ಬೆಂಗಳೂರು: ವ್ಯಕ್ತಿಯೊಬ್ಬರು ಟ್ರಾಫಿಕ್ ನಿಯಮ (Traffic Rule) ಪಾಲಿಸದೆ ಬರೋಬ್ಬರಿ 643 ಬಾರಿ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ ದಾಖಲೆಯ ಫೈನ್ (Fine) ಬಿದ್ದಿದೆ. ಬರೋಬ್ಬರಿ 3.22 ಲಕ್ಷ ರೂ. ಫೈನ್ ಬಿದ್ದಿರೋ ಸ್ಕೂಟಿ (Scooty) ಮೇಲೆ ಇದೀಗ ಟ್ರಾಫಿಕ್ ಪೊಲೀಸರು ಕ್ಯಾಮೆರಾ ಕಣ್ಣಿಟ್ಟಿದ್ದಾರೆ.
ಈ ಸ್ಕೂಟಿ ಬೆಲೆ 20-30 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಬಿದ್ದಿರುವ ದಂಡ ಬರೋಬ್ಬರಿ 3.22 ಲಕ್ಷ ರೂ. ಇದೀಗ ಪೊಲೀಸರ ಕಣ್ತಪ್ಪಿಸಿ ಓಡಾಡಬಹುದು ಎನ್ನುವವರಿಗೆ ಕ್ಯಾಮೆರಾ ಶಾಕ್ ನೀಡಿದೆ. ಇದೀಗ ದಾಖಲೆಯ ನಿಯಮ ಉಲ್ಲಂಘಿಸಿದ ವೆಹಿಕಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್
ಮಂಡ್ಯ: ಆಸ್ಪತ್ರೆಗೆ ಬೈಕ್‍ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿ ಹೆಲ್ಮೆಟ್ (Helmet) ಇಲ್ಲ ಎಂದು ಬೈಕ್ (Bike) ಕೀ ಕಿತ್ತುಕೊಂಡು ಪೊಲೀಸರು ಮಾನವೀಯತೆ ಮರೆತಿರುವ ಘಟನೆ ಮಂಡ್ಯದಲ್ಲಿ ಜರುಗಿದೆ.
ಮಂಡ್ಯ ನಗರದ ಮಹಾವೀರ ವೃತ್ತದ ಬಳಿ ಕೆಆರ್‍ಪೇಟೆಯಿಂದ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತಂದೆ-ತಾಯಿ ಬೈಕ್‍ನಲ್ಲಿ ತಮ್ಮ ಮಗುವನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಬೈಕ್‍ನ್ನು ಪೊಲೀಸರು ಅಡ್ಡಗಟ್ಟಿದ ವೇಳೆ ಬೈಕ್‍ನಲ್ಲಿ ಇದ್ದ ಮಗುವಿನ ತಂದೆ, ಸರ್.. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ ಬಿಡಿ ಸಾರ್ ಎಂದಿದ್ದಾರೆ. ಈ ವೇಳೆ ಪೊಲೀಸರು, ಹೆಲ್ಮೆಟ್ ಎಲ್ಲಿ ಮೊದಲು ಫೈನ್ ಕಟ್ಟು ಎಂದು ಬೈಕ್ ಕೀಯನ್ನು ಕಿತ್ತುಕೊಂಡಿದ್ದಾರೆ. ನಂತರ ಸರ್ ನಿಜವಾಗಲೂ ಹಣವಿಲ್ಲ ಸರ್ ಆಸ್ಪತ್ರೆಗೆ ಹೋಗಬೇಕು ಬಿಡಿ ಸಾರ್ ಎಂದು ಮತ್ತೆ ಹೇಳಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾದ ನಟ ಶಶಿಕುಮಾರ್
ಇಷ್ಟಾದ್ರು ಸಹ ಮಾನವೀಯತೆ ಮರೆತಿರುವ ಪೊಲೀಸರು ಬೈಕ್‍ನ ಕೀ (Bike Key) ಕೊಡುವುದಿಲ್ಲ. ಬಳಿಕ ಸ್ನೇಹಿತರಿಗೆ ಹಣ ಹಾಕಿ ಎಂದು ಕೇಳುತ್ತಿದ್ದರೆ, ಇತ್ತ ಪತ್ನಿ ಮಗುವನ್ನು ಎತ್ತಿಕೊಂಡು ಫುಟ್‍ಪಾತ್‍ನಲ್ಲಿ ಕೂತಿದ್ರು. ನಂತರ ಸ್ನೇಹಿತರ ಬಳಿ ಗೂಗಲ್ ಪೇ (Google Pay) ಮಾಡಿಸಿಕೊಂಡು ಎಟಿಎಂನಲ್ಲಿ ಹಣ ಡ್ರಾ ಮಾಡಿ ಫೈನ್ ಕಟ್ಟಿದ ಬಳಿಕ ಪೊಲೀಸರು ಬೈಕ್ ಕೀ ಕೊಟ್ಟರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಕೊರೊನಾ (Corona) ಪ್ರಕರಣಗಳ ನಿಯಂತ್ರಣಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದ (Delhi) ಮಾಸ್ಕ್ (Mask) ಫೈನ್‍ನನ್ನು (Fine) ತೆರವುಗೊಳಿಸಲಾಗಿದೆ.
ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಸಾರ್ವಜನಿಕರ ಮೇಲೆ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವ ಸಾರ್ವಜನಿಕರ ವಿರುದ್ಧ 500 ರೂ. ದಂಡ ವಿಧಿಸಲಾಗುತ್ತಿತ್ತು. ಇದೀಗ ಸರ್ಕಾರ ಈ ಮಾಸ್ಕ್ ಫೈನ್ ರದ್ದುಗೊಳಿಸಲು ಮುಂದಾಗಿದೆ. ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದ್ದಂತೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಇದನ್ನೂ ಓದಿ: ಬ್ಯಾಕ್ ಟೂ ಬ್ಯಾಕ್ ಭದ್ರತಾ ಪಡೆಗಳಿಂದ ನಾಲ್ವರು ಭಯೋತ್ಪಾದಕರ ಎನ್‍ಕೌಂಟರ್
ಈ ಹಿಂದೆ ಕೊರೊನಾ ಪಾಸಿಟಿವ್ ಕೇಸ್ ಏರಿಕೆ ಕಾಣುತ್ತಿದ್ದಾಗ ಏಪ್ರಿಲ್ ಬಳಿಕ ಸರ್ಕಾರ ದಂಡ ಹಾಕಲು ಮುಂದಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿತ್ತು. ಇದೀಗ 6 ತಿಂಗಳ ಬಳಿಕ ಸರ್ಕಾರ ಮಾಸ್ಕ್ ಫೈನ್ ರದ್ದುಪಡಿಸಿದೆ. ದೇಶದಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿ ಸಾಲು, ಸಾಲು ಹಬ್ಬಗಳು ಬರುತ್ತಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ – 25 ಮಂದಿ ದುರ್ಮರಣ
Live Tv
[brid partner=56869869 player=32851 video=960834 autoplay=true]
ಬಳ್ಳಾರಿ: ಮೈಸೂರಿನಲ್ಲಿ ನಡೆದ ಪೊಲೀಸರು ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಬಳ್ಳಾರಿಯಲ್ಲಿ ಮತ್ತೊಂದು ಅಂತದ್ದೇ ಘಟನೆ ನಡೆದಿದೆ.
ಫೈನ್ ಹಾಕುತ್ತಾರೆ ಅಂತ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದು, ತಾಯಿ ಮಗ ಗಾಯ ಮಾಡಿಕೊಂಡಿರುವ ಘಟನೆ ಬಳ್ಳಾರಿ ನಗರದ ಸಂಗಮ್ ಸರ್ಕಲ್ ಬಳಿ ನಡೆದಿದೆ.
