Tag: ಫೈನಲ್

  • World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ

    World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ

    ಬೆಂಗಳೂರು: ಏಕದಿನ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯ ಅಂತಿಮ ಹಂತಕ್ಕೆ ತಲುಪಿದೆ. ಇಂದು ಗುಜರಾತ್‌ನ (Gujarat) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾರತ (India) ಮತ್ತು ಆಸ್ಟ್ರೇಲಿಯಾ (Australia) ತಂಡಗಳ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಮ್ಯಾಚ್ ವೀಕ್ಷಿಸಲು ಅತ್ಯಂತ ಉತ್ಸುಕರಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ಅನೇಕ ಕಡೆಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.

    ಭಾರತದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಬೆಂಗಳೂರಿನ (Bengaluru) ಅನೇಕ ಕಡೆಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ವಿಶ್ವಕಪ್ ಗೆಲ್ಲಲಿ ಅಂತಾ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿದ್ದು, ಭಾರತದ ಬಾವುಟ ಇಟ್ಟು ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿದೆ- ಟೀಂ ಇಂಡಿಯಾಗೆ ತೆಂಡೂಲ್ಕರ್ ವಿಶ್

    ವಿಶ್ವಕಪ್ ಕ್ರಿಕೆಟ್ ಹಿನ್ನೆಲೆ ಭಾರತ ಗೆಲ್ಲಲಿ ಅಂತಾ ಎಲ್ಲೆಡೆ ಶುಭ ಹಾರೈಕೆಗಳ ಸುರಿಮಳೆ ಸುರಿಯುತ್ತಿದ್ದು, ಮಲ್ಲೇಶ್ವರಂ 18ನೇ ಕ್ರಾಸ್‌ನ ಮೈದಾನದಲ್ಲಿ ಪುಟಾಣಿ ಮಕ್ಕಳು ಬೆಸ್ಟ್ ವಿಶಶ್ ತಿಳಿಸಿದ್ದಾರೆ. ಬ್ಯಾಟ್ ಹಿಡಿದು ಇಂಡಿಯಾ ಗೆಲುವಿಗೆ ಹಾರೈಸಿದ್ದಾರೆ. ವಿಶ್ವಕಪ್ ಗೆಲುವಿಗಾಗಿ ಬನಶಂಕರಿ ದೇವಸ್ಥಾನದಲ್ಲಿ ಹೋಮ ಹವನ ನಡೆಯುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರ ಹೆಸರಿನಲ್ಲಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್

    ಇನ್ನು ವಂದೇ ಮಾತರಂ ಸರ್ವ ಸಂಘಟನೆಗಳ ವತಿಯಿಂದ ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ಪೂಜೆ ಆಯೋಜಿಸಿದ್ದು, ಬ್ಯಾಟ್, ಸ್ಟಂಟ್‌ಗಳಿಗೆ ಹಾರ ಹಾಕಿ, ಕುಂಬಳಕಾಯಿ ಹೊಡೆದು ಪೂಜೆ ಮಾಡಲಾಗಿದೆ. ಅಲ್ಲದೇ ಕ್ರಿಕೆಟ್ ಆಟಗಾರರು ಚೆನ್ನಾಗಿ ಆಟವಾಡಲಿ ಅಂತಾ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು, ಭಾರತ ತಂಡದ ಆಟಗಾರರ ಭಾವಚಿತ್ರ ಹಿಡಿದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ

    ಶ್ರೀ ಭುವನೇಶ್ವರಿ ಸಂಘದಿಂದ ಅದ್ಧೂರಿ ಸೆಲಬ್ರೆಷನ್ ನಡೆಯುತ್ತಿದ್ದು, ರಸ್ತೆಯಲ್ಲೆ ವಿಶ್ವಕಪ್ ಟ್ರೋಫಿ ನಿರ್ಮಾಣವಾಗಿದೆ. ಮಂಜುನಾಥ್ ನಗರದಲ್ಲಿ ವಿಶ್ವಕಪ್ ಹವಾ ಎಬ್ಬಿಸಿದ್ದು, ಪ್ರಸನ್ನ ಗಣಪತಿ ದೇವಸ್ಥಾನದ ಎದುರು ಹೋಮ ಹವನ ನಡೆಸಿದ್ದಾರೆ. ರಸ್ತೆಯ ಎರಡೂ ಕಡೆ ದೊಡ್ಡ ಬಾವುಟ ಕಟ್ಟಿ ಸಂಭ್ರಮಿಸಿದ್ದು, ಗೆದ್ದು ಬಾ ಟೀಂ ಇಂಡಿಯಾ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತದ ಗೆಲುವಿಗಾಗಿ ಇಶನ್ ಕಿಶನ್ ಕುಟುಂಬಸ್ಥರಿಂದ ವಿಶೇಷ ಪೂಜೆ

    ವರ್ಲ್ಡ್ ಕಪ್‌ಗಾಗಿ ಹಂಪಿನಗರದ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬ್ರಹ್ಮಶ್ರೀ ಡಾಕ್ಟರ್ ಉಮೇಶ್ ಶರ್ಮಾ ನೇತೃತ್ವದಲ್ಲಿ ಗಣಪತಿ ಹೋಮ, ಸುಬ್ರಹ್ಮಣ್ಯ ಹೋಮ, ಮೃತ್ಯುಂಜಯ ಹೋಮ, ದುರ್ಗ ಹೋಮ ನಡೆಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ದುರ್ಗ ದೇವಸ್ಥಾನದ ಬಂಗಾಳಿ ಪಂಡಿತರು, ವಾರಣಾಸಿ ಪಂಡಿತರು ಸೇರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ವಿಶ್ವ ಹಿಂದೂ ಪರಿಷತ್ ನಿಂದ ವಿಶ್ವಕಪ್‌ಗಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಕನ್ನಡ ಪರ ಹೋರಾಟಗಾರರು ಉರುಳು ಸೇವೆ ಮಾಡಿದ್ದು, ಸರ್ಕಲ್ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಪೂಜೆ ಸಲ್ಲಿಸಲಾಗಿದೆ. ಇದನ್ನೂ ಓದಿ: ವಿಶ್ವಕಪ್ 2023- ಜೀತೆಗಾ ಹಿಂದೂಸ್ತಾನ್ ಜೀತೆಗಾ ಎಂದ ಜಿಲ್ಲೆಯ ಕ್ರೀಡಾಭಿಮಾನಿಗಳು

    ಎಲ್ರಲ್ಲೂ ವಿಶ್ವಕಪ್ ಜ್ವರ ಹೆಚ್ಚಾಗಿದ್ದು, ಕೆಫೆ ಕಾಫಿ ಕನ್ಫೆಷನ್‌ನಿಂದ ಕಾಫಿಯಲ್ಲಿ ವರ್ಲ್ಡ್ ಕಪ್ ಅರಳಿದೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಹೋಮ ನಡೆಸುತ್ತಿದ್ದು, ಭಾರತ ತಂಡದ ಗೆಲುವಿಗಾಗಿ ಹೋಮ ನಡೆಸಲಾಗುತ್ತಿದೆ. ಇದನ್ನೂ ಓದಿ: World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

