Tag: ಫೋಟೋಶಾಪ್

  • ಫ್ರಿಡ್ಜ್ ಒಳಗಡೆ ವ್ಯಕ್ತಿ – ನೆಟ್ಟಿಗರಿಂದ ಫೋಟೋಗೆ ಲೈಕ್ಸ್‌ಗಳ ಸುರಿಮಳೆ

    ಫ್ರಿಡ್ಜ್ ಒಳಗಡೆ ವ್ಯಕ್ತಿ – ನೆಟ್ಟಿಗರಿಂದ ಫೋಟೋಗೆ ಲೈಕ್ಸ್‌ಗಳ ಸುರಿಮಳೆ

    ರಮಲ್ಲಾ: ಫ್ರಿಡ್ಜ್ ಒಳಗಡೆ ಇರುವ ವ್ಯಕ್ತಿ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೇಸರವನ್ನು ಕಳೆಯಲು ಸಯೀದ್ ಎಂಬ ಪ್ಯಾಲೇಸ್ಟಿನಿಯನ್ ವ್ಯಕ್ತಿ, ಬಿಡುವಿನ ಸಮಯದಲ್ಲಿ ರೆಫ್ರಿಜರೇಟರ್ ಬಾಗಿಲುಗಳ ಮೇಲೆ ಫೋಟೋಶಾಪ್ ಮಾಡಿ ಫೋಟೋಗಳನ್ನು ಅಂಟಿಸಿದ್ದಾರೆ, ಈ ಫೋಟೋಗಳನ್ನು ನೋಡಿದರೆ ಆತ ರೆಫ್ರಿಜರೇಟರ್ ಒಳಗಡೆ ಇದ್ದಂತೆ ಕಾಣಿಸುತ್ತದೆ.

    ಈ ವಿಚಾರವಾಗಿ ಸಯೀದ್, ನನಗೆ ಬೇಸರವಾದಾಗ ನಾನು ಫ್ರಿಡ್ಜ್ ಮೇಲೆ ಮಾಡಿರುವ ಫೋಟೋಶಾಪ್‍ಗಳನ್ನು ನೋಡುತ್ತೇನೆ. ಆಗ ನಾನು ಫ್ರಿಡ್ಜ್  ಮೇಲೆಯೇ ಇರುವಂತೆ ಕಾಣಿಸುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ಶೇರ್ ಮಾಡಿರುವ ಈ ಎರಡು ಫೋಟೋಗಳಲ್ಲಿ, ಒಂದು ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವಂತೆ ಕಾಣಿಸುತ್ತಿದ್ದರೆ, ಮತ್ತೊಂದರಲ್ಲಿ ಸಯೀದ್ ಕೆಲವು ವಸ್ತುಗಳ ಮೇಲೆ ಕುಳಿತುಕೊಂಡಿರುವಂತೆ ಕಾಣಿಸುತ್ತದೆ.

    https://twitter.com/SaeedDiCaprio/status/1369690655795126283

    ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈವರೆಗೂ 7,29,600 ಲೈಕ್ಸ್ ಮತ್ತು 73,700 ಕಮೆಂಟ್ಸ್ ಬಂದಿದೆ.

  • ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

    ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಜೊತೆ ಭೂಗತ ಪಾತಕಿ ಛೋಟಾ ರಾಜನ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಮೋದಿ ಅವರು ಬಿಳಿ ಬಣ್ಣದ ಶರ್ಟ್ ಹಾಕಿಕೊಂಡಿದ್ದಾರೆ. ಇವರ ಜೊತೆಗೆ ಮೋದಿಯ ಹಿಂಬದಿಯಲ್ಲಿ ಡಾನ್ ಛೋಟಾ ರಾಜನ್ ಕೂಡ ಇರುವುದು ಕಂಡು ಬಂದಿದೆ. ಇವರ ಜೊತೆ ಪ್ರಸ್ತುತ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಇದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್ ಟ್ವಿಟ್ಟರ್‍ನಲ್ಲಿ ಮೊದಲಿಗೆ ವಿಜಯ್ ಅಕ್ಷಿತ್ ಎಂಬವರ ಖಾತೆಯಿಂದ ಶೇರ್ ಆಗಿದ್ದು, ಭೂಗತ ಪಾತಕಿಗೂ ಪ್ರಧಾನಿ ಮೋದಿ ಅವರಿಗೂ ಯಾವ ರೀತಿಯ ಸಂಬಂಧ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಎಲ್ಲ ಕಡೆ ತುಂಬ ವೈರಲ್ ಆಗುತ್ತಿದೆ.

    ಈ ರೀತಿಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಫೋಟೋ ನಿಜವೋ ಸಳ್ಳೋ, ಮೋದಿ ಅವರಿಗೆ ಛೋಟಾ ರಾಜನ್‍ಗೂ ಈ ಹಿಂದೆ ಸಂಪರ್ಕ ಇತ್ತ ಎಂದು ಅನುಮಾನಗಳು ಮೂಡಿದ್ದವು. ಆದರೆ ಈಗ ಈ ಫೋಟೋ ಅಸಲಿಯತ್ತು ಬಯಲಾಗಿದ್ದು, ಈ ಫೋಟೋ ನಿಜವಲ್ಲ ಯಾರೋ ಕಿಡಿಗೇಡಿಗಳು ಫೋಟೋಶಾಪ್ ಮಾಡಿ ಎಡಿಟ್ ಮಾಡಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿದು ಬಂದಿದೆ.

    https://www.facebook.com/photo.php?fbid=2346207449030344&set=a.1411675955816836&type=3&theater

    ಈ ಫೋಟೋ ಬಗ್ಗೆ ಸುದ್ದಿ ಸಂಸ್ಥೆಯೊಂದು ಈ ಹಿಂದಿನ ಇಮೇಜ್‍ಗಳನ್ನು ಪರಿಶೀಲಿಸಿದಾಗ. ಈ ಫೋಟೋ ಮೋದಿ ಅವರು 1990 ರಲ್ಲಿ ಅಮೆರಿಕ ಪ್ರವಾಸಕ್ಕೆ ಹೋದಾಗ ತೆಗೆಸಿಕೊಂಡ ಫೋಟೋ ಆಗಿದ್ದು, ಆ ವೇಳೆ ಅವರ ಜೊತೆ ದೇವೇಂದ್ರ ಫಡ್ನವೀಸ್ ಅವರು ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಫೋಟೋವನ್ನು 2014 ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಒಂದು ಲೇಖನದ ಮೂಲಕ ಪ್ರಕಟಮಾಡಿತ್ತು.

    ಈ ಫೋಟೋವನ್ನು ತೆಗೆದುಕೊಂಡ ಕೆಲ ಕಿಡಿಗೇಡಿಗಳು ಮೋದಿ ಅವರ ಹಿಂದೆ ನಿಂತಿದ್ದ ವ್ಯಕ್ತಿಯ ಮುಖಕ್ಕೆ ಛೋಟಾ ರಾಜನ್ ಅವರ ಮುಖವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  • ಧೋನಿ ಔಟಾಗುತ್ತಿದಂತೆ ಕಣ್ಣೀರಿಟ್ಟ ಫೋಟೋಗ್ರಾಫರ್ – ಬಯಲಾಯ್ತು ಫೋಟೋ ಹಿಂದಿನ ನೈಜ ಕಹಾನಿ

    ಧೋನಿ ಔಟಾಗುತ್ತಿದಂತೆ ಕಣ್ಣೀರಿಟ್ಟ ಫೋಟೋಗ್ರಾಫರ್ – ಬಯಲಾಯ್ತು ಫೋಟೋ ಹಿಂದಿನ ನೈಜ ಕಹಾನಿ

    ಬೆಂಗಳೂರು: ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಅಭಿಮಾನಿಗಳಿಗೆ ಭಾರೀ ಶಾಕ್ ನೀಡಿತ್ತು. ಆದರೆ ಧೋನಿ ಔಟಾಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ಪಂದ್ಯವನ್ನು ಕವರೇಜ್ ಮಾಡುತ್ತಿದ್ದ ಫೋಟೋಗ್ರಾಫರ್ ಅಳುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು.

