Tag: ಫೇಸ್‍ಬುಕ್

  • ಫೇಸ್‍ಬುಕ್‍ನಲ್ಲಿ ಪರಿಚಯ- ಸ್ನೇಹಿತನಿಂದ ಅಪ್ರಾಪ್ತೆಯ ಅಪಹರಿಸಿ ಗ್ಯಾಂಗ್ ರೇಪ್

    ಭೋಪಾಲ್: ಅಪ್ರಾಪ್ತೆಯೊಬ್ಬಳನ್ನು ಆಕೆಯ ಫೇಸ್‍ಬುಕ್ (Facebook) ಸ್ನೇಹಿತನೊಬ್ಬ ಕಾರಿನಲ್ಲಿ ಅಪಹರಿಸಿ ಬಳಿಕ ಇಬ್ಬರು ಸ್ನೇಹಿರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ನಡೆದಿದೆ. ಈ ಸಂಬಂಧ ಸ್ಥಳೀಯ ಮಾಜಿ ಶಾಸಕರ ಸಂಬಂಧಿ ಸೇರಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಗಳನ್ನು ರಾಮು ಮತ್ತು ಸರವಿಂದ್ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿ ಪ್ರಕರಣದ ಪ್ರಮುಖ ಆರೋಪಿ ರಾಮು ಕುಶ್ವಾಹ ಎಂಬವನ ಜೊತೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದಳು. ನ.21 ರಂದು ಆಕೆ ಕೆಲಸಕ್ಕೆ ತೆರಳಿ ವಾಪಸ್ ಆಗುವಾಗ ಆರೋಪಿ ಜೊತೆ ಮಾತಾಡಿದ್ದಳು. ಈ ವೇಳೆ ಆಕೆ ಇರುವ ಸ್ಥಳ ತಿಳಿಸಿದಾಗ ಆತ ತನಗಾಗಿ ಕಾಯುವಂತೆ ತಿಳಿಸಿದ್ದ. ಬಳಿಕ ಪ್ರಮುಖ ಆರೋಪಿ ರಾಮು ಜೊತೆ ಇನ್ನಿಬ್ಬರು ಕಾರಿನಲ್ಲಿ ಬಂದು ಆಕೆಯನ್ನು ಅಪಹರಿಸಿದ್ದರು. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು

    ಅಲ್ಲದೇ ಬಾಲಕಿ ದೌರ್ಜನ್ಯದ ವೇಳೆ ಪ್ರಜ್ಞೆ ತಪ್ಪಿದ್ದು, ಆಕೆಗೆ ಪ್ರಜ್ಞೆ ಬಂದಾಗ ಪೊದೆ ಒಂದರ ಬಳಿ ಎಸೆದು ಹೋಗಿದ್ದರು. ಪ್ರಜ್ಞೆ ಬಂದ ಬಳಿಕ ಆಕೆ ಪೊಲೀಸ್ (Police) ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ರಾಮು ಮತ್ತು ಸರವಿಂದ್‍ನನ್ನು ಬಂಧಿಸಿದ್ದಾರೆ.

    ಪ್ರಕರಣದ ಮತ್ತೋರ್ವ ಆರೋಪಿ ಛೋಟೆ ಖಾನ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ

  • ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ

    ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ

    – ಕ್ರಮ ಕೈಗೊಳ್ಳದೇ ಪೊಲೀಸರ ನಿರ್ಲಕ್ಷ್ಯ

    ಬೆಂಗಳೂರು: ಇಷ್ಟು ದಿನ ಉತ್ತರ ಭಾರತದ ಕೆಲ ಸೈಬರ್ ಖದೀಮರು ಫೇಸ್‌ಬುಕ್, ಇನ್ಸ್ಟಾಗ್ರಾಂ ಅನ್ನು ಹ್ಯಾಕ್ ಮಾಡಿ, ರಾಜ್ಯದ ಯುವತಿಯರ ಬಳಿ ಹಣ ಪೀಕಿಸುತ್ತಿದ್ದರು. ಇದೀಗ ಬೆಂಗಳೂರಿನ (Bengaluru) ಯುವಕನೇ ನೂರಾರು ಯುವತಿಯರ ಜೊತೆ ಚಾಟಿಂಗ್ ಮಾಡಿ, ನಕಲಿ ಖಾತೆ (Fake Account) ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ. ದೂರು ಕೊಟ್ಟರೆ ಡೀಪ್‌ಫೇಕ್ ಮಾಡಿ ಮಾನ, ಮಾರ್ಯದೆ ತೆಗೆಯುತ್ತೇನೆ ಎಂದು ಅವಾಜ್ ಹಾಕ್ತಿದ್ದ ಖದೀಮನ ಮೇಲೆ ಪೊಲೀಸರು ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರಿದ್ದಾರೆ.

