Tag: ಫುಡ್ ಫೆಸ್ಟಿವಲ್

  • ಇಂದಿನಿಂದ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ 2ನೇ ಆವೃತ್ತಿಯ ಆಹಾರ ಮೇಳ

    ಇಂದಿನಿಂದ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ 2ನೇ ಆವೃತ್ತಿಯ ಆಹಾರ ಮೇಳ

    -ಆಹಾರ ಮೇಳಕ್ಕೆ ಬನ್ನಿ, ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

    ಬೆಂಗಳೂರು: ಆಹಾರ ಪ್ರಿಯರಿಗೊಂದು ಸಿಹಿ ಸುದ್ದಿ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಆಹಾರ ಮೇಳ ಮತ್ತೆ ಬಂದಿದೆ. ಮೊದಲನೇ ವರ್ಷದ ಅಹಾರ ಮೇಳ ಯಶಸ್ವಿಯಾದ ಬಳಿಕ ನಿಮ್ಮ ಪಬ್ಲಿಕ್ ಟಿವಿ ಎರಡನೇ ವರ್ಷ ಆಹಾರ ಮೇಳವನ್ನು ಆಯೋಜಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಆಹಾರ ಮೇಳ ನಡೆಯಲಿದೆ.

    ಒಂದನೇ ವರ್ಷದ ಆಹಾರ ಮೇಳ ಯಶಸ್ವಿಯಾದ ಬಳಿಕ ಪಬ್ಲಿಕ್ ಟಿವಿ ಎರಡನೇ ವರ್ಷದ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಜನವರಿ 25 ಮತ್ತು 26 ಅಂದರೆ ಇಂದಿನಿಂದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಈ ಆಹಾರ ಮೇಳ ಇರಲಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 30ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

    ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು. ಆಹಾರ ಮೇಳ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರ ಜೊತೆಯಲ್ಲಿ ಜ.25 ರಂದು ಮಹಿಳೆಯರಿಗೆ ಪಾನಿಪುರಿ, ಜ.26 ರಂದು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಚಿತ ಪ್ರವೇಶ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಮತ್ತು ಗಿಫ್ಟ್ ಹ್ಯಾಂಪರ್ ಗಳನ್ನು ಗೆಲ್ಲಬಹುದಾಗಿದೆ.

    ಆಹಾರ ಮೇಳದಲ್ಲಿ ಏನಿರಲಿದೆ?
    * 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರಗಳ ಪ್ರದರ್ಶನ
    * ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳ ಪ್ರದರ್ಶನ
    * ಸ್ಥಳದಲ್ಲೇ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯದ ಲೈವ್ ಕೌಂಟರ್
    * ಪ್ರತಿ 30 ನಿಮಿಷಕ್ಕೆ ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಸಿಗಲಿದೆ ಗಿಫ್ಟ್

    ಆಹಾರ ಮೇಳದ ಮೊದಲ ದಿನವೇ ರಂಗೋಲಿ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗಾಗಿ ಈ ರಂಗೋಲಿ ಸ್ಫರ್ಧೆ ಆಯೋಜನೆ ಮಾಡಿದ್ದು, ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಚಿತ್ರಗಳನ್ನ ಬಿಡಿಸಬಹುದಾಗಿದೆ. ಮಲ್ಲೇಶ್ವರದ 6ನೇ ಕ್ರಾಸ್‍ನಲ್ಲಿ ಜನವರಿ 25 ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 96209 40365 ನಂಬರಿಗೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಹೆಸರು ನೋಂದಾಯಿಸಬೇಕು. ಮೊದಲು ಹೆಸರು ನೋಂದಾಯಿಸಿದವರಿಗೆ ಮತ್ತು 100 ಮಂದಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಸಿಗಲಿದೆ.

    ಇಂದಿನಿಂದ ಎರಡು ದಿನಗಳಿಂದ ಕಾಲ ಆಹಾರ ಮೇಳ ನಡೆಯಲಿದ್ದು. ಹಲವಾರು ಖಾದ್ಯ ಪ್ರದರ್ಶನಗಳ ಜೊತೆಗೆ ಸ್ಪರ್ಧೆಗಳನ್ನು ಕೂಡ ಆಯೋಜನೆ ಮಾಡಲಾಗಿದೆ. ಎರಡು ದಿನ ವೀಕೆಂಡ್ ಮತ್ತು ಸರ್ಕಾರಿ ರಜೆ ಇದ್ದು ಪಬ್ಲಿಕ್ ಟಿವಿ ಆಯೋಜನೆಯ ಆಹಾರ ಮೇಳಕ್ಕೆ ಭೇಟಿ ನೀಡಿ ನಿಮಗೆ ಇಷ್ಟವಾದ ಖಾದ್ಯವನ್ನ ಸೇವಿಸಿ.

  • ಗಮನ ಸೆಳೆದ ಮಡಿಕೇರಿಯ ಫುಡ್ ಫೆಸ್ಟಿವಲ್

    ಗಮನ ಸೆಳೆದ ಮಡಿಕೇರಿಯ ಫುಡ್ ಫೆಸ್ಟಿವಲ್

    ಮಡಿಕೇರಿ: ಕೊಡಗು ಅಂದ್ರೆ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾಗಳಂತೆ ವಿಭಿನ್ನ ಆಹಾರ ಪದ್ಧತಿಯೂ ಎಲ್ಲರ ಗಮನ ಸೆಳೆಯುತ್ತದೆ. ಒಂದೊಂದು ಕಾಲಕ್ಕೂ ಒಂದೊಂದು ರುಚಿ ರುಚಿಯಾದ ಅಡುಗೆ ಮಾಡಿ ಬಾಯಚಪ್ಪರಿಸಿ ತಿನ್ನೋ ಕೊಡಗಿನ ಜನರ ಫುಡ್ ವೆರೈಟಿ ನಿಜಕ್ಕೂ ವಾವ್ ಅನಿಸುತ್ತದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ನಡೆದ ಕೊಡವರ ಕಕ್ಕಡ 18 ತಿನ್ನಿ ನಮ್ಮೆ ಪ್ರಯುಕ್ತ ನಡೆದ ಆಹಾರಮೇಳ ಎಲ್ಲರನ್ನು ಗಮನ ಸೆಳೆಯಿತು.

    ಆಧುನಿಕತೆಯ ಭರಾಟೆಯಲ್ಲಿ ಕೊಡಗಿನ ಪಾರಂಪರಿಕ ಆಹಾರ ಪದ್ಧತಿ ಮರೆಯಾಗುತ್ತಿದ್ದು, ಯುವ ಪೀಳಿಗೆಗೆ ಪರಿಚಯಿಸಲೆಂದು ನಾಪೋಕ್ಲು ಕೊಡವ ಸಮಾಜ ಈ ಕಕ್ಕಡ 18 ತಿನ್ನಿ ನಮ್ಮೆ ಆಯೋಜಿಸಿತ್ತು. ಇದೇ ಮೊದಲ ವರ್ಷ ನಾಪೋಕ್ಲು ಕೊಡವ ಸಮಾಜ ಕಟ್ಟಡದಲ್ಲಿ ಕಕ್ಕಡ 18 ತಿನ್ನಿ ನಮ್ಮೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದ ಜನರು ಭಾಗಿಯಾಗಿದ್ದರು. ಒಂದೊಂದು ಕುಟುಂಬವೂ ತಮ್ಮ ತಮ್ಮ ಪಾರಂಪರಿಕವಾದ ಒಂದೊಂದು ಆಹಾರವನ್ನು ತಯಾರಿಸಿ ತಂದು ಪ್ರದರ್ಶನ ಮಾಡುತ್ತಾರೆ. ಇರೋದ್ರಿಂದ ಅಪರೂಪಕ್ಕೆ ಸಿಗೋ ಬಗೆ ಬಗೆಯ ತಿನಿಸುಗಳನ್ನ ಸವಿದು ಎಲ್ಲರೂ ಎಂಜಾಯ್ ಮಾಡುತ್ತಾರೆ.