    ಈ ಫೋಟೋ ನೈಜತೆಯ ಕುರಿತು ಫ್ಯಾಕ್ಟ್ ಚೇಕ್ ಮಾಡುವ ಸಂದರ್ಭದಲ್ಲಿ ಇದು ಫೋಟೋಶಾಪ್ ಮಾಡಿದ ಫೋಟೋ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅಂದಹಾಗೇ ಫೋಟೋದಲ್ಲಿರುವ ವ್ಯಕ್ತಿ ಅಳುತ್ತಿರುವುದು ನಿಜವೇ ಆದರೂ ಆ ಘಟನೆ ನಡೆದಿದ್ದು ಜನವರಿಯಲ್ಲಿ ನಡೆದ ಏಷ್ಯಾ ಫುಟ್ಬಾಲ್ ಕಪ್ ಟೂರ್ನಿಯಲ್ಲಿ.

    ಇರಾಕ್ ದೇಶದ ಫೋಟೋಗ್ರಾಫರ್ ತನ್ನ ದೇಶ ಟೂರ್ನಿಯಲ್ಲಿ ಸೋಲುಂಡ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದರು. ಈ ಫೋಟೋಗೆ ಧೋನಿ ಔಟಾದ ಬಳಿಕ ಫೆವಿಲಿಯನ್ ಕಡೆ ತರಳುತ್ತಿರುವ ಫೋಟೋವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಅಲ್ಲದೇ ಧೋನಿ ಔಟಾಗುತ್ತಿದಂತೆ ಕ್ರೀಡಾಂಗಣದಲ್ಲಿದ್ದ ಫೋಟೋಗ್ರಾಫರ್ ಕಣ್ಣೀರಿಟ್ಟಿದ್ದಾರೆ ಎಂದು ಹಣೆಬರಹ ನೀಡಲಾಗಿತ್ತು. ಇದನ್ನು ಕಂಡ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ವೈರಲ್ ಮಾಡಿದ್ದರು.

    https://twitter.com/PankajS31291146/status/1149554842785894401

  • ಮೋದಿ ಅಣಕಿಸಲು ಮುಂದಾದ ರಾಹುಲ್ – ಅಂತಹ ಪದವೇ ಇಲ್ಲವೆಂದ ಆಕ್ಸ್‌ಫರ್ಡ್

    ಮೋದಿ ಅಣಕಿಸಲು ಮುಂದಾದ ರಾಹುಲ್ – ಅಂತಹ ಪದವೇ ಇಲ್ಲವೆಂದ ಆಕ್ಸ್‌ಫರ್ಡ್

    ನವದೆಹಲಿ: ಲೋಕಸಭಾ ಚುನಾವಣೆ ಮುಗಿಯಲು ಮೂರು ದಿನ ಮಾತ್ರ ಬಾಕಿಯಿದೆ. ಇದೇ ಸಂದರ್ಭದಲ್ಲಿ ನಾಯಕರ ವಾಗ್ದಾಳಿ ಜೋರಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ರಾಹುಲ್ ಗಾಂಧಿ ಹೊಸ ಪದಗಳ ಪ್ರಯೋಗವನ್ನು ಮಾಡಿದ್ದು, ಇದೇ ಸಂದರ್ಭದಲ್ಲಿ ರಾಹುಲ್ ಬಳಸಿದ್ದ ಪದ ನಮ್ಮ ಡಿಕ್ಷನರಿಯಲ್ಲಿ ಇಲ್ಲ ಎಂದು ಆಕ್ಸ್‌ಫರ್ಡ್ ಪ್ರತಿಕ್ರಿಯೆ ನೀಡಿದೆ.

    ಪ್ರಧಾನಿ ಮೋದಿ ವಿರುದ್ಧ ಟ್ವಿಟ್ಟರ್ ನಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿವ ರಾಹುಲ್ ಗಾಂಧಿ, ಬುಧವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಕ್ರೀನ್ ಶಾಟ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ‘Modilie’ ಎಂಬ ಪದದ ಅರ್ಥ ‘ಸುಳ್ಳು ಹೇಳುವುದು’ ಎಂದು ವಿವರಣೆ ನೀಡಲಾಗಿತ್ತು.