ಪೊಲೀಸರು ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಾಲನೆ ಮಾಡುವ ಸವಾರರಿಗೆ ದಂಡ ಹಾಕುತ್ತಾ ನಿಂತಿದ್ದರು. ಈ ಸಂದರ್ಭದಲ್ಲಿ ತಾಯಿ-ಮಗ ಬೈಕಿನಲ್ಲಿ ಬರುತ್ತಿದ್ದರು. ಬೈಕ್ ಸವಾರ ಪೊಲೀಸರನ್ನ ನೋಡುತ್ತಿದ್ದಂತೆ ಫೈನ್ ಹಾಕ್ತಾರೆ ಅಂತ ಬೈಕ್ ಜೋರಾಗಿ ಚಾಲನೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಸ್ಕಿಡ್ ಆಗಿ ಬಿದ್ದು ತಾಯಿ ಮಗ-ಗಾಯ ಮಾಡಿಗೊಂಡಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ಪೊಲೀಸರದ್ದೇ ತಪ್ಪು ಎಂದು ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಕೆಲ ಹೊತ್ತು ಪೊಲೀಸ್ ಮತ್ತು ಜನರ ನಡುವೆ ವಾಗ್ವಾದ ನಡೆದು, ತದನಂತರದಲ್ಲಿ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿಸಿಗೊಳಿಸಿದ್ದಾರೆ. ಗಾಯಗೊಂಡ ತಾಯಿ-ಮಗ ಸುರಕ್ಷಿತವಾಗಿದ್ದಾರೆ.
ಶಿವಮೊಗ್ಗ: ಫೈನ್ ಕಟ್ಟಲು ಠಾಣೆಗೆ ಬಂದ ಕಳ್ಳರು ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಅವರು ಬೈಕ್ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ
ರಸ್ತೆಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಇಬ್ಬರು ಯುವಕರನ್ನು ತಡೆದು ನಿಲ್ಲಿಸಿದ ಪೊಲೀಸರು ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ನಮ್ಮ ಬಳಿ ದಂಡ ಕಟ್ಟಲು ಹಣವಿಲ್ಲ ಎಂದ ಯುವಕರನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ವಿಚಾರಣೆ ನಡೆಸಿ, ಇನ್ನು ಮುಂದೆ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿ ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ.
ಆದರೆ ವಿಚಾರಣೆ ಮುಗಿಸಿ ವಾಪಸ್ ಹೋಗುವಾಗ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ಪೊಲೀಸರ ಬೈಕ್ ಕಳ್ಳರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಠಾಣೆಯ ಸಮೀಪದಲ್ಲಿದ್ದ ಅಂಗಡಿಯೊಂದಕ್ಕೆ ಹೋದ ಯುವಕರು ನಮ್ಮ ಬೈಕ್ ಕೀ ಕಳೆದು ಹೋಗಿದೆ. ಲಾಕ್ ಓಪನ್ ಮಾಡಬೇಕು ಎಂದು ಬೇರೆ ಕೀ ಕೇಳಿದ್ದಾರೆ. ಅಲ್ಲಿಂದ ಬೇರೆ ಕೀ ತಂದು ಠಾಣೆಯಲ್ಲಿ ನಿಲ್ಲಿಸಿದ್ದ ಕಾನ್ಸ್ ಟೇಬಲ್ ಒಬ್ಬರ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ.
ತನ್ನ ಕರ್ತವ್ಯ ಮುಗಿಸಿ ಮನೆಗೆ ತೆರಳಲು ಅಣಿಯಾದ ಪೊಲೀಸ್ ಕಾನ್ಸ್ ಟೇಬಲ್ ಗೆ ಬೈಕ್ ಕಳೆದು ಹೋಗಿರುವುದು ಗಮನಕ್ಕೆ ಬಂದಿದೆ. ನಂತರ ಠಾಣೆಯ ಸುತ್ತಮುತ್ತ ಬೈಕಿಗಾಗಿ ಹುಡುಕಾಟ ನಡೆಸಿದ್ದಾರೆ. ಬೈಕ್ ಸಿಗದ ಕಾರಣ ಹೆಡ್ ಕಾನ್ಸ್‍ಟೇಬಲ್ ರಾಘವೇಂದ್ರ ಅವರು ಠಾಣೆಯಲ್ಲಿ ನಿಲ್ಲಿಸಿದ್ದ ಹೊಂಡಾ ಫ್ಯಾಷನ್ ಪ್ಲಸ್ ಬೈಕ್ ಅನ್ನು ಕಳವು ಮಾಡಿದ್ದಾರೆ ಎಂದು ಹೊಸನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ತನ್ನ ಬೈಕನ್ನು ಪತ್ತೆ ಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು: ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಆಡುಗೊಡಿಯಲ್ಲಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರೋ ರಾಜೇಶ್ ಎಂಬುವವರಿಗೆ ಸೇರಿರುವ ಬುಲೆಟ್ ಬೈಕ್ ಮೇಲೆ ಬರೋಬ್ಬರಿ 103 ಕೇಸ್ ಇರುವುದನ್ನು ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಸಂಚಾರಿ ನಿಮಯ ಉಲ್ಲಂಘನೆ ಕೇಸ್‍ಗಳು ಸೆಂಚುರಿ ದಾಟಿದ ಪರಿಣಾಮ ಸಂಚಾರಿ ಪೊಲೀಸರು 58 ಸಾವಿರದ 200 ರೂಪಾಯಿಯನ್ನು ದಂಡ ಹಾಕಿದ್ದಾರೆ.
ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಸಂಚಾರ, ಒನ್ ವೇ ಹೀಗೆ ಸುಮಾರು 103 ಬಾರಿ ಬೈಕ್ ಸವಾರ ರಾಜೇಶ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಈ ಕಾರಣದಿಂದ ಸಂಚಾರಿ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು. ಪರಿಣಾಮ ಇಂದು ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಗೆ ಬಂದ ರಾಜೇಶ್ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿದ್ದಾರೆ.
– ಪುನೀತ್, ಮಹೇಶ್ ಬಾಬು ಸ್ಟೈಲ್ ಮಾಡ್ಬೇಡಿ ಎಂದು ಎಸ್‍ಐ ವಾರ್ನ್
ಉಡುಪಿ: ಪುನೀತ್ ರಾಜ್ ಕುಮಾರ್, ಪ್ರಿನ್ಸ್ ಮಹೇಶ್ ಬಾಬು ಸ್ಟೈಲ್ ಮಾಡಿಕೊಂಡು ಓಡಾಡುವ ಆಟೋ ಚಾಲಕರಿಗೆ ಉಡುಪಿಯಲ್ಲಿ ಫೈನ್ ಬೀಳುತ್ತೆ. ಉಡುಪಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಇರುವ ಪೊಲೀಸರು ಡಬ್ಬಲ್ ಶರ್ಟ್ ಹಾಕುವ ಆಟೋ ಡ್ರೈವರ್‌ಗಳಿಗೆ ಪಾಠ ಮಾಡುತ್ತಿದ್ದಾರೆ.
ಉಡುಪಿಯಲ್ಲಿ ಆಟೋ ಚಾಲಕರು ಒಳಗೊಂದು ಶರ್ಟ್ ಹಾಕಿ, ಹೊರಗೆ ಖಾಕಿ ಶರ್ಟ್ ಓಪನ್ ಬಿಟ್ಟುಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಫುಲ್ ಹ್ಯಾಂಡ್ ಶರ್ಟ್ ಮೇಲೆ ಹಾಫ್ ಖಾಕಿ ಶರ್ಟ್ ಹಾಕಿಕೊಂಡು ಅದನ್ನು ಓಪನ್ ಬಿಟ್ಟುಕೊಂಡು ಆಟೋ ಡ್ರೈವರ್‌ಗಳು ಆಟೋ ಚಾಲನೆ ಮಾಡುತ್ತಿದ್ದಾರೆ. ಡಬ್ಬಲ್ ಶರ್ಟ್ ಹಾಕಿಕೊಂಡು ಬಾಡಿಗೆ ಮಾಡುವ ಆಟೋ ಡ್ರೈವರ್‌ಗಳನ್ನು ಉಡುಪಿ ಪೊಲೀಸರು ಬೆನ್ನು ಬಿದ್ದಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಪ್ರಕಾರ ಆಟೋ ಚಾಲಕರು ಕೇವಲ ಒಂದು ಖಾಕಿ ಶರ್ಟ್ ಮಾತ್ರ ಧರಿಸಿರಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಟೊಂಕ ಕಟ್ಟಿದ್ದಾರೆ. ನಗರದಲ್ಲಿ ಡಬ್ಬಲ್ ಶರ್ಟ್ ಹಾಕಿಕೊಂಡು ಮೋಟಾರು ಕಾಯ್ದೆ ಉಲ್ಲಂಘಿಸುವವರನ್ನು ಟ್ರಾಫಿಕ್ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ರಿಕ್ಷಾದಿಂದ ಇಳಿಸಿ ಬಟನ್ ಹಾಕಿಸಿ ಪೊಲೀಸರು ಪಾಠ ಹೇಳಿ ಕಳುಹಿಸುತ್ತಿದ್ದಾರೆ.
ಉಡುಪಿಯ ಅಂಬಲಪಾಡಿ ಜಂಕ್ಷನ್, ಕಲ್ಸಂಕ ಜಂಕ್ಷನ್, ಮಣಿಪಾಲ ಡಯಾನ ಸರ್ಕಲ್ ಸಿಟಿ ಬಸ್ ನಿಲ್ದಾಣ ಸೇರಿದಂತೆ ಜನ ಹೆಚ್ಚು ಓಡಾಡುವ ಆಟೋ ನಿಲ್ದಾಣಗಳು ಇರುವಲ್ಲೇ ಪೊಲೀಸರು ಶಿಸ್ತು ಪಾಲಿಸುವಂತೆ ಮಾಡಲು ಹೊರಟಿದ್ದಾರೆ. ರೌಡಿಗಳು ಡಬ್ಬಲ್ ಶರ್ಟ್ ಹಾಕಿ ಓಡಾಡುತ್ತಾರೆ. ಭಿಕ್ಷುಕರು ಎರಡು ಮೂರು ಶರ್ಟ್ ಹಾಕಿ ಓಡಾಡುತ್ತಾರೆ. ಆಟೋ ಚಾಲಕರಿಗೆ ಗೌರವವಾಗಿದೆ ನೀವು ಜನಸೇವೆ ಮಾಡುವವರು. ನೀವು ಶಿಸ್ತಿನಿಂದ ಇದ್ದು ಗ್ರಾಹಕರಿಗೆ ಉತ್ತಮ ಸೇವೆ ಕೊಡಿ ಎಂದು ಎಸ್‍ಐ ಅಬ್ದುಲ್ ಖಾದರ್ ಪಾಠ ಮಾಡಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್‍ಐ ಅಬ್ದುಲ್ ಖಾದರ್, ಮೇಲ್ನೋಟಕ್ಕೆ ಕಾಣುವ ಕಾನೂನು ಉಲ್ಲಂಘನೆಗೆ ದಂಡ ಹಾಕುತ್ತಿದ್ದೇವೆ. ಹೆಲ್ಮೆಟ್, ಸೀಟ್ ಬೆಲ್ಟ್ ಗಳನ್ನು ಹಾಕದವರಿಗೆ ಫೈನ್ ಹಾಕಿದ್ದೇವೆ. ಬುಧವಾರ ಅಂದರೆ ನಾಳೆಯಿಂದ ಡಬ್ಬಲ್ ಶರ್ಟ್ ಹಾಕುವವರಿಗೆ 500 ರೂಪಾಯಿ ದಂಡ ಹಾಕುತ್ತೀವಿ ಎಂದು ಹೇಳಿದರು.
ಬೆಂಗಳೂರು: ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಇಂದು ಬೆಳಗ್ಗೆ ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್ ಸೀಜ್ ಆದ ವಾಹನಗಳಿಗೆ ಫೈನ್ ಹಾಕಿ ನಂತರ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಹೈಕೋರ್ಟ್ ನೀಡಿರುವ ಆದೇಶದಲ್ಲಿ ಲಾಕ್‍ಡೌನ್ ವೇಳೆ ಸೀಜ್ ಮಾಡಲಾದ ವಾಹನಗಳಿಗೆ ಫೈನ್ ಹಾಕಿ ರಿಲೀಸ್ ಮಾಡಬೇಕು. ಅದರಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಒಂದು ಸಾವಿರ ದಂಡ ಮತ್ತು ದ್ವಿಚಕ್ರ ಮತ್ತು ಆಟೋ ರಿಕ್ಷಾಗಳಿಗೆ 500 ದಂಡ ವಿಧಿಸಬೇಕು. ಜೊತೆಗೆ ಇನ್ಶೂರೆನ್ಸ್ ಸೇರಿದಂತೆ ವಾಹನದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ವಾಹನಗಳನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಭಾಸ್ಕರ್ ರಾವ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದರು.
ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರು.
It’s decided to return the Corona seized vehicles from 1/5/20 onwards. Those seized first will be returned first.The documents will be verified and vehicle returned. This has approval of Hon CM and HM. We are doing the paperwork to ease the process.