    ಉತ್ತರಹಳ್ಳಿಯ (Uttarahalli) ನಿವಾಸಿಯಾಗಿರುವ ರಾಘವೇಂದ್ರ ನೋಡಲು ಡೀಸೆಂಟ್ ಹುಡುಗನ ಥರ ಕಾಣಿಸಿದರೂ ಮಹಾನ್ ಕಿಲಾಡಿ. ಅಲ್ಲದೇ ಸೈಬರ್ ಕಳ್ಳ ಕೂಡ. ಇನ್ಸ್ಟಾಗ್ರಾಂನಲ್ಲಿ (Instagram) ಯುವತಿಯರ ಫೋಟೋ, ರೀಲ್ಸ್ ವೀಡಿಯೋಗಳನ್ನು ಕದ್ದು, ಫೇಸ್‌ಬುಕ್‌ನಲ್ಲಿ (Facebook) ನಕಲಿ ಖಾತೆ ಸೃಷ್ಟಿಸಿ ನೂರಾರು ಜನರಿಂದ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದ ಖತರ್ನಾಕ್ ಸೈಬರ್ ಕಳ್ಳ ಇದೀಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹಣಕ್ಕಾಗಿ ಪಾಕ್‍ಗೆ ಸೇನಾ ಮಾಹಿತಿ – ಇಬ್ಬರು ಶಂಕಿತರು ಅರೆಸ್ಟ್

    ಕಮಲಾನಗರದ ತ್ರಿವೇಣಿ ಎಂಬ ಯುವತಿ ಸೈಬರ್ ಕಳ್ಳನ ಟಾರ್ಚರ್‌ಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ರಾಘವೇಂದ್ರ ಒಂದು ವರ್ಷದಿಂದ, ತ್ರಿವೇಣಿಯ ಫೋಟೋ, ವೀಡಿಯೋಗಳನ್ನು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ. ತ್ರಿವೇಣಿಯ, ಸ್ನೇಹಿತರಿಗೆ ಸಂಬಂಧಿಕರಿಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿ ಈ ಖದೀಮ ಹಣವನ್ನು ಪಡೆಯುತ್ತಿದ್ದ. ಈ ವಿಚಾರ ತ್ರಿವೇಣಿ ಗಮನಕ್ಕೆ ಬಂದಾಗ, ಅವರ ಸ್ನೇಹಿತರ ಮೂಲಕ ಬೆಂಗಳೂರಿನಲ್ಲೇ ಕುಳಿತು ಯುವತಿಯ ಫೋಟೋ ದುರುಪಯೋಗಪಡಿಸಿಕೊಂಡು ಹಣ ಮಾಡುತ್ತಿದ್ದ ಈತನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು, ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಹೀಗೆ ಎಂಟತ್ತು ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ಈವರೆಗೆ 80 ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾನೆ. ಸಂತ್ರಸ್ತೆಯ ದೂರು ಪಡೆದು ಐಪಿಸಿ ಸೆಕ್ಷನ್‌ಗಳನ್ನು ಹಾಕದೇ ಕೇವಲ ಎನ್‌ಸಿಆರ್ ಮಾಡಿಕೊಂಡು, ಕಾಂಪ್ರಮೈಸ್ ಆಗಿ ಎಂದು ಸಂತ್ರಸ್ತ ಯುವತಿಗೆ ಪೊಲೀಸರು ಮನವೊಲಿಸುತ್ತಿದ್ದಾರೆ. ಇದನ್ನೂ ಓದಿ: ರನ್ನಿಂಗ್ ರೇಸ್‌ನಲ್ಲಿ ಬಹುಮಾನ ಸಿಗದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