    ‘Modilie’ ಎಂಬ ಪದ ಹೊಸದಾಗಿ ಡಿಕ್ಷನರಿಗೆ ಸೇರಿದೆ. ಇದರ ಅರ್ಥ ಏನೆಂದು ನೀವೇ ನೋಡಿ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಈ ಫೋಟೋ ಅನ್ವಯ ‘Modilie’ ಎಂದರೆ ‘ಸತ್ಯವನ್ನು ತಿರುಚುವುದು’ ಎಂಬ ವಿವರಣೆಯನ್ನು ಒಳಗೊಂಡಿತ್ತು. ಈ ಫೋಟೋವನ್ನು ಬಳಿಸಿಕೊಂಡು ರಾಹುಲ್ ಗಾಂಧಿ, ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಆಶ್ವಾಸನೆಗಳನ್ನ ನೀಡುತ್ತಾ ಬಂದಿದ್ದಾರೆ ಎಂದು ಟೀಕಿಸಿದ್ದರು.

    ರಾಹುಲ್‍ರ ಟ್ವೀಟ್‍ಗೆ ಸ್ವತಃ ಆಕ್ಸ್‌ಫರ್ಡ್ ಡಿಕ್ಷನರಿ ಪ್ರತಿಕ್ರಿಯೆ ನೀಡಿದ್ದು, ಇಂತಹ ಪದವೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಆ ಮೂಲಕ ರಾಹುಲ್ ಹಂಚಿಕೊಂಡಿರುವ ಫೋಟೋ ಶಾಪ್ ಮಾಡಿದ ಸ್ಕ್ರೀನ್ ಶಾಟ್ ಆಗಿದೆ ಎಂಬುವುದು ಸ್ಪಷ್ಟವಾಗಿದೆ.

    ಇತ್ತ ಆಕ್ಸ್‌ಫರ್ಡ್ ಸ್ಪಷ್ಟನೆ ನೀಡುತ್ತಿದಂತೆ ರಾಹುಲ್ ಗಾಂಧಿ ಅವರ ಟ್ವೀಟ್‍ಗೆ ಹಲವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ರಾಹುಲ್ ಅವರ ಈ ಟ್ವೀಟನ್ನು ಇದುವರೆಗೂ 9 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದು, 34 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

  • ಫೋಟೋಶಾಪ್ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ

    ಫೋಟೋಶಾಪ್ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ, ಫೋಟೋ ಶಾಪ್ ಮಾಡಿದ್ದಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದು, ಆದರೆ ನೈಜ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ನೆಟ್ಟಿಗರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.

    ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಹಿಟ್ಲರ್ ಅವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ಮಗುವಿನೊಂದಿಗೆ ಇರುವ ಹಿಟ್ಲರ್ ಫೋಟೋವನ್ನು ಮಗುವಿನ ಕಿವಿ ಹಿಂಡುವಂತೆ ಫೋಟೋಶಾಪ್ ಮಾಡಲಾಗಿದೆ. ಇದೇ ರೀತಿ ಮೋದಿ ಅವರ ಪುಟ್ಟ ಬಾಲಕನೊಂದಿಗೆ ಇರುವ ಫೋಟೋಗೆ ಹೋಲಿಕೆ ಮಾಡಿ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.

    ರಮ್ಯಾ ಅವರ ಟ್ವೀಟ್‍ಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಹಲವು ಮಂದಿ ಹಿಟ್ಲರ್ ಮಗುವಿನೊಂದಿಗೆ ಇರುವ ಆಸಲಿ ಫೋಟೋ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫೋಟೋಶಾಪ್ ಮಾಡಿದ ಫೋಟೋವನ್ನು ನೀವು ಟ್ವೀಟ್ ಮಾಡಿದ್ದು, ಆಸಲಿ ಫೋಟೋ ಇಲ್ಲಿದೆ ನೋಡಿ ಎಂದಿದ್ದಾರೆ. ಅಲ್ಲದೇ ಅಪ್ಪು ಎಂಬವರು ರಾಜೀವ್ ಗಾಂಧಿ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಿಟ್ಲರ್‍ಗೆ ಹೋಲಿಕೆ ಮಾಡಿ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಹಲವರು ರಮ್ಯಾ ಅವರು ವೋಟ್ ಮಾಡದ ಬಗ್ಗೆ ಪ್ರಸ್ತಾಪ ಮಾಡಿ ಕಾಲೆಳೆದಿದ್ದು, ಮೊದಲು ನೀವು ವೋಟ್ ಮಾಡಿ ಮೇಡಂ. ಆ ಬಳಿಕ ಇತರರಿಗೆ ಬುದ್ಧಿ ಹೇಳಿ ಎಂದು ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    https://twitter.com/17_appu/status/1122759483891994624