Tag: ಫೈರಿಂಗ್

  • ಅಟ್ಟಾಡಿಸಿ ಯುವಕನ ಬರ್ಬರ ಕೊಲೆ – ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್

    ಅಟ್ಟಾಡಿಸಿ ಯುವಕನ ಬರ್ಬರ ಕೊಲೆ – ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರ ಗುಂಡು ಸದ್ದು ಮಾಡಿದ್ದು, ಕೊಲೆ ಆರೋಪಿಗಳ ಮೇಲೆ ನಗರದ ಕಾಮಾಕ್ಷಿಪಾಳ್ಯ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ಪ್ರವೀಣಾ ಅಲಿಯಾಸ್ ಇಟಾಚಿ, ಅಭಿ ಅಲಿಯಾಸ್ ಅಂದ್ರಹಳ್ಳಿ ಅಭಿ ಗುಂಡೇಟು ತಿಂದ ಆರೋಪಿಗಳು. ಇವರು ಶನಿವಾರ ರಾತ್ರಿ ಮಹೇಶ್ ಕುಮಾರ್ ಎಂಬವನನ್ನು ಸುಂಕದಕಟ್ಟೆಯ ಹೆಗ್ಗನಹಳ್ಳಿ ಕ್ರಾಸ್ ಬಳಿ ಅಟ್ಟಾಡಿಸಿಕೊಂಡು ಬರ್ಬರವಾಗಿ ಕೊಲೆ ಮಾಡಿದ್ದರು. ಇಂದು ಮುಂಜಾನೆ ಖಚಿತ ಮಾಹಿತಿ ಮೇರೆಗೆ ಸೆರೆಹಿಡಿಯಲು ಪೊಲೀಸರು ಹೋಗಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲಿಯೇ ಅಟ್ಟಾಡಿಸಿ ಯುವಕನ ಬರ್ಬರ ಕೊಲೆ

    ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಆಗ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಹೆಡ್ ಕಾನ್‍ಸ್ಟೇಬಲ್ ವಸಂತ್ ಕುಮಾರ್ ಮತ್ತು ಸತೀಶ್ ಅವರಿಗೆ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೊಲೆಯಾಗಿರುವ ಮಹೇಶ್ ಈ ಹಿಂದೆ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದನು. 2014ರಲ್ಲಿ ತಾವರೆಕೆಯಲ್ಲಿ ಕೊಲೆಯಾಗಿದ್ದ ಸೂರಿ ಕೊಲೆಯ ಪ್ರತೀಕಾರಕ್ಕೆ ಮಹೇಶನನ್ನ ಕೊಲೆಗೈದಿದ್ದಾರೆ. ಆರೋಪಿಗಳಾದ ಅಭಿ ಹಾಗೂ ಪ್ರವೀಣ ಇಬ್ಬರೂ ಸ್ಲಂ ಭರತನ ಸಹಚರರಾಗಿದ್ದರು.

  • ರಾಮನಗರ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್

    ರಾಮನಗರ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್

    ರಾಮನಗರ: ಬೆಳ್ಳಂಬೆಳಗ್ಗೆ ರಾಮನಗರ ಜಿಲ್ಲಾ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್ ನಡೆದಿದೆ.

    ರೌಡಿಶೀಟರ್ ಸೈಲೆಂಟ್ ಸುನೀಲನ ಶಿಷ್ಯನ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ರೌಡಿಶೀಟರ್ ರೇಣುಕಾ ಪ್ರಸಾದ್ ಅಲಿಯಾಸ್ ನರಿ ಗುಂಡೇಟು ತಿಂದ ಆರೋಪಿ. ಅಂದಹಾಗೆ 4-5 ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ರೇಣುಕಾ ಪ್ರಸಾದ್ ಪೊಲೀಸರಿಗೆ ಬೇಕಾಗಿದ್ದನು. ಇತ್ತೀಚೆಗೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದನು.

    ತಡರಾತ್ರಿ ಬೆಂಗಳೂರು ದಕ್ಷಿಣ ತಾಲೂಕಿನ ಚಂದ್ರಪ್ಪ ಸರ್ಕಲ್ ಬಳಿಯ ಬಾರ್ ವೊಂದರಲ್ಲಿ ಕುಡಿದು ಗಲಾಟೆ ಮಾಡಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ 70 ಸಾವಿರ ದೋಚಿ ಪರಾರಿಯಾಗಿದ್ದನು. ನಂತರ ಕುಂಬಳಗೂಡು ಸಮೀಪದ ವಿನಾಯಕನಗರದ ಶ್ರೀನಿಧಿ ಲಾಡ್ಜ್ ನಲ್ಲಿ ಅವಿತಿದ್ದ ರೌಡಿಶೀಟರ್ ರೇಣುಕಾ ಪ್ರಸಾದ್‍ನನ್ನು ಹಿಡಿಯಲು ತೆರಳಿದ್ದ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಹಾಗೂ ಸಿಬ್ಬಂದಿ ಮೇಲೆ ಡ್ರ್ಯಾಗರ್ ನಿಂದ ಹಲ್ಲೆಗೆ ಮುಂದಾಗಿ ಪೇದೆ ಹುಲಿರಾಯ ಎಂಬವರಿಗೆ ಇರಿದಿದ್ದಾನೆ.

    ಈ ವೇಳೆ ಆತ್ಮರಕ್ಷಣೆಗಾಗಿ ಸಿಪಿಐ ರವಿ ಅವರು ರೌಡಿಶೀಟರ್ ರೇಣುಕಾ ಪ್ರಸಾದ್‍ನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟು ತಿಂದ ರೌಡಿಶೀಟರ್ ರೇಣುಕಾ ಪ್ರಸಾದ್‍ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಗಾಯಗೊಂಡ ಪೇದೆ ಹುಲಿರಾಯನನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಖಾಕಿ ವಿರುದ್ಧ ತಿರುಗಿಬಿದ್ದ ರೌಡಿಯ ಮೇಲೆ ಫೈರಿಂಗ್

    ಖಾಕಿ ವಿರುದ್ಧ ತಿರುಗಿಬಿದ್ದ ರೌಡಿಯ ಮೇಲೆ ಫೈರಿಂಗ್

    ಬೆಂಗಳೂರು: ಬಂಧಿಸಲು ಹೋಗಿದ್ದ ಪೊಲೀಸರ ವಿರುದ್ಧವೇ ರೌಡಿಶೀಟರ್ ತಿರುಗಿಬಿದ್ದ ಹಿನ್ನೆಲೆ ಆತನ ಕಾಲಿಗೆ ಖಾಕಿಪಡೆ ಗುಂಡು ಹೊಡೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರೌಡಿಶೀಟರ್ ಅನಿಲ್ ಅಲಿಯಾಸ್ ಚಾಂಡಲ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಕಾಟನ್ ಪೇಟೆಯ ವೆಟರ್ನರಿ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಕೊಲೆ, ಕೊಲೆಯತ್ನ ಸೇರಿದಂತೆ ಎಂಟಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅನಿಲ್ ಶಾಮಿಲಾಗಿದ್ದನು ಎನ್ನಲಾಗಿದೆ.

    ತಡರಾತ್ರಿ ಅನಿಲ್ ಬಗ್ಗೆ ಖಚಿತ ಮಾಹಿತಿ ದೊರಕಿದ ಬಳಿಕ ಆತನನ್ನು ಪೊಲೀಸರು ಸೆರೆಹಿಡಿಯಲು ತೆರಳಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಅನಿಲ್ ಪೊಲೀಸರ ಮೇಲೆ ತಿರುಗಿಬಿದ್ದಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು ಫೈರಿಂಗ್ ಮಾಡಿದ್ದಾರೆ.

    ಅನಿಲ್ ಕಾಲಿಗೆ ಗುಂಡು ತಗಲಿದ್ದು, ಸದ್ಯ ಆತನನ್ನು ಬಂಧಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

  • ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಆರೋಪಿಗಳು ಹಲ್ಲೆ

    ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಆರೋಪಿಗಳು ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ವಸೀಂ ಹಾಗೂ ಫಯಾಜ್ ಎಂಬವರ ಮೇಲೆ ಕಾಲಿಗೆ ಹೆಣ್ಣೂರು ಇನ್ಸ್ ಪೆಕ್ಟರ್ ಕುಲಕರ್ಣಿ ಹಾಗೂ ಕೆ.ಜಿ ಹಳ್ಳಿ ಇನ್ಸ್ ಪೆಕ್ಟರ್ ಎಲ್ವಿನ್ ಗುಂಡು ಹಾರಿಸಿದ್ದಾರೆ. ಕೆಜಿ ಹಳ್ಳಿ ಕ್ರಾಸ್ ಬಳಿ ಮೇ 27ರಂದು ರೌಡಿಶೀಟರ್ ಶಾಹಿದ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ಬಾಣಸವಾಡಿ ಎಸಿಪಿ ಮಹದೇವಪ್ಪ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.

