Tag: ಫೇಲ್

  • ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ – ರಾಜ್ಯಕ್ಕೆ ಬರಲಿದೆ ಕೇಂದ್ರದ ತಜ್ಞರ ತಂಡ

    ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ – ರಾಜ್ಯಕ್ಕೆ ಬರಲಿದೆ ಕೇಂದ್ರದ ತಜ್ಞರ ತಂಡ

    ನವದೆಹಲಿ: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ ಆಗಿದೆ. ಈ ಹಿನ್ನೆಲೆ ರಾಜ್ಯದ ಕೊರೊನಾ ವೈರಸ್ ನಿಯಂತ್ರಣ ಉಸ್ತುವಾರಿಗೆ ಕೇಂದ್ರ ಸರ್ಕಾರ ವಿಶೇಷ ತಂಡವನ್ನು ನಿಯೋಜಿಸಿದೆ.

    ಕರ್ನಾಟಕವೂ ಸೇರಿ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಢ ರಾಜ್ಯಗಳಿಗೆ ಪ್ರತ್ಯೇಕ ತಜ್ಞರ ತಂಡಗಳನ್ನು ಕೇಂದ್ರ ಆರೋಗ್ಯ ಇಲಾಖೆ ನಿಯೋಜಿಸಿದೆ. ಕೇಂದ್ರದಿಂದ ನಿಯೋಜನೆಗೊಂಡಿರುವ ತಜ್ಞರ ತಂಡ ಕರ್ನಾಟಕಕ್ಕೆ ಎರಡನೇ ಬಾರಿ ಬರಲಿದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಮತ್ತು ಸಲಹೆಗಳನ್ನು ನೀಡಲಿದೆ.

    ಕಳೆದ ಮೇ ತಿಂಗಳಲ್ಲಿ ಕೇಂದ್ರದ ಕೋವಿಡ್ ತಜ್ಞರ ತಂಡ ರಾಜ್ಯಕ್ಕೆ ಭೇಟಿ ಕೊಟ್ಟಿತ್ತು ಮತ್ತು ರಾಜ್ಯದ ಕೊರೊನಾ ನಿರ್ವಹಣೆ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ಕೇಂದ್ರದ ತಂಡ ಭೇಟಿ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದ್ದು ಕೈ ಮೀರಿ ಹೋಗುತ್ತಿದೆ. ಈ ಹಿನ್ನೆಲೆ ಮತ್ತೊಮ್ಮೆ ಕೇಂದ್ರ ಸರ್ಕಾರ ರಾಜ್ಯಕ್ಕೆ ತಜ್ಞರ ನಿಯೋಜನೆ ಮಾಡಿದೆ.

    ಕೇಂದ್ರದಿಂದ ನಿಯೋಜನೆಗೊಂಡಿರುವ ತಂಡ, ರಾಜ್ಯದಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳನ್ನು ಪಟ್ಟಿ ಮಾಡಲಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಿದೆ.

    ಇದಲ್ಲದೆ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ತೀವ್ರಗೊಳಿಸುವುದು, ಕೊ-ಮಾರ್ಬಿಡ್ ವ್ಯಕ್ತಿಗಳನ್ನು ಗುರುತಿಸಿ, ಚಿಕಿತ್ಸೆ ಕೊಡುವುದು, ಕೊರೊನಾಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ ಹೆಚ್ಚಿಸುವುದು, ಕ್ವಾರಂಟೈನ್, ಐಸೊಲೇಷನ್ ವ್ಯವಸ್ಥೆ ಸುಧಾರಿಸುವುದು, ಟೆಸ್ಟಿಂಗ್ ವ್ಯವಸ್ಥೆ ಇನ್ನಷ್ಟು ಬಲಪಡಿಸುವುದು, ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ನಿಗಾ ಇಡುವ ಟಾಸ್ಕ್ ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.

