Tag: ಫೋಟೋ ಶೂಟ್

  • ಸತಿ-ಪತಿಗಳಾದ್ರು ಹರಿಪ್ರಿಯಾ-ಸೃಜನ್ ಲೋಕೇಶ್!

    ಸತಿ-ಪತಿಗಳಾದ್ರು ಹರಿಪ್ರಿಯಾ-ಸೃಜನ್ ಲೋಕೇಶ್!

    ಬೆಂಗಳೂರು: ನಟ ಸೃಜನ್ ಲೋಕೇಶ್ ಸ್ವಲ್ಪ ದಿನದಿಂದ ಸಿನಿಮಾರಂಗದಿಂದ ದೂರವಿದ್ದು, ಈಗ ಮತ್ತೆ ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಸಿನಿಮಾದ ಮೂಲಕ ನಟರಾಗಿ ವಾಪಸ್ ಬಂದಿದ್ದಾರೆ. ಈ ಸಿನಿಮಾದಲ್ಲಿ ಸೃಜನ್ ಅವರಿಗೆ ನಟಿ ಹರಿಪ್ರಿಯಾ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ನಟ ಸೃಜನ್ ಮತ್ತು ನಟಿ ಹರಿಪ್ರಿಯಾ ಅವರು ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಇವರಿಬ್ಬರು ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್, ದರ್ಶನ್, ನಟಿ ತಾರಾ ಹಾಗೂ ಪ್ರಿಯಾಂಕ ಉಪೇಂದ್ರ ಅವರು ಭಾಗಿಯಾಗಿದ್ದರು.

    ಈ ಸಿನಿಮಾವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾಕ್ಕಾಗಿ ಸೃಜನ್ ಮತ್ತು ಹರಿಪ್ರಿಯಾ ಫೋಟೋ ಶೂಟ್ ಮಾಡಿಸಿದ್ದು, ಇವರಿಬ್ಬರು ಸತಿ-ಪತಿಗಳಂತೆ ಪೋಸ್ ಕೊಟ್ಟಿದ್ದಾರೆ.

    ತಮ್ಮ ಸಿನಿಮಾದ ಬಗ್ಗೆ ನಟಿ ಹರಿಪ್ರಿಯಾ ಅವರು ಕೂಡ ಟ್ವೀಟ್ ಮಾಡಿದ್ದು, ಇಂದು ನಾನು ಅಭಿನಯಿಸುತ್ತಿರುವ ‘ಬಿಚ್ಚುಗಾತ್ತಿ’ ಸಿನಿಮಾ ಮುಹೂರ್ತ ನಡೆಯಲಿದ್ದು, ಕಳೆದ ದಿನವಷ್ಟೆ ‘ಎಲ್ಲಿದ್ದ ಇಲ್ಲಿ ತನಕ’ ಸಿನಿಮಾ ಲಾಂಚ್ ಆಗಿದೆ. ಈ ಎರಡು ಸಿನಿಮಾದಲ್ಲಿ ನಾನು ತುಂಬಾ ಪ್ರಮುಖವಾದ ಪಾತ್ರವನ್ನು ಮಾಡುತ್ತಿದ್ದೇನೆ. ಆದ್ದರಿಂದ ನನಗೆ ತುಂಬಾ ಖುಷಿಯಾಗುತ್ತಿದೆ. ಇದೆಲ್ಲಾ ನಿಮ್ಮ ಪ್ರೀತಿ ಮತ್ತು ಶುಭಾಶಯಗಳು” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅರಮನೆ ಆವರಣದಲ್ಲಿ ಆರಂಭವಾಯ್ತು ಟೆಂಟ್ ಶಾಲೆ -ಇತ್ತ ಫಿರಂಗಿ ಪೂಜೆ

    ಅರಮನೆ ಆವರಣದಲ್ಲಿ ಆರಂಭವಾಯ್ತು ಟೆಂಟ್ ಶಾಲೆ -ಇತ್ತ ಫಿರಂಗಿ ಪೂಜೆ

    ಮೈಸೂರು: ಅರಮನೆ ಆವರಣದಲ್ಲಿ ಕಾಡಿನ ಮಕ್ಕಳಿಗೆ ಟೆಂಟ್ ಶಾಲೆ ಆರಂಭವಾಗಿದ್ದು, ಇನ್ನೊಂಡೆ ಫಿರಂಗಿ ತಾಲೀಮಿಗಾಗಿ ಅರಮನೆಯಲ್ಲಿ ಫಿರಂಗಿ ಪೂಜೆ ನಡೆದಿದೆ.

