Tag: ಫೇಕ್

  • ಮೈಕಲ್ ಭವಿಷ್ಯ ನುಡಿದಂತೆ ಬಿಗ್ ಬಾಸ್ ಮನೆಯ ‘ಟಾಪ್ 5’ ಯಾರು?

    ಮೈಕಲ್ ಭವಿಷ್ಯ ನುಡಿದಂತೆ ಬಿಗ್ ಬಾಸ್ ಮನೆಯ ‘ಟಾಪ್ 5’ ಯಾರು?

    ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಮೈಕಲ್ ಅಜಯ್ (Michael). ಹುಟ್ಟಿದ ಮನೆಗೆ ವಾಪಸ್ಸಾಗಿರುವ ಮೈಕಲ್ ತನ್ನ ಜರ್ನಿ ಮತ್ತು ಬಿಗ್ ಬಾಸ್ ಮನೆಯ ಟಾಪ್ 5 ಕಂಟೆಸ್ಟೆಂಟ್ ಗಳ ಬಗ್ಗೆ ಮಾತನಾಡಿದ್ದಾರೆ. ಯಾಕೆ ಅವರು ಟಾಪ್ ಅನ್ನುವ ವಿಚಾರವನ್ನೂ ಹಂಚಿಕೊಂಡಿದ್ದಾರೆ.

    ಮೈಕಲ್ ಟಾಪ್‌ 5 ಲೀಸ್ಟ್

    ನನ್ನ ಪ್ರಕಾರ ವಿನಯ್, ಸಂಗೀತಾ, ಕಾರ್ತಿಕ್ ಸಂಗೀತಾ, ತುಕಾಲಿ ಮತ್ತು ಪ್ರತಾಪ್ ಇವರು ಕೊನೆಯ ಹಂತದಲ್ಲಿರುತ್ತಾರೆ. ಸಂಗೀತಾ ವಿನ್ ಆಗಬಹುದು ಅಂತ ನನಗನಿಸುತ್ತದೆ.  ಮುಂದಿನ ವಾರ ತನಿಷಾ ಎಲಿಮಿನೇಟ್ ಆಗಬಹುದು. ಯಾಕೆಂದರೆ, ಅವಳು ಲೌಡ್ ಆಗಿದ್ದಾಳೆ. ಅದರೆ ಅವಳ ಗೇಮ್ ತುಂಬ ಸ್ಲೋ ಆಗಿ ಹೋಗುತ್ತಿದೆ.

    ಜಿಯೊ ಫನ್ ಫ್ರೈಡೆ

    ಜಿಯೊ ಫನ್ ಫ್ರೈಡೆ ಟಾಸ್ಕ್‌ಗಳು ನನಗೆ ಯಾವಾಗಲೂ ಇಷ್ಟ. ಚೆನ್ನಗಿರುತ್ತಿದ್ದವು. ಫ್ರೈಡೆ ಮಾಡಲಿಕ್ಕೆ ಹೆಚ್ಚೇನೂ ಇರುತ್ತಿರಲಿಲ್ಲ. ಹಾಗಾಗಿ ಫನ್ ಫ್ರೈಡೆಗಾಗಿ ನಾವೆಲ್ಲ ಕಾಯುತ್ತಿದ್ದೆವು. ಅದೇ ದೊಡ್ಡ ಎಂಟರ್‍ಟೈನ್ಮೆಂಟ್‌. ಯಾವಾಗಲೂ ಒಂದು ಎಂಟರ್‍ಟೈನಿಂಗ್ ಟಾಸ್ಕ್‌ ಆಗಿರುತ್ತಿತ್ತು.