    ವಿಶೇಷವಾಗಿ ಜಿಲ್ಲೆಯಲ್ಲಿ ತಿಂಗಳುಗಟ್ಟಲೆ ಸುರಿಯೋ ಮಳೆಯ ನಡುವೆಯೇ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಬಳಲಿರೋ ಜನರು ಒಂದೆಡೆ ಸೇರಿ ಎಂಜಾಯ್ ಮಾಡುತ್ತಾರೆ. ಆಶಾಢ ಮಾಸದಲ್ಲಿ 18 ಗಿಡಮೂಲಿಕೆಗಳಿಂದ ತುಂಬಿರೋ ಆಟಿಸೊಪ್ಪಿನ ಅಕ್ಕಿಪಾಯಸ ಸವಿದು ಇನ್ನೂ ಅಬ್ಬರಿಸೋ ಮಳೆಯಲ್ಲಿ ಯಾವುದೇ ಕಾಯಿಲೆ ಬರದಂತೆ ರಕ್ಷಣೆ ಪಡೆಯುತ್ತಾರೆ.

  • ಭರ್ಜರಿ ಆರಂಭದೊಂದಿಗೆ 2ನೇ ದಿನಕ್ಕೆ ಕಾಲಿಟ್ಟಿದೆ ಪಬ್ಲಿಕ್ ಟಿವಿ ಫುಡ್ ಫೆಸ್ಟಿವಲ್

    ಭರ್ಜರಿ ಆರಂಭದೊಂದಿಗೆ 2ನೇ ದಿನಕ್ಕೆ ಕಾಲಿಟ್ಟಿದೆ ಪಬ್ಲಿಕ್ ಟಿವಿ ಫುಡ್ ಫೆಸ್ಟಿವಲ್

    ಬೆಂಗಳೂರು: ಇದೇ ಮೊದಲ ಬಾರಿಗೆ ಆಹಾರ ಪ್ರಿಯರಿಗೆ ಪಬ್ಲಿಕ್ ಟಿವಿ ಆಹಾರ ಮೇಳವನ್ನ ಆಯೋಜಿಸಿದ್ದು, ಶನಿವಾರದಿಂದ ಶುರುವಾಗಿರೋ ಈ ಫುಡ್ ಫೆಸ್ಟಿವಲ್‍ಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪುಡ್ ಫೆಸ್ಟ್ ನಡೆಯುತ್ತಿದ್ದು, ಇಂದು ಬೆಳಗ್ಗೆ 10 ರಿಂದ ರಾತ್ರಿ 10 ರ ವರೆಗೆ ಫುಡ್ ಫೆಸ್ಟಿವಲ್ ಅದ್ಧೂರಿಯಾಗಿ ನಡೆಯಲಿದೆ.

    ದಿನಾಲೂ ಮನೆಯಲ್ಲಿ ಅಡುಗೆ ಮಾಡೋದು ಇರುತ್ತೆ. ವೀಕೆಂಡ್ ನಲ್ಲಿ ಎಲ್ಲಾದರೂ ಹೊರಗಡೆ ಹೋಗೋಣ ಅನ್ನೋದು ಪ್ರತಿಮನೆಯಲ್ಲೂ ಕಾಮನ್ ಆಗಿ ಕೇಳಿಬರುವ ಡೈಲಾಗ್. ಆದರಿಂದ ಬೇರೆ ಎಲ್ಲೋ ಹೋಗಿ ಊಟ ಮಾಡೋ ಬದಲು ಪಬ್ಲಿಕ್ ಟಿವಿ ಆಯೋಜಿಸಿರುವ ಫುಡ್ ಫೆಸ್ಟಿವಲ್‍ಗೆ ಬಂದು ನಿಮಗೆ ಇಷ್ಟವಾಗುವ ವಿಧವಿಧವಾದ ಖಾದ್ಯಗಳನ್ನು ಸವಿದು ಆನಂದಿಸಿ.

