Tag: ಫೋರ್ಬ್ಸ್

  • ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ ಇತರೆ ನಟಿಯರ ಹೆಸರು ಯಾಕಿಲ್ಲ? ಪ್ರಿಯಾಂಕಾ ಚೋಪ್ರಾ ಹೀಗಂದ್ರು

    ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ ಇತರೆ ನಟಿಯರ ಹೆಸರು ಯಾಕಿಲ್ಲ? ಪ್ರಿಯಾಂಕಾ ಚೋಪ್ರಾ ಹೀಗಂದ್ರು

    ಮುಂಬೈ: ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ಪಟ್ಟಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಹೆಸರು ಕೂಡ ಇದೆ. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಬಿಟ್ಟರೆ ಬೇರೆ ಯಾವ ನಟಿಯರ ಹೆಸರು ಕೇಳಿ ಬಂದಿಲ್ಲ. ಈ ಪಟ್ಟಿಯಲ್ಲಿ ಬೇರೆ ನಟಿಯರ ಹೆಸರು ಯಾಕಿಲ್ಲ ಎಂದು ಕೇಳಿದ್ದಿಕ್ಕೆ ವೇತನ ಲಿಂಗಭೇದ ಎಂದು ಪ್ರಿಯಾಂಕಾ ಉತ್ತರಿಸಿದ್ದಾರೆ.

    ವೇತನ ಲಿಂಗಭೇದ ಇದು ವಿಶ್ವದ ಸಮಸ್ಯೆ ಹಾಗೂ ಎಲ್ಲ ವೃತ್ತಿಯಲ್ಲಿ ಈ ಸಮಸ್ಯೆ ಇರುತ್ತದೆ. ಅದು ಬಾಲಿವುಡ್ ಆಗಿರಲಿ, ಹಾಲಿವುಡ್ ಆಗಿರಲಿ ಅಥವಾ ಬೇರೆ ವೃತ್ತಿ ಆಗಿರಲ್ಲಿ ಮಹಿಳೆಯರಿಗಿಂತ ಪುರುಷರಿಗೆ ವೇತನ ಹೆಚ್ಚು ಇರುತ್ತದೆ. ನನ್ನ ಪ್ರಕಾರ ಇದು ಒಂದು ದೊಡ್ಡ ಸಮಸ್ಯೆ ಹಾಗೂ ಇದು ಚಿತ್ರರಂಗದಲ್ಲಿ ಮಾತ್ರವಲ್ಲ. ಎಲ್ಲ ವೃತ್ತಿಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ಫೋರ್ಬ್ಸ್ 2017ರ ಟಾಪ್ 10 ಪಟ್ಟಿಯಲ್ಲಿ ನಟಿಯರಲ್ಲಿ ನೀವು ಒಬ್ಬರೆ ಇದ್ದೀರ? ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಪ್ರಿಯಾಂಕಾ,”ನನಗೆ ತುಂಬಾನೇ ಖುಷಿಯಾಗುತ್ತಿದೆ. ಪುರುಷರಿಗೆ ಸಮಾನವಾದ ಸ್ಥಾನಕ್ಕೆ ನಾನು ತಲುಪಿದ್ದೇನೆ. ಚಿತ್ರರಂಗದಲ್ಲಿ ಈ ರೀತಿ ನಡೆಯುವುದು ಅಪರೂಪವಾಗಿದೆ. ಈ ಸಮಯದಲ್ಲಿ ಬೇರೆ ನಟಿಯರು ಟಾಪ್ 10 ಪಟ್ಟಿಯಲ್ಲಿ ಯಾಕೆ ಇಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ” ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ಫೋರ್ಬ್ಸ್  ಪಟ್ಟಿಯಲ್ಲೂ ಬಾಹುಬಲಿ ಶೈನಿಂಗ್: ಯಾರ ಆದಾಯ ಎಷ್ಟು ಕೋಟಿ ರೂ.?

    ನಟರಿಗೆ ಹೆಚ್ಚು ಸಂಭಾವನೆ ಕೊಟ್ಟು ಪಕ್ಷಪಾತ ಮಾಡಿದ್ದಕ್ಕೆ ಈ ಹಿಂದೆ ನಟಿ ದೀಪಿಕಾ ಪಡುಕೋಣೆ, ಕಂಗನಾ ರಣೌತ್ ಹಾಗೂ ಅನುಷ್ಕಾ ಶರ್ಮಾ ಹಿಂದಿ ಚಲನಚಿತ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಫೋರ್ಬ್ಸ್ 2017ರ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ 35 ವರ್ಷ ನಟಿ ಪ್ರಿಯಾಂಕ ಚೋಪ್ರಾ 8ನೇ ಸ್ಥಾನವನ್ನು ಪಡೆದಿದ್ದು, ಆದಾಯ 68 ಕೋಟಿ ರೂ. ಇದೆ.

  • ಫೋರ್ಬ್ಸ್  ಪಟ್ಟಿಯಲ್ಲೂ ಬಾಹುಬಲಿ ಶೈನಿಂಗ್: ಯಾರ ಆದಾಯ ಎಷ್ಟು ಕೋಟಿ ರೂ.?

    ಫೋರ್ಬ್ಸ್  ಪಟ್ಟಿಯಲ್ಲೂ ಬಾಹುಬಲಿ ಶೈನಿಂಗ್: ಯಾರ ಆದಾಯ ಎಷ್ಟು ಕೋಟಿ ರೂ.?

    ನವದೆಹಲಿ: ದೇಶದ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಬಾಹುಬಲಿ ಸಿನಿಮಾ ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲೂ ಸದ್ದು ಮಾಡಿದೆ.

