ಬಾಲಿವುಡ್ ನ ಮತ್ತೊಂದು ಸೂಪರ್ ಹಿಟ್ ಸಿನಿಮಾ ಒಟಿಟಿಗೆ ಬಂದಿದೆ. ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಫೈಟರ್ ಸಿನಿಮಾ ಇಂದಿನಿಂದ ನೀವು ಒಟಿಟಿಯಲ್ಲಿ (OTT) ನೋಡಬಹುದು. ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದ್ದ ಈ ಚಿತ್ರವು ಹಲವು ವಿವಾದಕ್ಕೂ ಕಾರಣವಾಗಿತ್ತು.
ಫೈಟರ್ (Fighter) ಸಿನಿಮಾದ ಚುಂಬನ ದೃಶ್ಯ ಕುರಿತಂತೆ ವಾಯುಸೇನಾ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ. ವಾಯುಸೇನೆ ಸಮವಸ್ತ್ರ ಧರಿಸಿಕೊಂಡು ಹೃತಿಕ್ ಮತ್ತು ದೀಪಿಕಾ ಚುಂಬಿಸುವ ದೃಶ್ಯವು ವಸ್ತ್ರ ಸಂಹಿತೆ ನೀತಿಯನ್ನು ಉಲ್ಲಂಘಿಸಿದೆ. ಇದರಿಂದಾಗಿ ವಾಯುಸೇನೆಗೆ ಮುಜುಗರ ತರಿಸಿದೆ ಎಂದು ಅಧಿಕಾರಿ ಅಸ್ಸಾಮಿನ ಸೌಮ್ಯ ದೀಪ್ ದಾಸ್ (Soumya Deep Das) ಎನ್ನುವವರು ದೂರು (Complain) ದಾಖಲಿಸಿದ್ದಾರೆ.
ಫೈಟರ್ ಸಿನಿಮಾ ಕುರಿತಂತೆ ಬಿಡುಗಡೆ ದಿನದಿಂದ ಈವರೆಗೂ ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ. ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿತ್ತು. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ (Bikini) ಹಾಕಿದ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು.
ಈ ಹಿಂದೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಸಿನಿಮಾದಿಂದಲೇ ಆ ದೃಶ್ಯವನ್ನು ಕೈ ಬಿಡಲಾಗಿತ್ತು. ಫೈಟರ್ ಸಿನಿಮಾದಲ್ಲೂ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಳ್ಳಲಿಲ್ಲ. ಇದು ಅಭಿಮಾನಿಗಳ ನಿರಾಸೆ ಕಾರಣವಾಗಿತ್ತು.
ದೀಪಿಕಾ ಪಡುಕೋಣೆ (Deepika Paduk) ಮತ್ತು ಹೃತಿಕ್ ರೋಷನ್ ಕಾಂಬಿನೇಷನ್ ನ ಫೈಟರ್ (Fighter) ಸಿನಿಮಾದ ಚುಂಬನ ದೃಶ್ಯ ಕುರಿತಂತೆ ವಾಯುಸೇನಾ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ. ವಾಯುಸೇನೆ ಸಮವಸ್ತ್ರ ಧರಿಸಿಕೊಂಡು ಹೃತಿಕ್ ಮತ್ತು ದೀಪಿಕಾ ಚುಂಬಿಸುವ ದೃಶ್ಯವು ವಸ್ತ್ರ ಸಂಹಿತೆ ನೀತಿಯನ್ನು ಉಲ್ಲಂಘಿಸಿದೆ. ಇದರಿಂದಾಗಿ ವಾಯುಸೇನೆಗೆ ಮುಜುಗರ ತರಿಸಿದೆ ಎಂದು ಅಧಿಕಾರಿ ಅಸ್ಸಾಮಿನ ಸೌಮ್ಯ ದೀಪ್ ದಾಸ್ (Soumya Deep Das) ಎನ್ನುವವರು ದೂರು (Complain) ದಾಖಲಿಸಿದ್ದಾರೆ.
ಫೈಟರ್ ಸಿನಿಮಾ ಕುರಿತಂತೆ ಬಿಡುಗಡೆ ದಿನದಿಂದ ಈವರೆಗೂ ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ. ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿತ್ತು. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ (Bikini) ಹಾಕಿದ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು.
ಈ ಹಿಂದೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಸಿನಿಮಾದಿಂದಲೇ ಆ ದೃಶ್ಯವನ್ನು ಕೈ ಬಿಡಲಾಗಿತ್ತು. ಫೈಟರ್ ಸಿನಿಮಾದಲ್ಲೂ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಳ್ಳಲಿಲ್ಲ. ಇದು ಅಭಿಮಾನಿಗಳ ನಿರಾಸೆ ಕಾರಣವಾಗಿತ್ತು.
ಒಂದು ಕಡೆ ಬಿಕಿನಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದರೆ ಮತ್ತೊಂದು ಕಡೆ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮೀರಿದೆ ಎಂದು ಈ ಹಿಂದೆ ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದರು.
ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ.. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದರು.
ವಿಶ್ವದಾದ್ಯಂತ ನಾಳೆ ಫೈಟರ್ (Fighter) ರಿಲೀಸ್ ಆಗುತ್ತಿದೆ. ಹೃತಿಕ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಹೊತ್ತಲ್ಲಿ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿದ್ದ ವಿಷಯ ಮುನ್ನೆಲೆಗೆ ಬಂದಿದೆ. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ (Bikini) ಹಾಕಿದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಸಿನಿಮಾದಿಂದಲೇ ಆ ದೃಶ್ಯವನ್ನು ಕೈ ಬಿಡಲಾಗಿತ್ತು. ಫೈಟರ್ ಸಿನಿಮಾದಲ್ಲೂ ಬಿಕಿನಿಯಲ್ಲಿ ದೀಪಿಕಾ ಕಾಣಿಸುವುದಿಲ್ಲ ಎನ್ನುವುದು ಸದ್ಯದ ವರ್ತಮಾನ.
ಒಂದು ಕಡೆ ಬಿಕಿನಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದರೆ ಮತ್ತೊಂದು ಕಡೆ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮೀರಿದೆ ಎಂದು ಈ ಹಿಂದೆ ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದರು.
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಪಠಾಣ್’ಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದಾರೆ. ಹೃತಿಕ್-ದೀಪಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸ್ಟಾರ್ ಕಲಾವಿದರ ದುಬಾರಿ ಸಂಭಾವನೆ ವಿಷ್ಯವಾಗಿ ಫೈಟರ್ ಸುದ್ದಿಯಲ್ಲಿದೆ.
ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ತಲುಪಿದೆ. ಇದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದರು.
ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ ಕೋಟಿ ಕೋಟಿ ಲೂಟಿ ಮಾಡಿರೋದ್ರಿಂದ ಸಹಜವಾಗಿ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ನಾಳೆಯೇ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಿನಿಮಾ ಕಲಾವಿದರ ಸಂಭಾವನೆ ಮೀರಿ ಕಲೆಕ್ಷನ್ ಮಾಡುವ ‘ಫೈಟರ್’ ದಾಖಲೆ ಬರೆಯುತ್ತಾ ಎಂದು ಕಾದುನೋಡಬೇಕಿದೆ.
ಭೀಮ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ದುನಿಯಾ ವಿಜಯ್ (Duniy Vijay), ಫೈಟರ್ ಸಿನಿಮಾದ ಕಾರ್ಯಕ್ರಮದಲ್ಲಿ ಆತಂಕದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮನ್ನು ಅವಮಾನಿಸಿದ ವಿಚಾರದ ಜೊತೆಗೆ ತಮ್ಮನ್ನು ನಾಶ ಮಾಡುವುದಕ್ಕೆ ಪ್ರಯತ್ನಿಸಿದರು ಎನ್ನುವ ಸಂಗತಿಯನ್ನೂ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮನ್ನು ಬೆಳೆಸಿದವರಿಗೆ ಕೃತಜ್ಞತೆಯನ್ನೂ ತಿಳಿಸಿದ್ದಾರೆ.
ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ನಟನೆಯ ಸಿನಿಮಾ ಫೈಟರ್ (Fighter). ಈ ಸಿನಿಮಾದ ಕಾರ್ಯಕ್ರಮಕ್ಕೆ ವಿಜಯ್ ಅತಿಥಿಯಾಗಿ ಆಗಮಿಸಿದ್ದರು. ಟೈಗರ್ ಪ್ರಭಾಕರ್ ಅವರನ್ನು, ಅವರ ಸಾಹಸ ದೃಶ್ಯಗಳನ್ನು ಇಷ್ಟ ಪಡುತ್ತಿದ್ದ ವಿಜಯ್, ಈ ಸಂದರ್ಭದಲ್ಲಿ ಪ್ರಭಾಕರ್ ಅವರನ್ನು ನೆನಪಿಸಿಕೊಂಡರು. ಪ್ರಭಾಕರ್ ಅವರು ಎದುರಿಗೆ ಬಂದರೆ ಹುಲಿ ಬಂದ ಹಾಗೆ ಇರುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ
ನಂತರ ಸಿನಿಮಾಗೆ ಪ್ರವೇಶ ಮಾಡಿದಾಗ ನಾನು ಫೈಟರ್. ಆ ಕಾರಣಕ್ಕಾಗಿ ಅವಮಾನಕ್ಕೆ ಒಳಗಾದೆ. ಫೈಟರ್ ಆಗಿ ಅದೇನ್ ಮಾಡ್ತಾನೋ ನೋಡೋಣ ಅಂದರು. ಫೈಟರ್ ಒಬ್ಬನು ನಟನಾದ ಅಷ್ಟೇ ಅಂದು ನೋವು ಕೊಟ್ಟರು. ನಟನಾಗಿ ಬೆಳೆದಾಗ ನನ್ನನ್ನು ನಾಶ ಮಾಡಲು ಪ್ರಯತ್ನ ಪಟ್ಟರು. ಕೆಲವರು ಕೈ ಹಿಡಿದು ಬೆಳೆಸಿದರು ಎಂದು ಭಾವುಕರಾಗಿ ಮಾತನಾಡಿದರು ವಿಜಯ್.
ತಮ್ಮನ್ನು ಯಾರು ನಾಶ ಮಾಡಲು ಪ್ರಯತ್ನಿಸಿದರು, ತಮ್ಮನ್ನು ಹಿಯಾಳಿಸಿದವರು ಯಾರು ಎನ್ನುವ ಮಾಹಿತಿಯನ್ನು ಅವರು ಬಿಟ್ಟುಕೊಡಲಿಲ್ಲ. ಆದರೆ ,ತಮಗಾದ ಸಂಕಟವನ್ನು ಎಲ್ಲರೊಂದಿಗೂ ಹಂಚಿಕೊಂಡರು ವಿಜಯ್.
ವಿನೋದ್ ಪ್ರಭಾಕರ್ (Vinod Prabhakar) ನಾಯಕರಾಗಿ ನಟಿಸಿರುವ, ನೂತನ್ ಉಮೇಶ್ (Nutan Umesh) ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ ‘ಫೈಟರ್’ (Fighter) ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ ‘ಐ ವಾನ ಫಾಲೋ ಯು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್. ಜಿ ಹಾಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಗುರುರಂಜನ್ ಶೆಟ್ಟಿ (ನಟಿ ಅನುಷ್ಕಾ ಶೆಟ್ಟಿ ಸಹೋದರ), ನಾಗರಾಜ್, ಕೃಷ್ಣಪ್ಪ, ಗೌರೀಶ್ ಹಾಗೂ ಹಿರಿಯ ಪತ್ರಕರ್ತರಾದ ಕೆ.ಎಸ್ ವಾಸು, ಕೆ.ಎನ್.ನಾಗೇಶ್ ಕುಮಾರ್ ಮುಂತಾದ ಗಣ್ಯರು ‘ಐ ವಾನ ಫಾಲೋ ಯು’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಹಾಡಿನ ಮೊದಲ ಪದ ‘ಐ ವಾನ ಫಾಲೋ’ ಎಂಬುದನ್ನು ನಿರ್ದೇಶಕರು ಹೇಳಿದಾಗ ಫಾಲೋ ಎಂಬ ಪದದಿಂದಲೇ ಈ ಹಾಡು ಆರಂಭವಾಯಿತು. ವಿಶೇಷವೆಂದರೆ, ಈ ಹಾಡಿನಲ್ಲಿ ಬರುವ ಪದಗಳಿಗೆ ಎರಡು ಅರ್ಥಗಳಿದೆ. ಕವಿರಾಜ್ ಅದ್ಭುತವಾಗಿ ಹಾಡು ಬರೆದಿದ್ದಾರೆ. ಚೈತ್ರ ಸೊಗಸಾಗಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಹಾಡಿನ ಬಗ್ಗೆ ಮಾಹಿತಿ ನೀಡಿದರು.
