Tag: ಫೈಟರ್ ರವಿ

  • ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಫೈಟರ್‌ ರವಿ ನಿವಾಸದ ಮೇಲೆ ಐಟಿ ದಾಳಿ

    ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಫೈಟರ್‌ ರವಿ ನಿವಾಸದ ಮೇಲೆ ಐಟಿ ದಾಳಿ

    ಬೆಂಗಳೂರು: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಟಿಕೆಟ್‌ (BJP Ticket) ಆಕಾಕ್ಷಿಯಾಗಿದ್ದ ರೌಡಿ ಶೀಟರ್‌ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ (Fighter Ravi) ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ (Income Tax Department) ದಾಳಿ ನಡೆಸಿದೆ.

    ಇಂದು ಬೆಳ್ಳಂಬೆಳಗ್ಗೆ ವೈಯಾಲಿಕಾವಲ್‌ ನಿವಾಸದ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಕಳೆದ ಬಾರಿ ನಾಗಮಂಗಲ ವಿಧಾನಸಭಾ (Nagamangala) ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಮೂಲಕ ಸ್ಪರ್ಧಿಸಲು ಫೈಟರ್ ರವಿ ಮುಂದಾಗಿದ್ದರು. ಆದರೆ ರೌಡಿಶೀಟರ್ ಹಿನ್ನೆಲೆ ಇದೆ ಎಂದು ವಿವಾದ ಆಗಿತ್ತು. ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ನಿಂತು ಸ್ಪರ್ಧಿಸಿದ್ದರು. ಇದನ್ನೂ ಓದಿ: ಬೇರೆ ಯುವಕರಿಂದ ಫೋನ್‌ಕಾಲ್‌ – ಪ್ರಶ್ನಿಸಿದ್ದಕ್ಕೆ ಕಾನ್ಸ್ಟೇಬಲ್‌ ಪ್ರಿಯಕರನನ್ನೇ ಬೆಂಕಿ ಹಚ್ಚಿ ಕೊಂದ ರಾಣಿ

    ಪ್ರಧಾನಿ ಮೋದಿಯವರು (PM Narendra Modi) ದಶಪಥ ರಸ್ತೆ (Mysuru-Bengaluru Expressway) ಉದ್ಘಾಟನೆಗೆಂದು ಮಂಡ್ಯಕ್ಕೆ ಬಂದಾಗ ಫೈಟರ್ ರವಿ ಶುಭಾಶಯ ಕೋರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿರೋಧ ಪಕ್ಷಗಳು ಇದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ದಾಳಿ ಮಾಡಿದ್ದವು. ಪ್ರಧಾನಿಗೆ ಮುಜುಗರ ಉಂಟುಮಾಡಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿತ್ತು ಎಂದು ಮೂಲಗಳು ತಿಳಿಸಿತ್ತು.

    ಬಿಜೆಪಿ ಟಿಕೆಟ್‌ ಸಿಗುತ್ತದೆಂದು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದರು. ಮಾತ್ರವಲ್ಲದೆ ಬಿಜೆಪಿಯ ಘಟಾನುಘಟಿ ನಾಯಕರ ಸಮ್ಮುಖದಲ್ಲೇ ಫೈಟರ್‌ ರವಿ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

     

