ಬಾಲಿವುಡ್ ನಟ ರಣ್ವೀರ್ ಸಿಂಗ್ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರು ಪೊಲೀಸ್ ಠಾಣೆಗೆ ಹಾಜರಾಗಿ, ತನಿಖೆ ಎದುರಿಸಬೇಕಿತ್ತು. ಆಗಸ್ಟ್ 22 ರಂದು ಮುಂಬೈ ಠಾಣೆಗೆ ಬರುವಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದರೆ, ರಣ್ವೀರ್ ಇವತ್ತು ಠಾಣೆಗೆ ಬಾರದೇ ತಪ್ಪಿಸಿಕೊಂಡಿದ್ದಾರೆ. ಇನ್ನೂ ಎರಡು ವಾರಗಳ ಸಮಯಾವಕಾಶವನ್ನು ಅವರು ಕೇಳಿದ್ದಾರೆ.
ಮುಂಬೈ ಎನ್.ಜಿಓ ಸಂಸ್ಥೆಯೊಂದು ರಣ್ವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದಕ್ಕೆ ದೂರು ದಾಖಲಿಸಿತ್ತು. ಇದೊಂದು ಮಹಿಳೆಯರಿಗೆ ಮಾಡುತ್ತಿರುವ ಅವಮಾನ ಎಂದು ದೂರಿನಲ್ಲಿ ದಾಖಲಾಗಿತ್ತು. ಈ ಸಂಬಂಧ ಆಗಸ್ಟ್ 12 ರಂದು ಮುಂಬೈ ಪೊಲೀಸರು ರಣ್ವೀರ್ ಸಿಂಗ್ ಗೆ ಸಮನ್ಸ್ ಜಾರಿ ಮಾಡಿದ್ದರು. ಠಾಣಾಧಿಕಾರಿಯ ಮುಂದೆ ಹಾಜರಾಗಬೇಕೆಂದು ತಿಳಿಸಿದ್ದರು. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!
ತಾವು ಸತತವಾಗಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಕಾರಣದಿಂದಾಗಿ ಪೊಲೀಸ್ ಸ್ಟೇಶನ್ ಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇನ್ನೂ ಎರಡು ವಾರಗಳ ಕಾಲ ಸಮಯ ಕೊಡಿ ಎಂದು ಠಾಣಾಧಿಕಾರಿಗೆ ಪತ್ರ ಬರೆದಿದ್ದಾರೆ ರಣ್ವೀರ್. ನಂತರದ ದಿನಗಳಲ್ಲಿ ಠಾಣೆಗೆ ಬರುವುದಾಗಿ ಅವರು ತಿಳಿಸಿದ್ದಾರೆ. ಈ ಫೋಟೋ ಶೂಟ್ ವೈರಲ್ ಆಗುತ್ತಿದ್ದಂತೆಯೇ ಇನ್ನೂ ಕೆಲವ ನಟರು ಇದೇ ಹಾದಿಯನ್ನು ತಿಳಿದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕರ್ನಾಟಕದ ಅಳಿಯ, ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಈ ಹಿಂದೆ ನಗ್ನ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳು ಸಖತ್ ವೈರಲ್ ಆಗಿದ್ದವು. ರಣವೀರ್ ಸಿಂಗ್ ಅವರೇ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿರುವಾಗ, ನಾವು ಏಕೆ ಹಾಗೆ ಮಾಡಬಾರದು ಎಂದು ಹಲವರು ಇದೇ ದಾರಿಯಲ್ಲೇ ನಡೆದರು. ಹಾಗಾಗಿ ರಣವೀರ್ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಿಸಲಾಯಿತು.
ರಣವೀರ್ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ ಮುಂಬೈ ಪೊಲೀಸರು ರಣವೀರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ರಣವೀರ್ ಅವರ ಆಪ್ತರ ಪ್ರಕಾರ, ಅವರು ಮುಂಬೈನಿಂದ ದೂರವಿದ್ದು, ಆಗಸ್ಟ್ 16ರ ನಂತರ ವಾಪಸ್ಸಾಗಲಿದ್ದಾರಂತೆ. ಆನಂತರವಷ್ಟೇ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರೈಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ
ಮುಂಬೈ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಚೆಂಬೂರು ಪೊಲೀಸ್ ಠಾಣೆಯಲ್ಲಿ ಜುಲೈ 26 ರಂದು ದೂರು ನೀಡಿ, ಎಫ್.ಐ.ಆರ್ ದಾಖಲಿಸಿದ್ದರು. ಇದು ಮಹಿಳೆಯರನ್ನು ಅಪಮಾನ ಮಾಡುವ ಉದ್ದೇಶದಿಂದ ಆಗಿರುವ ಫೋಟೋ ಶೂಟ್ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇವೆಲ್ಲವನ್ನೂ ಪರಿಗಣಿಸಿ, ರಣವೀರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಕೀವ್: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸುತ್ತಿದ್ದರೆ ಇತ್ತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪತ್ನಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಸೈನಿಕರು ಕಳೆದ ಫೆಬ್ರವರಿ ತಿಂಗಳಿಂದ ಯುದ್ಧ ಮಾಡುತ್ತಿದ್ದು, ಈಗಾಗಲೇ ಎರಡೂ ದೇಶಗಳ ಸಾವಿರಾರೂ ಸೈನಿಕರು ಮೃತಪಟ್ಟಿದ್ದಾರೆ. ಉಕ್ರೇನ್‍ನ ಕೀವ್ ಸೇರಿದಂತೆ ಬಹುತೇಕ ಪ್ರದೇಶಗಳಿಗೆ ರಷ್ಯಾ ಸೈನ್ಯ ದಾಳಿ ನಡೆಸಿ ಆಸ್ತಿ-ಪಾಸ್ತಿ ಹಾನಿಗೊಳಿಸಿದೆ. ಈ ನಡುವೆ ಇದೀಗ ಝೆಲೆನ್ಸ್ಕಿ ದಂಪತಿ ಸ್ಥಳೀಯ ಪತ್ರಿಕೆಯ ಮುಖಪುಟದ ವಿನ್ಯಾಸಕ್ಕಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್
ಝೆಲೆನ್ಸ್ಕಿ ದಂಪತಿ ಯುದ್ಧದ ನಡುವೆ ಯುದ್ಧೋಪಕರಣಗಳ ಬಳಿ ಮತ್ತು ಸೈನಿಕರ ನಡುವೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋಶೂಟ್ ಅನ್ನು ಖ್ಯಾತ ಛಾಯಾಗ್ರಾಹಕ ಅನ್ನಿ ಲೀಬೊವಿಟ್ಜ್ ಮಾಡಿದ್ದಾರೆ. ಫೋಟೋಶೂಟ್‍ನಲ್ಲಿ ಝೆಲೆನ್ಸ್ಕಿ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತು ವೀರನಂತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಿಲಿಟರಿ ಬಂಕರ್‌ಗಳಲ್ಲಿ ಬಳಸಲಾದ ಮರಳಿನ ಚೀಲಗಳನ್ನು ಹೊತ್ತೊಯ್ದಂತೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ – 50 ಕೋಟಿ ರೂ., 5 ಕೆ.ಜಿ ಚಿನ್ನ ಪತ್ತೆ
ಇನ್ನೊಂದೆಡೆ ಬ್ರಿಟನ್ ಉಕ್ರೇನ್‍ಗೆ ಭಾರೀ ಪ್ರಮಾಣದ ಮಿಲಿಟರಿ ನೆರವು ನೀಡಿ ನಾಗರಿಕರಿಗೆ ಆಶ್ರಯವನ್ನೂ ನೀಡಿತ್ತು. ಇದರಿಂದ ಉಕ್ರೇನ್‍ಗೆ ಸಹಾಯವಾಗಿತ್ತು. ಬ್ರಿಟನ್ ಇದುವರೆಗೆ ಸುಮಾರು 86,000 ಉಕ್ರೇನಿಯನ್ನರಿಗೆ ವೀಸಾಗಳನ್ನು ಒದಗಿಸಿದ್ದು, ಅದರಲ್ಲಿ ಸುಮಾರು 27,000 ಜನರು ಬ್ರಿಟನ್‍ಗೆ ತಲುಪಿದ್ದಾರೆ. ಯುದ್ಧಪೀಡಿತ ಉಕ್ರೇನ್‍ಗೆ ಬ್ರಿಟನ್ 1.3 ಶತಕೋಟಿ ಪೌಂಡ್ (12 ಸಾವಿರ ಕೋಟಿ ರೂ.) ಮಿಲಿಟರಿ ಸಹಾಯ ನೀಡುವುದಾಗಿ ಬ್ರಿಟನ್ ಭರವಸೆ ನೀಡಿತ್ತು. ಅದರಂತೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ. ಆದರೆ ಝೆಲೆನ್ಸ್ಕಿ ಮಾತ್ರ ಯುದ್ಧದ ನಡುವೆ ಈ ರೀತಿ ಫೋಟೋ ಶೂಟ್‍ನಲ್ಲಿ ಕಾಣಿಸಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್‌ಗಳ ಬಗ್ಗೆ ಕಾಮೆಂಟ್ ಹರಿದಾಡುತ್ತಿದೆ.