    ನನಗೆ ತುಂಬ ದಿನಗಳವರೆಗೆ ಒಂದು ಫೀಲಿಂಗ್ ಇತ್ತು, ‘ಏನ್ ಗುರು, ನಾನು ಎಷ್ಟೆಲ್ಲ ಟಾಸ್ಕ್ ಗೆದ್ದಿದೀನಿ. ಕಿಚ್ಚನ ಚಪ್ಪಾಳೆ ತಗೊಂಡಿದೀನಿ. ಕ್ಯಾಪ್ಟನ್ ಆಗಿದ್ದೀನಿ. ಆದ್ರೆ ಜಿಯೊ ಟಾಸ್ಕ್ ಗೆದ್ದಿಲ್ಲವಲ್ಲ ಅಂತ. ಆದರೆ ಎರಡು ವಾರದ ಹಿಂದೆ  ಬ್ರೆಡ್ ತಿನ್ನುವ ಟಾಸ್ಕ್ ಬಂತು. ನನಗೋಸ್ಕರವೇ ಮಾಡಿದ ಟಾಸ್ಕ್ ಹಾಗಿತ್ತು ಅದು. ಅದನ್ನು ಗೆದ್ದೆ. ತುಂಬ ಖುಷಿಯಾಯ್ತು.

    ಬಿಗ್‌ಬಾಸ್‌ನಲ್ಲಿ ಮಿಸ್‌ ಮಾಡ್ಕೊಳ್ಳೋದೇನು?

    ಬೆಳಬೆಳಿಗ್ಗೆ ಹಾಡು ಹಾಕಿನಮ್ಮನ್ನು ಎಬ್ಬಿಸೋದನ್ನು ನಾನು ಮಿಸ್ ಮಾಡ್ತೀನಿ. ಬೆಳಿಗ್ಗೆ ಹಾಡು ಕೇಳಿ ಎದ್ದು, ಡಾನ್ಸ್ ಮಾಡಿ, ಕಾಫಿ ಕುಡಿದು, ವರ್ಕೌಟ್ ಮಾಡಿ ಹೋಗಿ ಪಾತ್ರೆ ತೊಳೆಯುವ ದಿನಚರಿಯನ್ನು ನಾನು ತುಂಬ ಮಿಸ್ ಮಾಡ್ಕೋತೀನಿ. 90 ದಿನಗಳ ಕಾಲ ಆ ದಿನಚರಿ ಮಾಡಿ ಸೆಟ್ ಆಗಿಬಿಟ್ಟಿದೆ ನನಗೆ. ಅದನ್ನು ಮಿಸ್ ಮಾಡ್ಕೋತೀನಿ.

     

    ಬಿಗ್‌ಬಾಸ್ ಜರ್ನಿ ತುಂಬ ಅಮೇಜಿಂಗ್ ಆಗಿತ್ತು. ಎರಡೇ ವಾರ ಇರ್ತೀನಿ ಅಂದುಕೊಂಡು ಹೋದವನು ನಾನು. ಆದರೆ ಈ ಹದಿಮೂರು ವಾರದಲ್ಲಿ ಹಲವು ಬಗೆಯ ಸಂದರ್ಭಗಳಲ್ಲಿ ಹಾದೂ ನಾನು ನಾನೇ ಆಗಿ ಇದ್ದೀನಿ. ಹಾಗಾಗಿ ಇನ್ನೂ ಸಾಕಷ್ಟು ಸಾಧನೆ ಮಾಡಬಹುದು ಎಂದು ನನಗೆ ವಿಶ್ವಾಸ ಹುಟ್ಟಿದೆ.  ಬರೀ ತೊಂಬತ್ತು ದಿನಗಳಲ್ಲಿ ಒಂದು ಭಾಷೆಯನ್ನು ತುಂಬ ಚೆನ್ನಾಗಿ ಕಲಿತುಕೊಂಡು ಮಣ್ಣಿನ ಮಗ ಆಗಬಹುದು ಎಂಬುದನ್ನೂ ಬಿಗ್‌ಬಾಸ್ ನನಗೆ ಮನವರಿಕೆ ಮಾಡಿಕೊಟ್ಟಿದೆ.