    ಪ್ರತಿಯೊಂದು ತಂಡದಲ್ಲಿ ಜಂಟಿ ಕಾರ್ಯದರ್ಶಿ (ಆಯಾ ರಾಜ್ಯಕ್ಕೆ ನೋಡಲ್ ಅಧಿಕಾರಿ), ಸಾರ್ವಜನಿಕ ಆರೋಗ್ಯ ಅಂಶಗಳನ್ನು ನೋಡಿಕೊಳ್ಳಲು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಡೆಗಟ್ಟಲು ರಾಜ್ಯವು ಅನುಸರಿಸುತ್ತಿರುವ ಕ್ಲಿನಿಕಲ್ ನಿರ್ವಹನಾ ಶಿಷ್ಟಾಚಾರವನ್ನು ನೋಡಿಕೊಳ್ಳಲು ಒಬ್ಬ ವೈದ್ಯರು ಇರುತ್ತಾರೆ.

    ನಿಗ್ರಹ, ಕಣ್ಗಾವಲು, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು ಮತ್ತು ಸಕಾರಾತ್ಮಕ ಪ್ರಕರಣಗಳ ಸಮರ್ಥ ಕ್ಲಿನಿಕಲ್ ನಿರ್ವಹಣೆಯನ್ನು ಬಲಪಡಿಸಲು ರಾಜ್ಯಗಳ ಪ್ರಯತ್ನಗಳನ್ನು ತಂಡಗಳು ಬೆಂಬಲಿಸುತ್ತವೆ. ಸಮಯೋಚಿತ ರೋಗನಿರ್ಣಯ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತವೆ.

    ಕರ್ನಾಟಕದಲ್ಲಿ ಒಟ್ಟು 7,43,848 ಪ್ರಕರಣಗಳು ವರದಿಯಾಗಿವೆ. ಇದು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.10.1 ಆಗಿದೆ. ಕರ್ನಾಟಕವು ಪ್ರತಿ ಮಿಲಿಯನ್ ಜನಸಂಖ್ಯೆಗೆ 11,010 ಪ್ರಕರಣಗಳನ್ನು ಹೊಂದಿದೆ. ರಾಜ್ಯದಲ್ಲಿ 6,20,008 ರೋಗಿಗಳು ಗುಣಮುಖರಾಗಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರವು ಶೇ.83.35 ಆಗಿದೆ. ಸಕ್ರಿಯ ಪ್ರಕರಣಗಳು 1,13,557 (ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.14.1). ರಾಜ್ಯದಲ್ಲಿ ಒಟ್ಟು 10,283 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಾವಿನ ಸಂಖ್ಯೆ ಶೇ.1.38 ನಷ್ಟು ಮತ್ತು ಪ್ರತಿ ಮಿಲಿಯನ್ ಜನಸಂಖ್ಯೆಗೆ 152 ಸಾವುಗಳು ಸಂಭವಿಸಿವೆ. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 95674 ಮತ್ತು ಪಾಸಿಟಿವ್ ದರ ಶೇ.11.5 ಆಗಿದೆ.

  • ಪರೀಕ್ಷೆಯಲ್ಲಿ ಫೇಲ್ ಆಗಲು ಪ್ರೇಯಸಿ ಕಾರಣ – ಫೀಸ್ ಹಣ ಕೊಡುವಂತೆ ಪ್ರಿಯಕರ ಒತ್ತಾಯ

    ಪರೀಕ್ಷೆಯಲ್ಲಿ ಫೇಲ್ ಆಗಲು ಪ್ರೇಯಸಿ ಕಾರಣ – ಫೀಸ್ ಹಣ ಕೊಡುವಂತೆ ಪ್ರಿಯಕರ ಒತ್ತಾಯ

    ಮುಂಬೈ: ಮೆಡಿಕಲ್ ಪರೀಕ್ಷೆಯಲ್ಲಿ ನಾನು ಫೇಲ್ ಆಗಿದ್ದಕ್ಕೆ ನನ್ನ ಗೆಳತಿಯೇ ಕಾರಣ. ಈಗ ಆಕೆ ನನ್ನ ಫೀಸ್ ಭರಿಸಬೇಕು ಎಂದು ಹಠ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಔರಂಗಬಾದ್‍ನಲ್ಲಿ ನಡೆದಿದೆ.

