Tag: ಫೈನ್

  • ಪೊಲೀಸರನ್ನೇ ಅಡ್ಡ ಹಾಕಿ ಹೆಲ್ಮೆಟ್ ಎಲ್ಲಿ ಎಂದ ಸಾರ್ವಜನಿಕರು

    ಪೊಲೀಸರನ್ನೇ ಅಡ್ಡ ಹಾಕಿ ಹೆಲ್ಮೆಟ್ ಎಲ್ಲಿ ಎಂದ ಸಾರ್ವಜನಿಕರು

    ಚಿಕ್ಕಬಳ್ಳಾಪುರ: ಹೆಲ್ಮೆಟ್ ಧರಿಸದೆ ಬರುತ್ತಿದ್ದ ಪೊಲೀಸರ ಬೈಕ್‍ನ್ನು ಅಡ್ಡಗಟ್ಟಿದ ಸಾರ್ವಜನಿಕರು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಬಳಿ ನಡೆದಿದೆ.

    ಆಂದಹಾಗೆ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಪಿಂಡಿಪಾಪನಹಳ್ಳಿ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿದ್ದರು. ಹೆಲ್ಮೆಟ್ ಧರಿಸದೆ ಬಂದ ಕಾಂಗ್ರೆಸ್ ಮುಖಂಡ ಪಂಚಾಕ್ಷರಿರೆಡ್ಡಿಯವರ ಬೈಕ್ ತಡೆದು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ದಂಡ ಹಾಕಲು ಮುಂದಾಗಿದ್ದಾರೆ.

    ಪೊಲೀಸರು ಏಕವಚನದಲ್ಲಿ ಮಾತಾನಾಡಿಸಿದ್ದಾರೆ ಎಂದು ಪೊಲೀಸರ ವರ್ತನೆಗೆ ಕೆರಳಿದ ಪಂಚಾಕ್ಷರಿರೆಡ್ಡಿ ಬೆಂಬಲಿಗರು ಪೊಲೀಸರು ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ರಸ್ತೆ ತಡೆ ನಡೆಸಿ ವಾಹನಗಳನ್ನು ಅಡ್ಡಗಟ್ಟಿ ರಸ್ತೆ ಬಂದ್ ಮಾಡಿದ್ದಾರೆ.

    ಈ ವಿಷಯ ತಿಳಿದು ಸ್ಥಳಕ್ಕೆ ಹೆಚ್ಚಿನ ಬಂದೋಬಸ್ತ್‍ಗೆಂದು ಬೈಕಿನಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಹಾಕಿರಲಿಲ್ಲ. ಇದನ್ನು ಕಂಡ ಸಾರ್ವಜನಿಕರು, ನಮ್ಮ ಬಳಿ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ಹಾಕ್ತಿರಲ್ಲ. ಯಾಕೆ ನೀವ್ ಹೆಲ್ಮೆಟ್ ಹಾಕಿಲ್ಲ. ಎಲ್ಲಿ ಫೈನ್ ಕಟ್ಟಿದ್ದೀರಾ ಎಂದು ಪೊಲೀಸರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ. ಪೊಲೀಸರ ಮೇಲೆ ಸಾರ್ವಜನಿಕರು ಮುಗಿಬಿದ್ದಿರುವ ಈ ಎರಡು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ 4 ಲಕ್ಷ ರೂ. ಫೈನ್!

    ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ 4 ಲಕ್ಷ ರೂ. ಫೈನ್!

    ಅಬುದಾಬಿ: ಪ್ರೇಯಸಿಗೆ ಈಡಿಯಟ್ ಅಂದಿದಕ್ಕೆ ಯುಎಇ (ಯುನೈಟೆಡ್ ಅರಬ್ ಎಮಿರಟ್ಸ್) ಸರ್ಕಾರ ಯುವಕನೊಬ್ಬನಿಗೆ 4 ಲ್ಷ ರೂ. ಫೈನ್ ಹಾಕಿದೆ.

