Tag: ಫೋಟೊ

  • ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಫಿಟ್ನೆಸ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಫೋಟೋದಲ್ಲಿ ಅಲಿಯಾ ಭಟ್ ಸ್ಪೋಟ್ಸ್ ಬ್ರಾ ಧರಿಸಿ ಅದಕ್ಕೆ ಮ್ಯಾಚ್ ಆಗುವಂತಹ ಟೈಟ್ಸ್ ತೊಟ್ಟು ಸೈಡ್ ಲುಕ್‍ನಲ್ಲಿ ಸಖತ್ ಹಾಟ್ ಆಗಿ ಪೋಸ್ ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಆಲಿಯಾ ಭಟ್ ಸಾಮಾನ್ಯವಾಗಿ ತಮ್ಮ ದಿನಚರಿಯ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

    ಇದೀಗ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ 40 ದಿನದ ಫಿಟ್ನೆಸ್ ಚಾಲೆಂಜ್‍ನನ್ನು ಸ್ವೀಕರಿಸಿದ್ದು, ಅದರಲ್ಲಿ 20 ದಿನ ಪೂರೈಸಿದ್ದಾರೆ. ಹೀಗಾಗಿ ತಮ್ಮ ಫಿಟ್ನೆಸ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, 20 ಮುಗಿದಿದೆ, 20 ಇದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ನಟಿ ಕತ್ರಿನಾ ಕೈಫ್, ಮಲೈಕಾ ಆರೋರಾ ಕಾಮೆಂಟ್ ಮಾಡಿದ್ದು, ಉಹ್ ಉಹ್ ಎಂದು ಕತ್ರಿನಾ ಮಾಡಿರುವ ಕಾಮೆಂಟ್‍ಗೆ ಒಎಂಜಿ ನನಗೆ ಕತ್ರಿನಾರಿಂದ ಅನುಮೋದನೆ ಸಿಕ್ಕಿತು ಎಂದು ಆಲಿಯಾ ಭಟ್ ಮರು ಟ್ವೀಟ್ ಮಾಡಿದ್ದಾರೆ. ಇನ್ನೂ ನಟಿ ಮೈಲಕಾ ಅರೋರಾ ಬೆಂಕಿಯ ಎಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.

    ಸದ್ಯ ಆಲಿಯಾ ಭಟ್ ಹಾಗೂ ರಣಬೀರ್ ಸಿಂಗ್ ಬ್ರಹ್ಮಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದು, ಸಿನಿಮಾದ ಬಾಕಿ ಕೆಲಸಗಳು ಭರದಿಂದ ಸಾಗುತ್ತಿದೆ. ಅಲ್ಲದೇ ಟಾಲಿವುಡ್ ನಟ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವ ಆರ್‍ಆರ್‍ಆರ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸಿದ್ದು, ಈ ಎರಡು ಅಲಿಯಾ ಭಟ್ ಅಭಿನಯದ ಬಹುನೀರಿಕ್ಷಿತ ಸಿನಿಮಾವಾಗಿದೆ. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

     

    View this post on Instagram

     

    A post shared by Alia Bhatt ☀️ (@aliaabhatt)

  • ಡೇಟಿಂಗ್ ಸುದ್ದಿ ಬಳಿಕ ಮದುಮಗಳಾದ ನಟಿ ಸಾಯಿ ಪಲ್ಲವಿ

    ಡೇಟಿಂಗ್ ಸುದ್ದಿ ಬಳಿಕ ಮದುಮಗಳಾದ ನಟಿ ಸಾಯಿ ಪಲ್ಲವಿ

    ಹೈದರಾಬಾದ್: ಇತ್ತೀಚೆಗಷ್ಟೆ ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ವಿಜಯ್ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೇ ಸಾಯಿ ಪಲ್ಲವಿ ಅವರು ಮದುಮಗಳಂತೆ ರೆಡಿಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

    ಸಾಯಿ ಪಲ್ಲವಿ ಅವರು ಕೇರಳ ಸಾಂಪ್ರದಾಯದ ರೀತಿ ರೇಷ್ಮೆ ಸೀರೆ ತೊಟ್ಟು ಮದುಮಗಳಂತೆ ಅಲಂಕಾರ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಾಯಿ ಪಲ್ಲವಿ ಅವರು “ಈ ವರ್ಷ ವಿಷು ಅಂದರೆ ಯುಗಾದಿ ಹಬ್ಬ ತುಂಬಾ ಬೇಗ ಬಂದಿದೆ” ಎಂದು ಟ್ವೀಟ್ ಮಾಡಿದ್ದಾರೆ. ಸೀರೆ ಬಿಳಿ ಬಣ್ಣ ಹಾಗೂ ಗೋಲ್ಡನ್ ಬಣ್ಣದ ಬಾರ್ಡರ್ ಇದ್ದು, ಕೇರಳ ಸಂಪ್ರದಾಯದ ರೇಷ್ಮೆ ಸೀರೆಯಾಗಿದೆ. ಫೋಟೋಗೆ ವಿವಿಧ ರೀತಿ ಪೋಸ್ ಕೊಟ್ಟಿದ್ದು, ಈ ಸೀರೆಯಲ್ಲಿ ಸಾಯಿ ಪಲ್ಲವಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

    ಸಾಯಿ ಪಲ್ಲವಿ ಅವರು ಈ ಫೋಟೋಗಳನ್ನು ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಲೈಕ್ಸ್ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ನಿರ್ದೇಶಕ ವಿಜಯ್ ಜೊತೆ ಡೇಟಿಂಗ್‍ನಲ್ಲಿದ್ದು, ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ವಿಜಯ್ ಅವರು, “ನನಗೆ ಸಾಯಿ ಪಲ್ಲವಿ ಅವರು ಕೇವಲ ಸ್ನೇಹಿತೆಯಷ್ಟೇ, ಜೊತೆಗೆ ಸದ್ಯಕ್ಕೆ ನಾನು ಯಾವ ಹುಡುಗಿಯನ್ನು ವಿವಾಹವಾಗುವ ಆಲೋಚನೆ ಇಲ್ಲ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    https://www.instagram.com/p/BvrQPbnHEBp/

  • ಹಾಸ್ಟೆಲ್ ವಿದ್ಯಾರ್ಥಿಗಳು ಸೆಲ್ಫೀ ತೆಗೆದು ಗ್ರೂಪ್‍ಗೆ ಹಾಕ್ಬೇಕಂತೆ – ಸಮಾಜಕಲ್ಯಾಣ ಇಲಾಖೆಯ ಆದೇಶಕ್ಕೆ ಪೋಷಕರ ತರಾಟೆ

    ಹಾಸ್ಟೆಲ್ ವಿದ್ಯಾರ್ಥಿಗಳು ಸೆಲ್ಫೀ ತೆಗೆದು ಗ್ರೂಪ್‍ಗೆ ಹಾಕ್ಬೇಕಂತೆ – ಸಮಾಜಕಲ್ಯಾಣ ಇಲಾಖೆಯ ಆದೇಶಕ್ಕೆ ಪೋಷಕರ ತರಾಟೆ

    ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಆದೇಶ ವಸತಿ ನಿಲಯದ ಬಾಲಕಿಯರಿಗೆ ತಲೆ ನೋವಾಗಿ ಪರಿಣಮಿಸಿದೆ. ಹೆಸರಿಗೆ ಸಮಾಜ ಕಲ್ಯಾಣ ಇಲಾಖೆ. ಆದರೆ ಇಲಾಖೆ ಆದೇಶ ಸಮಾಜವೇ ಪ್ರಶ್ನೆ ಮಾಡುವಂತಿದೆ.

    ಹೌದು. ವಸತಿ ನಿಲಯದ ಬಾಲಕ, ಬಾಲಕಿಯರು ಸೆಲ್ಫೀ ಫೋಟೋ ತೆಗೆದು ಇಲಾಖಾ ಟೆಲಿ ಗ್ರಾಂ ಗ್ರೂಪ್‍ನಲ್ಲಿ ಹಾಕುವಂತೆ ಇಲಾಖೆ ಆದೇಶಿಸಿದೆ. ಇದು ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

    ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟ ವಿತರಣೆ ಮಾಡಲಾಗುತ್ತಿದೆಯೋ, ಇಲ್ಲವೋ ಎಂದು ತಿಳಿಯಲು ಇಲಾಖೆ ಈ ಕ್ರಮ ಕೈಗೊಂಡಿದೆ. ಎಸ್‍ಸಿ-ಎಸ್‍ಟಿ ವಸತಿ ನಿಲಯಗಳಲ್ಲಿ ಬಾಲಕ, ಬಾಲಕಿಯರು ಊಟ ಪಡೆಯಬೇಕಾದರೆ ಫೋಟೋ ತೆಗೆದು ಸಮಾಜ ಕಲ್ಯಾಣ ಇಲಾಖೆಯಿಂದ ರಚನೆಯಾಗಿರೋ ಎಸ್‍ಡಬ್ಲೂಡಿ ಟೆಲಿಗ್ರಾಂ ಗ್ರೂಪ್‍ಗೆ ಅಪ್‍ಲೋಡ್ ಮಾಡಬೇಕಂತೆ.

