Tag: ಫೋನ್ ಕದ್ದಾಲಿಕೆ

  • ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೀನಿ: ಆರ್‌.ವಿ ದೇಶಪಾಂಡೆ

    ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೀನಿ: ಆರ್‌.ವಿ ದೇಶಪಾಂಡೆ

    – ಈಗ ಪ್ರತಿದಿನ ಫೋನ್‌ ಕದ್ದಾಲಿಕೆ ನಡೆಯುತ್ತಿದೆ: ಮಾಜಿ ಸಚಿವ ಬಾಂಬ್‌

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅನುಮತಿ ಕೊಟ್ಟರೆ ನಾನು ಸಿಎಂ ಆಗ್ತೀನಿ ಅಂತ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ವಿ ದೇಶಪಾಂಡೆ (RV Deshpande) ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ. ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು ಅಷ್ಟೇ. ಆದ್ರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ 2ನೇ ದಿನವೂ ಉತ್ತಮ ಸ್ಪಂದನೆ – ಸಂಜೆ 6 ಗಂಟೆವರೆಗೂ ಇರಲಿದೆ ಮೇಳ

    ನಾನು ಸಿದ್ದರಾಮಯ್ಯಗಿಂತ 2 ವರ್ಷ ದೊಡ್ಡವನು:
    ಈ ವೇಳೆ ಸಿಎಂ (Chief Minister) ಆಗುವ ಆಸೆ ಇದ್ಯಾ ಎಂಬ ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ದೇಶಪಾಂಡೆ, ನನಗೆ ಆಸೆ ಇದೆ. ನಿಮ್ಮಂಥ ಜನರಿಗೂ ಆಸೆ ಇರುತ್ತೆ. ಲೈಫ್‌ನಲ್ಲಿ ಗುರಿ ಮುಖ್ಯ. ನಾನು ಸಿದ್ದರಾಮಯ್ಯಗಿಂತ 2 ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು. ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ. 5 ವರ್ಷ ಸಿಎಂ ಆಗಿ ಅವರೇ ಇರ್ತಾರೆ. ಸದ್ಯಕ್ಕೆ ಬದಲಾವಣೆ ಚರ್ಚೆ ನಡೆದಿಲ್ಲ ಎಂದು ನುಡಿದಿದ್ದಾರೆ.

    ಸದ್ಯ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿಲ್ಲ. ನನಗೆ ಗೊತ್ತಿಲ್ಲದೆ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಪರಮೇಶ್ವರ ಹಾಗೂ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಇಲಾಖೆಗೆ ಸಂಬಂಧಪಟ್ಟ ಸಭೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

    ಪ್ರತಿದಿನ ಫೋನ್‌ ಕದ್ದಾಲಿಕೆ:
    ಇದೇ ವೇಳೆ ಫೋನ್‌ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್‌ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗೆಡೆ ಅವರು ರಾಜೀನಾಮೆ ನೀಡಿದ್ದರು. ಆದ್ರೆ ಈಗ ಪ್ರತಿದಿನವೂ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಈ ಹಿಂದೆ ಮೌಲ್ಯಾಧರಿತ ರಾಜಕಾರಣ ಮಾಡುತ್ತಿದ್ದರು. ಅದೇ ರೀತಿ ನಡೆದು ಕೊಳ್ಳುತ್ತಿದ್ದರು. ಈಗ ಮೌಲ್ಯಾಧಾರಿತ ರಾಜಕಾರಣವೇ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ ಮುಡಾ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಡಾ ವಿಚಾರದಲ್ಲಿ ಸಿಎಂ ಏನು ತಪ್ಪು ಮಾಡಿದ್ದಾರೆ? ಸಾವಿರಾರು ಕೋಟಿ ಹಗರಣ ಅಂತ ಹೇಳುತ್ತಿದ್ದಾರೆ. ಆರೋಪದ ಬಗ್ಗೆ ದಾಖಲೆ ಕೊಡಿ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನದ ವಾಶ್‍ರೂಮ್‍ನಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ – ತುರ್ತು ಭೂಸ್ಪರ್ಶ

  • HDK ಅಫಿಡವಿಟ್, ಅಶೋಕ್ ರೈಟಿಂಗ್‌ನಲ್ಲಿ ಕೊಡ್ಲಿ- ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ಟಾಂಗ್

    HDK ಅಫಿಡವಿಟ್, ಅಶೋಕ್ ರೈಟಿಂಗ್‌ನಲ್ಲಿ ಕೊಡ್ಲಿ- ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ಟಾಂಗ್

    ಬೆಂಗಳೂರು: ಫೋನ್ ಕದ್ದಾಲಿಕೆ ವಿಚಾರವಾಗಿ ಆರೋಪ ಮಾಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಮತ್ತು ಮಾಜಿ ಸಿಎಂ ಹೆಚ್ ಡಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು‌ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ (DK Shivakumar), ನಮ್ಮ ಹೋಮ್ ಮಿನಿಸ್ಟರ್ ಈಗಾಗಲೇ ಹೇಳಿದ್ದಾರೆ. ಫೋನ್ ಕದ್ದಾಲಿಕೆ ಬಗ್ಗೆ ಅಶೋಕ್ ರೈಟಿಂಗ್ ಅಲ್ಲಿ ಬರೆದುಕೊಡಲಿ. ಅವರು ಗೃಹ ಸಚಿವರು ಆಗಿದ್ದವರು, ಕೆಲವರು ಸಿಎಂ ಆಗಿದ್ದವರು. ಅವರ ಕಾಲದಲ್ಲಿ ಏನ್ ಆಗಿತ್ತು ಗೊತ್ತಿಲ್ಲವಾ..!? ಅವರ ಕಾಲದಲ್ಲಿ ಏನ್ ರಿಪೋರ್ಟ್ ಬಂದಿತ್ತು ಗೊತ್ತಿಲ್ಲವಾ..!? ಅಂತಾ ತಿರುಗೇಟು ‌ನೀಡಿದ್ರು.

