Tag: ಫೇಸ್ ಬುಕ್ ಲೈವ್

  • ಫೇಸ್ ಬುಕ್ ಲೈವ್ ಬಂದು ವಿಷ ಕುಡಿದ ಕಾಮಿಡಿಯನ್ : ಆತಂಕದಲ್ಲಿ ಫ್ಯಾನ್ಸ್

    ಫೇಸ್ ಬುಕ್ ಲೈವ್ ಬಂದು ವಿಷ ಕುಡಿದ ಕಾಮಿಡಿಯನ್ : ಆತಂಕದಲ್ಲಿ ಫ್ಯಾನ್ಸ್

    ಮಹಿಳೆಯಿಂದಾಗಿ ನಾನು ಮೂರ್ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇವೆ. ಲಿವ್ ಇನ್ ರಿಲೇಷನ್ ಶಿಪ್ ನಿಂದಾಗಿ ನಾನು ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ. ಮತ್ತೆ ನನ್ನ ಮೇಲೆ ದೂರು ದಾಖಲಾಗಿದೆ ಎನ್ನುತ್ತಲೇ ಕಪಿಲ್ ಶರ್ಮಾ ಶೋ ಸೇರಿದಂತೆ ಹಲವು ಕಾಮಿಡಿ (Comedian) ಶೋಗಳಲ್ಲಿ ನಟಿಸಿರುವ ತೀರ್ಥಾನಂದ (Tirthanand Rao) ವಿಷ  (Poison) ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಹಿಂದಿಯ ಹೆಸರಾಂತ ಟಾಕ್ ಶೋ ಮಾಸ್ಟರ್ ಕಪಿಲ್ ಶರ್ಮಾ ಸೇರಿದಂತೆ ಹಲವರೊಂದಿಗೆ ತೆರೆ ಹಂಚಿಕೊಂಡಿರುವ ತೀರ್ಥಾನಂದ ರಾವ್, ಮಹಿಳೆಯೊಬ್ಬರ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರಂತೆ. ಆ ಮಹಿಳೆಯೇ ಇವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರಂತೆ. ಅಲ್ಲದೇ, ಇವರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರಂತೆ. ಇದರಿಂದಾಗಿ ಮನನೊಂದಿದ್ದೇನೆ ಮತ್ತು ಸಾಲ ಮಾಡಿಕೊಂಡಿದ್ದೇನೆ ಎಂದು ಫೇಸ್ ಬುಕ್ ಲೈವ್ (Facebook Live) ನಲ್ಲಿ ಹೇಳಿಕೊಂಡಿದ್ದಾರೆ ತೀರ್ಥಾನಂದ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ತನ್ನ ಸಾವಿಗೆ ಆ ಮಹಿಳೆಯೇ ಕಾರಣವೆಂದೂ ಹೇಳಿರುವ ಅವರು, ವಿಷ ಕುಡಿಯುತ್ತಲೇ ಕಿಡಿಕಾರುತ್ತಾರೆ. ಇದನ್ನು ಗಮನಿಸುವ ಅವರ ಸ್ನೇಹಿತರು ಮತ್ತು ಆಪ್ತರು ಕೂಡಲೇ ಅವರ ಮನೆಗೆ ಧಾವಿಸಿ, ತೀರ್ಥಾನಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಅಭಿಮಾನಿಗಳು ಸಹಜವಾಗಿಯೇ ಆತಂಕ ವ್ಯಕ್ತಪಡಿಸಿದ್ದಾರೆ.

