿಯಲ್ಲ.

    ಅಂದಹಾಗೆ ಈ ಚಿತ್ರವನ್ನ ಅಂಬಿ ಅಭಿಮಾನಿಗಳೇ ಸೇರಿಕೊಂಡು ನಿರ್ಮಾಣ ಮಾಡುತ್ತಿರೋದು ವಿಶೇಷ. ಅಂಬರೀಶ್ ಮೇಲೆ ಅಗಾಧ ಅಭಿಮಾನ ಹೊಂದಿದ್ದ ಉದ್ಯಮಿಯೊಬ್ಬರು ಈ ಸಿನಿಮಾಗೆ ಸಾಥ್ ನೀಡುತ್ತಿದ್ದಾರಂತೆ. ಕಡೇಯದಾಗಿ ಅಂಬಿ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಿಡಲಾಗಿದ್ದ ಮಂಡ್ಯದ ಮೈದಾನದಲ್ಲಿಯೇ ಈ ಚಿತ್ರಕ್ಕೆ ಆರಂಭ ಸಿಗಲಿದೆಯಂತೆ. ಇದೊಂದು ಅಪ್ಪಟ ಮಂಡ್ಯ ಸೀಮೆಯ ಹಳ್ಳಿಗಾಡಿನ ಕಥೆ. ಇದರ ಹೀರೋ ಯಾರೆಂಬುದೂ ಸೇರಿದಂತೆ ಉಳಿಕೆ ವಿವರಗಳು ಹಂತ ಹಂತವಾಗಿ ಹೊರ ಬೀಳಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv