Tag: ಫೆಬ್ರವರಿ 14

  • ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!

    ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!

    ರೆಯ, ಹುಮ್ಮಸ್ಸು, ಆಕರ್ಷಣೆ, ಪ್ರೀತಿ-ಪ್ರೇಮ.. ಈ ಪ್ರಾಯವೇ ಹಾಗೆ. ಮನಸ್ಸು ಹುಚ್ಚಾಟದ ಕೋತಿಯಂತೆ ಆಡುತ್ತೆ. ಹಿಡಿತಕ್ಕೆ ಸಿಗದಷ್ಟು ನುಣುಪು. ಸರಿ-ತಪ್ಪುಗಳ ಗೊಡವೆಗೇ ಹೋಗದಷ್ಟು ಸ್ಪೀಡು. ತಾನು ಮಾಡಿದ್ದೆಲ್ಲವೂ ಸರಿ ಅನ್ನೋ ಪಾಸಿಟಿವ್‌ ಮೈಂಡ್‌ ಕಾಣೋದು ಈ ಹಂತದಲ್ಲೇ. ಗೆಳೆಯ-ಗೆಳತಿಯರೊಟ್ಟಿಗೆ ಕಳೆಯುವ ಸಮಯ. ಅದೊಂದು ಬೆಚ್ಚನೆಯ ಅನುಭವ. ‘ನೋಡೋ ಮಗಾ.. ಆ ಹುಡುಗಿ ಎಷ್ಟು ಚೆನ್ನಾಗಿದ್ದಾಳೆ’ ಅನ್ನೋದು. ಹುಡುಗಿಯರೂ ಅಷ್ಟೆ, ‘ನೋಡೇ.. ಅವ್ನು ಎಷ್ಟು ಚಂದ ಅಲ್ವಾ’?.. ಇಷ್ಟಾದ್ರೆ ಸಾಕು. ಅದೇನೊ ಹೇಳ್ತಾರಲ್ಲ, ‘Love At First Sight’ ಅಂತ.

    ಪ್ರಾಯದ ಹುಡುಗ/ಹುಡುಗಿಯರ ಗುಣವೇ ಭಿನ್ನ. ಪ್ರೀತಿಯಲ್ಲಿ ಬೀಳುವವರೆಗೆ ಒದ್ದಾಡುತ್ತಾರೆ. ಒಮ್ಮೆ ಲವ್ವಲ್ಲಿ ಬಿದ್ರೆ ಸಾಕು, ತಾವಿರುವ ಪ್ರಪಂಚವನ್ನೇ ಮರೆತಂತೆ ಪ್ರೇಮಲೋಕದಲ್ಲಿ ತೇಲುತ್ತಾರೆ. ತಮ್ಮ ಯಾವುದೇ ಕೆಲಸದಲ್ಲಿ ಪ್ರೇಮಿಯನ್ನು ನೆನಪಿಸಿಕೊಳ್ಳದೇ ಇರಲಾರದಷ್ಟು ಪ್ರೀತಿ ಇಟ್ಟಿರುತ್ತಾರೆ. ಪ್ರೀತಿಯಲ್ಲಿ ಬಿದ್ದಾಗ ಮೊದಮೊದಲು ಚಾಟಿಂಗ್‌, ಆಮೇಲೆ ಡೇಟಿಂಗ್‌ನಲ್ಲಿ ಪರಸ್ಪರರು ಪ್ರೀತಿ ಹಂಚಿಕೊಂಡು ಸಾಗೋದು. ಇದನ್ನೂ ಓದಿ: 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?

    ಮನಸ್ಸಿಗೆ ಒಪ್ಪುವ ಗೆಳೆಯ/ಗೆಳತಿ ಸಿಕ್ಕರೆ ಸಾಕು. ಜಗತ್ತಿನ ಪರಿವೇ ಇಲ್ಲವೆಂಬಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಕೈ ಕೈ ಹಿಡಿದು ಸುತ್ತಾಡುವುದು, ಕ್ಯಾಂಟೀನ್‌ನಲ್ಲಿ ಕುಳಿತು ಒಬ್ಬರಿಗೊಬ್ಬರು ಕೈತುತ್ತು ತಿನ್ನಿಸುವುದು, ಹೋದಲ್ಲಿ ಬಂದಲ್ಲಿ ಕೇರ್‌ ಟೇಕರ್‌ರಂತೆ ಜೊತೆಯಾಗಿ ಇರುವುದು. ಈ ಸಾಂಗತ್ಯ ಸದಾ ಬೇಕು ಅನ್ನೋ ಹಂಬಲ.