    ಇದೇ ವೇಳೆ ಸಿಎಂ, ಡಿಸಿಎಂ ಸುತ್ತಮುತ್ತ ಇರೋರೇ ಮಾಹಿತಿ ಕೊಡ್ತಿದ್ದಾರೆ ಎಂಬ ಹೆಚ್ ಡಿಕೆ (HD Kumaraswamy) ಹೇಳಿಕೆಗೆ ಟಾಂಗ್ ಕೊಟ್ಟ ಡಿಕೆಶಿ, ಬಹಳ ಸಂತೋಷ, ಬಹಳ ಸಂತೋಷ. ಯಾರ್ಯಾರೋ ಮಾಹಿತಿ ಕೊಟ್ಟಿದ್ದಾರೆ. ಅವರು ಅಫಿಡವಿಟ್ ಫೈಲ್ ಮಾಡಲಿ ಎಂದು ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಡಿಕೆಶಿ ಮನೆಯಲ್ಲಿಯೇ ಪೆನ್‍ಡ್ರೈವ್ ಟ್ರಾನ್ಸ್‌ಫರ್: ಹೆಚ್‍ಡಿಕೆ ಹೊಸ ಬಾಂಬ್

  • ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

    ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

    ನವದೆಹಲಿ: ಕೇಂದ್ರ ಸರ್ಕಾರಕ್ಕೆ (Union Government) ಫೋನ್‌ ಕದ್ದಾಲಿಕೆ ಮಾಡುವ ಅವಶ್ಯಕತೆಯಿಲ್ಲ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಕೆಲ ಪ್ರತಿಪಕ್ಷ ನಾಯಕರಿಗೆ ಆಪಲ್‌ನಿಂದ (Apple) ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ ಎಂಬ ಆರೋಪವನ್ನ ತಳ್ಳಿಹಾಕಿದ್ದಾರೆ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು, ಅವರು ಅಧಿಕೃತವಾಗಿ ದೂರು ನೀಡಿದ್ರೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಹ್ಯಾಕರ್ಸ್‌ ಸಕ್ರೀಯವಾಗಿದ್ದಾರೆ: ಪ್ರತಿಪಕ್ಷಗಳು ದುರ್ಬಲ ಸ್ಥಿತಿಯನ್ನು ಎದುರಿಸುತ್ತಿವೆ, ಎಲ್ಲದರಲ್ಲೂ ಪಿತೂರಿಯನ್ನ ಹುಡುಕುತ್ತಿದ್ದಾರೆ. ಆಪಲ್‌ ಕಂಪನಿ ಸ್ವತಃ ಸ್ಪಷ್ಟಪಡಿಸಿದೆ. ಸುಮಾರು 150 ದೇಶಗಳ ವ್ಯಕ್ತಿಗಳಿಗೆ ನೋಟಿಫಿಕೇಶನ್‌ ಹೋಗಿದೆ. ಉಗಾಂಡದ ರಾಜಕೀಯ ನಾಯಕರ ಐಫೋನಿಗೆ ಈ ರೀತಿಯ ಎಚ್ಚರಿಕೆ ಸಂದೇಶ ಬಂದಿದೆ. ಈ ದಾಳಿಯನ್ನ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಶ್ವದಾದ್ಯಂತ ಹ್ಯಾಕರ್‌ಗಳು ಸಕ್ರಿಯರಾಗಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಪ್ರತಿಪಕ್ಷಗಳ ನಾಯಕರು ತಮ್ಮ ಆಂತರಿಕ ಕಚ್ಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪರಿಸ್ಥಿತಿ ಹೇಗಿದೆ ಎಂಬುದು ದೇಶದ ಜನರಿಗೆ ತಿಳಿದಿದೆ. ಮೊದಲು ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಫೋನ್‌ಗಳನ್ನು ಕದ್ದಾಲಿಕೆ ಮಾಡುವ ಅವಶ್ಯಕತೆಯೂ ಸರ್ಕಾರಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಏನಿದು ಆರೋಪ?
    ತಮ್ಮ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ, ಕೇಂದ್ರದಿಂದ ಫೋನ್‌ ಕದ್ದಾಲಿಕೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ವಿವಿಧ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ-ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿನ ಕೆಲವರಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್‌ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದು ಹೇಳಿದೆ.

    ಆಪಲ್‌ನಿಂದ ಬಂದ ಸಂದೇಶದಲ್ಲಿ ಏನಿತ್ತು?
    ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ. ಅವರು ನಿಮ್ಮ ಆಪಲ್ ಐಡಿಗೆ ಸಂಬಂಧಿಸಿದ ಐಫೋನ್‌ಗೆ ದೂರದಿಂದ ಕದ್ದಾಲಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಲ್‌ನ ಸಂದೇಶ ಹೇಳಿದೆ.

    ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶದಲ್ಲಿದೆ.

    ಆಪಲ್‌ ಪ್ರತಿಕ್ರಿಯೆ ಏನು ಹೇಳಿಕೆಯಲ್ಲಿ ಏನಿದೆ?
    ರಾಜ್ಯ ಪ್ರಾಯೋಜಿತ ದಾಳಿ ಕಾಲಾನಂತರದಲ್ಲಿ ವಿಕಸನಗೊಳ್ಳುತ್ತದೆ. ಈ ದಾಳಿಗಳನ್ನು ಪತ್ತೆಹಚ್ಚುವುದು ಕಷ್ಟ. ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಆಪಲ್‌ನ ಕೆಲವೊಂದು ಬೆದರಿಕೆ ಸೂಚನೆಗಳು ತಪ್ಪು ಅಲಾರಂಗಳಾಗಿರಬಹುದು. ಈ ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯಿದೆ. ಈ ದಾಳಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ನಾವು ಬೆದರಿಕೆ ಅಧಿಸೂಚನೆಗಳನ್ನು ನೀಡಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? – ಯಾವುದಕ್ಕೂ ಹೆದರಲ್ಲ: ರಾಗಾ ತಿರುಗೇಟು

    ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? – ಯಾವುದಕ್ಕೂ ಹೆದರಲ್ಲ: ರಾಗಾ ತಿರುಗೇಟು

    ನವದೆಹಲಿ: ಸರ್ಕಾರ ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? ನಮ್ಮ ಫೋನ್‌ಗಳನ್ನು ಎಷ್ಟು ಬೇಕಾದರೂ ಟ್ಯಾಪ್ (Phone Tapping) ಮಾಡಬಹುದು, ಸರ್ಕಾರದ ಪ್ರಯತ್ನಗಳಿಗೆ ನಾವು ಹೆದರುವುದಿಲ್ಲ ಎಂದು ಸಂಸದ ರಾಹುಲ್ ಗಾಂಧಿ (Rahul Gandhi) ತಿರುಗೇಟು ನೀಡಿದರು.

    ಕೇಂದ್ರ ಸರ್ಕಾರದಿಂದ ವಿಪಕ್ಷ ನಾಯಕರ ಫೋನ್‌ ಕದ್ದಾಲಿಕೆ ಆರೋಪದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ (Union Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಇಂತಹ ನಡೆ ವಿರುದ್ಧ ಬಹಳ ಕಡಿಮೆ ಜನರು ಹೋರಾಡುತ್ತಿದ್ದಾರೆ. ನೀವು ಎಷ್ಟು ಬೇಕಾದರೂ ಟ್ಯಾಪಿಂಗ್ ಮಾಡಬಹುದು, ನಾನು ಹೆದರುವುದಿಲ್ಲ, ಬೇಕಿದ್ದರೆ ನಾನೇ ನಿಮಗೆ ನನ್ನ ಫೋನ್‌ ಕೊಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ಸರ್ಕಾರವು ವಿಚಲಿತ ರಾಜಕೀಯದಲ್ಲಿ ತೊಡಗಿದೆ, ಈಗಿನ ಸರ್ಕಾರದ ಮುಖ್ಯಸ್ಥರು ಮರೆಮಾಚುತ್ತಿದ್ದ ಸತ್ಯ ಪ್ರತಿಪಕ್ಷಗಳಿಗೆ ಗೊತ್ತಾಗಿದೆ. ದೇಶದ ಜನತೆಗೆ ಪ್ರತಿಯೊಂದು ಸತ್ಯವೂ ಅರ್ಥವಾಗುತ್ತಿದೆ. ಸರ್ಕಾರದ ಟ್ಯಾಪಿಂಗ್ ಸಹ ಯಾವುದೇ ವ್ಯತ್ಯಾಸ ತೋರಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದೇಶ ಅನುಭವಿಸುತ್ತಿರುವ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಸುಳ್ಳು ಕನಸುಗಳೇ ಮಾರಾಟವಾಗುತ್ತಿವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮತೀಯ ದ್ವೇಷಕ್ಕೆ ಪ್ರಚೋದನೆ ಆರೋಪ – ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸ್‌

    ನಾವು ವಿರೋಧ ಪಕ್ಷದಲ್ಲಿದ್ದು ನಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿದ್ದೇವೆ. ಅಲ್ಲದೇ ಪ್ರಧಾನಿ ಮೋದಿಯವರ ಆತ್ಮ ಅದಾನಿಯಲ್ಲಿದೆ, ಅಧಿಕಾರ ಬೇರೆಯವರ ಕೈಯಲ್ಲಿದೆ, ಕೃಷಿ ಕ್ಷೇತ್ರ ಅದಾನಿ (Gautam Adani) ಕೈಯಲ್ಲಿದೆ, ಮೂಲಸೌಕರ್ಯ ಅವರ ಕೈಯಲ್ಲಿದೆ. ದೇಶದ ಆಸ್ತಿ ಮಾರಾಟವಾಗುತ್ತಿದೆ. ಇದರಿಂದ ದೇಶದ ಯುವಕರಿಗೆ ತೊಂದರೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

    ಈ ಹಿಂದೆ ಪ್ರಧಾನಿ ಮೋದಿ ಸರ್ಕಾರದಲ್ಲಿ ನಂ.1 ಮತ್ತು ಅಮಿತ್ ಶಾ (Amit Shah) 2ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಚಿತ್ರಣ ಬದಲಾಗಿದೆ, ಸರ್ಕಾರದಲ್ಲಿ ಅದಾನಿ ನಂಬರ್ 1, ಪಿಎಂ ಮೋದಿ 2 ಮತ್ತು ಅಮಿತ್ ಶಾ 3ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿಯವರಿಗೆ ಯಾರು ಕೆಲಸ ಕೊಡಲು ಹೊರಟಿದ್ದಾರೆ ಎಂಬ ಸತ್ಯ ಸಾರ್ವಜನಿಕರಿಗೆ ಅರ್ಥವಾಗುತ್ತದೆ. ಕೃಷಿ ಕ್ಷೇತ್ರ ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗಿದೆ, ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದಾದರೆ ಹ್ಯಾಕಿಂಗ್ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು.

    ಈಗಿನ ಕೇಂದ್ರ ಸರ್ಕಾರ ಸಾಮಾನ್ಯ ಜನರ ಸರ್ಕಾರವಲ್ಲ, ಈ ಸರ್ಕಾರದಲ್ಲಿ ಶ್ರೀಸಾಮಾನ್ಯರ ಕಡೆಗಣನೆ ಮತ್ತು ಶ್ರೀಮಂತರ ಗಣನೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸರ್ಕಾರವು ಕೆಲವು ಕೈಗಾರಿಕದ್ಯೊಮಿಗಳ ಮನೆಗಳಿಗೆ ಕೆಲಸ ಮಾಡುತ್ತದೆ. ಈ ಸರ್ಕಾರದ ಅಡಿಯಲ್ಲಿ ಹಣದುಬ್ಬರ ಉತ್ತುಂಗದಲ್ಲಿದೆ, ಜನರ ದೈನಂದಿನ ಅಗತ್ಯಗಳನ್ನು ಪೂರೈಸಲು ಅವರ ಜೇಬಿನಲ್ಲಿ ಹಣವಿಲ್ಲ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಅಷ್ಟೇ ಅಲ್ಲದೇ ದೇಶೀಯ ರಂಗದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್

    ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್

    – ಗಂಭೀರ ಆರೋಪ ಮಾಡಿದ ಶಾಸಕ
    – ಸ್ಪೀಕರ್, ಗೃಹ ಸಚಿವರಿಗೆ ದೂರು ನೀಡಿದ್ದೇನೆ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ತೀವ್ರ ಬೆಳವಣಿಗೆಯ ನಡುವೆಯೇ ಶಾಸಕ ಅರವಿಂದ್ ಬೆಲ್ಲದ್ ಅವರು ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರೋಪ ಮಾಡಿರುವ ಅವರು, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಇದರ ಬಗ್ಗೆ ನನಗೆ ಸಾಕಷ್ಟು ಕರೆ ಬಂದಿದೆ. ಕೆಲವು ದಿನದ ಹಿಂದೆ ಒಬ್ಬರು ಕಾಲ್ ಮಾಡಿ ನಾನು ಸ್ವಾಮಿ ಅಂದ್ರು, ಯಾವ ಸ್ವಾಮೀಜಿ ಅಂದರೆ ಯುವ ರಾಜಸ್ವಾಮೀಜಿ ಅಂದರು. ಬೇರೆ ನಂಬರ್ ನಿಂದ ಮತ್ತೆ ಕಾಲ್ ಮಾಡಿದರು ಎಂದು ತಿಳಿಸಿದರು.

    ನಾನು ಯುವರಾಜ ಸ್ವಾಮಿ ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ ಎಂದರು. ಈ ಕಾಲ್ ಹಿಂದೆ ಷಡ್ಯಂತ್ರ ಇದೆ. ನಮ್ಮ ತಂದೆ ಚಂದ್ರಕಾಂತ್ ಬೆಲ್ಲದ್ 5 ಬಾರಿ ಶಾಸಕರಾಗಿದ್ದರು. ಕಪ್ಪು ಚುಕ್ಕಿ ಇಲ್ಲದೆ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ನಾನು ಅದೇ ಮಾರ್ಗದಲ್ಲಿ ಹೋಗುತ್ತಿದ್ದೇನೆ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತೆ. ನನ್ನ ಫೋನ್ ಕೂಡ ಟ್ಯಾಪ್ ಆಗಿದೆ. ಈ ಸಂಬಂಧ ಸ್ಪೀಕರ್ ಹಾಗೂ ಗೃಹ ಸಚಿವರಿಗೆ ಡಿಜಿಗೆ ಪತ್ರ ಕೊಟ್ಟಿದ್ದೇನೆ ಎಂದು ಹೇಳುತ್ತಾ ಬೆಲ್ಲದ್ ಅವರು ಪತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಇದನ್ನೂ ಓದಿ: ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ಜೈಲಿನಲ್ಲಿದ್ದ ಮನುಷ್ಯನಿಗೆ ಫೋನ್ ಯಾರು ಕೊಟ್ಟರು. ಅದಕ್ಕೆ ತನಿಖೆ ಆಗಬೇಕು. ನಾನು ಎಲ್ಲೇ ಹೋದರು ಒಂದಷ್ಟು ಜನ ಬರ್ತಾರೆ ಅದು ಹೇಗೆ? ನಾನು ಎಲ್ಲಿ ಹೋಗ್ತೇನೆ ಏನು ಮಾಡ್ತೀನಿ ಅಂತ ವಾಚ್ ಮಾಡುತ್ತಿದ್ದಾರೆ. ನಾನು ಹೋಗೋದು ಬರೋದು ಗೊತ್ತಾಗುತ್ತೆ ಅಂದರೆ ನನ್ನ ಫೋನ್ ಟ್ಯಾಪ್ ಆಗಿದೆ ಅಂತ ಎಂದು ಆರೋಪಿಸಿದರು.

    ಈ ಬೆಳವಣಿಗೆ ನಂತರ ಹೀಗಾಗಿದೆ ಕಳೆದ 1 ತಿಂಗಳಿಂದ ಹೀಗಾಗುತ್ತಿದೆ. ಸರ್ಕಾರದ ಬಗ್ಗೆ ಮಾತಾಡಲ್ಲ ಟೆಕ್ನಾಲಜಿ ಬಂದಿದೆ ಸಾಕಷ್ಟು ಯಾರು ಟ್ಯಾಪ್ ಮಾಡ್ತಿದಾರೆ ಏನು ಅನ್ನೋದು ಸ್ಪೀಕರ್ ಹಾಗೂ ಗೃಹ ಸಚಿವರು ತನಿಖೆ ಮೂಲಕ ಪತ್ತೆಹಚ್ಚಬೇಕು ಎಂದು ಬೆಲ್ಲದ್ ಆಗ್ರಹಿಸಿದರು.