    ಬೀಡ್ ಜಿಲ್ಲೆ ಮೂಲದ 21 ವರ್ಷದ ವಿದ್ಯಾರ್ಥಿ ಹೋಮಿಯೋಪಥಿ ಹಾಗೂ ಸರ್ಜರಿ ಓದುತ್ತಿದ್ದನು. ವಿದ್ಯಾರ್ಥಿ ಮೊದಲ ವರ್ಷದಲ್ಲಿ ಫೇಲ್ ಆಗಿದ್ದನು. ಅಲ್ಲದೆ ಮೊದಲ ವರ್ಷದಲ್ಲಿ ಖರ್ಚಾದ ಹಣವನ್ನು ಪಾವತಿಸಲು ಆತ ತನ್ನ ಪ್ರೇಯಸಿಗೆ ಒತ್ತಾಯಿಸಿದ್ದಾನೆ.

    ವಿದ್ಯಾರ್ಥಿ ಔರಂಗಾಬಾದ್‍ನ ಕಾಲೇಜ್‍ವೊಂದರಲ್ಲಿ ನಾಲ್ಕು ವರ್ಷದ ಬಿಎಚ್‍ಎಂಎಸ್(ಹೋಮಿಯೋಪಥಿ) ಕೋರ್ಸ್‍ಗೆ ಅಡ್ಮಿಶನ್ ಮಾಡಿಸಿದ್ದ. ಅದೇ ತರಗತಿಯಲ್ಲಿ ಆತನ ಪ್ರೇಯಸಿ ಕೂಡ ಓದುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೀತಿ ಆರಂಭವಾಗಿದೆ.

    ನನ್ನ ಪ್ರೇಯಸಿಯ ಕಾರಣ ನನಗೆ ಸರಿಯಾಗಿ ಓದಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮೊದಲ ವರ್ಷದಲ್ಲಿ ಫೇಲ್ ಆಗಿದ್ದೇನೆ. ನಾನು ಫೇಲ್ ಆಗಿದ್ದರಿಂದ ನನಗೆ ಮುಂದಿನ ವರ್ಷಕ್ಕೆ ಆಡ್ಮಿಶನ್ ದೊರೆತಿಲ್ಲ. ನಾನು ಪರೀಕ್ಷೆಯಲ್ಲಿ ಫೇಲಾದ ಕಾರಣ ಆಕೆಯ ಫೋಷಕರು ಆಕೆಗೆ ನೀಡಿದ್ದ ಫೀಸ್ ನನಗೆ ಕಟ್ಟಬೇಕು ಎಂದು ಹಠ ಹಿಡಿದಿದ್ದಾನೆ.

    ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವಕನ ಪ್ರೇಯಸಿ ಆತನಿಂದ ದೂರ ಹೋಗಿದ್ದಾಳೆ. ಪ್ರೇಯಸಿ ದೂರ ಆಗುತ್ತಿರುವುದನ್ನು ನೋಡಿ ಯುವಕ ಆಕೆಗೆ ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಬಳಿಕ ತನ್ನ ಪ್ರೇಯಸಿ ಮೋಸ ಮಾಡಿದ್ದಾಳೆ ಎನ್ನುವ ವಿಚಾರ ಆತನಿಗೆ ಗೊತ್ತಾಗಿದೆ.

    ಪ್ರೇಯಸಿ ಮೋಸ ಮಾಡಿದ್ದಕ್ಕೆ ಕೋಪದಿಂದ ಯುವಕ ಆಕೆಯ ಬಗ್ಗೆ ಹಾಗೂ ಆಕೆಯ ಕುಟುಂಬದ ಬಗ್ಗೆ ಕೆಟ್ಟದಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಅಲ್ಲದೆ ಫೀಸ್ ಹಣ ನೀಡಲಿಲ್ಲ ಎಂದರೆ ಯುವತಿ ಜೊತೆಯಿರುವ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

  • ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜಾಧವ್ ಮಗಳು ಫೇಲ್: ಸಿದ್ದರಾಮಯ್ಯ

    ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜಾಧವ್ ಮಗಳು ಫೇಲ್: ಸಿದ್ದರಾಮಯ್ಯ

    ಕಲಬುರಗಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜಾಧವ್ ಮಗಳು ಫೇಲ್ ಆಗಿದ್ದಾಳೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಮಗಳು ಪಿಯುಸಿ ಫೇಲ್ ಆಗಲು ಕಾಂಗ್ರೆಸ್ ಕಾರಣ ಎಂದಿದ್ದ ಜಾಧವ್ ಹೇಳಿಕೆಗೆ ಚಿಂಚೋಳಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಜಾಧವ್ ತಮ್ಮ ಮಗಳು ಫೇಲ್ ಆಗಿದ್ದಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇದನ್ನು ಕೇಳಿ ನನಗೆ ಆಶ್ವರ್ಯವಾಯಿತು. ಜಾಧವ್ ಮಾತು ಜೋಕ್ ಆಫ್ ದಿ ಈಯರ್. ಕಾಂಗ್ರೆಸ್ ಬಿಟ್ಟು ತಂದೆ ಬಿಜೆಪಿಗೆ ಹೋಗಿದ್ದಕ್ಕೆ ನೊಂದು ಅವರ ಮಗಳು ಫೇಲಾಗಿದ್ದಾಳೆ. ಅನುಕಂಪ ಬರಲಿ ಅಂತ ಜಾಧವ್ ಆ ರೀತಿ ಹೇಳಿರಬಹುದು. ಆದರೆ ಇದಕ್ಕೆ ಅನುಕಂಪ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ನಾನು ನಮ್ಮಪ್ಪನ ಹಣದಿಂದ ಸಾಲಮನ್ನಾ ಮಾಡಿರಲಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಾಗೆ ಜನರ ದುಡ್ಡನ್ನು ಅವರಿಗೆ ಕೊಟ್ಟಿದ್ದೇವೆ. ಅದು ಸಾರ್ವಜನಿಕರ ಹಣವಾಗಿದೆ. ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಕಷ್ಟದಲ್ಲಿದ್ದಾಗ ಅವರ ಹಣದಿಂದಲೇ ಸಾಲಮನ್ನಾ ಮಾಡಿದ್ದೇವೆ ಎಂದರು.

    ಜಾಧವ್ ಹೇಳಿದ್ದೇನು?
    ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಉಮೇಶ್ ಜಾಧವ್, ರಾಜಕೀಯ ಗೊಂದಲ ಶುರುವಾಗುವ ಮೊದಲೇ ಪ್ರಿಯಾಂಕ್ ಖರ್ಗೆ ಅವರು ಡಾ.ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ಸಿನಿಂದ ಓಡಿಸಬೇಕು ಎಂದು ಹುನ್ನಾರ ಮಾಡಿಕೊಂಡಿದ್ದರು. ಹಣ ತೆಗೆದುಕೊಂಡಿದ್ದೇನೆ ಎಂದು ದಿನವೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಮಗಳು ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಶಿಕ್ಷಕರೊಬ್ಬರು, ಇವರ ಅಪ್ಪ ಮಾರಾಟವಾಗಿದ್ದಾನೆ ಎಂದು ಹೇಳಿದ್ದರು. ಇದರಿಂದ ನೊಂದ ಮಗಳು ಪರೀಕ್ಷೆ ಬರೆಯದೇ ಅಳುತ್ತಾ ಮನೆಗೆ ಬಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಮುಂದಾಗಿದ್ದಳು. ಹೀಗಾಗಿ ಕಾಂಗ್ರೆಸ್ ಆರೋಪದಿಂದ ನನ್ನ ಮಗಳು ಫೇಲಾಗಿದ್ದಾಳೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದರು.

  • ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಲವ್ ಯೂ ಎಂದ ಶಿಕ್ಷಕ

    ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಲವ್ ಯೂ ಎಂದ ಶಿಕ್ಷಕ

    ಮಂಡ್ಯ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಪೋಲಿ ಶಿಕ್ಷಕನೊಬ್ಬ ಲವ್ ಯೂ ಎಂದು ಹೇಳಿದ್ದಾನೆ.