    ಯುವತಿಯರ ಫೋಟೋಗಳನ್ನ ಬಳಸಿಕೊಂಡು ರಾಘವೇಂದ್ರ ಬ್ಲಾಕ್ ಮೇಲ್ ಮಾಡುತ್ತಿದ್ದ. ವೇಶ್ಯಾವಾಟಿಕೆ ದಂಧೆಗೂ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದ. ಇಂತಹ ಖದೀಮನ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೇ ಸಂತ್ರಸ್ತ ಯುವತಿಗೆ ಕಾಂಪ್ರಮೈಸ್ ಮಾಡಿಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದಾರೆ. ಕೃತ್ಯವೆಸಗಿದ ರಾಘವೇಂದ್ರನ ಮೊಬೈಲ್ ಫೋನ್ ಪೊಲೀಸರು ವಶ ಪಡಿಸಿಕೊಂಡು ಪರಿಶೀಲನೆ ಮಾಡಿದಾಗ ನೂರಾರು ಯುವತಿಯರಿಗೆ ಚಾಟಿಂಗ್ ಮಾಡಿದ್ದು, ಹಣ ಹಾಕಿಸಿಕೊಂಡಿರುವುದು, ನಕಲಿ ಖಾತೆಗಳನ್ನು ಸೃಷ್ಟಿಸಿರೋದು ಪತ್ತೆಯಾಗಿದೆ. ಆದರೆ ಪೊಲೀಸರು ಮಾತ್ರ ಇವುಗಳನ್ನ ಡಿಲೀಟ್ ಮಾಡಿಸದೇ ಬೇಜವಾಬ್ದಾರಿ ಮಾಡಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆ, ಭದ್ರತೆಗೆ ನಿಲ್ಲಬೇಕಾದ ಪೊಲೀಸರೇ ಕಳ್ಳರ ಪರವಾಗಿ ನಿಂತಿದ್ದು ನಾಚಿಗೇಡಿನ ಸಂಗತಿ. ಇದನ್ನೂ ಓದಿ: ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್‌ ಆ್ಯಪ್‌ ಪ್ರಿಯತಮೆಗೆ ಜೀವಾವಧಿ ಶಿಕ್ಷೆ

  • ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ವಾಷಿಂಗ್ಟನ್: ಫೇಸ್‌ಬುಕ್ (Facebook) ಮಾತೃಸಂಸ್ಥೆ ಮೆಟಾ (Meta) ತನ್ನ ಉದ್ಯೋಗಿಗಳಿಗೆ ಆಫೀಸ್‌ಗೆ (Office) ಮರಳುವಂತೆ ಸೂಚಿಸಿದ್ದು, ಮರಳದೇ ಇದ್ದಲ್ಲಿ ಉದ್ಯೋಗಿಗಳನ್ನು ಕೆಲಸದಿಂದಲೇ ಕಿತ್ತು ಹಾಕುವುದಾಗಿ ಮೆಟಾ ಖಡಕ್ ಎಚ್ಚರಿಕೆಯನ್ನು ನೀಡಿದೆ.

    ಕೋವಿಡ್ ಬಳಿಕ ಮೆಟಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅನ್ನು ಕೊನೆಗೊಳಿಸಿ ಆಫೀಸ್‌ಗೆ ಮರಳುವಂತೆ ತಿಳಿಸಿತ್ತು. ಆದರೆ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸವನ್ನು ಮುಂದುವರಿಸಲು ಆದ್ಯತೆ ನೀಡಿದ್ದಾರೆ. ಇದೀಗ ರಿಟರ್ನ್ ಟು ಆಫೀಸ್ (RTO) ನೀತಿಯ ಮೇಲೆ ಮೆಟಾ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.

    ಈ ಬಗ್ಗೆ ಮೆಟಾದ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಲೋರಿ ಗೋಲರ್ ಕಂಪನಿಯಲ್ಲಿ ಆರ್‌ಟಿಒ ಕುರಿತಾಗಿ ಉದ್ಯೋಗಳಿಗೆ ಇ-ಮೇಲ್ ಕಳುಹಿಸಿದ್ದಾರೆ. ಹೊಸ ನೀತಿಯಂತೆ ಕಂಪನಿಯ ಉದ್ಯೋಗಿಗಳು ನಿಯೋಜಿಸಲಾದ ಕಚೇರಿಯಿಂದಲೇ ಕೆಲಸ ಮಾಡಬೇಕು ಅಥವಾ ವಾರಕ್ಕೆ ಕನಿಷ್ಠ 3 ದಿನವಾದರೂ ಕಚೇರಿಯಲ್ಲಿ ಹಾಜರಿರಬೇಕು. ಆದರೆ ಈಗಾಗಲೇ ಮನೆಯಿಂದ ಕೆಲಸ ಮಾಡಲು ಅನುಮೋದನೆ ನೀಡಲಾಗಿರುವ ಉದ್ಯೋಗಿಗಳಿಗೆ ಈ ನೀತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇಡ್‌ ಇನ್‌ ಚೈನಾಗೆ ಭಾರತ ಶಾಕ್‌!

