Tag: ಫೈಯರ್

  • ಕಿಚ್ಚು ಎಂದರೇನು – ಅಭಿಮಾನಿಗಳಿಗೆ ‘ಬೆಂಕಿ’ ಪ್ರಶ್ನೆ ಕೇಳಿದ ರಶ್ಮಿಕಾ

    ಕಿಚ್ಚು ಎಂದರೇನು – ಅಭಿಮಾನಿಗಳಿಗೆ ‘ಬೆಂಕಿ’ ಪ್ರಶ್ನೆ ಕೇಳಿದ ರಶ್ಮಿಕಾ

    ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಭಯವನ್ನು ಜಯಿಸುವುದರ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ.

    ರಶ್ಮಿಕಾ ಮಂದಣ್ಣ ಇನ್‍ಸ್ಟಾಗ್ರಾಮ್ ನಲ್ಲಿ ಫೈಯರ್ ಬಗ್ಗೆ ಬರೆದು ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಹೃದಯಗಳನ್ನು ಗೆದ್ದಿದ್ದಾರೆ. ರಶ್ಮಿಕಾ ಇನ್‍ಸ್ಟಾಗ್ರಾಮ್‍ನಲ್ಲಿ, ಫೈಯರ್ ನಲ್ಲಿ ನಡೆಯಬಹುದು ಎಂದು ನೀವು ಭಾವಿಸುತ್ತೀರಿ? ನಿಮ್ಮ ಪ್ರಕಾರ ಕಿಚ್ಚು ಎಂದರೇನು? ಹೋಲಿಕೆಯೇ? ಆತಂಕವೇ? ನಿಮ್ಮ ಕಿಚ್ಚು ಏನು? ಈ ಬಗ್ಗೆ ನೀವು ಯೋಚಿಸುತ್ತೀರಾ? ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.

    ‘ಧೈರ್ಯ ಇದ್ದವರೂ ಏನನ್ನಾದರೂ ಗೆಲ್ಲುತ್ತಾರೆ. ಹೌದು, ನೀವು ಮಾಡಬಹುದು. ನಾನು ಸಹ ಈ ಹಿಂದೆ ಭಯದಿಂದ ಇದ್ದೆ. ಆದರೆ ಈಗ ಅದನ್ನು ಬಿಟ್ಟು ಮುಂದೆ ಬಂದಿದ್ದೇನೆ. ಮುಂದೆಯೂ ಸಹ ಇದನ್ನೇ ಮಾಡುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಜಾನ್ವಿ ನಟನೆ

    ನನ್ನ ಸಲಹೆಯು ಕೆಲವರಿಗೆ ಸಹಾಯ ಮಾಡಿದರೆ, ಅದು ನನಗೆ ಸಂತೋಷವಾಗುತ್ತದೆ ಎಂದು ತಮ್ಮ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    ಕನ್ನಡದ ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ಪ್ರಸ್ತುತ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿಯೂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರು ಮಾಡಿದ ಬಹುತೇಕ ಸಿನಿಮಾಗಳು ಯಶಸ್ಸನ್ನು ತಂದು ಕೊಟ್ಟಿದ್ದು, ಪ್ರಸ್ತುತ ದಕ್ಷಿಣ ಭಾರತದ ಯಶಸ್ವಿ ನಟಿ ಎಂದು ಕರೆಯಲಾಗುತ್ತಿದೆ.