Tag: ಫೋನ್ ಟ್ಯಾಪ್

  • ಫೋನ್‌ ಟ್ಯಾಪ್‌ ಮಾಡಲು ಅವರೇನು ಭಯೋತ್ಪಾದಕರೇ – ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು

    ಫೋನ್‌ ಟ್ಯಾಪ್‌ ಮಾಡಲು ಅವರೇನು ಭಯೋತ್ಪಾದಕರೇ – ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಫೋನ್ ಟ್ಯಾಪ್ (Phone Tapping) ಮಾಡಲ್ಲ. ಮಾಡಲು ಅವರೇನು ಭಯೋತ್ಪಾದಕರೇ(Terrorist). ಅವರು ರಾಜಕೀಯ ನಾಯಕರು. ಅವರ ಫೋನ್‌ ಟ್ಯಾಪ್‌ (Phone Tapping) ಯಾಕೆ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪ್ರಶ್ನಿಸಿದ್ದಾರೆ.

    ನನ್ನ ಮತ್ತು ರೇವಣ್ಣನ (HD Revanna) ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂಬ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದಕರ ಫೋನನ್ನು ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು, ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಜ್ವಲ್‌ ತಪ್ಪು ಮಾಡದೇ ಇದ್ದರೆ ಜೆಡಿಎಸ್‌ನಿಂದ ಅಮಾನತು ಮಾಡಿದ್ದು ಯಾಕೆ : ಸಿಎಂ ಪ್ರಶ್ನೆ

    ಯಾರಿಗೂ ನಾನು ಏನೂ ಕೊಟ್ಟಿಲ್ಲ. ನಾನು ರಾಜಕಾರಣಿ ನನ್ನ ಭೇಟಿ ಮಾಡಲು ಬಿಜೆಪಿಯವರು ಸೇರಿ ನೂರಾರು ಜನ ಬರುತ್ತಾರೆ. ಬರುವ ಮೊದಲು ಸಮಯ ಕೇಳುತ್ತಾರೆ. ದೇವರಾಜೇಗೌಡ ಬಿಜೆಪಿಯವರೇ. ಅವರು ನನ್ನನ್ನು ಭೇಟಿ ಮಾಡಬೇಕು ಎಂದು ಕೇಳಿದ್ದರು. ಆದರೆ ನಾನು ಸಮಯ ಕೊಟ್ಟಿಲ್ಲ. ಅರ್ಧ ನಿಮಿಷವೂ ನಾನು ಮಾತನಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಇಲ್ಲ, ಕೊಲೆಗಡುಕ ರಾಜ್ಯ ಮಾಡಿದ್ದೇ ಸರ್ಕಾರದ ಸಾಧನೆ : ವಿಜಯೇಂದ್ರ ವಾಗ್ದಾಳಿ

    ಪೆನ್ ಡ್ರೈವ್‌ಗೂ ಸಂಬಂಧವಿಲ್ಲ:
    ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ಪಾತ್ರದ ಬಗ್ಗೆ ಆರೋಪ ಮಾಡಿರುವ ಕುರಿತು ಕೇಳಿದಾಗ, ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಹೆಸರನ್ನು ಪ್ರಸ್ತಾಪ ಮಾಡದಿದ್ದರೆ ಅವರಿಗೆಲ್ಲ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಸಹ ಈ ವಿಚಾರದಲ್ಲಿ ನೈತಿಕತೆಯ ಗಡಿ ಮೀರಬಾರದು. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

     

    ಯಾರ ಜೊತೆಯೂ ಮಾತನಾಡಿಲ್ಲ
    ಡಿ.ಕೆ.ಶಿವಕುಮಾರ್, ದೇವರಾಜೇಗೌಡ ಮತ್ತು ಶಿವರಾಮೇಗೌಡ ಅವರ ನಡುವಿನ ಸಂಭಾಷಣೆ ಆಡಿಯೋ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಯಾರ ಜೊತೆಯೂ ಮಾತನಾಡಬಾರದ್ದು ಮಾತನಾಡಿಲ್ಲ. ಯಾರಿಗೂ ನಾನು ಜಿಪಿಎ ಕೊಟ್ಟಿಲ್ಲ. ನಾನೊಬ್ಬ ರಾಜಕಾರಣಿ, ನನ್ನನ್ನು ಭೇಟಿ ಮಾಡಲು ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದ ಕಾರ್ಯಕರ್ತರೂ ಬರುತ್ತಾರೆ. ಅವರು ಬಿಜೆಪಿಯವರು, ನನ್ನ ಭೇಟಿಗೆ ಸಮಯ ಕೇಳಿದ್ದರು. ನಾನು ಕೊಡಲಿಲ್ಲ. ಅರ್ಧ ನಿಮಿಷವೂ ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ರಾಜಕೀಯ, ವ್ಯವಹಾರ ಪ್ರಜ್ಞೆ ಇದೆ. ಈ ವಿಚಾರದ ಗಂಭೀರತೆಯೂ ನನಗೆ ಅರ್ಥವಾಗುತ್ತದೆ ಎಂದು ತಿಳಿಸಿದರು.

    ಡಿ.ಕೆ.ಶಿವಕುಮಾರ್ ಜೈಲಿಗೆ ಹೋದಾಗ ನಾನು ಅವರ ತಾಯಿಯನ್ನು ಸಾಂತ್ವನ ಮಾಡಿದ್ದೆ, ಆದರೆ ಅವರು ನನ್ನ ತಂದೆಗೆ ನೋವು ನೀಡುವುದು ಸರಿಯೇ ಎಂದು ಕುಮಾರಸ್ವಾಮಿ ಹೇಳಿಕೆಗೆ, ನನಗೆ ಅವರ ಪರಿಸ್ಥಿತಿ ಬಗ್ಗೆ ಅನುಕಂಪವಿದೆ. ನಾನು ಈ ವಿಚಾರದಲ್ಲಿ ಯಾರ ಬಗ್ಗೆಯೂ ಅಂದೂ ಮಾತನಾಡಿಲ್ಲ, ಇಂದೂ ಮಾತನಾಡುವುದಿಲ್ಲ ಎಂದರು.

     

  • ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ನವದೆಹಲಿ: ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಲ್ಲಗೆಳೆದಿದ್ದಾರೆ.

    ಮಾರ್ಗರೇಟ್ ಆಳ್ವಾ ಅವರ ಫೋನ್ ಅನ್ನು ಯಾರು ಏಕೆ ಟ್ಯಾಪ್ ಮಾಡಬೇಕು? ಉಪರಾಷ್ಟ್ರಪತಿ ಚುನಾವಣೆಯಲ್ಲಿ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಆಳ್ವಾ ಅವರ ಫೋನ್ ಅನ್ನು ಟ್ಯಾಪ್ ಮಾಡುವ ಅಗತ್ಯತೆ ನಮಗಿಲ್ಲ. ಅಂಥಹ ಕೀಳು ಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ತಾಕತ್ತಿದ್ದರೆ ನನ್ನ ವಿಚಾರವನ್ನ ಯಾವುದೇ ನ್ಯಾಯಾಲಯಕ್ಕೆ ಹೋಗಿ ಗೆದ್ದು ತೋರಿಸಲಿ: ಈಶ್ವರಪ್ಪ ಸವಾಲ್

    ಕಾಂಗ್ರೆಸ್‍ನಿಂದ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಬಳಿಕ ಮಾರ್ಗರೇಟ್ ಆಳ್ವಾ ಅವರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಇಂದು ನನ್ನ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ಆಳ್ವಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಇಂದು ಬಿಜೆಪಿಯ ಕೆಲವು ಸ್ನೇಹಿತರೊಂದಿಗೆ ಮಾತನಾಡಿದೆ. ಆ ನಂತರ ನನ್ನ ಮೊಬೈಲ್‍ಗೆ ಎಲ್ಲಾ ಕರೆಗಳನ್ನು ಡೈವರ್ಟ್ ಮಾಡಲಾಗುತ್ತಿದೆ ಎಂದು ಮಾರ್ಗರೇಟ್ ಆಳ್ವಾ ಅವರು ಆರೋಪಿಸಿದ್ದರು. ನನ್ನ ಫೋನ್ ಟ್ಯಾಪ್ ಆಗಿದ್ದು, ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಫೋನ್ ಸರಿಮಾಡಿದರೆ, ಇಂದು ರಾತ್ರಿ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯಿಂದ ಯಾವುದೇ ಸಂಸದರನ್ನು ಕರೆಯುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಬಿಜೆಪಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದರು.