  • ಮನೆಯಲ್ಲಿ ಫೇಕ್ ಅಂತಿರೋದು ಸಂಗೀತಾ, ಪ್ರತಾಪ್ : ಮೈಕಲ್ ಫಸ್ಟ್ ರಿಯ್ಯಾಕ್ಷನ್

    ಮನೆಯಲ್ಲಿ ಫೇಕ್ ಅಂತಿರೋದು ಸಂಗೀತಾ, ಪ್ರತಾಪ್ : ಮೈಕಲ್ ಫಸ್ಟ್ ರಿಯ್ಯಾಕ್ಷನ್

    ಬಿಗ್‌ಬಾಸ್‌ ಕನ್ನಡ  (Bigg Boss Kannada) ಸೀಸನ್‌ 10ನ ಪ್ರಾರಂಭದ ದಿನ ಈ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಹಲವರ ಹುಬ್ಬುಗಳು ಮೇಲೇರಿದ್ದವು. ಯಾರಿದು ಮೈಕಲ್ ಅಜಯ್ (Michael) ಎಂಬ ಪ್ರಶ್ನೆ ಅವರ ಮನಸಲ್ಲಿ ಎದ್ದಿತ್ತು. ಹಿಂದಿಯ ರಿಯಾಲಿಟಿ ಷೋ ಒಂದರಲ್ಲಿ ಭಾಗವಹಿಸಿರುವ ವಿದೇಶದ ಪ್ರಜೆಯಾಗಿರುವ, ಕನ್ನಡದ ನೆಲದಲ್ಲಿ ಮೂಲಬೇರುಗಳ ಸಂಬಂಧ ಹೊಂದಿರುವ ಮೈಕಲ್‌, ಬಿಗ್‌ಬಾಸ್‌ ಮನೆಯೊಳಗೆ ಅಡಿಯಿಟ್ಟ ಮೇಲೆಯೂ ಅವರ ಬಗ್ಗೆ ಕುತೂಹಲ ತೋರಿದವರು ಕಡಿಮೆಯೇ. ಇವರ ಹೆಸರೇ ಕೇಳಿಲ್ಲ, ಕನ್ನಡವೂ ಬರುವುದಿಲ್ಲ. ಇವರು ಇಲ್ಲಿ ಹೆಚ್ಚು ದಿನ ಉಳಿದುಕೊಳ್ಳುವುದಿಲ್ಲ ಎಂದು ಉದಾಸೀನವಾಗಿ ನೋಡಿದವರೇ ಹೆಚ್ಚು. ಆದರೆ ಅಂಥವರೇ ಅಚ್ಚರಿ ಕಣ್ಣುಗಳಿಂದ, ಮೆಚ್ಚುಗೆಯ ಮನಸ್ಸಿಂದ ನೋಡುವಂತೆ ಮಾಡುವ ಹಾಗೆ ಬೆಳೆದರು, ಬಿಗ್‌ಬಾಸ್ ಮನೆಯಲ್ಲಿ ಬಹುಧೀರ್ಘಕಾಲದವರೆಗೆ, ಫಿನಾಲೆಯ ಕೆಲವೇ ಹೆಜ್ಜೆಗಳಷ್ಟು ದೂರದವರೆಗೆ ಕ್ರಮಿಸಿದರು ಮೈಕಲ್.

    ಬೇರೆಯವರು ಬಿಡಿ, ಸ್ವತಃ ಅವರಿಗೇ ಎರಡು ಮೂರು ವಾರಕ್ಕಿಂತ ಹೆಚ್ಚು ಇಲ್ಲಿರಲಾರೆ ಎಂದು ಅನಿಸಿತ್ತಂತೆ. ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತಿಸುವ ಗುಣ, ಸತ್ಯಕ್ಕೆ, ಪ್ರಾಮಾಣಿಕತೆಗೆ ಅಂಟಿಕೊಂಡಿರುವ ಬದ್ಧತೆ, ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಹೇಳುವ ದಿಟ್ಟ ಸ್ವಭಾವದಿಂದಲೇ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದ್ದ ಮೈಕಲ್ ಅಜಯ್ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಹೊರಬಂದ ಕೂಡಲೇ JioCinemaಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ (Interview) ಅವರು ತಮ್ಮದೇ ಸ್ಟೈಲ್‌ನಲ್ಲಿ ಬಿಗ್‌ಬಾಸ್‌ ಕನ್ನಡದ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.