  • ಡಿಕೆಶಿ ಏನು ಕಡಿದು ಕಟ್ಟೆ ಹಾಕಿದ್ದಾರೆಂದು ಫೋನ್ ಕದ್ದಾಲಿಸಬೇಕು – ಈಶ್ವರಪ್ಪ

    ಡಿಕೆಶಿ ಏನು ಕಡಿದು ಕಟ್ಟೆ ಹಾಕಿದ್ದಾರೆಂದು ಫೋನ್ ಕದ್ದಾಲಿಸಬೇಕು – ಈಶ್ವರಪ್ಪ

    ಶಿವಮೊಗ್ಗ: ಸರ್ಕಾರ ತನ್ನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಅವರ ಫೋನ್ ಟ್ಯಾಪಿಂಗ್ ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ. ಡಿಕೆಶಿ ಈಗಾಗಲೇ ಮುಗಿದು ಹೋಗಿರುವ ಕಾಂಗ್ರೆಸ್‍ಗೆ ಬಂದು ಲೀಡರ್ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಪೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ. ಅವರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಪ್ರಶ್ನೆಯೇ ಉದ್ಬವವಾಗುವುದಿಲ್ಲ ಎಂದರು.

    ಸ್ವತಂತ್ರ ಭಾರತದಲ್ಲಿ ಈ ಹಿಂದೆ ಕಾಂಗ್ರೆಸ್ ಎಂದರೆ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ವೀರ ಸಾವರ್ಕರ್ ಹೆಸರು ನೆನಪಿಗೆ ಬರುತ್ತಿದ್ದವು. ಆದರೆ ಇಂದು ಕಾಂಗ್ರೆಸ್ ಎಂದಾಕ್ಷಣ ನೆನಪಿಗೆ ಬರುವುದು ಎರಡೇ ಹೆಸರು ಒಂದು ಸೋನಿಯಾ ಗಾಂಧಿ ಮತ್ತೊಂದು ರಾಹುಲ್ ಗಾಂಧಿ ಎಂದು ವ್ಯಂಗ್ಯವಾಡಿದರು.

    ಪ್ರಸ್ತುತ ಕಾಂಗ್ರೆಸ್ ಒಡೆದ ಕನ್ನಡಿಯಾಗಿ ಚೂರು ಚೂರಾಗಿದೆ. ಹೀಗಿರುವಾಗ ಅದನ್ನು ಒಟ್ಟಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷ ಎಂದ ಕೂಡಲೇ ಅದಕ್ಕೆ ತತ್ವ, ಸಿದ್ಧಾಂತ ಅತಿ ಮುಖ್ಯ. ಆದರೆ ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಾಯಕತ್ವ ಬೇಡ ಎಂದು 23 ಮಂದಿ ಪತ್ರ ಬರೆದಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿಯವರ ನಾಯಕತ್ವ ಬೇಕು ಎನ್ನುವಂತಹ ಕಾಲದಲ್ಲಿ ಕಾಂಗ್ರೆಸ್‍ಗೆ ಇಂತಹ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದರು.

    ಕಾಂಗ್ರೆಸ್ ಇಂದಲ್ಲ ನಾಳೆ ಮುಳುಗುವ ಹಡಗು. ಸ್ವತಂತ್ರ್ಯ ಬಂದಾಕ್ಷಣ ಕಾಂಗ್ರೆಸ್ ಅನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧಿಜೀಯವರು ಹೇಳಿದ್ದರು. ಆದರೆ ಅಧಿಕಾರಕ್ಕಾಗಿ ವಿಸರ್ಜನೆ ಮಾಡಲು ಮುಂದಾಗಲಿಲ್ಲ. ಆದರೆ ಇದೀಗ ಅದೇ ಕಾಂಗ್ರೆಸ್ ನಾಯಕತ್ವ ಮತ್ತು ಅಧ್ಯಕ್ಷಗಾದಿ ವಿಚಾರವಾಗಿ ಅಸಮಾಧಾನ ಉಂಟಾಗಿದೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ನಾಯಕತ್ವ ಇರಲಿ ಎಂದರೆ, ಡಿಕೆಶಿ ಸೋನಿಯಾ ಗಾಂಧಿ ನಾಯಕತ್ವ ಇರಲಿ ಎನ್ನುತ್ತಿದ್ದಾರೆ. ಇದರ ನಡುವೆ ವೀರಪ್ಪ ಮೊಯ್ಲಿ ಅವರು ಇವರಿಬ್ಬರ ನಾಯಕತ್ವ ಬೇಡ ಎನ್ನುತ್ತಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೊಗಳಿದರೆ ಸ್ಥಾನಮಾನ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.

  • ಹೆಚ್‍ಡಿಕೆ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ: ಬಿ.ವೈ.ವಿಜಯೇಂದ್ರ

    ಹೆಚ್‍ಡಿಕೆ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ: ಬಿ.ವೈ.ವಿಜಯೇಂದ್ರ

    ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಗಲಭೆ ವಿಚಾರವಾಗಿ ಸಿಡಿ ಬಿಡುಗಡೆ ಮಾಡಿ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ ಎಂದು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

    ಹಾಸನದ ಅರಸೀಕೆರೆಯಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಕುಮಾರಸ್ವಾಮಿಯವರ ಸರ್ಕಾರದ ಅವಧಿಯಲ್ಲಿ ಪೋನ್ ಕದ್ದಾಲಿಕೆ ಆರೋಪಗಳು ಕೇಳಿ ಬಂದಿವೆ. ಹಾಗಾಗಿ ಮಾಜಿ ಸಿಎಂ ಅದನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ವಿರುದ್ಧ ಸೇಡು ತಿರಿಸಿಕೊಳ್ಳೊಕೆ ಹೊರಟಂತಿದೆ. ಈ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಸಂಪುಟ ವಿಸ್ತರಣೆಯನ್ನು ಸಂಕ್ರಾಂತಿ ನಂತರ ಮಾಡಲಾಗುತ್ತದೆ. ಪೌರತ್ವ ಕಾಯ್ದೆ ವಿರೋಧಿಸುವವರ ವಿರುದ್ಧ ಅಸಮಾಧಾನ ಹೊರಹಾಕಿದ ವಿಜಯೇಂದ್ರ, ಪೌರತ್ವದ ಕಾಯ್ದೆ ತಿದ್ದುಪಡಿ ವಿಷಯ ಇಟ್ಟುಕೊಂಡು ವಿರೋಧ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿವೆ. ಎಲ್ಲರು ಪೌರತ್ವ ಕಾಯ್ದೆ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದರು.

  • ಯಾರಿಗೂ ಪ್ರೈವಸಿ ಇಲ್ಲ, ಹೆಂಡತಿ ಜೊತೆ ಮಾತಾಡ್ಬೇಕಾದ್ರೂ ಎಚ್ಚರಿಕೆಯಿಂದಿರಬೇಕು: ರಾಜುಗೌಡ

    ಯಾರಿಗೂ ಪ್ರೈವಸಿ ಇಲ್ಲ, ಹೆಂಡತಿ ಜೊತೆ ಮಾತಾಡ್ಬೇಕಾದ್ರೂ ಎಚ್ಚರಿಕೆಯಿಂದಿರಬೇಕು: ರಾಜುಗೌಡ

    – ಜನಪ್ರಿಯತೆಗೆ ಎಲ್ಲಿ, ಏನು ಬೇಕಾದ್ರೂ ರೆಕಾರ್ಡ್ ಮಾಡಿ ಲೀಕ್ ಮಾಡ್ತಾರೆ

    ಯಾದಗಿರಿ: ವಾಟ್ಸಪ್, ಫೇಸ್‌ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹೆಂಡತಿ ಜೊತೆ ಮಾತನಾಡಬೇಕಾದರೂ ಎಚ್ಚರಿಕೆಯಿಂದ ಮಾತನಾಡಬೇಕಾದ ಪರಿಸ್ಥಿತಿ ಇದೆ. ನಮ್ಮವರೇ ಆಡಿಯೋ ರಿಲೀಸ್ ಮಾಡಿದ್ದಾರೆ ಎಂದು ಬಿಎಸ್‌ವೈ ಆಡಿಯೋ ಪ್ರಕರಣದ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಾಜುಗೌಡ ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಸಿದರು. ಈಗ ಹೆಂಡತಿ ಜೊತೆ ಮಾತನಾಡುವಾಗಲು ಎಚ್ಚರಿಕೆಯಿಂದ ಇರಬೇಕಾಗಿದೆ. ವಾಟ್ಸಪ್, ಫೇಸ್‌ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹಾಗೆಯೇ ರಾಜಕೀಯ ಪಕ್ಷದ ನಾಯಕರಿಗೆ ಅವರ ಮನದಾಳದ ಮಾತು ಹೇಳಲು ಪ್ರೈವಸಿ ಇಲ್ಲ. ಸ್ವಲ್ಪ ಜನಪ್ರಿಯತೆ ಗಳಿಸಲು ಎಲ್ಲಿಬೇಕಾದರೂ, ಏನು ಬೇಕಾದರೂ ರೆಕಾರ್ಡ್ ಮಾಡಿ ಲೀಕ್ ಮಾಡುತ್ತಾರೆ. ಬಿಜೆಪಿ ಅವರು ಮಾತ್ರ ಸಭೆಯಲ್ಲಿದ್ದಿದ್ದು, ಹೀಗಾಗಿ ನಮ್ಮವರೇ ಯಾರೋ ಬಿಎಸ್‌ವೈ ಆಡಿಯೋ ಲೀಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಸನ್ನಾನಂದಪುರಿ ಸ್ವಾಮಿಜಿ ಫೋನ್ ಕದ್ದಾಲಿಕೆ ನಡೆದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಭಯೋತ್ಪಾದಕರು, ನಕ್ಸಲರ ಫೋನ್ ಟ್ಯಾಪ್ ಮಾಡಬೇಕು. ಆದರೆ ಎಚ್‌ಡಿಕೆ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ರಾಜಕೀಯ, ಸ್ವಾರ್ಥಕ್ಕಾಗಿ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

    ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಬಿಐ ತನೆಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ. ಕುಮಾರಸ್ವಾಮಿ ಅವರು ತಮ್ಮ ಸಮುದಾಯದ ಗುರುಗಳ ಫೋನನ್ನೇ ಕದ್ದಾಲಿಕೆ ಮಾಡಿದ್ದಾರೆ. ಇನ್ನು ಬೇರೆ ಸಮುದಾಯದ ಸ್ವಾಮಿಗಳ ಫೋನ್ ಟ್ಯಾಪ್ ಮಾಡದೆ ಇರುತ್ತಾರಾ ಎಂದು ಪ್ರಶ್ನೆ ಹಾಕಿದ್ದಾರೆ. ಹಾಗೆಯೇ ಕುಮಾರಸ್ವಾಮಿ ರಾಜಕೀಯ ಮಾಡಲಿ, ಆದರೆ ಕದ್ದಾಲಿಕೆ ಮಾಡಿದ್ದು ಸರಿಯಲ್ಲ. ಫೋನ್ ಕದ್ದಾಲಿಕೆ ಮಾಡಿದರೂ ಕುಮಾರಸ್ವಾಮಿ ಸರ್ಕಾರ ಉಳಿಯಲಿಲ್ಲ. ಅವರು ಜನರ ಹೃದಯ, ಶಾಸಕರ ಹೃದಯ ಗೆದ್ದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ಫೋನ್ ಟ್ಯಾಪ್ ಮಾಡುವ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡಬೇಕಿತ್ತು ಎಂದು ಕಾಲೆಳೆದಿದರು.

