Tag: ಫೈಟಿಂಗ್

  • ಬಾಂಡ್ ರವಿಗಾಗಿ ಭರ್ಜರಿ ಹೊಡೆದಾಡಿದ ಪ್ರಮೋದ್

    ಬಾಂಡ್ ರವಿಗಾಗಿ ಭರ್ಜರಿ ಹೊಡೆದಾಡಿದ ಪ್ರಮೋದ್

    ಪ್ರೀಮಿಯರ್ ಪದ್ಮನಿ ಸಿನಿಮಾದ ಮೂಲಕ ಭರವಸೆ ಮೂಡಿಸಿರುವ ನಟ ಪ್ರಮೋದ್ ನಟನೆಯ ಬಹು ನಿರೀಕ್ಷಿತ ಸಿನ್ಮಾ ಬಾಂಡ್ ರವಿ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗಲೇ 70ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಬೆಂಗಳೂರಿನ HMTಯಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಸಿದೆ. ಖ್ಯಾತ ಸಾಹಸ ನಿರ್ದೇಶಕ ಮಾಸ್ಟರ್ ವಿನೋದ್ ಸಾಹಸ ಸಂಯೋಜನೆಯಲ್ಲಿ ಭರ್ಜರಿ  ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಪ್ರಮೋದ್, ಸಹಕಲಾವಿದರು ಭರ್ಜರಿ ಆಕ್ಷನ್ ಸೀನ್ಸ್ ಭಾಗಿಯಾಗಿದ್ದರು. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ಕಳೆದ‌ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದೊಂದು ಕಮರ್ಷಿಯಲ್, ಆಕ್ಷನ್-ಲವ್ ಸ್ಟೋರಿ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದಾರೆ. ಈ‌ ಹಿಂದೆ ನರಸಿಂಹಮೂರ್ತಿ ಮಾದ ಮನಸಿ ಸಿನಿಮಾ ನಿರ್ಮಾಣ ಮಾಡಿದ್ದರು. ಪ್ರಮೋದ್ ಗೆ ಜೋಡಿಯಾಗಿ ಮಾಯಕನ್ನಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ನಾಯಕಿಯಾಗಿ ನಟಿಸ್ತಿದ್ದಾರೆ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ಮಲ್ಲಿಕಾರ್ಜುನ್ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ತೆಲುಗಿನ ಖ್ಯಾತ ನಟ ರವಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಸಂಕಲನ, ಸುನಿಲ್ & ದೇವ್ ಎನ್ ರಾಜ್ ಸಂಭಾಷಣೆ, ಮನೋಮೂರ್ತಿ ಮಧುರ ಸಂಗೀತ, ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಸಿನಿಮಾಕ್ಕಿದೆ.

  • ಪ್ರೇಮ್ ಅಡ್ಡದಲ್ಲಿ ಶಿವಣ್ಣ, ಕಿಚ್ಚನ ಕಾಳಗ ಶುರು- ನಿಜವಾದ ‘ವಿಲನ್’ ಯಾರು?

    ಪ್ರೇಮ್ ಅಡ್ಡದಲ್ಲಿ ಶಿವಣ್ಣ, ಕಿಚ್ಚನ ಕಾಳಗ ಶುರು- ನಿಜವಾದ ‘ವಿಲನ್’ ಯಾರು?

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಟ್ಟುಸಿರೋ ‘ದಿ-ವಿಲನ್’ ಚಿತ್ರ ಅಭಿಮಾನಿಗಳ ಮನದಲ್ಲಿ ಹಲ್‍ಚಲ್ ಎಬ್ಬಿಸಿದೆ. ಕರಿಯ, ಎಕ್ಸ್‍ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ಏನ್ ಮಾಡುತ್ತಾರೆ ಎನ್ನುವ ಕುತೂಹಲ ಆಕಾಶ ಮುಟ್ಟಿದೆ.

    ದಿನೇ ದಿನೇ ಒಂದಿಲ್ಲೊಂದು ಸೆನ್ಸೆಷನಲ್ ಸಮಾಚಾರ ‘ದಿ-ವಿಲನ್’ ತಂಡದಿಂದ ಹೊರಬರುತ್ತಿದೆ. ಬೆಂಗಳೂರು, ಚಿಕ್ಕಮಗಳೂರು, ಉತ್ತರ ಕರ್ನಾಟಕ ಹಾಗೂ ಲಂಡನ್‍ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದು ಈಗ ಕೊನೆಯ ಹಂತದ ಶೂಟಿಂಗ್‍ಗೆ ಚಿತ್ರತಂಡ ಅಣಿಯಾಗಿದೆ. ಆ ಕೊನೆಯ ಹಂತದ ರೋಚಕ ಚಿತ್ರೀಕರಣವೇ ವಿಲನ್ಸ್ ಕಾಳಗ ಎಂದು ಹೇಳಲಾಗಿದೆ.

    `ದಿ-ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ನಲ್ಲಿ ಶಿವಣ್ಣ ಹಾಗೂ ಸುದೀಪ್ ನಡುವೆ ಕಾಳಗದ ದೃಶ್ಯವಿದೆ. ಈ ಸೀನ್‍ಗಾಗಿ ಅದ್ಧೂರಿಯಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿದೆ.

    ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾರಥ್ಯದಲ್ಲಿ ಈ ಫೈಟಿಂಗ್ ಸೀನ್ ಶೂಟಿಂಗ್ ನಡೆಯುತ್ತಿದೆ. ಡಿಫರೆಂಟ್ ಆಗಿ ವಿಲನ್‍ಗಳು ಈ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದು, ಅಸಲಿ ವಿಲನ್ ಯಾರು ಎನ್ನುವುದನ್ನು ಈ ದೃಶ್ಯ ಸಾಬೀತು ಮಾಡಲಿದೆ.

    ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ಬರೋಬ್ಬರಿ 6 ಭಾಷೆಯಲ್ಲಿ `ದಿ-ವಿಲನ್’ ಮೂಡಿಬರುತ್ತಿದೆ. ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಚಿತ್ರತಂಡ ಮಗ್ನವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕುತೂಹಲ ಮೂಡಿಸುವ ಟೀಸರ್ ಪ್ರೇಕ್ಷಕರ ಮುಂದೆ ಇಡಲಿದ್ದಾರೆ.

  • `ದಿ ವಿಲನ್’ ಸಿನಿಮಾದಲ್ಲಿ ಶಿವಣ್ಣನ ಆಕ್ಷನ್ ಶುರು

    `ದಿ ವಿಲನ್’ ಸಿನಿಮಾದಲ್ಲಿ ಶಿವಣ್ಣನ ಆಕ್ಷನ್ ಶುರು

    ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಒಟ್ಟಾಗಿ ಅಭಿನಯಿಸುತ್ತಿರುವ `ದಿ ವಿಲನ್’ ಸಿನಿಮಾದ ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ.

    ಇಷ್ಟು ದಿನ ಕಿಚ್ಚನ ಪಾತ್ರವನ್ನು ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಈಗ ಶಿವಣ್ಣ ಅವರ ಪಾತ್ರದ ಶೂಟಿಂಗ್ ಅನ್ನು ಭರದಿಂದಲೇ ಮಾಡುತ್ತಿದೆ. ಚಿತ್ರತಂಡ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಶಿವಣ್ಣ ಅವರ ಸಾಹಸ ದೃಶ್ಯಗಳನ್ನು ಚಿತ್ರಿಕರಣ ಮಾಡಿ ಮುಗಿಸಿದೆ. ಈಗ ಬ್ಯಾಂಕಾಕ್‍ನಲ್ಲಿ ಶಿವಣ್ಣ ಅವರ ಕಾರ್ ಚೇಸಿಂಗ್ ದೃಶ್ಯವನ್ನು ಚಿತ್ರೀಕರಣವನ್ನು ಮಾಡಿ ಮುಗಿಸಿದೆ.