    ಆಳ್ವಾ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಪ್ರಹ್ಲಾದ್ ಜೋಶಿ ಅವರು, ಇದೊಂದು ಬಾಲಿಶ ಹೇಳಿಕೆ ಅಂತಾ ಲೇವಡಿ ಮಾಡಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಅದು ಎಲ್ಲರಿಗೂ ಈಗಾಗಲೇ ಗೊತ್ತಿರುವಂತದ್ದು. ಹೀಗಿರುವಾಗ ಯಾರಾದರೂ ಆಳ್ವಾ ಅವರ ಫೋನ್ ಅನ್ನು ಏಕೆ ಟ್ಯಾಪ್ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಮಾರ್ಗರೇಟ್ ಆಳ್ವಾ ಅವರು ಹಿರಿಯ ನಾಯಕಿ. ಈ ರೀತಿಯ ಹೇಳಿಕೆಗಳು ಚೈಲ್ಡಿಶ್ ಮನೋಭಾವವನ್ನು ತೋರಿಸುತ್ತವೆ. ಇಂಥಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ. ಆರೋಪಗಳನ್ನು ಮಾಡುವಾಗ ಕನಿಷ್ಠ ಆಲೋಚನೆ ಮಾಡಿ ಆರೋಪಿಸಲಿ. ಹುರುಳಿಲ್ಲದ, ಆಧಾರವಿಲ್ಲದ ಆರೋಪಗಳಿಗೆ ಅರ್ಥವಿಲ್ಲ ಎಂದು ಆಳ್ವಾ ಅವರಿಗೆ ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಚಿವ ಎಂಬಿ ಪಾಟೀಲ್ ಸೇರಿದಂತೆ 4 ಸಚಿವರ ಫೋನ್ ಕದ್ದಾಲಿಕೆ ಆಗಿದ್ಯಂತೆ – ಮೋದಿ ಮೇಲೆ ಕೈ ಪಡೆ ಅನುಮಾನ

    ಸಚಿವ ಎಂಬಿ ಪಾಟೀಲ್ ಸೇರಿದಂತೆ 4 ಸಚಿವರ ಫೋನ್ ಕದ್ದಾಲಿಕೆ ಆಗಿದ್ಯಂತೆ – ಮೋದಿ ಮೇಲೆ ಕೈ ಪಡೆ ಅನುಮಾನ

    ವಿಜಯಪುರ: ಐಟಿ ಅಧಿಕಾರಿಗಳು ನಮ್ಮ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದಾರೆಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

    ವಿಜಯಪುರದ ಭಲೇಶ್ವರದಲ್ಲಿ ಮಾತನಾಡಿದ ಪಾಟೀಲ್, ಐಟಿ ಅಧಿಕಾರಿಗಳು ಒಂದು ವರ್ಷದಿಂದ ನನ್ನ ಫೋನ್ ಟ್ಯಾಪ್ ಮಾಡಿದ್ದಾರೆ. ಅಲ್ಲದೆ ನನ್ನ ಪತ್ನಿ, ಪುತ್ರ ಹಾಗೂ ನನ್ನ ವ್ಯವಹಾರಗಳನ್ನು ನೋಡಿಕೊಳ್ಳುವ ವಕೀಲರು, ಅವ್ರ ಪತ್ನಿಯ ಫೋನ್ ಕರೆಗಳನ್ನು ಐಟಿ ಅಧಿಕಾರಿಗಳು ಟ್ಯಾಪ್ ಮಾಡುತ್ತಿದ್ದಾರೆ ಎಂದರು.

    ಇಂಧನ ಸಚಿವ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಮಹದೇವಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸೇರಿದಂತೆ ಬಹಳ ಜನರ ಮೊಬೈಲ್ ಟ್ಯಾಪ್ ಮಾಡಲಾಗ್ತಿದೆ. ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರ, ಐಟಿ ಇಲಾಖೆ ಅಥವಾ ಗೃಹ ಇಲಾಖೆ ಫೋನ್ ಟ್ಯಾಪ್ ಮಾಡ್ತಿದೆ ಎಂದರು.

    ಶೀಘ್ರದಲ್ಲೇ ಫೋನ್ ಟ್ಯಾಪಿಂಗ್ ಬಗ್ಗೆ ದೂರು ನೀಡುವುದಾಗಿ ತಿಳಿಸಿದರು. ಇನ್ನು ಯಾವ ರೀತಿ ಟ್ಯಾಪ್ ಮಾಡಲಾಗ್ತಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ತೋರಿಸ್ತೇನೆ ಎಂದು ಮಾಧ್ಯಮಗಳಿಗೆ ಸಚಿವ ಪಾಟೀಲ್ ಸ್ಪಷ್ಟಪಡಿಸಿದರು.