Tag: ಫುಡ್ ಫೆಸ್ಟ್

  • ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ನ್ನೇನು ಕೆಲವೇ ಕೆಲವು ದಿನಗಳಲ್ಲಿ ಗಂಧದ ಗುಡಿಯಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar)  ಬೆಳ್ಳಿ ತೆರೆ ಮೇಲೆ ರಾರಾಜಿಸಲಿದ್ದಾರೆ. ಕನ್ನಡನಾಡು ಮಾತ್ರ ಅಲ್ಲ, ದೇಶದ ಜನರು ಅಷ್ಟೇ ಅಲ್ಲ. ಇಡೀ ವಿಶ್ವವೇ ಪುನೀತ್ ರಾಜಕುಮಾರ್ ಕೊನೇ ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದೆ. ಆ ಚಿತ್ರವನ್ನು ಬರ ಮಾಡಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಭಿಮಾಗಳ ಜೊತೆ ಅಶ್ವಿನಿ ಪುನೀತ್ ರಾಜಕುಮಾರ್ ಕೂಡ ಕೈ ಜೋಡಿಸಿದ್ದಾರೆ. ಅಪ್ಪು ಕಡೇ ಚಿತ್ರವನ್ನು ಎಲ್ಲರಿಗೂ ತಲುಪಿಸುವುದು ಮಾತ್ರ ಅಲ್ಲ, ಎಲ್ಲರಿಗೂ ಹೊಸ ಸಂದೇಶವನ್ನು ಈ ಮೂಲಕ ನೀಡಲು ರೆಡಿಯಾಗಿದ್ದಾರೆ. ಇದೇ 21ರಂದು ಅದ್ದೂರಿ ಪ್ರಿ ಇವೆಂಟ್ ರಿಲೀಸ್ ಕಾರ್ಯಕ್ರಮ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ.

    ಗಂಧದಗುಡಿ (Gandhad Gudi) ಬಿಡುಗಡೆ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತದ ಸಿನಿ ದಿಗ್ಗಜರು ಹಾಜರಾಗಲಿದ್ದಾರೆ. ಎಲ್ಲ ಭಾಷೆಯ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಯಾರೆಲ್ಲ ಬರುತ್ತಾರೆ ಎನ್ನುವುದು ಪಕ್ಕಾ ಆಗಿದೆ. ಜೊತೆಗೆ ಅಪ್ಪು (Appu) ಬಳಗ ಎಲ್ಲ ಕಾರ್ಯಗಳನ್ನು ನಿಯತ್ತಾಗಿ ಮಾಡುತ್ತಿದೆ. ಇದೇ ಪ್ರಿ ಇವೆಂಟ್ ಕಾರ್ಯಕ್ರಮ ನಡೆದ ಮರುದಿನ, ಅಂದರೆ ಅಕ್ಟೋಬರ್ 22 ಹಾಗೂ 23 ರಂದು ಬೆಂಗಳೂರಿನಲ್ಲಿ ಪುನೀತ್ ಫುಡ್ ಫೆಸ್ಟ್ (Food Fest) ಅದ್ದೂರಿಯಾಗಿ ನಡೆಯಲಿದೆ. ಅಪ್ಪುಗೆ ಇಷ್ಟವಾದ ನಾನ್ ವೆಜ್ ತಿನಿಸುಗಳನ್ನು ಕೆಲವು ಹೋಟೆಲ್‌ಗಳಲ್ಲಿ ಮಾಡಲಾಗುತ್ತದೆ. ಅದರಲ್ಲಿ ಮೋದಿ ಆಸ್ಪತ್ರೆ ಬಳಿಯ ಡಾ.ರಾಜ್ ದೊನ್ನೆ ಬಿರಿಯಾನಿ ಮನೆ ಕೂಡ ಒಂದು. ಖ್ಯಾತ ನಿರೂಪಕಿ ಅನುಶ್ರೀ (Anushree) ಹೋಟೆಲ್ ಉದ್ಘಾಟಿಸಿದರು.

    ಈ ಹೋಟೆಲ್‌ನಲ್ಲಿ ಅಪ್ಪುಗೆ ಬಲು ಇಷ್ಟವಾದ ಮಟನ್ ಚಾಪ್ಸ್ ಸೇರಿದಂತೆ ಮತ್ತಿತರ ತಿನಿಸುಗಳನ್ನು ಮಾಡಲಾಗುತ್ತದೆ. ಅಪ್ಪು ಅಬಿಮಾನಿಗಳು ಇದನ್ನು ಸವಿಯಬಹುದು. ಬರೀ ಇಲ್ಲಷ್ಟೇ ಅಲ್ಲ, ಬೆಂಗಳೂರಿನ ಅನೇಕ ಹೋಟೆಲ್‌ಗಳು ಈ ಫುಡ್‌ಫೆಸ್ಟ್ನಲ್ಲಿ ಭಾಗವಹಿಸಲಿವೆ. ವೆರೈಟಿ ವೆರೈಟಿ ಅಪ್ಪುಗೆ ಇಷ್ಟವಾದ ನಾನ್‌ವೆಜ್ ಐಟಂ ಮಾಡಲಾಗುತ್ತದೆ. ಹೋಟೆಲ್‌ನಲ್ಲೂ ಇದನ್ನು ತಿನ್ನಬಹುದು. ಅಥವಾ ಆರ್ಡರ್ ಕೂಡ ಮಾಡಬಹುದು. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

    ಅಪ್ಪು ಅಗಲಿ ಇದೇ ಅಕ್ಟೋಬರ್ ಕೊನೆಯ ವಾರಕ್ಕೆ ಒಂದು ವರ್ಷ. ಮೊದಲ ವರ್ಷದ ಪುಣ್ಯ ತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪ್ಪು ಕುಟುಂಬ ಮತ್ತು ಅಭಿಮಾನಿಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಅಪ್ಪು ಅವರ ಕನಸುಗಳಲ್ಲಿ ಒಂದಾಗಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಕೂಡ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳು ಕೂಡ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಫುಡ್‍ಫೆಸ್ಟ್​ಗೆ ಕೊನೆ ದಿನ- ಭೋಜನ ಸವಿದು ಭಾಗವಹಿಸಿ ಬಹುಮಾನ ಗೆಲ್ಲಿ

    ಪಬ್ಲಿಕ್ ಟಿವಿ ಫುಡ್‍ಫೆಸ್ಟ್​ಗೆ ಕೊನೆ ದಿನ- ಭೋಜನ ಸವಿದು ಭಾಗವಹಿಸಿ ಬಹುಮಾನ ಗೆಲ್ಲಿ

    ಬೆಂಗಳೂರು: ಬಿಸಿ ಬಿಸಿ ಬಜ್ಜಿ ತಿನ್ನಬೇಕು ಅನ್ನೋರಿಗೆ, ಇಂದು ಸಂಡೆಯಪ್ಪಾ ನಾನ್‍ವೆಜ್ ಬೇಕೇಬೇಕು ಅನ್ನೋವರಿಗೆ ಇದೊಂದು ಅಡ್ಡಾ. ಉತ್ತರ ಕರ್ನಾಟಕ ರೊಟ್ಟಿ, ಎಣ್ಣೆಗಾಯಿ ಪಲ್ಯ ತಿನ್ನಬೇಕು ಅನ್ನೋರಿಗೆ ಮತ್ತೊಂದು ಅಡ್ಡಾಕ್ಕೆ ಹೋಗಬೇಕು. ಇವೆಲ್ಲ ಒಂದೇ ಸೂರಿನಡಿ ಸಿಗೋ ಅವಕಾಶವನ್ನ ನಿಮ್ಮ ಪಬ್ಲಿಕ್ ಟಿವಿ ನೀಡಿದೆ.

    ಹೌದು. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎರಡನೇ ಆವೃತ್ತಿಯ ಆಹಾರ ಮೇಳಕ್ಕೆ ಶನಿವಾರ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಎರಡು ದಿನಗಳಿಂದ ಫುಡ್‍ಫೆಸ್ಟ್ ನಡೀತಿದೆ. ಉದ್ಘಾಟನಾ ಸಮಾರಂಭದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್ ರಂಗನಾಥ್, ಪೆಪ್ಸ್ ಮ್ಯಾಟ್ರಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಮಾಧವನ್, ನಟ ಪ್ರಜ್ವಲ್ ದೇವರಾಜ್, ನಟಿ ನಿಶ್ವಿಕಾ ನಾಯ್ಡು ಉಪಸ್ಥಿತರಿದ್ರು.

    ಎರಡು ದಿನಗಳ ಫುಡ್‍ಫೆಸ್ಟ್ ಗೆ ಇಂದು ಕೊನೆಯ ದಿನ. ಜೊತೆಗೆ ಸಂಡೇ. ಹಾಗಾಗಿ ಫುಡ್‍ಫೆಸ್ಟ್ ಗೆ ಬನ್ನಿ. ಆಹಾರ ಮೇಳದಲ್ಲಿ ನೂರಕ್ಕೂ ಹೆಚ್ಚು ವೆಜ್ ಮಾತ್ರವಲ್ಲದೇ ನಾನ್‍ವೆಜ್ ಖಾದ್ಯಗಳ 30ಕ್ಕೂ ಹೆಚ್ಚು ಸ್ಟಾಲ್‍ಗಳನ್ನು ಹಾಕಲಾಗಿದೆ. ನಿನ್ನೆ ಪಾನಿಪುರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು 7 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ, ಫುಲ್ ಏಂಜಾಯ್ ಮಾಡಿದ್ರು.

    ಇಂದು ಭಾನುವಾರ ಹಿನ್ನೆಲೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 2 ಗಂಟೆಗೆ ಪುರುಷರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ ಇದೆ. ಜೊತೆಗೆ ಅರ್ಧ ಗಂಟೆಗೊಮ್ಮೆ ಲಕ್ಕಿ ಡ್ರಾ ಮೂಲಕ ಬಹುಮಾನ ಕೂಪನ್ ನೀಡಲಾಗುತ್ತೆ. ಸಂಜೆನೇ ಫುಡ್‍ಫೆಸ್ಟ್ ಮುಗಿದೋಗತ್ತೆ ಅನ್ನೋ ಟೆನ್ಶನ್ ಬೇಡ. ಯಾಕಂದ್ರೆ ಬೆಳಗ್ಗೆ 10.30ರಿಂದ ರಾತ್ರಿ 10 ಗಂಟೆವರೆಗೂ ಆಹಾರ ಮೇಳವಿರತ್ತೆ. ಜೊತೆಗೆ ಅಹಂ ಆತ್ಮ ಸ್ಕೂಲ್ ವತಿಯಿಂದ ನೃತ್ಯ ಕಾರ್ಯಕ್ರಮವಿದೆ. ಫುಡ್‍ಫೆಸ್ಟ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ ಎಂದು ಪಬ್ಲಿಕ್ ಟಿವಿ ಸಿಓಓ ಸಿ.ಕೆ ಹರೀಶ್ ತಿಳಿಸಿದ್ದಾರೆ.

    ಭರ್ಜರಿಯಾಗಿ ನಡಿತಿರೋ ಫುಡ್ ಫೆಸ್ಟ್‍ಗೆ ಲಾಸ್ಟ್ ಡೇ ಇಂದು ಕೊನೆ ದಿನ. ಹೀಗಾಗಿ ಮಿಸ್ ಮಾಡದೇ ಪಬ್ಲಿಕ್ ಟಿವಿಯ ಆಹಾರ ಮೇಳಕ್ಕೆ ಬಂದು, ವೆರೈಟಿ ವೆರೈಟಿ ಖಾದ್ಯಗಳನ್ನ ಸವಿದು ಎಂಜಾಯ್ ಮಾಡಿ.

  • ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು, ನಾಳೆ ಫುಡ್ ಫೆಸ್ಟಿವಲ್- ನೀವೂ ಬಂದು ಭಾಗವಹಿಸಿ

    ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು, ನಾಳೆ ಫುಡ್ ಫೆಸ್ಟಿವಲ್- ನೀವೂ ಬಂದು ಭಾಗವಹಿಸಿ

    ಬೆಂಗಳೂರು: ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಒಂದೇ ಸೂರಿನಡಿ ದೊರೆಯುತ್ತವೆ. ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು ಮತ್ತು ನಾಳೆ ಮಲ್ಲೇಶ್ವರಂನಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿದೆ.

    ನೀವು ವಿವಿಧ ಬಗೆಯ ಭಕ್ಷಭೋಜನ ಸವಿಯ ಬೇಕೆಂದುಕೊಂಡಿದ್ದೀರಾ..? ಕರ್ನಾಟಕ ಅಲ್ಲದೇ ಭಾರತದ ಬೇರೆಬೇರೆ ರಾಜ್ಯಗಳ ಆಹಾರ ಪದ್ಧತಿ ತಿಳ್ಕೋಬೇಕಾ..? ತಡ ಯಾಕೆ, ಇಂದೇ ಮಲ್ಲೇಶ್ವರಂ ಕಡೆ ಹೆಜ್ಜೆ ಹಾಕಿ. ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಈ ಫುಡ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿದೆ. ಬೆಳಗ್ಗೆ 10.30ರಿಂದ ರಾತ್ರಿ 9ಗಂಟೆವರೆಗೆ ನೀವು ಬಗೆಬಗೆಯ ತಿಂಡಿ ತಿನಿಸನ್ನು ಮೆಲ್ಲಬಹುದು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಅಡುಗೆ ರುಚಿ ಫುಡ್ ಫೆಸ್ಟ್ ನಲ್ಲಿರಲಿದೆ.

    ಫುಡ್ ಫೆಸ್ಟ್ ಗೆ ಉಚಿತ ಪ್ರವೇಶವಿದ್ದು, 40 ಕ್ಕೂ ಹೆಚ್ಚು ಮಳಿಗೆಗಳನ್ನ ತೆರೆಯಲಾಗಿದೆ. ಫುಡ್ ಫೆಸ್ಟಿವಲ್‍ನಲ್ಲಿ ಏನೆಲ್ಲಾ ಸ್ಪೆಷನ್ ಇದೆ ಅನ್ನೋದನ್ನ ನೋಡೋದಾದ್ರೆ…
    * ಸುಮಾರು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರ ಪ್ರದರ್ಶನ
    * ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಲಭ್ಯ
    * ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು
    * ಪ್ರತಿ 30 ನಿಮಿಷಗಳಿಗೊಮ್ಮೆ ನೋಂದಾಯಿಸಲ್ಪಟ್ಟ ಸಂದರ್ಶಕರಿಗೆ ಲಕ್ಕಿ ಡ್ರಾ ಮೂಲಕ ಉಡುಗೊರೆ

    ಇಷ್ಟೇ ಅಲ್ಲ, ಜತೆಗೆ ಬೆಳಗ್ಗೆ ರಂಗೋಲಿ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಫುಡ್ ಫೆಸ್ಟ್ ಗೆ ವಿಸಿಟ್ ಮಾಡಿ, ಬಾಯಿ ಚಪ್ಪರಿಸಿ. ಇಂದು ನಾಳೆ ಮಲ್ಲೇಶ್ವರಂಗೆ ಬರೋದನ್ನು ಮಾತ್ರ ಮರೀಬೇಡಿ. ಇದನ್ನೂ ಓದಿ: ನೀವು ಆಹಾರ ಪ್ರಿಯರೇ, ಹಾಗಾದ್ರೆ ಪಬ್ಲಿಕ್ ಟಿವಿಯ ಫುಡ್ ಫೆಸ್ಟ್‌ಗೆ ಬನ್ನಿ

    https://www.youtube.com/watch?v=KMbntfnjIPk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀವು ಆಹಾರ ಪ್ರಿಯರೇ, ಹಾಗಾದ್ರೆ ಪಬ್ಲಿಕ್ ಟಿವಿಯ ಫುಡ್ ಫೆಸ್ಟ್‌ಗೆ ಬನ್ನಿ

    ನೀವು ಆಹಾರ ಪ್ರಿಯರೇ, ಹಾಗಾದ್ರೆ ಪಬ್ಲಿಕ್ ಟಿವಿಯ ಫುಡ್ ಫೆಸ್ಟ್‌ಗೆ ಬನ್ನಿ

    ಬೆಂಗಳೂರು: ನೀವು ಆಹಾರ ಪ್ರಿಯರೇ? ಬಗೆ ಬಗೆಯ ಆಹಾರದ ಬಗ್ಗೆ ನಿಮಗೆ ತಿಳಿಯಬೇಕೇ? ಹಾಗಾದರೆ ಪಬ್ಲಿಕ್ ಟಿವಿ ಆಯೋಜಿಸಿರುವ ಫುಡ್ ಫೆಸ್ಟ್‌ಗೆ ಬನ್ನಿ.

    ಪಬ್ಲಿಕ್ ಟಿವಿ ಜನವರಿ 26 ಮತ್ತು 27ರಂದು ಆಹಾರ ಮೇಳವನ್ನು ಆಯೋಜಿಸಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 40ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

    ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು.

    ಈ ಕಾರ್ಯಕ್ರಮದ ಬಗ್ಗೆ ಪಬ್ಲಿಕ್ ಟಿವಿಯ ಸಿಒಒ ಹರೀಶ್ ಕುಮಾರ್ ಮಾತನಾಡಿ, ಗಣರಾಜ್ಯೋತ್ಸವದ ನಿಮಿತ್ತ ಒಂದು ವಿಭಿನ್ನ ಕಾರ್ಯಕ್ರಮವನ್ನು ಪಬ್ಲಿಕ್ ಟಿವಿಯಿಂದ ಆಯೋಜಿಸಲಾಗಿದೆ. ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕೂಡ ಮಾಡಲಾಗಿದೆ. ಈಗಾಗಲೇ ಅನೇಕರು ಎಸ್‍ಎಂಎಸ್ ಹಾಗೂ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಈ ಫುಡ್ ಫೆಸ್ಟ್ ಅನ್ನು ಅಂತರಾಷ್ಟ್ರೀಯ ಮಾದರಿಯಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿವಿಧ ಬಗೆಯ ತಿನಿಸು, ಆಹಾರ, ಪಾನಿಯ ಸಿಗುತ್ತದೆ ಎಂದು ತಿಳಿಸಿದರು.

    ಆಹಾರ ಮೇಳದಲ್ಲಿ ಏನಿರಲಿದೆ?
    ದಕ್ಷಿಣ ಭಾರತದ ತಿನಿಸು, ಉತ್ತರ ಭಾರತದ ತಿನಿಸು, ಕಾಂಟಿನೆಂಟಲ್, ಸಮುದ್ರ ಆಹಾರ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಗ್ರಿಲ್ಸ್ ಮತ್ತು ರೋಲ್ಸ್, ಮಸಾಲೆ ಮತ್ತು ಕಾಂಡಿಮೆಂಟ್ಸ್, ಸಿಹಿತಿಂಡಿ, ಐಸ್‍ಕ್ರೀಂ, ಕಾಫಿ, ಟೀ, ಚಾಟ್ ಇರಲಿದೆ. ಅಷ್ಟೇ ಅಲ್ಲದೇ ಪ್ರತಿ 30 ನಿಮಿಷಗಳಿಗೊಮ್ಮೆ ನೋಂದಾಯಿಸಲ್ಪಟ್ಟ ಸಂದರ್ಶಕರಿಗೆ ಲಕ್ಕಿ ಡ್ರಾ ಮೂಲಕ ಉಡುಗೊರೆ ಸಿಗಲಿದೆ.

    https://youtu.be/KMbntfnjIPk

    ರಂಗೋಲಿ ಸ್ಪರ್ಧೆ:
    ಸ್ಥಳದಲ್ಲಿಯೇ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಲ್ಲೇಶ್ವರಂ 6ನೇ ಕ್ರಾಸ್ ನಲ್ಲಿ ಜನವರಿ 26ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಸ್ಪರ್ಧಿಗಳು 96066 66031 ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡಿ ಹೆಸರನ್ನು ನೋಂದಾಯಿಸಬೇಕಾಗುತ್ತದೆ. ಮೊದಲು ರಿಜಿಸ್ಟರ್ ಮಾಡಿಕೊಳ್ಳುವ 100 ಸ್ಪರ್ಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು.

    ರಂಗೋಲಿ ಸ್ಪರ್ಧೆಯ ನಿಯಮಗಳು:
    * ಮಹಿಳೆಯರಿಗೆ ಮಾತ್ರ ಅವಕಾಶ.
    * 120 ನಿಮಿಷದಲ್ಲಿ ರಂಗೋಲಿ ಬಿಡಿಸಬೇಕು.
    * ರಿಜಿಸ್ಟರ್ ಮಾಡಿಕೊಂಡಿದ್ದ ಸ್ಪರ್ಧಿಗಳ ಹೆಸರು ಖಚಿತವಾದವರು ಶನಿವಾರ ಬೆಳಗ್ಗೆ 7.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು.
    * ನಾವು ರಂಗೋಲಿ ಪುಡಿಯನ್ನು ಮಾತ್ರ ನೀಡುತ್ತೇವೆ.
    * ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು.
    * ಸ್ಪರ್ಧೆಯಲ್ಲಿ ಭಾಗವಹಿಸುವರು ತಾವೇ ತಮಗೆ ಬೇಕಾದ ವಸ್ತುಗಳನ್ನು ತರಬೇಕು ಮತ್ತು ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು/ ಪುಷ್ಪ ದಳಗಳು/ ಪುಡಿ/ ಧಾನ್ಯಗಳು/ ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು.
    * ಸಂಘಟಕರು ನೀಡುವ ಸ್ಥಳದಲ್ಲಿ ಸ್ಪರ್ಧಿಗಳು ರಂಗೋಲಿಯನ್ನು ಸಿದ್ಧ ಪಡಿಸಬೇಕು.
    * ಕೊರೆಯಚ್ಚನ್ನು ಬಳಸುವಂತಿಲ್ಲ.
    * ಒಂದು ತಂಡದಲ್ಲಿ ಇಬ್ಬರಿಗೆ ಮಾತ್ರ ಅವಕಾಶ.
    * ಸ್ಪರ್ಧೆ ಒಂದೇ ಸುತ್ತಿನಲ್ಲಿ ಮುಗಿಯಲಿದೆ.
    * ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತುಗಳನ್ನು ಬಳಸುವಂತಿಲ್ಲ.
    * ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

    https://www.youtube.com/watch?v=Fuyd9Ymu3Cw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 40ಕ್ಕೂ ಹೆಚ್ಚು ಬಗೆಬಗೆಯ ಖಾದ್ಯ – ಮಡಿಕೇರಿಯಲ್ಲಿ ಸ್ಪೆಷಲ್ ಫುಡ್ ಫೆಸ್ಟ್

    40ಕ್ಕೂ ಹೆಚ್ಚು ಬಗೆಬಗೆಯ ಖಾದ್ಯ – ಮಡಿಕೇರಿಯಲ್ಲಿ ಸ್ಪೆಷಲ್ ಫುಡ್ ಫೆಸ್ಟ್

    ಮಡಿಕೇರಿ: ಕೊಡಗಿನ ಆಹಾರ ಪದ್ಧತಿ ತೀರಾ ಭಿನ್ನವಾಗಿದೆ. ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯಲ್ಲಿ ಫುಡ್ ಫೆಸ್ಟನ್ನು ಆಯೋಜಿಸಲಾಗಿತ್ತು. ಈ ಆಹಾರ ಮೇಳದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು 40ಕ್ಕೂ ಹೆಚ್ಚು ಬಗೆಯ ಸ್ಪೆಷಲ್ ಸ್ವಾದಿಷ್ಟ ಖಾದ್ಯಗಳನ್ನ ಉಣಬಡಿಸಿದ್ದಾರೆ. ಪಂದಿ ಕರಿ, ಕೋಳಿ ಕರಿ, ಕೊಯಿಲೆ ಮೀನ್, ಒಣಕ್ ಯರ್ಚಿ, ಅಡಿಕೆ ಪುಟ್, ಕರ್ಜಿಕಾಯಿ, ಕಾಡ್ ಮಾಂಗೆ, ಕೇಂಬು ಕರಿ, ಇವು ಕೊಡಗಿನಲ್ಲಿ ಸಿಗುವ ವಿಶೇಷ ಖಾದ್ಯಗಳ ಹೆಸರುಗಳಾಗಿವೆ.

    ಭಾಷೆ, ಸಂಸ್ಕೃತಿಯಂತೆ, ಕೊಡಗಿನ ಆಹಾರ ಪದ್ಧತಿ ಕೂಡಾ ಇತರೆಡೆಗಿಂತ ತೀರಾ ಭಿನ್ನವಾಗಿದ್ದು, ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ. ಈ ಹಬ್ಬದಲ್ಲಿ ಕೊಡವ ನಾರಿಯರು ರುಚಿ ರುಚಿಯಾದ ಕೂರ್ಗ್ ಸ್ಪೆಷಲ್ ಡಿಷ್ ಗಳನ್ನ ಮಾಡಿ ಗಮನ ಸೆಳೆದಿದ್ದಾರೆ.

    ಮಳೆಗಾಲದಲ್ಲಿ ಕೊಡಗಿನ ಆಹಾರ ಪದ್ಧತಿಯೇ ಸಂಪೂರ್ಣವಾಗಿ ಬದಲಾಗುತ್ತದೆ. ವಿಪರೀತ ಮಳೆ ಹಗೂ ಶೀತ ವಾತಾವರಣವಿರುವುದರಿಂದ ಮಳೆಗಾಲದಲ್ಲಿ ಕೊಡಗಿನ ಜನ ಹೆಚ್ಚು ಉಷ್ಣಾಂಶವುಳ್ಳ ಆಹಾರ ಪಧಾರ್ಥಗಳನ್ನೆ ಸೇವಿಸುತ್ತಾರೆ. ಬಿದಿರಿನ ಕಳಲೆ, ಏಡಿ, ಕೆಸ ಸೊಪ್ಪು, ಅಣಬೆ ಇವೆಲ್ಲಾ ಇಲ್ಲಿನ ಮಳೆಗಾಲದ ಫೆವರೀಟ್ ಆಹಾರ ವಸ್ತುಗಳು, ಇಂತಹ ಸುಮಾರು 40ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಈ ಮೇಳದಲ್ಲಿ ತಯಾರಾಗಿದ್ದವು, ಹಿಂದಿನ ಕಾಲದ ಆಹಾರ ಪದ್ಧತಿಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಫುಡ್ ಫೆಸ್ಟ್ ಅನ್ನ ಆಯೋಜಿಸಲಾಗಿತ್ತು. ನೂರಾರು ಮಂದಿ ಪಾಲ್ಗೊಂಡು ಈ ಕೂರ್ಗ್ ಸ್ಪೆಷಲ್ ಫುಡ್ ರುಚಿ ಸವಿದಿದ್ದಾರೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹೇಳಿದ್ದಾರೆ.