Tag: ಫೋರ್ಡ್

  • ಭಾರತಕ್ಕೆ ಮತ್ತೆ ವಾಪಸ್ ಬರಲಿದೆ ಫೋರ್ಡ್

    ಭಾರತಕ್ಕೆ ಮತ್ತೆ ವಾಪಸ್ ಬರಲಿದೆ ಫೋರ್ಡ್

    – 2021ರಲ್ಲಿ ಉತ್ಪಾದನೆ ನಿಲ್ಲಿಸಿದ್ದ ಫೋರ್ಡ್
    – ತಮಿಳುನಾಡು ಘಟಕ ಪುನಾರಂಭಕ್ಕೆ ನಿರ್ಧಾರ ಎಂದ ಫೋರ್ಡ್ ಕಂಪನಿ

    ಚೆನ್ನೈ: ಫೋರ್ಡ್ ಮೋಟಾರ್ (Ford) ಕಂಪೆನಿಯು ತಮಿಳುನಾಡಿನಲ್ಲಿ (Tamilnadu) ರಫ್ತು ಮಾಡಲು ಉತ್ಪಾದನಾ ಘಟಕವನ್ನು ಮರುಪ್ರಾರಂಭಿಸಲು ಯೋಜಿಸಿದೆ ಎಂದು ಶುಕ್ರವಾರ ತಿಳಿಸಿದೆ. ಮುಂಬರುವ ಎರಡು ವರ್ಷದಲ್ಲಿ ಘಟಕ ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಮೂರು ವರ್ಷಗಳ ಹಿಂದೆ ನಿರ್ಗಮಿಸಿದ ಮಾರುಕಟ್ಟೆಯನ್ನು ಮರುಪ್ರವೇಶಿಸುವ ಸಾಧ್ಯತೆಯಿದೆ.ಇದನ್ನೂ ಓದಿ: ಪ್ರಜ್ವಲ್ ವಿರುದ್ಧ 3ನೇ ಕೇಸ್- ಎಸ್‌ಐಟಿಯಿಂದ 1,691 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಫೋರ್ಡ್ 2021ರಲ್ಲಿ ದೇಶೀಯ ಮಾರಾಟಕ್ಕಾಗಿ ಭಾರತದಲ್ಲಿ ಕಾರುಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಭಾರತಕ್ಕೆ ಮರಳಿದೆ. ರಾಜ್ಯದಲ್ಲಿ ರಫ್ತಿಗಾಗಿ ಉತ್ಪಾದನೆಯನ್ನು ಪುನರಾರಂಭಿಸಲು ಕಂಪನಿ ಹಾಗೂ ತಮಿಳುನಾಡು ಸರ್ಕಾರ ಈ ಕುರಿತು ನಿರ್ಧರಿಸಿದೆ. ಇದಾದ ಬಳಿಕ ಕಂಪನಿಯು ರಾಜ್ಯ ಸರ್ಕಾರಕ್ಕೆ ಉದ್ದೇಶ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದೆ.

    ಈ ಕ್ರಮವು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲು ಉತ್ಪಾದನೆಯ ಮೇಲೆ ಕೇಂದ್ರೀಕರಿಸಲು ಸೌಲಭ್ಯವನ್ನು ಮರು ನಿಯೋಜಿಸಲಾಗುತ್ತದೆ ಎಂದಿದೆ. ಇದಾದ ಬಳಿಕ ಕಾರುಗಳು ಮತ್ತು ಇತರ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಕಂಪನಿ ತಿಳಿಸಿದೆ.ಇದನ್ನೂ ಓದಿ: ರೈತರಿಗೆ ಅನುಕೂಲ ಮಾಡದೇ ಮಣ್ಣಿನ ಮಕ್ಕಳು ಅಂತಾರೆ: ಹೆಚ್‌ಡಿಕೆ ವಿರುದ್ಧ ಸಿಎಂ ವಾಗ್ದಾಳಿ

  • 725.7 ಕೋಟಿ ಡೀಲ್‌ – ಗುಜರಾತ್‌ನ ಫೋರ್ಡ್‌ ಘಟಕ ಖರೀದಿಸಿದ ಟಾಟಾ

    725.7 ಕೋಟಿ ಡೀಲ್‌ – ಗುಜರಾತ್‌ನ ಫೋರ್ಡ್‌ ಘಟಕ ಖರೀದಿಸಿದ ಟಾಟಾ

    ಮುಂಬೈ: ಟಾಟಾ ಮೋಟಾರ್ಸ್‌ ಗುಜರಾತಿನಲ್ಲಿರುವ ಫೋರ್ಡ್‌ ಕಂಪನಿಯ ಉತ್ಪದನಾ ಘಟಕವನ್ನು 725.7 ಕೋಟಿ ರೂ. ನೀಡಿ ಖರೀದಿಸಿದೆ.