    ‘ಹಾಯ್, ನಾನು ನಿಮ್ಮ ಮಣ್ಣಿನ ಮಗ. ನಿಮ್ಮ ಕನ್ನಡದ ಕಂದ. ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಮೈಕಲ್ ಅಜಯ್. ತುಂಬ ಮಿಸ್ಸಿಂಗ್ ಫೀಲಿಂಗ್‌ನಲ್ಲಿದ್ದೀನಿ. ಆದರೆ ಈಗ ಹೊರಗಡೆ ಇರುವ ಜೀವನವನ್ನು ಅನುಭವಿಸಲು ಎಕ್ಸೈಟ್ ಆಗಿದ್ದೀನಿ. ನಾನು ಬಿಗ್‌ಬಾಸ್‌ ಮನೆಯೊಳಗೆ ಹೋದಾಗ, ಅಲ್ಲಿನ ವಾತಾವರಣ ನೋಡಿ ಎರಡು ಮೂರು ವಾರ ಇರಬಹುದಷ್ಟೇ ಎಂದುಕೊಂಡಿದ್ದೆ. ಆದರೆ ಹದಿಮೂರು ವಾರ ಉಳಿದೆ. ಈವತ್ತು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲೋ ಒಂದು ಕಡೆ, ಇನ್ನೊಂದೆರಡು ವಾರ ಕಳೆದು ಫೈನಲ್‌ಗೂ ಹೋಗಬಹುದು ಎಂಬ ವಿಶ್ವಾಸವೂ ಇತ್ತು. ಆದರೆ ಬ್ಯಾಡ್‌ಲಕ್.

    ಕನ್ನಡ ಸುಂದರವಾದ ಭಾಷೆ

    ನಾನು ನನ್ನ ಬದುಕಿನಲ್ಲಿ ಕನ್ನಡ ಬಳಸಿದ್ದು ತುಂಬ ಕಡಿಮೆ. ಆದರೆ ಇಲ್ಲಿಗೆ ಬಂದು ಕನ್ನಡ ಎಂಥ ಸುಂದರವಾದ ಭಾಷೆ, ಅದರ ಲಿಪಿ ತುಂಬ ಸರಳ. ನಾನು ಐದಾರು ದಿನಗಳಲ್ಲಿಯೇ ಕನ್ನಡ ಲಿಪಿಗಳನ್ನೆಲ್ಲ ಕಲಿತುಕೊಂಡುಬಿಟ್ಟೆ. ಎಲ್ಲರ ಮೈಕ್‌ನ ನೇಮ್‌ಟ್ಯಾಗ್ ನೋಡಿ ನೋಡಿ ಅಕ್ಷರಗಳನ್ನು ಕಲಿಯುತ್ತಿದ್ದೆ. ಬಿಗ್‌ಬಾಸ್‌ ಎಂಬ ಫಲಕದಲ್ಲಿ ಬ ಮತ್ತು ಗ ಎಲ್ಲ ಗೊತ್ತಾಗುತ್ತಿತ್ತು. ಕನ್ನಡ ತುಂಬ ಸುಂದರವಾದ ಭಾಷೆ ಅಂತ ನನಗನಿಸಿತು. ಕಲಿಯುವುದೂ ಸುಲಭ. ಕರ್ನಾಟಕಕ್ಕೆ ಬೇರೆ ಕಡೆಯಿಂದ ಬರುವವರೆಲ್ಲ ಟ್ರೈ ಮಾಡಿದ್ರೆ ತುಂಬ ಸುಲಭವಾಗಿ ಕನ್ನಡ ಕಲಿಯಬಹುದು.