    ಹಳೆ ದ್ವೇಷ ಹಾಗೂ ಹಣಕಾಸಿನ ವಿಚಾರವಾಗಿ ಆರೋಪಿಗಳು ಶಾಹಿದ್‍ನನ್ನು ಕೊಲೆ ಮಾಡಿದ್ದರು. ಕೊಲೆ ಮಾಡಿದ ಬಳಿಕ ಆರೋಪಿಗಳು ಹೆಣ್ಣೂರು ಸಮೀಪದ ಅರ್ಕಾವತಿ ಲೇಔಟ್ ನಲ್ಲಿದ್ದರು. ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋಗಿದ್ದರು.

    ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಪೊಲೀಸ್ ಪೇದೆ ಸಿದ್ದಲಿಂಗಯ್ಯ ತೋಳಿಗೆ ಗಾಯವಾಗಿದ್ದು, ಪ್ರಾಣ ರಕ್ಷಣೆಗೆ ಇಬ್ಬರು ಇನ್ಸ್ ಪೆಕ್ಟರ್ ಗಳು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.

    ವಸೀಂ ಬಲಗಾಲು ಹಾಗೂ ಫಯಾಜ್ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನಲ್ಲಿ ತಡರಾತ್ರಿ ರೌಡಿಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರಿನಲ್ಲಿ ತಡರಾತ್ರಿ ರೌಡಿಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ರಾತ್ರಿ ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಇನ್ಸ್ ಪೆಕ್ಟರ್ ವೀರೂಪಾಕ್ಷ ಸ್ವಾಮಿ, ರೌಡಿಶೀಟರ್ ಅಶೋಕ್ ಅಲಿಯಾಸ್ ಅರ್ಜುನ್ (22) ಕಾಲಿಗೆ ಫೈರ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ರೌಡಿಶೀಟರ್ ಅಶೋಕ್ ರಾಬರಿ ಮಾಡಿ ಪರಾರಿಯಾಗಿದ್ದನು. ಅಶೋಕ್, ಮೆಹರ್ ಅಲಿ ಎಂಬವರ ಮನೆಗೆ ಮನೆಗೆ ನುಗ್ಗಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದನು.

    ಪೊಲೀಸರು ಎರಡು ದಿನಗಳಿಂದ ಅಶೋಕ್‍ಗಾಗಿ ಹುಡುಕಾಟ ನಡೆಸುತ್ತಿದ್ದರು. ಬಳಿಕ ಸೋಮವಾರ ರಾತ್ರಿ ಅಶೋಕ್ ಕಸ್ತೂರಿನಗರದಲ್ಲಿ ಇರೋದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು ಮಾಹಿತಿ ಪಡೆದ ಇನ್ಸ್ ಪೆಕ್ಟರ್ ವೀರೂಪಾಕ್ಷ ಸ್ವಾಮಿ ಸ್ಥಳಕ್ಕೆ ಹೋಗಿ ಸರಂಡರ್ ಆಗುವಂತೆ ಸೂಚಿಸಿದ್ದಾರೆ.

    ಸರಂಡರ್ ಆಗು ಎಂದು ಪೊಲೀಸರು ಹೇಳಿದ್ದಾರೆ ಅಶೋಕ್ ಡ್ರ್ಯಾಗರ್ ನಿಂದ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಪೊಲೀಸ್ ಪೇದೆ ಸೌದಾಗರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಆರೋಪಿ ಅಶೋಕ್ ಬಲಗಾಲಿಗೆ ಫೈರ್ ಮಾಡಿದ್ದಾರೆ. ಸದ್ಯ ಗಾಯಾಳು ಅಶೋಕ್ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    2016ರಲ್ಲಿ ಅಶೋಕ್ ಪೊಲೀಸರ ಮೇಲೆ ಹಾಕಿ ಸ್ಟಿಕ್‍ನಿಂದ ಹಲ್ಲೆ ಮಾಡಿದ್ದನು. ಈ ಪ್ರಕರಣದಲ್ಲಿ ಅಶೋಕ್ ಜೈಲು ಸೇರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದನು. ಸದ್ಯ ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಂಧಿಸಲು ಹೋದಾಗ ಪೇದೆ ಮೇಲೆಯೇ ಹಲ್ಲೆ ಮಾಡಿದ ಆರೋಪಿ

    ಬಂಧಿಸಲು ಹೋದಾಗ ಪೇದೆ ಮೇಲೆಯೇ ಹಲ್ಲೆ ಮಾಡಿದ ಆರೋಪಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಫೈರಿಂಗ್ ನಡೆಸಿದ ಘಟನೆ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ನಡೆದಿದೆ.