    ತೀರ್ಥಾನಂದ ಈ ರೀತಿ ಮಾಡುತ್ತಾ ಇರುವುದು ಇದೇ ಮೊದಲೇನೂ ಅಲ್ಲ ಎನ್ನಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಹೀಗೆಯೇ ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರಿಗೆ ಮಾನಸಿಕ ಕಾಯಿಲೆ ಇರಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

  • ‘ಜೀವನ ಬೇಸರವಾಗಿದೆ’- ಫೇಸ್‍ಬುಕ್ ಲೈವ್ ಬಂದು ವ್ಯಕ್ತಿ ನೇಣಿಗೆ ಶರಣು

    ‘ಜೀವನ ಬೇಸರವಾಗಿದೆ’- ಫೇಸ್‍ಬುಕ್ ಲೈವ್ ಬಂದು ವ್ಯಕ್ತಿ ನೇಣಿಗೆ ಶರಣು

    ಚೆನ್ನೈ: ವ್ಯಕ್ತಿಯೊಬ್ಬ ಫೇಸ್‍ಬುಕ್ ಲೈವ್ ಗೆ ಬಂದು, ಲೈವ್ ನಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

    ಘಟನಾ ಸ್ಥಳದಲ್ಲಿ ಅನುಪರ್ಪಾಲಯಂ ಪೊಲೀಸರಿಗೆ ಡೆತ್ ನೋಟ್ ದೊರೆತಿದ್ದು, ನನಗೆ ಜೀವನ ಬೇಸರವಾಗಿದೆ ಎಂದು ಬರೆದಿದ್ದಾನೆ.

    ಮೃತ ರವಿಕುಮಾರ್ ಮೂಲತಃ ಧರಪುರಂನ ಚಿನ್ನಾರವುತನ್ಪಾಲಯಂ ನಿವಾಸಿಯಾಗಿದ್ದು, ಬಾಡಿಗೆ ಮನೆಯೊಂದರಲ್ಲಿ ಪತಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದಾನೆ. ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ರವಿಕುಮಾರ್, ವಿಪರೀತ ಮದ್ಯವ್ಯಸನಿಯಾಗಿದ್ದಾನೆ. ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಬಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಸಮಯದಲ್ಲಿ ಪತ್ನಿ ತಾನು ಕೆಲಸ ಮಾಡುವ ಜಾಗದಲ್ಲಿದ್ದು, ಮಗ ಅಜ್ಜಿ ಮನೆಯಲ್ಲಿದ್ದನು. ಹೀಗೆ ಮನೆಗೆ ಬಂದ ರವಿಕುಮಾರ್, ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ಫೇಸ್ಬುಕ್ ಲೈವ್ ಆನ್ ಮಾಡಿದ್ದಾನೆ. ಲೈವ್ ನಲ್ಲಿ ಇದ್ದಂತೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇತ್ತ ಲೈವ್ ನೋಡುತ್ತಿದ್ದ ಕೆಲವರು ಕೂಡಲೇ ತ್ರಿಪುರ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರವಿಕುಮಾರ್ ಪತ್ನಿಗೂ ಈ ವಿಚಾರ ತಿಳಿದು ಕೂಡಲೇ ಆಕೆ ತನ್ನ ಮನೆಯವರಿಗೆ ವಿಚಾರ ಮುಟ್ಟಿಸಿದ್ದು, ಎಲ್ಲರೂ ತಕ್ಷಣವೇ ಮನೆಗೆ ಬಂದಿದ್ದಾರೆ. ಬಾಗಿಲು ಒಡೆದು ನೋಡಿದಾಗ ರವಿಕುಮಾರ್ ನೇಣಿಗೆ ಶರಣಾಗಿದ್ದನು.

    ತಕ್ಷಣವೇ ಆತನ ಕುಟುಂಬ ರವಿಕುಮಾರ್ ನನ್ನು ಫ್ಯಾನಿಂದ ಕೆಳಗಿಳಿಸಿ ತ್ರಿಪುರ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು. ರವಿಕುಮಾರ್ 7 ವರ್ಷಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ರವಿಕುಮಾರ್ ಪತ್ನಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಂಜನಿಪುತ್ರ ಎಫ್‍ಬಿ ಲೈವ್ ಮಾಡಿದ್ದು ಯಾಕೆ? ಯುವಕ ಹೇಳಿದ್ದು ಏನು?

    ಅಂಜನಿಪುತ್ರ ಎಫ್‍ಬಿ ಲೈವ್ ಮಾಡಿದ್ದು ಯಾಕೆ? ಯುವಕ ಹೇಳಿದ್ದು ಏನು?

