Tag: ಫೇಕ್ ಫೋಟೋ

  • ಶೇರ್‌ ಮಾಡೋದನ್ನು ನಿಲ್ಲಿಸಿ – ವೈರಲ್ ಆಗಿರುವ ಅಪ್ಪು ಫೋಟೋ ಸೀಕ್ರೆಟ್ ರಿವಿಲ್

    ಶೇರ್‌ ಮಾಡೋದನ್ನು ನಿಲ್ಲಿಸಿ – ವೈರಲ್ ಆಗಿರುವ ಅಪ್ಪು ಫೋಟೋ ಸೀಕ್ರೆಟ್ ರಿವಿಲ್

    ಬೆಂಗಳೂರು: ಅಪ್ಪು ಮೃತಪಟ್ಟ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೋದ ಸೀಕ್ರೆಟ್‌ ಬಯಲಾಗಿದೆ.

    ಪುನೀತ್‌ ರಾಜ್‌ಕುಮಾರ್‌ ಅವರು ವಾಕಿಂಗ್‌ ಮಾಡುತ್ತಿರುವ ಫೋಟೋ ಭಾರೀ ವೈರಲ್‌ ಆಗಿದೆ. ವಾಕಿಂಗ್‌ ಮಾಡುವಾಗಲೇ ಅಪ್ಪು ಎದೆನೋವಿನಿಂದ ಬಳಲುತ್ತಿದ್ದರು ಎಂದು ಶೀರ್ಷಿಕೆ ನೀಡಿ  ಜನ ಈ ಫೋಟೋವನ್ನು  ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ.

    ಅಪ್ಪು ವಾಕಿಂಗ್‌ ಮಾಡುತ್ತಿರುವ ಫೋಟೋ ಇದಾಗಿದ್ದರೂ ಶೀರ್ಷಿಕೆ ತಪ್ಪಾಗಿದೆ. ಎರಡು ತಿಂಗಳ ಹಿಂದೆ ಪುನೀತ್‌ ವಾಕಿಂಗ್‌ ಮಾಡುತ್ತಿದ್ದಾಗ ಈ ಫೋಟೋವನ್ನು ಸದಾಶಿವನಗರದ ಸ್ನೇಹಜೀವಿ ಗ್ರೂಪ್‌ ಸದಸ್ಯರು ತೆಗೆದಿದ್ದರು. ಇದನ್ನೂ ಓದಿ: ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

    \

    ವಾಕಿಂಗ್‌ ಮಾಡುತ್ತಿರುವ ಅಪ್ಪು ಅವರಿಗೆ ಮುಂದುಗಡೆಯಲ್ಲಿದ್ದ ವ್ಯಕ್ತಿಯೊಬ್ಬರು ನಮಸ್ಕರಿಸಿದ್ದರು. ಅಪ್ಪು ಪ್ರತಿಯಾಗಿ ನಮಸ್ಕರಿಸುವ ಸಂದರ್ಭದಲ್ಲೇ ಫೋಟೋ ಕ್ಲಿಕ್ಕಿಸಲಾಗಿತ್ತು. ಕೈ ಎದೆ ಹತ್ತಿರ ಹೋಗಿದ್ದ ಕಾರಣ ಜನರು ಈ ಫೋಟೋವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಇದನ್ನೂ ಓದಿ: ಭೂಮಿ ಮೇಲೆ ಕೆಟ್ಟೋಗಿರೋ ನನ್ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ- ಅಪ್ಪು ನಿಧನಕ್ಕೆ ಯೋಗಿ ಕಂಬನಿ

    ಅಪ್ಪು ಬೆಳಗ್ಗೆ ವಾಕಿಂಗ್‌ ಹೋಗುವಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಬೆಳಗ್ಗೆಯೇ ಆಸ್ಪತ್ರೆಗೆ ದಾಖಲಾಗಿದ್ದರೆ ಅವರು ಮೃತಪಡುತ್ತಿರಲಿಲ್ಲ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹರಿಬಿಡಲಾಗುತ್ತಿದೆ.