    ರಾಹುಲ್ ಅಲಿಯಾಸ್ ಗೋವಿಂದನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. 22ರಂದು ವೇದ ಮೂರ್ತಿ ಎಂಬವರನ್ನು ರಾಹುಲ್ ಕೊಲೆಗೆ ಯತ್ನಿಸಿದ್ದನು. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ಹಲ್ಲೆಗೆ ಮುಂದಾಗಿದ್ದಾನೆ.

    ಆರೋಪಿ ರಾಹುಲ್ ಮಾರಕಾಸ್ತ್ರಗಳಿಂದ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ರಾಹುಲ್ ಮೇಲೆ ಗುಂಡು ಹಾರಿಸಿದ್ದಾರೆ. ಇನ್ಸ್ ಪೆಕ್ಟರ್ ವೀರೇಂದ್ರ ಪ್ರಸಾದ್ ಅವರು ಆರೋಪಿ ರಾಹುಲ್ ಮೇಲೆ ಗುಂಡು ಹಾರಿಸಿದ್ದಾರೆ.

    ಈ ಘಟನೆಯಲ್ಲಿ ಗಾಯಗೊಂಡ ಪೇದೆ ಹಾಗೂ ಆರೋಪಿ ರಾಹುಲ್‍ನನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಹುಲ್ ಮೇಲೆ ಕೊಲೆ ಯತ್ನ, ಡಕಾಯಿತಿ ಪ್ರಕರಣಗಳು ದಾಖಲಾಗಿತ್ತು. ಪೊಲೀಸರು ಬಹುದಿನಗಳಿಂದ ರಾಹುಲ್‍ಗಾಗಿ ಶೋಧಕಾರ್ಯ ನಡೆಸುತ್ತಿದ್ದರು.

    ತಡರಾತ್ರಿ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬ್ಯಾಟರಾಯನಪುರ ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ರಾಹುಲ್ ಪೊಲೀಸರ ಮೇಲೆಯೇ ಮಚ್ಚು ಬೀಸಿದ್ದಾನೆ. ಆಗ ಬ್ಯಾಟರಾಯನಪುರ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮಂಗಳೂರು: ನಟೋರಿಯಸ್ ರೌಡಿ ಮೇಲೆ ಪೊಲೀಸರಿಂದ ಫೈರಿಂಗ್

    ಮಂಗಳೂರು: ನಟೋರಿಯಸ್ ರೌಡಿ ಮೇಲೆ ಪೊಲೀಸರಿಂದ ಫೈರಿಂಗ್

    ಮಂಗಳೂರು: ನಟೋರಿಯಸ್ ರೌಡಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಮಂಗಳೂರು ನಗರ ಹೊರವಲಯದ ಪಚ್ಚನಾಡಿನಲ್ಲಿ ನಡೆದಿದೆ.

    ಟಾರ್ಗೆಟ್ ಗ್ರೂಪ್ ಸದಸ್ಯ, ರೌಡಿ ಉಮರ್ ಫಾರೂಕ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಕೊಲೆ ಆರೋಪಿ ಸಮೀರ್ ಹತ್ಯೆಗೆ ಸಂಚು ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಲು ಮುಂದಾಗಿದ್ದಾರೆ.

    ಈ ವೇಳೆ ಉಮರ್ ಫಾರೂಕ್ ಮತ್ತು ತಂಡ ಪೊಲೀಸರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಶೂಟೌಟ್ ಕಾಳಗದಲ್ಲಿ ಪೊಲೀಸ್ ಪೇದೆ ಸಂದೀಪ್ ಗಾಯಗೊಂಡಿದ್ದಾರೆ. ಒಂದು ವರ್ಷದ ಹಿಂದೆ ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಕೊಲೆಯಾಗಿದ್ದನು. ಇಲ್ಯಾಸ್ ಸಂಬಂಧಿ ಉಮರ್ ಫಾರೂಕ್, ಸುರ್ಮಾ ಇಮ್ರಾನ್ ಜೊತೆ ಸೇರಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು.