    ಆರ್‌ಟಿಒ ನೀತಿ ಸೆಪ್ಟೆಂಬರ್ 5 ರಿಂದ ಜಾರಿಗೆ ಬರಲಿದೆ. ಇತರ ಕಂಪನಿಗಳಂತೆ ಈ ನೀತಿಯನ್ನು ಉದ್ಯೋಗಿಗಳು ಉಲ್ಲಂಘನೆ ಮಾಡಿದ್ದಲ್ಲಿ ಅವರ ಮೇಲೆ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಕಂಪನಿಯ ಕೆಲಸವೂ ಕೂಡಾ ಭವಿಷ್ಯದಲ್ಲಿ ತಂತ್ರಜ್ಞಾನ ಬೆಳೆದಂತೆ ಸುಧಾರಿಸುತ್ತದೆ ಎಂಬ ಭರವಸೆಯಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

    ಈ ಹಿಂದೆ ಟ್ವಿಟ್ಟರ್ ಸೇರಿದಂತೆ ಹಲವು ಕಂಪನಿಗಳು ಕೂಡಾ ತನ್ನ ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳುವಂತೆ ಎಚ್ಚರಿಕೆಯನ್ನು ನೀಡಿದ್ದವು. ಈಗ ಎಕ್ಸ್ ಆಗಿ ಬದಲಾಗಿರುವ ಟ್ವಿಟ್ಟರ್ ಅನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡ ಬಳಿಕ ಉದ್ಯೋಗಿಗಳಿಗೆ ವಾರಕ್ಕೆ 40 ಗಂಟೆ ಕಚೇರಿಯಲ್ಲಿ ಹಾಜರಿರುವಂತೆ ತಿಳಿಸಲಾಗಿತ್ತು. ಒಂದು ವೇಳೆ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಕೊನೆಗೊಳಿಸಿ ಕಚೇರಿಗೆ ಮರಳಲು ಇಷ್ಟಪಡದೇ ಹೋದರೆ ಅವರು ದಾರಾಳವಾಗಿ ರಾಜೀನಾಮೆ ಸಲ್ಲಿಸಬಹುದು ಎಂದು ಮಸ್ಕ್ ಹೇಳಿದ್ದರು. ಇದನ್ನೂ ಓದಿ: ಸಿಮ್‌ ಕಾರ್ಡ್‌ ಡೀಲರ್‌ಗಳ ಪೊಲೀಸ್‌ ಪರಿಶೀಲನೆ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಯುವಕ

    ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಯುವಕ

    ರಾಮನಗರ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ದೋಖಾ ಹೆಚ್ಚಾಗಿದೆ. ಫೇಸ್‌ಬುಕ್‌ನಲ್ಲಿ (Facebook) ಅಪರಿಚಿತರೊಡನೆ ಚಾಟ್ ಮಾಡುವಾಗ ಎಚ್ಚರ ತಪ್ಪಿದ್ರೆ ಹಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಫೇಕ್ ಅಕೌಂಟ್, ಹುಡುಗಿಯರ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಎಚ್ಚರಿಕೆ ವಹಿಸದಿದ್ರೆ ಪಶ್ಚಾತಾಪ ಪಡುವ ಸಂದರ್ಭ ಬಂದೊದಗಲಿದೆ. ಇಂತಹದ್ದೇ ಒಂದು ಪ್ರಕರಣ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.

    ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು ಯುವಕನೋರ್ವ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾನೆ. ಹುಡುಗಿಯ ಹೆಸರಲ್ಲಿ ಯುವಕನ ಪೋಟೋ ಹಾಗೂ ಇತರ ಮಾಹಿತಿ ಪಡೆದ ಅಪರಿಚಿತ ವ್ಯಕ್ತಿ ಪೋಟೋ ಎಡಿಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಯುವಕ ಪೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.

    ಅಪರಿಚಿತ ವ್ಯಕ್ತಿಯ ಬ್ಲಾಕ್ ಮೇಲ್‌ಗೆ ಹೆದರಿ ಕನಕಪುರ ಮೂಲದ ಯುವಕ ರಾಜೇಶ್ ಬರೋಬ್ಬರಿ 41 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಗೀತಾ ಸೆಕ್ಸಿ ಎಂಬ ಫೇಸ್‌ಬುಕ್ ಪ್ರೋಫೈಲ್‌ನಿಂದ ಯುವಕನಿಗೆ ವಂಚನೆ ಮಾಡಲಾಗಿದೆ. ಕಳೆದ ಡಿಸೆಂಬರ್‌ನಿಂದ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿರೋ ಖದೀಮರು ರಾಜೇಶ್ ಬಳಿ ಲಕ್ಷಾಂತರ ರೂ. ಹಣ ಪೀಕಿದ್ದಾರೆ. ಇದನ್ನೂ ಓದಿ: ತನ್ನ ಪತ್ನಿ ಜೊತೆ ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ

    ಘಟನೆ ಸಂಬಂಧ ರಾಮನಗರ (Ramanagara) ಸೆನ್ ಪೊಲೀಸ್ ಠಾಣೆಗೆ ರಾಜೇಶ್ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಕಿಸ್ತಾನಿ ಗೆಳೆಯನನ್ನು ವರಿಸಿದ ಅಂಜು – ಇಸ್ಲಾಂ ಧರ್ಮಕ್ಕೆ ಮತಾಂತರ

    ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಕಿಸ್ತಾನಿ ಗೆಳೆಯನನ್ನು ವರಿಸಿದ ಅಂಜು – ಇಸ್ಲಾಂ ಧರ್ಮಕ್ಕೆ ಮತಾಂತರ

    ಇಸ್ಲಾಮಾಬಾದ್: ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾಗಿದ್ದ ಗೆಳೆಯನನ್ನು ಭೇಟಿ ಮಾಡುವ ಸಲುವಾಗಿ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಇಬ್ಬರು ಮಕ್ಕಳ ತಾಯಿ ಅಂಜು ಇಸ್ಲಾಂ ಧರ್ಮಕ್ಕೆ (Islam Religion) ಮತಾಂತರಗೊಂಡ ಬಳಿಕ ತನ್ನ ಪಾಕಿಸ್ತಾನಿ (Pakistan) ಸ್ನೇಹಿತನನ್ನು ವಿವಾಹವಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಂಜು (34) ತನ್ನ ಪಾಕಿಸ್ತಾನಿ ಸ್ನೇಹಿತನಾದ ನಸ್ರುಲ್ಲಾ (29) ಎಂಬಾತನನ್ನು ಭೇಟಿ ಮಾಡುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ್ದು, ಆತನ ಮನೆಯಲ್ಲಿಯೇ ತಂಗಿದ್ದಳು. 2019ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಇವರು ಸ್ನೇಹಿತರಾಗಿದ್ದು, ಮಂಗಳವಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸ್ಥಳೀಯ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ಅಂಜು, ನಸ್ರುಲ್ಲಾ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ದಿರ್ ಬಾಲಾದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಮಲಕಂಡ್ ವಿಭಾಗದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ, ಅಂಜು ಮತ್ತು ನಸ್ರುಲ್ಲಾ ಅವರ ಮದುವೆಯನ್ನು (Marriage) ದೃಢಪಡಿಸಿದ್ದು, ಇಸ್ಲಾಂಗೆ ಮತಾಂತರಗೊಂಡ ಅಂಜುಗೆ ಫಾತಿಮಾ ಎಂದು ಹೆಸರಿಡಲಾಗಿದೆ ಎಂದು ಹೇಳಿದರು. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಭಾರತೀಯ ಮಹಿಳೆ ಅಂಜುವನ್ನು ನ್ಯಾಯಾಲಯದಿಂದ ಮನೆಗೆ ಕರೆದೊಯ್ಯಲಾಗಿದೆ ಎಂದರು. ಇದನ್ನೂ ಓದಿ: ಪಬ್‌ಜೀ ಮೂಲಕವೇ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಸೀಮಾ – ಸ್ಫೋಟಕ ರಹಸ್ಯ ಬಯಲು

    ಉತ್ತರಪ್ರದೇಶದ (Uttar Pradesh) ಕೈಲೋರ್ ಗ್ರಾಮದಲ್ಲಿ ಜನಿಸಿದ ಅಂಜು ರಾಜಸ್ಥಾನದ (Rajasthan) ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಳು. ಪಾಕಿಸ್ತಾನಕ್ಕೆ ತೆರಳಿದ ಬಳಿಕ ‘ಇಲ್ಲಿ ಸುರಕ್ಷಿತವಾಗಿದ್ದೇನೆ’ ಎಂದು ಹೇಳುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಅಂಜು ಈ ಹಿಂದೆ ಅರವಿಂದ್ ಎಂಬವರನ್ನು ಮದುವೆಯಾಗಿದ್ದು, 15 ವರ್ಷದ ಮಗಳು ಮತ್ತು 6 ವರ್ಷದ ಮಗ ಇದ್ದಾನೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    ನವದೆಹಲಿಯಲ್ಲಿರುವ (New Delhi) ಪಾಕಿಸ್ತಾನದ ಹೈಕಮಿಷನ್‌ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ ಅಪ್ಪರ್ ದಿರ್‌ಗೆ ಮಾತ್ರ ಮಾನ್ಯವಾಗಿರುವ ಅಂಜುಗೆ 30 ದಿನಗಳ ವೀಸಾವನ್ನು ನೀಡಲು ನಿರ್ಧರಿಸಲಾಗಿದೆ. ಆ ಪ್ರಕಾರ ಆಗಸ್ಟ್ 20ರಂದು ಅಂಜು ಭಾರತಕ್ಕೆ ಮರಳಲಿದ್ದಾಳೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೋಣಿ ಮುಳುಗಿ 15 ಮಂದಿ ಸಾವು, ಹಲವರು ನಾಪತ್ತೆ