    ಗಜಪಡೆಯ ಜೊತೆ ಇರುವ ಕಾಡಿನ ಜನರ ಮಕ್ಕಳಿಗಾಗಿ ಈ ಟೆಂಟ್ ಶಾಲೆ ಆರಂಭಿಸಲಾಗಿದೆ. ಕಾಡಿನ ಮಕ್ಕಳು ಒಂದು ತಿಂಗಳು ಶಾಲೆಯಿಂದ ದೂರ ಇರಬಾರದೆಂದು ಎಂಬ ಉದ್ದೇಶದಿಂದ ಈ ಟೆಂಟ್ ಶಾಲೆ ತೆರೆಯಲಾಗಿದೆ. ಆನೆಗಳ ಕಾವಾಡಿ ಮತ್ತು ಮಾವುತರ 20 ಮಕ್ಕಳು ಈ ಶಾಲೆಗೆ ಬರುತ್ತಾರೆ ಎಂದು ಟೆಂಟ್ ಶಾಲೆ ಶಿಕ್ಷಕಿ ನೂರ್ ಫಾತಿಮಾ ಹೇಳಿದ್ದಾರೆ.

    ಇತ್ತ ದಸರಾ ಜಂಬೂ ಸವಾರಿ ದಿನ 21 ಕುಶಲತೋಪು ಸಿಡಿಸಲಾಗುತ್ತದೆ. ಆ ಸಿಡಿತದ ಸದ್ದಿಗೆ ಆನೆಗಳು ಬೆಚ್ಚದಂತೆ ಅವುಗಳಿಗೆ ಸದ್ದನ್ನು ಪರಿಚಯಿಸಲು ಫಿರಂಗಿ ತಾಲೀಮು ಮಾಡಲಾಗುತ್ತದೆ. ಇವತ್ತು ಅರಮನೆ ಮುಂಭಾಗದಲ್ಲಿನ ಫಿರಂಗಿಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಫಿರಂಗಿ ತಾಲೀಮಿಗೆ ಚಾಲನೆ ನೀಡಲಾಯಿತು.

    ಇಂದು ಬೆಳಗ್ಗೆ ಪ್ರವಾಸೋದ್ಯಮ ಇಲಾಖೆಯೂ, ದಸರಾ ಹಾಗೂ ರಾಜ್ಯದ ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಗಜಪಡೆಯ ಫೋಟೋ ಶೂಟ್ ಅನ್ನು ಅರಮನೆ ಮುಂಭಾಗ ನಡೆಸಿದೆ. ಆರು ಆನೆಗಳು ಫೋಟೋಗೆ ಫೋಸ್ ನೀಡಿದವು. ಈ ಆನೆಗಳ ಮುಂದೆ ಮಾಡೆಲ್‍ಗಳು, ಭರತನಾಟ್ಯ ಕಲಾವಿದೆಯರು ನಿಂತು ಕ್ಯಾಮಾರಾಗೆ ಫೋಸ್ ನೀಡಿದರು.