    ಮೇಘನಾಥ್ ಲವ್ ಯೂ ಎಂದು ಹೇಳಿದ ಶಿಕ್ಷಕ. ಮೇಘನಾಥ್ ಮಂಡ್ಯದ ನೆಹರು ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

    ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ವಿದ್ಯಾರ್ಥಿನಿ ಫೇಲ್ ಆಗಿರುವುದನ್ನು ತಿಳಿದ ಶಿಕ್ಷಕ ಮೇಘನಾಥ್ ಒಂದು ವಿಷಯದಲ್ಲಿ ಫೇಲ್ ಆಗಿದೆ ಎಂದು ಹೇಳು ಎಂದು ವಿದ್ಯಾರ್ಥಿನಿಗೆ ಹೇಳಿದ್ದಾರೆ. ಅಲ್ಲದೆ ನಾನು ನಿನಗೆ ನೋಟ್ಸ್ ಕೊಟ್ಟು ಎಕ್ಸಾಂ ಬರೆಸ್ತೀನಿ ಎಂದು ಹೇಳಿದ್ದಾನೆ.

    ಅಷ್ಟೇ ಅಲ್ಲದೆ ಬೇಜಾರಾಗಬೇಡ ನಾಳೆ ಅಥವಾ ನಾಡಿದ್ದು ಫೋನ್ ಮಾಡ್ತೀನಿ. ಆಗ ನೀನು ಬರುವಂತೆ. ಈಗ ಲೌಡ್ ಸ್ಪೀಕರ್ ಆಫ್ ಮಾಡಿದ್ಯಾ?. “ಸಂಜೆ ಸಿಗು…. ಐ ಲವ್ ಯೂ ಕಣೋ” ಎಂದು ಶಿಕ್ಷಕ ಫೋನಿನಲ್ಲಿ ವಿದ್ಯಾರ್ಥಿನಿಗೆ ಹೇಳಿದ್ದಾನೆ.

    ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಶಿಕ್ಷಕ ಮೇಘನಾಥ್ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದಾರೆ.

  • ವಿದ್ಯಾರ್ಥಿಗಳೇ ಎಚ್ಚರ – 8ನೇ ತರಗತಿವರೆಗೆ ಯಾರನ್ನೂ ಫೇಲ್ ಮಾಡಬಾರ್ದು ಅನ್ನೋ ನಿಯಮಕ್ಕೆ ಕೊಕ್

    ವಿದ್ಯಾರ್ಥಿಗಳೇ ಎಚ್ಚರ – 8ನೇ ತರಗತಿವರೆಗೆ ಯಾರನ್ನೂ ಫೇಲ್ ಮಾಡಬಾರ್ದು ಅನ್ನೋ ನಿಯಮಕ್ಕೆ ಕೊಕ್

    – ಶಿಕ್ಷಣ ನೀತಿ ಬದಲಿಸಿದ ಕೇಂದ್ರ ಸರ್ಕಾರ

    ಬೆಂಗಳೂರು: ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಓದದ ಮಕ್ಕಳನ್ನು ಪಾಸ್ ಮಾಡುವಂತೆ ಇದ್ದ ಶಿಕ್ಷಣ ಹಕ್ಕು ಕಾಯ್ದೆಗೆ ಕೇಂದ್ರ ಸರ್ಕಾರ ಹೊಸ ತಿದ್ದುಪಡಿಯನ್ನು ತಂದಿದೆ. ಈ ಮೂಲಕ ಓದದ ಮಕ್ಕಳನ್ನು ಇನ್ಮುಂದೆ ಫೇಲ್ ಮಾಡಬಹುದಾಗಿದೆ.

    2009ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು ಕಾಯ್ದೆ ಮೊನ್ನೆಯಷ್ಟೇ ಕೇಂದ್ರ ಸರ್ಕಾರ ತಿದ್ದುಪಡಿಗೆ ತಂದಿತ್ತು. ಈ ಹೊಸ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಹೊಸ ತಿದ್ದು ಪಡಿಗೆ ಕೇಂದ್ರ ಸರ್ಕಾರ ಅಧಿಕೃತ ರಾಜ್ಯ ಪತ್ರ ಹೊರಡಿಸಿದೆ. ಹೀಗಾಗಿ ಇನ್ಮುಂದೆ ಪ್ರತಿ ವಿದ್ಯಾರ್ಥಿಗಳು ಪಾಸ್ ಆದರೆ ಮಾತ್ರ ಮುಂದಿನ ತರಗತಿಯಲ್ಲಿ ವ್ಯಾಸಂಗ ಮಾಡಬಹುದಾಗಿದೆ.

