Tag: ಫೋನ್ ಪೇ

  • ಇಂದಿನಿಂದ ಗೂಗಲ್‌ ಪೇ, ಫೋನ್‌ ಪೇ ಮತ್ತಷ್ಟು ಫಾಸ್ಟ್‌ – ಏನೇನು ಬದಲಾವಣೆ?

    ಇಂದಿನಿಂದ ಗೂಗಲ್‌ ಪೇ, ಫೋನ್‌ ಪೇ ಮತ್ತಷ್ಟು ಫಾಸ್ಟ್‌ – ಏನೇನು ಬದಲಾವಣೆ?

    ನವದೆಹಲಿ: ಇಂದಿನಿಂದ ನೀವು ಗೂಗಲ್‌ ಪೇ (Google Pay), ಫೋನ್‌ ಪೇನಲ್ಲಿ (Phone Pay) ವೇಗವಾಗಿ ಹಣವನ್ನು ಸೆಂಡ್‌ ಮಾಡಬಹುದು. ಜೂನ್‌ 16 ರಿಂದ ಬಳಕೆದಾರರು ತಮ್ಮ UPI (ಏಕೀಕೃತ ಪಾವತಿ ಇಂಟರ್ಫೇಸ್) ವಹಿವಾಟುಗಳನ್ನು ಸುಮಾರು ಅರ್ಧದಷ್ಟು ಸಮಯದಲ್ಲಿ ಪೂರ್ಣಗೊಳಿಸಬಹುದು.

    UPI ವಹಿವಾಟುಗಳನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಸಿಸ್ಟಮ್- ಅಪ್‌ಗ್ರೇಡ್ ಮಾಡಲು ಆರಂಭಿಸಿದೆ.

    ಏಪ್ರಿಲ್ 26, 2025 ರ ಸುತ್ತೋಲೆಯ ಪ್ರಕಾರ, ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು PhonePe, Google Pay ಮತ್ತು Paytm ನಂತಹ ಪಾವತಿ ಪ್ಲಾಟ್‌ಫಾರ್ಮ್‌ಗಳು ತಮ್ಮ ಸಿಸ್ಟಮ್‌ಗಳನ್ನು ಅಪ್‌ಗ್ರೇಡ್ ಮಾಡುವಂತೆ ಸೂಚಿಸಿತ್ತು.

    ಹಣ ವರ್ಗಾವಣೆ, ಪರಿಶೀಲನೆಗಳು ಮತ್ತು ರಿವರ್ಸಲ್‌ಗಳು ಸೇರಿದಂತೆ ಹಿಂದೆ ಸುಮಾರು 30 ಸೆಕೆಂಡು ತೆಗೆದುಕೊಳ್ಳುತ್ತಿದ್ದ ವಹಿವಾಟುಗಳನ್ನು ಈಗ 10 ರಿಂದ 15 ಸೆಕೆಂಡುಗಳ ಒಳಗೆ ಪೂರ್ಣ ಮಾಡಬಹುದು. ಇದನ್ನೂ ಓದಿ: Israel-Iran Conflict | ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

    ಇದರ ಜೊತೆ ಮೊಬೈಲ್ ಸಂಖ್ಯೆಗಳು ಅಥವಾ UPI ಐಡಿಗಳಂತಹ UPI ಹ್ಯಾಂಡಲ್‌ಗಳನ್ನು 10 ಸೆಕೆಂಡ್‌ಗಳಲ್ಲಿ ಪರಿಶೀಲಿಸಬಹುದು. ಇದು ಹೇಗೆಂದರೆ ನೀವು ಯಾವುದಾದರೂ ಅಂಗಡಿ ಹೋಗಿ ಪಾವತಿ ಮಾಡಬೇಕಾದರೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುತ್ತೀರಿ. ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಲು 30 ಸೆಕೆಂಡ್‌ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇನ್ನು ಮುಂದೆ 10 ಸೆಕೆಂಡ್‌ನಲ್ಲಿ ಸ್ಕ್ಯಾನ್‌ ಮಾಡಬಹುದು.