    ಈ ಹಿಂದೆ ಹಿಂದೂ ಧರ್ಮದಲ್ಲಿದ್ದ ಅಂಜು ಅವರ ಕುಟುಂಬ ಕ್ರಿಶ್ಚಿಯನ್ (Christian) ಧರ್ಮಕ್ಕೆ ಮತಾಂತರಗೊಂಡಿದ್ದು, ಆಕೆಯ ತಂದೆ ಗಯಾ ಪ್ರಸಾದ್ ವರ್ಮಾ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಬಳಿಕ ತಮ್ಮ ಹೆಸರನ್ನು ಗಯಾ ಪ್ರಸಾದ್ ಥೋಮನ್ ಎಂದು ಬದಲಾಯಿಸಿಕೊಂಡಿದ್ದಾರೆ. ಅಲ್ಲದೇ ಅಂಜು ಮತ್ತು ಅರವಿಂದ್ ಅವರ ವಿವಾಹವು ರಾಜಸ್ಥಾನದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಸಲಾಗಿತ್ತು ಎಂದು ಅಂಜು ಚಿಕ್ಕಪ್ಪ ಹೇಳಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೇಸ್‍ಬುಕ್ ಗೆಳೆಯನಿಗಾಗಿ ಭಾರತದಿಂದ ಪಾಕ್‍ಗೆ ತೆರಳಿದ ವಿವಾಹಿತೆ

    ಫೇಸ್‍ಬುಕ್ ಗೆಳೆಯನಿಗಾಗಿ ಭಾರತದಿಂದ ಪಾಕ್‍ಗೆ ತೆರಳಿದ ವಿವಾಹಿತೆ

    ಜೈಪುರ: ತನ್ನ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನದಿಂದ (Pakistan) ಬಂದಿರುವ ಸೀಮಾ ಹೈದರ್ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಭಾರತದಿಂದ (Indian Woman) ಮಹಿಳೆಯೊಬ್ಬಳು ಪಾಕಿಸ್ತಾನಕ್ಕೆ ತೆರಳಿದ ಪ್ರಸಂಗ ನಡೆದಿದೆ.

    ಹೌದು. ಫೇಸ್‍ಬುಕ್ ಗೆಳೆಯನ (Facebook Friend) ಭೇಟಿಯಾಗಲು ಮಹಿಳೆಯೊಬ್ಬಳು ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ರಾಜಸ್ಥಾನದ ಬಿವಾಡಿ ಜಿಲ್ಲೆಯ ವಿವಾಹಿತೆ ತನ್ನ ಬಾಯ್‍ಫ್ರೆಂಡ್ ಭೇಟಿಯಾಗಲು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾಳೆ.

    ಮಹಿಳೆಯನ್ನು ಅಂಜು (Anju) ಎಂದು ಗುರುತಿಸಲಾಗಿದೆ. ಈಕೆಯ ಪತಿ ಅರವಿಂದ್ ಈ ಬಗ್ಗೆ ಪ್ರತಿಕ್ರಿಯಿಸಿ ಕೆಲ ದಿನಗಳ ಹಿಂದೆ ಅಂಜು ಜೈಪುರಕ್ಕೆ ತೆರಳಿದ್ದಾಳೆ. ಆದರೆ ಆಕೆ ಗಡಿ ದಾಟಿ ಹೋಗಿದ್ದಾಳೆ ಎಂಬುದು ಮಾಧ್ಯಮಗಳ ಮೂಲಕ ಭಾನುವಾರ ನನಗೆ ತಿಳಿಯಿತು ಎಂದರು. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ನಾನು ಆಕೆಯ ಜೊತೆ ವಾಟ್ಸಾಪ್ (Whatsapp) ಸಂಪರ್ಕದಲ್ಲಿದ್ದೆ. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿ ತಾನು ಲಾಹೋರ್‍ನಲ್ಲಿದ್ದೇನೆ. ಎರಡು-ಮೂರು ದಿನಗಳಲ್ಲಿ ವಾಪಸ್ ಬರುವುದಾಗಿ ತಿಳಿಸಿದ್ದಳು ಎಂದು ಅರವಿಂದ್ ಹೇಳಿದರು. ಇದೇ ವೇಳೆ ಪತ್ನಿಯ ಲವ್ ಬಗ್ಗೆ ಕೇಳಿದಾಗ, ಈ ವಿಚಾರ ನನಗೆ ಗೊತ್ತಿದೆ. ನನ್ನ ಪತ್ನಿ ವಾಪಸ್ ಬಂದೇ ಬರುತ್ತಾಳೆ ಅನ್ನೋ ನಂಬಿಕೆಯಿದೆ ಎಂದು ಹೇಳಿದರು.