    ಈ ಪ್ರೀತಿ ಅನ್ನೋದೇ ಹಾಗೆ. ಸಮರ್ಪಣಾ ಭಾವದ ಸಂಕೇತ. ಅವನಿಗಾಗಿ/ಅವಳಿಗಾಗಿ ಏನು ಬೇಕಾದರೂ ಮಾಡುತ್ತೀನಿ ಅನ್ನೋ ಹುಚ್ಚು ಹಠ. ಮನೆಯವರಿಗೆ ಸುಳ್ಳು ಹೇಳುವ ಬುದ್ದಿ ಬರೋದು ಈ ಹಂತದಲ್ಲೇ. ಲವ್ವರ್‌ ಭೇಟಿಯಾಗಬೇಕು ಎನಿಸಿದರೆ, ‘ಅಮ್ಮ ಇವತ್ತು ನಮಗೆ ಸ್ಪೆಷಲ್‌ ಕ್ಲಾಸ್‌ ಇದೆ’ ಅಂತ ಸುಳ್ಳು ಹೇಳೋದು. ಖರ್ಚಿಗೆ ಪಾಕೆಟ್‌ ಮನಿ ಬೇಕು ಅಂದ್ರೆ, ‘ಅಪ್ಪ ನಮ್ಮ ಕಾಲೇಜಲ್ಲಿ ಫೀಸ್‌ ಕಲೆಕ್ಟ್‌ ಮಾಡ್ತಿದ್ದಾರೆ’ ಅಂತ ಹೇಳಿ ಹಣ ಪಡೆದು ಎಂಜಾಯ್‌ ಮಾಡುವುದು. ಇದನ್ನೂ ಓದಿ: ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!

    ಈಗಿನದ್ದೆಲ್ಲಾ ಫೆಬ್ರವರಿ 14thಗೆ ಸೀಮಿತವಾದ ಪ್ರೀತಿಯಲ್ಲ, 24*7 ಪ್ರೀತಿ. ಹೊರಗಡೆ ಪ್ರೇಮಿ ಜೊತೆ ಸಮಯ ಕಳೆಯುವುದು. ಮನೆಗೆ ಹೋದರು ಕೂಡ ಮೊಬೈಲ್‌ನಲ್ಲಿ ಚಾಟಿಂಗ್‌. ಫೋನ್‌ ಕಾಲ್‌, ವೀಡಿಯೋ ಕಾಲ್‌ಗೆ ಲೆಕ್ಕವಿಲ್ಲ. ಒಟ್ಟಾರೆ ಬಿಡುವಿನ ಸಮಯವೆಲ್ಲ ಲವ್ವರ್‌ಗೆ ಮೀಸಲು. ಅರೆಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಪ್ತತೆ.

    ಸಮಯ ಸಿಕ್ಕಾಗ ಲವ್ವರ್‌ ಜೊತೆ ಜಾಲಿ ರೈಡ್‌, ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆ. ಫುಟ್‌ಪಾತ್‌ನಲ್ಲಿ ಪಾನೀಪೂರಿ, ಐಸ್‌ಕ್ರೀಮ್‌ ಸವಿಯೋದು. ಪಾರ್ಕ್‌ನಲ್ಲಿ ಸುತ್ತಾಡೋದು. ನೆನಪಿನ ಪುಟದಲ್ಲಿ ಉಳಿಯುವಂತೆ ಪ್ರೇಮಿ ಜೊತೆ ಸಮಯ ಕಳೆಯೋದು.

    ಪ್ರೀತಿ ಅಂದ್ರೆ ಅದಷ್ಟೇ ಅಲ್ಲ. ಸುಖ-ದುಃಖವನ್ನು ಪ್ರೇಮಿಯೊಂದಿಗೆ ಹಂಚಿಕೊಳ್ಳಬೇಕೆನ್ನುವ ಭಾವವನ್ನು ಕಲಿಸುತ್ತದೆ. ಅದೇನೋ, ಮನಸ್ಸಿಗೆ ತುಂಬಾ ಖುಷಿಯಾದಾಗ ಅವನೊಂದಿಗೆ/ಅವಳೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ದುಃಖವಾದರೆ, ಪ್ರೇಮಿಯೊಂದಿಗೆ ಹೇಳಿಕೊಂಡಾಗಲೇ ಒಂದಷ್ಟು ಸಮಾಧಾನ. ನನ್ನ ಜೊತೆಯಲ್ಲಿ ಒಬ್ಬರು ಇದ್ದಾರೆ ಅನ್ನೋ ಭಾವ ಮೂಡಿಸುತ್ತದೆ. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

    ಸದಾ ಪ್ರೀತಿಯ ಗುಂಗಲ್ಲಿ ಇರೋರಿಗೆ ವಿಶೇಷ ದಿನ ಎಂದೇನಿಲ್ಲ. ಮನಸ್ಸಿನ ಒಡೆಯ/ಒಡತಿ ಜೊತೆ ಕಳೆಯುವ ಪ್ರತಿ ಕ್ಷಣವೂ ಅವರಿಗೆ ಪ್ರೇಮಿಗಳ ದಿನವೇ.

  • ಫೆ.14 ಗೋವುಗಳನ್ನು ಅಪ್ಪಿಕೊಳ್ಳುವ ದಿನ ರದ್ದು

    ಫೆ.14 ಗೋವುಗಳನ್ನು ಅಪ್ಪಿಕೊಳ್ಳುವ ದಿನ ರದ್ದು

    ನವದೆಹಲಿ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (Animal Welfare Board) ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು (Valentine’s Day) ಆಚರಿಸುವ ಬದಲು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ (Cow Hug Day) ಆಚರಿಸಲು ಕರೆ ನೀಡಿತ್ತು. ಆದರೆ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಈ ನಿರ್ಧಾರವನ್ನು ಮಂಡಳಿ ಹಿಂಪಡೆದಿದೆ.

    ಫೆಬ್ರವರಿ 14ರಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ದಿನವನ್ನು ಭಾರತದಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕೆಲ ದಿನಗಳ ಹಿಂದೆ ಕರೆ ನೀಡಿತ್ತು. ಹಸುಗಳನ್ನು ಅಪ್ಪಿಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ, ಆದ್ದರಿಂದ ಪ್ರೇಮಿಗಳ ದಿನದಂದು ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ತಿಳಿಸಿತ್ತು.

    ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಪ್ರಧಾನಿಗೆ ಪವಿತ್ರ ಹಸು ಎಂದು ಹೇಳಿ ಕಿಡಿಕಾರಿತ್ತು. ಇದನ್ನೂ ಓದಿ: ಹರಿಯಾಣದ ವೈದ್ಯರಿಗೆ ಡ್ರೆಸ್ ಕೋಡ್ – ಶಾರ್ಟ್ಸ್, ಜೀನ್ಸ್, ಸ್ಕರ್ಟ್, ಮೇಕಪ್ ಬ್ಯಾನ್

    ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯ ಟಿಎಂಸಿಯ ಸಂತನು ಸೇನ್, ಮುಖ್ಯವಾಹಿನಿಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಹಸುವನ್ನಪ್ಪಿಕೊಳ್ಳುವ ದಿನಕ್ಕೆ ಕರೆ ನೀಡಲಾಗಿದೆ. ಇದು ಹುಸಿ ಹಿಂದುತ್ವ ಹಾಗೂ ಹುಸಿ ದೇಶಭಕ್ತಿಯಾಗಿದೆ ಎಂದು ಛೇಡಿಸಿದ್ದರು.