    ಬಹಳ ಮುಖ್ಯವಾಗಿ ಕೆಲವೊಮ್ಮೆ ನೆಟ್‌ವರ್ಕ್‌, ತಾಂತ್ರಿಕ ಕಾರಣಗಳಿಂದ ಕಳುಹಿಸಿದ ಹಣ ಸೆಂಡ್‌ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಸ್ಕ್ರೀನ್‌ನಲ್ಲಿ ʼfailedʼ ಅಂತ ತೋರಿಸುತ್ತಿರುತ್ತದೆ. ಈ ಸಿಸ್ಟಮ್ ಓವರ್‌ಲೋಡ್ ಅನ್ನು ತಪ್ಪಿಸಲು, NPCI ಪ್ರತಿ ಪಾವತಿ ಪೂರೈಕೆದಾರ ಅಥವಾ ಬ್ಯಾಂಕ್‌ಗೆ ವಹಿವಾಟಿನ ಸ್ಥಿತಿಯನ್ನು ಮೂರು ಬಾರಿ ಪರಿಶೀಲಿಸಲು ಅವಕಾಶ ನೀಡಿದೆ. ಅಂದರೆ ವಹಿವಾಟು ನಡೆಸಿದ ಎರಡು ಗಂಟೆಗಳ ಒಳಗೆ ಚೆಕ್‌ ಮಾಡಬೇಕಾಗುತ್ತದೆ. ಒಂದು ವೇಳೆ ಸೆಂಡ್‌ ಆಗದೇ ಇದ್ದರೆ ಮತ್ತೆ ಹಣವನ್ನು ಸೆಂಡ್‌ ಮಾಡಬಹುದು. ಇದನ್ನೂ ಓದಿ: ಸೌದಿ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ – ಟಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ, ಲಕ್ನೋದಲ್ಲಿ ತಪ್ಪಿದ ದುರಂತ

    ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಲು NPCI ಅಧಿಕೃತವಾಗಿ UPI ಗಾಗಿ ಪೀಕ್ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 9:30 ರವರೆಗೆ ಎಂದು ವ್ಯಾಖ್ಯಾನಿಸಿದೆ. ಈ ಹೊಸ ಬದಲಾವಣೆಯಿಂದ UPI ವ್ಯವಹಾರಗಳು ಬಹಳ ವೇಗವಾಗಿ ನಡೆಯಲಿದೆ ಎಂದು ಎನ್‌ಪಿಸಿಐ ತಿಳಿಸಿದೆ.

  • ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ

    ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಕೇಂದ್ರ ಹಣಕಾಸು ಇಲಾಖೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯು ಸಾರ್ವಜನಿಕರಿಗೆ ಅಪಾರ ಅನುಕೂಲ ಹಾಗೂ ಉತ್ಪಾದಕತೆ ಲಾಭವನ್ನು ತಂದು ಕೊಡುತ್ತಿದೆ. ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ತಿಳಿಸಿದೆ.

    ಕಳೆದ ವರ್ಷ ಡಿಜಿಟಲ್ ಪಾವತಿ ವ್ಯವಸ್ಥೆಗೆ ಸರ್ಕಾರ ಹಣಕಾಸಿನ ನೆರವನ್ನು ನೀಡಿದೆ. ಈ ಸಾಲಿನಲ್ಲೂ ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಉತ್ತೇಜಿಸಲು ಮತ್ತಷ್ಟು ನೆರವನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಕೇಜ್ರಿವಾಲ್ ಅವರೇ ದೆಹಲಿ ಮದ್ಯ ಅಕ್ರಮದ ಕಿಂಗ್‌ಪಿನ್, ಬಂಧನ ಹತ್ತಿರದಲ್ಲೇ ಇದೆ: ಬಿಜೆಪಿ