  • ಪುಲ್ವಾಮ ದಾಳಿಯ ಫೇಕ್ ಫೋಟೋಗಳನ್ನ ನಂಬಬೇಡಿ -ಸಿಆರ್‌ಪಿಎಫ್ ಮನವಿ

    ಪುಲ್ವಾಮ ದಾಳಿಯ ಫೇಕ್ ಫೋಟೋಗಳನ್ನ ನಂಬಬೇಡಿ -ಸಿಆರ್‌ಪಿಎಫ್ ಮನವಿ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪುಲ್ವಾಮಾದ ಉಗ್ರರ ದಾಳಿ ಬಗೆಗಿನ ಕೆಲ ಫೇಕ್ ಫೋಟೋಗಳು ಹಾರಿದಾಡುತ್ತಿದ್ದು, ಇಂತಹ ಫೋಟೋಗಳನ್ನು ನಂಬಬೇಡಿ ಎಂದು ಸಿಆರ್‌ಪಿಎಫ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

    ಟ್ವಿಟ್ಟರ್ ನಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಮಾಹಿತಿ ನೀಡಿರುವ ಸೇನೆ, ಸಾಮಾಜಿಕ ಜಾಲತಾಣದಲ್ಲಿ ಹುತಾತ್ಮರದ ಯೋಧರ ದೇಹದ ಭಾಗಗಳು ತುಂಡಾಗಿ ಬಿದ್ದಿರುವ ಕೆಲ ನಕಲಿ ಫೋಟೋಗಳು ಹಾರಿದಾಡುತ್ತಿರುವ ಕುರಿತು ನಮ್ಮ ಗಮನಕ್ಕೆ ಬಂದಿದೆ. ನಕಲಿ ಫೋಟೋಗ್ರಾಫ್‍ಗಳನ್ನು ಶೇರ್ ಮಾಡುವುದು, ಲೈಕ್ ಮಾಡುವುದನ್ನು ಮಾಡಬೇಡಿ. ಇಂತಹವುಗಳ ಬಗ್ಗೆ ಮಾಹಿತಿ ಲಭಿಸಿದರೆ ನಮ್ಮ ವೆಬ್ ತಾಣವಾದ webpro@crpf.gov.in ಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.

    ದಾಳಿಯ ಬಗ್ಗೆ ಈ ಹಿಂದೆಯೂ ಸಿರಿಯಾದಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ವಿಡಿಯೋವನ್ನು ಪುಲ್ವಾಮಾ ಘಟನೆಯದ್ದೇ ಎಂದು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿದ್ದರು. 9 ಸೆಕೆಂಡಿನ ಸಿಸಿಟಿವಿ ವಿಡಿಯೋದಲ್ಲಿ ಬಾಂಬ್ ಸ್ಫೋಟದ ದೃಶ್ಯ ಸೆರೆಯಾಗಿತ್ತು. ಆದರೆ ಆ ವಿಡಿಯೋ ಸಿರಿಯಾ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿರುವ ಅಲ್ ರಾಯ್ ಎಂಬ ಪಟ್ಟಣದಲ್ಲಿ ಫೆ.12 ರಂದು ನಡೆದ ಸ್ಫೋಟದ ವಿಡಿಯೋ ಆಗಿತ್ತು. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರು.  ಇದನ್ನು ಓದಿ: ಗಮನಿಸಿ, ವೈರಲ್ ಆಗಿರುವ ಸ್ಫೋಟದ ವಿಡಿಯೋ ಪುಲ್ವಾಮ ದಾಳಿಯದ್ದು ಅಲ್ಲ! 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಎಡವಟ್ಟು: ಕ್ಷಮೆ ಕೇಳಿದ ದಿಗ್ವಿಜಯ್ ಸಿಂಗ್

    ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಎಡವಟ್ಟು: ಕ್ಷಮೆ ಕೇಳಿದ ದಿಗ್ವಿಜಯ್ ಸಿಂಗ್

    ನವದೆಹಲಿ: ಭೋಪಾಲ್ ನಗರ ಮೆಟ್ರೋ ಸೇತುವೆ ಚಿತ್ರ ಎಂದು ಫೇಕ್ ಫೋಟೋವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.