  • ಚೇಸ್ ಮಾಸ್ಟರ್ ಕೊಹ್ಲಿ ವಿಕೆಟ್ ಮೇಲೆ ಆಸ್ಟ್ರೇಲಿಯಾ ಕಣ್ಣು- ಔಟ್ ಮಾಡಲು ಆಸೀಸ್ ರಣತಂತ್ರ

    ಚೇಸ್ ಮಾಸ್ಟರ್ ಕೊಹ್ಲಿ ವಿಕೆಟ್ ಮೇಲೆ ಆಸ್ಟ್ರೇಲಿಯಾ ಕಣ್ಣು- ಔಟ್ ಮಾಡಲು ಆಸೀಸ್ ರಣತಂತ್ರ

    ಅಹಮದಾಬಾದ್: ಭಾರತ (India) – ಆಸ್ಟ್ರೇಲಿಯಾ (Australia) ವಿಶ್ವಕಪ್ (World Cup) ಫೈನಲ್ (Final) ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆಸೀಸ್‌ಗೆ ಭಾರತದ ಈ ಆಟಗಾರನದ್ದೆ ಫುಲ್ ಟೆನ್ಶನ್. ಟೀಂ ಇಂಡಿಯಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (Virat Kohli) ವಿಕೆಟ್ ಪಡೆಯೋದೆ ಆಸಿಸ್‌ನ ಫಸ್ಟ್ ಟಾರ್ಗೆಟ್. ವಿರಾಟ್ ಕೊಹ್ಲಿ ವಿಶ್ವಕಪ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಸಿಸ್‌ಗೆ ನಡುಕ ಹುಟ್ಟಿಸಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದ ಕ್ರಿಕೆಟ್ ಲೋಕದ ಸರದಾರ ವಿರಾಟ್ ಕೊಹ್ಲಿ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಮತ್ತು 50+ ಸ್ಕೋರ್‌ಗಳ ದಾಖಲೆಗಳಲ್ಲಿ ಕೊಹ್ಲಿ, ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಕ್ರಿಕೆಟ್‌ನ ಮತ್ತೊಬ್ಬ ದೇವರು ಎನಿಸಿಕೊಂಡಿದ್ದಾರೆ. ಇದೇ ಕಿಂಗ್ ಕೊಹ್ಲಿ ಇದೀಗ ಆಸ್ಟ್ರೇಲಿಯಾ ಪಾಲಿಗೆ ದ್ವಿಸ್ವಪ್ನವಾಗಿ ಕಾಡುತ್ತಿದ್ದಾರೆ. ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರನ್ ಮಿಷನ್ ವಿರಾಟ್ ಕೊಹ್ಲಿಯದ್ದೆ ಟೆನ್ಶನ್. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸೋಕೆ ಆಸೀಸ್‌ನ ಬೌಲರ್‌ಗಳು ರಣತಂತ್ರ ಹಣೆಯುತ್ತಿದ್ದು, ವಿರಾಟ್ ಕೊಹ್ಲಿಯೇ ಆಸೀಸ್ ತಂಡದ ಮೊದಲ ಟಾರ್ಗೆಟ್ ಆಗಿದ್ದಾರೆ. ಇದನ್ನೂ ಓದಿ: ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!

    2023ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಉಗ್ರ ರೂಪಕ್ಕೆ ಎದುರಾಳಿ ಬೌಲರುಗಳು ಪತರುಗಟ್ಟಿ ಹೋಗಿದ್ದಾರೆ. ಒಟ್ಟು 10 ಪಂದ್ಯಗಳಲ್ಲಿ, 90.68 ರನ್ ಸ್ಟ್ರೈಕ್ ರೇಟ್‌ನೊಂದಿಗೆ 711 ರನ್ ಗಳಿಸಿ, 2023ರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಇಳಿದು, ಆಡಿದ 10 ಇನ್ನಿಂಗ್ಸ್ನಲ್ಲಿ 711 ರನ್ ಗಳಿಸಿದ್ದು, ಇದರಲ್ಲಿ ಮೂರು ಶತಕ, 5 ಅರ್ಧಶತಕ ಸೇರಿದೆ. 10 ಇನ್ನಿಂಗ್ಸ್ಗಳಲ್ಲಿ 64 ಬೌಂಡರಿ, 9 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಕಿಂಗ್ ಕೊಹ್ಲಿಯ ಈ ಬೆಂಕಿಯಂತಹ ಪರ್ಫಾಮೆನ್ಸ್ ನೋಡಿಯೇ ಕಾಂಗಾರುಗಳಿಗೆ ನಡುಕ ಶುರುವಾಗಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು

    ಮೊದಲ ಬ್ಯಾಟಿಂಗ್ ಮಾಡಿದರೂ ಕೊಹ್ಲಿ ಸರಾಗವಾಗಿ ರನ್ ಗಳಿಕೆ ಮಾಡುತ್ತಾರೆ. ಒಂದೊಮ್ಮೆ ಭಾರತಕ್ಕೆ ಎಷ್ಟೇ ಟಾರ್ಗೆಟ್ ನೀಡಿದರೂ ಕೊಹ್ಲಿ ಕ್ರಿಸ್‌ನಲ್ಲಿದ್ದರೆ ಚೇಸ್ ಮಾಡಿ, ಭಾರತವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದೇನೆ ಆಗಲಿ, ವಿರಾಟ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲಲಿ ಅನ್ನೋದು ಕೋಟ್ಯಂತರ ಭಾರತೀಯರ ಪ್ರಾರ್ಥನೆ, ಹಾರೈಕೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ

  • ಭಾರತ-ಇಂಗ್ಲೆಂಡ್ ಸೆಮಿ ಸಮರ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

    ಭಾರತ-ಇಂಗ್ಲೆಂಡ್ ಸೆಮಿ ಸಮರ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

    ಆಡಿಲೇಡ್: ಟಿ20 ವಿಶ್ವಕಪ್‍ನ (T20 World Cup)  ಎರಡನೇ ಸೆಮಿಫೈನಲ್ (Semi-Final) ಕಾದಾಟದಲ್ಲಿ ಇಂದು ಭಾರತ (India) ಹಾಗೂ ಇಂಗ್ಲೆಂಡ್ (Englan) ಕಾದಾಡುತ್ತಿದೆ. ವಿಶ್ವಕ್ರಿಕೆಟ್ ಪ್ರೇಮಿಗಳ ಚಿತ್ತ ಆಡಿಲೇಡ್‍ನತ್ತ (Adelaide) ನೆಟ್ಟಿದೆ.