Live Tv
[brid partner=56869869 player=32851 video=960834 autoplay=true]
ಸಾರ್ವಜನಿಕವಾಗಿ ಸಿಲೆಬ್ರಿಟಿಗಳು ಹೇಗೆ ವರ್ತಿಸಬೇಕು ಎನ್ನುವ ಚರ್ಚೆ ಹಲವು ವರ್ಷಗಳಿಂದ ಆಗುತ್ತಲೇ ಇದೆ. ಆದರೆ, ಕೆಲ ಸಿಲಿಬ್ರಿಟಿಗಳು ಮಾತ್ರ ಯಾವುದೇ ಕಾರಣಕ್ಕೂ ಬದಲಾಗುವಂತೆ ಕಾಣುತ್ತಿಲ್ಲ. ಅದರಲ್ಲೂ ವಿವಾದದ ಮೂಲಕವೇ ಫೇಮಸ್ ಆಗಿರುವ ಪೂನಂ ಪಾಂಡೆ, ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡು ಪೊಲೀಸ್ ರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಅವರ ವಿರುದ್ಧ ದೂರು ದಾಖಲೆಯಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ
ಪೂನಂ ಪಾಂಡೆ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಈಗಲ್ಲವಾದರೂ, ಎರಡು ವರ್ಷಗಳ ಹಿಂದೆ ನಡೆದ ಘಟನೆಗೆ ಇದೀಗ ಗೋವಾ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಕೇಸ್ ನಲ್ಲಿ ಅನೇಕ ವ್ಯಕ್ತಿಗಳಿಂದ ಹೇಳಿಕೆಗಳನ್ನು ಪಡೆದು ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂನಂ ಮತ್ತು ಅವರ ಪತಿ ಸ್ಯಾಮ್ ಅವರನ್ನು ಬಂಧಿಸಿ, ಬಿಡುಗಡೆ ಮಾಡಿದ್ದರು ಗೋವಾ ಪೊಲೀಸರು. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?
2020ರಲ್ಲಿ ಪೂನಂ ಪಾಂಡೆ ಮತ್ತು ಪತಿ ಸ್ಯಾಂಡ್ ಬಾಂಬೆ ಇಬ್ಬರೂ ಚಾಲೋಲಿ ಡ್ಯಾಮ್ ಗೆ ಹೋಗಿದ್ದರು. ಅಲ್ಲಿ ಎಲ್ಲರೆದುರೇ ಬೆತ್ತಲೆ ಫೋಟೋ ಶೂಟ್ ಮಾಡಿದ್ದರು. ಅದನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅವರು ಅಶ್ಲೀಲವಾಗಿ ನಡೆದುಕೊಂಡಿದ್ದರಿಂದ ಕೇಸು ದಾಖಲಿಸಲಾಗಿತ್ತು.
ಸದ್ಯ ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ಜೊತೆಯಾಗಿಲ್ಲ ಇಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರೂ ದೂರ ದೂರವಾಗಿದ್ದಾರೆ. ಇಬ್ಬರೂ ದೂರ ಆಗಿರುವುದಕ್ಕೆ ಕಾರಣವನ್ನೂ ನೀಡಿದ್ದಾರೆ ಪೂನಂ. ಹಲವು ಕಡೆ ತಮ್ಮಿಬ್ಬರ ಮಧ್ಯ ಏನೆಲ್ಲ ಆಯಿತು, ತಾವೆಷ್ಟು ಹಿಂಸೆಯನ್ನು ಅನುಭವಿಸಿದ್ದೇನೆ ಎಂದೂ ಪೂನಂ ಹೇಳಿಕೊಂಡಿದ್ದಾರೆ.