    ಈ ವಿಶೇಷ ಫುಡ್ ಫೆಸ್ಟಿವಲ್‍ನಲ್ಲಿ ಬಿಸಿ ಬಿಸಿಯಾದ ಮಟನ್, ಚಿಕನ್ ಬಿರಿಯಾನಿ, ನೀರುಣಿಸೋ ಕೆಂಪು ಕೆಂಪಾದ ಬಾಂಗಡಾ, ಅಂಜಲ್ ಹೀಗೆ ವೆರೈಟಿ ವೆರೈಟಿ ಫಿಶ್ ಐಟೆಮ್ಸ್, ನಾಟಿ ಕೋಳಿ ಐಟಮ್ಸ್ ಮಾಂಸಾಹಾರಿಗಳನ್ನ ಕೈಬಿಸಿ ಕರೆಯುತ್ತಿದ್ದರೇ, ಮತ್ತೊಂದೆಡೆ ಗರಿ ಗರಿಯಾದ ದೋಸೆ, ವೆರೈಟಿ ವೆರೈಟಿ ಹೋಳಿಗೆ ಜೊತೆಗೆ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ, ಪಲಾವ್, ಪುಳಿಯೋಗರೆ ಸೇರಿದಂತೆ ವಿವಿಧ ಭಕ್ಷ್ಯಗಳು ನಿಮ್ಮನ್ನ ಆಹಾರದ ಹೊಸಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

    ಮೊದಲ ದಿನವೇ ಫುಡ್ ಫೆಸ್ಟಿವಲ್‍ಗೆ ಜನರು ಸಖತ್ ಒಳ್ಳೆಯ ರೆಸ್ಪಾನ್ಸ್ ನೀಡಿದ್ದು, ನಿನ್ನೆ ಸಾವಿರಾರು ಜನ ವಿಧವಿಧವಾದ ಖಾದ್ಯಗಳನ್ನು ಸವಿದು ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲದೆ ಫುಡ್ ಫೆಸ್ಟಿವಲ್‍ಗೆ ಎಲ್ಲರಿಗೂ ಉಚಿತ ಪ್ರವೇಶವಿದ್ದು ಪ್ರತಿ ಅರ್ಧ ಗಂಟೆಗೆ ಒಬ್ಬರಿಗೆ ಲಕ್ಕಿ ಡ್ರಿಪ್ ಮೂಲಕ ಆಕರ್ಷಕ ಬಹುಮಾನ ಕೂಡ ಕೊಡಲಾಗುತ್ತದೆ.

    ಆಹಾರ ಪ್ರಿಯರು ಹಳೇ ಅಡ್ಡಾಕ್ಕೆ ಹೋಗಿ, ಅದೇ ಮೆನು ಹಿಡಿದುಕೊಳ್ಳೋ ಬದಲು, ಇಲ್ಲೊಮ್ಮೆ ಎಂಟ್ರಿ ಕೊಡಿ. ಒಂದೇ ಸೂರಿನಡಿಯಲ್ಲಿ 40ಕ್ಕೂ ಹೆಚ್ಚು ಮಳಿಗೆಗಳು 200ಕ್ಕೂ ಹೆಚ್ವು ಬಗೆ ಬಗೆಯ ಖಾದ್ಯಗಳು ಇಲ್ಲಿ ಸಿಗುತ್ತೆ. ಮಿಸ್ ಮಾಡ್ದೆ ಬನ್ನಿ , ವೀಕ್ ಎಂಡ್‍ನ ಫುಡ್ ಫೆಸ್ಟಿವಲ್ ಜೊತೆ ಎಂಜಾಯ್ ಮಾಡಿ.