    ಇಂದು ಗೆದ್ದ ತಂಡ ಫೈನಲ್‍ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನು ಹೊಂದಿದೆ. ಭಾರತಕ್ಕೆ ಬ್ಯಾಟಿಂಗ್ ಬಲವಾದರೆ, ಅತ್ತ ಇಂಗ್ಲೆಂಡ್‍ಗೆ ಆಲ್‍ರೌಂಡರ್‌ಗಳ ಬಲವಿದೆ. ಹಾಗಾಗಿ ಈ ಪಂದ್ಯ ಬಹಳ ರೋಚಕತೆಯನ್ನು ಮೂಡಿಸಿದೆ. ಇದನ್ನೂ ಓದಿ: ಕಿವೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – 3ನೇ ಬಾರಿ ಫೈನಲ್‍ಗೇರಿದ ಪಾಕ್

    ಭಾರತಕ್ಕೆ ರೋಹಿತ್, ರಾಹುಲ್, ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶಕ್ತಿಯಾದರೆ, ಅತ್ತ ಅಲೆಕ್ಸ್ ಹೇಲ್ಸ್, ಬಟ್ಲರ್, ಅಲಿ, ಬೆನ್‍ಸ್ಟೋಕ್ಸ್ ಬ್ಯಾಟಿಂಗ್ ಬಿರುಗಾಳಿಗಳು ಹಾಗಾಗಿ ಆಡಿಲೇಡ್‍ನಲ್ಲಿ ರನ್ ಮಳೆ ಸುರಿಯುವ ಸಾಧ್ಯತೆ ಇದೆ. ಇಂದು ಗೆದ್ದ ತಂಡ ನ.13 ರಂದು ಈಗಾಗಲೇ ಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಸೋತ ತಂಡ ಮನೆ ದಾರಿ ಹಿಡಿಯಲಿದೆ. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದ್ದು, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೀಗ ಇಂಗ್ಲೆಂಡ್ ಮಣಿಸಿ, ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ಇರಾದೆಯಲ್ಲಿ ಭಾರತವಿದ್ದರೆ, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಬೇಕಾದ ಸವಾಲು ಟೀಂ ಇಂಡಿಯಾ ಮುಂದಿದೆ. ಇತ್ತ ಅಭಿಮಾನಿಗಳೂ ಕೂಡ ಇದೆ ಆಸೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದು ಫೈನಲ್‍ನಲ್ಲಿ ಪಾಕಿಸ್ತಾನವನ್ನು ಎದುರಿಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈ ವಿರುದ್ಧ ಗೆದ್ದು ಚೊಚ್ಚಲ ಬಾರಿ ರಣಜಿ ಟ್ರೋಫಿ ಎತ್ತಿಹಿಡಿದ ಮಧ್ಯಪ್ರದೇಶ

    ಮುಂಬೈ ವಿರುದ್ಧ ಗೆದ್ದು ಚೊಚ್ಚಲ ಬಾರಿ ರಣಜಿ ಟ್ರೋಫಿ ಎತ್ತಿಹಿಡಿದ ಮಧ್ಯಪ್ರದೇಶ

    ಬೆಂಗಳೂರು: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ 41 ಬಾರಿ ರಣಜಿ ಟ್ರೋಫಿ ಗೆದ್ದು ದಾಖಲೆ ಬರೆದಿರುವ ಮುಂಬೈ ವಿರುದ್ಧ ಮಧ್ಯಪ್ರದೇಶ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಸಂಭ್ರಮಿಸಿದೆ.

    4ನೇ ದಿನದಾಟದಲ್ಲಿ ಮುಂಬೈ ತಂಡ ನೀಡಿದ 108 ರನ್‍ಗಳ ಗೆಲುವಿನ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ 29.5 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 108 ರನ್ ಸಿಡಿಸಿ 6 ವಿಕೆಟ್‍ಗಳ ಗೆಲುವು ದಾಖಲಿಸಿತು. ಈ ಮೂಲಕ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    ಮಧ್ಯಪ್ರದೇಶ ಪರ ಹಿಮಾಂಶು ಮಂತ್ರಿ 37 ರನ್ (55 ಎಸೆತ, 3 ಬೌಂಡರಿ), ಶುಭಂ ಶರ್ಮಾ 30 ರನ್ (75 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ರಜತ್ ಪಾಟಿದಾರ್ ಅಜೇಯ 30 ರನ್ (37 ಎಸೆತ, 4 ಬೌಂಡರಿ) ಬಾರಿಸಿ ಮಧ್ಯಪ್ರದೇಶಕ್ಕೆ ಗೆಲುವಿನ ಉಡುಗೊರೆ ನೀಡಿದರು.

    ಸಂಕ್ಷಿಪ್ತ ಸ್ಕೋರ್:
    ಮುಂಬೈ: ಪ್ರಥಮ ಇನ್ನಿಂಗ್ಸ್ – 374 ರನ್‍ಗೆ ಆಲೌಟ್, ದ್ವಿತೀಯ ಇನ್ನಿಂಗ್ಸ್ – 269 ರನ್‍ಗೆ ಆಲೌಟ್
    ಮಧ್ಯಪ್ರದೇಶ: ಪ್ರಥಮ ಇನ್ನಿಂಗ್ಸ್ 336 ರನ್‍ಗೆ ಆಲೌಟ್, ದ್ವಿತೀಯ ಇನ್ನಿಂಗ್ಸ್ 108ಕ್ಕೆ 4

    Live Tv

  • ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

    ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

    ಮುಂಬೈ: ಐಪಿಎಲ್ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಗ್ರ ಕ್ರಮಾಂಕದ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಮತ್ತು ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.

    ಅಹಮದಾಬಾದ್‌ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಇಂದು ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ. ನೂತನವಾಗಿ ಸೇರ್ಪಡೆಗೊಂಡ ಗುಜರಾತ್ ಟೈಟಾನ್ಸ್ ತಂಡವು ಮೊದಲ ಪ್ರಯತ್ನದಲ್ಲೇ ಫೈನಲ್ಸ್ ಪ್ರವೇಶಿಸಿದ್ದು, ಈ ಬಾರಿ ಚಾಂಪಿಯನ್ ಆಗುವ ನಿರೀಕ್ಷೆ ಮೂಡಿಸಿದೆ. 2008ರ ಬಳಿಕ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿರುವ ರಾಜಾಸ್ಥಾನ ರಾಯಲ್ಸ್ ಸಹ 2ನೇ ಬಾರಿಗೆ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

    IPL 2022 BATLER

    ಐಪಿಎಲ್ ಆರಂಭಗೊಂಡಾಗ ಲೀಗ್‌ನಲ್ಲೇ ಹೊರಬೀಳುತ್ತವೆ ಎಂಬ ಟೀಕೆಗಳನ್ನು ಮೀರಿ ಉಭಯ ತಂಡದ ನಾಯಕರಾದ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಫೈನಲ್‌ವರೆಗೂ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ.