    ಪ್ರೇಮಿಗಳು ಜಗಳ ಮಾಡೋದು, ಒಬ್ಬರಿಗೊಬ್ಬರು ಕಾಲೆಳೆಯೋದು ಕಾಮನ್. ಆದ್ರೆ ಯುಎಇಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಕಳುಹಿಸಿದ್ದ ಜೋಕ್‍ಗೆ ಈಡಿಯಟ್ ಅಂದಿದ್ದೇ ತಪ್ಪಾಯ್ತು. ತನ್ನ ಪ್ರೇಯಸಿ ಜೊತೆ ವಾಟ್ಸಪ್‍ನಲ್ಲಿ ಮಾತನಾಡುತ್ತಿದ್ದ ವೇಳೆ ಆಕೆ ಕಳುಹಿಸಿದ್ದ ಜೋಕ್‍ಗೆ ಯುವಕ ಈಡಿಯಟ್ ಎಂದು ರಿಪ್ಲೈ ಮಾಡಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಯುವತಿ ಯುವಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

    ಯುವತಿಯ ದೂರಿನ ಆಧಾರದ ಮೇಲೆ ಈಗ ಅಲ್ಲಿನ ಸರ್ಕಾರ ಯುವಕ, ಯುವತಿಗೆ ಅವಮಾನ ಮಾಡಿದ್ದಾನೆ. ಹೆಣ್ಣಿಗೆ ಗೌರವ ನೀಡಿಲ್ಲ ಎಂದು ಆತನಿಗೆ 60 ದಿನಗಳ ಜೈಲು ಶಿಕ್ಷೆ ಹಾಗೂ ಬರೋಬ್ಬರಿ 4 ಲಕ್ಷ ರೂ. ಫೈನ್ ಹಾಕಿದೆ. ಒಟ್ಟಿನಲ್ಲಿ ಈ ಘಟನೆ ನೋಡಿದ್ರೆ ವಿಚಿತ್ರ ಅನಿಸಬಹುದು ಆದ್ರೂ ಇದು ನಿಜ. ತನ್ನ ಪ್ರೇಯಸಿಗೆ ಈಡಿಯಟ್ ಅಂದು ಈಗ ಪ್ರೇಮಿ ಜೈಲು ಸೇರಿದ್ದಾನೆ.

    ಅರಬ್ ರಾಷ್ಟ್ರಗಳಲ್ಲಿ ಹೆಣ್ಣಿಗೆ ಅವಮಾನ ಮಾಡಿದ್ರೆ ಅಥವಾ ಮಹಿಳೆಯರಿಗೆ ಬೈದರೆ ಅಲ್ಲಿನ ಸರ್ಕಾರ ಶಿಕ್ಷೆ ವಿಧಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಲ್ಮೆಟ್ ಹಾಕದಕ್ಕೆ ಫೈನ್ ಕಟ್ಟಬೇಕೆಂದು, ಟ್ರಾಫಿಕ್ ಪೊಲೀಸರ ಮೇಲೆಯೇ ಬೈಕ್ ಹರಿಸಿದ ಸವಾರ

    ಹೆಲ್ಮೆಟ್ ಹಾಕದಕ್ಕೆ ಫೈನ್ ಕಟ್ಟಬೇಕೆಂದು, ಟ್ರಾಫಿಕ್ ಪೊಲೀಸರ ಮೇಲೆಯೇ ಬೈಕ್ ಹರಿಸಿದ ಸವಾರ

    ಬೆಂಗಳೂರು: ತಪಾಸಣೆ ವೇಳೆ ಬೈಕ್ ಸವಾರನೊಬ್ಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಠಾಣೆ ಪಿಎಸ್‍ಐ ರವೀಂದ್ರ ರಾವ್‍ಗೆ ಗಾಯಗಳಾಗಿದ್ದು, ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಪೊಲೀಸರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಪರಾರಿಯಾಗಿದ್ದಾರೆ.

    ಬೈಕ್ ಸವಾರರು ಕಾನೂನು ಉಲ್ಲಂಘಿಸಿದ್ದು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಫೈನ್ ಹಾಕುತ್ತಿದ್ದರು. ಇದೇ ವೇಳೆ ಬೈಕ್ ಸವಾರರು ಹೆಲ್ಮೆಟ್ ಹಾಕದೇ ಬಂದಿದ್ದರು. ಆಗ ಬೈಕ್ ಸವಾರನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ಬೈಕ್ ನಲ್ಲಿ ಹರಿಸಿ ಪರಾರಿಯಾಗಿದ್ದಾರೆ.