  • ಡಿ.ಕೆ.ಶಿವಕುಮಾರ್‌ಗಿಂತ ಫೈಟರ್ ರವಿ ಹೆಚ್ಚಾ? – ಡಿಕೆಶಿಗೆ ಅಶ್ವಥ್ ನಾರಾಯಣ್ ಟಾಂಗ್

    ಡಿ.ಕೆ.ಶಿವಕುಮಾರ್‌ಗಿಂತ ಫೈಟರ್ ರವಿ ಹೆಚ್ಚಾ? – ಡಿಕೆಶಿಗೆ ಅಶ್ವಥ್ ನಾರಾಯಣ್ ಟಾಂಗ್

    ಮಂಡ್ಯ: ಡಿ.ಕೆ.ಶಿವಕುಮಾರ್‌ಗಿಂತ (D.K.Shivakumar) ಫೈಟರ್ ರವಿ (Fighter Ravi) ಹೆಚ್ಚಾ? ಕಮ್ಮಿನಾ ಜಾಸ್ತಿನಾ ಎಂದು ಪ್ರಶ್ನಿಸುವ ಮೂಲಕ ಡಿಕೆಶಿಗೆ ಸಚಿವ ಅಶ್ವಥ್ ನಾರಾಯಣ್ (Ashwath Narayan) ಟಾಂಗ್ ಕೊಟ್ಟರು. ಆ ಮೂಲಕ ರೌಡಿಶೀಟರ್‌ಗೆ ಮೋದಿ (Narendra Modi) ನಮಸ್ಕರಿಸಿದ್ದನ್ನು ಸಮರ್ಥಿಸಿಕೊಂಡರು.

    ಮಂಡ್ಯದ (Mandya) ಕೆ.ಆರ್.ಪೇಟೆಯಲ್ಲಿ (K.R.Pet) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಚರ್ಚೆಗಳು ಬೇಡ. ಕೆಲವು ಸಂದರ್ಭದಲ್ಲಿ ತಪ್ಪು ಆಗಿರುತ್ತದೆ. ಇವತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ತಿದ್ದಾರೆ. ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಅವಕಾಶ ಇದೆ. ಸಮಾಜ, ಕಾನೂನು, ಸಂವಿಧಾನದಲ್ಲಿ ಅವಕಾಶ ಇದೆ. ಅವರ ಜೀವನ ಸಂಪೂರ್ಣ ಸುಧಾರಣೆ ಆಗಿದೆ. ಒಮ್ಮೆ ಮಾಡಿದ ತಪ್ಪನ್ನೇ ಜೀವನ ಪೂರ್ತಿ ಹೇಳುತ್ತಿದ್ದರೆ ಪರಿವರ್ತನೆ ಸಾಧ್ಯವಿಲ್ಲ. ಮತ್ತೆ ಮತ್ತೆ ಆತ ಬದುಕಲು ಯೋಗ್ಯವಿಲ್ಲ ಅನ್ನೋ ರೀತಿಯಲ್ಲಿ ಬಿಂಬಿಸಬಾರದು ಎಂದು ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಆಜಾನ್ ಹೇಳಿಕೆ ವಿರುದ್ಧ ಎಷ್ಟೇ ಪ್ರತಿರೋಧ ಬಂದ್ರೂ ನಾನು ಜನ ಸಾಮಾನ್ಯನ ನೋವು ಹೇಳೋನೆ: ಈಶ್ವರಪ್ಪ

    ಇತಿಹಾಸದಲ್ಲಿ ಉರಿಗೌಡ, ನಂಜೇಗೌಡರು ಇದ್ದರು ಎಂಬ ಸಂಪೂರ್ಣ ನಂಬಿಕೆ ನಮ್ಮದು. ಹೀಗಾಗಿ ನಮಗೆ ಉರಿಗೌಡ, ನಂಜೇಗೌಡರ ಮೇಲೆ ಅಭಿಮಾನವಿದೆ. ಅವರಿಬ್ಬರೂ ನರಹಂತಕ, ಮತಾಂಧನಾಗಿದ್ದ ಟಿಪ್ಪುವಿನಿಂದ (Tipu Sultan) ಮೈಸೂರು (Mysuru) ಪ್ರಾಂತ್ಯದ ಜನರನ್ನು ರಕ್ಷಣೆ ಮಾಡಿರುವುದು ನಮಗೆ ಹೆಮ್ಮೆ. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ರಕ್ಷಣೆಯಲ್ಲಿ ಇವರಿದ್ದರು. ಹೀಗಾಗಿ ನಾವು ಇವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್‌ನವರಿಗೆ ಈ ಬಗ್ಗೆ ಅಭ್ಯಂತರವಿದ್ದರೆ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪ್ರಧಾನಿ ಉದ್ಘಾಟಿಸಿದ ಮೈಸೂರು-ಬೆಂಗಳೂರು ಹೈವೇ ಈಗಾಗ್ಲೇ ಕಿತ್ತು ಹೋಗಿದೆ: ಬಿ.ಕೆ ಹರಿಪ್ರಸಾದ್