    ಒಂದು ಕಡೆ ದಸರಾ ಗಜಪಡೆಯ ತಾಲೀಮು ದಿನ ದಿನಕ್ಕೂ ಬಿರುಸುಗೊಳ್ಳುತ್ತಿದೆ. ಮತ್ತೊಂದು ಕಡೆ ದಸರಾ ಸಿದ್ಧತೆ ಕಾರ್ಯಗಳು ಚುರುಕುಗೊಳ್ಳುತ್ತಿವೆ. ಇದರಿಂದ ಮೈಸೂರಿನ ಅರಮನೆ ಅಂಗಳದಲ್ಲಿ ಈಗ ದಸರಾದ ವಾತಾವರಣ ನಿಧನವಾಗಿ ಕಳೆಕಟ್ಟುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಯಾಮೆರಾಗೆ ಪೋಸ್ ಕೊಟ್ಟ ಅರ್ಜುನ ಆಂಡ್ ಟೀಂ

    ಕ್ಯಾಮೆರಾಗೆ ಪೋಸ್ ಕೊಟ್ಟ ಅರ್ಜುನ ಆಂಡ್ ಟೀಂ

    ಮೈಸೂರು: ನಗರದ ಅರಮನೆಯಲ್ಲಿ ಈ ಹಿಂದೆ ವಿವಿಧ ರೀತಿಯ ಫೋಟೋ ಶೂಟ್ ಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ತುಂಬಾ ವಿಭಿನ್ನವಾದ ಫೋಟೋ ಶೂಟ್ ಅರಮನೆಯ ಮುಂಭಾಗದಲ್ಲಿ ನಡೆದಿದೆ.

    ಕ್ಯಾಪ್ಟನ್ ಅರ್ಜುನ ಮತ್ತು ತಂಡದ ಆನೆಗಳಿಗೆ ಅರಮನೆ ಮುಂಭಾಗ ವಿಭಿನ್ನ ರೀತಿಯ ಫೋಟೋ ಶೂಟ್ ನಡೆದಿದೆ. ಆನೆಗಳು ಕ್ಯಾಮೆರಾಕ್ಕೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿವೆ. ಸೊಂಡಿಲೆತ್ತಿ ಸಲ್ಯೂಟ್ ಮಾಡಿ ಫೋಟೋಗೆ ಪೋಸ್ ಕೊಟ್ಟಿವೆ. ಕೆಎಸ್‍ಟಿಡಿಸಿ ಬ್ರೌಚರ್ ಗಾಗಿ ಈ ಫೋಟೋ ಶೂಟ್ ನಡೆಸಲಾಗಿದೆ.

    ಕರ್ನಾಟಕ ಪ್ರವಾಸಿ ತಾಣಗಳು ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರ ಬಳಸಿ ಬ್ರೌಚರ್ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಮೊದಲ ಬಾರಿಗೆ ಅರಮನೆ ಮುಂದೆ ಗಜಪಡೆ ನಿಲ್ಲಿಸಿ ಫೋಟೋ ಶೂಟ್ ಮಾಡಲಾಯಿತು. ಫೋಟೋ ಶೂಟ್‍ನಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 6 ಆನೆಗಳು ಭಾಗಿಯಾಗಿದ್ದವು. ಆನೆಗಳ ಮುಂದೆ ಮಾಡೆಲ್ ಗಳು, ಯಕ್ಷಗಾನ ಕಲಾವಿದರು, ಭರತ ನಾಟ್ಯ ಕಲಾವಿದರನ್ನ ನಿಲ್ಲಿಸಿ ಫೋಟೋ ಶೂಟ್ ಮಾಡಲಾಯಿತು. ಇಷ್ಟು ದಿನ ಅರಮನೆ ಮುಂದೆ ನವ ಜೋಡಿಗಳು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರು. ಇದೀಗ ದಸರಾ ಗಜಪಡೆಯು ಫೋಟೋ ಶೂಟ್ ನಲ್ಲಿ ಭಾಗಿಯಾಗಿರುವುದು ತುಂಬಾ ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಿದ್ದರಾಮಯ್ಯ ಸೈಡ್ ಲೈನ್?

    ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಿದ್ದರಾಮಯ್ಯ ಸೈಡ್ ಲೈನ್?

    ಬೆಂಗಳೂರು: ಕರ್ನಾಟಕ ಚುನಾವಣೆಯ ಸಂಪೂರ್ಣ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೈಡ್ ಲೈನ್ ಆದ್ರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಫೋಟೋ ಶೂಟ್‍ನಿಂದ ಕೂಡ ಸಿದ್ದರಾಮಯ್ಯನವರು ದೂರ ಉಳಿದರು. ರಾಷ್ಟ್ರೀಯ ನಾಯಕರ ಫೋಟೋ ಶೂಟ್ ನಡೆದಾಗಲೂ ಬಾರದ ಕಾರಣ ಈಗ ಈ ಪ್ರಶ್ನೆ ಎದ್ದಿದೆ.