ವಾಷಿಂಗ್ಟನ್: ಪ್ರತಿಯೊಬ್ಬರೂ ತಮ್ಮ ಮದುವೆಯು ತಮ್ಮ ಜೀವನದಲ್ಲಿ ಮರೆಯಲಾಗದ ದಿನಗಳಂತಿರಬೇಕು ಅಂತ ಬಯಸುತ್ತಾರೆ. ಕೆಲವರು ತಮ್ಮ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಅದ್ದೂರಿ ಪಾರ್ಟಿಗಳನ್ನು ನೀಡುವ ಮೂಲಕ ತಮ್ಮ ವಿವಾಹವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಅಮೆರಿಕದ ದಂಪತಿ ಒಂದು ಹೆಜ್ಜೆ ಮುಂದೆ ಹೋಗಿ ಮದುವೆಯಲ್ಲಿ ಭಾರೀ ಸಾಹಸವೊಂದನ್ನುಗೈದು ನೆಟ್ಟಿಗರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದಾರೆ.
ನವವಿವಾಹಿತ ದಂಪತಿ ಗೇಬ್ ಜೆಸ್ಸಾಪ್ ಮತ್ತು ಆಂಬಿರ್ ಬಾಂಬಿರ್ ದಂಪತಿ ತಮ್ಮ ಮದುವೆಯ ಆರತಕ್ಷತೆಯಿಂದ ನಿರ್ಗಮಿಸುವ ವೇಳೆ ಉದ್ದೇಶಪೂರ್ವಕವಾಗಿ ಕ್ಯಾಮೆರಾ ಮುಂದೆ ಬೆಂಕಿ ಹಚ್ಚಿಕೊಂಡು ತಮ್ಮ ಸಾಹಸವನ್ನು ಪ್ರದರ್ಶಿಸಿದ್ದಾರೆ. ಇಬ್ಬರು ವೃತ್ತಿಪರ ಹಾಲಿವುಡ್ ಸೆಟ್‍ಗಳಲ್ಲಿ ಸ್ಟಂಟ್ ಕಲಾವಿದರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಮೂರು ಮಕ್ಕಳ ತಾಯಿ, ನೂರಾರು ಕೋಟಿ ಒಡತಿ : ಜಸ್ಟ್ @ 40
ಈ ಕುರಿತು ವೀಡಿಯೋವನ್ನು ದಂಪತಿಯ ಛಾಯಾಗ್ರಾಹಕ ರಸ್ ಪೊವೆಲ್, ಅವರು ತಮ್ಮ ಇನ್‍ಸ್ಟಾಗ್ರಾಮ್ ಮತ್ತು ಟಿಕ್‍ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ವಧುವು ಬೆಂಕಿ ಹೊತ್ತಿಕೊಂಡಿರುವ ಪುಷ್ಪಗುಚ್ಚವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡಿರುವುದನ್ನು ಕಾಣಬಹುದು. ವಧು ಮತ್ತು ವರನ ಹಿಂಭಾಗದಲ್ಲಿ ಮೊದಲಿಗೆ ಪಟಾಕಿಗಳನ್ನು ಸಿಡಿಸಲಾಗುತ್ತದೆ. ನಂತರ ಇಬ್ಬರೂ ಬೆನ್ನಿಗೆ ಬೆಂಕಿ ಹಚ್ಚಿಕೊಂಡು, ಅತಿಥಿಗಳತ್ತ ಕೈ ಬೀಸುತ್ತಾ, ಓಡಲಾರಂಬಿಸುತ್ತಾರೆ. ಕೊನೆಗೆ ಇಬ್ಬರು ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ನಂತರ ಇಬ್ಬರು ವ್ಯಕ್ತಿಗಳು ಬೆಂಕಿಯನ್ನು ನಂದಿಸುತ್ತಾರೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು
ದಿನದಿಂದ ದಿನಕ್ಕೆ ಖ್ಯಾತ ನಟಿ ಸಮಂತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಪಾ ಸಿನಿಮಾ ರಿಲೀಸ್ ಆಗಿದ್ದೆ ತಡ, ಫೋಟೋ ಶೂಟ್ ಮೇಲೆ ಫೋಟೋ ಶೂಟ್ ಆಗುತ್ತಿವೆ. ವಿಶೇಷ ಕಾಸ್ಟ್ಯೂಮ್, ಹಾಟ್ ಲುಕ್ ಮತ್ತು ನಾನಾ ಭಾವ ಭಂಗಿಯಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅವರ ಫೋಟೋಗೆ ಫಿದಾ ಆಗಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