ಈ ಹಾಡನ್ನು ಪಾಂಡಿಚೇರಿಯಲ್ಲಿ ಚಿತ್ರಿಸಲಾಗಿದೆ. ಗುರುಕಿರಣ್ ಅವರ ಸಂಗೀತ, ಕವಿರಾಜ್ ಅವರ ಸಾಹಿತ್ಯ, ಮೋಹನ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಪ್ರಭಾಕರ್, ಲೇಖಾ ಚಂದ್ರ ಅವರ ಅಭಿನಯ ಎಲ್ಲವೂ ಸೇರಿ ಈ ‘ಫಾಲೋ ಯು’ ಹಾಡು ಅದ್ಭುತವಾಗಿ ಹಾಗೂ ಅದ್ದೂರಿಯಾಗಿ ಮೂಡಿಬಂದಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ನೂತನ್ ಉಮೇಶ್.
ಚಿತ್ರದ ಮುಹೂರ್ತಕ್ಕೆ ಬಂದು ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನೆಯುತ್ತಾ ಮಾತು ಆರಂಭಿಸಿದ ನಾಯಕ ವಿನೋದ್ ಪ್ರಭಾಕರ್, ಈ ಫೈಟರ್ ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ ಫೈಟರ್. ನಿರ್ಮಾಪಕ ಸೋಮಶೇಖರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಅಷ್ಟೇ ಚೆನ್ನಾಗಿ ಕಥೆ ,ಚಿತ್ರಕಥೆ ಬರೆದಿದ್ದಾರೆ. ಇಂದು ಬಿಡುಗಡೆಯಾದ ಹಾಡಿನ ಚಿತ್ರೀಕರಣ ಮಾರ್ಚ್ ನಲ್ಲಿ ಪಾಂಡಿಚೇರಿಯಲ್ಲಿ ಚಿತ್ರೀಕರಣವಾಗಿದ್ದು, ಅಲ್ಲಿನ ಬಿಸಿಲು ತಡೆಯುವುದು ಕಷ್ಟ. ಎಲ್ಲರ ಶ್ರಮದಿಂದ ಈ ಹಾಡು ಚೆನ್ನಾಗಿ ಬಂದಿದೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಈ ಚಿತ್ರ ದೊಡ್ಡ ಯಶಸ್ಸು ತಂದು ಕೊಡಲಿ. ಅವರಿಂದ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿ ಎಂದು ಹಾರೈಸಿದರು.
ಇಡೀ ಚಿತ್ರತಂಡದ ಶ್ರಮದಿಂದ ಫೈಟರ್ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇಂದು ಹಾಡು ಬಿಡುಗಡೆಯಾಗಿದೆ. ಚಿತ್ರತಂಡಕ್ಕೆ ಹಾಗೂ ಆಗಮಿಸಿರುವ ಗಣ್ಯರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ. ಹಾಡು ಬರೆದಿರುವ ಕವಿರಾಜ್, ಹಾಡಿರುವ ಚೈತ್ರ ಹಾಗೂ ನಾಯಕಿ ಲೇಖಾ ಚಂದ್ರ ಫಾಲೋ ಯು ಹಾಡಿನ ಬಗ್ಗೆ ಮಾತನಾಡಿದರು.
ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ, ನೂತನ್ ಉಮೇಶ್ (Nutan Umesh) ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ ‘ಫೈಟರ್’ (Fighter) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ಮಾಪಕ ಸೋಮಶೇಖರ್ ಅವರ ತಂದೆ ಕೃಷ್ಣಪ್ಪ ಟೀಸರ್ ಬಿಡುಗಡೆ ಮಾಡಿದರು.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ನೂತನ್ ಉಮೇಶ್, ಈ ಚಿತ್ರದ ಶೀರ್ಷಿಕೆಯನ್ನು ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳೇ ಅನಾವರಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಟೀಸರ ಅನ್ನು ನಿರ್ಮಾಪಕರ ತಂದೆಯವರು ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೈಲರ್ ಹೊರಬರಲಿದ್ದು, ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಫೈಟರ್ ಎಂದರೆ ಹೊಡೆದಾಡುವವನು ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ ಫೈಟರ್ ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಪಾವನ ಹಾಗೂ ಲೇಖ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ . ಸುಮಾರು ವರ್ಷಗಳ ನಂತರ ನಟಿ ನಿರೋಷ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು. ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ರಿಷಬ್ ಶೆಟ್ಟಿ ದಂಪತಿ
ಫೈಟರ್ ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ- ತಾಯಿ ಹಾಗೂ ಮಗನ ಬಾಂಧವ್ಯದ ಸನ್ನಿವೇಶಗಳು ಎಲ್ಲರ ಮನ ಮುಟ್ಟಲಿದೆ. ಜೊತೆಗೆ ಥ್ರಿಲ್ಲರ್ ಅಂಶಗಳನ್ನ ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ. ನನ್ನನ್ನು ನಿರ್ದೇಶಕರು ನನ್ನ ಹಿಂದಿನ ಚಿತ್ರಗಳಿಗಿಂತ ತುಂಬಾನೇ ಸ್ಟೈಲಿಷ್ ಆಗಿ ತೋರಿಸಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವ ಫೈಟರ್ ನಾನು ಎಂದು ವಿನೋದ್ ಪ್ರಭಾಕರ್ ತಿಳಿಸಿದರು.
ನಾಯಕಿಯರಾದ ಲೇಖಾ ಚಂದ್ರ ಹಾಗೂ ಪಾವನ (Pavana) ತಮ್ಮ ಪಾತ್ರದ ಕುರಿತು ಮಾತನಾಡಿದರು. ಬಹಳ ದಿನಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನಿರೋಷ ಸಂತಸಪಟ್ಟರು. ಚಿತ್ರದಲ್ಲಿ ಹಾಡುಗಳಿದ್ದು ಎರಡೂ ವಿಭಿನ್ನವಾಗಿವೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಫೈಟರ್ ಚಿತ್ರದ ಸಾಹಸ ದೃಶ್ಯಗಳ ಕುರಿತು ಮಾಹಿತಿ ನೀಡಿದರು.
ಸ್ಯಾಂಡಲ್‌ವುಡ್‌ನ (Sandalwood) ಮರಿ ಟೈಗರ್ ವಿನೋದ್ ಪ್ರಭಾಕರ್ ‘ಫೈಟರ್’ (Fighter) ಅವತಾರ ತಾಳಿದ್ದಾರೆ. ಹೊಸ ಬಗೆಯ ಗೆಟಪ್‌ನಲ್ಲಿ ಮಿಂಚಲು ವಿನೋದ್ ಪ್ರಭಾಕರ್ (Vinod Prabhakar) ರೆಡಿಯಾಗಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಫೈಟರ್ ಸಿನಿಮಾ ಮೊದಲ ಝಲಕ್ ರಿವೀಲ್ ಟೀಮ್ ನಿರ್ಧರಿಸಿದೆ.
ನೂತನ್ ಉಮೇಶ್ ನಿರ್ದೇಶನದ ‘ಫೈಟರ್’ ಸಿನಿಮಾ ಬಗ್ಗೆ ಆಗಸ್ಟ್ 25ಕ್ಕೆ ಬಿಗ್ ಅಪ್‌ಡೇಟ್ ಕೊಡೋದಾಗಿ ಚಿತ್ರತಂಡ ತಿಳಿಸಿದೆ. ನಾಳೆ ಶುಕ್ರವಾರದಂದು ಫೈಟರ್ ಸಿನಿಮಾ ಖಡಕ್ ಟೀಸರ್‌ವೊಂದು ರಿವೀಲ್ ಆಗಿದೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಟೀಸರ್ ಝಲಕ್ ಮೂಲಕ ಫ್ಯಾನ್ಸ್‌ಗೆ ದರ್ಶನ ಕೊಡಲಿದ್ದಾರೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್
ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರು ಕಥೆ ಭಿನ್ನವಾಗಿರಬೇಕು ಎನ್ನುವ ನಿಲುವು ವಿನೋದ್ ಪ್ರಭಾಕರ್ ಅವರದ್ದು. ಎಂದೂ ಕಾಣಿಸಿಕೊಂಡಿರದ ಭಿನ್ನ ಪಾತ್ರದಲ್ಲಿ ವಿನೋದ್ ನಟಿಸಿದ್ದಾರೆ. ‘ಫೈಟರ್’ ಸಿನಿಮಾವನ್ನು ಸೋಮಶೇಖರ್ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.
