Tag: ಫೌಂಟೇನ್

  • ಮಳೆಯೇ ಇಲ್ಲದ ನಾಡಿನಲ್ಲಿ ಜಲದೇವಿಯ ನೃತ್ಯ: ವಿಡಿಯೋ

    ಮಳೆಯೇ ಇಲ್ಲದ ನಾಡಿನಲ್ಲಿ ಜಲದೇವಿಯ ನೃತ್ಯ: ವಿಡಿಯೋ

    ಚಿತ್ರದುರ್ಗ: ಮಳೆಯೇ ಇಲ್ಲದ ನಾಡಿನಲ್ಲಿ ಮುರುಘಾಮಠದಲ್ಲಿ ಜಲದೇವಿ ನೃತ್ಯ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಮುರುಘಾಮಠ ಕೋಟೆನಾಡು ಚಿತ್ರದುರ್ಗದ ಹೊರವಲಯದಲ್ಲಿದ್ದು, ಈ ಮುರುಘಾಮಠದ ಆವರಣದಲ್ಲಿನ ಮುರುಘಾವನ ಈಗಾಗಲೇ ನಾಡಿನಾದ್ಯಂತ ಚಿರಪರಿಚಿತವಾಗಿದೆ.

    ಆದಿ ಮಾನವನಿಂದ ಹಿಡಿದು ಇಂದಿನ ಆಧುನಿಕ ಮಾನವನ ಸ್ಥಿತಿಗತಿಗಳ ಚಿತ್ರಣಗಳು ಇಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಮುರುಘಾವನದಲ್ಲಿ ಸಂಗೀತ ಕಾರಂಜಿ ಹಾಗು ಬೋಟ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ವೀಕೆಂಡ್ ಕಳೆಯಲು ವಿವಿಧೆಡೆ ಪ್ರವಾಸ ಹೋಗುತ್ತಿದ್ದ ಜನರು ಈಗ ಸುಮಧುರ ಹಾಡುಗಳ ಜೊತೆಗೆ ನರ್ತಿಸುವ ನೀರಿನ ಆಕರ್ಷಣೀಯ ನೃತ್ಯ ನೋಡುತ್ತಾ ಮೈ ಮರೆಯುತಿದ್ದು, ಅಪರೂಪದ ಸಂಗೀತ ಕಾರಂಜಿಯ ಝಲಕ್ ಎಲ್ಲರ ಕಣ್ಮನ ಸೆಳೆಯುತ್ತಿದೆ.

    ಸಂಗೀತ ಕಾರಂಜಿ ಈಗ ಮುರುಘಾವನದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ನಿತ್ಯ ಸಾವಿರಾರು ಜನ ಸಂಗೀತ ಕಾರಂಜಿ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಸಂಜೆ 7 ಗಂಟೆಯಿಂದ ರಂಗು ರಂಗಿನ ಸಂಗೀತ ಕಾರಂಜಿ ಆರಂಭವಾಗುತ್ತದೆ. ಹೀಗಾಗಿ ಈ ಸುಂದರ ಸೊಬಗಿನ ಕಣ್ಮನ ತುಂಬಿಸಿಕೊಳ್ಳಲು ಜನ ಕಾತುರರಾಗಿ ಕಾಯುತ್ತಾರೆ. ಅಲ್ಲದೇ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

    ಒಂದೆಡೆ ಸಿಗುವ ಇತಿಹಾಸ ಮಾಹಿತಿ, ಸಂಗೀತ ಮನರಂಜನೆ ಹಾಗೂ ಬೋಟಿಂಗ್ ರೋಮಾಂಚನದಲ್ಲಿ ಸಮಯದ ಅರಿವಿಲ್ಲದಂತೆ ಎಂಜಾಯ್ ಮಾಡುವ ಸ್ಪಾಟ್ ಈ ಮುರುಘಾ ಮಠವೆನಿಸಿದೆ. ಒಟ್ಟಾರೆಯಾಗಿ ಕೋಟೆನಾಡಿನ ಮುರುಘಾಮಠದಲ್ಲೀಗ ಸಂಗೀತ ಕಾರಂಜಿ ಜನರ ಮನ ತಣಿಸುತ್ತಿದೆ. ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಹೀಗಾಗಿ ನಿತ್ಯ ಜನಸಾಗರವೇ ಮುರುಘಾವನದ ಸಂಗೀತ ಕಾರಂಜಿಯತ್ತ ಹೆಜ್ಜೆ ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದುವೆ ಮಂಟಪದಲ್ಲಿದ್ದ ವಾಟರ್ ಫೌಂಟೇನ್‍ನಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು

    ಮದುವೆ ಮಂಟಪದಲ್ಲಿದ್ದ ವಾಟರ್ ಫೌಂಟೇನ್‍ನಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು

    ಹೈದರಾಬಾದ್: ಮದುವೆ ಸಮಾರಂಭದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ ದುರ್ಘಟನೆಯೊಂದು ತೆಲಂಗಾಣದ ನಾಗೋಲಿಯಲ್ಲಿ ನಡೆದಿದೆ.

    4 ವರ್ಷದ ಜಿತೇಂದ್ರ ಕುಮಾರ್ ಹಾಗೂ 5 ವರ್ಷದ ಮನಸ್ವಿನಿ ಮೃತ ದುರ್ದೈವಿಗಳು. ಬುಧವಾರದಂದು ಇಲ್ಲಿನ ಕೃಷ್ಣ ಜಿಲ್ಲೆಯ ನಂದಿಗಾಮದ ಮುನಗಚೆರ್ಲಾ ಗ್ರಾಮದವಾರದ ಶಿವಾಜಿ ಸಂಬಂಧಿಕರೊಬ್ಬರ ಮದುವೆ ಸಮಾರಂಭಕ್ಕಾಗಿ ನಾಗೋಲಿಯ ಶುಭಂ ಕನ್ವೆಂಷನ್ ಹಾಲ್‍ಗೆ ಬಂದಿದ್ದರು. ಮಗ ಜಿತೇಂದ್ರ ಹಾಗೂ ಅಣ್ಣನ ಮಗಳಾದ ಮನಸ್ವಿನಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು.

    ಮದುವೆ ಮಂಟಪದಲ್ಲಿ ಆಡವಾಡುವ ವೇಳೆ ಜಿತೇಂದ್ರ ಹಾಗೂ ಮನಸ್ವಿನಿ ಫೌಂಟೇನ್(ನೀರಿನ ಚಿಲುಮೆ)ಯೊಳಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.