    https://www.youtube.com/watch?v=4MiK-uaB4CQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿ ಆಯೋಜನೆಯ ಫುಡ್ ಫೆಸ್ಟಿವಲ್‍ಗೆ ಉತ್ತಮ ಪ್ರತಿಕ್ರಿಯೆ

    ಪಬ್ಲಿಕ್ ಟಿವಿ ಆಯೋಜನೆಯ ಫುಡ್ ಫೆಸ್ಟಿವಲ್‍ಗೆ ಉತ್ತಮ ಪ್ರತಿಕ್ರಿಯೆ

    -ಮಿಸ್ ಮಾಡ್ಕೊಂಡ್ರಾ ಡೋಂಟ್ ವರಿ ನಾಳೆನೂ ಬನ್ನಿ, ಉಚಿತ ಪ್ರವೇಶ

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆಯ ಫುಡ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಸಿಲಿಕಾನ್ ಸಿಟಿಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಹಾರ ಮೇಳಕ್ಕೆ ಆಗಮಿಸಿದ ಸಾರ್ವಜನಿಕರು ಬಗೆ ಬಗೆಯ ಖಾದ್ಯಗಳನ್ನು ಸವಿದು ವೀಕೆಂಡ್ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ರಂಗೋಲಿ ಸ್ಪರ್ಧೆಯನ್ನ ಸಹ ಆಯೋಜಿಸಲಾಗಿತ್ತು. ಇಂದು ರಾತ್ರಿ 10.30ರವರೆಗೂ ಆಹಾರ ಮೇಳೆ ಓಪನ್ ಇರಲಿದ್ದು, ಭಾನುವಾರ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೆ ನೀವು ಫುಡ್ ಫೆಸ್ಟಿವಲ್ ಗೆ ಭೇಟಿ ನೀಡಬಹುದು.

    ಈ ಮೊದಲೇ ನೋಂದಣಿ ಮಾಡಿಕೊಂಡಿದ್ದ ಮಹಿಳೆಯರು ಇಂದು ಬೆಳಗ್ಗೆ ಗಣರಾಜ್ಯೋತ್ಸವ ಥೀಮ್ ನಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿ ಎಲ್ಲರನ್ನು ಸೆಳೆದವು. ರಂಗೋಲಿ ಸ್ಪರ್ಧೆಯಲ್ಲಿ ಪ್ರತಿಮಾ ಉಡುಪ ಮೊದಲ ಸ್ಥಾನ ಪಡೆದು 8 ಗ್ರಾಂ ಚಿನ್ನ ಮತ್ತು ಗಿಫ್ಟ್ ತಮ್ಮದಾಗಿಸಿಕೊಂಡರು. ಎರಡನೇ ಬಹುಮಾನ ನಿಖಿತಾ ಆರಾಧ್ಯ (4ಗ್ರಾಂ ಚಿನ್ನ+ಗಿಫ್ಟ್) ಮತ್ತು ಮೂರನೇ ಬಹುಮಾನವನ್ನು ಸರಸ್ವತಿ (4 ಗ್ರಾಂ ಚಿನ್ನ+ ಗಿಫ್ಟ್) ಪಡೆದುಕೊಂಡರು. ಸಮಾಧಾನಕರ ಬಹುಮಾನವಾಗಿ ಪೂನಂ ಎಂಬವರು 10 ಗ್ರಾಂ ಬೆಳ್ಳಿ ಮತ್ತು ಸೀರೆಯನ್ನು ತಮ್ಮದಾಗಿಸಿಕೊಂಡರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳಿಗೆ 10 ಗ್ರಾಂ ಬೆಳ್ಳಿಯನ್ನು ಬಹುಮಾನವಾಗಿ ನೀಡಲಾಯ್ತು.