    ಆರಂಭದಲ್ಲಿಯೇ ಗಟ್ಟಿಯಾಗಿರಬೇಕಿತ್ತು. ಸ್ಟಾರ್ಟಿಂಗ್‌ನಲ್ಲಿ ತುಂಬ ಸ್ಲೋ ಆಗಿದ್ದೆ. ಅದೇ ನನ್ನನ್ನು ಕೊಂಚ ಹಿಂದಕ್ಕೆ ತಳ್ಳಿತು ಅನಿಸುತ್ತದೆ. ಆರಂಭದಿಂದಲೇ ಇನ್ನಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದರೆ ಇನ್ನೂ ತುಸು ಮುಂದಕ್ಕೆ ಹೋಗಬಹುದಿತ್ತು ಅನಿಸುತ್ತದೆ. ಈಗೇನಾದ್ರೂ ಮತ್ತೆ ಪುನಃ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ಮೊದಲ ದಿನದಿಂದಲೇ ಎಲ್ಲರ ಜೊತೆಯಲ್ಲಿ ಬೆರೆಯಲು ಶುರುಮಾಡುತ್ತಿದ್ದೆ.

    ವಿನಯ್ ಜೆನ್ಯೂನ್

    ಮನೆಯಲ್ಲಿ ವಿನಯ್‌ ತುಂಬ ಜೆನ್ಯೂನ್‌ ವ್ಯಕ್ತಿ. ಮೊದಲ ದಿನದಿಂದಲೇ ಅವರೊಂದಿಗೆ ಶುರುವಾದ ಸ್ನೇಹ, ಹೊರಗೆ ಬರುವ ದಿನದವರೆಗೆ ಮುಂದುವರಿದಿತ್ತು. ನಮ್ಮ ಮಧ್ಯ ತುಂಬ ಜಗಳಗಳಾಗಿವೆ. ಆದರೆ ಅವೆಲ್ಲವೂ ಟಾಸ್ಕ್‌ಗಳಿಗಾಗಿ. ಅದರಾಚೆಗೆ ನಮ್ಮ ಮಾತು, ಫ್ರೆಂಡ್‌ಷಿಪ್ ಎಲ್ಲ ಪ್ಯೂರ್ ಆಗಿವೆ. ಹಾಗಾಗಿ ವಿನಯ್ ತುಂಬ ಜೆನ್ಯೂನ್ ಅನಿಸುತ್ತಾರೆ.

     

    ನನ್ನ ಪ್ರಕಾರ ಮನೆಯಲ್ಲಿ ಫೇಕ್ ಆಗಿದ್ದಿದ್ದು ಇಬ್ಬರು. ಒಬ್ಬರು ಸಂಗೀತಾ ಇನ್ನೊಬ್ಬ ಪ್ರತಾಪ್. ಪ್ರತಾಪ್‌ ಹೇಗೆ ಅಂತ ಅರ್ಥನೇ ಆಗಿಲ್ಲ. ಅವನು ಕಂಪ್ಲೀಟ್ ಸಿಂಪತಿ ಕಾರ್ಡ್‌ ಪ್ಲೇ ಮಾಡಿ ಮುಂದೆ ಬಂದಿದಾನೆ. ಸಂಗೀತಾ ಕೂಡ ಬೇಡದಿರುವ ಕಡೆ ತನ್ನ ಅಭಿಪ್ರಾಯಗಳನ್ನು ಇಂಜೆಕ್ಟ್ ಮಾಡಿ, ಕಾರ್ಡ್‌ ಪ್ಲೇ ಮಾಡಿ ಮುಂದೆ ಹೋಗಿದಾಳೆ ಅನಿಸುತ್ತದೆ.

  • ಪ್ರಾಣಿಗಳನ್ನು ತುಂಬಿಕೊಂಡಂತೆ 800 ಜನ ಒಂದೇ ವಿಮಾನದಲ್ಲಿ ಭಾರತಕ್ಕೆ ಬಂದಿಲ್ಲ

    ಪ್ರಾಣಿಗಳನ್ನು ತುಂಬಿಕೊಂಡಂತೆ 800 ಜನ ಒಂದೇ ವಿಮಾನದಲ್ಲಿ ಭಾರತಕ್ಕೆ ಬಂದಿಲ್ಲ

    ನವದೆಹಲಿ: ಅಫ್ಘಾನಿಸ್ತಾನದಿಂದ 800 ಮಂದಿ ವಿಮಾನದ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ ಎಂಬ ಹೆಡ್‍ಲೈನ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೇಕ್ ಫೋಟೋವೊಂದು ಹರಿದಾಡುತ್ತಿದೆ.