ನಿನ್ನೆ, ಮೊನ್ನೆ ಸೀಜ್ ಮಾಡಿದ ವಾಹನಗಳನ್ನು ನಾಳೆಯೇ ರಿಲೀಸ್ ಮಾಡುವುದಿಲ್ಲ. ಮಾರ್ಚ್ 30ರಂದು ಸೀಜ್ ಆದ ವಾಹಗಳನ್ನ ಮೊದಲು ಬಿಡುಗಡೆ ಮಾಡುತ್ತೇವೆ. ಆ ಬಳಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರಂತೆ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡುತ್ತೇವೆ. ಜೊತೆಗೆ ಕೋರ್ಟ್ ಫೈನ್ ನೋಡಿಕೊಂಡು ಆ ನಿಯಮದ ಪ್ರಕಾರ ಆಯಾಯ ಪೊಲೀಸ್ ಠಾಣೆಗಳಲ್ಲೇ ವಾಹನಗಳನ್ನು ರಿಲೀಸ್ ಮಾಡಲಾಗುವುದು ಎಂದಿದ್ದರು.
ಇನ್ನುಮುಂದೆ ವಾಹನಗಳನ್ನು ಸೀಜ್ ಮಾಡಲ್ಲ ಎಂದುಕೊಂಡರೆ ಅದು ತಪ್ಪು. ಇವತ್ತು ಕೂಡ ನಾವು ವಾಹನಗಳನ್ನು ವಶಕ್ಕೆ ಪಡೆಯಬಹುದು. ಲಾಕ್‍ಡೌನ್ ಸಂಪೂರ್ಣವಾಗಿ ತೆಗೆಯುವವರೆಗೂ ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಬಾಸ್ಕರ್ ರಾವ್ ಅವರು ಎಚ್ಚರಿಕೆ ಕೂಡ ನೀಡಿದ್ದರು.
– ಮೊದಲನೇ ಬಾರಿ ಲಾಕ್‍ಡೌನ್ ಪಾಲಿಸದ್ದಕ್ಕೆ ಶಿಕ್ಷೆ
– ಮನೆಯಿಂದ ಹೊರಬಂದವರಿಗೆ ಶಿಕ್ಷೆ
ಮುಂಬೈ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ವಿಧಿಸಿದ ಲಾಕ್‍ಡೌನ್‍ಅನ್ನು ಉಲ್ಲಂಘಿಸಿದ್ದಕ್ಕಾಗಿ ಮಹಾರಾಷ್ಟ್ರದ ಬಾರಾಮತಿ ನ್ಯಾಯಾಲಯವು ಮೂವರಿಗೆ ಮೂರು ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಜನರನ್ನು ಯಾರು ಹೊರಗೆ ಬರಬೇಡಿ ಎಂದು ಸೂಚಿಸಿದ್ದರೂ ಕೆಲವರು ಹೊರಗೆ ಬಂದು ಪೊಲೀಸರು ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹೊರಗೆ ಬಂದ ಮೂವರಿಗೆ ಬಾರಾಮತಿ ಕೋರ್ಟ್ ಇದೇ ಮೊದಲ ಬಾರಿಗೆ ಲಾಕ್‍ಡೌನ್ ನಿಯಮವನ್ನು ಪಾಲಿಸದೆ ಇದ್ದಕ್ಕೆ ಶಿಕ್ಷೆ ನೀಡಿದೆ.