ಮ್ಯಾಗಿಝಿನ್ ವೊಂದರ ಫೋಟೋ ಶೂಟ್ ನಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಕಾಸ್ಟ್ಯೂಮ್ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೇ ಕಾಸ್ಟ್ಯೂಮ್ ಡಿಸೈನ್ ಕೂಡ ವಿಭಿನ್ನ ಮತ್ತು ಹೊಸದಾಗಿದೆ. ಹೀಗಾಗಿ ಅಭಿಮಾನಿಗಳು ಕಾಸ್ಟ್ಯೂಮ್ ಬಗ್ಗೆಯೂ ಹೊಗಳಿಕೆ ಶುರುವಾಗಿದೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
ಸಮಂತಾ ಈಗಾಗಲೇ ಹಲವು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಬಾಲಿವುಡ್ ನಲ್ಲೂ ಅವರು ಕಮಾಲ್ ಮಾಡುತ್ತಿದ್ದಾರೆ. ಇನ್ನಷ್ಟೇ ಅವರ ನಟನೆಯ ಯಶೋದಾ ಸಿನಿಮಾ ರಿಲೀಸ್ ಆಗಬೇಕಿದೆ. ಅಚ್ಚರಿಯ ಸಂಗತಿ ಅಂದರೆ, ಯಶೋದಾ ಸಿನಿಮಾ ರಿಲೀಸ್ ದಿನವೇ ಅವರ ಮಾಜಿ ಪತಿ ನಾಗಚೈತನ್ಯ ಅವರ ಹಿಂದಿ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.
ಶಿವರಾಜ್ ಕುಮಾರ್ ನಟನೆಯ ಮಾದೇಶ ಸಿನಿಮಾದ ಚಿಕ್ಕದೊಂದು ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು ನೀನಾಸಂ ಸತೀಶ್. ನೀನಾಸಂನಲ್ಲಿ ನಾಟಕ ತರಬೇತಿ ಪಡೆದ ನಂತರ ಕಿರುತೆರೆಯಲ್ಲೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದರು. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು 2008ರಲ್ಲಿ ತೆರೆಕಂಡ ಮಾದೇಶ ಚಿತ್ರದ ಮೂಲಕ ಎನ್ನುವುದು ವಿಶೇಷ.
ಸಿನಿಮಾ ರಂಗಕ್ಕೆ ಮತ್ತು ಕಿರುತೆರೆಗೆ ಪ್ರವೇಶ ಮಾಡಲು ಫೋಟೋ ಶೂಟ್ ಮಾಡಿಸಿ ಅಂತ ಗೆಳೆಯರು ಕೊಟ್ಟ ಸಲಹೆ ಮೇರೆಗೆ ಸಿನಿಮಾ ಫೋಟೋ ಜರ್ನಲಿಸ್ಟ್ ಆದ ಡಿ.ಸಿ ನಾಗೇಶ್ ಅವರು ಮೊದಲ ಬಾರಿಗೆ ಸತೀಶ್ ಅವರ ಫೊಟೋ ಶೂಟ್ ಮಾಡಿ, ನಾನಾ ಬಗೆಯ ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಟ್ಟರು. ಈ ಫೋಟೋ ಶೂಟ್ ಗಾಗಿಯೇ ಸತೀಶ್ ಹಲವು ಬಗೆಯ ಕಾಸ್ಟ್ಯೂಮ್ ಕೂಡ ಕೊಂಡಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ
ಮಾದೇಶ ನಂತರ ಮನಸಾರೆ, ಪಂಚರಂಗಿ, ಪರಮಾತ್ಮ, ಲೈಫು ಇಷ್ಟೆನೆ, ಪುಟ್ಟಕ್ಕನ ಹೈವೇ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ದಿಗಂತ್, ಶ್ರುತಿ ಸೇರಿದಂತೆ ಹಲವು ಕಲಾವಿದರ ಜತೆ ಹೀರೋ ಆಗುವ ಮುನ್ನ ನಟಿಸಿದ್ದಾರೆ. ಆದರೆ, ಸತೀಶ್ ಅವರು ಹೀರೋ ಆಗಿ ಲಾಂಚ್ ಆಗಿದ್ದು ಯೋಗರಾಜ್ ಭಟ್ ನಿರ್ದೇಶನದ ‘ಡ್ರಾಮಾ’ ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಯಶ್ ಮತ್ತು ಸತೀಶ್ ಒಟ್ಟಿಗೆ ನಟಿಸಿ, ಚಿತ್ರದ ಗೆಲುವಿಗೆ ಕಾರಣರಾದರು.