    ಚುನಾವಣೆಗೆ ಮೊದಲು ಸಿದ್ದರಾಮಯ್ಯ ಜೊತೆ ರಾಹುಲ್ ನಿಕಟ ಬಾಂಧವ್ಯ ಹೊಂದಿದ್ದರು. ಹಲವು ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತೇ ಫೈನಲ್ ಆಗುತಿತ್ತು. ಆದರೆ ಅತಂತ್ರ ಫಲಿತಾಂಶದ ಬಳಿಕ ಸಿದ್ದರಾಮಯ್ಯನವರಿಗೆ ಸರ್ಕಾರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.

    ಮೈತ್ರಿ ಸರ್ಕಾರ ಇರುವಾಗ ಸಿದ್ದರಾಮಯ್ಯಗೆ ಮಣೆ ಹಾಕಿದ್ರೆ ಕಷ್ಟ ಎನ್ನುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆಯಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

    ಬಹುಮತ ಸಾಬೀತುಪಡಿಸದೇ ಲಾಬಿ ಮಾಡಲೂ ಯಾರೂ ದೆಹಲಿಗೆ ಬರಬೇಡಿ ಅಂತ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಈ ನಡುವೆ ಎಚ್‍ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಭೇಟಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಮೈತ್ರಿ ಸರ್ಕಾರ ಬಂದಾಗ ರಾಜ್ಯ ಕಾಂಗ್ರೆಸ್ ನಾಯಕರನ್ನೇ ಹೈಕಮಾಂಡ್ ಕಡೆಗಣಿಸುತ್ತಿದೆಯಾ? ಸಿದ್ದರಾಮಯ್ಯ ಸಪ್ಪೆಯಾದ್ರಾ ಎಂಬ ಪ್ರಶ್ನೆ ಎದ್ದಿದೆ.

     

  • ಕನ್ನಡ ಸಿನಿಮಾ ಸೆಟ್ಟೇರುವ ಮೊದಲೇ ಬಾಲಿವುಡ್‍ಗೆ ಹಾರಿದ ಶೃತಿ ಪ್ರಕಾಶ್

    ಕನ್ನಡ ಸಿನಿಮಾ ಸೆಟ್ಟೇರುವ ಮೊದಲೇ ಬಾಲಿವುಡ್‍ಗೆ ಹಾರಿದ ಶೃತಿ ಪ್ರಕಾಶ್

    ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಶೃತಿ ಪ್ರಕಾಶ್‍ಗೆ ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬಂದಿದೆ. ಕನ್ನಡದಲ್ಲಿ ಸಿನಿಮಾವೊಂದಕ್ಕೆ ಸಹಿ ಹಾಕಿದ ಶೃತಿ ಆ ಸಿನಿಮಾ ಸೆಟ್ಟೇರುವ ಮೊದಲೇ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಕನ್ನಡದಲ್ಲಿ ಹೊಸಬರು ಸೇರಿ ಮಾಡುತ್ತಿರುವ ‘ಲಂಡನ್ ನಲ್ಲಿ ಲಂಬೋದರ’ ಚಿತ್ರದಲ್ಲಿ ಶೃತಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶೃತಿ ನಟಿಸುವ ಮೊದಲೇ ಬಾಲಿವುಡ್‍ಗೆ ಎಂಟ್ರಿ ನೀಡಿದ್ದಾರೆ. ಈ ಹಿಂದೆ ಶೃತಿ ಪ್ರಕಾಶ್ ಬಾಲಿವುಡ್‍ನಲ್ಲಿ ಸಾಕಷ್ಟು ಆಲ್ಬಂ ಹಾಡುಗಳನ್ನು ಹಾಡಿ, ಹಿಂದಿ ಕಿರುತರೆಯಲ್ಲಿ ಮಿಂಚಿದ್ದರು.