    ಮಂಗಳೂರಿನ ಕಂಕನಾಡಿ ಪೊಲೀಸರು ಕಾಲಿಗೆ ಶೂಟ್ ಮಾಡಿ ಫಾರೂಕ್‍ನನ್ನು ಬಂಧಿಸಿದ್ದಾರೆ. ಉಮರ್ ಫಾರೂಕ್ ಎರಡು ಪ್ರಮುಖ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಸಮೀರ್, ಇಲ್ಯಾಸ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ದಾವೂದ್ ಗ್ಯಾಂಗಿನ ಸದಸ್ಯ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ರೌಡಿ ಫಾರೂಕ್ ಮತ್ತು ಪೇದೆ ಸಂದೀಪ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಅನೈತಿಕ ಸಂಬಂಧಕ್ಕೆ ಕೊಲೆ ಮಾಡಿದ್ದ ಆರೋಪಿ ಮೇಲೆ ಫೈರಿಂಗ್

    ಅನೈತಿಕ ಸಂಬಂಧಕ್ಕೆ ಕೊಲೆ ಮಾಡಿದ್ದ ಆರೋಪಿ ಮೇಲೆ ಫೈರಿಂಗ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಪೊಲೀಸರು ಗನ್ ಸದ್ದು ಮಾಡುತ್ತಿದ್ದು, ಇದೀಗ ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ಆರೋಪಿ ಕಿಶೋರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಂಗಳೂರಿನ ಪೀಣ್ಯ ಇಂಡಸ್ಟ್ರೀಯಲ್ ಬಳಿ ಈ ಘಟನೆ ನಡೆದಿದೆ. ರಾಜಗೋಪಾಲನಗರದಲ್ಲಿ ನಡೆದಿದ್ದ ಉಮೇಶ್ ಕೊಲೆ ಕೇಸ್‍ನಲ್ಲಿ ಆರೋಪಿ ಕಿಶೋರ್ ಬೇಕಾಗಿದ್ದನು.

    ಏನಿದು ಪ್ರಕರಣ
    ಆರೋಪಿ ಕಿಶೋರ್ ಕೊಲೆಯಾದ ಉಮೇಶ್ ಪತ್ನಿ ರೂಪ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದು ಪತಿಗೆ ಗೊತ್ತಾಗುತ್ತಿದ್ದಂತೆ ಆರೋಪಿ ಕಿಶೋರ್ ಉಮೇಶ್ ಕೊಲೆ ಮಾಡಿಸಿದ್ದನು. ಈ ಕುರಿತು ದೂರು ದಾಖಲಿಸಿಕೊಂಡು ರಾಜಗೋಪಾಲನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಖಚಿತ ಮಾಹಿತಿ ಮೇರೆಗೆ ಆತನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ.

    ಈ ವೇಳೆ ರಾಜಗೋಪಾಲನಗರ ಇನ್ಸ್ ಪೆಕ್ಟರ್ ದಿನೇಶ್ ಪಾಟೀಲ್ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಪೇದೆ ಶಿವಸ್ವಾಮಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದನು. ಆಗ ಆತ್ಮರಕ್ಷಣೆಗಾಗಿ ಕಿಶೋರ್ ಕಾಲಿಗೆ ದಿನೇಶ್ ಪಾಟೀಲ್ ಗುಂಡು ಹಾರಿಸಿದ್ದಾರೆ.

    ಸದ್ಯಕ್ಕೆ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್!

    ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದ್ದು, ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ನಟೋರಿಯಸ್ ಮೇಲೆ ಪೊಲೀಸರು ಇಂದು ಫೈರಿಂಗ್ ಮಾಡಿದ್ದಾರೆ.

    ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿ ಹೇಮಂತ್ ಸಾಗರ್ ಹಾಗೂ ವಿನೋದ್ ಕುಮಾರ್ ನನ್ನು ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ.