ನೀನಾಸಂ ಸತೀಶ್ ಅವರು ಸೋಲೋ ಹೀರೋ ಅಂತ ಆಗಿದ್ದು ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಲೂಸಿಯಾ ಚಿತ್ರದ ಮೂಲಕ. ಈ ಚಿತ್ರದ ಪಾತ್ರಕ್ಕಾಗಿ ಅವರು ವಿವಿಧ ಸಿನಿಮಾ ರಂಗದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಈ ಸಿನಿಮಾಗಾಗಿ ಹತ್ತು ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದವು. ವೃತ್ತಿ ಬದುಕಿಗೆ ತಿರುವು ನೀಡಿದಂತಹ ಸಿನಿಮಾವಿದು. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ
ಅಲ್ಲಿಂದ ಮತ್ತಷ್ಟು ಸಿನಿಮಾಗಳಲ್ಲಿ ಸತೀಶ್ ನಾಯಕನಾಗಿ ನಟಿಸಿದರು. ಕ್ವಾಟ್ಲೆ ಸತೀಶ್, ಲವ್ ಇನ್ ಮಂಡ್ಯ, ರಾಕೆಟ್, ಬ್ಯುಟಿಫುಲ್ ಮನಸ್ಸುಗಳು, ಟೈಗರ್ ಗಲ್ಲಿ ಹೀಗೆ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುತ್ತಾ ಬಂದರು. ಅಯೋಗ್ಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುವ ಮೂಲಕ ಸತೀಶ್ ಸ್ಟಾರ್ ನಟರಾಗಿ ಭಡ್ತಿ ಪಡೆದರು. ಅಲ್ಲಿಂದ ಸತೀಶ್ ದುನಿಯಾನೇ ಬದಲಾಯಿತು. ನಿರ್ಮಾಪಕರಾದರು, ಆಡಿಯೋ ಕಂಪೆನಿ ಮಾಲೀಕರು ಆದರು. ಇವರ ನಟನೆಗಾಗಿ ಸೈಮಾ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್
ಸದ್ಯ ಐದಾರು ಚಿತ್ರಗಳಲ್ಲಿ ನಟಿಸುತ್ತಿರುವ ಸತೀಶ್ ಅವರ ಬದುಕಿಗೆ ಈ ಫೋಟೋ ಶೂಟ್ ಏನೆಲ್ಲ ತಿರುವು ನೀಡಿದೆ. ಈ ಸಂದರ್ಭದಲ್ಲಿ ಸತೀಶ್ ಆಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಮತ್ತು ಫೊಟೋ ಶೂಟ್ ಮಾಡಿದ ನಾಗೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಉಯ್ಯಾಲೆಯನ್ನು ಮರದ ಹಲಗೆಯಿಂದ ಸಿದ್ಧಪಡಿಸಲಾಗಿದ್ದು, ಅದನ್ನು ಹಗ್ಗದಿಂದ ನೇತಾಡುವಂತೆ ಕಟ್ಟಲಾಗಿತ್ತು. ನಂತರ ಫೋಟೋ ಶೂಟ್ ಮಾಡಿಸಲು ಮಹಿಳೆ ಉಯ್ಯಾಲೆ ಮೇಲೆ ಕುಳಿತು ಸ್ಟೈಲ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಅಲ್ಲದೇ ಫೋಟೋ ಸೆರೆಹಿಡಿಯುವ ವೇಳೆ ಮಹಿಳೆಯ ಲಾಂಗ್ ಡ್ರೆಸ್ ಅನ್ನು ದೂರದಿಂದ ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಅಲುಗಾಡಿಸಲು ಪ್ರಯತ್ನಿಸುತ್ತಾರೆ. ಆಗ ಮಹಿಳೆಯ ತೂಕಕ್ಕೆ ಉಯ್ಯಾಲೆ ಮುರಿದು ನೀರಿನಲ್ಲಿ ಬೀಳುತ್ತದೆ. ಇದೇ ವೇಳೆ ಉಯ್ಯಾಲೆ ಜೊತೆ ನೀರಿನೊಳಗೆ ಬಿದ್ದ ಮಹಿಳೆ ನೀರಿನಿಂದ ಮೇಲಕ್ಕೆ ಎದ್ದು ಸ್ವತಃ ತಾವೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 5,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬಂದಿದೆ.
ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕ್ಯಾಲೆಂಡರ್ ಫೋಟೋಶೂಟ್‍ಗಾಗಿ ಮತ್ತೊಮ್ಮೆ ಟಾಪ್‍ಲೆಸ್ ಆಗಿರುವ ಫೋಟೋ ಶೂಟ್ ಮಾಡಿಸಿದ್ದಾರೆ.
ನಟಿ ಕಿಯಾರಾ ಅಡ್ವಾಣಿ ಕಳೆದ ವರ್ಷ ಸಹ ಫೋಟೋಶೂಟ್ ಒಂದರಲ್ಲಿ ಟಾಪ್‍ಲೆಸ್ ಆಗಿ ಎಲೆ ಮರೆಯಲ್ಲಿ ನಿಂತು ಪೋಸ್ ಕೊಟ್ಟು ಚರ್ಚೆಯ ವಿಷಯವಾಗಿದ್ದರು. ಆದರೆ ಈ ಸಲವೂ ಸಹ ಮತ್ತೆ ಕಿಯಾರಾ ಟಾಪ್‍ಲೆಸ್ ಆಗಿ ಪೋಸ್ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಸಮ್ಮರ್ ಫೋಟೋ- ನಿದ್ದೆಗೆಡಿಸಿಕೊಂಡ ತುಂಡ್ ಹೈಕ್ಳು
ಕಿಯಾರಾ ಅಡ್ವಾಣಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸುವುದರೊಂದಿಗೆ ಫೋಟೋಶೂಟ್‍ಗಳಿಗೂ ಹಾಟ್ ಆಗಿ ಪೋಸ್ ಕೊಡುವುದಕ್ಕೆ ಫೇಮಸ್. ಕಳೆದ ವರ್ಷ ಕಿಯಾರಾ ಅಡ್ವಾಣಿ ಟಾಪ್‍ಲೆಸ್ ಆಗಿ ಪೋಸ್ ಕೊಟ್ಟಿದ್ದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲೆ ಮರೆಯಲ್ಲಿ ನಿಂತು ಟಾಪ್‍ಲೆಸ್ ಆಗಿ ಪೋಸ್ ಕೊಟ್ಟಿದ್ದ ಈ ಫೋಟೋ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು.
ಬಾಲಿವುಡ್‍ನ ಖ್ಯಾತ ಫ್ಯಾಷನ್ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್‍ಗೆ ಕಿಯಾರಾ ಪ್ರತಿ ವರ್ಷ ಪೋಸ್ ಕೊಡುತ್ತಾರೆ. ಈ ಸಲವೂ ಕಿಯಾರಾ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಕಿಯಾರಾ ಟಾಪ್‍ಲೆಸ್ ಆಗಿ ಪೋಸ್ ಕೊಟ್ಟಿರುವ ಪೋಸ್ ಕೊಟ್ಟಿರುವ ಈ ಚಿತ್ರದಲ್ಲಿ ತಮ್ಮ ಕಿಲ್ಲರ್ ಲುಕ್ಸ್ ನಿಂದಲೇ ನೆಟ್ಟಿಗರ ಮನ ಕದ್ದಿದ್ದಾರೆ. ಕಿಯಾರಾ ಅವರ ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಮೊದಲು ಡಬ್ಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್‍ಗೆ ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಸೇರಿದಂತೆ ಬಾಲಿವುಡ್ ನಟಿ, ನಟರು ಪೋಸ್ ಕೊಟ್ಟಿದ್ದಾರೆ. ಸನ್ನಿ ಲಿಯೋನ್ ಕೂಡಾ ಅರೆಬೆತ್ತಲಾಗಿ ಪೋಸ್ ಕೊಟ್ಟಿದ್ದರು, ಇದೀಗ ಕಿಯಾರ ಅಡ್ನಾನಿ ಪೋಸ್ ಕೊಟ್ಟಿದ್ದು ಸಖತ್ ಸುದ್ದಿಯಲ್ಲಿದೆ.