    ತಾಲಿಬಾನ್‍ಗಳ ಅಟ್ಟಹಾಸಕ್ಕೆ ನಡುಗಿ ಅಲ್ಲಿನ ಜನ ಜೀವ ಉಳಿದರೆ ಸಾಕು ಎಂದು ಭಾವಿಸಿ ವಿದೇಶಗಳ ವಾಯುಸೇನೆಯ ವಿಮಾನ, ಪ್ರಯಾಣಿಕ ವಿಮಾನ ಏರತೊಡಗಿದ್ದಾರೆ. ಈ ವೇಳೆ 2013ರ ಫೋಟೋಗೆ ಭಾರತಕ್ಕೆ ಜನ ಮರಳುತ್ತಿದ್ದಾರೆ. ವಿಮಾನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರನ್ನು ಪ್ರಾಣಿಗಳಂತೆ ತುಂಬಲಾಗಿದೆ ಎಂದು ಬರೆದು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದು, ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

    ಸತ್ಯ ಏನು?
    ಜನರನ್ನು ರಕ್ಷಣೆ ಮಾಡುತ್ತಿರುವ ದೃಶ್ಯ ಸರಿಯಾಗಿದ್ದರೂ ಇದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳುತ್ತಿರುವ ಫೋಟೋ ಅಲ್ಲ. 2013ರ ಡಿಸೆಂಬರ್ ನಲ್ಲಿ  ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್ ತತ್ತರಿಸಿತ್ತು. ಈ ವೇಳೆ ಅಮೆರಿಕ ವಾಯಸೇನೆಯ ವಿಮಾನದ ಮೂಲಕ 600 ಮಂದಿಯನ್ನು ಸ್ಥಳಾಂತರಿಸಿತ್ತು. ಈ ಫೋಟೋ ಈಗ ವೈರಲ್ ಆಗುತ್ತಿದೆ.

    ಭಾರತ ಮತ್ತು ಮತ್ತು ಅಮೆರಿಕ ಅಫ್ಘಾನಿಸ್ತಾನಕ್ಕೆ ಗ್ಲೋಬ್ ಮಾಸ್ಟರ್ ವಿಮಾನವನ್ನು ಕಳುಹಿಸಿ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆದುಕೊಂಡು ಬರುತ್ತಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

    ವೈರಲ್ ಯಾಕೆ?
    ಸಾಧಾರಣವಾಗಿ ಯಾವುದಾದರು ಒಂದು ಟ್ರೆಂಡ್ ಸೃಷ್ಟಿಸುವ ಘಟನೆ ನಡೆದರೆ ಆ ಘಟನೆಗೆ ಪೂರಕವಾಗುವ ಫೋಟೋ, ವಿಡಿಯೋಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಈಗ ಅಫ್ಘಾನಿಸ್ತಾನ ವಿಚಾರ ವಿಶ್ವದಲ್ಲೇ ಟ್ರೆಂಡ್ ಆಗುತ್ತಿರುವ ಕಾರಣ ಹಲವು ವಿಡಿಯೋ, ಫೋಟೋಗಳು ಬರುತ್ತಿವೆ. ಇದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎನ್ನುವುದು ಕೂಡಲೇ ತಿಳಿಯುವುದಿಲ್ಲ. ಫೋಟೋ, ವಿಡಿಯೋ ವೈರಲ್ ಆದ ಬಳಿಕ ಮೂಲ ಯಾವುದು ಎನ್ನುವುದು ತಿಳಿಯುತ್ತದೆ. ಆದರೆ ಅಷ್ಟು ಹೊತ್ತಿಗೆ ಫೋಟೋ, ವಿಡಿಯೋ ವೈರಲ್ ಆಗಿರುತ್ತದೆ.