    ಹೊಸ ತಿದ್ದುಪಡಿ ಅನ್ವಯ ಇನ್ಮುಂದೆ 5 ಮತ್ತು 8ನೇ ತರಗತಿಯ ಕೊನೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ತೇರ್ಗಡೆ ಹೊಂದುತ್ತಾರೆ. ಒಂದು ವೇಳೆ 5-8ನೇ ತರಗತಿಯ ಪರೀಕ್ಷೆಯಲ್ಲಿ ಫೇಲ್ ಆದರೆ ಮುಂದಿನ ಎರಡು ತಿಂಗಳಲ್ಲಿ ಮರು ಪರೀಕ್ಷೆಯನ್ನ ಶಾಲೆಯವರು ನೀಡಬೇಕು.

    ವಿದ್ಯಾರ್ಥಿ ಮರು ಪರೀಕ್ಷೆಯಲ್ಲೂ ಫೇಲ್ ಆದರೆ ಇನ್ನೊಂದು ವರ್ಷ ಹಿಂದಿನ ತರಗತಿಯಲ್ಲೇ ವ್ಯಾಸಂಗ ಮುಂದುವರಿಸಬೇಕಾಗುತ್ತದೆ. 2009ರಿಂದ ಕಾಯ್ದೆ ಜಾರಿಗೆ ಬಂದಾಗಿನಿಂದ ದೇಶದಲ್ಲಿ ಶೈಕ್ಷಣಿಕ ಮೌಲ್ಯದ ಮಟ್ಟ ಕುಸಿಯುತ್ತಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ತಿದ್ದುಪಡಿಯನ್ನು ಜಾರಿಗೆ ತಂದಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • SSLC ಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ತಂದೆಯಿಂದ ಪಾರ್ಟಿ!

    SSLC ಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ತಂದೆಯಿಂದ ಪಾರ್ಟಿ!

    ಭೋಪಾಲ್: ಸಾಮಾನ್ಯವಾಗಿ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಅಥವಾ ರ್ಯಾಂಕ್ ಪಡೆದುಕೊಂಡರೆ ಪೋಷಕರು ಸಂಭ್ರಮಿಸಿ ಎಲ್ಲರಿಗೂ ಸಿಹಿ ಹಂಚುತ್ತಾರೆ. ಆದರೆ ಇಲ್ಲೊಬ್ಬರು ತಂದೆ, ತನ್ನ ಮಗ ಫೇಲ್ ಆಗಿದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.

    ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುರೇಂದ್ರ ಕುಮಾರ್ ವ್ಯಾಸ್ ತನ್ನ ಮಗ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಬೀದಿಯಲ್ಲಿ ಪೆಂಡಾಲ್ ಹಾಕಿಸಿ, ಪಟಾಕಿ ಸಿಡಿಸಿ ಹಾಗೂ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೆ ಸಾಕು ಅವರು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರಂತು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ಪರೀಕ್ಷೆಯಲ್ಲಿ ನನ್ನ ಮಗ ಕೂಡ ಫೇಲ್ ಆಗಿದ್ದಾನೆ. ಮಕ್ಕಳು ಉತ್ತೀರ್ಣರಾದಾಗ ಮಾತ್ರ ಸಂಭ್ರಮಿಸಬಾರದು. ಅವರು ಫೇಲ್ ಆದಾಗಲೂ ನಾವು ಸಂಭ್ರಮಿಸಬೇಕು. ಇದರಿಂದ ಅವರನ್ನು ನಾವು ಪ್ರೇರೇಪಿಸಿದಂತಾಗುತ್ತದೆ ಎಂದು ತಂದೆ ಹೇಳಿದ್ದಾರೆ.