    ತಮ್ಮ ಟ್ವಿಟ್ಟರ್ ಖಾತೆಯಿಂದ ಫೋಟೋವೊಂದನ್ನು ಶನಿವಾರ ಟ್ವೀಟ್ ಮಾಡಿದ್ದ ಅವರು, ಇದು ಮಧ್ಯಪ್ರದೇಶದ ಭೋಪಾಲ್ ನಗರದ ಸೇತುವೆಯಾಗಿದ್ದು, ಈಗಾಗಲೇ ಸೇತುವೆಗೆ ಡ್ಯಾಮೇಜ್ ಆಗಿದೆ. ಬಿಜೆಪಿ ನಾಯಕರು ಕೇವಲ ಸಿದ್ಧಾಂತಗಳನ್ನು ಮಾತನಾಡುತ್ತಾರೆ. ಆದರೆ ಇದು ಅವರಿಗೆ ತಿಳಿಯುವುದಿಲ್ಲ ಎಂದು ಬರೆದುಕೊಂಡಿದ್ದರು. ಅಲ್ಲದೇ ತಮ್ಮ ಟ್ವೀಟ್ ನಲ್ಲಿ ವಾರಣಾಸಿ ಸೇತುವೆ ಕುಸಿತ ಕುರಿತು ಉಲ್ಲೇಖಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲು ಕೋರಿದ್ದರು.

    https://twitter.com/digvijaya_28/status/1005679859732008961

    ಈ ಫೋಟೋ ಹಿಂದಿನ ಸತ್ಯಾಂಶವನ್ನು ಬಿಚ್ಚಿಟ್ಟ ಹಿರಿಯ ಪತ್ರಕರ್ತರೊಬ್ಬರು 2016ರ ಚಿತ್ರವನ್ನು ನೀವು ಅಪ್ಲೋಡ್ ಮಾಡಿದ್ದೀರಿ. ಪಾಕಿಸ್ತಾನದ ರಾವಲ್ಪಿಂಡಿ ಮೆಟ್ರೋ ಸೇತುವೆ ಚಿತ್ರ ಎಂದು ಮರು ಟ್ವೀಟ್ ಮಾಡಿದ್ದರು. ಅಲ್ಲದೇ ತೆಲಂಗಾಣ ಸಚಿವ, ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಕೆಟಿ ರಾಮರಾವ್ ಅವರು ಸಹ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದರು.

    ಪತ್ರಕರ್ತರ ಸ್ಪಷ್ಟನೆ ಕೇಳುತ್ತಿದಂತೆ ಎಚ್ಚೆತ್ತ ದಿಗ್ವಿಜಯ್ ಸಿಂಗ್ ಅವರು ತನ್ನ ಸ್ನೇಹಿತ ಕಳುಹಿಸಿದ ಚಿತ್ರವನ್ನು ತಾನು ಟ್ವೀಟ್ ಮಾಡಿದ್ದು, ಈ ಕುರಿತು ಮಾಹಿತಿ ಪಡೆದಿರಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

    ಇದೇ ಮೊದಲಲ್ಲ: ಈ ಹಿಂದೆಯೂ ಕಾಂಗ್ರೆಸ್ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಅವರು ಟ್ವೀಟ್‍ರಲ್ಲಿ ಪೋಸ್ಟ್ ಮಾಡಿ ಹಲವು ಎಡವಟ್ಟುಗಳನ್ನು ಮಾಡಿಕೊಂಡಿದ್ದರು. ಒಮ್ಮೆ ಕಾಂಗ್ರೆಸ್ ಸಂಸದೆ ರಾಜಕುಮಾರಿ ರತ್ನಾಸಿಂಗ್ ಅವರ ಬಗ್ಗೆ ಟ್ವೀಟ್ ಮಾಡಿ ರಾಜೀವ್ ಗಾಂಧಿ ಬದಲಾಗಿ ರಾಹುಲ್ ಗಾಂಧಿ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ಟ್ವೀಟ್ ಮಾಡಿ ಬಳಿಕ ಡಿಲೀಟ್ ಮಾಡಿದ್ದರು. ಅಲ್ಲದೇ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಪೋಪ್ ಕುರಿತ ಫೇಕ್ ವಿಡಿಯೋ ಟ್ವೀಟ್ ಮಾಡಿ ಪ್ರಮಾದ ಎಸಗಿದ್ದರು.