  • ಪುನೀತ್ ನಕಲಿ ಖಾತೆ ತೆಗೆದಿದ್ದು ಯಾಕೆ?- ಸ್ಪಷ್ಟನೆ ನೀಡಿದ ಅಪ್ಪು ಅಭಿಮಾನಿ

    ಪುನೀತ್ ನಕಲಿ ಖಾತೆ ತೆಗೆದಿದ್ದು ಯಾಕೆ?- ಸ್ಪಷ್ಟನೆ ನೀಡಿದ ಅಪ್ಪು ಅಭಿಮಾನಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ನಕಲಿ ಖಾತೆ ತೆಗೆದಿದ್ದು ಯಾಕೆ ಎಂಬುದರ ಬಗ್ಗೆ @PuneethOfficial ಖಾತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.

    “ಹಾಯ್ ನಮಸ್ಕಾರ ಎಲ್ಲರಿಗೂ.. ನಾನು ಮೊದಲಿಗೆ ಅಪ್ಪು ಸರ್ ಗೆ ಕ್ಷಮೆ ಕೇಳುತ್ತೇನೆ. ನಂತರ ಅಪ್ಪು ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಈ ಫೇಕ್ ಖಾತೆ ತೆಗೆದಿರುವ ಉದ್ದೇಶ ಇಷ್ಟೇ, ಅಪ್ಪು ಸರ್ ಈ ತರಹದ ತಮ್ಮ ಹೆಸರಿನಲ್ಲಿ ಫೇಕ್ ಖಾತೆ ನೋಡಿಯಾದ್ರು ಟ್ವಿಟ್ಟರ್ ಗೆ ಬರಬಹುದೇನೋ ಅಂತಾ ಅಷ್ಟೇ. ಕೆಟ್ಟ ಉದ್ದೇಶ ಏನು ಇಲ್ಲ” ಎಂದು @PuneethOfficial ಖಾತೆಯಲ್ಲಿ ಬರೆಯಲಾಗಿದೆ.

    ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿರುವ ಮಾಹಿತಿಯನ್ನು ಜಗ್ಗೇಶ್ ರಿವೀಲ್ ಮಾಡಿ, ಈ ಖಾತೆ ವಿರುದ್ಧ ಕಿಡಿಕಾರಿದ್ದರು. ಅಚ್ಚರಿ ಅಂದರೆ ಸಾಕಷ್ಟು ನಟ ನಟಿಯರು ಪುನೀತ್ ಅಫೀಶಿಯಲ್ ಆಕೌಂಟ್ ಅಂತಾ ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದರು. ಸುಮಾರು 10 ಸಾವಿರಕ್ಕೂ ಜನ ಈ ಜನ ಅಪ್ಪು ಅಫೀಶಿಯಲ್ ಅಕೌಂಟ್ ಎಂದು ತಿಳಿದು ಫಾಲೋ ಮಾಡುತ್ತಿದ್ದರು.

    https://twitter.com/PuneethOfficial/status/1014443022749257728

    “ಸೆಲಿಬ್ರಿಟಿಗಳ ಬದುಕು ಎಷ್ಟು ಕಷ್ಟ ಅನ್ನೋದು ಇದಕ್ಕೆ. ಕಷ್ಟಪಟ್ಟು ನೋವು ಅಪಮಾನ ಸಹಿಸಿ ಬೆಳೆದ ಮೇಲೆ ಇಂತಹ ಸಮಯ ಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು. ಸ್ವತಃ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ. ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲ. ಇದಕ್ಕಿಂತ ಮೈಬಗ್ಗಿಸಿ ದುಡಿದು ತಿನ್ನಿ ಸ್ವಾಭಿಮಾನದಿಂದ” ಎಂದು ಬರೆದು ಜಗ್ಗೇಶ್ ಟ್ವೀಟ್ ಮಾಡಿದ್ದರು.

    ಸದ್ಯ ನಕಲಿ ಖಾತೆ ಬಗ್ಗೆ ಪುನೀತ್ ರಾಜ್‍ಕುಮಾರ್ ಆಪ್ತ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅಪ್ಪು ಟ್ವಿಟ್ಟರ್ ನಲ್ಲಿ ಯಾವುದೇ ಅಧಿಕೃತ ಖಾತೆಯನ್ನು ಹೊಂದಿಲ್ಲ. ಕೇವಲ ಫೇಸ್ ಬುಕ್‍ನಲ್ಲಿ ಮಾತ್ರ ಅಧಿಕೃತ ಖಾತೆಯನ್ನು ಹೊಂದಿದ್ದಾರೆ. ಅತೀ ಶೀಘ್ರದಲ್ಲೇ ಪುನೀತ್ ರಾಜ್‍ಕುಮಾರ್ ಟ್ವಿಟ್ಟರ್ ನಲ್ಲಿ ಖಾತೆ ತೆರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

  • ಕೈ ಶೇಕ್ ಮಾಡಿದ್ರೆ ಬರುತ್ತೆ ಏಡ್ಸ್!

    ಕೈ ಶೇಕ್ ಮಾಡಿದ್ರೆ ಬರುತ್ತೆ ಏಡ್ಸ್!

    ನವದೆಹಲಿ: ಪಂಜಾಬ್ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಪಿಎಸ್‍ಎಸಿಎಸ್) ಏಡ್ಸ್ ತಡೆಗಟ್ಟಲು ತಪ್ಪು ಮಾಹಿತಿಯುಳ್ಳ ಕರಪತ್ರವನ್ನು ಹಂಚಿ ಎಡವಟ್ಟು ಮಾಡಿಕೊಂಡಿದೆ.

    ಏಡ್ಸ್ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕರಪತ್ರ ಮಾಡಿದ್ದೇವೆ ಎಂದು ಪ್ರಕಟಿಸಿರುವ ಸಂಸ್ಥೆ. ಮೊದಲಿಗೆ ಏಡ್ಸ್ ಬಂದಿರೋ ವ್ಯಕ್ತಿಗಳಿಗೆ ಶೇಕ್ ಹ್ಯಾಂಡ್ ಕೊಡಬೇಡಿ, ಅವರಿಂದಲೂ ಶೇಕ್ ಹ್ಯಾಂಡ್ ತೆಗೆದುಕೊಳ್ಳಬೇಡಿ ಎಂಬ ಸೂಚನೆಗಳನ್ನು ನೀಡಿದೆ. ಇಷ್ಟೇ ಅಲ್ಲದೇ ಇನ್ನು ಹಲವು ರೀತಿಯಲ್ಲಿ ಕಾಯಿಲೆ ಹರಡುವುದಾಗಿ ಹಾಗೂ ಸಂಕ್ರಾಮಿಕ ರೋಗವೆಂದು ತಪ್ಪು ಮಾಹಿತಿ ನೀಡಿದೆ.

    ಕರಪತ್ರದಲ್ಲಿ ಏನಿದೆ?
    1. ಏಡ್ಸ್ ರೋಗಿಗಳ ಜೊತೆ ಶೇಕ್ ಹ್ಯಾಂಡ್ ಮಾಡಿದ್ರೆ ನಿಮಗೂ ರೋಗ ಬರುತ್ತದೆ.
    2. ರೋಗಿಗಳು ಬಳಸಿದ ಊಟದ ಪ್ಲೇಟ್, ಚೇರ್, ಮೊಬೈಲ್ ಫೋನ್, ಕಂಪ್ಯೂಟರ್‍ಯಿಂದ ಕಾಯಿಲೆ ಬರುತ್ತದೆ.
    3. ಏಡ್ಸ್ ರೋಗಿಗಳು ಬಳಸಿದ ಶೌಚಾಲಯವನ್ನು ಬಳಸಿದರೂ ನಿಮಗೆ ರೋಗ ಬರುತ್ತದೆ.