    ನಟಿ ಆಶಿಕಾ ರಂಗನಾಥ್, ಗಾಯಕಿ ಅರ್ಚನಾ ಉಡುಪಾ, ಪಬ್ಲಿಕ್ ಟಿವಿ ಸಿಇಓ ಅರುಣ್, ಸಿಓಓ ಸಿಕೆ ಹರೀಶ್ ಕುಮಾರ್ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯಿನಿ ರೇಣುಕಾ ಎಲ್ಲರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲ್ಲಿ ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಒಂದೇ ಸೂರಿನಡಿ ಲಭ್ಯವಿದೆ. ಸುಮಾರು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ 200ಕ್ಕೂ ಹೆಚ್ಚು ಖಾದ್ಯಗಳ ಪ್ರದರ್ಶನ ನಡೆಯುತ್ತಿದೆ.

    ಬಿಸಿ-ಬಿಸಿ ವಡೆ, ಗರಿ ಗರಿ ದೋಸೆ, ನೋಟದಲ್ಲೇ ಸೆಳೆಯೋ ಪುಳಿಯೋಗರೆ, ಪಲಾವ್, ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ, ಭಿನ್ನ ಭಿನ್ನ ಹೋಳಿಗೆಗಳು ನಿಮ್ಮನ್ನು ಫೆಸ್ಟೀವ್ ಮೂಡ್ ಗೆ ಕರೆದುಕೊಂಡು ಹೋಗುತ್ತಿವೆ. ಕೇವಲ ವೆಜ್ ಅಲ್ಲದೇ ನಾನ್ ವೆಜ್ ಆಹಾರ ಮೇಳದಲ್ಲಿ ಲಭ್ಯವಿದೆ. ಕೆಂಪ್ ಕೆಂಪಾಗಿರುವ ಫಿಶಸ್ ಗೆ ಬೇಡಿಕೆ ಹೆಚ್ಚಾಗಿದೆ. ಫಿಶ್ ಫಿಂಗರ್, ಹುರಿದ ಸಿಗಡಿ, ಮೀನಿನ ಕಟ್ಲೆಟ್, ರವಾ ಬಂಗಡೆ ನೋಡತ್ತಿದ್ದರೆ ಬಾಯಲ್ಲಿ ನೀರು ಬರೋದು ಸತ್ಯ. ದೊನ್ನೆ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಸಹ ಆಹಾರ ಪ್ರಿಯರನ್ನು ಸೆಳೆಯುತ್ತಿವೆ.

    ಒಂದೇ ಸೂರಿನಡಿ ವಿವಿಧ ಸ್ಟಾಲ್ ಗಳನ್ನು ಹಾಕಿರೋದನ್ನು ನೋಡುವುದೇ ಚೆಂದ. ಬಗೆ ಬಗೆಯ ಖಾದ್ಯಗಳೆಂದ್ರೆ ನನಗೆ ತುಂಬಾನೇ ಇಷ್ಟ. ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲ ಸ್ಪರ್ಧಿಗಳು ಚೆಂದವಾಗಿ ಬಣ್ಣ ಬಣ್ಣಗಳಲ್ಲಿ ಗಣರಾಜ್ಯೋತ್ಸವ ಶುಭಾಶಯ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ವಿನ್ನರ್. ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನು ನಟಿ ಆಶಿಕಾ ರಂಗನಾಥ್ ತಿಳಿಸಿದರು.

    ಇತ್ತೀಚಿನ ದಿನಗಳಲ್ಲಿ ರಂಗೋಲಿ ಮರೆಯಾಗುತ್ತಿದೆ. ಈ ಕಲೆಯನ್ನು ಉಳಿಸಲು ಪಬ್ಲಿಕ್ ಒಳ್ಳೆ ವೇದಿಕೆ ಒದಗಿಸಿದೆ. ಮಹಿಳೆಯರ ಎರಡು ಮುಖ್ಯವಾದ ಕಲೆಗಳು ಅಡುಗೆ ಹಾಗೂ ರಂಗೋಲಿ. ಹಾಗಾಗಿ ಎರಡು ಕಲೆಗಳನ್ನು ನಾವು ಇಲ್ಲಿ ಕಾಣಬಹುದು. ಬೆಳಗ್ಗೆನೇ ಕಣ್ಣಿಗೆ ಮತ್ತು ಮೂಗಿಗೆ ರಸದೌತಣ ಸಿಗುತ್ತಿದೆ. ಪ್ರತಿಯೊಬ್ಬ ಸ್ಪರ್ಧಿಗಳು ತಮ್ಮದೇ ಶೈಲಿಯಲ್ಲಿ ರಂಗೋಲಿ ಸುಂದರವಾಗಿ ರಂಗೋಲಿ ಬಿಡಿಸಿದ್ದರು. ಎಲ್ಲ ರಂಗೋಲಿಗಳನ್ನು ನೋಡಿದ್ದು ತುಂಬಾನೇ ಖುಷಿ ನೀಡ್ತು ಎಂದು ಗಾಯಕಿ ಅರ್ಚನಾ ಉಡುಪ ಹೇಳಿದರು.