    ಸೋಮವಾರ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿಯಲ್ಲಿ ಹೆಬ್ಬಗೋಡಿ ಮೂಲದ ಕೆಂಪೇಗೌಡನ ಓಲಾ ಕಾರು ಕಸಿದು ಸುಟ್ಟು ಕೊಲೆ ಮಾಡಿದ್ದರು. ಪ್ರಕರಣ ಬೆನ್ನತ್ತಿದ ನೆಲಮಂಗಲ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

    ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ವೇಳೆ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನೆಲಮಂಗಲದ ಗಣೇಶನ ಗುಡಿ ಬಳಿ ಆತ್ಮ ರಕ್ಷಣೆಗೆ ಪೊಲೀಸರು ಆರೋಪಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ನೆಲಮಂಗಲ ಟೌನ್ ಕೈಂ ಪಿಎಸ್‍ಐ ನವೀನ್ ಕುಮಾರ್ ಗೆ ಗಾಯಗಳಾಗಿದ್ದು, ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಖಾಸಗಿ ಆಸ್ಪತ್ರೆಗೆ ಗ್ರಾಮಾಂತರ ಎಎಸ್‍ಪಿ ಸಜೀತ್ ಭೇಟಿ ನೀಡಿದ್ದಾರೆ. ಇಬ್ಬರು ಆರೋಪಿಗಳು ಇನೋವಾ ಕಾರು ಕಳ್ಳತನಕ್ಕೆ ಕೊಲೆ ಮಾಡಿದ್ದರು. ಕೊಲೆಯಾದ ಕೆಂಪೇಗೌಡ ವಿಚಾರದಲ್ಲಿ ಎರಡು ದಿನದ ಹಿಂದೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು.

    ಆರೋಪಿಗಳು ಶೋಕಿ ಮಾಡಲು ಓಲಾ ಕಂಪನಿ ಮೂಲಕ ಇನೋವಾ ಕಾರು ಬುಕ್ ಮಾಡಿದ್ದರು. ನಂತರ ಮೃತ ಕೆಂಪೇಗೌಡನ ಬಳಿ ಕಾರಿನ ಡಾಕ್ಯುಮೆಂಟ್ ಸಹಿ ಪಡೆದಿದ್ದರು. ಕೆಂಪೇಗೌಡ ಸಾಲಸೊಲ ಮಾಡಿ ಕಾರು ಖರೀದಿಸಿದ್ದನು. ಆರೋಪಿಗಳ ಮೇಲೆ ರಾಮನಗರ, ಮಂಡ್ಯ, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಕೇಸ್ ದಾಖಲಾಗಿದೆ.

  • ಬೆಳ್ಳಂಬೆಳಗ್ಗೆ ಸೌಂಡ್ ಮಾಡಿದ ಪೊಲೀಸ್ ರಿವಾಲ್ವರ್

    ಬೆಳ್ಳಂಬೆಳಗ್ಗೆ ಸೌಂಡ್ ಮಾಡಿದ ಪೊಲೀಸ್ ರಿವಾಲ್ವರ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೆ ಪೊಲೀಸ್ ರಿವಾಲ್ವರ್ ಸದ್ದು ಮಾಡಿದೆ.

    ಸಿನೀಮೀಯ ರೀತಿಯಲ್ಲಿ ಸರಗಳ್ಳರನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಉತ್ತರ ವಿಭಾಗದಲ್ಲಿ ಆಕ್ಟೀವ್ ಆಗಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಂದಿನಿ ಲೇಔಟ್, ಬಾಗಲಗುಂಟೆ, ಸೋಲದೇವನಹಳ್ಳಿ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದಿದ್ದರು.

    ಈ ವೇಳೆ ಚೇಸ್ ಮಾಡಿದ ಪೊಲೀಸರ ಮೇಲೆ ಸರಗಳ್ಳರು ಹಲ್ಲೆಗೆ ಮುಂದಾದರು. ಆಗ ತಕ್ಷಣ ಪೊಲೀಸರು ಸುರೇಂದ್ರ ಸಿಂಗ್, ಕರಣ್ ಗುಪ್ತಾ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಸೋಲದೇವನಹಳ್ಳಿಯ ಸಾಸಿವೆಘಟ್ಟ ಬಳಿ ಫೈರಿಂಗ್ ನಡೆದಿದೆ.

    ಫೈರಿಂಗ್ ನಡೆಸುವ ಮೊದಲು ಪೊಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಆರೋಪಿಗಳು ಕೇಳಲಿಲ್ಲ. ಹೀಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ.