Tag: ಫೂಡ್ ಆರ್ಡರ್

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ವೈದ್ಯಾಧಿಕಾರಿಗಳಿಂದ ವಸಂತನಗರ ಡರ್ಟಿ ಕಿಚನ್ ಮೇಲೆ ದಾಳಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ವೈದ್ಯಾಧಿಕಾರಿಗಳಿಂದ ವಸಂತನಗರ ಡರ್ಟಿ ಕಿಚನ್ ಮೇಲೆ ದಾಳಿ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆನ್‍ಲೈನ್ ಫುಡ್ ಆರ್ಡರ್ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿತ್ತು. ಈ ಡರ್ಟಿ ಕಿಚನ್‍ಗಳ ಬಗ್ಗೆ ಇಂದು ಬೆಳಗ್ಗಿನಿಂದಲೇ ವಿಸ್ತೃತವಾದ ವರದಿ ಕೂಡ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾದ ಬೆನ್ನಲ್ಲೇ ವಸಂತನಗರದ ವೈದ್ಯಾಧಿಕಾರಿಗಳು ಎಚ್ಚೆತ್ತು ದಾಳಿ ಮಾಡಿದ್ದಾರೆ.

    ಬೆಂಗಳೂರಿನ ವಸಂತನಗರ ತಡ್ಕವಾಲಾ, ಬನ್ನೆರುಗಟ್ಟದ ಶುದ್ಧ್ ದೇಸಿ ಖಾನ, ಲೆಟ್ ನೈಟ್ ಕಿಚನ್‍ಗಳಿಂದ ಅರ್ಧ ಬೆಂಗಳೂರಿಗೆ ಫುಡ್ ಡೆಲಿವರಿ ಆಗುತ್ತಿತ್ತು. ಆದರೆ ಇಲ್ಲಿ ಸ್ವಚ್ಛತೆ ಅನ್ನೋದೇ ಇರಲಿಲ್ಲ. ಅದರಲ್ಲೂ ವಸಂತನಗರ ತಡ್ಕವಾಲಾ ಕಿಚನ್‍ನಲ್ಲಿ ಟಾಯ್ಲೆಟ್ ರೂಮಿನಲ್ಲಿ ಕಡಾಯಿ ಇಟ್ಟುಕೊಂಡು ಅಡುಗೆ ಮಾಡಲಾಗುತ್ತಿತ್ತು. ಇದೀಗ ಈ ಡರ್ಟಿ ಕಿಚನ್‍ನ ಮೇಲೆ ಪಾಲಿಕೆಯ ವೈದ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

    ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ರೇಡ್ ಮಾಡಿ ವಸಂತನಗರದ ತಡ್ಕವಾಲಾ ಡರ್ಟಿ ಕಿಚನ್‍ಗೆ ಶಿವಾಜಿನಗರದ ಆರೋಗ್ಯ ವೈದ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ವಸಂತನಗರ ಹೆಲ್ತ್ ಇನ್ಸ್ ಪೆಕ್ಟರ್ ರೇಣುಕಾಂಬ, ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಸಿಬ್ಬಂದಿ ಕೂಡ ಇದ್ದರು.

    ದಾಳಿ ವೇಳೆ ಕಿಚನ್‍ನಲ್ಲಿ ಸಿಕ್ಕಿದ ಪ್ಲಾಸ್ಟಿಕ್ ಹಾಗೂ ಕೊಳೆತ ವಸ್ತುಗಳು, ಅವಧಿ ಮುಗಿದ ಚಿಲ್ಲಿ, ಟೊಮೆಟೋ ಸಾಸ್ ಮೊದಲಾದವುಗಳನ್ನು ವೈದ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವೈದ್ಯಾಧಿಕಾರಿಗಳ ದಾಳಿಯಿಂದ ಸಿಬ್ಬಂದಿ ಹೆದರಿದ್ದು, ಈ ಬಗ್ಗೆ ಮಾಹಿತಿ ತಿಳಿದರೂ ಕಿಚನ್ ಮಾಲೀಕ ಮಾತ್ರ ಸ್ಥಳಕ್ಕೆ ಬಂದಿಲ್ಲ.