    ಫೇಲ್ ಆದಾಗ ನಾವು ಈ ರೀತಿಯಲ್ಲಿ ಅವರಿಗೆ ಉತ್ತೇಜನ ನೀಡಿದರೆ ಮುಂದೆ ಅವರು ತಮ್ಮ ಜೀವನದಲ್ಲಿ ಗೆಲುವು ಸಾಧಿಸುತ್ತಾರೆ. ಆದ್ದರಿಂದ ನನ್ನ ಮಗನನ್ನು ಪ್ರೇರೇಪಿಸುವ ಉದ್ದೇಶದಿಂದ ಈ ರೀತಿ ಸಂಭ್ರಮಿಸುತ್ತಿದ್ದೇನೆ ಎಂದು ತಿಳಿದರು. ಮಧ್ಯಪ್ರದೇಶದ ಇದೇ ಮೊದಲ ಬಾರಿಗೆ ಮಗ ಫೇಲ್ ಆಗಿದ್ದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿರುವುದು.

    ಮಧ್ಯಪ್ರದೇಶದಲ್ಲಿ ಸೋಮವಾರ 10ನೇ ಹಾಗೂ 12 ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ಸುಮಾರು 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರಲ್ಲಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

  • ಎಸ್‌ಎಸ್‌ಎಲ್‌ಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

    ಎಸ್‌ಎಸ್‌ಎಲ್‌ಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

    ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಮತ್ತೊಮ್ಮೆ ಶಾಲೆಗೆ ಹೋಗಬಹುದು. ಹೊಸ ವಿದ್ಯಾರ್ಥಿಗಳಾಗಿ ಮತ್ತೆ ಹತ್ತನೇ ತರಗತಿ ಪರೀಕ್ಷೆ ಬರೆಯಬಹುದು ಎಂದು ಎಸ್‌ಎಸ್‌ಎಲ್‌ಸಿ ಬೋರ್ಡ್ ಆದೇಶ ನೀಡಿದೆ.

    ಫೇಲ್ ಆದ ವಿದ್ಯಾರ್ಥಿಗಳು ಮತ್ತೊಮ್ಮೆ ಶಾಲೆಗೆ ಹೋಗಿ ಹೊಸ ವಿದ್ಯಾರ್ಥಿಗಳಾಗಿ ಮತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬಹುದು. ಎಲ್ಲಾ ಮಕ್ಕಳಂತೆ ತರಗತಿಗೆ ಹಾಜರಾಗಬಹುದು ಎಂದು ಬೋರ್ಡ್ ತಿಳಿಸಿದೆ.

    ಹೊಸ ವಿದ್ಯಾರ್ಥಿಯಾಗಿ 6 ವಿಷಯಗಳ ಪರೀಕ್ಷೆ ಬರೆಯಬೇಕು. ಹಾಗಾಗಿ ತರಗತಿಗಳಿಗೆ ಹಾಜರಾಗಿ ಪರೀಕ್ಷೆ ಬರೆಯಬಹುದು. ಎಸ್‌ಎಸ್‌ಎಲ್‌ಸಿ ಬೋರ್ಡ್ ನಿಂದ ವಿನೂತನ ಪ್ರಯತ್ನವಾಗಿದ್ದು, ಇದೇ ಮೊದಲ ಬಾರಿಗೆ ಫೇಲ್ ಆದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಎಸ್‌ಎಸ್‌ಎಲ್‌ಸಿ ಬೋರ್ಡ್ ಅವಕಾಶ ನೀಡಿದೆ.

  • ಪಿಯುಸಿಯಲ್ಲಿ ಮಗ ಫೇಲಾಗಿದ್ದಕ್ಕೆ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ತಾಯಿ ರಂಪಾಟ!

    ಪಿಯುಸಿಯಲ್ಲಿ ಮಗ ಫೇಲಾಗಿದ್ದಕ್ಕೆ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ತಾಯಿ ರಂಪಾಟ!

    ಧಾರವಾಡ: ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಮಗ ಅನುತ್ತೀರ್ಣನಾದ ಕಾರಣ ತಾಯಿ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ರಂಪಾಟ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ರಾಹುಲ್ ಕುಲಕರ್ಣಿ ಎಂಬ ವಿದ್ಯಾರ್ಥಿಯ ತಾಯಿ ರಮಾ ಕುಲಕರ್ಣಿಯೇ ರಂಪಾಟ ಮಾಡಿದವರು. ಧಾರವಾಡ ಕೆಸಿಡಿ ಕಾಲೇಜಿನ ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ರಾಹುಲ್ ಎರಡು ವಿಷಯದಲ್ಲಿ ಫೇಲಾಗಿದ್ದಾನೆ.