    ನಾನು ರೈತ ಸಮುದಾಯದಿಂದ ಬಂದವನು, ಕೇವಲ ಒಂದು ದಿನವಲ್ಲ, ನಾನು ಪ್ರತಿ ದಿನ ನನ್ನ ಹಸುವನ್ನು ಅಪ್ಪಿಕೊಳ್ಳುತ್ತೇನೆ. ಇದು ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳ ಬಗೆಗಿನ ಗಮನವನ್ನು ಬೇರೆಡೆಗೆ ತಿರುಗಿಸಲು ಮಾಡಿರುವ ಷಡ್ಯಂತ್ರವಾಗಿದೆ ಎಂದು ಕಾಂಗ್ರೆಸ್‌ನ ರಜನಿ ಪಾಟೀಲ್ ಕಿಡಿಕಾರಿದ್ದರು. ಇದನ್ನೂ ಓದಿ: 2022ರ ಬಜೆಟ್ ಓದಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಗೆಹ್ಲೋಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ.14 – ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ

    ಫೆ.14 – ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ

    ನವದೆಹಲಿ: ಫೆಬ್ರವರಿ 14 ದಿನಾಂಕ ಹೇಳಿದ ತಕ್ಷಣ ಅದು ಪ್ರೇಮಿಗಳ ದಿನ (Valentine’s Day) ಎಂಬುದು ಪ್ರತಿಯೊಬ್ಬರಿಗೂ ನೆನಪಾಗುತ್ತದೆ. ಈ ನಡುವೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (Animal Welfare Board) ಒಂದು ಹೊಸ ನೋಟಿಸ್ ಅನ್ನು ಬಿಡುಗಡೆ ಮಾಡಿದೆ. ಈ ದಿನ ದನಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ (Cow Hug Day) ಆಚರಿಸಿ ಎಂದು ಕರೆ ನೀಡಿದೆ.

    ಹೌದು, ಫೆಬ್ರವರಿ 14ರಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಿದರೆ, ಭಾರತದಲ್ಲಿ ದನವನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ಮಂಡಳಿ ಕರೆ ನೀಡಿದೆ. ಈ ಮೂಲಕ ಹಸುಗಳನ್ನು ಹೊಂದುವುದರಿಂದಾಗುವ ಅನುಕೂಲ, ಅದು ರಾಷ್ಟ್ರದ ಆರ್ಥಿಕತೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ತಿಳಿಸಲು ಮುಂದಾಗಿದೆ.

     

    ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ಎಲ್ಲರಿಗೂ ತಿಳಿದಿದೆ. ಇವು ಪಶು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ ಮಾತ್ರವಲ್ಲದೇ ನಮ್ಮ ಜೀವನವನ್ನು ಉಳಿಸಿಕೊಳ್ಳುತ್ತದೆ. ತಾಯಿಯಂತೆ ಪೋಷಿಸುವ ಸ್ವಭಾವ ಹೊಂದಿರುವ ಇವುಗಳನ್ನು ‘ಕಾಮಧೇನು’ ಹಾಗೂ ‘ಗೋಮಾತೆ’ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಹೊಲದಲ್ಲಿ ಟ್ರ್ಯಾಕ್ಟರ್‌ ಓಡಿಸಿದ ಧೋನಿ

    ಈ ಬಗ್ಗೆ ವಿವರಿಸಿರುವ ಪ್ರಾಣಿ ಕಲ್ಯಾಣ ಮಂಡಳಿ, ಈ ನಮ್ಮ ಸಂಪ್ರದಾಯಗಳ ಅಳಿವಿಗೆ ಪಾಶ್ಚಿಮಾತ್ಯ ಸಂಸ್ಕೃತಿಯೇ ಕಾರಣ. ಇದಕ್ಕಾಗಿ ಭಾವನಾತ್ಮಕ ಶ್ರೀಮಂತಿಕೆ, ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಹೆಚ್ಚಿಸಲು ಜನರು ಹಸುಗಳನ್ನು ತಬ್ಬಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದಿದೆ.

    ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯು ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆತುಬಿಡುವಂತೆ ಮಾಡಿದೆ. ಹೀಗಾಗಿ ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ಅನ್ನು ಹಸುವನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಬಹುದು. ಇದರಿಂದ ಸಂತೋಷ ಮತ್ತು ಧನಾತ್ಮಕ ಶಕ್ತಿ ತುಂಬಿದ ಜೀವನವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಪ್ರಾಣಿ ಕಲ್ಯಾಣ ಮಂಡಳಿ ತನ್ನ ನೋಟಿಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಸಿದ್-ಕಿಯಾರಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k