Tag: ಫೋಸ್ಟ್

  • ಐಟಿ ದಾಳಿ ಬಳಿಕ ಕೊನೆಗೂ ಮೌನ ಮುರಿದ ಸೋನು ಸೂದ್

    ಐಟಿ ದಾಳಿ ಬಳಿಕ ಕೊನೆಗೂ ಮೌನ ಮುರಿದ ಸೋನು ಸೂದ್

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರ ಮನೆ, ಕಚೇರಿ ಸೇರಿದಂತೆ ಅವರಿಗೆ ಸಂಬಂಧಿಸಿದ ಅನೇಕ ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗಷ್ಟೇ ದಾಳಿ ನಡೆಸಿದ್ದರು. ಈ ಸಮೀಕ್ಷೆ ನಂತರ ಸೋನು ಸೂದ್ ಮೌನ ಮುರಿದಿದ್ದಾರೆ.

    ಇತ್ತೀಚೆಗಷ್ಟೇ ಸೋನು ಸೂದ್‍ರವರ ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರುಗ್ರಾಮದಲ್ಲಿರುವ ಆಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ನಡೆಸಿತ್ತು. ಈ ಕುರಿತಂತೆ ಸೋನು ಸೂದ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ನಿಮ್ಮ ಕಥೆಯನ್ನು ನೀವು ಯಾವಾಗಲೂ ಹೇಳಬೇಕಾಗಿಲ್ಲ. ಅದಕ್ಕೆ ಸಮಯ ಬರುತ್ತದೆ. ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಶನ್‍ನಲ್ಲಿರು ಪ್ರತಿ ಒಂದು ರೂಪಾಯಿಯನ್ನು ಅಮೂಲ್ಯವಾದಂತಹ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಿಸಲು ಕಾಯುತ್ತಿದ್ದೇನೆ. ಇದನ್ನೂ ಓದಿ: ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ: ಸೋನು ಸೂದ್

     

    View this post on Instagram

     

    A post shared by Sonu Sood (@sonu_sood)

    ಅನೇಕ ವೇಳೆ ಮಾನವೀಯ ಕಾರ್ಯಗಳಿಗೆ ಹಣ ದಾನ ಮಾಡಲು ಬ್ರ್ಯಾಂಡ್‍ಗಳಿಗೆ ಜಾಹೀರಾತು ನೀಡುವ ಮೂಲಕ ಪ್ರೋತ್ಸಾಹಿಸಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನೀವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ. ಎಲ್ಲವೂ ಉತ್ತಮ ರೀತಿಯಲ್ಲಿಯೇ ಮುಕ್ತಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ

  • ಎಮೋಶನಲ್ ವಿಡಿಯೋ ಹಾಕಿ ಸ್ವರ್ಗ ಎಂದು ಅನುಷ್ಕಾ ಪೋಸ್ಟ್!

    ಎಮೋಶನಲ್ ವಿಡಿಯೋ ಹಾಕಿ ಸ್ವರ್ಗ ಎಂದು ಅನುಷ್ಕಾ ಪೋಸ್ಟ್!

    ಮೆಲ್ಬರ್ನ್: ಮೊದಲ ಮದುವೆಯ ವಾರ್ಷಿಕೋತ್ಸವದಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಪೋಸ್ಟ್ ಮಾಡಿದ್ದಾರೆ. ವಿರಾಟ್ ಮದುವೆಯ ಅಪರೂಪದ ಫೋಟೋ ಪೋಸ್ಟ್ ಮಾಡಿದರೆ, ಅನುಷ್ಕಾ ಎಮೋಶನಲ್ ವಿಡಿಯೋ ಹಾಕಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಅಪರೂಪದ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ, “ಮದುವೆಯಾಗಿ ಒಂದು ವರ್ಷ ಕಳೆದಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲಾ ನಿನ್ನೆ ಆಗಿರುವ ಹಾಗೇ ಅನಿಸುತ್ತಿದೆ. ಎಷ್ಟು ಬೇಗ ಸಮಯ ಕಳೆದಿದೆ. ನನ್ನ ಆತ್ಮಿಯ ಗೆಳತಿ ಹಾಗೂ ನನ್ನ ಸೋಲ್ ಮೇಟ್‍ಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನೀನು ಯಾವಾಗಲೂ ನನ್ನವಳು” ಎಂದು ವಿರಾಟ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

    ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಮೋಶನಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಹಾಗೂ ಅನುಷ್ಕಾ ಮದುವೆಯ ಹಾರ ಬದಲಾಯಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ವಿರಾಟ್, ಅನುಷ್ಕಾಳ ಹಣೆಗೆ ಸಿಂಧೂರ ಹಚ್ಚಿ ಹೆಮ್ಮೆಯಿಂದ ನನ್ನ ಪತ್ನಿ ಎಂದು ಕರೆದಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿ ಅನುಷ್ಕಾ “ಸಮಯ ಕಳೆದಿರುವುದು ನೀವು ಗಮನಿಸಿಲ್ಲ ಎಂದರೆ ಇದು ಸ್ವರ್ಗ. ನೀವು ಇಂತಹ ಅದ್ಭುತ ವ್ಯಕ್ತಿಯನ್ನು ಮದುವೆಯಾದರೆ ಇದು ಸ್ವರ್ಗ” ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷದ ಡಿಸೆಂಬರ್ 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅನುಷ್ಕಾ ಹಾಗೂ ವಿರಾಟ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸುತ್ತಿದ್ದಾರೆ.