    ಕೇವಲ ಚುನಾವಣೆ ಇಟ್ಟುಕೊಂಡು ಮತಕ್ಕಾಗಿ ಕೀಳು ಮಟ್ಟಕ್ಕೆ ಇಳಿಯುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ, ನಮ್ಮ ಅಭಿಮಾನ. ನಾವು ರಾಜಕೀಯಕ್ಕಾಗಿ ಏನನ್ನೂ ಮಾಡುವುದಿಲ್ಲ. ಜನರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ ಅಥವಾ ಟಿಪ್ಪು ಬೇಕಾ? ಕಾಂಗ್ರೆಸ್ ಪಕ್ಷದವರು ವಿಶ್ವಕಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪು ಮಾಡಿಕೊಳ್ಳಬೇಕು. ಯಾಕೋ ಗೊತ್ತಿಲ್ಲ, ಕಾಂಗ್ರೆಸ್‌ನವರಿಗೆ ಟಿಪ್ಪು ಸುಲ್ತಾನ್ ನೆನಪಾಗುತ್ತಾನೆ. ಮತದಾರ ಪ್ರಭುಗಳು ಜಾಗರೂಕತೆಯಿಂದ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: 2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ‌ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ: ಕಾರಜೋಳ 

    ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಾವರ್ಕರ್ ನಮ್ಮ ಹೆಮ್ಮೆ. ಅಂತಹ ಪರಿಸ್ಥಿತಿಯಲ್ಲಿ ಈಗಿನ ಒಬ್ಬ ರಾಜಕಾರಣಿ ಒಂದು ದಿನ ಅಂಡಮಾನ್‌ನಲ್ಲಿರಲಿ. ಇವರ ತ್ಯಾಗ, ಬಲಿದಾನ, ಶೌರ್ಯ, ಪರಾಕ್ರಮ, ಸಾಮಾಜಿಕ ಕಾಳಜಿ ಸೇರಿದಂತೆ ಎಲ್ಲಾ ವ್ಯಕ್ತಿತ್ವ ಗೊತ್ತಾಗುತ್ತದೆ. ಮಹಾನ್ ಪುರುಷರ ಬಗ್ಗೆ ಹೇಳುವವನು ತಮ್ಮ ಕಾರ್ಯಗಳ ಬಗ್ಗೆ ನೋಡಬೇಕು. ಸಿದ್ದರಾಮಯ್ಯ ಯಾವತ್ತೂ ತಮ್ಮ ಆಡಳಿತ, ಅಭಿವೃದ್ಧಿಯ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಕೇವಲ ಈ ಭಾಗ್ಯ ಕೊಟ್ಟೆ, ಆ ಭಾಗ್ಯ ಕೊಟ್ಟೆ ಎನ್ನುತ್ತಾರೆ. ಇವರಿಗಿಂತ ಚನ್ನಾಗಿ ನಮ್ಮ ಸರ್ಕಾರದಲ್ಲಿ ಭಾಗ್ಯಗಳನ್ನು ಕೊಟ್ಟಿದ್ದೇವೆ. ಭ್ರಷ್ಟಾಚಾರದಲ್ಲಿ ಇದ್ದವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇನ್ನಿತರರು. ಭ್ರಷ್ಟಾಚಾರದ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಹರಿಹಾಯ್ದರು. ಇದನ್ನೂ ಓದಿ: ರಸ್ತೆ ಮಧ್ಯೆಯೇ ಯಡಿಯೂರಪ್ಪರನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

    ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಮತವಿಲ್ಲ. ಸೋಮಣ್ಣನಾಗಲಿ ಯಾರಾಗಲಿ ಯಾವುದೇ ಭಿನ್ನಮತವಿಲ್ಲ. ಕಾಂಗ್ರೆಸ್‌ನವರು ಅವರಿಗೆ ಅರ್ಜಿ ಹಾಕಿ ರಿಜೆಕ್ಟ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಚಿಂತಾಜನಕವಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ನಾಯಕರಿಗೆ ಇಡೀ ದೇಶ ಹಾಗೂ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಇವರು ಇನ್ಯಾರಿಗೆ ಭವಿಷ್ಯ ಕೊಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬ್ರಿಟಿಷರಿಂದ ಟಿಪ್ಪು ಮಕ್ಕಳು ಪಿಂಚಣಿ ಪಡೆಯುತ್ತಿದ್ದರು- ಬಿಜೆಪಿ  

    ಕಾಂಗ್ರೆಸ್ ಪಕ್ಷವನ್ನು ಸಿ.ಡಿ ಪಾರ್ಟಿ ಎಂದೇ ಕರೆಯುವುದು. ಇವರ ಬ್ಲ್ಯಾಕ್‌ಮೇಲ್ ಎಲ್ಲಾ ಇಲ್ಲಿ ವರ್ಕೌಟ್ ಆಗುವುದಿಲ್ಲ. ಜನ ಇವರಿಗೆ 5 ರೂಪಾಯಿಯ ಕಿಮ್ಮತ್ತು ಕೊಡುವುದಿಲ್ಲ. ಅವರು ಏನಾದರು ಇಟ್ಟುಕೊಂಡಿದ್ದರೆ ಅದನ್ನು ರಿಲೀಸ್ ಮಾಡಲಿ. ಪಾಪ ಯಾಕೆ ಸ್ಟಾಕ್ ಇಟ್ಟುಕೊಂಡಿದ್ದಾರೆ? ಈ ಸಿ.ಡಿ ಪಾರ್ಟಿಯ ಬ್ಲ್ಯಾಕ್‌ಮೇಲ್ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೆಲ್ಲಾ ಔಟ್‌ಲೆಟ್ ಎಂದು ಹೇಳಿದರು. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಹೆಣ್ಣಿನ ರೂಪವಷ್ಟೇ, ಅವರ ಗುಣಗಳೇ ಬೇರೆ: ರಮೇಶ್ ಜಾರಕಿಹೊಳಿ 

    ರಾಮನಗರದಲ್ಲಿ (Ramanagara) ರಾಮಮಂದಿರದ ಭೂಮಿಪೂಜೆ ವಿಚಾರವಾಗಿ ಮಾತನಾಡಿದ ಅವರು, ಭೂಮಿಪೂಜೆ ಮಾಡಬೇಕು ಅಂದುಕೊಂಡಿದ್ದೇವೆ. ಡಿಪಿಆರ್ ಇನ್ನೂ ಸಿದ್ಧವಾಗುತ್ತಿದೆ. ಡಿಪಿಆರ್ ಸಿದ್ಧವಾದ ಕೂಡಲೇ ಭೂಮಿಪೂಜೆ ಮಾಡುವುದೆಂದು ನಿರ್ಧರಿಸಿದೆ. ಚುನಾವಣೆ ನೀತಿ ಸಂಹಿತೆ ಮುಂಚೆಯೇ ಪೂಜೆ ಮಾಡಬೇಕು ಎಂದುಕೊಂಡಿದ್ದೆ. ಭೂಮಿ ಪೂಜೆ ಮಾಡಲು ನಮ್ಮ ಪಕ್ಷ ಉತ್ಸುಕವಾಗಿದೆ. ಭೂಮಿಪೂಜೆ ಕಾರ್ಯಕ್ರಮವನ್ನು ಸಿಎಂ ರೂಪುರೇಷೆ ಮಾಡುತ್ತಾರೆ. ಯಾರನ್ನು ಆಹ್ವಾನ ಮಾಡಬೇಕು ಎಂದು ಅವರು ನಿರ್ಧಾರಿಸುತ್ತಾರೆ. 19 ರಂದು ರಾಮನಗರದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ ಅಷ್ಟೇ. ಇನ್ನೂ ರಾಮಮಂದಿರದ ಭೂಮಿಪೂಜೆ ನಿಗದಿಯಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಚುನಾವಣೆ ಬಂದ್ರೆ ಕುರುಡುಮಲೆ ವಿನಾಯಕನಿಗೆ ಎಲ್ಲಿಲ್ಲದ ಬೇಡಿಕೆ

  • ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ

    ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಫೈಟರ್ ರವಿ (Fighter Ravi) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಸ್ಪರ ನಮಸ್ಕಾರ ಮಾಡಿಕೊಂಡ ಫೋಟೊ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಮನಮೋಹನ್ ಸಿಂಗ್ (Manmohan Singh) ಫೋಟೋವನ್ನು ಹೋಲಿಕೆ ಮಾಡಿ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಪ್ರತಿಕ್ರಿಯೆ ನೀಡಿದ್ದಾರೆ.

    ಮೋದಿಗೆ ಕೈ ಮುಗಿಯಬಾರದು ಎಂದು ನಾವು ಹೇಳಲು ಆಗುವುದಿಲ್ಲ. ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಪ್ರಧಾನ ಮಂತ್ರಿಗೆ ಕೈಮುಗಿಯುತ್ತಾರೆ. ಯಾರೇ ಕೈಮುಗಿದರೂ ವಾಪಾಸ್ ಕೈಮುಗಿಯುವುದು ಪ್ರಧಾನ ಮಂತ್ರಿಗಳು ಇಟ್ಟುಕೊಂಡ ಸಂಪ್ರದಾಯ. ಆತ ಯಾವ ವ್ಯಕ್ತಿ? ಆತನ ಹೆಸರೇನು? ಯಾವ ಸೀಟು ಎನ್ನುವುದು ಪ್ರಧಾನಿಗೆ ಗೊತ್ತಿರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಹೆಸರಿನಲ್ಲಿ ಜೆಡಿಎಸ್, ಕಾಂಗ್ರೆಸ್ ರಾಜಕೀಯ – PSI ಮೇಲೆ ಹಲ್ಲೆ 

    ಭಾರತೀಯನೊಬ್ಬ ಪ್ರಧಾನಿಗೆ ಕೈಮುಗಿದಿದ್ದಾನೆ. ಆತ ರೌಡಿಶೀಟರ್ ಆಗಿದ್ದರೆ ಯಾವ ರಕ್ಷಣೆಯೂ ಇಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಏನಾದರು ಅಪರಾಧ ಮಾಡಿದರೆ ಸಂವಿಧಾನದ ಪ್ರಕಾರ ಕ್ರಮ ಆಗುತ್ತದೆ. ಬಿಜೆಪಿ (BJP) ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಗೆ (Vijaya Sankalpa Yatra) ಅಭೂತಪೂರ್ವ ಸ್ಪಂದನೆಯನ್ನು ಜನತೆ ನೀಡಿದ್ದಾರೆ. ಯುವಕರ ರಣೋತ್ಸವ, ಕಾಯಕರ್ತರ ಉತ್ಸಾಹದಿಂದಾಗಿ ಸಾವಿರಾರು ಜನರು ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇದರ ಆಧಾರದಲ್ಲಿ ಬಿಜೆಪಿ ಪಕ್ಷವು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ

    ಹಳೇ ಮೈಸೂರು (Mysuru) ಭಾಗದಲ್ಲಿ ಅಭ್ಯರ್ಥಿಯ ಆಯ್ಕೆಗೂ ತಡಕಾಡುತ್ತಿದ್ದ ಕಾಲವಿತ್ತು. ಆದರೆ ಈಗ ನೂರಕ್ಕೆ ನೂರು ಶಕ್ತಿ ವೃದ್ಧಿಸಿದೆ. ಪ್ರಧಾನಿ ಮೋದಿಯವರ ಮಂಡ್ಯ (Mandya) ಭೇಟಿ ವೇಳೆ ಜನರು ತೋರಿದ ಪ್ರೀತಿಯೇ ಇದಕ್ಕೆ ಸಾಕ್ಷಿ ಎಂದರು. ಲೋಕಾಯುಕ್ತಕ್ಕೆ ಹಲ್ಲು ಕೊಟ್ಟದ್ದು ಬಿಜೆಪಿ ಸರ್ಕಾರ. ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Madal Virupakshappa) ವಿರುದ್ಧ ದಾಖಲಾಗಿರುವ ಲೋಕಾಯುಕ್ತ ಪ್ರಕರಣವು ಚುನಾವಣಾ ಸನಿಹದಲ್ಲಿರುವುದರಿಂದ ಸ್ವಾಭಾವಿಕವಾಗಿ ಚರ್ಚೆಯಾಗುತ್ತದೆ. ಆದರೆ ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿ, ಎಸಿಬಿ ರಚಿಸಿದ್ದು ಯಾರು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಲೋಕಾಯುಕ್ತಕ್ಕೆ ಮರುಜೀವ ನೀಡಿ, ಶಕ್ತಿ ಕೊಟ್ಟು, ಹಲ್ಲು ಕೊಟ್ಟಿರುವುದು ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ಎಂದರು. ಇದನ್ನೂ ಓದಿ: ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್‌ 

    ಪಾರದರ್ಶಕ ಆಡಳಿತ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ಸಲುವಾಗಿ ಲೋಕಾಯುಕ್ತವನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಬಿಟ್ಟು ಬೇರೆ ಯಾವ ಸರ್ಕಾರ ಇದ್ದರೂ, ಆಡಳಿತ ಪಕ್ಷದ ಶಾಸಕನ ಮೇಲೆ ಪ್ರಕರಣ ದಾಖಲಾಗಲು ಸಾಧ್ಯವಿತ್ತೆ? ಆರೋಪವಿದೆ, ಅದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ

  • ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್

    ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯ ಹೆಲಿಪ್ಯಾಡ್‍ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಗಾರ್ಲೆಂಡ್ ಮಾಡಿ ಸ್ವಾಗತಕೋರಿದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ಫೈಟರ್ ರವಿ (Fighter Ravi) ಸಹ ಮೋದಿ ಅವರಿಗೆ ಸ್ವಾಗತಕೋರಿದ್ದಾರೆ.

    ಕಾಂಗ್ರೆಸ್ ಫೈಟರ್ ರವಿ ವಿಚಾರ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಇದೀಗ ಕಾಂಗ್ರೆಸ್ (Congress) ಮುಗಿಬಿದ್ದಿದೆ. ಮೋದಿ ಅವರು ಮಂಡ್ಯಗೆ ಬಂದಾಗ ಫೈಟರ್ ರವಿ ಸ್ವಾಗತ ಮಾಡುವ ಫೋಟೋ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿದೆ.

    ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವಿಲ್ಲ. ಫೈಟರ್ ರವಿ ಎಂಬ ರೌಡಿಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಆಹ್ವಾನ ನೀಡಿಲ್ಲ ಯಾಕೆ: ಮೋದಿ ವಿರುದ್ಧ ಸುರೇಶ್‌ ಕಿಡಿ

    ಮೋದಿ ಸ್ವಾಗತಿಸಿದ ಫೈಟರ್ ರವಿ: ಮೋದಿ ಅವರು ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ಮಂಡ್ಯ ಪಿಇಎಸ್ ಹೆಲಿಪ್ಯಾಡ್‍ಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಮೋದಿ ಅವರಿಗೆ ಗಾರ್ಲೆಂಡ್ ಮಾಡಿ ಸ್ವಾಗತಕೋರಿದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ಫೈಟರ್ ರವಿ ಸಹ ಮೋದಿ ಅವರಿಗೆ ಸ್ವಾಗತಕೋರಿದ್ದಾರೆ. ಈ ಹಿಂದೆ ಫೈಟರ್ ರವಿ ಬಿಜೆಪಿಗೆ ಸೇರ್ಪಡೆಯಾದ ವೇಳೆ ದೊಡ್ಡಮಟ್ಟದ ಸುದ್ದಿಯಾಗಿತ್ತು. ಅಲ್ಲದೇ ಕಾಂಗ್ರೆಸ್ ಬಿಜೆಪಿ ರೌಡಿಶೀಟರ್‍ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯದಲ್ಲಿ ರೌಡಿ ರಾಜಕೀಯ ಮಾಡಲು ಮುಂದಾಗಿದೆ ಎಂದು ವಾಗ್ದಾಳಿ ಮಾಡಿತ್ತು.