ಮುಂಬೈ: ಬಟ್ಟೆ ಇಲ್ಲದೆ ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರ 2021ರ ಕ್ಯಾಲೆಂಡರ್ ಶೂಟ್‍ಗೆ ಸನ್ನಿ ಪೋಸ್ ಕೊಟ್ಟಿದ್ದಾರೆ. ಕಾಲಲ್ಲಿ ಹೈ ಹೀಲ್ಸ್, ದೇಹ ಮುಚ್ಚಿಕೊಳ್ಳೋಕೆ ಒಂದು ಹ್ಯಾಟ್ ಬಿಟ್ಟರೆ ಬೇರೇ ಯಾವುದೇ ಉಡುಗೆ ಅವರ ದೇಹದ ಮೇಲಿಲ್ಲ. ಈ ಫೋಟೋವನ್ನು ಸನ್ನಿ ಲಿಯೋನ್ ಇನ್‍ಸ್ಟಾಗ್ರಾಮ್‍ನಲ್ಲಿ ಸಮ್ಮರ್ ಬಂತು ಎಂದು ಕ್ಯಾಪ್ಶನ್ ಕೊಟ್ಟು ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ
ಈ ಮೊದಲು ಡಬ್ಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್‍ಗೆ ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಮತ್ತು ವಿಕ್ಕಿ ಕೌಶಲ್ 2021ರ ಕ್ಯಾಲೆಂಡರ್ ಭಾಗವಾಗಿದ್ದರು. ಈಗ ಸನ್ನಿ ಲಿಯೋನ್ ಭಾನುವಾರ ಈ ಕ್ಲಬ್ ಸೇರಿಕೊಂಡಿದ್ದು, ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯವಾಗಿದೆ – ಅಪೋಲೋ ವೈದ್ಯರು
ಡಬ್ಬೂ ಕೂಡ ಈ ಫೋಟೋ ಹಂಚಿಕೊಂಡಿದ್ದಾರೆ. ಸೂರ್ಯನ ಬೆಳಕಿನ ಜತೆ ಸನ್ನಿ ಶೂಟ್ ಎಂದು ಡಬ್ಬು ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಡಬ್ಬೂ ರತ್ನಾನಿ ಕ್ಯಾಲೆಂಡರ್‌ನಲ್ಲಿ ಸನ್ನಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿಯೂ ಸನ್ನಿ ಡಬ್ಬು ರತ್ನಾನಿ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಫೋಟೋ ಕೂಡ ಸಾಕಷ್ಟು ವೈರಲ್ ಆಗಿತ್ತು.
ಸೆಲೆಬ್ರಿಟಿಗಳು ಖ್ಯಾತಿ ಹೆಚ್ಚಿಸಿಕೊಳ್ಳೋಕೆ ಹಾಗೂ ಎಲ್ಲರ ಗಮನ ತಮ್ಮೆಡೆ ಸೆಳೆಯೋಕೆ ನಾನಾ ರೀತಿಯ ಫೋಟೋಶೂಟ್ ಮಾಡಿಸುತ್ತಾರೆ. ಕೆಲವೊಂದು ಫೋಟೋಗಳು ಟ್ರೋಲ್ ಆದರೆ, ಇನ್ನೂ ಕೆಲವು ಫೋಟೋಗಳು ಮೆಚ್ಚುಗೆ ಗಳಿಸಿಕೊಳ್ಳುತ್ತವೆ. ಈಗ ನಟಿ ಸನ್ನಿ ಲಿಯೋನ್ ಹೊಸ ಫೋಟೋಶೂಟ್ ಒಂದನ್ನು ಮಾಡಿಸಿದ್ದು ಸಾಕಷ್ಟು ವೈರಲ್ ಆಗಿದೆ.