    https://twitter.com/AnushkaSharma/status/1072359108274081797

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೇಟಾಕ್ಕಾಗಿ ಬೆತ್ತಲಾದ ಸನ್ನಿ ಲಿಯೋನ್-ವೆಬರ್ ದಂಪತಿ

    ಪೇಟಾಕ್ಕಾಗಿ ಬೆತ್ತಲಾದ ಸನ್ನಿ ಲಿಯೋನ್-ವೆಬರ್ ದಂಪತಿ

    ಮುಂಬೈ: ಹಾಟ್ ಬೇಬಿ ಸನ್ನಿ ಲಿಯೋನ್ ತನ್ನ ಬೋಲ್ಡ್ ಫೋಟೋಶೂಟ್‍ನಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆದರೆ ಈಗ ನಟಿ ಸನ್ನಿ ಮತ್ತು ಸಂಗೀತಗಾರ ಪತಿಯಾದ ಡೇನಿಯಲ್ ವೆಬರ್ ಪ್ರಾಣಿಹಿಂಸೆ-ಮುಕ್ತ ಫ್ಯಾಶನ್ ಉತ್ತೇಜಿಸಲು ಬೆತ್ತಲಾಗಿ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರಾಣಿ ಹಿಂಸೆಯ ವಿರುದ್ಧ ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರಿಟ್‍ಮೆಂಟ್ ಆಫ್ ಅನಿಮಲ್ಸ್) ನಡೆಸುತ್ತಿರೋ ಅಭಿಯಾನದಲ್ಲಿ ಸನ್ನಿ- ವೆಬರ್ ದಂಪತಿ ಕೈಜೋಡಿಸಿದ್ದಾರೆ. ಇಬ್ಬರು ಬೆತ್ತಲಾಗಿ ಪೋಸ್ ಕೊಟ್ಟಿದ್ದು, ವೆಬರ್ ಮೈಮೇಲೆ ಕೇವಲ ಟ್ಯಾಟೋ ಇದೆ. ನಿಮ್ಮ ಚರ್ಮದಲ್ಲೇ ಆರಾಮಾಗಿರಿ. ಪ್ರಾಣಿಗಳು ಅವುಗಳ ಚರ್ಮವನ್ನ ಇಟ್ಟುಕೊಳ್ಳಲಿ ಎಂಬ ಸಂದೇಶವನ್ನು ಸಾರಿದ್ದಾರೆ.

    ಪೇಟಾ ಸನ್ನಿ ಮತ್ತು ಡೇನಿಯಲ್ ಬೆತ್ತಲಾಗಿ ಕಾಣಿಸಿಕೊಂಡಿರುವ ಪೋಸ್ಟರ್ ಟ್ವೀಟ್ ಮಾಡಿದ್ದು, ಅದರ ಮೇಲೆ ಇಂಕ್ ಡೋಂಟ್ ಮಿಂಕ್ ಅಂತಾ ಬರೆಯಲಾಗಿದೆ.

    ಈ ಬಗ್ಗೆ ಸನ್ನಿ ಪ್ರತಿಕ್ರಿಯಿಸಿ, “ಈ ಜಗತ್ತಿನಲ್ಲಿ ನಾವು ಜೀವಸಲು ಹಲವಾರು ಸಸ್ಯಹಾರಿ ವಸ್ತುಗಳಿವೆ ಹಾಗೂ ಪ್ರತಿಯೊಬ್ಬರಿಗೂ ಆಯ್ಕೆಯ ಅವಕಾಶ ಕೂಡ ಇದೆ. ಯಾವುದೇ ಕ್ರೂರತೆಯನ್ನು ಯಾರೂ ಕೂಡ ಬೆಂಬಲಿಸಬಾರದು. ಸಿಂಥೆಟಿಕ್ ಲೆದರ್, ಮಾಕ್ ಕ್ರಾಕ್, ಫಾಕ್ಸ್ ಫರ್ ಇವುಗಳು ಕೂಡ ಕೆಲವು ಉತ್ತಮ ಆಯ್ಕೆಗಳು” ಎಂದಿದ್ದಾರೆ.

    ನಾವು ಪ್ರಾಣಿಗಳಿಗೆ ಧ್ವನಿಯಾಗಬೇಕು, ನನಗೆ ಭರವಸೆ ಇದೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು. ಅವುಗಳಿಲ್ಲದೆ ನಾವುಗಳು ಇಲ್ಲ. ಆದ್ದರಿಂದ ಇದನ್ನು ಅರಿತುಕೊಂಡು ಅವುಗಳಿಗೆ ಗೌರವ ನೀಡಬೇಕು ಎಂದು ಸನ್ನಿ ಪತಿ ವೆಬರ್ ಹೇಳಿದ್ರು.

    https://twitter.com/Sachbang/status/935503559570882560