    ಶೂಟಿಂಗ್ ಮುಗಿಸಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದು, ಚಿತ್ರತಂಡದೊಂದಿಗೆ ಸೇರಿ ಅಪರೂಪದ ಕ್ಷಣಗಳನ್ನು ಕಳಿಯುತ್ತಿದ್ದಾರೆ. ಕಾರ್ ಚೇಸಿಂಗ್ ಶೂಟಿಂಗ್‍ನಲ್ಲಿ ಚಿತ್ರತಂಡ ಶಿವಣ್ಣ ಅವರನ್ನು ರಸ್ತೆಯ ಮಧ್ಯೆದಲ್ಲಿ ಓಡಾಡುವ ಕಾರು, ಲಾರಿಗಳ ಮೇಲೆ ಜಂಪ್ ಮಾಡಿಸಿ ಫೈಟಿಂಗ್ ಮಾಡಿಸುತ್ತಿದ್ದಾರೆ. ಅವರ ಈ ಫೈಟಿಂಗ್ ನೋಡಿದರೆ ಸಿನಿಮಾದಲ್ಲಿ ಶಿವಣ್ಣ ತಮ್ಮ ಹವವನ್ನು ಸೃಷ್ಟಿಸಿದ್ದಾರೆ ಎನಿಸುತ್ತದೆ.

    ಶಿವಣ್ಣ ಅವರ ಸಾಹಸ ದೃಶ್ಯಗಳಿಗೆ ನಿರ್ದೇಶಕ ರವಿವರ್ಮ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ತಕ್ಕಂತೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

    ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್‍ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಮುಂದಿನ ವರ್ಷ ಫೆ. 14 ರಂದು ತೆರೆಗೆ ಬರುವ ಸಾಧ್ಯತೆಗಳಿವೆ.

     

  • `ಥರ್ಡ್ ಕ್ಲಾಸ್’ ಚಿತ್ರದ ನಾಯಕ ನಟ ಆಸ್ಪತ್ರೆಗೆ ದಾಖಲು!

    `ಥರ್ಡ್ ಕ್ಲಾಸ್’ ಚಿತ್ರದ ನಾಯಕ ನಟ ಆಸ್ಪತ್ರೆಗೆ ದಾಖಲು!

    ಬೆಂಗಳೂರು: `ಥರ್ಡ್ ಕ್ಲಾಸ್’ ಚಿತ್ರದ ಶೂಟಿಂಗ್ ವೇಳೆ ಕಣ್ಣಿಗೆ ಮಣ್ಣು ಬಿದ್ದು ನಾಯಕ ನಟ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

    ಜಗದೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ನಟರಾಗಿದ್ದು, ಇವರೊಂದಿಗೆ ಎಂಟು ಜನರ ಕಣ್ಣಿಗೂ ಗಾಯಗಳಾಗಿವೆ.

    ನಡೆದಿದ್ದೇನು?: ಘಾಟಿ ಸುಬ್ರಹ್ಮಣ್ಯದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಫೈಟಿಂಗ್ ವೇಳೆ ನಾಯಕ ನಟ ಕಣ್ಣಿಗೆ ಮಣ್ಣು ಬಿದ್ದಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ನಟ ಕಣ್ಣು ತೆರೆಯಲಾರದೆ ನೋವಿನಲ್ಲೇ ಒದ್ದಾಡುತ್ತಿದ್ದರು. ಇವರೊಂದಿಗೆ ಫೈಟ್ ನಲ್ಲಿದ್ದ 8 ಮಂದಿಯ ಕಣ್ಣಿಗೂ ಸ್ವಲ್ಪ ಮಟ್ಟಿನ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಜಗದೀಶ್ ಸದ್ಯ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಥರ್ಡ್ ಕ್ಲಾಸ್ ಸಿನಿಮಾಕ್ಕೆ ಅಶೋಕ್ ಆಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರಿಂದ ಕ್ಲಾಪ್ ಮಾಡಲಾಗಿತ್ತು.