    ಟಾಟಾ ಮೋಟಾರ್ಸ್‌ನ ಅಂಗಸ್ಥೆಯಾದ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟಿಡ್‌(ಟಿಪಿಇಎಂಎಲ್‌) ಸನಂದ್‌ನಲ್ಲಿರುವ ಘಟಕವನ್ನು ಖರೀದಿಸಿದೆ ಎಂದು ಟಾಟಾ ಮೋಟಾರ್ಸ್‌ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ.

    ಭಾನುವಾರ ಎರಡು ಕಂಪನಿಗಳು ಪರಸ್ಪರ ಸಹಿ ಹಾಕಿಕೊಂಡಿದ್ದು ಒಪ್ಪಂದದ ಪ್ರಕಾರ ಅರ್ಹ ಫೋರ್ಡ್‌ ಉದ್ಯೋಗಿಗಳಿಗೆ ಟಾಟಾ ಕಂಪನಿ ಉದ್ಯೋಗ ನೀಡಲಿದೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ, ಸ್ವಾತಂತ್ರ್ಯೋತ್ಸವ ಅದ್ಧೂರಿಯಾಗಿ ಆಚರಿಸುತ್ತೇವೆ: ಜಮೀರ್

    ಫೋರ್ಡ್‌ ಇಂಡಿಯಾದ ಬಿಡಿ ಭಾಗಗಳ ಜೋಡಣಾ ಘಟಕ 350 ಎಕ್ರೆಯಲ್ಲಿ ವಿಸ್ತಾರಗೊಂಡಿದ್ದರೆ 110 ಎಕ್ರೆ ಜಾಗದಲ್ಲಿ ಎಂಜಿನ್‌ ಉತ್ಪದನಾ ಘಟಕವನ್ನು ಹೊಂದಿದೆ. ಘಟಕ 3,043 ನೇರ ಉದ್ಯೋಗ, 20 ಸಾವಿರ ಮಂದಿಗೆ ಪರೋಕ್ಷ ಉದ್ಯೋಗ ನೀಡುತ್ತಿದೆ.

    ಟಾಟಾ ಮೋಟಾರ್ಸ್‌ ಪ್ರಸ್ತುತ ಪ್ರತಿ ವರ್ಷ 3 ಲಕ್ಷ ಯೂನಿಟ್‌ ಉತ್ಪಾದನಾ ಮಾಡುವ ಸಾಮರ್ಥವನ್ನು ಹೊಂದಿದೆ. ಈ ಘಟಕ ಖರೀದಿಯಿಂದ ಪ್ರತಿ ವರ್ಷ ಉತ್ಪಾದನೆ ಮಾಡುವ ಯೂನಿಟ್‌ಗಳ ಸಂಖ್ಯೆ 4.20 ಲಕ್ಷಕ್ಕೆ ಏರಲಿದೆ.

    ಅಮೆರಿಕ ಮೂಲದ ಫೋರ್ಡ್‌ ಗುಣಮಟ್ಟದ ಕಾರುಗಳಿಗೆ ಹೆಸರುವಾಸಿ. ಭಾರತದಲ್ಲಿ ಕಡಿಮೆ ಬೆಲೆಯ ಮಧ್ಯಮ ಬಜೆಟ್‌ ಕಾರುಗಳು ಜನಪ್ರಿಯವಾಗುತ್ತಿದ್ದಂತೆ ಫೋರ್ಡ್‌ ಕಂಪನಿಯೂ ಕಡಿಮೆ ಬೆಲೆ ಕಾರುಗಳನ್ನು ಬಿಡುಗಡೆ ಮಾಡಿತ್ತು. ಆದರೆ ಮಾರುಕಟ್ಟೆಯಲ್ಲಿ ಯಶಸ್ಸು ಕಾಣದ ಕಾರಣ ನಷ್ಟವನ್ನು ಅನುಭವಿಸತೊಡಗಿತು. ಸದ್ಯ ಚೆನ್ನೈನಲ್ಲಿ ಫೋರ್ಡ್‌ ಕಂಪನಿಯ ಘಟಕವಿದ್ದು 2022ರಲ್ಲಿ ಈ ಘಟಕವನ್ನೂ ಬಂದ್‌ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ಬಾಗಿಲು ಮುಚ್ಚಲಿದೆ ಫೋರ್ಡ್