‘ಫೈಟರ್’ ಒಂದು ಪಕ್ಕಾ ಫ್ಯಾಮಿಲಿ, ಕಮರ್ಷಿಯಲ್ ಚಿತ್ರವಾಗಿದ್ದು, ಚಿತ್ರದ ನಾಯಕನ ರೈಟರ್, ಫೈಟರ್ ಮತ್ತು ಶೂಟರ್ ಎಂಬ ಮೂರು ವಿಭಿನ್ನ ಛಾಯೆಗಳಲ್ಲಿ ಕಾಣಿಸಿಕೊಂಡು ಸಾಮಾಜಿಕ ಕಳಕಳಿಯಿಂದ ಹೊರಡುತ್ತಾನೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ನಾವು ನಿಜ ಜೀವನದಲ್ಲಿ ಹಲವು ವಿಷಯಗಳಿಗೆ ಫೈಟ್ ಮಾಡುತ್ತೇವೆ. ಅದು ತುಂಬಾ ಸಹಜವಾಗಿ ಈ ಚಿತ್ರದಲ್ಲಿ ಮೂಡಿ ಬರಲಿದೆ. ಇದರಲ್ಲಿ ಮಾರ್ಷಲ್ ಆರ್ಟ್ ಇದೆ.
‘ಪಠಾಣ್’ (Pathaan) ಸೂಪರ್ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ‘ಫೈಟರ್’ (Fighter) ಸಿನಿಮಾದಲ್ಲಿ ಹೃತಿಕ್ ಜೊತೆ ತೆರೆಹಂಚಿಕೊಳ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮಿರುತ್ತಿದೆ ಎಂದು ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಪಠಾಣ್’ಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದಾರೆ. ಹೃತಿಕ್-ದೀಪಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸ್ಟಾರ್ ಕಲಾವಿದರ ದುಬಾರಿ ಸಂಭಾವನೆ ವಿಷ್ಯವಾಗಿ ಫೈಟರ್ ಸುದ್ದಿಯಲ್ಲಿದೆ. ಇದನ್ನೂ ಓದಿ:ಬಜರಂಗದಳ ನಿಷೇಧ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ
ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ತಲುಪಿದೆ. ಇದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಈ ಚಿತ್ರದ ಬಜೆಜ್ ಕೈ ಮೀರಿ ಹೋಗಿದೆ ಎಂದಿದ್ದಾರೆ. ಈ ಸಂಭಾವನೆ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.
Hrithik‘s film #fighter has gone over budget and touching Rs.350Cr, which will be impossible to recover. Director Siddharth Anand charged ₹40Cr. Hrithik fees is ₹85Cr and Deepika’s fees is Rs.20Cr. Other star cast ₹15Cr. Total ₹160Cr! Jai Ho.
ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ ಕೋಟಿ ಕೋಟಿ ಲೂಟಿ ಮಾಡಿರೋದ್ರಿಂದ ಸಹಜವಾಗಿ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಕಲಾವಿದರ ಸಂಭಾವನೆ ಮೀರಿ ಕಲೆಕ್ಷನ್ ಮಾಡುವ ‘ಫೈಟರ್’ ದಾಖಲೆ ಬರೆಯುತ್ತಾ ಎಂದು ಕಾದುನೋಡಬೇಕಿದೆ.
ನವದೆಹಲಿ: ಭಾರತೀಯ ವಾಯುಸೇನೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ನೇಮಕಗೊಂಡಿದ್ದಾರೆ.