    ಅರವಿಂದ್ ಭಿವಾಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಂಜು ಖಾಸಗಿ ಸಂಸ್ಥೆಯೊಂದರಲ್ಲಿ ಬಯೋಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಅಂಜು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಅರವಿಂದ್ ಅವರೊಂದಿಗೆ ಮದುವೆಯಾಗಿದ್ದಾರೆ. ಅರವಿಂದ್ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಅಂಜು ಅವರ ಸಹೋದರನೊಂದಿಗೆ ಭಿವಾಡಿಯಲ್ಲಿ ಬಾಡಿಗೆ ಫ್ಲಾಟ್‍ನಲ್ಲಿ ವಾಸವಾಗಿದ್ದರು.

    ರಾಜಸ್ಥಾನ ಟು ಪಾಕಿಸ್ತಾನ: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ನಸ್ರುಲ್ಲಾ ಮತ್ತು ಅಂಜು ಕೆಲವು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಸ್ನೇಹಿತರಾದರು. ಇದೀಗ ಗುರುವಾರ ಅಂಜು ಜೈಪುರಕ್ಕೆ ಹೋಗುವ ನೆಪದಲ್ಲಿ ಭಿವಾಡಿಯಲ್ಲಿರುವ ತನ್ನ ಮನೆಯಿಂದ ಹೊರಟಿದ್ದಳು. ನಂತರ ಆಕೆ ತನ್ನ ಫೇಸ್‍ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಆಕೆ ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಳು. ಆಕೆಯ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಯಿತು. ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಗೆ ಹೋಗಲು ಅನುಮತಿ ನೀಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ದೇಶಕ್ಕೆ ಕೆಟ್ಟ ಹೆಸರು ತರುವುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರದೀಪ್ ಈಶ್ವರ್ ನಿಮ್ಮೊಂದಿಗೆ- ಶಾಸಕರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ

    ಪ್ರದೀಪ್ ಈಶ್ವರ್ ನಿಮ್ಮೊಂದಿಗೆ- ಶಾಸಕರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ

    ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೆಸರಲ್ಲಿ `ಪ್ರದೀಪ್ ಈಶ್ವರ್ ನಿಮ್ಮೊಂದಿಗೆ’ ಎಂಬ ಫೇಸ್‍ಬುಕ್ (Facebook) ಖಾತೆ ರಚಿಸಿ ಹಣ ವಂಚನೆ ಮಾಡಿದ ಪ್ರಕರಣ ಚಿಕ್ಕಬಳ್ಳಾಪುರದಿಂದ (Chikkaballapura) ವರದಿಯಾಗಿದೆ.

    ಅನಾಮಿಕನೋರ್ವ ಈ ಖಾತೆ ತೆರೆದಿದ್ದು, ಜನರ ಬಳಿ ಹಣ ಪೀಕುತ್ತಿರುವುದು ಬೆಳಕಿಗೆ ಬಂದಿದೆ. ತಾನು ಶಾಸಕರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಅಪರಿಚಿತ ಈ ವಂಚನೆ ಮಾಡಿದ್ದಾನೆ. ಖಾಸಿಂಸಾಬ್ ಎಂಬವರು ತಾನು ಬಡವನಾಗಿದ್ದು, ಶಾಸಕರ ಕಡೆಯಿಂದ ಏನಾದರೂ ಸಹಾಯ ಮಾಡುವಂತೆ ಕೇಳಿದ್ದಾರೆ. ಇದಕ್ಕೆ ವಂಚಕ ತನಗೆ 5000 ರೂ. ಫೋನ್ ಪೇ ಮಾಡಿದರೆ ಶಾಸಕರಿಂದ 4 ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿ ಖಾಸಿಂ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ತಾನು ವಂಚನೆಗೊಳಗಾಗಿದ್ದು ಖಾಸಿಂಗೆ ಅರಿವಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ಅಕ್ಕಿ ರಾಜಕೀಯ, ಬಿಜೆಪಿ ನಾಯಕರಿಗೆ ಸಾಕ್ಷಿ ಸಮೇತ ಸಿದ್ದು ತಿರುಗೇಟು

    ಶಾಸಕರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ವಂಚನೆ ಮಾಡುತ್ತಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ವಿನಯ್ ಕುಮಾರ್ ದೂರು ನೀಡಿದ್ದಾರೆ. ಈ ಸಂಬಂಧ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419, 420 ಹಾಗೂ 66ರ ಅಡಿಯಲ್ಲಿ ಐಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ಪತಿಯ ಗುಪ್ತಾಂಗಕ್ಕೆ ಮಧ್ಯರಾತ್ರಿ ಕಾದ ಎಣ್ಣೆ ಎರಚಿ ಪತ್ನಿ ಎಸ್ಕೇಪ್!

  • ಆರನೆಯ ಗ್ಯಾರಂಟಿ ಪಕ್ಕಾ: ಪ್ರಿಯಾಂಕ್ ಖರ್ಗೆ

    ಆರನೆಯ ಗ್ಯಾರಂಟಿ ಪಕ್ಕಾ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಬಿಜೆಪಿ (BJP) ಸರ್ಕಾರದಲ್ಲಿ ಯಾರೆಲ್ಲ ಭ್ರಷ್ಟಾಚಾರದಲ್ಲಿ (Corruption) ಮುಳುಗಿದ್ದರೋ ಅವರ ಮೇಲೆ ಸಂವಿಧಾನದ ಅಡಿಯಲ್ಲಿ, ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.

    ಈ ಕುರಿತು ತಮ್ಮ ಫೇಸ್ ಬುಕ್  (Facebook) ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾರೆಲ್ಲಾ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದರೋ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರನೇ ಗ್ಯಾರಂಟಿ ನೀಡಿದ್ದೆ. ಅದರಂತೆ ಕಳೆದ ಬಿಜೆಪಿ ಸರ್ಕಾರದಲ್ಲಿ ಯಾರೆಲ್ಲ ಭ್ರಷ್ಟಾಚಾರದಲ್ಲಿ ಮುಳುಗಿದ್ದರೋ ಅವರ ಮೇಲೆ ಸಂವಿಧಾನದ ಅಡಿಯಲ್ಲಿ, ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಇದನ್ನೂ ಓದಿ: Breaking: ನಾಳೆಯಿಂದಲೇ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾ ರೆಡ್ಡಿ

    ಕೆಕೆಆರ್‌ಡಿಬಿ ಅನುದಾನದಲ್ಲಿ ಖಾಸಗಿ ಪ್ರವಾಸ ಕೈಗೊಂಡವರ ಬಗ್ಗೆ 2022 ರ ಡಿಸೆಂಬರ್ 12 ರಂದು ಹಿಂದಿನ ಸರ್ಕಾರಕ್ಕೆ ಪತ್ರ ಬರೆದು ತನಿಖೆ ನಡೆಸಲು ಆಗ್ರಹಿಸಲಾಗಿತ್ತು. ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ 431 ಕೋಟಿ ಅವ್ಯವಹಾರದ ಬಗ್ಗೆ 2022ರ ಜೂನ್ 1 ರಂದು ಪತ್ರ ಬರೆಯಲಾಗಿತ್ತು. ನೂತನ ಸರ್ಕಾರ ಬಂದ ನಂತರ ಹಿಂದಿನ ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರಗಳನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದ ನಂತರ ತಕ್ಷಣ ತನಿಖೆಗೆ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ಬರೆದಿದ್ದಾರೆ. ಅಲ್ಲದೇ ಭ್ರಷ್ಟಾಚಾರದಲ್ಲಿ ಯಾರೇ ಮುಳುಗಿದ್ದರು ಸಹ ನಮ್ಮ ಕಾಂಗ್ರೆಸ್ ಸರ್ಕಾರವು ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೈಕಿನಲ್ಲೇ ಹಳ್ಳಿ-ಹಳ್ಳಿ ಸುತ್ತಿ ಹೆಚ್‌ಡಿ ತಮ್ಮಯ್ಯ ಮತದಾರರಿಗೆ ಧನ್ಯವಾದ