Tag: ಫೇಸ್ ಕ್ರೀಮ್

  • ಫೇಸ್ ಕ್ರೀಮ್‍ನಲ್ಲಿ ಚಿನ್ನ ಸಾಗಾಟ ಮಾಡಿ ಪೊಲೀಸರ ಬಲೆಗೆ ಬಿದ್ದ

    ಫೇಸ್ ಕ್ರೀಮ್‍ನಲ್ಲಿ ಚಿನ್ನ ಸಾಗಾಟ ಮಾಡಿ ಪೊಲೀಸರ ಬಲೆಗೆ ಬಿದ್ದ

    ಹೈದರಾಬಾದ್: ಫೇಸ್ ಕ್ರೀಮ್‍ನಲ್ಲಿ ಚಿನ್ನದ ಪೇಸ್ಟ್ ಇಟ್ಟು ಸಾಗಾಟ ಮಾಡುತ್ತಿದ್ದ ವ್ಯಕ್ತಿ ಹೈದರಾಬಾದ್‍ನ( hyderabad) ಆರ್‌ಜಿಐ ವಿಮಾನ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

    ಫೇಸ್ ಕ್ರೀಮ್ ಬಾಕ್ಸ್‌ಗಳ ಒಳಗೆ ಚಿನ್ನ ಮತ್ತು ಬೆಳ್ಳಿಯನ್ನು ಪೇಸ್ಟ್ ಮಾಡಿ ಸಾಗಿಸಲಾಗುತ್ತಿತ್ತು. 525.50 ಗ್ರಾಂ ಚಿನ್ನ( 525.50 grams gold) ಮತ್ತು 28 ಗ್ರಾಂ ಬೆಳ್ಳಿಯನ್ನು(silver) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಒಟ್ಟು 58.16 ಲಕ್ಷ ಬೆಲೆ ಬಾಳುವ  ಚಿನ್ನ,ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಮೆಜಾನ್ ಕಾಡಿನಲ್ಲಿ ಬೊಲಿವಿಯಾ ವಾಯುಪಡೆ ವಿಮಾನ ಪತನ – 6 ಮಂದಿ ಸಾವು

    ಆರೋಪಿ ದೋಹಾದಿಂದ ಭಾರತಕ್ಕೆ ಬಂದಿಳಿದಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿ ಚಲನವಲನ ಮೇಲೆ ನಿಗಾ ಇಟ್ಟಿದ್ದರು, ಸಿಬ್ಬಂದಿ ಈತನನ್ನು ತಪಾಸಣೆ ಮಾಡಿದ್ದಾರೆ. ಫೇಸ್ ಕ್ರೀಮ್ ಬಾಕ್ಸ್‌ನಲ್ಲಿ 24 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಇರುವುದು ಪತ್ತೆಯಾಗಿದೆ. ಈಗ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ

  • ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ಹೈದರಾಬಾದ್: ನಟಿ ಸಾಯಿ ಪಲ್ಲವಿ ಅವರು ಬರೋಬ್ಬರಿ 2 ಕೋಟಿ ಪ್ರಾಜೆಕ್ಟ್ ತಿರಸ್ಕರಿಸಿದ್ದಾರೆ.

    ಸಾಯಿ ಪಲ್ಲವಿ ಅವರಿಗೆ ಖ್ಯಾತ ಸಂಸ್ಥೆಯೊಂದು 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿ ತಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ನೀಡಿದೆ. ಆದರೆ ಈ ಆಫರ್ ಅನ್ನು ಸಾಯಿ ಪಲ್ಲವಿ ಅವರು ತಿರಸ್ಕಾರ ಮಾಡಿದ್ದಾರೆ.

    ಕಂಪನಿ ಹೊಸದಾಗಿ ಫೇಸ್ ಕ್ರೀಮ್ ಒಂದನ್ನ ಉತ್ಪಾದಿಸಿದ್ದು, ಅದನ್ನು ಪ್ರೇಕ್ಷರಿಗೆ ಪರಿಚಯಿಸಬೇಕಿತ್ತು. ಈ ಫೇಸ್ ಕ್ರೀಮ್ ಜಾಹೀರಾತಿಗೆ ಸಾಯಿ ಪಲ್ಲವಿ ಸೂಕ್ತ ಎಂದು ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಅದರಂತೆಯೇ ಅವರ ಬಳಿ ಸಂಸ್ಥೆ ಬೇಡಿಕೆ ಇಟ್ಟಿದೆ. ಆದರೆ ಜಾಹೀರಾತಿನ ಆಫರನ್ನು ಸಾಯಿ ಪಲ್ಲವಿ ಅವರು ತಾವು ಮಾಡುವುದಿಲ್ಲ ಎಂದು ಹೇಳಿ ತಿರಸ್ಕರಿಸಿದ್ದಾರೆ.

    ಇದು ಫೇಸ್ ಕ್ರೀಮ್ ಜಾಹೀರಾತು ಆಗಿರುವುದರಿಂದ ಸಾಮಾನ್ಯವಾಗಿ ಮೊಡವೆ ಇರಲ್ಲ, ಮಾರ್ಕ್ ಇರಲ್ಲ, ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ಇದರಿಂದ ಜನರನ್ನು ಮೋಸ ಮಾಡಿದಂತೆ ಆಗುತ್ತದೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದು ಕಷ್ಟವಾಗುತ್ತದೆ ಎಂದು ಸಾಯಿ ಪಲ್ಲವಿ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಸಾಯಿ ಪಲ್ಲವಿ ಅವರು ತಾವು ಅಭಿನಯಿಸುವ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಬಳಸುವುದಿಲ್ಲ. ತಮ್ಮ ಮುಖದಲ್ಲಿ ಮೊಡವೆಗಳಿದ್ದರೂ ಅದನ್ನ ಕಾಣಿಸಿದಂತೆ ಮೇಕಪ್ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ನೈಜ ಸೌಂದರ್ಯವನ್ನೇ ಉಳಿಸಿಕೊಂಡು, ಸಿನಿಮಾ ಮಾಡುತ್ತಾರೆ. ಈ ಮೂಲಕವೇ ಅವರು ಅಪಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಕಾರಣದಿಂದ ಅವರು ಫೇಸ್ ಕ್ರೀಮ್ ಆಫರ್ ರಿಜೆಕ್ಟ್ ಮಾಡಿದ್ದಾರೆ.