    ಸ್ಪಷ್ಟನೆ ನೀಡಿದ್ದು ಯಾಕೆ?
    ದೇಶದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಯುಪಿಐ ಪಾವತಿಗಳಿಗೆ ಆರ್‌ಬಿಐ ಶುಲ್ಕ ವಿಧಿಸಲಿದೆ ಎಂದು ವರದಿಯಾಗಿತ್ತು. ಕೆಲ ದಿನಗಳ ಹಿಂದೆ ಆರ್‌ಬಿಐ ಬಿಡುಗಡೆ ಮಾಡಿದ್ದ ಸಲಹಾ ಪತ್ರದಲ್ಲಿ ಯುಪಿಐ ಸೇರಿದಂತೆ ಆನ್‌ಲೈನ್‌ ವ್ಯವಸ್ಥೆಗಳ ಮೂಲಕ ನಡೆಸುವ ವಹಿವಾಟಿಗೆ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಸಲಹೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಯುಪಿಐ ವಹಿವಾಟಿಗೂ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿದ್ಯಾ ಎಂಬ ಪ್ರಶ್ನೆ ಎದ್ದಿತ್ತು.

    ಎಷ್ಟು ವಹಿವಾಟು ನಡೆಯುತ್ತಿದೆ?
    ಪ್ರತಿ ತಿಂಗಳು ಡಿಜಿಟಲ್‌ ಪಾವತಿ ಮೂಲಕ ನಡೆಯುವ ವ್ಯವಹಾರ ಹೆಚ್ಚಾಗುತ್ತಿದೆ. ಜೂನ್‌ ತಿಂಗಳಿನಲ್ಲಿ 5.86 ಶತಕೋಟಿ ವ್ಯವಹಾರ ನಡೆದರೆ ಜುಲೈನಲ್ಲಿ 6.28 ಶತಕೋಟಿ ವ್ಯವಹಾರ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ಸ್ಕ್ರೀನ್ ಶಾಟ್ ತೋರ್ಸಿ ಹಾಕ್ತಾರೆ ಟೋಪಿ – ಫೋನ್ ಪೇ, ಗೂಗಲ್ ಪೇ ಬಳಸುವವರೇ ಹುಷಾರ್

    ಸ್ಕ್ರೀನ್ ಶಾಟ್ ತೋರ್ಸಿ ಹಾಕ್ತಾರೆ ಟೋಪಿ – ಫೋನ್ ಪೇ, ಗೂಗಲ್ ಪೇ ಬಳಸುವವರೇ ಹುಷಾರ್

    ಚಿಕ್ಕೋಡಿ: ನಿಮ್ಮ ಅಂಗಡಿಗಳಲ್ಲಿ ನೀವು ಫೋನ್ ಪೇ, ಗೂಗಲ್ ಪೇ ಯೂಸ್ ಮಾಡ್ತಿದ್ದಿರಾ? ಹಾಗಾದ್ರೆ ಈ ಸ್ಟೋರಿನಾ ನೀವು ಮಿಸ್ ಮಾಡದೇ ನೋಡಬೇಕು. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡೋರು ಹೇಗೆಲ್ಲ ಮೋಸ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣ ಖರೀದಿಸಿ ಬಂಗಾರದ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕಿದ ಗ್ಯಾಂಗ್ ಒಂದು ಈಗ ಪೊಲೀಸರ ಬಲೆಗೆ ಬಿದ್ದಿದೆ.

    ಡಿಜಿಟಲ್ ಇಂಡಿಯಾ ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ. ನಗದು ವ್ಯವಹಾರವನ್ನು ಕಡಿಮೆ ಮಾಡಬೇಕು. ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ. ಆದರೆ ಇದನ್ನೆ ದಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ 

    ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ ಮತ್ತು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂದೇ ರೀತಿಯ ಪ್ರಕರಣಗಳು ವರದಿಯಾಗಿದ್ದವು. ಇದನ್ನು ಬೆನ್ನಟ್ಟಿದ ಪೊಲೀಸರು ಈಗ ಗ್ಯಾಂಗ್‍ನ ಪತ್ತೆ ಮಾಡಿದ್ದಾರೆ. ಬಂಗಾರದ ಅಂಗಡಿಗಳನ್ನು ಟಾರ್ಗೆಟ್ ಮಾಡ್ತಿದ್ದ ಖದೀಮರ ತಂಡ ಮೊದಲು ಒಂದು ತೊಲ ಬಂಗಾರ(10 ಗ್ರಾಂ) ಖರೀದಿ ಮಾಡಿ ಅದರ ಸಂಪೂರ್ಣ ಅಮೌಂಟ್ ಫೋನ್ ಪೇ ಮೂಲಕ ಸಂದಾಯ ಮಾಡಿ ಅವರ ವಿಶ್ವಾಸ ಗಳಿಸಿ ನಂತರ ಅದೇ ಅಂಗಡಿಗಳಲ್ಲಿ ಹೆಚ್ಚು ಬಂಗಾರ ಖರೀದಿ ಮಾಡುತ್ತಾರೆ.

    ಹಣ ಸಂದಾಯ ಮಾಡದೇ ಅಷ್ಟೇ ಅಮೌಂಟ್ ಸ್ಕ್ರೀನ್ ಶಾಟ್‌ನ್ನು ಮಾಲೀಕರಿಗೆ ತೋರಿಸಿ ಮಕ್ಮಲ್ ಟೋಪಿ ಹಾಕಿ ಅಲ್ಲಿಂದ ಪರಾರಿಯಾಗುತ್ತಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಠಾಣೆ, ರಾಯಭಾಗ ಠಾಣೆ ಮತ್ತು ಹುಕ್ಕೇರಿ ಠಾಣೆಗಳಲ್ಲಿ ಈಗ ಬಂಧಿತರಾಗಿರುವ ಆರೋಪಿಗಳ ಮೇಲೆ 8 ಪ್ರಕರಣ ದಾಖಲಾಗಿದ್ದವು.

    ಕಾರ್ಯಾಚರಣೆ ನಡೆಸಿರುವ ಪೊಲೀಸರು ಮಹಾರಾಷ್ಟ್ರ ಮೂಲದ ಹಾಗೂ ಕರ್ನಾಟಕದ ಕಾಗವಾಡ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 22 ಲಕ್ಷ ರೂಪಾಯಿ ಮೌಲ್ಯದ 421 ಗ್ರಾಂ. ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಕಾರಣವಿದೆ: ಅಮಿತ್ ಶಾ

    ಬಂಗಾರ ಖರೀದಿಸಿ ಹಣ ಜಮೆ ಮಾಡಿದ ಸ್ಕ್ರೀನ್ ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕುವ ಜನರ ಬಗ್ಗೆ ಎಚ್ಚರವಾಗಿರಿ. ಹಣ ಜಮೆ ಆಗಿದ್ದನ್ನು ಕನ್ಫರ್ಮ್ ಮಾಡಿಕೊಂಡು ವ್ಯವಹಾರ ಮಾಡಿ ಅಂತ ಎಸ್‍ಪಿ ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫೋನ್ ಪೇ ಮೂಲಕ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ

    ಫೋನ್ ಪೇ ಮೂಲಕ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ

    ಬೆಳಗಾವಿ: ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್‌ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದವರು. ಬೆಳಗಾವಿಯ ನಿವಾಸಿ ರೋಹಿತ್ ರಾಜು ಎಂಬಾತ ಕಳೆದ ಮೂರು ವರ್ಷದಿಂದ ಸುನೀಲ್ ಶಿಂಧೆಯ ಪೆಟ್ರೋಲ್ ಬಂಕ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಲ್ಲಿ ಮಾಲೀಕರಿಗೆ 44 ಲಕ್ಷ ರೂ. ಹಣವನ್ನು ಫೋನ್ ಪೇ ಮೂಲಕ ವಂಚನೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು

    ಪೆಟ್ರೋಲ್ ಬಂಕ್‌ಗಳಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ಜನ ಪೇಮೆಂಟ್ ಮಾಡುತ್ತಿದ್ದಾರೆ. ವ್ಯಾಪಾರಸ್ಥರಿಗೆ ಅಂತಾ ಮಾತ್ರ ಈ ಫೋನ್ ಪೇ ಆ್ಯಪ್ ನವರು ಫಂಡ್ ರಿಟರ್ನ್ ಅನ್ನೋ ಆಪ್ಷನ್ ಇಟ್ಟಿದ್ದಾರೆ. ಕೆಲವೊಮ್ಮೆ ವಾಹನ ಸವಾರರು ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಸಾವಿರ ರೂಪಾಯಿ ಫೋನ್ ಪೇ ಮಾಡ್ತಾರೆ. ಆಗ ಅವರಿಗೆ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ರೋಹಿತ್ ರಿಫಂಡ್ ಆಪ್ಷನ್ ಬಳಸಿಕೊಂಡು ನಿತ್ಯವೂ ತನ್ನ ನಂಬರ್‌ನಿಂದ ಪಂಪ್‍ನ ನಂಬರ್‌ಗೆ ಎಂಟು, ಹತ್ತು ಸಾವಿರ ಫೋನ್ ಪೇ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ. ಇದಾದ ಬಳಿಕ ರಾತ್ರಿ ಮನೆಗೆ ವಾಪಾಸ್ ಆಗುವಾಗ ಪಂಪ್‍ನ ನಂಬರ್‌ನಿಂದ ಮತ್ತೆ ತನ್ನ ಅಕೌಂಟ್‍ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಂಡು ಕಳೆದ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ.ಹಣವನ್ನು ಎಗರಿಸಿದ್ದಾನೆ.

    ಇತ್ತ ದಿನೇ ದಿನೇ ಲಾಸ್ ಆಗುವ ಕಾರಣಕ್ಕೆ ಕಂಗಾಲಾದ ಮಾಲೀಕ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ರೋಹಿತ್‍ನನ್ನು ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದ್ದು, ಈಗಾಗಲೇ ಆತನಿಂದ ಸುಮಾರು 28 ಲಕ್ಷ ರೂ.ಹಣವನ್ನು ವಸೂಲಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಚೈತ್ರಾ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ ಡಿಸಿ

  • PhonePe ಮೂಲಕ ಹಣವನ್ನು ಸ್ವೀಕರಿಸುತ್ತಾನೆ ಡಿಜಿಟಲ್ ಭಿಕ್ಷುಕ

    PhonePe ಮೂಲಕ ಹಣವನ್ನು ಸ್ವೀಕರಿಸುತ್ತಾನೆ ಡಿಜಿಟಲ್ ಭಿಕ್ಷುಕ

    ಬಿಹಾರ: ನಾವು ಡಿಜಿಟಲ್ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇಂದಿನ ದಿನಗಳಲ್ಲಿ ಹೆಚ್ಚಿನ ವ್ಯವಹಾರಗಳು ಆನ್‍ಲೈನ್ ಮೂಲಕವಾಗಿ ಆಗುತ್ತಿದೆ. ಸಾಂಕ್ರಾಮಿಕವು ನಮ್ಮ ಅನೇಕ ವಹಿವಾಟುಗಳನ್ನು ನಗದುರಹಿತವಾಗುವಂತೆ ಮಾಡಿತು. ಈ ಬದಲಾವಣೆಯನ್ನು ಅಳವಡಿಸಿಕೊಂಡ ಬಿಹಾರದ ಭಿಕ್ಷುಕ ಈಗ ಡಿಜಿಟಲ್ ಆಗಿ ಡಿಜಿಟಲ್ ಪಾವತಿಯನ್ನು ಸ್ವೀಕರಿಸುತ್ತಿದ್ದಾನೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಬೆತಿಯಾ ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಕೇಳುವ 40 ವರ್ಷದ ರಾಜು ಪಟೇಲ್, ತನ್ನ ಕುತ್ತಿಗೆಗೆ ಸ್ಕ್ಯಾನಿಂಗ್ ಫಲಕವನ್ನು ಹಾಕಿಕೊಂಡಿದ್ದಾರೆ. ಆನ್‍ಲೈನ್ ಮೂಲವಾಗಿ ಹಣವನ್ನು ವರ್ಗಾಹಿಸಿ ಭಿಕ್ಷೆ ನೀಡಿ ಎಂದು ಕೇಳುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ರೆ ಇಡೀ ರಾಜ್ಯದ ಜನರಿಗೆ ಹಿಜಬ್ ಹಾಕಿಸುತ್ತಾರೆ: ಸುನಿಲ್ ಕುಮಾರ್