    https://www.youtube.com/watch?v=sBuO2hOJK_Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೇ ಕ್ಯಾ ಜಮೀರ್ ಸಾಬ್? ನಿಮ್ಮ ಎಂಜಲೆಲೆ ಊಟ ಪೊಲೀಸರ ಬಾಯಿಗೆ ಕೊಟ್ಟಿರೋದು ಸರಿನಾ?

    ಯೇ ಕ್ಯಾ ಜಮೀರ್ ಸಾಬ್? ನಿಮ್ಮ ಎಂಜಲೆಲೆ ಊಟ ಪೊಲೀಸರ ಬಾಯಿಗೆ ಕೊಟ್ಟಿರೋದು ಸರಿನಾ?

    ಮೈಸೂರು: ದಸರಾ ಫುಡ್ ಫೆಸ್ಟಿವಲ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅವರ ಲೇಟೆಸ್ಟು ಸ್ಟೈಲ್ ಗೆ ಕೆಲವ್ರು ಫಿದಾ ಆದ್ರೇ ಇನ್ನು ಕೆಲವ್ರು ಇರಿಸುಮುರಿಸು ಅನುಭವಿಸಿದ್ರು.

    ಸಂಭ್ರಮದ ದರ್ಬಾರ್ ನಲ್ಲಿ ಫುಲ್ ರೌಂಡ್ ಹೊಡೆಯುತ್ತಿರುವ ಜಮೀರ್ ಸಾಹೇಬ್ರಿಗೆ ಏನು ಹೊಸ ಐಡಿಯಾ ಹೊಡೆಯಿತೋ ಗೊತ್ತಿಲ್ಲ. ಸ್ಕೌಡ್ಸ್ ಅಂಡ್ ಗೈಡ್ ಗ್ರೌಂಡ್ ನಲ್ಲಿ ಫುಡ್ ಫೆಸ್ಟ್ ನಲ್ಲಿ ಭಾಗವಹಿಸಿದ್ದ ಸಾಹೇಬ್ರು ಊಟಕ್ಕೆ ಕೂತ್ರು.

    ಮೈಸೂರು ಊಟ ಗಡದ್ದಾಗಿ ತಿಂದು ತೇಗೋದು ಬಿಟ್ಟು ಗ್ಯಾಪ್ ನಲ್ಲಿ ಹೊಸ ವಿವಾದ ಮಾಡ್ಕೊಂಡ್ರು. ಊಟದ ಕೊನೆಯಲ್ಲಿ ಅನ್ನ ಮಿಕ್ಕಿತ್ತೋ ಅಥ್ವಾ ಪೊಲೀಸರ ಮೇಲೆ ಹೆವಿ ಪ್ರೀತಿ ಉಕ್ಕಿ ಹರಿಯಿತೋ ಗೊತ್ತಿಲ್ಲ. ಇಧರ್ ಆವೋ ಅಂತಾ ಖಾಕಿಯವರನ್ನು ಕರೆದ್ರು. ಮಿನಿಸ್ಟ್ರು ಕರೆಯುತ್ತಾರೆ ಅಂತಾ ಓಡೋಡಿ ಬಂದ ಪೊಲೀಸ್ ಪೇದೆಗಳಿಗೆ ಬಾಯಿ ಹಾ ಅನ್ನು ಅಂತಾ ಹೇಳಿ ಅನ್ನ ಕಲಸಿ ಹಂಗಂಗೆ ತುರುಕಿದ್ರು. ಅದು ಮೂರು ಜನ್ರಿಗೂ ಎಂಜಲೆಲೆ ಊಟ ನಾ ಬಾಯಿಗೆ ತುರುಕಿದ್ರು.

