Tag: ಫೆಬ್ರವರಿ

  • ಫೆಬ್ರವರಿಯಲ್ಲಿ ಸುದೀಪ್ ನಟನೆಯ ಮ್ಯಾಕ್ಸ್ ರಿಲೀಸ್

    ಫೆಬ್ರವರಿಯಲ್ಲಿ ಸುದೀಪ್ ನಟನೆಯ ಮ್ಯಾಕ್ಸ್ ರಿಲೀಸ್

    ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ (Max) ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಹಾಗಾಗಿ ಫೆಬ್ರವರಿಯಲ್ಲಿ (February) ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿನಿಮಾ ತಂಡವು ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಫೆಬ್ರವರಿಗೆ ಮ್ಯಾಕ್ಸ್ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು ಅವರೇ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಾಗಿರುವುದರಿಂದ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಸಿನಿಮಾದ ಶೂಟಿಂಗ್ ಮುಗಿಸಲಿದ್ದಾರಂತೆ.

    ಮುಂದಿನ ಸಿನಿಮಾ ನಿರ್ದೇಶನ?

    ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಮಾಣಿಕ್ಯ’ ಬಿಡುಗಡೆಯಾಗಿ 10 ವರ್ಷಗಳ ನಂತರ ಸುದೀಪ್ ‘ಕೆಕೆ’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.

    ಸುದೀಪ್ ಅವರ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರು ನಿರ್ದೇಶನಕ್ಕೆ ಮರಳಿರುವ ವಿಷಯ ಅವರ ಅಭಿಮಾನಿಗಳ ಸಂತಸವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಚಿತ್ರಕ್ಕೆ ‘God Forgives, I don’t – King Kichcha’ ಎಂಬ ಅಡಿಬರಹವಿದ್ದು, ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

     

    ‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ನಿರ್ದೇಶಕರಾದ ಸುದೀಪ್, ಇದುವರೆಗೂ ಆರು ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ‘ಕೆಕೆ’ ಅವರ ನಿರ್ದೇಶನದ ಏಳನೇ ಚಿತ್ರವಾಗಿದೆ. ಹಾಗೆಯೇ, ಇದು ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರವಾಗಿದೆ . ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಪ್ರಾರಂಭವಾದ ಕೆ ಆರ್ ಜಿ ಸ್ಟುಡಿಯೋಸ್ ಚಿತ್ರ ಪಯಣ, ಸತತವಾಗಿ ಮುಂದುವರೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹಲವು ಗುಣಮಟ್ಟದ ಚಿತ್ರಗಳು ಬಿಡುಗಡೆಯಾಗಲಿಕ್ಕೆ ಸಜ್ಜಾಗಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    ನವದೆಹಲಿ: ದೇಶದ ಹಲವು ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಅನೇಕ ಹಬ್ಬದ ಸಂದರ್ಭಗಳು ಮತ್ತು ವಾರಾಂತ್ಯದ ರಜೆಗಳ ಕಾರಣ ಫೆಬ್ರವರಿ 2022 ರಲ್ಲಿ ಬ್ಯಾಂಕುಗಳು ಒಟ್ಟು 12 ದಿನಗಳವರೆಗೆ ಮುಚ್ಚಲ್ಪಡುತ್ತಿವೆ.

    (ಆರ್‌ಬಿಐ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿಯ ರಜಾದಿನಗಳ ಪಟ್ಟಿಯು ದೇಶದ ವಿವಿಧ ರಾಜ್ಯಗಳಲ್ಲಿ ಆಯ್ದ ದಿನಗಳಂದು ಬ್ಯಾಂಕುಗಳು ಮುಚ್ಚಲ್ಪಡುತ್ತಿವೆ ಎಂದು ಸೂಚಿಸಿದೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

    ಯಥಾ ಪ್ರಕಾರ ದೇಶಾದ್ಯಂತ ಬ್ಯಾಂಕುಗಳು ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ. ಇದಲ್ಲದೆ, ಬಸಂತ್ ಪಂಚಮಿ ಮತ್ತು ಗುರು ರವಿದಾಸ್ ಜಯಂತಿಯಂತಹ ಸಂದರ್ಭಗಳಲ್ಲಿ, ದೇಶದ ಅನೇಕ ಭಾಗಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

    ಸ್ಥಳೀಯ ಹಬ್ಬಗಳ ಸಂದರ್ಭಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ (ಆರ್‌ಬಿಐ) ಬ್ಯಾಂಕುಗಳು ಮಾತ್ರ ಮುಚ್ಚಲ್ಪಡುತ್ತವೆ. ಈ ಸಂದರ್ಭಗಳಲ್ಲಿ ದೇಶದ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುವುದಿಲ್ಲ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

    ಉದಾಹರಣೆಗೆ, ಫೆಬ್ರವರಿ 2 ರಂದು, ಸೋನಮ್ ಲೊಚ್ಚರ್ ಸಂದರ್ಭದ ಕಾರಣ ಗ್ಯಾಂಗ್‍ಟಾಕ್‍ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅದೇ ರೀತಿ, ಆಯ್ದ ರಾಜ್ಯಗಳಲ್ಲಿನ ಬ್ಯಾಂಕ್‍ಗಳು 5 ದಿನಗಳವರೆಗೆ ಮಾತ್ರ ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿನ ಬ್ಯಾಂಕುಗಳು ಇತರ ದಿನಗಳಲ್ಲಿ ಮುಚ್ಚಲ್ಪಡುತ್ತವೆ.

    ಯಾವ ದಿನ ಏನು?
    ಫೆಬ್ರವರಿ 2 – ಸೋನಮ್ ಲೋಚಾರ್ (ಗ್ಯಾಂಗ್ಟಾಕ್)
    ಫೆಬ್ರವರಿ 5 – ಸರಸ್ವತಿ ಪೂಜೆ/ ಶ್ರೀ ಪಂಚಮಿ/ಶ್ರೀ ಪಂಚಮಿ ಬಸಂತ್ ಪಂಚಮಿ (ಅಗರ್ತಲಾ, ಭುವನೇಶ್ವರ್, ಕೋಲ್ಕತ್ತಾ)
    ಫೆಬ್ರವರಿ 6 – ಮೊದಲ ಭಾನುವಾರ
    ಫೆಬ್ರವರಿ 12 – ಎರಡನೇ ಶನಿವಾರ
    ಫೆಬ್ರವರಿ 13 – ಎರಡನೇ ಭಾನುವಾರ
    ಫೆಬ್ರವರಿ 15 – ಮೊಹಮ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಾಗೈ-ನಿ (ಇಂಫಾಲ್, ಕಾನ್ಪುರ್, ಲಕ್ನೋ)

    ಫೆಬ್ರವರಿ 16 – ಗುರು ರವಿದಾಸ್ ಜಯಂತಿ (ಚಂಡೀಗಢ)
    ಫೆಬ್ರವರಿ 18 – ಡೋಲ್ಜಾತ್ರಾ (ಕೋಲ್ಕತ್ತಾ)
    ಫೆಬ್ರವರಿ 19 – ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೇಲಾಪುರ, ಮುಂಬೈ, ನಾಗ್ಪುರ)
    ಫೆಬ್ರವರಿ 20 – ಮೂರನೇ ಭಾನುವಾರ
    ಫೆಬ್ರವರಿ 26 – ತಿಂಗಳ ನಾಲ್ಕನೇ ಶನಿವಾರ
    ಫೆಬ್ರವರಿ 27 – ನಾಲ್ಕನೇ ಭಾನುವಾರ