Tag: ಫೋಟೋ ಶೂಟ್

  • ಸ್ನೇಹಿತನ ಜೊತೆ ಫೋಟೋಶೂಟ್‌ಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು!

    ಸ್ನೇಹಿತನ ಜೊತೆ ಫೋಟೋಶೂಟ್‌ಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು!

    ಹಾಸನ: ಫೋಟೋಶೂಟ್ (Photo Shoot) ಮಾಡುವಾಗ ಯುವಕನೋರ್ವ ಕಾಲು ಜಾರಿ ಕಟ್ಟೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ತಾಲ್ಲೂಕಿನ, ಹಾಲುವಾಗಿಲು ಗ್ರಾಮದಲ್ಲಿ ನಡೆದಿದೆ.

    ನಾಗೇಂದ್ರ (19) ಸಾವನ್ನಪ್ಪಿದ ಯುವಕ. ಖಾಸಗಿ ಚಿನ್ನಾಭರಣ ಮಳಿಗೆಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಹಾಗೂ ಮಂಜುನಾಥ್ ನಿನ್ನೆ ಕೆಲಸ ಮುಗಿಸಿ ಹಾಲುವಾಗಿಲು ಬಳಿ ಹರಿಯುವ ನೀರು ನೋಡಲು ತೆರಳಿದ್ದರು. ಇದನ್ನೂ ಓದಿ: ಜಮೀನು ವಿವಾದದಲ್ಲಿ 2 ಕುಟುಂಬಗಳ ನಡುವೆ ಗಲಾಟೆ, ಕೊಲೆ ಬೆದರಿಕೆ – 8 ಮಂದಿ ವಿರುದ್ಧ ಎಫ್‌ಐಆರ್‌

    ನಾಗೇಂದ್ರ ಹರಿಯುವ ನೀರಿನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಕಟ್ಟೆಗೆ ಬಿದ್ದಿದ್ದಾನೆ. ಕೂಡಲೇ ಸ್ನೇಹಿತನ ರಕ್ಷಣೆಗೆ ಮಂಜುನಾಥ್ ಮುಂದಾದರು ಸಾಧ್ಯವಾಗಿಲ್ಲ‌. ಅದೃಷ್ಟವಶಾತ್ ಮಂಜುನಾಥ್ ಅಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್‌

    ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಾತ್ರಿ ಆಗಿರುವುದರಿಂದ ವಾಪಾಸ್ ಆಗಿದ್ದರು. ಇಂದು ಬೆಳಿಗ್ಗೆಯಿಂದ ನಾಗೇಂದ್ರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ‌. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆ (Hassan Rural Police) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಚೇರಿಯಲ್ಲೇ ಕುಳಿತು ಆನೆಗಳನ್ನು ಕಾಡಿಗಟ್ಟಲು ಪ್ಲ್ಯಾನ್‌ – `ಡಿವೈಸ್’ ಬಳಕೆಗೆ ಮುಂದಾದ ಅರಣ್ಯ ಇಲಾಖೆ!

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಹುಲ್-ಅಥಿಯಾ – ಬೇಬಿ ಬಂಪ್ ಫೋಟೋ ಶೂಟ್

    ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಹುಲ್-ಅಥಿಯಾ – ಬೇಬಿ ಬಂಪ್ ಫೋಟೋ ಶೂಟ್

    ಮುಂಬೈ: ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ಕ್ರಿಕೆಟಿಗ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ ಮತ್ತೊಂದು ಸಂಭ್ರಮಾಚರಣೆಗೆ ಸಜ್ಜಾಗುತ್ತಿದ್ದಾರೆ.

    ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಥಿಯಾ ಶೆಟ್ಟಿ ಶೀಘ್ರವೇ ತಾಯಿಯಾಗಲಿದ್ದಾರೆ.

    ರಾಹುಲ್, ಅಥಿಯಾ ಶೆಟ್ಟಿ ದಂಪತಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದು, ಅದನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

    ಈ ಫೋಟೋದಲ್ಲಿ ದಂಪತಿಗಳು ಅತ್ಯಂತ ಆತ್ಮೀಯ ಹಾಗೂ ಸಂತೋಷದಲ್ಲಿ ಇರುವುದು ಕಂಡುಬಂದಿದೆ. ರಾಹುಲ್, ಪತ್ನಿ ಅಥಿಯಾ ಅವರನ್ನ ಅಪ್ಪಿಕೊಂಡು ಸೋಫಾದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಹಾಗೂ ಅವರ ಮಡಿಲಲ್ಲಿ ಮಲಗಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

     

     

     

  • ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

    ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

    ಬಾಲಿವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಗುವಿನ ಆಗಮನಕ್ಕಾಗಿ ದಂಪತಿ ಕಾಯುತ್ತಿದ್ದಾರೆ. ಇದರ ನಡುವೆ ಬೇಬಿ ಬಂಪ್‌ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌ ನೀಡಿದ್ದಾರೆ. ಕ್ಯೂಟ್‌ ಕಪಲ್‌ ಎಂದೇ ಕರೆಸಿಕೊಂಡಿರುವ ಈ ಜೋಡಿಯ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

    ಮೊದಲ ಮಗುವಿನ ಆಗಮನಕ್ಕೆ ಮುನ್ನ ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಫೋಟೋಶೂಟ್‌ (Photo Shoot) ಮಾಡಿಸಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಮ್ಮನಾಗುವ ಖುಷಿಯಲ್ಲಿ ತನ್ನ ಸುಂದರ ಬೇಬಿ ಬಂಪ್‌ ಅನ್ನು ತೋರಿಸಿದ್ದಾರೆ.

    ಇನ್ನು ಕೆಲವು ಫೋಟೋಗಳಲ್ಲಿ ದೀಪಿಕಾ ಮತ್ತು ರಣವೀರ್‌ ಸಿಂಗ್‌ (Ranveer Singh) ಆಪ್ತ ಕ್ಷಣಗಳಲ್ಲಿ ಇರುವಂತೆ ಕಾಣಿಸಿದ್ದಾರೆ. ಒಟ್ಟಾರೆ ಇಬ್ಬರ ಮುಖದಲ್ಲಿ ನಗು, ಖುಷಿ ತುಂಬಿ ತುಳುಕುತ್ತಿದೆ. ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ದೀಪಿಕಾ – ರಣವೀರ್‌ ಅಭಿಮಾನಿಗಳು ತಮ್ಮ ಸ್ಟೇಟಸ್‌ಗಳಲ್ಲಿ ಹಂಚಿಕೊಂಡಿದ್ದಾರೆ.

    ಒಂದು ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಲವು ಉಡುಗೆಗಳನ್ನು ಹಿಡಿದುಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಜೀನ್ಸ್‌ ಮತ್ತು ಲಾಸಿ ಬ್ರಾ ಧರಿಸಿ, ಲೇಡಿ ಬಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗಲಿ, ಸಿಗದೇ ಇರಲಿ ಪಕ್ಷದ ಜೊತೆ ಇರ್ತೇನೆ, ಜೆಡಿಎಸ್‌ಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ: ಸಿಪಿವೈ

    ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಕಳೆದ ಫೆಬ್ರವರಿ 29ರಂದು ಹಂಚಿಕೊಂಡಿದ್ದರು. ಹಾಗಾಗಿ ಸೆಪ್ಟೆಂಬರ್‌ ತಿಂಗಳಾಂತ್ಯದ ವೇಳೆಗೆ ಮೊದಲ ಮಗುವಿನ ಆಗಮನವಾಗುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

    ಸೌತ್‌ ಬಾಂಬೆಯಲ್ಲೇ ಹೆರಿಗೆ: 
    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಹೆರಿಗೆಗಾಗಿ ಲಂಡನ್‌ಗೆ (London) ಹೋಗ್ತಾರೆ ಅಂತಾ ಸುದ್ದಿ ಹರಿದಾಡ್ತಿತ್ತು. ಆದ್ರೆ, ಈ ಸುದ್ದಿ ಸುಳ್ಳು, ಸೌತ್ ಬಾಂಬೆಯಲ್ಲೇ ಹೆರಿಗೆ ಮಾಡಿಕೊಳ್ಳುತ್ತಿದ್ದಾರಂತೆ ದೀಪಿಕಾ. ಜೊತೆಗೆ ತಾಯಿತನದ ಕ್ಷಣವನ್ನ ಅನುಭವಿಸಲು ಈಗಿನಿಂದಲೇ ಕಾತುರದಿಂದ ಕಾಯ್ತಿದ್ದು, ಹೆರಿಗೆಗಾಗಿ ಲಂಡನ್‌ಗೆ ಹೋಗ್ತಿರುವ ಸುದ್ದಿ ಸುಳ್ಳುಂತೆ.

    ಕೊನೆಯದಾಗಿ ದೀಪಿಕಾ ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿ, ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದನ್ನೂ ಓದಿ: Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ 

  • ದರ್ಶನ್ ಖೈದಿ ನಂಬರಿನಲ್ಲಿ ಮಗುವಿನ ಫೋಟೋ ಶೂಟ್‌ ಮಾಡಿದ ಪೋಷಕರಿಗೆ ಸಂಕಷ್ಟ

    ದರ್ಶನ್ ಖೈದಿ ನಂಬರಿನಲ್ಲಿ ಮಗುವಿನ ಫೋಟೋ ಶೂಟ್‌ ಮಾಡಿದ ಪೋಷಕರಿಗೆ ಸಂಕಷ್ಟ

    ಬೆಂಗಳೂರು: ನಟ ದರ್ಶನ್ (Darshan) ಖೈದಿ ನಂಬರಿನಲ್ಲಿ ಮಗುವಿನ ಫೋಟೋ ಶೂಟ್‌ (Photo Shoot) ಮಾಡಿಸಿದರಿಗೆ ಬಿಸಿ ಮುಟ್ಟಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (State Commission for Protection of Child Rights) ಮುಂದಾಗಿದೆ.

    ಹೌದು. ದರ್ಶನ್‌ ಮೇಲಿನ ಅಂಧಭಿಮಾನ ಪ್ರದರ್ಶನಕ್ಕೆ ಮುಂದಾಗಿ ಕಾನೂನಿನ ಕುಣಿಕೆಗೆ ಈಗ ಪೋಷಕರು ತಗ್ಲಾಕಿಕೊಂಡಿದ್ದಾರೆ. ಈ ವಿಚಾರ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಈಗ ಪೊಲೀಸ್‌ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ.

     

    ಪಬ್ಲಿಕ್‌ ಟಿವಿಗೆ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಪ್ರತಿಕ್ರಿಯಿಸಿ, ಈ ರೀತಿ ಫೋಟೋ ಶೂಟ್‌ ಮಾಡಿಸಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಈ ಬಗ್ಗೆ ಇವತ್ತು ಪೊಲೀಸ್ ಇಲಾಖೆ ಐಟಿ ಸೆಲ್ ಪತ್ರ ಬರೆಯಲಾಗುತ್ತದೆ. ಫೋಟೋ ಶೂಟ್ ಮಾಡಿಸಿದವರ ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ದರ್ಶನ್‌ ಭೇಟಿಗೆ ಅವಕಾಶ ಸಿಗದೇ ವಾಪಸ್‌ ಆದ ಧನ್ವೀರ್‌

    ಈ ಫೋಟೋ ಶೂಟ್‌ ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಇದು ಬಾಲ ನ್ಯಾಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಕಾನೂನಿನಡಿ ಯಾವೆಲ್ಲ ಕ್ರಮಗಳಿಗೆ ಸಾಧ್ಯತೆ ಇದೆಯೋ ಅದೆಲ್ಲವನ್ನೂ ಕೈಗೊಳ್ಳುತ್ತೇವೆ ಎಂದರು.

  • ಹಾಟ್ ಅವತಾರಲ್ಲಿ ದಿಶಾ ಪಟಾಣಿ: ಮಸ್ತ್ ಹುಡುಗಿ ಅಂದ ಫ್ಯಾನ್ಸ್

    ಹಾಟ್ ಅವತಾರಲ್ಲಿ ದಿಶಾ ಪಟಾಣಿ: ಮಸ್ತ್ ಹುಡುಗಿ ಅಂದ ಫ್ಯಾನ್ಸ್

    ತ್ತೊಮ್ಮೆ ಹಾಟ್ ಅವತಾರವೆತ್ತಿದ್ದಾರೆ ಬಾಲಿವುಡ್ ನಟಿ ದಿಶಾ ಪಟಾಣಿ. ಹೊಸದೊಂದು ಫೋಟೋ ಶೂಟ್ ಮಾಡಿಸಿರುವ ನಟಿ, ಆ ಫೋಟೋಗಳಲ್ಲಿ ಮಿರಿ ಮಿರಿ ಮಿಂಚಿದ್ದಾರೆ. ಜೊತೆಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಕಂಡ ಅಭಿಮಾನಿಗಳು ಮಸ್ತ್ ಹುಡುಗಿ ಎಂದು ಅಭಿಮಾನ ತೋರಿದ್ದಾರೆ.

    ಈ ನಡುವೆ ಅವರ ಡೇಟ್ ಮತ್ತು ಲವ್ ಬ್ರೇಕ್ ಅಪ್ ವಿಚಾರ ಕೂಡ ಬಿಟೌನ್‍ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ (Disha Patani) ಡೇಟ್ ಮಾಡ್ತಿದ್ದರು ಎನ್ನಲಾಗಿತ್ತು. ಕೊವೀಡ್ ಸಂದರ್ಭದಲ್ಲಿ ಬ್ರೇಕಪ್ ಆಯ್ತು ಎಂದು ಹೇಳಲಾಯ್ತು. ಇಂದಿಗೂ ತಾವು ಸಂಬಂಧದಲ್ಲಿದ್ದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಆಯ್ತಾ ಎಂಬ ಅನುಮಾನಗಳ ನಡುವೆ ನಟಿ ದಿಶಾ ಈಗ ಹೊಸ ಬಾಯ್‌ಫ್ರೆಂಡ್‌ನ ಪರಿಚಯಿಸಿದ್ದಾರೆ.

    ದಿಶಾ ಪಟಾನಿ- ಟೈಗರ್ ಶ್ರಾಫ್ ಇಬ್ಬರು ಚಿತ್ರರಂಗದ ಸ್ಟರ‍್ಸ್. ಸಿನಿಮಾ ಮಾಡುವ ಮುಂಚೆಯೇ ಇಬ್ಬರಿಗೂ ಪರಿಚಯವಿತ್ತು. ಭಘಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಗೆಳೆಯನವೇ ಪ್ರೇಮಾಂಕುರವಾಗಲು ಕಾರಣವಾಯ್ತು. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಯಾಗಿದೆಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

    ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ (Aleksander Alexilic) ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅನೇಕ ಬಾರಿ ದಿಶಾ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ಆದರೆ, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ. ದಿಶಾ ಪಟಾಣಿ ಹಾಗೂ ಅಲೆಕ್ಸಾಂಡರ್ ಒಂದು ಕಡೆ ಸೇರಿದ್ದರು. ಈ ವೇಳೆ ದಿಶಾ ತಮ್ಮ ಗೆಳೆತಿಯರಿಗೆ ಅಲೆಕ್ಸಾಂಡರ್‌ನ ಪರಿಚಯ ಮಾಡಿದ್ದಾರೆ. ಇವರು ನನ್ನ ಬಾಯ್‌ಫ್ರೆಂಡ್ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    ಕೆಲ ದಿನಗಳ ಹಿಂದೆ ಟೈಗರ್ ಶ್ರಾಫ್ (Tiger Shroff) ಜೊತೆ ನಟಿ ದಿಶಾ (Disha) ಕಾಣಿಸಿಕೊಂಡಿದ್ದರು. ಕಾರ್ಯಕ್ರಮವೊಂದಲ್ಲಿ ಟೈಗರ್ ಮತ್ತು ಅವರ ಸಹೋದರಿ ಮತ್ತು ತಾಯಿಯ ಜೊತೆ ದಿಶಾ ಕಾರ್ಯಕ್ರಮ ವೀಕ್ಷಿಸುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಆಗಿತ್ತು. ಬ್ರೇಕಪ್ ಮತ್ತು ಪ್ಯಾಚ್ ಅಪ್ ಸುದ್ದಿಯ ನಡುವೆ ಈಗ ಅಲೆಕ್ಯಾಂಡರ್ ಅಲೆಕ್ಸಿಕ್ ಎಂಬ ಹೊಸ ಬಾಯ್‌ಫ್ರೆಂಡ್‌ನ ಎಂಟ್ರಿಯಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಸುಳ್ಳಾ ಕಾಯಬೇಕಿದೆ.

  • ಮತ್ತೊಂದು ಹಾಟ್ ಫೋಟೋಶೂಟ್ ನಲ್ಲಿ ನಟಿ ಯಶಿಕಾ

    ಮತ್ತೊಂದು ಹಾಟ್ ಫೋಟೋಶೂಟ್ ನಲ್ಲಿ ನಟಿ ಯಶಿಕಾ

    ಮೂರು ವರ್ಷಗಳ ಹಿಂದೆ ಭೀಕರ ಅಪಘಾತದಲ್ಲಿ ಗಾಯಗೊಂಡು ಅರ್ಧ ವರ್ಷ ಆಸ್ಪತ್ರೆಯಲ್ಲೇ ಕಳೆದಿದ್ದ ನಟಿ ಯಶಿಕಾ ಆನಂದ್ (Yashika Anand), ಇದೀಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. 2021ರಲ್ಲಿ ನಡೆದ ಅಪಘಾತದಲ್ಲಿ ಅವರು ತೀವ್ರ ಗಾಯಗೊಂಡಿದ್ದರು. ಮತ್ತೆ ಬಣ್ಣದ ಪ್ರಪಂಚಕ್ಕೆ ಬರುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ, ಈಗ ಸಂಪೂರ್ಣ ಗುಣ ಮುಖರಾಗಿದ್ದಾರೆ. ಜೊತೆ ಹೊಸ ಫೋಟೋ ಶೂಟ್ ನಲ್ಲಿ ಪಾಲ್ಗೊಂಡು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಮಾಡೆಲಿಂಗ್ ಪ್ರಪಂಚದಿಂದ ಬಂದಿರುವ ಯಶಿಕಾ, ಕಾಲಿವುಡ್ ನಲ್ಲಿ ‘ಇರುವಟ್ಟು ಅರಯಿಲ್ ಮುರಟ್ಟು ಕುತ್ತು’ ಎಂಬ ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿದರು. ಅಲ್ಲಿಂದ ಅವರ ವೃತ್ತಿ ಜೀವನವೇ ಬದಲಾಗಿ ಹೋಯಿತು. ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದರಿಂದ ಸಲೀಸಾಗಿ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ನೆರವಾಯಿತು.

    ಬಿಗ್ ಬಾಸ್ಮ (Bigg Boss) ನೆಯೊಳಗೆ ಹೋಗುತ್ತಿದ್ದಂತೆಯೇ ಜನರಿಗೆ ಮತ್ತಷ್ಟು ಹತ್ತಿರವಾದ ಯಶಿಕಾ, ಅಲ್ಲಿ ತಮ್ಮ ಜೀವನದಲ್ಲಿ ನಡೆದ ಸಾಕಷ್ಟು ಘಟನೆಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ಮತ್ತಷ್ಟು ಖ್ಯಾತಿ ಕೂಡ ಅವರ ಬೆನ್ನತ್ತಿ ಬಂತು. ಸಿನಿಮಾಗಳಲ್ಲಿ ನಟಿಸಲು ಆಫರ್ ಕೂಡ ಬಂದವು. ವಯಸ್ಕರ ಕಾಮಿಡಿ ಚಿತ್ರ ಮತ್ತು ಬಿಗ್ ಬಾಸ್ ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟವು.

    ಇದೀಗ ಮತ್ತೊಂದು ಕಾರಣಕ್ಕಾಗಿ ಯಶಿಕಾ ಸುದ್ದಿಯಾಗಿದ್ದಾರೆ. ತಮಗಿಂತ 22 ವರ್ಷ ಹಿರಿಯ ನಟನ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಆ ನಟನ ಜೊತೆಗೆ ಕಾರಿನಲ್ಲಿ ಸುತ್ತುವ ಮತ್ತು ಆತನೊಂದಿಗೆ ಕಿಸ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.

    ಕಾಲಿವುಡ್ ಮಾಜಿ ನಟ, ಸೂಪರ್ ಸ್ಟಾರ್‍ ಅಜಿತ್ ಕುಮಾರ್ (Ajith Kumar) ಅವರ ಬಾಮೈದ ರಿಚರ್ಡ್ ರಿಷಿ (Richard Rishi) ಜೊತೆ ಯಶಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಶಿಕಾ ಜೊತೆಗಿನ ಫೋಟೋಗಳನ್ನು ಸ್ವತಃ ರಿಚರ್ಡ್ ರಿಷಿ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಹಾಗಾಗಿ ವದಂತಿಯು ನಿಜವಿರಬಹುದು ಎಂದು ಹೇಳಲಾಗುತ್ತಿದೆ.

    ಕೇವಲ 23ರ ವಯಸ್ಸಿನ ಯಶಿಕಾ ಆನಂದ್, 45 ವರ್ಷದ ರಿಚರ್ಡ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಕಾಲಿವುಡ್ ನ ಗಲ್ಲಿಗಲ್ಲಿಗಳಲ್ಲಿ ಮಾತಾಡಿಕೊಳ್ಳುವಂತಾಗಿದೆ. ಅಲ್ಲದೇ ಇಬ್ಬರೂ ಜೊತೆಗಿರುವ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕುರಿತು ಸ್ವತಃ ಯಾಶಿಕಾ ಸ್ಪಷ್ಟನೆಯನ್ನು ನೀಡಿದ್ದಾರೆ.

    ತಾನು ಯಾವುದೇ ವ್ಯಕ್ತಿಯನ್ನು ಪ್ರೀತಿಸುತ್ತಿಲ್ಲ ಮತ್ತು ಡೇಟ್ ಕೂಡ ಮಾಡುತ್ತಿಲ್ಲ. ಹರಿದಾಡುತ್ತಿರುವ ಫೋಟೋಗಳು ಮುಂದಿನ ಸಿನಿಮಾಗೆ ಸಂಬಂಧಿಸಿದವು ಆಗಿವೆ. ಈ ಸಿನಿಮಾವನ್ನು ವಿನಯ್ ಭಾರದ್ವಾಜ್ ನಿರ್ದೇಶನ ಮಾಡುತ್ತಿದ್ದಾರೆ. ರಿಚರ್ಡ್ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ ಯಶಿಕಾ.

    ಸಿಲಾ ನೋಡಿಗಲ್ ಹೆಸರಿನ ತಮಿಳು ಸಿನಿಮಾದಲ್ಲಿ ರಿಚರ್ಡ್ ಕೂಡ ನಟಿಸುತ್ತಿದ್ದಾರಂತೆ. ಆ ಸಿನಿಮಾದ ಫೋಟೋಗಳು ಅವು. ಯಾರೋ ಈ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಬಾಲ ಕಲಾವಿದರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಿಚರ್ಡ್ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರನ್ನು ನಾನು ಸದಾ ಗೌರವಿಸುವೆ ಎಂದಿದ್ದಾರೆ ಯಶಿಕಾ.

    ಯಶಿಕಾ ಆನಂದ್ ಬೋಲ್ಡ್ (Bold) ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಕಾಸ್ಟ್ಯೂಮ್ ಕೂಡ ಯಾವಾಗಲೂ ಬೋಲ್ಡ್ ಆಗಿಯೇ ಇರುತ್ತವೆ. ಹಾಗಾಗಿ ಆಗಾಗ್ಗೆ ಜನರು ಆಕೆಗೆ ತರ್ಲೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಯಾವುದೇ ಮುಜಗರವಿಲ್ಲದೇ ಯಶಿಕಾ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ಕೊಡುತ್ತಿರುತ್ತಾರೆ.