    ಭಾರತದಲ್ಲಿ ಬಾಗಿಲು ಮುಚ್ಚಲಿದೆ ಫೋರ್ಡ್

    ನವದೆಹಲಿ: ಪ್ರತಿಷ್ಠಿತ ಆಟೋಮೊಬೈಲ್ ಸಂಸ್ಥೆ ಫೋರ್ಡ್, ಭಾರತದಲ್ಲಿ ತನ್ನ ಎರಡು ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಭಾರತದಲ್ಲಿನ ತಯಾರಿಕಾ ಘಟಕಗಳನ್ನು ಮುಂದುವರಿಸುವುದು ತನಗೆ ಅಷ್ಟೊಂದು ಲಾಭದಾಯಕವಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

    ಫೋರ್ಡ್ ಮಸ್ಟಾಂಗ್ ಮತ್ತು ಮುಂದಿನ ದಿನಗಳಲ್ಲಿ ಬರಲಿರುವ ಹೈಬ್ರಿಡ್/ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮೂಲಕ ಮಾರಾಟವನ್ನು ಮುಂದುವರಿಸುವುದಾಗಿ ಫೋರ್ಡ್ ಸಂಸ್ಥೆ ಹೇಳಿದೆ. ಹಾಲಿ ಗ್ರಾಹಕರಿಗೆ ಅಗತ್ಯ ಸೇವೆ ಒದಗಿಸಲು ಡೀಲರ್‌ಗಳಿಗೆ ಬೆಂಬಲ ಒದಗಿಸುವುದಾಗಿ ಭರವಸೆ ಕೊಟ್ಟಿದ್ದು, ಫಿಗೊ, ಅಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೇವರ್ ಕಾರುಗಳ ಮಾರಾಟ ಡೀಲರ್‌ಗಳ ಬಳಿ ಇರುವ ಸ್ಟಾಕ್ ಮುಗಿಯುವವರೆಗೆ ಮುಂದುವರೆಯಲಿದೆ.

    1994ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಫೋರ್ಡ್, 27 ವರ್ಷಗಳ ನಂತರ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ. ಭಾರತದಲ್ಲಿ 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಫೋರ್ಡ್ ಕಂಪನಿಯು 2 ಬಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿದೆ. ಭಾರತದಲ್ಲಿನ ಘಟಕಗಳನ್ನು ಸ್ಥಗಿತಗೊಳಿಸುವುದರಿಂದ ಸುಮಾರು 4 ಸಾವಿರ ಉದ್ಯೋಗಿಗಳ ಸ್ಥಿತಿ ಅತಂತ್ರವಾಗಲಿದೆ.

    ಗುಜರಾತ್‌ನಲ್ಲಿರುವ ಸನಂದ್‌ನ ರಫ್ತು ವಾಹನಗಳ ಉತ್ಪಾದನಾ ಘಟಕವನ್ನು 2021ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಮುಚ್ಚಲಾಗುತ್ತದೆ ಮತ್ತು ಚೆನ್ನೈನ ಎಂಜಿನ್ ಉತ್ಪಾದನಾ ಘಟಕವನ್ನು 2022ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ700 ಬಿಡುಗಡೆ- ಬೆಲೆ ಎಷ್ಟು? ವಿಶೇಷತೆ ಏನಿದೆ? 

    2017ರಲ್ಲಿ ಅಮೆರಿಕದ ವಾಹನ ದಿಗ್ಗಜ ಜನರಲ್ ಮೋಟಾರ್ಸ್ ಭಾರತದಲ್ಲಿನ ತನ್ನ ಕಾರು ಮಾರಾಟವನ್ನು ಸ್ಥಗಿತಗೊಳಿಸಿತ್ತು ಮತ್ತು ಅಮೆರಿಕದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಕಂಪನಿಯು ಕೂಡ ಭಾರತದ ಮಾರುಕಟ್ಟೆಗೆ 2020ರಲ್ಲಿ ಗುಡ್‌ ಬೈ ಹೇಳಿತ್ತು. ಇದನ್ನೂ ಓದಿ: ಬಹು ನಿರೀಕ್ಷಿತ ಸ್ಕೋಡಾ ಕುಶಾಕ್ ಕಾರು ಬಿಡುಗಡೆ