     

  • ಸಚಿವ, ಶಾಸಕರೊಂದಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಫೈಟರ್ ರವಿ

    ಸಚಿವ, ಶಾಸಕರೊಂದಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಫೈಟರ್ ರವಿ

    ಮಂಡ್ಯ: ಇತ್ತೀಚೆಗಷ್ಟೆ ಬಿಜೆಪಿ (BJP) ಪಕ್ಷ ಸೇರ್ಪಡೆಗೊಂಡಿದ್ದ ಫೈಟರ್ ರವಿ (Fighter Ravi) ವಿಚಾರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ರೌಡಿಶೀಟರ್‌ಗಳನ್ನು (Rowdy Sheeter) ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದವು. ಇದರ ನಡುವೆ ಇದೀಗ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಫೈಟರ್ ರವಿ ಸಚಿವ ಹಾಗೂ ಶಾಸಕರೊಂದಿಗೆ ಕಾಣಿಸಿಕೊಂಡಿರುವುದು ಮತ್ತೊಂದು ವಿವಾದ ಸೃಷ್ಟಿಸಿದೆ.

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಶನಿವಾರ ನಡೆದ ಬಗುರ್ ಹುಕುಂ ಸಾಗುವಳಿ ಮಂಜೂರು ಪತ್ರ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜನೆ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ (K.Gopalaiah) ಹಾಗೂ ಶಾಸಕ ಸುರೇಶ್ ಗೌಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರ ಜೊತೆ ಫೈಟರ್ ರವಿ ಕೂಡ ವೇದಿಕೆ ಹಂಚಿಕೊಂಡಿದ್ದು ಬಿಜೆಪಿ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಜನಪ್ರತಿನಿಧಿ ಅಲ್ಲದಿದ್ದರು ಸರ್ಕಾರಿ ಕಾರ್ಯಕ್ರಮದಲ್ಲಿ ರೌಡಿಶೀಟರ್ ಎಂಬ ಕುಖ್ಯಾತಿ ಪಡೆದವ ಭಾಗವಹಿಸಿದ್ದು ಹೇಗೆ? ಭಾಗಿಯಾಗಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಈ ಹಿಂದೆ ಸೈಲೆಂಟ್ ಸುನೀಲ, ಫೈಟರ್ ರವಿ ಬಿಜೆಪಿ ಸೇರ್ಪಡೆ ವಿರೋಧ ಪಕ್ಷಗಳಿಗೆ ಆಹಾರವಾಗಿತ್ತು. ನಂತರ ರೌಡಿ ರಾಜಕೀಯ ಕೆಸರೆರಚಾಟ ರಾಜ್ಯ ರಾಜಕಾರಣದಲ್ಲಿ ವಾಗ್ಯುದ್ಧವನ್ನೇ ಸೃಷ್ಟಿಸಿತ್ತು. ಆ ವಿಷಯ ತಣ್ಣಗಾಗುತ್ತಿದ್ದ ವೇಳೆಯೇ ಫೈಟರ್ ರವಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ಮತ್ತಷ್ಟು ಸಂಚಲನ ಸೃಷ್ಟಿಸಿದೆ. ಅತ್ತ ಫೈಟರ್ ರವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರವನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಮರ್ಥಿಸಿಕೊಂಡಿದ್ದಾರೆ. ಜನರಿಗೆ ಅನುಕೂಲವಾಗುವ ಕಾರ್ಯಕ್ರಮವಿದು, ಅವರು ನಮ್ಮ ಸ್ನೇಹಿತರು ಹಾಗಾಗಿ ಬಂದಿದ್ದಾರೆ ಎನ್ನುವ ಮೂಲಕ ಫೈಟರ್ ರವಿ ಪರ ಬ್ಯಾಟ್ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k