ಲಾಕ್‍ಡೌನ್ ಉಲ್ಲಂಘಿಸಿದಕ್ಕೆ ಆರೋಪಿಗಳಾದ ಅಫ್ಜಲ್ ಅತ್ತಾರ್ (39), ಚಂದ್ರಕುಮಾರ್ ಷಾ (38) ಮತ್ತು ಅಕ್ಷಯ್ ಷಾ (32)ಗೆ ಬಾರಾಮತಿ ನ್ಯಾಯಾಲಯದ ನ್ಯಾಯಾಧೀಶ ಜೆ.ಜೆ.ಬಚುಲ್ಕರ್ ಅವರು, ಮೂರು ದಿನಗಳ ಜೈಲು ಶಿಕ್ಷೆ ಮತ್ತು ತಲಾ 500 ರೂ.ಗಳ ದಂಡ ಪಾವತಿಸಬೇಕೆಂದು ಬುಧವಾರ ಆದೇಶಿಸಿದ್ದಾರೆ. ಈ ಮೂಲಕ ಲಾಕ್‍ಡೌನ್ ಪಾಲಿಸದವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಬಾರಾಮತಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಶಿರ್ಗಾಂವ್ಕರ್, ಈ ಮೂವರು ಆರೋಪಿಗಳನ್ನು ಯಾವುದೇ ಕಾರಣವಿಲ್ಲದೆ ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ಓಡಾಡುತ್ತಿದ್ದು ಕಂಡುಬಂದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ವಿರುದ್ಧ ಸಿಆರ್‍ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಲಕ್ನೋ: ಹೆಲ್ಮಟ್ ಹಾಕಿಲ್ಲ ಎಂದು ಪೊಲೀಸರು ಫೈನ್ ಹಾಕಿದ್ದಕ್ಕೆ ಸವಾರನೋರ್ವ ಬೈಕ್ ಎಸೆದು ಅಳುತ್ತಾ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದ್ದು , ಹೆಲ್ಮೆಟ್ ಹಾಕದೆ ಬೈಕ್ ಓಡಿಸಿದಕ್ಕೆ ಬೈಕ್ ಸವಾರನನ್ನು ಅಡ್ಡಗಟ್ಟಿದ ಪೊಲೀಸರು ಫೈನ್ ಹಾಕಿದ್ದಾರೆ. ಇದಕ್ಕೆ ಕೋಪಗೊಂಡ ಆತ ಬೈಕ್ ತಳ್ಳಿ ಅದರ ಮೇಲೆಯೇ ಕುಳಿತುಕೊಂಡು ಅತ್ತಿದ್ದಾನೆ. ಪೊಲೀಸರು ವಿಡಿಯೋದ ಕೊನೆಯಲ್ಲಿ ಬಂದು ಆತನನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡುತ್ತಾರೆ.
ಈ ವಿಡಿಯೋವನ್ನು ಪಿಯೂಷ್ ರಾಜ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಟ್ರಾಫಿಕ್ ಫೈನ್ ಬಗ್ಗೆ ಆಕ್ರೋಶಗೊಂಡ ಬೈಕ್ ಸವಾರ ತನ್ನ ಕೋಪವನ್ನು ಬೈಕ್ ಮೇಲೆ ಹೊರಹಾಕಿದ್ದಾನೆ. ನಂತರ ಬಿದ್ದಿದ್ದ ಬೈಕ್ ಮೇಲೆ ಕುಳಿತುಕೊಂಡು ಅಳಲು ಪ್ರಾರಂಭ ಮಾಡಿದ್ದಾನೆ. ಪೊಲೀಸರು ಈ ಡ್ರಾಮಾವನ್ನು ನಿಂತುಕೊಂಡು ನೋಡುತ್ತಿದ್ದರು ಎಂದು ಬರೆದುಕೊಂಡಿದ್ದರು.
ಈ ವಿಡಿಯೋಕ್ಕೆ ಕೆಲ ನೆಟ್ಟಿಗರು ಕಮೆಂಟ್ ಮಾಡಿದ್ದು, ಕೆಲವರು ಪೊಲೀಸರ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ಬೈಕ್ ಸವಾರ ಪರವಾಗಿ ಕಮೆಂಟ್ ಮಾಡಿದ್ದಾರೆ. ಇವರಗೆ 60 ಸಾವಿರ ಕೊಟ್ಟು ಬೈಕ್ ತೆಗೆದುಕೊಳ್ಳಲು ಆಗುತ್ತೆ. ಆದರೆ 600 ರೂ. ಕೊಟ್ಟು ಹೆಲ್ಮೆಟ್ ತೆಗೆದುಕೊಳ್ಳಲು ಆಗುವುದಿಲ್ಲ. ಪೊಲೀಸರು ಫೈನ್ ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ನಿಯಮ ಸುರಕ್ಷತೆಗಾಗಿ ದೇಶದದ್ಯಾಂತ ಫಾಲೋ ಮಾಡಬೇಕು ಎಂದು ಕಮೆಂಟ್ ಮಾಡಿದ್ದಾರೆ.