  • ಇಂದ್ರಜಿತ್ ಲಂಕೇಶ್ ಪುತ್ರನ ಜೊತೆ ಪ್ರೇಮಿಗಳ ದಿನಕ್ಕೂ ಮುನ್ನ ಸಾನ್ಯಾ ಫೋಟೋಶೂಟ್

    ಇಂದ್ರಜಿತ್ ಲಂಕೇಶ್ ಪುತ್ರನ ಜೊತೆ ಪ್ರೇಮಿಗಳ ದಿನಕ್ಕೂ ಮುನ್ನ ಸಾನ್ಯಾ ಫೋಟೋಶೂಟ್

    ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರ ಬಹು ನಿರೀಕ್ಷಿತ `ಗೌರಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ (Samarjit) ನಾಯಕ ನಟನಾಗಿದ್ದು, ಸಾನ್ಯಾ ಅಯ್ಯರ್ ನಾಯಕಿಯಾಗಿದ್ದಾರೆ. ಬಹುದೊಡ್ಡ ತಾರಾಗಣವಿರುವ `ಗೌರಿ’ ಚಿತ್ರದ ಅಪರೂಪದ, ವಿಭಿನ್ನ, ವಿಶಿಷ್ಠ ಶೈಲಿಯ ಫೋಟೋ ಶೂಟ್ ಬುಕ್ ಮೈ ಕ್ಯಾಪ್ಚರ್ ನಲ್ಲಿ ಯಶಸ್ವಿಯಾಗಿ ನಡೆದಿದೆ.

    ಪ್ರೇಮಿಗಳ ದಿನಕ್ಕೂ ಮುನ್ನ ಖ್ಯಾತ ಛಾಯಾಗ್ರಾಹಕ ಕೆನಡಾದ ರೋಹಿತ್ ಅವರ ಕ್ಯಾಮೆರಾದಲ್ಲಿ ಫೋಟೋಗಳು ಸೆರೆ ಆಗಿವೆ. ಅವರ ಕೈಚಳಕ, ದೀಪಿಕಾ ಪಡುಕೋಟೆ ಸೇರಿದಂತೆ ಅನೇಕ ಖ್ಯಾತ ಸೆಲಬ್ರೆಟಿಗಳ ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಮೋಡಿ ಮಾಡಿದೆ. ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಫೋಟೋ ಶೂಟ್ ಅದಾಗಿದೆ.

    ಸಾನ್ಯ ಅಯ್ಯರ್ ತಮ್ಮ ಚೊಚ್ಚಲು ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ (Dubbing) ಕೆಲಸವನ್ನೂ ಮುಗಿಸಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡಿದ್ದರು. ಜೊತೆಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ಇದ್ದರು. ಆ ಫೋಟೋ ವೈರಲ್ ಕೂಡ ಆಗಿತ್ತು.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಬ್ಲೌಸ್ ಇಲ್ಲದೇ ಸೀರೆ ತೊಟ್ಟಿದ್ದಾರೆ.

     

    ಗೌರಿ ಸಿನಿಮಾ ಚಿಕ್ಕಮಗಳೂರು ಸೇರಿದಂತೆ ನಾನಾ ಸ್ಥಳಗಳಲ್ಲಿ ಶೂಟ್ ಆಗಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

  • ಚಡ್ಡಿ ಚಿಕ್ಕಿ ಸೋನು ಗೌಡ: ಏನ್ ಹಾವಳಿ ಗುರು ಎಂದಿದ್ದಾರೆ ಫ್ಯಾನ್ಸ್

    ಚಡ್ಡಿ ಚಿಕ್ಕಿ ಸೋನು ಗೌಡ: ಏನ್ ಹಾವಳಿ ಗುರು ಎಂದಿದ್ದಾರೆ ಫ್ಯಾನ್ಸ್

    ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಹಾಟ್ (Hot) ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ಸೋನು, ಈ ಬಾರಿ ಕೆಂಪು ಚಡ್ಡಿ, ಬಿಳಿ ಟಿ ಶರ್ಟ್ ನಲ್ಲಿ ಮತ್ತೆ ಪಡ್ಡೆಗಳ ಹೃದಯಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಸೋನು ಗೌಡ (Sonu Srinivas Gowda) ಒಂದರ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಆ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ನೆಗೆಟಿವ್ ಕಾಮೆಂಟ್ ಗಳ ಮಹಾಪುರವೇ ಹರಿದು ಬರುತ್ತಿವೆ. ಇಂತಹ ಕಾಮೆಂಟ್ ಗಳಿಗೆ ಉತ್ತರ ಕೊಡುವಂತೆ ಮತ್ತೊಂದು ಫೋಟೋ ಈ ಹಿಂದೆ ಶೇರ್ ಮಾಡಿದ್ದರು. ಆ ಫೋಟೋದಲ್ಲಿ ಅವರು ಹಳದಿ ಸೀರೆ ತೊಟ್ಟಿದ್ದರು.

    ನಮ್ಮ ನೋಡುವ ಕಣ್ಣುಗಳು ಹೇಗಿರುತ್ತವೋ ಹಾಗೆ ಜನರು ಕಾಣುತ್ತಾರೆ ಎನ್ನುವುದು ಲೋಕರೂಢಿ. ಅದನ್ನು ಹೇಳುವ ರೀತಿಯಲ್ಲಿ ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಹಳದಿ ತೆಳುವಾದ ಸೀರೆಯಲ್ಲಿ ಮತ್ತೆ ಹಾಟ್ ಹಾಟ್ ಆಗಿ ಸೋನು ಕಾಣಿಸಿಕೊಂಡಿದ್ದು, ನೀವು ಏನೇ ಕಾಮೆಂಟ್ ಬರೆದರೂ ನಾನು ಇರುವುದೇ ಹೀಗೆ ಎಂದು ಸಾರಿದ್ದರು.

    ಈ ಹಿಂದೆಯೂ ಅವರು ಮಾಲ್ಡೀವ್ಸ್ (Maldives) ವೆಕೇಷನ್ ಎಂಜಾಯ್ ಮಾಡಿದ್ದರು. ಆ ವಿವರವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಒಳ ಉಡುಪಿನ ಫೋಟೋ ಶೇರ್ ಮಾಡಿ ವಿಚಿತ್ರ ಪೋಸ್ ಕೊಟ್ಟಿದ್ದ ನಟಿ ಬಿಕಿನಿ ಫೋಟೋ ಕೂಡ ಶೇರ್ ಮಾಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು.