    ಬೈಕ್ ಸವಾರರು ಟ್ರಾಫಿಕ್ ಪಿಎಸ್‍ಐ ರವೀಂದ್ರ ಅವರಿಗೆ ಗುದ್ದಿದ್ದಾರೆ. ಗಾಯಗೊಂಡ ಪಿಎಸ್‍ಐ ರವೀಂದ್ರ ರಾವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಡಿಯೋ: ಬ್ಯಾರಿಕೇಡ್ ಅಡ್ಡವಿರಿಸಿದ್ರೂ ನಾಲ್ವರು ಪೊಲೀಸರ ಮೇಲೆ ಕಾರು ಚಲಾಯಿಸಿಯೇ ಬಿಟ್ಟ!

  • ದಂಡ ಕಟ್ಟು ಎಂದಿದ್ದಕ್ಕೆ ಬಿಎಂಟಿಸಿ ಬಸ್ ಅಡಿ ಮಲಗಿ ಆಟೋ ಡ್ರೈವರ್ ಹೈಡ್ರಾಮ

    ದಂಡ ಕಟ್ಟು ಎಂದಿದ್ದಕ್ಕೆ ಬಿಎಂಟಿಸಿ ಬಸ್ ಅಡಿ ಮಲಗಿ ಆಟೋ ಡ್ರೈವರ್ ಹೈಡ್ರಾಮ

    ಬೆಂಗಳೂರು: ದಂಡ ಕಟ್ಟು ಎಂದು ಹೇಳಿದ್ದಕ್ಕೆ ಆಟೋಚಾಲಕನೊಬ್ಬ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಕೆಳಗೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.

    ಮಹೇಶ್ ನಿಯಮ ಉಲ್ಲಂಘನೆ ಮಾಡಿದ ಆಟೋ ಚಾಲಕ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಆಟೋಚಾಲಕನನ್ನು ಹಿಡಿದ ಟ್ರಾಫಿಕ್ ಪೊಲೀಸರು, ಪರಿಶೀಲಿಸಿದಾಗ 32 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಆಗಿರೋದು ಕಂಡುಬಂದಿದೆ. ಹೀಗಾಗಿ ದಂಡ ಕಟ್ಟು ಎಂದು ಪೊಲೀಸರು ಕೇಳಿದ ಟ್ರಾಫಿಕ್ ಪೊಲೀಸ್ ಸ್ಟೇಷನ್ ಮುಂದೆ ಫುಲ್ ಹೈಡ್ರಾಮ ಶುರು ಮಾಡಿದ್ದಾನೆ.

    https://www.youtube.com/watch?v=pCupA_D949c

    ನನ್ನ ಬಳಿ ದುಡ್ಡಿಲ್ಲ. ಮಗು ಆಸ್ಪತ್ರೆಯಲ್ಲಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಬಳಿಕ ಎರಡು ಕೇಸ್ ದಂಡ ಕಟ್ಟುತ್ತೀನಿ ಉಳಿದಿದ್ದು ಆಮೇಲೆ ಕಟ್ಟುತ್ತೀನಿ ಎಂದು ಸಬೂಬು ಹೇಳಿದ್ದಾನೆ. ಪೊಲೀಸರು ಇದಕ್ಕೆ ಒಪ್ಪದೇ ಇದ್ದಾಗ ಬಸ್ ಅಡಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ದಿಢೀರ್ ಆಗಿ ಆಟೋಚಾಲಕ ಬಸ್ ಅಡಿಗೆ ಬಿದ್ದಿದ್ದನ್ನು ನೋಡಿ ಸಾರ್ವಜನಿಕರು ಶಾಕ್ ಆಗಿದ್ದರು. ಕೊನೆಗೆ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ಏ.1ರಿಂದ 3 ಲಕ್ಷಕ್ಕಿಂತ ಹೆಚ್ಚು ಹಣ ಪಡೆದ್ರೆ 3 ಲಕ್ಷ ರೂ. ಫೈನ್ ನೀವೇ ಕಟ್ಬೇಕು!