    ಈಗ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಶೃತಿ ಮಿಂಚುತ್ತಿದ್ದಾರೆ. ಕನ್ನಡದ ಮೊದಲ ಸಿನಿಮಾ ಪ್ರಾರಂಭವಾಗುತ್ತಲೇ ಬಾಲಿವುಡ್ ಚಿತ್ರ ಕೂಡ ಸೆಟ್ಟೇರುತ್ತಿದೆ ಎಂದು ಶೃತಿ ಟ್ವಿಟ್ಟರಿನಲ್ಲಿ ತಮ್ಮ ಬಾಲಿವುಡ್ ಚಿತ್ರದ ಬಗ್ಗೆ ಟ್ವೀಟ್ ಮಾಡಿ ವಿಚಾರ ತಿಳಿಸಿದ್ದಾರೆ.

    ಶೃತಿ ನಟಿಸುತ್ತಿರುವ ಈ ಚಿತ್ರಕ್ಕೆ ಗುಮ್ನಾಮ್ ಎಂದು ಹೆಸರಿಟ್ಟಿದ್ದು, ಈ ಸಿನಿಮಾದಲ್ಲಿ ಶೃತಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಶೃತಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

    ಲಂಡನ್‍ನಲ್ಲಿ ಲಂಬೋದರ ಚಿತ್ರದಲ್ಲಿ ನಟಿಸುತ್ತಿರುವ ಶೃತಿ ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅಭಿನಯಿಸಿ ಒಂದು ಹಾಡನ್ನು ಕೂಡ ಹಾಡಿದ್ದಾರೆ.

  • ಮಾದಕ ಬೆಡಗಿಯಾಗಿ ನ್ಯೂ ಫೋಟೋ ಶೂಟ್‍ನಲ್ಲಿ ದೀಪಿಕಾ ಕಂಡಿದ್ದು ಹೀಗೆ

    ಮಾದಕ ಬೆಡಗಿಯಾಗಿ ನ್ಯೂ ಫೋಟೋ ಶೂಟ್‍ನಲ್ಲಿ ದೀಪಿಕಾ ಕಂಡಿದ್ದು ಹೀಗೆ

    ಮುಂಬೈ: ಬಾಲಿವುಡ್ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿವೆ.

    ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಹೆಸರು ಮಾಡಿರುವ ದೀಪಿಕಾ ಸದ್ಯ ಬೇರೆ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಹೊಸ ಫೋಟೋಗಳಲ್ಲಿ ದೀಪಿಕಾ ಮಾದಕ ಬೆಡಗಿಯಾಗಿ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.

    ಸದ್ಯ ದೀಪಿಕಾ ಬಾಲಿವುಡ್ ನ ಬಹುನಿರೀಕ್ಷಿತ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರಣ್‍ವೀರ್ ಸಿಂಗ್, ಶಾಹೀದ್ ಕಪೂರ್ ಇಬ್ಬರೂ ನಟರು ದೀಪಿಕಾಗೆ ಜೊತೆಯಾಗಿದ್ದಾರೆ.

    https://www.instagram.com/p/BYdq4NABlcK/?hl=en&taken-by=deepikapadukone

    https://www.instagram.com/p/BYdq_R3BkuW/?hl=en&taken-by=deepikapadukone

    https://www.instagram.com/p/BYdrDmdh_3m/?hl=en&taken-by=deepikapadukone

    https://www.instagram.com/p/BYdrH6JB5Fq/?hl=en&taken-by=deepikapadukone

    https://www.instagram.com/p/BYdrMGsBYwS/?hl=en&taken-by=deepikapadukone

    https://www.instagram.com/p/BYdrO1vhpIO/?hl=en&taken-by=deepikapadukone

    https://www.instagram.com/p/BYdrR8chFW1/?hl=en&taken-by=deepikapadukone

    https://www.instagram.com/p/BYdsKTMh4Bl/?hl=en&taken-by=deepikapadukone