  • ಪ್ರವಾಹ ಪರಿಹಾರ ಪಡೆಯದ ಸಂತ್ರಸ್ತರು ದಡ್ಡರು- ಸಂಸದ ಬಸವರಾಜು

    ಪ್ರವಾಹ ಪರಿಹಾರ ಪಡೆಯದ ಸಂತ್ರಸ್ತರು ದಡ್ಡರು- ಸಂಸದ ಬಸವರಾಜು

    ತುಮಕೂರು: ನೆರೆ ಪರಿಹಾರಕ್ಕಾಗಿ ಸಂತ್ರಸ್ತರೇ ಮುಂದೆ ಬರುತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಸದ ಸಂಸದ ಜಿ.ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಲ್ಲಿ ಮೂರು ವರ್ಗಗಳಿವೆ. ಇಂಟೆಲೆಕ್ಚುವಲ್(ಬೌದ್ಧಿಕ), ವಿದ್ಯಾವಂತರು ಮತ್ತು ದಡ್ಡರು. ಈ ದಡ್ಡರಿಗೆ ಏನೂ ಗೊತ್ತಿರಲ್ಲ. ಅವರಿಗೆ ಯಾರೂ ಗೈಡ್ ಮಾಡಲ್ಲ. ಅಂತವರು ಪರಿಹಾರ ಪಡೆಯಲು ಬರುತ್ತಿಲ್ಲ. ಅವರನ್ನು ನಾವೇ ಕರೆದುಕೊಂಡು ಬಂದು ಅರ್ಜಿ ಹಾಕಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿದೆ ಎಂದು ಸಂಸದರು ತಿಳಿಸಿದ್ದಾರೆ.

    ಕೇಂದ್ರದಿಂದ ನೆರೆಪರಿಹಾರ ಬಂದಿರೋದು ಪ್ರಾಥಮಿಕ ಹಂತ ಅಷ್ಟೇ. ಮುಂದಿನ ದಿನದಲ್ಲಿ ಹೆಚ್ಚಿನ ಪರಿಹಾರ ಬರಲಿದೆ. ಹಿಂದಿನ ಸರ್ಕಾರ ರಾಜ್ಯದ ಬೊಕ್ಕಸ ಖಾಲಿ ಮಾಡಿ ಹೋಗಿತ್ತು. ಈಗ ಯಡಿಯೂರಪ್ಪ ಬಂದ ಮೇಲೆ ಖಜಾನೆ ಸಮತೋಲನ ಕಾಪಾಡಿಕೊಂಡಿದೆ. ಅತ್ಯುತ್ತಮ ರೀತಿಯಲ್ಲಿ ತೆರಿಗೆ ಹಣ ಬರುತ್ತಿದೆ ಎಂದರು. ಇದನ್ನೂ ಓದಿ: ನೆರೆ ಪರಿಹಾರ ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ: ಮಾಧುಸ್ವಾಮಿ

    ಇದೇ ವೇಳೆ ಬಸವರಾಜು ಅವರನ್ನ ಕಳ್ಳ ಮತ್ತು ಅಯೋಗ್ಯ ಎಂದು ಕರೆದಿದ್ದ ಎಸ್.ಆರ್ ಶ್ರೀನಿವಾಸ್ ಮೇಲೆ ಹರಿಹಾಯ್ದ ಸಂಸದರು, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ತಲೆಕೆಟ್ಟಿದೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಹಾಗಾಗಿ ದೇವೇಗೌಡರಿಗೂ ಅವರು ಬೈತಾರೆ. ನಾನು ಅವರಷ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡಲ್ಲ. ನಾನು ಏನು ಸಹಾಯ ಮಾಡಿದ್ದೇನೆಂದು ಶ್ರೀನಿವಾಸ್ ಅವರ ಅಪ್ಪನಿಗೂ ಗೊತ್ತು. ಆಗ ಇವನು ಚಡ್ಡಿ ಹಾಕಿಕೊಂಡು ತಿರುಗುತ್ತಿದ್ದನು. ಆತ ನನ್ನ ಮುಂದೆ ಬಂದು ಮಾತನಾಡಲಿ ಎಂದು ಕಿಡಿಕಾರಿದರು.

    ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನ ಫೋನ್ ಕೂಡ ಕದ್ದಾಲಿಕೆ ಆಗಿದೆ. ಕುಮಾರಸ್ವಾಮಿ ಅವಧಿಯಲ್ಲಿ ಸ್ವಾಮೀಜಿ, ರಾಜಕಾರಣಿಗಳು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಹೀಗೆ ಎಲ್ಲರ ಎಲ್ಲಾ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಏನಕ್ಕೆ ಮಾಡಿದ್ದಾರೆ ಎಂದು ಅವರನ್ನೇ ಹೋಗಿ ಕೇಳಿ. ನಾನು ಎಚ್‍ಡಿಕೆ ತಂದೆಯ ಎದುರಾಳಿಯಾಗಿದ್ದಕ್ಕೆ ಲೋಕಸಭಾ ಎಲೆಕ್ಷನ್ ಸಮಯದಲ್ಲಿ ನನ್ನ ಫೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆ ಎಂದು ಸಿಡಿಮಿಡಿಗೊಂಡರು.

  • ಫೋನ್ ಕದ್ದಾಲಿಕೆ ತಪ್ಪು – ಗೃಹ ಸಚಿವ ಬೊಮ್ಮಾಯಿ

    ಫೋನ್ ಕದ್ದಾಲಿಕೆ ತಪ್ಪು – ಗೃಹ ಸಚಿವ ಬೊಮ್ಮಾಯಿ

    ಉಡುಪಿ: ರಾಜಕಾರಣಿಗಳು, ಪೊಲೀಸರು ಮಾತ್ರವಲ್ಲದೇ ಮಠಾಧೀಶರ ಫೋನ್ ಕೂಡ ಟ್ಯಾಪ್ ಮಾಡಲಾಗಿರುವ ವಿಚಾರವನ್ನು ಸಿಬಿಐ ವಿಚಾರಣೆಯ ವೇಳೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಬಾಯಿಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಆದೇಶವಿಲ್ಲದೆ ಫೋನ್ ಕದ್ದಾಲಿಕೆ ಮಾಡಿದ್ದರೆ ಅದು ತಪ್ಪು ಎಂದು ಹೇಳಿದ್ದಾರೆ.