    ಟೈಟಾನ್ಸ್ ಬೌಲಿಂಗ್, ರಾಯಲ್ಸ್ ಬ್ಯಾಟಿಂಗ್: ರಾಜಾಸ್ಥಾನ್‌ ರಾಯಲ್ಸ್‌ನ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾನ್ಸನ್, ದೇವದತ್ ಪಡಿಕ್ಕಲ್, ಶಿಮೊನ್ ಹೆಟ್ಮಾಯರ್ ರಾಜಾಸ್ಥಾನ್ ರಾಯಲ್ಸ್‌ನಲ್ಲಿ ಬಲಿಷ್ಠ ಬ್ಯಾಟರ್‌ಗಳಿಗೆ ಗುಜರಾತ್ ಟೈಟಾನ್ಸ್ ಮೊಹಮದ್ ಶಮಿ, ರಶೀದ್ ಖಾನ್, ಅಲ್ವಾರಿ ಜೋಸೆಫ್, ಯಶ್ ದಯಾಳ್, ಸಾಯಿಕಿ ಶೋರ್‌ರ ಬೌಲರ್‌ಗಳಿಂದ ಕಠಿಣ ಸವಾಲು ಎದುರಾಗಲಿದೆ.

    818 ರನ್‌ಗಳನ್ನು ಗಳಿಸಿ ಆರೆಂಜ್‌ಕ್ಯಾಪ್ ಮುಡಿಗೇರಿಸಿಕೊಂಡಿರುವ ಜೋಸ್ ಬಟ್ಲರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಡೆಯುವುದು ಬೌಲರ್‌ಗಳಿಗೂ ಸವಾಲಾಗಿದೆ. ಈಗಾಗಲೇ ಮುಖಾಮುಖಿಯಾಗಿರುವ 2 ಪಂದ್ಯಗಳಲ್ಲಿ ಟೈಟಾನ್ಸ್ ಗೆಲುವು ಸಾಧಿಸಿದ್ದು, ಅಂತಿಮ ಫೈನಲ್‌ ಪಂದ್ಯದಲ್ಲಿ ಆರ್‌ಆರ್ ಗೆಲುವಿನ ಮೆಟ್ಟಿಲೇರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಇದರೊಂದಿಗೆ ಗುಜರಾತ್ ಬ್ಯಾಟರ್‌ಗಳಾದ ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ, ಮ್ಯಾಥ್ಯು ವೇಡ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್‌ಗೆ ಪ್ರಸಿದ್ ಕೃಷ್ಣ, ಟ್ವೆಂಟ್ ಬೌಲ್ಟ್, ಆರ್.ಅಶ್ವಿನ್, ಯಜುವೇಂದ್ರ ಚಾಹಲ್, ಒಬೆಡ್ ಮೆಕಾಮ್‌ರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

    IPL2022 GT VS RR - GT STARTS

    ಯಾವ ವರ್ಷ ಯಾರು ಚಾಂಪಿಯನ್?

    • 2008 – ರಾಜಸ್ಥಾನ ರಾಯಲ್ಸ್
    • 2009 – ಡೆಕ್ಕನ್ ಚಾರ್ಜರ್
    • 2010 – ಚೆನ್ನೈ ಸೂಪರ್ ಕಿಂಗ್ಸ್
    • 2011 – ಚೆನ್ನೈ ಸೂಪರ್‌ಕಿಂಗ್ಸ್
    • 2012 – ಕೋಲ್ಕತ್ತಾ ನೈಟ್ ರೈಡರ್
    • 2013 – ಮುಂಬೈ ಇಂಡಿಯನ್ಸ್
    • 2014 – ಕೋಲ್ಕತ್ತಾ ನೈಟ್ ರೈಡರ್
    • 2015 – ಮುಂಬೈ ಇಂಡಿಯನ್ಸ್
    • 2016 – ಸನ್‌ರೈಸರ್ಸ್‌ ಹೈದರಾಬಾದ್
    • 2017 – ಮುಂಬೈ ಇಂಡಿಯನ್ಸ್
    • 2018 – ಚೆನ್ನೈ ಸೂಪರ್ ಕಿಂಗ್ಸ್
    • 2019 – ಮುಂಬೈ ಇಂಡಿಯನ್ಸ್
    • 2020 – ಮುಂಬೈ ಇಂಡಿಯನ್ಸ್
    • 2021 – ಚೆನ್ನೈ ಸೂಪರ್‌ಕಿಂಗ್ಸ್

  • ಟೇಬಲ್ ಟೆನಿಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭವಿನಾಬೆನ್ ಪಟೇಲ್

    ಟೇಬಲ್ ಟೆನಿಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭವಿನಾಬೆನ್ ಪಟೇಲ್

    ಟೋಕಿಯೋ: ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಪಂದ್ಯದಲ್ಲಿ ಭಾರತದ ಭವಿನಾಬೆನ್ ಪಟೇಲ್ ಫೈನಲ್ ಗೆ ಪ್ರವೇಶಿಸಿದ್ದಾರೆ.

    ಶನಿವಾರ ಟೋಕಿಯೋದಲ್ಲಿ ನಡೆದ ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಚೀನಾದ ಮಿಯಾವೊ ಝಾಂಗ್‍ರನ್ನು 3-2 ಸೆಟ್‍ಗಳಿಂದ ಸೋಲಿಸಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಭಾನುವಾರ ಭವಿನಾ ಚೀನಾದ ಯಿಂಗ್ ಝಾಂಗ್‍ರನ್ನು ಚಿನ್ನದ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಇದನ್ನೂ ಓದಿ:ಗ್ಯಾಂಗ್‍ರೇಪ್ ಪ್ರಕರಣ ಸಂಬಂಧ ಕಾರ್ಯಾಚರಣೆ ಯಶಸ್ವಿ: ಗೃಹ ಸಚಿವ

    ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಮಾತನಾಡಿದ ಅವರು, ಭಾರತದ ಜನತೆಯ ಬೆಂಬಲದಿಂದ ಸೆಮಿಫೈನಲ್ ಪಂದ್ಯದಲ್ಲಿ ನಾನು ಗೆಲ್ಲಲು ಸಾಧ್ಯವಾಯಿತು. ಹೀಗೆ ಫೈನಲ್‍ನಲ್ಲಿಯೂ ಗೆಲ್ಲಲು ದಯವಿಟ್ಟು ನನಗೆ ನಿಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ನಟ ಚಿರಂಜೀವಿ ಭೇಟಿಗಾಗಿ 600 ಕಿ.ಮೀ ಸೈಕಲ್ ತುಳಿದ ಅಭಿಮಾನಿ

  • ರೋಹಿತ್ ಭರ್ಜರಿ ಆಟಕ್ಕೆ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

    ರೋಹಿತ್ ಭರ್ಜರಿ ಆಟಕ್ಕೆ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

    – ಡೆಲ್ಲಿ ಚೊಚ್ಚಲ ಐಪಿಎಲ್ ಆಸೆ ಭಗ್ನ, ದಾಖಲೆ ಬರೆದ ರೋಹಿತ್

    ದುಬೈ: ಇಂದು ನಡೆದ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಮುಂಬೈ ತಂಡ ಗೆದ್ದು ಬೀಗಿದೆ. ಈ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ.

    ಇಂದಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರಿನಲ್ಲಿ 156 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್‍ನಿಂದ ಇನ್ನೂ 8 ಬಾಲ್ ಬಾಕಿಯಿದ್ದಂತೆ ಮುಂಬೈ 157 ರನ್ ಬಾರಿಸಿ ಟ್ರೋಫಿ ಗೆದ್ದುಕೊಂಡಿತು.

    ದಾಖಲೆ ಬರೆದ ಮುಂಬೈ
    ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‍ನಲ್ಲಿ ಐದು ಬಾರೀ ಚಾಂಪಿಯನ್ ಆಗಿ ದಾಖಲೆ ಬರೆದಿದೆ. ಮುಂಬೈ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಈಗ ಈ ಬಾರಿಯು ಕಪ್ ಗೆದ್ದು, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ. ಜೊತೆಗೆ ನಾಯಕನಾಗಿ ರೋಹಿತ್ ಅವರು ಕೂಡ ಐದು ಬಾರೀ ಐಪಿಎಲ್ ಟ್ರೋಫಿ ಗೆದ್ದ ಕ್ಯಾಪ್ಟನ್ ಎಂಬ ಖ್ಯಾತಿ ಪಡೆದಿದ್ದಾರೆ.

    ಡೆಲ್ಲಿ ನೀಡಿದ 157 ರನ್ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡ ಡಿಸೆಂಟ್ ಓಪನಿಂಗ್ ಪಡೆದುಕೊಂಡಿತು. ಆದರೆ ತಂಡದ ಮೊತ್ತ 45 ರನ್ ಆಗಿದ್ದಾಗ ಕ್ವಿಂಟನ್ ಡಿ ಕಾಕ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಈ ಮೂಲಕ ಪವರ್ ಪ್ಲೇ ಹಂತದಲ್ಲಿ ಒಂದು ವಿಕೆಟ್ ಕಳೆದುಕೊಂಡರು ಮುಂಬೈ ಇಂಡಿಯನ್ಸ್ ಆರು ಓವರ್ ಮುಕ್ತಾಯಕ್ಕೆ ಬರೋಬ್ಬರಿ 61 ರನ್ ಸಿಡಿಸಿತು.

    ಎರಡನೇ ವಿಕೆಟ್‍ಗೆ ಜೊತೆಯಾದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ 45 ರನ್‍ಗಳ ಜೊತೆಯಾಟವಾಡಿದರು. ಆದರೆ 10ನೇ ಓವರ್ ಐದನೇ ಬಾಲಿನಲ್ಲಿ ಸೂರ್ಯಕುಮಾರ್ ಯಾದವ್ ಅವರು ಔಟ್ ಆದರು. ಇದೇ ವೇಳೆ ಆರಂಭದಿಂದಲು ಸ್ಫೋಟಕವಾಗಿ ಆಡಿಕೊಂಡು ಬಂದ ನಾಯಕ ರೋಹಿತ್ ಶರ್ಮಾ 36 ಬಾಲಿಗೆ ಅರ್ಧಶತಕ ಸಿಡಿಸಿದರು.

    ಮುಂಬೈ ಟ್ರೋಫಿ ಗೆಲ್ಲಲು 20 ರನ್‍ಗಳ ಅವಶ್ಯಕತೆ ಇದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್ ಶರ್ಮಾ, 51 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಮೇತ 68 ರನ್ ಸಿಡಿಸಿ ಔಟ್ ಆದರು. ರೋಹಿತ್ ನಂತರ ಬಂದು ಎರಡು ಬೌಂಡರಿ ಸಿಡಿಸಿ ಅಬ್ಬರಿಸಿದ್ದ ಕೀರನ್ ಪೊಲಾರ್ಡ್ ಅವರು 9 ರನ್ ಗಳಿಸಿ ಕಗಿಸೊ ರಬಾಡಾ ಅವರಿಗೆ ಬೌಲ್ಡ್ ಆದರು. ಕೊನೆಯ ರನ್ ಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಕ್ಯಾಚ್ ಕೊಟ್ಟರು. ಕೊನೆಯವರೆಗೂ ಔಟ್ ಆಗದೇ ಉಳಿದ ಇಶಾನ್ ಕಿಶನ್ 19 ಬಾಲಿಗೆ 33 ರನ್ ಸಿಡಿಸಿ ಮುಂಬೈ ಅನ್ನು ಗೆಲುವಿನ ದಡ ಸೇರಿಸಿದರು.

    ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ ಆರಂಭದಲ್ಲೇ ಟ್ರೆಂಟ್ ಬೌಲ್ಟ್ ಅವರ ದಾಳಿಗೆ ನಲುಗಿ ಬೇಗ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ (65 ರನ್, 50 ಎಸೆತ, 6 ಬೌಂಡರಿ. 2 ಸಿಕ್ಸರ್) ಮತ್ತು ರಿಷಭ್ ಪಂತ್ ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಮೇಲೆತ್ತಿದರು. ಪರಿಣಾಮ ಪ್ರಮುಖ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡಕ್ಕೆ 157 ರನ್‍ಗಳ ಗುರಿ ನೀಡಿತ್ತು.

  • ಕುಸಿದ ಡೆಲ್ಲಿಗೆ ಪಂತ್, ಐಯ್ಯರ್ ಆಸರೆ – ಐದನೇ ಬಾರಿ ಟ್ರೋಫಿ ಗೆಲ್ಲಲು ಮುಂಬೈಗೆ 157 ರನ್‍ಗಳ ಗುರಿ

    ಕುಸಿದ ಡೆಲ್ಲಿಗೆ ಪಂತ್, ಐಯ್ಯರ್ ಆಸರೆ – ಐದನೇ ಬಾರಿ ಟ್ರೋಫಿ ಗೆಲ್ಲಲು ಮುಂಬೈಗೆ 157 ರನ್‍ಗಳ ಗುರಿ

    – ಬೌಲ್ಟ್ ದಾಳಿಗೆ ಮತ್ತೆ ತತ್ತರಿಸಿದ ಕ್ಯಾಪಿಟಲ್ಸ್ ಟಾಪ್ ಆರ್ಡರ್

    ದುಬೈ: ಇಂದು ನಡೆಯುತ್ತಿರುವ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ 157 ರನ್‍ಗಳ ಟಾರ್ಗೆಟ್ ನೀಡಿದೆ.