ಪ್ರಸ್ತುತ ಏರ್ ಚೀಫ್ ಮಾರ್ಷಲ್ ಆಗಿರುವ ಆರ್‌ಕೆಎಸ್ ಭದೌರಿಯಾ ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ಇವರ ನಿವೃತ್ತಿ ಬಳಿಕ ಭಾರತೀಯ ವಾಯುಸೇನೆಯ ಮುಖ್ಯಸ್ಥರಾಗಿ ವಿ.ಆರ್ ಚೌಧರಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ಹೊರಹಾಕಿದೆ. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ನಾಲ್ಕು ದಿನ ಅಮೆರಿಕ ಪ್ರವಾಸ
ಏರ್ ಮಾರ್ಷಲ್ ಚೌಧರಿ ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, ಸೆಪ್ಟೆಂಬರ್ 30 ರಂದು ಆರ್‌ಕೆಎಸ್ ಭದೌರಿಯಾ ಅವರು ನಿವೃತ್ತಿ ಬಳಿಕ ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಏರ್ ಮಾರ್ಷಲ್ ಚೌಧರಿ ಅವರು 1982ರ ಡಿಸೆಂಬರ್ 29ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‍ಗೆ ನಿಯೋಜನೆಗೊಂಡಿದ್ದರು. ಅದಲ್ಲದೆ ಆಪರೇಷನ್ ಮೇಘದೂತ್, ಸಫೇದ್ ಸಾಗರ್ ಸೇರಿ ಹಲವು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
Government has decided to appoint Air Marshal V R Chaudhari, PVSM, AVSM, VM presently Vice Chief of Air Staff as the next Chief of Air Staff. Current Chief of Air Staff Air Chief Marshal RKS Bhadauria, PVSM, AVSM, VM, ADC retires from Service on 30th Sep 2021
— Ministry of Defence, Government of India (@SpokespersonMoD) September 21, 2021
ಚೌಧರಿಯ 2021ರ ಜುಲೈ 1ರಂದು ಏರ್ ಮಾರ್ಷಲ್ ಎಚ್‍ಎಸ್ ಅರೋರಾ ನಿವೃತ್ತಿಯ ಬಳಿಕ ವಾಯಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೌಧರಿಯ ಈಗಾಗಲೇ ಫೈಟರ್ ಮತ್ತು ಟ್ರೈನರ್ ವಿಮಾನಗಳಲ್ಲಿ 3,800 ಗಂಟೆಗೂ ಹೆಚ್ಚು ಹಾರಾಟ ಮಾಡಿದ ಅನುಭವವನ್ನು ಹೊಂದಿದ್ದಾರೆ. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ದೊಡ್ಡ ಅವಘಡ ಸಂಭವಿಸಿದೆ. 2016ರಲ್ಲಿ ‘ಮಾಸ್ತಿ ಗುಡಿ’ ಸಿನಿಮಾದ ವೇಳೆ ಫೈಟರ್ ಅನಿಲ್, ಉದಯ್ ಸಾವನ್ನಪ್ಪಿದ್ದರು. ಇದೀಗ ಅಂತದ್ದೇ ಇನ್ನೊಂದು ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಇದೀಗ ಐವರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ.
ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಹಾಗೂ ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಹೈ ಟೆನ್ಷನ್ ವೈಯರ್ ತಗುಲಿ ಮೃತಪಟ್ಟಿದ್ದರು. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಇದೀಗ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್
ಘಟನೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ವಿನೋದ್, ಸಹ ನಿರ್ದೇಶಕ ಶಂಕರ್‍ರಾಜ್, ಜಮೀನು ಮಾಲೀಕ ಪುಟ್ಟರಾಜು, ಕ್ರೇನ್ ಚಾಲಕ ಮುನಿಯಪ್ಪ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿರ್ಮಾಪಕ ಗುರುದೇಶಪಾಂಡೆಗಾಗಿ ಶೋಧ ಮುಂದುವರಿದಿದೆ. ಈ ಮಧ್ಯೆ ಚಿತ್ರೀಕರಣ ನಡೆಸಲು ಪೊಲೀಸರ ಅನುಮತಿ ಪಡೆದಿರಲಿಲ್ಲ ಅಂತ ರಾಮನಗರ ಎಸ್‍ಪಿ ಗಿರೀಶ್ ಹೇಳಿದ್ದಾರೆ. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ
ಅವಘಡದಲ್ಲಿ ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ರಾಜರಾಜೇಶ್ವರಿ ಆಸ್ಪತ್ರೆ ಬಳಿ ಮೃತ ವಿವೇಕ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದನ್ನೂ ಓದಿ:ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್