    ಫೋರ್ಬ್ಸ್ 2017ರ ಭಾರತದ ಟಾಪ್ ಸೆಲೆಬ್ರಿಟಿಗಳ ಆದಾಯದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಬಾಹುಬಲಿ ನಿರ್ದೇಶಕ ಎಸ್‍ಎಸ್ ರಾಜಮೌಳಿ, ನಟ ಪ್ರಭಾಸ್, ಖಳನಟ ರಾಣಾ ದಗ್ಗುಬಾಟಿ ಸ್ಥಾನವನ್ನು ಪಡೆದಿದ್ದಾರೆ.

    ವಿಶೇಷ ಏನೆಂದರೆ 2016ರ ಪಟ್ಟಿಯಲ್ಲಿ ಈ ಮೂವರು ಸ್ಥಾನ ಪಡೆದಿರಲಿಲ್ಲ. ಆದರೆ ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಹುಬಲಿ ಭಾಗ 2 ಏಪ್ರಿಲ್ 28 ರಂದು ಬಿಡುಗಡೆಯಾಗಿತ್ತು. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 1,700 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್ ನಲ್ಲಿ ಗಳಿಸಿತ್ತು.

    ಇದನ್ನು ಓದಿ: ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ಇದನ್ನು ಓದಿ: ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಎಸ್.ಎಸ್.ರಾಜಮೌಳಿ
    ವಯಸ್ಸು – 44
    ಸ್ಥಾನ – 15
    ವಾರ್ಷಿಕ ಆದಾಯ – 55 ಕೋಟಿ ರೂ.

    ಪ್ರಭಾಸ್
    ವಯಸ್ಸು – 38
    ಸ್ಥಾನ – 22
    ವಾರ್ಷಿಕ ಆದಾಯ – 36.25 ಕೋಟಿ ರೂ.

    ರಾಣಾ ದಗ್ಗುಬಾಟಿ
    ವಯಸ್ಸು – 33
    ಸ್ಥಾನ – 36
    ವಾರ್ಷಿಕ ಆದಾಯ – 22 ಕೋಟಿ ರೂ.

  • ಲೆಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

    ಲೆಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರ್ಜೆಂಟೀನಾ ಫುಟ್‍ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಅವರನ್ನು ಹಿಂದಿಕ್ಕಿದ್ದಾರೆ.

    ಫೋರ್ಬ್ಸ್ ನಿಯತಕಾಲಿಕೆ ಬುಧವಾರ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕೊಹ್ಲಿ 7ನೇ ಸ್ಥಾನ ಪಡೆದರೆ, ಮೆಸ್ಸಿ 9ನೇ ಸ್ಥಾನ ಪಡೆದಿದ್ದಾರೆ.

    ಆಟಗಾರರ ವೇತನ, ಬೋನಸ್ ಸೇರಿದಂತೆ ಎಲ್ಲ ಹೂಡಿಕೆಗಳಿಂದ ಬರುವ ಆದಾಯವನ್ನು ಲೆಕ್ಕಹಾಕಿ ಈ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಟೆನ್ನಿಸ್ ಆಟಗಾರ ಸ್ವಿಜರ್‍ಲ್ಯಾಂಡಿನ  ರೋಜರ್ ಫೆಡರರ್ ಮೊದಲ ಸ್ಥಾನ ಪಡೆದಿದ್ದಾರೆ.

    ಟಾಪ್ ಆಟಗಾರರು ಯಾರು?
    1. ರೋಜರ್ ಫೆಡರರ್ – 37.2 ದಶಲಕ್ಷ ಡಾಲರ್ (ಅಂದಾಜು 241 ಕೋಟಿ ರೂ.)
    2. ಲೆಬ್ರೋನ್ ಜೇಮ್ಸ್ – 33.4 ದಶಲಕ್ಷ ಡಾಲರ್ (ಅಂದಾಜು 216 ಕೋಟಿ ರೂ.)
    3. ಉಸೇನ್ ಬೋಲ್ಟ್ – 27 ದಶಲಕ್ಷ ಡಾಲರ್ (ಅಂದಾಜು 175 ಕೋಟಿ ರೂ.)
    4. ಕ್ರಿಶ್ಚಿಯಾನೋ ರೊನಾಲ್ಡೊ – 21.5 ದಶಲಕ್ಷ ಡಾಲರ್ (ಅಂದಾಜು 139 ಕೋಟಿ ರೂ.)

    5. ಫಿಲ್ ಮೈಕ್ಲೆಸನ್ – 19.6 ದಶಲಕ್ಷ ಡಾಲರ್(ಅಂದಾಜು127 ಕೋಟಿ ರೂ.)
    6. ಟೈಗರ್ ವುಡ್ಸ್ – 16.6 ದಶಲಕ್ಷ ಡಾಲರ್(ಅಂದಾಜು107 ಕೋಟಿ ರೂ.)
    7. ವಿರಾಟ್ ಕೊಹ್ಲಿ – 14.5 ದಶಲಕ್ಷ ಡಾಲರ್(ಅಂದಾಜು 94 ಕೋಟಿ ರೂ.)
    8. ರೋರಿ ಮೆಕ್ರಾಯ್ – 13.6 ದಶಲಕ್ಷ ಡಾಲರ್(ಅಂದಾಜು 88 ಕೋಟಿ ರೂ.)
    8. ಲಿಯೋನೆಲ್ ಮೆಸ್ಸಿ -13.5 ದಶಲಕ್ಷ ಡಾಲರ್(ಅಂದಾಜು 87 ಕೋಟಿ ರೂ.)
    10. ಸ್ಟೆಫ್ ಕರ್ರಿ – 13.4 ದಶಲಕ್ಷ ಡಾಲರ್(ಅಂದಾಜು 86 ಕೋಟಿ ರೂ.)