    ಇಂದು ದುಬೈ ಮೈದಾನದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಆರಂಭದಲ್ಲೇ ಟ್ರೆಂಟ್ ಬೌಲ್ಟ್ ಅವರ ದಾಳಿಗೆ ನಲುಗಿ ಬೇಗ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ (65 ರನ್, 50 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ರಿಷಭ್ ಪಂತ್ ತಲಾ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನ ಮೇಲೆತ್ತಿದರು. ಪರಿಣಾಮ ಪ್ರಮುಖ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡಕ್ಕೆ 157 ರನ್‍ಗಳ ಗುರಿ ನೀಡಿತು.

    ಬೌಲ್ಟ್ ದಾಳಿ
    ಕ್ವಾಲಿಫೈಯರ್-1ರಲ್ಲಿ ಡೆಲ್ಲಿ ತಂಡವನ್ನು ಕಾಡಿದ್ದ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಟಾಪ್ ಆರ್ಡರ್ ಗೆ ಮುಳುವಾದರು. ನಾಲ್ಕು ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ 30 ರನ್ ನೀಡಿ ಮೂರು ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಥನ್ ಕೌಲ್ಟರ್-ನೈಲ್ ಎರಡು ವಿಕೆಟ್ ಪಡೆದು ಮಿಂಚಿದರು. ಜಯಂತ್ ಯಾದವ್ ಒಂದು ವಿಕೆಟ್ ಪಡೆದುಕೊಂಡರು. ಜಸ್ಪ್ರೀತ್ ಬುಮ್ರಾಗೆ ಇಂದು ಯಾವುದೇ ವಿಕೆಟ್ ಬೀಳಲಿಲ್ಲ.

    ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ವೇಗಿ ಟ್ರೆಂಟ್ ಬೌಲ್ಟ್ ಮೊದಲ ಬಾಲಿನಲ್ಲೇ ಶಾಕ್ ನೀಡಿದರು. ಈ ಮೂಲಕ ಆರಂಭಿಕನಾಗಿ ಬಂದ ಮಾರ್ಕಸ್ ಸ್ಟೋಯಿನಿಸ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ನಂತರ ಬಂದ ಅಜಿಂಕ್ಯ ರಹಾನೆ ಕೂಡ 2 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಅವರ ಬೌಲಿಂಗ್‍ನಲ್ಲಿ ಡಿ ಕಾಕ್‍ಗೆ ಕ್ಯಾಚ್ ಕೊಟ್ಟು ಹೊರನಡೆದರು.

    ಬೌಲ್ಟ್ ನಂತರ ದಾಳಿಗಿಳಿದ ಜಯಂತ್ ಯಾದವ್ ಇನ್ ಫಾರ್ಮ್ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. ಪವರ್ ಪ್ಲೇ ಹಂತದಲ್ಲಿ ಎಡವಿದ ಡೆಲ್ಲಿ ಆರು ಓವರ್ ಮುಕ್ತಾಯಕ್ಕೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 41 ರನ್ ಪೇರಿಸಿತು. ನಂತರ ಜೊತೆಯಾದ ನಾಯಕ ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಸೇರಿಕೊಂಡು ತಾಳ್ಮೆಯ ಆಟದ ಜೊತೆಗೆ ರನ್ ಕಲೆ ಹಾಕಿದರು. ಜೊತೆಗೆ ಅರ್ಧಶತಕದ ಜೊತೆಯಾಟವಾಡಿದರು.

    ಪಂತ್ ಮತ್ತು ಐಯ್ಯರ್ ಉತ್ತಮ ಆಟದ ಫಲವಾಗಿ ಆರಂಭದಲ್ಲೇ ಕುಸಿದಿದ್ದ ಡೆಲ್ಲಿ ತಂಡ 13 ಓವರಿನಲ್ಲಿ 100 ರನ್ ಸಿಡಿಸಿತು. ಇದೇ ವೇಳೆ 35 ಬಾಲಿಗೆ ರಿಷಭ್ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಪಂತ್ ಬೌಂಡರಿ ಗೆರೆ ಬಳಿ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ಆರಂಭದಿಂದ ತಾಳ್ಮೆಯಿಂದ ಆಡಿ ತಂಡಕ್ಕೆ ನೆರವಾಗಿದ್ದ ಐಯ್ಯರ್ 40 ಬಾಲಿನಲ್ಲಿ ಅರ್ಧಶತಕ ಸಿಡಿಸಿದರು. ಶಿಮ್ರಾನ್ ಹೆಟ್ಮಿಯರ್ ಐದು ರನ್ ಸಿಡಿಸಿ ಔಟ್ ಆದರು. ನಂತರ ಆಕ್ಸಾರ್ ಪಟೇಲ್ ಮತ್ತು ರಬಾಡಾ ಔಟ್ ಆಗಿ ಹೊರನಡೆದರು.

  • ಮಂದಾನ ಸೂಪರ್ ಬ್ಯಾಟಿಂಗ್ – ಮೊದಲ ಬಾರಿ ಮಹಿಳಾ ಐಪಿಎಲ್‍ ಟ್ರೋಫಿಗೆ ಮುತ್ತಿಕ್ಕಿದ ಟ್ರೈಲ್‍ಬ್ಲೇಜರ್ಸ್

    ಮಂದಾನ ಸೂಪರ್ ಬ್ಯಾಟಿಂಗ್ – ಮೊದಲ ಬಾರಿ ಮಹಿಳಾ ಐಪಿಎಲ್‍ ಟ್ರೋಫಿಗೆ ಮುತ್ತಿಕ್ಕಿದ ಟ್ರೈಲ್‍ಬ್ಲೇಜರ್ಸ್

    – ಸೋತರು ದಾಖಲೆ ಬರೆದ ರಾಧಾ ಯಾದವ್

    ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಟ್ರೈಲ್‍ಬ್ಲೇಜರ್ಸ್ ತಂಡ 16 ರನ್‍ಗಳ ಅಂತರದಲ್ಲಿ ಗೆದ್ದು ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.

    ಶಾರ್ಜಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟ್ರೈಲ್‍ಬ್ಲೇಜರ್ಸ್ ತಂಡ ನಾಯಕಿ ಸ್ಮೃತಿ ಮಂದಾನ ಅವರ ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 118 ರನ್‍ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸೂಪರ್ನೋವಾಸ್ ತಂಡ ಸಲ್ಮಾ ಖತುನ್ ಮತ್ತು ದೀಪ್ತಿ ಶರ್ಮಾ ಅವರ ಬೌಲಿಂಗ್ ದಾಳಿಗೆ ನಲುಗಿ 20 ಓವರಿನಲ್ಲಿ ಏಳು ವಿಕೆಟ್ ಕಳೆದುಕೊಂಡ 102 ರನ್ ಸಿಡಿಸಿ 16 ರನ್‍ಗಳ ಅಂತರದಲ್ಲಿ ಸೋತಿತು.