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾವನ್ನು ಒಂದು ಘಂಟೆಗೂ ಹೆಚ್ಚು ಕಾಲ ಫೇಸ್ ಬುಕ್ ಲೈವ್ ಮಾಡಿದ್ದ ನಿತೀಶ್ ತನ್ನ ತಪ್ಪನ್ನು ಒಪ್ಪಿಕೊಂಡು ಪುನೀತ್ ಅಭಿಮಾನಿಗಲ್ಲಿ ಕ್ಷಮೆ ಕೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ನಿತೀಶ್, ಚಿತ್ರದ ಲೈವ್ ಮಾಡಿದ್ದು ನಾನಲ್ಲ, ಹಲವು ದಿನಗಳ ಹಿಂದೆ ನನ್ನ ಸ್ನೇಹಿತನ ಮೊಬೈಲ್‍ನಲ್ಲಿ ನಾನು ಫೇಸ್ ಬುಕ್ ಖಾತೆ ತೆರೆದಿದ್ದೆ. ಅದನ್ನು ನನ್ನ ಸ್ನೇಹಿತ ಬಳಕೆ ಮಾಡುತ್ತಿದ್ದ. ಆದರೆ ಇಂದು ಆತ ಈ ರೀತಿ ಲೈವ್ ಮಾಡಿರುವುದು ನನಗೂ ಬೇಸರ ತರಿಸಿದೆ. ತಕ್ಷಣ ಈ ವಿಡಿಯೋವನ್ನು ಫೇಸ್ ಬುಕ್ ಖಾತೆಯಿಂದ ಡಿಲಿಟ್ ಮಾಡಿಸಿರುವುದಾಗಿ ತಿಳಿಸಿದ್ದಾರೆ.

    ಚಿತ್ರದ ಲೈವ್ ಮಾಡುವ ಸಂದರ್ಭದಲ್ಲಿ ನಾನು ಸ್ಥಳದಲ್ಲೇ ಇದ್ದೆ. ಆದರೆ ಈ ರೀತಿ ಲೈವ್ ಮಾಡಿರುವುದು ನಮ್ಮ ತಪ್ಪು. ಅಭಿಮಾನಿಗಳಿಗೆ ಇದರಿಂದ ತುಂಬ ನೋವಾಗಿದೆ. ನಮ್ಮ ತಪ್ಪು ತಿಳಿದಿದ್ದೇವೆ ಇನ್ನು ಮುಂದೆ ಎಂದು ಈ ರೀತಿ ನಡೆಯುವುದಿಲ್ಲ. ರಾಜ್ಯದ ಎಲ್ಲಾ ಪುನೀತ್ ಅಭಿಮಾನಿಗಳು ಹಾಗೂ ಚಿತ್ರ ತಂಡದವರ ಜೊತೆ ಕ್ಷಮೆ ಕೇಳುತ್ತೇವೆ ಎಂದರು.

    ಏನಿದು ಘಟನೆ: ಬೆಂಗಳೂರಿನ ಯಲಹಂಕ ಮೂಲದ ನಿತೀಶ್ ಆತನ ನಾಲ್ಕು ಸ್ನೇಹಿತರು ಸೇರಿ ಈ ಕೃತ್ಯ ಎಸಗಿದ್ದಾರೆ. ಇಂದು ಯಲಹಂಕ ಉಲ್ಲಾಸ ಚಿತ್ರಮಂದಿರ ಬೆಳಗ್ಗಿನ ಷೋ ನಲ್ಲಿ ಬರೋಬ್ಬರಿ 1 ಗಂಟೆ 10 ನಿಮಿಷ ಅವಧಿ ಅಧಿಕ ಹೊತ್ತು ಸಿನಿಮಾವನ್ನು ಲೈವ್ ತೋರಿಸಿದ್ದಾರೆ. ಈ ಸಂಬಂಧ ಚಿತ್ರತಂಡ ನಿತೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಿದ್ಧತೆ ನಡೆಸುತ್ತಿದೆ.

    https://www.youtube.com/watch?v=8UvhKPPU2xo