    ತನಿಖೆಯ ಎಲ್ಲಾ ಮಾಹಿತಿಗಳು ಸಿಬಿಐ ಬಳಿ ಇರುತ್ತವೆ. ಅಧಿಕೃತವಾಗಿ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಗೃಹ ಸಚಿವನಾಗಿ ಊಹಾಪೋಹಕ್ಕೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಎಸ್‍ಐಟಿ ಮಾಡಿರುವ ತನಿಖೆಯ ಸಂಪೂರ್ಣ ವಿವರ ಸಿಬಿಐಗೆ ನೀಡಿದ್ದೇವೆ. ಆದರೆ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಮಾತುಕತೆಯ ಕದ್ದಾಲಿಕೆ ಮಾಡುವುದು ತಪ್ಪು ಎಂದಿದ್ದಾರೆ.

    ವಾರದೊಳಗೆ ಔರಾದ್ಕರ್ ವರದಿ ಜಾರಿ:
    ಪೊಲೀಸರ ವೇತನ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಖಂಡಿತವಾಗಿಯೂ ಔರಾದ್ಕರ್ ವರದಿ ಜಾರಿಯಾಗುತ್ತದೆ. ಔರಾದ್ಕರ್ ವರದಿಗೆ ಎರಡು ಹಂತದಲ್ಲಿ ಸಚಿವ ಸಂಪುಟ ಒಪ್ಪಿಗೆಯನ್ನೂ ಕೊಟ್ಟಿದೆ. ಜೈಲು ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಬಿಟ್ಟು ಹೋಗಿತ್ತು. ನಮ್ಮ ಕ್ಯಾಬಿನೆಟ್ ನಲ್ಲಿ ಅದಕ್ಕೂ ಒಪ್ಪಿಗೆ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆಯಿಂದ ಕೆಲವು ಸ್ಪಷ್ಟನೆ ಕೇಳಿದ್ದೇವೆ. ಒಂದು ವಾರದೊಳಗೆ ಸ್ಪಷ್ಟವಾದ ಸುತ್ತೋಲೆ ಹೊರಡಿಸ್ತೇವೆ ಎಂದು ಹೇಳಿದರು.

    ಮೊಸರಲ್ಲಿ ಕಲ್ಲು ಹುಡುಕುತ್ತಾರೆ:
    ಪ್ರಭಾವ ಬಳಸಿ ಉಪ ಚುನಾವಣೆ ಮುಂದೂಡಲಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಬೊಮ್ಮಾಯಿ, ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸುಪ್ರೀಂ ಆದೇಶದ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದರು.

    ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಬಸವರಾಜ್ ಬೊಮ್ಮಾಯಿ ಉಡುಪಿಗೆ ಆಗಮಿಸಿದ್ದು ಶಾಸಕರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

    ಅಲೋಕ್ ಕುಮಾರ್ ಹೇಳಿದ್ದೇನು?
    ಪ್ರಮುಖವಾಗಿ ‘ದೊಡ್ಡವರು’ ನೀಡಿರುವ ಸೂಚನೆ ಮೇರೆಗೆ ರಾಜಕಾರಣಿಗಳು, ಪೊಲೀಸರು ಹಾಗೂ ಮಠಾಧೀಶರ ಫೋನ್ ಕೂಡ ಟ್ಯಾಪಿಂಗ್ ಮಾಡಲಾಗಿದ್ದು, ಆದಿಚುಂಚನಗಿರಿ ಸ್ವಾಮೀಜಿ ಅವರ ಫೋನ್ ಕೂಡ ಟ್ಯಾಪ್ ಆಗಿರುವ ಮಾಹಿತಿ ವಿಚಾರಣೆ ವೇಳೆ ಲಭಿಸಿದೆ. ಈ ಮಾಹಿತಿಯನ್ನು ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಸ್ಯಾಂಡಲ್ ಸ್ಮಗ್ಲಿಂಗ್ ಸೇರಿದಂತೆ 20ಕ್ಕೂ ಹೆಚ್ಚು ಕೇಸಲ್ಲಿ ಭಾಗಿಯಾಗಿರುವ ವ್ಯಕ್ತಿಯ ಸಹಾಯ ಪಡೆಯಲಾಗಿತ್ತು. ಸ್ಯಾಂಡಲ್ ಸ್ಮಗ್ಲಿಂಗ್ ಕಳ್ಳನ ಗ್ಯಾಂಗ್ ಪತ್ತೆ ಹಚ್ಚುವ ನೆಪದಲ್ಲೇ ಟ್ಯಾಪಿಂಗ್ ನಡೆಸಲಾಗಿದೆ. ಶ್ರೀಗಳ ಫೋನ್ ಜೊತೆಗೆ ಮತ್ತಿಬ್ಬರ ಮೇಲೂ ಪೊಲೀಸರ ನಿಗಾ ವಹಿಸಿದ್ದರು. ನಿರ್ಮಲಾನಂದ ಶ್ರೀ ಜೊತೆ ಆಪ್ತರಾದ ಲಿಂಗೇಶ್, ರಮೇಶ್ ಅವರ ನಂಬರ್ ಗಳನ್ನು ಸರಿ ಸುಮಾರು 3 ತಿಂಗಳ ಕಾಲ ಟ್ಯಾಪ್ ಮಾಡಲಾಗಿತ್ತು ಎನ್ನಲಾಗಿದೆ.

    ಎಚ್‍ಡಿಕೆ ಹೇಳಿದ್ದು ಏನು?
    ಗುರುವಾರ ನಗರದ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವುದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೋರ್ಟ್ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂಕೃತವಾಗಿ ಹೇಳಿದೆ. ಸಾಂವಿಧಾನಿಕ ಸಂಸ್ಥೆಯ ಈ ನಡವಳಿಕೆ ಸರಿಯಲ್ಲ. ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದ್ದು ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿಕೊಂಡಿದೆ ಎಂದು ಹೇಳಿದ್ದರು.