    ಟ್ರೈಲ್‍ಬ್ಲೇಜರ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಸೂಪರ್ನೋವಾಸ್ ತಂಡಕ್ಕೆ ಸೋಫಿ ಎಕ್ಲೆಸ್ಟೋನ್ ಆರಂಭಿಕ ಆಘಾತ ನೀಡಿದರು. ಉತ್ತಮ ಫಾರ್ಮ್ ನಲ್ಲಿದ್ದ ಚಮರಿ ಅಥಾಪತ್ತು ಅವರನ್ನು ಎರಡನೇ ಓವರಿನಲ್ಲಿ ಔಟ್ ಮಾಡಿದರು. ನಂತರ ಬಂದ ತಾನಿಯಾ ಭಾಟಿಯಾ 20 ಬಾಲಿಗೆ 14 ರನ್ ಸಿಡಿಸಿ ದೀಪ್ತಿ ಶರ್ಮಾ ಅವರಿಗೆ ಔಟ್ ಆದರು. ಇದಾದ ಬಳಿಕ ಜೆಮಿಮಾ ರೊಡ್ರಿಗಸ್ ಅನ್ನು ಕೂಡ ದೀಪ್ತಿ ಶರ್ಮಾ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

    ನಂತರ ಜೊತೆಯಾದ ನಾಯಕ ಹರ್ಮನ್‍ಪ್ರೀತ್ ಕೌರ್ ಮತ್ತು ಶಶಿಕಲಾ ಸಿರಿವರ್ಧನೆ 38 ಬಾಲಿಗೆ 37 ರನ್‍ಗಳ ಜೊತೆಯಾಟವಾಡಿದರು. ಈ ವೇಳೆ 18 ಬಾಲಿಗೆ 19 ರನ್ ಹೊಡೆದಿದ್ದ ಶಶಿಕಲಾ ಸಲ್ಮಾ ಖತುನ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಕೊನೆಯ ಎರಡು ಓವರಿಗೆ 28 ರನ್ ಬೇಕಾದಾಗ ಅನುಜಾ ಪಾಟೀಲ್ ರನೌಟ್ ಆದರು. ಇದಾದ ನಂತರದ ಬಾಲಿನಲ್ಲೇ 30 ರನ್‍ಗಳಿಸಿದ್ದ ನಾಯಕಿ ಹರ್ಮನ್‍ಪ್ರೀತ್ ಕೌರ್ ಬೌಲ್ಡ್ ಆದರು. ನಂತರ ಬಂದ ಯಾವುದೇ ಆಟಗಾರ್ತಿ ಬ್ಯಾಟ್ ಬೀಸಲಿಲ್ಲ. ಪರಿಣಾಮ ಎರಡು ಭಾರಿ ಚಾಂಪಿಯನ್ ಆದ ಸೂಪರ್ನೋವಾಸ್ ತಂಡ ಸೋತಿತು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟ್ರೈಲ್‍ಬ್ಲೇಜರ್ಸ್ ಆರಂಭದಲ್ಲೇ ಉತ್ತಮವಾಗಿ ಬ್ಯಾಟ್ ಬೀಸಿತ್ತು. ಓಪನರ್ಸ್ ಆಗಿ ಬಂದ ದಿಯಾಂಡ್ರಾ ಡೊಟಿನ್ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ 49 ಬಾಲಿಗೆ ಐದು ಬೌಂಡರಿ ಮತ್ತು ಮೂರು ಸಿಕ್ಸ್ ಸಮೇತ 68 ರನ್ ಸಿಡಿಸಿದ್ದ ಮಂದಾನ ಔಟ್ ಆದ ನಂತರ ಟ್ರೈಲ್‍ಬ್ಲೇಜರ್ಸ್ ರಾಧಾ ಯಾದವ್ ಬೌಲಿಂಗ್ ದಾಳಿಗೆ ಸಿಲುಕಿ ಉತ್ತಮ ಆರಂಭ ಪಡೆದರೂ 118 ರನ್‍ಗಳ ಸಾಧಾರಣ ಗುರಿ ನೀಡಿತ್ತು.

    ರಾಧಾ ಯಾದವ್ ದಾಖಲೆ
    ಇಂದಿನ ಪಂದ್ಯದಲ್ಲಿ ಸೂಪರ್ನೋವಾಸ್ ತಂಡದ ಸ್ಪಿನ್ನರ್ ರಾಧಾ ಯಾದವ್ ಉತ್ತಮವಾಗಿ ಬೌಲ್ ಮಾಡಿ ದಾಖಲೆ ಬರೆದಿದ್ದಾರೆ. ಇಂದಿನ ಪಂದ್ಯದಲ್ಲಿ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ರಾಧಾ ಯಾದವ್ ಕೇವಲ 16 ರನ್ ನೀಡಿ ಐದು ವಿಕೆಟ್ ಪಡೆದರು. ಈ ಮೂಲಕ ವುಮೆನ್ಸ್ ಐಪಿಎಲ್‍ನಲ್ಲಿ ಐದು ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು.

  • ವಾರ್ನರ್ ಪಡೆಗೆ ಸೋಲು – ಫಸ್ಟ್ ಟೈಂ ಫೈನಲ್‍ಗೆ ಡೆಲ್ಲಿ ಎಂಟ್ರಿ

    ವಾರ್ನರ್ ಪಡೆಗೆ ಸೋಲು – ಫಸ್ಟ್ ಟೈಂ ಫೈನಲ್‍ಗೆ ಡೆಲ್ಲಿ ಎಂಟ್ರಿ

    – ಸ್ಟೊಯಿನಿಸ್, ರಬಾಡಾ ಬೌಲಿಂಗ್ ದಾಳಿಗೆ ಹೈದ್ರಾಬಾದ್ ತತ್ತರ
    – 21 ರನ್ ಅಂತರದಲ್ಲಿ 4 ವಿಕೆಟ್ ಪತನ

    ಅಬುಧಾಬಿ: ಇಂದು ನಡೆದ ಕ್ವಾಲಿಫಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 17 ರನ್‍ಗಳ ಅಂತರದಲ್ಲಿ ಗೆದ್ದು ಐಪಿಎಲ್-2020ಯ ಫೈನಲ್‍ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಮಂಗಳವಾರ ನಡೆಯಲಿರುವ ಫೈನಲ್ ಅಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜೊತೆ ಸೆಣೆಸಾಡಲಿದೆ.

    ಅಬುಧಾಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಭರ್ಜರಿ ಆಟದಿಂದ ನಿಗದಿತ 20 ಓವರಿನಲ್ಲಿ 189 ರನ್‍ಗಳನ್ನು ಪೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ತೀವ್ರ ಪೈಪೋಟಿ ನೀಡಿದರೂ ಮಾರ್ಕಸ್ ಸ್ಟೊಯಿನಿಸ್ ದಾಳಿಗೆ ಸಿಲುಕಿದ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.

    ಮೊದಲ ಬಾರಿಗೆ ಫೈನಲ್ ಪ್ರವೇಶ:
    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರಂಭದಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮವಾಗಿ ಆಡಿಕೊಂಡು ಬಂದಿತ್ತು. ನಾಯಕ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ಎರಡನೇ ತಂಡವಾಗಿ ಪ್ಲೇ ಆಫ್‍ಗೆ ಆಯ್ಕೆಯಾಗಿತ್ತು. ಈಗ ಹೈದರಾಬಾದ್ ವಿರುದ್ಧ ಕ್ವಾಲಿಫಯರ್-2 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ. 13 ಐಪಿಎಲ್ ಆವೃತ್ತಿಯಲ್ಲಿ ಆಡಿದ್ದರೂ ಡೆಲ್ಲಿ ತಂಡ ಎಂದು ಫೈನಲ್‍ಗೆ ಪ್ರವೇಶ ಮಾಡಿರಲಿಲ್ಲ. ಈ ಬಾರಿ ಫೈನಲ್ ಪ್ರವೇಶಿಸುವ ಮೂಲಕ ಕನಸನ್ನು ನನಸು ಮಾಡಿದೆ.

    ಸ್ಟೊಯಿನಿಸ್, ರಬಾಡಾ ಬೌಲಿಂಗ್ ದಾಳಿ
    ಇಂದಿನ ಪಂದ್ಯದಲ್ಲಿ ಡೆಲ್ಲಿ ವೇಗಿಗಳಾದ ಮಾರ್ಕಸ್ ಸ್ಟೊಯಿನಿಸ್, ಕಗಿಸೊ ರಬಾಡಾ ಉತ್ತಮ ಬೌಲಿಂಗ್ ದಾಳಿ ಮಾಡಿದರು. ತಮ್ಮ ಕೋಟಾದ ಮೂರು ಓವರ್ ಬೌಲ್ ಮಾಡಿದ ಸ್ಟೊಯಿನಿಸ್ 26 ರನ್ ನೀಡಿ ಮೂರು ವಿಕೆಟ್ ಕಿತ್ತರು. ಕೊನೆಯಲ್ಲಿ ಅಬ್ಬರಿಸಿದ ರಬಾಡಾ 19ನೇ ಓವರಿನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ನಾಲ್ಕು ಓವರ್ ಬೌಲ್ ಮಾಡಿ 29 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

    ಡೆಲ್ಲಿ ನೀಡಿದ 189 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸನ್‍ರೈಸರ್ಸ್ ಹೈದರಾಬಾದ್ ತಂಡದಿಂದ ನಾಯಕ ಡೇವಿಡ್ ವಾರ್ನರ್ ಮತ್ತು ಪ್ರಿಯಮ್ ಗರ್ಗ್ ಕಣಕ್ಕಿಳಿದರು. ಆದರೆ ಡೆಲ್ಲಿ ವೇಗಿ ಕಗಿಸೊ ರಬಾಡಾ ನಾಯಕ ಡೇವಿಡ್ ವಾರ್ನರ್ ಅನ್ನು ಎರಡನೇ ಓವರ್ ಮೊದಲ ಬಾಲಿನಲ್ಲೇ ಔಟ್ ಮಾಡಿ ಹೈದರಾಬಾದ್‍ಗೆ ಆರಂಭಿಕ ಆಘಾತ ನೀಡಿದ್ದರು. ಇವರ ಔಟ್ ನಂತರ ಜೊತೆಯಾದ ಮನೀಶ್ ಪಾಂಡೆ ಮತ್ತು ಪ್ರಿಯಮ್ ಗರ್ಗ್ ಸ್ಫೋಟಕ ಆಟಕ್ಕೆ ಮುಂದಾದರು.

    ಆದರೆ 4ನೇ ಓವರ್ ನಾಲ್ಕನೇ ಬಾಲಿನಲ್ಲಿ 17 ರನ್ ಸಿಡಿಸಿದ್ದ ಪ್ರಿಯಮ್ ಗರ್ಗ್ ಮಾರ್ಕಸ್ ಸ್ಟೊಯಿನಿಸ್‍ಗೆ ಕ್ಲೀನ್ ಬೌಲ್ಡ್ ಆದರು. ನಂತರ ಇದೇ ಓವರಿನಲ್ಲಿ 21 ರನ್ ಹೊಡೆದಿದ್ದ ಮನೀಶ್ ಪಾಂಡೆ ಕೂಡ ಮಾರ್ಕಸ್ ಸ್ಟೊಯಿನಿಸ್ ಔಟ್ ಮಾಡಿದ ಪೆವಿಲಿಯನ್‍ಗೆ ಅಟ್ಟಿದರು. ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ 46 ರನ್‍ಗಳ ಜೊತೆಯಾಟವಾಡಿದರು. ಆದರೆ 11 ನೇ ಓವರ್ ನಾಲ್ಕನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜೇಸನ್ ಹೋಲ್ಡರ್ ಅವರು ಔಟ್ ಆದರು.

    ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಅಬ್ದುಲ್ ಸಮದ್ ಐದನೇ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ 16ನೇ ಓವರ್ ನಾಲ್ಕನೇ ಬಾಲಿನಲ್ಲಿ 45 ಬಾಲಿಗೆ 67 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್ ಅವರು ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಔಟ್ ಆದರು. ಇದಾದ ನಂತರ 16 ಬಾಲಿಗೆ 33 ರನ್ ಸಿಡಿಸಿ ಆಡುತ್ತಿದ್ದ ಅಬ್ದುಲ್ ಸಮದ್ ಅವರು ಕಗಿಸೊ ರಬಾಡಾ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಇವರ ಬೆನ್ನಲ್ಲೇ ರಶೀದ್ ಖಾನ್ ಅವರು ಔಟ್ ಆದರು.

    ಒಂದು ಹಂತದಲ್ಲಿ ಹೈದರಾಬಾದ್ 4 ಕೆಟ್ ಕಳೆದುಕೊಂಡು 147 ರನ್ ಗಳಿಸಿ ಗೆಲುವಿನತ್ತ ಮುನ್ನಡೆಯುತ್ತಿತ್ತು. ಆದರೆ 16.5 ಓವರಿನಲ್ಲಿ ಕೇನ್ ವಿಲಿಯಮ್ಸನ್ ಔಟ್ ಆಗುವುದರೊಂದಿಗೆ ಪತನ ಆರಂಭವಾಯಿತು. 21 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಕೈ ಚೆಲ್ಲಿತು.