    ಖಾಸಗಿ ವಾಹಿನಿ ಜೊತೆ ಮಾತನಾಡಿದ ರಾಜು ಪಟೇಲ್, ನಾನು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತೇನೆ. ನನ್ನ ಹೊಟ್ಟೆಯನ್ನು ತುಂಬಿಸಲು ಸಾಕು. ನಾನು ನನ್ನ ಬಾಲ್ಯದಿಂದಲೂ ಇಲ್ಲಿ ಭಿಕ್ಷೆ ಬೇಡುತ್ತಿದ್ದೆ ಆದರೆ ಈ ಡಿಜಿಟಲ್ ಯುಗದಲ್ಲಿ ಭಿಕ್ಷಾಟನೆಯ ವಿಧಾನವನ್ನು ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

    ಭಿಕ್ಷೆ ಬೇಡಿಕೊಂಡ ನಂತರ ನಾನು ನಿಲ್ದಾಣದಲ್ಲಿಯೇ ಮಲಗುತ್ತೇನೆ. ಜೀವನೋಪಾಯಕ್ಕೆ ಬೇರೆ ದಾರಿ ಕಾಣಲಿಲ್ಲ. ಅನೇಕ ಬಾರಿ, ಜನರು ತಮ್ಮ ಬಳಿ ಚಿಲ್ಲರೆ ಹಣವಿಲ್ಲ ಎಂದು ಭಿಕ್ಷೆ ನೀಡಲು ನಿರಾಕರಿಸುತ್ತಾರೆ. ಹೀಗಾಗಿ ಪೇ-ಫೋನ್‍ಗಳಂತಹ ಇ-ವ್ಯಾಲೆಟ್‍ಗಳ ಯುಗದಲ್ಲಿ ನಾವು ಹಣವನ್ನು ಕೈಯಲ್ಲಿಟ್ಟುಕೊಂಡು ಓಡಾಡುವುದಿಲ್ಲ ಎಂದು ಅನೇಕ ಪ್ರಯಾಣಿಕರು ಹೇಳಿದರು. ಈ ಕಾರಣದಿಂದಾಗಿ ನಾನು ಬ್ಯಾಂಕ್ ಖಾತೆ ಮತ್ತು ಇ-ವ್ಯಾಲೆಟ್‍ನ್ನು ತೆರೆದಿದ್ದೇನೆ. ಕೆಲವು ಕೈಯಲ್ಲಿ ಹಣ ನೀಡುತ್ತಾರೆ, ಇನ್ನೂ ಹಲವರು ಫೋನ್‌ಪೇ, ಗೂಗಲ್‌ಪೇ ಗಳನ್ನು ಬಳಸಿ ಹಣವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

    ಬ್ಯಾಂಕ್ ಖಾತೆ ತೆರೆಯಲು ಆಧಾರ್ ಮತ್ತು ಪ್ಯಾನ್ ಕಾರ್ಡ್ ಕೇಳಿದ್ದರು. ಎಲ್ಲಾ ದಾಖಲೆಗಳನ್ನು ಸಿದ್ಧಮಾಡಿಕೊಂಡು ಬೆತಿಯಾದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯಲ್ಲಿ ಖಾತೆಯನ್ನು ತೆರೆದೆ. ಸದ್ಯ ಬೆಟ್ಟಿಯಾ ರೈಲು ನಿಲ್ದಾಣದ ಸುತ್ತಮುತ್ತ ಡಿಜಿಟಲ್ ಭಿಕ್ಷೆ ಕೇಳುತ್ತೇನೆ ಎಂದು ಹೇಳಿದ್ದಾರೆ.