    ಎಸ್‍ಡಬ್ಲ್ಯೂಡಿ ಟೆಲಿಗ್ರಾಂ ಗ್ರೂಪ್ ಗೆ ರಾಜ್ಯದ ಎಲ್ಲಾ ಬಾಲಕ, ಬಾಲಕಿಯರ ಫೋಟೋಗಳು ಅಪ್‍ಲೋಡ್ ಆಗುತ್ತವೆ. ಆದರೆ ಪ್ರತಿದಿನ ತೆಗೆದ ಫೋಟೋಗಳು ಎಲ್ಲಿ ಸೇವ್ ಆಗುತ್ತವೆ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬಾಲಕಿಯರ ಫೋಟೋಗಳು ಅಪ್‍ಲೋಡ್ ಮಾಡಿದರೆ ದುರ್ಬಳಕೆಯಾಗುವ ಅವಕಾಶ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಪೋಷಕರಲ್ಲಿ ಅತಂಕ ಮೂಡಿದೆ.

    ಹೀಗಾಗಿ ಕೂಡಲೇ ಆದೇಶವನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ವಕೀಲರು, ವಿದ್ಯಾರ್ಥಿ ಪೋಷಕರ ಸಂಘ ಎಚ್ಚರಿಕೆ ನೀಡಿದೆ.

  • ಪ್ರಮೋದ್ ಮುತಾಲಿಕ್ ಜೊತೆ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಮುಸ್ಲಿಂ ಕಲಾವಿದನಿಗೆ ಜೀವ ಬೆದರಿಕೆ

    ಪ್ರಮೋದ್ ಮುತಾಲಿಕ್ ಜೊತೆ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಮುಸ್ಲಿಂ ಕಲಾವಿದನಿಗೆ ಜೀವ ಬೆದರಿಕೆ

    ಶಿವಮೊಗ್ಗ: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ ಜೊತೆ ಫೋಟೊ ತೆಗಿಸಿಕೊಂಡ ಕಾರಣಕ್ಕೆ ಸಂಗೀತ ಕಲಾವಿದರರೊಬ್ಬರಿಗೆ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಸಂಗೀತ ನಿರ್ದೇಶಕ, ತಬಲಾ ವಾದಕ ರಶೀದ್ ಖಾನ್ ಎಂಬವರಿಗೆ ಜೀವಬೆದರಿಕೆ ಹಾಕಲಾಗಿದೆ. ಇತ್ತೀಚಿಗಷ್ಟೇ ರಶೀದ್ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇವರು ತಬಲಾ ವಾದಕರಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಮೋದ್ ಮುತಾಲಿಕ್ ಇವರ ತಬಲಾ ವಾದನಕ್ಕೆ ಮೆಚ್ಚಿ, ಪುರಸ್ಕರಿಸಿದ್ದರು. ಈ ಫೋಟೋವನ್ನು ರಶೀದ್ ಫೇಸ್ ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ರು.

    ಇದನ್ನೂ ಓದಿ: ಬುರ್ಖಾ ತೊಟ್ಟು ಭಕ್ತಿ ಗೀತೆ ಗುನುಗಿದ್ದು ಮಹಾಪ್ರಮಾದನಾ..?

    ಫೇಸ್‍ಬುಕ್‍ನಲ್ಲಿ ಫೋಟೋ ಅಪ್ಲೋಡ್ ಮಾಡಿದಾಗಿನಿಂದ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇದ್ರಿಂದಾಗಿ ಕೊನೆಗೆ ರಶೀದ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ ಮಂಗಳವಾರ ಪುರದಾಳು ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುವಾಗ ಇವರನ್ನು ಅಡ್ಡಗಟ್ಟಿ, ಜೀವ ಬೆದರಿಕೆ ಹಾಕಿದ್ದಾರೆ. ಬೈಕ್‍ಗಳಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದ ನಾಲ್ವರು ಅವಾಚ್ಯ ಶಬ್ದಗಳಿಂದ ರಶೀದ್ ಅವರನ್ನು ನಿಂದಿಸಿದ್ದಾರೆ. ಭಯಗೊಂಡ ರಶೀದ್ ತಕ್ಷಣ ಅಲ್ಲಿಂದ ಹಿಂತಿರುಗಿದ್ದಾರೆ.

    ಈ ಬಗ್ಗೆ ರಶೀದ್ ತುಂಗಾ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗದಗಿನ ಪುಟ್ಟರಾಜ ಗವಾಯಿಗಳ ಪರಂಪರೆಯಲ್ಲಿ ಸಂಗೀತ ಕಲಿತಿರುವ ರಶೀದ್ ಶಿವಮೊಗ್ಗದ ಸಾಂಸ್ಕೃತಿಕ ಲೋಕದಲ್ಲಿ ಅರಳುತ್ತಿರುವ ಪ್ರತಿಭೆ. ಶಾಸ್ತ್ರೀಯ ಸಂಗೀತದ ಜೊತೆ ಅಧುನಿಕ ಸಂಗೀತವನ್ನೂ ಅಭ್ಯಾಸ ಮಾಡಿರುವ ರಶೀದ್ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಇವರದ್ದೇ ಆದಾ ಅಲ್ಬಂ ಡ್ರೀಮ್‍ಡಾಲ್ ಹೊರಬರಲು ಸಿದ್ಧವಾಗುತ್ತಿದೆ.

    ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

     

    https://www.youtube.com/watch?v=BCfd2FYaISA

  • ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿನಿಯರ ಫೋಟೋ ಹಾಕಿದ್ದ ಮೈಸೂರು ವಿವಿ Rank ಸ್ಟೂಡೆಂಟ್ ಬಂಧನ!

    ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿನಿಯರ ಫೋಟೋ ಹಾಕಿದ್ದ ಮೈಸೂರು ವಿವಿ Rank ಸ್ಟೂಡೆಂಟ್ ಬಂಧನ!

    ಮೈಸೂರು: ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಭಾವಚಿತ್ರವನ್ನ ಅಶ್ಲೀಲ ವೆಬ್‍ಸೈಟ್‍ಗೆ ಅಪ್ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇಂದು ಜಯಲಕ್ಷೀಪುರಂ ಪೊಲೀಸರು ಬಂಧಿಸಿದ್ದಾರೆ.

    ಜೈಕುಮಾರ್ ಬಂಧಿತ ಆರೋಪಿ. ಈತ ಇದೇ ಕಾಲೇಜಿನಲ್ಲಿ ಪರಿಸರ ಅಧ್ಯಯನ ವಿಭಾಗದ ಕೊನೆ ಸೆಮಿಸ್ಟರ್ ಓದುತ್ತಿದ್ದು, ಪರಿಸರ ವಿಭಾಗದ ಎಲ್ಲಾ ಸೆಮಿಸ್ಟರ್‍ಗಳಲ್ಲಿ ಟಾಪರ್ ಆಗಿದ್ದಾನೆ.

    ಇದನ್ನೂ ಓದಿ: ಮೈಸೂರು ವಿವಿ ಪ್ರಾಧ್ಯಾಪಕನಿಂದಲೇ ಅಶ್ಲೀಲ ವೆಬ್‍ಸೈಟಿಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್?

    ಏನಿದು ಪ್ರಕರಣ?: ವಾರದ ಹಿಂದೆ ಲೋಕ್ಯಾಟೋ ಎಂಬ ವೇಶ್ಯಾವಾಟಿಕೆಯ ವೆಬ್‍ಸೈಟ್ ನಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ 10 ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅಪ್ಲೋಡ್ ಮಾಡಲಾಗಿತ್ತು. ಇದರಿಂದಾಗಿ ಈ ವೆಬ್‍ಸೈಟ್ ನೋಡುವ ಕಾಮುಕರು ಈ ನಂಬರ್ ಗಳಿಗೆ ಕರೆ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದರು. ನಮ್ಮ ನಂಬರ್ ಬೇರೆಯವರಿಗೆ ಹೇಗೆ ಸಿಕ್ಕಿತು? ಅದರಲ್ಲೂ ಈ ರೀತಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಅಂತಾ ವಿದ್ಯಾರ್ಥಿನಿಯರು ಪರಿಶೀಲಿಸಿದಾಗ ಅವರ ಫೋಟೋ ಮತ್ತು ನಂಬರ್ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್‍ನಲ್ಲಿ ಇರುವುದು ಗಮನಕ್ಕೆ ಬಂದಿತ್ತು. ತಕ್ಷಣ ಈ ವಿಚಾರವನ್ನು ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದು ನಂತರ ವಿವಿಯ ಕುಲಸಚಿವರ ಗಮನಕ್ಕೆ ತರಲಾಗಿತ್ತು. ಅವರ ಅನುಮತಿಯಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.

    ಈ ಸುದ್ದಿ ಬೆಳಕಿಗೆ ಬಂದಾಗ ವಿದ್ಯಾರ್ಥಿನಿಯರಿಗೆ ಪರಿಚಯ ಇರುವವರೇ ಈ ಕೃತ್ಯವೆಸಗಿದ್ದಾರೆ ಎನ್ನುವ ಶಂಕೆ ಮೂಡಿತ್ತು. ಅಲ್ಲದೇ ವಿದ್ಯಾರ್ಥಿನಿಯರು ಪ್ರಾಧ್ಯಾಪಕರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ಪೊಲೀಸರು ಜೈಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಫೋಟೋ ಹಾಗೂ ಫೋನ್ ನಂಬರ್ ಅಪ್‍ಲೋಡ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.