    ನವದೆಹಲಿ: ಏಪ್ರಿಲ್ 1ರಿಂದ ಯಾವುದೇ ಕಾರಣಕ್ಕೂ ನೀವು 3 ಲಕ್ಷಕ್ಕಿಂತ ನಗದು ಹಣ ಸ್ವೀಕರಿಸಬೇಡಿ. ಒಂದು ವೇಳೆ 3 ಲಕ್ಷಕ್ಕಿಂತ ಹೆಚ್ಚು ಹಣ ಕೊಟ್ಟರೆ ಅಷ್ಟೇ ಮೊತ್ತದ ಫೈನ್ ಕಟ್ಟಬೇಕಾಗುತ್ತದೆ. ಕಪ್ಪು ಹಣದ ವಹಿವಾಟಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿರುವ 3 ಲಕ್ಷ ರೂ. ನಗದು ವಹಿವಾಟು ಮಿತಿ ಏಪ್ರಿಲ್ 1ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.

    ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಗದಿತ ಮಿತಿಗಿಂತ ಹೆಚ್ಚು ಹಣದ ನಗದು ವಹಿವಾಟು ನಡೆಸಿದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ. ಇದು ನೀವು ಸ್ವೀಕರಿಸಿದ ಹಣದ ಮೊತ್ತಕ್ಕೆ ಸರಿಸಮನಾಗಿರಬಹುದು ಎಂದು ಹೇಳಿದ್ದಾರೆ.

    ಒಂದು ವೇಳೆ ನೀವು 4 ಲಕ್ಷ ರೂ. ವಹಿವಾಟು ನಡೆಸಿದರೆ ದಂಡ 4 ಲಕ್ಷ ರೂಪಾಯಿ. ನೀವು 50 ಲಕ್ಷ ರೂ.ಗಳ ವಹಿವಾಟು ನಡೆಸಿದರೆ ದಂಡ 50 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಹಣವನ್ನು ಸ್ವೀಕರಿಸಿದ ವ್ಯಕ್ತಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದರು. ಯಾರಾದರೂ ನಗದು ಹಣ ನೀಡಿ ದುಬಾರಿ ವಾಚ್ ಖರೀದಿಸಿದರೆ, ಹಣವನ್ನು ಸ್ವೀಕರಿಸಿದ ಅಂಗಡಿಯ ಮಾಲೀಕರೇ ದಂಡ ಪಾವತಿಸಬೇಕಾಗುತ್ತದೆ. ಭಾರೀ ಪ್ರಮಾಣದ ಹಣದ ವಹಿವಾಟು ನಡೆಸುವುದನ್ನು ತಡೆಗಟ್ಟುವುದೇ ನಮ್ಮ ಉದ್ದೇಶ ಎಂದು ಹೇಳಿದರು.

    ಈ ಹಿಂದೆ ಲೆಕ್ಕ ತೋರಿಸದ ಹಣವನ್ನು ಕೆಲವರು ಪ್ರವಾಸ, ದುಬಾರಿ ಕಾರು, ವಾಚ್ ಹಾಗೂ ಆಭರಣ ಖರೀದಿಗೆ ಬಳಸುತ್ತಿದ್ದರು. ಆದರೆ ಇನ್ನು ಮುಂದೆ ಈ ನಿಯಮಗಳು ಇದಕ್ಕೆ ತಡೆಯೊಡ್ಡಲಿವೆ. ಈ ಮೂಲಕ ಕಪ್ಪು ಹಣ ಚಲಾವಣೆಗೆ ಬ್ರೇಕ್ ಬೀಳಲಿದೆ ಎಂದು ಹೇಳಿದರು. ಹೊಸ ನಿಯಮಗಳು ಬ್ಯಾಂಕಿಂಗ್ ಕಂಪೆನಿಗಳು, ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯವಾಗುವುದಿಲ್ಲ.