    ಕಪ್ಪು ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದರು. ವಿವಿಧ ಭಂಗಿಗಳ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು. ಸೋನು ಅವತಾರಕ್ಕೆ ಒಂದಿಷ್ಟು ಜನ ಮೆಚ್ಚುಗೆ ಸೂಚಿಸಿದ್ರೆ, ಮತ್ತೊಂದಿಷ್ಟು ಜನ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.

     

    ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಫೋಟೋಶೂಟ್ ನಲ್ಲಿ ಅನುಪಮಾ ಗೌಡ ಮಿಂಚಿಂಗ್

    ಹೊಸ ಫೋಟೋಶೂಟ್ ನಲ್ಲಿ ಅನುಪಮಾ ಗೌಡ ಮಿಂಚಿಂಗ್

    ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ ನಯಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಟಿ ಅನುಪಮಾ ಗೌಡ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

    ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕಿರುತೆರೆಯಿಂದ ಹಿರಿತೆರೆಗೆ ಬಂದ ನಟಿ ಅನುಪಮಾ ಇತ್ತೀಚಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಛಾಪು ಮೂಡಿಸಿದ್ದರು.

    ದೊಡ್ಮನೆಯ ಆಟದ ನಂತರ ಮತ್ತೆ ಸಿನಿಮಾದಲ್ಲಿ ಮಿಂಚಲು ತೆರೆಮರೆಯಲ್ಲಿ ನಟಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಸದ್ಯ ನಾನಾ ಬಣ್ಣದ ಡ್ರೆಸ್‌ನಲ್ಲಿ ಅನುಪಮಾ ಮಿರ ಮಿರ ಎಂದು ಮಿಂಚಿದ್ದಾರೆ. ಅನುಪಮಾ ನಗುವಿಗೆ ನಟಿಯ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಸಾಕಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸಿದ್ದಾರೆ.

    ಕಿರುತೆರೆ ಖ್ಯಾತ ನಟಿ, ನಿರೂಪಕಿ ಅನುಪಮಾ ಗೌಡ (Anupama Gowda) ಎರಡನೇ ಬಾರಿಗೆ ಬಿಗ್ ಬಾಸ್ (Bigg Boss Season 9) ಮನೆ ಪ್ರವೇಶ ಮಾಡಿದ್ದರು. ತಮ್ಮ ಸ್ನಿಗ್ಧ ನಗುವಿನ ಮೂಲಕ ‘ಬಿಗ್ ಬಾಸ್’ ಚಿತ್ತವನ್ನೇ ಚಂಚಲ ಮಾಡುವಷ್ಟು ಹಸನ್ಮುಖಿ ಆಗಿರುವ ಅನುಪಮಾ, ದೊಡ್ಮನೆ ಸ್ವಿಮಿಂಗ್ ಫೂಲ್ (Swim Suit) ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಸ್ವಿಮ್ ಸ್ಯೂಟ್ ಹಾಕಿಕೊಂಡು ಮನೆಯ ವಾತಾವರಣವನ್ನೇ ಮತ್ತಷ್ಟು ಬಿಸಿ ಮಾಡಿದ್ದರು. ನೆಚ್ಚಿನ ನಟಿಯನ್ನು ಸ್ವಿಮ್ ಸ್ಯೂಟ್ ನಲ್ಲಿ ನೋಡಿದ ಅಭಿಮಾನಿಗಳು, ಅನುಪಮಾ ಸೌಂದರ್ಯಕ್ಕೆ ಫಿದಾ ಆಗಿದ್ದರು.

    ಮಾತಿನ ಮೂಲಕವೇ ಸಾವಿರ ಹೃದಯಗಳನ್ನು ಖೆಡ್ಡಾಗಿ ಕೆಡವುವ ತಾಕತ್ತು ಅನುಪಮಾ ಗೌಡರಿಗಿದೆ. ರಿಯಾಲಿಟಿ ಶೋಗಳಲ್ಲಿ ಅದನ್ನು ಸಾಬೀತೂ ಪಡಿಸಲಾಗಿದೆ. ಗುಳಿಕೆನ್ನೆಯ ಮೇಲಿನ ನಗು ಮತ್ತು ತುಟಿ ಚಲನೆಗಳ ಮೂಲಕ ಮಾತಿಗೆ ಬೇರೆಯೇ ಶಕ್ತಿ ನೀಡುವ ಈ ಸುಂದರಿಯು ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಸೈ ಅನಿಸಿಕೊಂಡವರು. ಅದರಲ್ಲೂ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿತ್ತು.

    ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ಪಟಟಪನೇ ಮಾತಾಡುವ ಈ ಹುಡುಗಿ, ಬಿಗ್ ಬಾಸ್ ಮನೆಯಲ್ಲಿ ಯಾಕೋ ಕೊಂಚ ಡಲ್ ಆದಂತೆ ಕಂಡಿದ್ದರು. ಮಾತು ಅಷ್ಟಕಷ್ಟೇ. ಟಾಸ್ಕ್ ಗಳಲ್ಲೂ ಹೇಳಿಕೊಳ್ಳುವಂತಹ ಫರ್ಫಾಮೆನ್ಸ್ ಮಾಡಲಿಲ್ಲ. ಹೊಂದಾಣಿಕೆಯ ಕೊರತೆಯೂ ಈ ಹುಡುಗಿಯಲ್ಲಿತ್ತು. ಹೀಗಾಗಿ ಅನುಪಮಾ ಗೌಡ ನಿರೀಕ್ಷಿಸಿದಷ್ಟು ಮನರಂಜನೆ ನೀಡಲಿಲ್ಲ. ಈ ಎಲ್ಲಾ ಇಲ್ಲಗಳನ್ನು ಒಂದೇ ಸಲ ಮರೆಸುವಂತೆ ಈಜುಡುಗೆಯಲ್ಲಿ ಕಾಣಿಸಿಕೊಂಡು ಸ್ವತಃ ಬಿಗ್ ಬಾಸ್ ಗೆ ಅಚ್ಚರಿ ಮೂಡಿಸಿದ್ದರು.

    ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಹುಡುಗಿಯರು ತುಂಡುಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಆದರೆ, ಅನುಪಮಾ ಗೌಡ ಅದಕ್ಕೆ ಹೊರತಾಗಿದ್ದರು. ತೀರಾ ಅಪರೂಪಕ್ಕೆ ಎನ್ನುವಂತೆ ಅಂತಹ ಬಟ್ಟೆಗಳನ್ನು ಧರಿಸುತ್ತಿದ್ದರು. ದೀಪಿಕಾ ದಾಸ್ (Deepika Das), ಸಾನ್ಯಾ ಐಯ್ಯರ್ (Sanya Iyer) ಗೆ ಹೋಲಿಸಿದರೆ, ಅನುಪಮಾ ಗೌಡ ಕಾಸ್ಟ್ಯೂಮ್ ವಿಶೇಷವಾಗಿ ಇರುತ್ತಿದ್ದವು. ಆದರೆ, ಅಂದು ಅವೆಲ್ಲ ಬಟ್ಟೆಗಳಿಗೆ ಕೊಂಚ ವಿರಾಮ ಕೊಟ್ಟು ಸ್ವಿಮ್ ಸ್ಯೂಟ್ ಹಾಕಿದ್ದರು.

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿರುವ ಅನುಪಮಾ ಗೌಡ ದುಬಾರಿ ಮೊತ್ತದ ಕಾರನ್ನ ಖರೀದಿಸಿದ್ದಾರೆ. ಕಾರಿನ ಹಿಂದಿನ ಕಥೆಯನ್ನ ಅಭಿಮಾನಿಗಳೊಂದಿಗೆ ನಟಿ ಅನುಪಮಾ ಗೌಡ ಹಂಚಿಕೊಂಡಿದ್ದಾರೆ. ನಟಿ, ನಿರೂಪಕಿಯಾಗಿ ಚಂದನವನದಲ್ಲಿ ಛಾಪೂ ಮೂಡಿಸಿದವರು ಅನುಪಮಾ ಗೌಡ, ಇದೀಗ 17 ಲಕ್ಷದ ಮಹೀಂದ್ರಾ ಥಾರ್ ಖರೀದಿಸಿದ್ದಾರೆ. ನಟಿ ಖರೀದಿಸಿರುವ ಮೂರನೇ ಕಾರು ಇದಾಗಿದ್ದು, ಕಾರು ಕೊಂಡಿರುವ ತೆರೆಹಿಂದಿನ ಕಥೆಯನ್ನ ಅನುಪಮಾ ಗೌಡ ಬಿಚ್ಚಿಟ್ಟಿದ್ದಾರೆ. ಪ್ರತಿಯೊಬ್ಬರು ಕನಸುಗಳನ್ನ ಕಾಣಬೇಕು ಅದನ್ನ ನನಸು ಮಾಡಿಕೊಳ್ಳಲು ಶ್ರಮವಿರಬೇಕು ಎಂದು ಸ್ಪೂರ್ತಿಯ ಮಾತುಗಳನ್ನ ಅನುಪಮಾ ಮಾತನಾಡಿದ್ದಾರೆ.

    ನನ್ನ ಜೀವನದಲ್ಲಿ ನಾನು ಮೊದಲು ಕಾರ್ ಖರೀದಿ ಮಾಡಿದ್ದು 2014 ಆಗಸ್ಟ್ 16 ಹುಂಡೈ ಐ10 ಕಾರು, ಶೂಟಿಂಗ್ ದಿನ ಬೆಳಗ್ಗೆ ಬೇಗ ಪಿಕಪ್ ಮಾಡುತ್ತಿದ್ದರು ಆ ಮೇಲೆ ರಾತ್ರಿ ತಡವಾಗಿ ಮನೆ ಬರುತ್ತಿದ್ದೆ, ಆ ಸಮಯದಲ್ಲಿ ತುಂಬಾ ಟೈಮ್ ವೇಸ್ಟ್ ಆಗುತ್ತಿತ್ತು. ಈ ಕಾರಣದಿಂದ ನಾನು ಕಾರು ಖರೀದಿಸಿದೆ. ನಾಲ್ಕು ವರ್ಷ ಆ ಕಾರನ್ನು ಬಳಸಿದೆ. ನೇರವಾಗಿ ಹೋಗುವುದು ವಾಪಸ್ ಬರುವುದಷ್ಟೇ ನನಗೆ ಬರುತ್ತಿತ್ತು. ನನಗೆ ಸರಿಯಾಗಿ ಕಾರು ಓಡಿಸಲು ಬರುತ್ತಿರಲಿಲ್ಲ ಮೊದಲ ಕಾರು ಎಲ್ಲವನ್ನು ಕಲಿಸಿತ್ತು. ಬಿಗ್ ಬಾಸ್ ಮುಗಿಸಿಕೊಂಡು ನಾನು ಹೊರ ಬಂದ ನಂತರ ನಾನು ಕ್ರೇಟಾ ಬುಕ್ ಮಾಡಿದೆ. ಕಾರು ಬರುವುದು ತುಂಬಾ ತಡವಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ನನ್ನ ತಂದೆ ತೀರಿಕೊಂಡಿದ್ದರು ಅಕ್ಟೋಬರ್‌ನಲ್ಲಿ ಕಾರು ಬಂತು. ಅವರಿಗೆ ಕಾರು ಬೇಡ ಅಂತ ಹೇಳಿದೆ ಆದರೆ ಲೋನ್ ಪ್ರೊಸಿಜರ್ ಆಗಿ ಒಂದು ಸಲ ಇಎಂಐ ಕೂಡ ಕಟ್ ಆಗಿತ್ತು ಈ ಕಾರಣಕ್ಕೆ ಇಷ್ಟವಿಲ್ಲದಿದ್ದರೂ ಕಾರು ಖರೀದಿ ಮಾಡಬೇಕಾಯಿತು ಅನುಪಮಾ ಮಾತನಾಡಿದ್ದಾರೆ.

     

    ಬಳಿಕ ನನ್ನ ಐ10 ಕಾರ್‌ನ ನನ್ನ ಸ್ನೇಹಿತನಿಗೆ ಕೊಟ್ಟೆ. ಮೊದಲನೇ ಕಾರು ಎಮೋಷನ್ ಇದ್ದ ಕಾರಣ ಸ್ನೇಹಿತನಿಗೆ ಕೊಟ್ಟರೆ ಯಾವಾಗ ಬೇಕಿದ್ದರೂ ನೋಡಬಹುದು ಅಂತ. ಈ ಕಾರಿಗೆ ನಾಲ್ಕು ವರ್ಷ ಆಯ್ತು ನನ್ನ ಬಜೆಟ್‌ಗೆ ಬೇರೆ ಯಾವ ಕಾರು ಸಿಕ್ಕಿರಲಿಲ್ಲ. ಒಂದು ದಿನ ರೋಡಲ್ಲಿ ಸಖತ್ ಆಗಿರುವ ಕಾರು ನೋಡಿದೆ, ಕಂಪನಿಗೆ ಕರೆ ಮಾಡಿ ಟೆಸ್ಟ್ ಡ್ರೈವ್ ಮಾಡಿದೆ. ಇಷ್ಟವಾಯಿತು ಬಳಿಕ ಬುಕ್ ಮಾಡಿದೆ ಎಂದು ನಟಿ ಹೇಳಿದ್ದಾರೆ. ನನ್ನ ಕೈಯಲ್ಲಿ ಮಾಡಲು ಆಗುತ್ತೆ ಅಂದ್ರೆ ಎಲ್ಲರ ಕೈಯಲ್ಲೂ ಮಾಡಲು ಆಗುತ್ತೆ. ಜೀರೋಯಿಂದ ನನ್ನ ಕೆರಿಯರ್‌ನ ನಾನು ಶುರು ಮಾಡಿದ್ದೇನೆ. ಇದು ನನ್ನ ಮೂರನೇ ಕಾರ್ ಆಗಿರೋದರಿಂದ ನಾನು ಮೊದಲನೇ ಸಲ ಮಾತನಾಡುತ್ತಿದ್ದೇನೆ. ಜೀವನದಲ್ಲಿ ಒಂದಿಷ್ಟು ಡ್ರೀಮ್‌ಗಳನ್ನು ಇಟ್ಟುಕೊಳ್ಳಿ ಸಾಧನೆ ಮಾಡೇ ಮಾಡುತ್ತೀರಾ. ಕಾರು ತೆಗೆದುಕೊಳ್ಳುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು ತೆಗೆದುಕೊಂಡ ನಂತರ ಪ್ರತಿ ತಿಂಗಳು ಇಎಂಐ ಕಟ್ಟುವುದು ತುಂಬಾನೇ ಇಷ್ಟ. ಜೀವನದಲ್ಲಿ ಎಲ್ಲರೂ ಮೊದಲು ಸೇವಿಂಗ್ಸ್ ಮಾಡಿ. ಸಾಯುವಷ್ಟರಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದಿದ್ದಾರೆ. ತನ್ನ ಕಥೆಯನ್ನ ಹೇಳುವ ಮೂಲಕ ಅಭಿಮಾನಿಗಳಿಗೆ, ನಟಿ ಸ್ಪೂರ್ತಿಯ ಮಾತುಗಳನ್ನ ಆಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಸೋನು ಗೌಡ

    ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಸೋನು ಗೌಡ

    ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ (Sonu Srinivas Gowda) ಒಂದರ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಆ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ನೆಗೆಟಿವ್ ಕಾಮೆಂಟ್ ಗಳ ಮಹಾಪುರವೇ ಹರಿದು ಬರುತ್ತಿವೆ. ಇಂತಹ ಕಾಮೆಂಟ್ ಗಳಿಗೆ ಉತ್ತರ ಕೊಡುವಂತೆ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಅವರು ಹಳದಿ ಸೀರೆ ತೊಟ್ಟಿದ್ದಾರೆ.

    ನಮ್ಮ ನೋಡುವ ಕಣ್ಣುಗಳು ಹೇಗಿರುತ್ತವೋ ಹಾಗೆ ಜನರು ಕಾಣುತ್ತಾರೆ ಎನ್ನುವುದು ಲೋಕರೂಢಿ. ಅದನ್ನು ಹೇಳುವ ರೀತಿಯಲ್ಲಿ ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಹಳದಿ ತೆಳುವಾದ ಸೀರೆಯಲ್ಲಿ ಮತ್ತೆ ಹಾಟ್ ಹಾಟ್ ಆಗಿ ಸೋನು ಕಾಣಿಸಿಕೊಂಡಿದ್ದು, ನೀವು ಏನೇ ಕಾಮೆಂಟ್ ಬರೆದರೂ ನಾನು ಇರುವುದೇ ಹೀಗೆ ಎಂದು ಸಾರಿದ್ದಾರೆ.

    ಈ ಹಿಂದೆಯೂ ಅವರು ಮಾಲ್ಡೀವ್ಸ್ (Maldives) ವೆಕೇಷನ್ ಎಂಜಾಯ್ ಮಾಡಿದ್ದರು. ಆ ವಿವರವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಒಳ ಉಡುಪಿನ ಫೋಟೋ ಶೇರ್ ಮಾಡಿ ವಿಚಿತ್ರ ಪೋಸ್ ಕೊಟ್ಟಿದ್ದ ನಟಿ ಬಿಕಿನಿ ಫೋಟೋ ಕೂಡ ಶೇರ್ ಮಾಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು.

    ಕಪ್ಪು ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದರು. ವಿವಿಧ ಭಂಗಿಗಳ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು. ಸೋನು ಅವತಾರಕ್ಕೆ ಒಂದಿಷ್ಟು ಜನ ಮೆಚ್ಚುಗೆ ಸೂಚಿಸಿದ್ರೆ, ಮತ್ತೊಂದಿಷ್ಟು ಜನ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.

    ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

    ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.

    ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

     

    ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ(Roopesh Shetty), ಸಾನ್ಯ ಅಯ್ಯರ್(Saanya Iyer) ಜೊತೆ ಸೋನು ಮಿಂಚಿದ್ದರು. ದೊಡ್ಮನೆ ಆಟ ಮುಗಿದ ಮೇಲೆ ತಮ್ಮ ಯುಟ್ಯೂಬ್‌ನಲ್ಲಿ ಒಂದಲ್ಲಾ ಒಂದು ವಿಚಾರದೊಂದಿಗೆ ಚರ್ಚೆ ಮಾಡುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]