    ಇದನ್ನೇ ನೆಪ ಇಟ್ಟುಕೊಂಡು ರಾಹುಲ್ ತಾಯಿ ರಮಾ ಕುಲಕರ್ಣಿ ಅವರು ಗುರುವಾರ ಕೆಸಿಡಿ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಪ್ರಾಂಶುಪಾಲರಿಗೆ ಬೈದಿದ್ದಾರೆ. ಇನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಕೂಡಾ ಅಪಮಾನ ಮಾಡಿರುವ ರಮಾ ಕುಲಕರ್ಣಿ ತನ್ನ ಮಗನನ್ನ ಪಾಸ್ ಮಾಡುವಂತೆ ಬೇಡಿಕೆಯಿಟ್ಟು ರದ್ದಾಂತ ಮಾಡಿದ್ದಾರೆ.

    ಘಟನೆ ಸಂಬಂಧ ರಮಾ ಕುಲಕರ್ಣಿ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿರುವ ಕರ್ನಾಟಕ ವಿವಿ ಅಧಿಕಾರಿ ಮಂಡಳಿ, ಅವರ ಮೇಲೆ ಕ್ರಮ ಕೈಗೊಳ್ಳಲು ಕೋರಿದ್ದಾರೆ. ಸದ್ಯ ಪೊಲೀಸರು ರಮಾ ಅವರನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.

    ಇನ್ನು ಈ ರಮಾ ಕುಲಕರ್ಣಿ ಚುನಾವಣೆಯಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಕೂಡಾ ಆಗಿದ್ದಾರೆ ಎನ್ನಲಾಗಿದೆ.

  • ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

    ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

    ಬಾಗಲಕೋಟೆ: ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕಾಲೇಜ್ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ರೂಮ್ ನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ನಗರದ ಬಸವೇಶ್ವರ ಸೈನ್ಸ್ ಕಾಲೇಜ್ ನಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಮ್ಯ ಆವಟಿ ಎಂದು ಗುರುತಿಸಲಾಗಿದೆ. ಬುಧವಾರವಷ್ಟೇ ಮೊದಲ ಸೆಮಿಸ್ಟರ್ ನ ರಿಸಲ್ಟ್ ಬಂದಿದ್ದು, ಪ್ರಾಣಿ ಶಾಸ್ತ್ರ ವಿಷಯದಲ್ಲಿ ಫೇಲ್ ಆಗಿದ್ದಳು ಎನ್ನಲಾಗಿದೆ.

    ಇದೇ ಕಾರಣದಿಂದ ಮನನೊಂದು ಸೌಮ್ಯ ಗುರುವಾರ ಮಧ್ಯಾಹ್ನ ರೂಮಿನಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೌಮ್ಯ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ನಿವಾಸಿಯಾಗಿದ್ದು, ಬಸವೇಶ್ವರ ಕಾಲೇಜ್ ಗೆ ಸೇರಿದ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದಳು.

    ಇತ್ತ ಸುದ್ದಿ ತಿಳಿಯುತ್ತಿದ್ದಂತೆ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತ ಸೌಮ್ಯಳ ಸಹೋದರಿಯೂ ಸಹ ಇದೇ ಕಾಲೇಜ್ ನಲ್ಲಿಯೇ ವ್ಯಾಸಂಗ ಮಾಡುತ್ತಿದ್ದು, ಬುಧವಾರ ಸೌಮ್ಯ ತನ್ನ ಸಹೋದರಿ ಮುಂದೆಯೂ ಫೇಲ್ ಆಗಿದ್ದಕ್ಕೆ ಮನನೊಂದುಕೊಂಡು ಮಾತನಾಡಿದ್ದು, ಗುರುವಾರ ಆತ್ಮಹತ್ಯೆಗೆ ಶರಣಾದ್ದಾಳೆ.