    ಇತ್ತ ಸಚಿವರ ಕೈ ತುತ್ತಿಗೆ ಬೇಡ ಅನ್ನೋದಕ್ಕೂ ಆಗದೇ ಪೇದೆಗಳು ಬಾಯಿ ಒರೆಸಿಕೊಂಡು ಸುಮ್ಮನಾದ್ರು. ಇದು ಮಿನಿಸ್ಟ್ರ ಸಿಂಪ್ಲಿಸಿಟಿ ಅಂತಾ ಅಂದ್ ಕೊಂಡ್ರು. ಈಗ ಈ ರೀತಿ ಎಂಜಲೆಲೆ ಊಟ ಕೊಟ್ಟಿದ್ದು ಎಷ್ಟು ಸರಿ ಎನ್ನುವ ಚರ್ಚೆ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲೇಜು, ಓದು, ಎಕ್ಸಾಂ ಟೆನ್ಷನ್‍ನಿಂದ ಹೊರಬಂದು ವಿದ್ಯಾರ್ಥಿಗಳಿಂದ ಫುಡ್ ಫೆಸ್ಟಿವಲ್

    ಕಾಲೇಜು, ಓದು, ಎಕ್ಸಾಂ ಟೆನ್ಷನ್‍ನಿಂದ ಹೊರಬಂದು ವಿದ್ಯಾರ್ಥಿಗಳಿಂದ ಫುಡ್ ಫೆಸ್ಟಿವಲ್

    ದಾವಣಗೆರೆ: ಪ್ರತಿದಿನ ಕಾಲೇಜು, ಓದು, ಎಕ್ಸಾಂ ಅಂತ ಟೆನ್ಷನ್‍ನಲ್ಲಿರುತ್ತಿದ್ದ ಸ್ಟೂಡೆಂಟ್ಸ್ ಗೆ ಸುಂದರೇ ಲೋಕವೇ ತೆರೆದುಕೊಂಡಿತ್ತು. ಇಲ್ಲಿ ಕೇವಲ ಎಂಜಾಯ್ ಮಾಡೋದಷ್ಟೇ ಅಲ್ಲ, ಮುಂದಿನ ಭವಿಷ್ಯವೇ ಕಣ್ಣಿಗೆ ಕಟ್ಟುವಂತಿತ್ತು.

    ದಾವಣಗೆರೆಯ ಬಿ.ಎಸ್.ಚನ್ನಬಸಪ್ಪ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಕಾಲೇಜಿನಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿತ್ತು. ಬಿಬಿಎಂ, ಕಾಮರ್ಸ್ ಸ್ಟೂಡೆಂಟ್ಸ್ ಪಾಲ್ಗೊಂಡಿದ್ದು ತಾವು ಶಿಕ್ಷಣ ಮುಗಿಸಿದ ನಂತರ ಬ್ಯುಸಿನೆಸ್ ಮಾಡೋವಾಗ ಏನೆಲ್ಲ ಸ್ಟ್ರಾಟಜಿ ಮಾಡಬೇಕು ಎನ್ನುವುದನ್ನು ಕಲಿತರು.

    ಫುಡ್ ಫೆಸ್ಟಿವಲ್‍ಗೂ ಮುನ್ನ ವಿದ್ಯಾರ್ಥಿಗಳು ತಯಾರಿಸುವ ಖಾದ್ಯಕ್ಕೆ ಟಿಕೆಟ್ ನೀಡಿದರು. ಸುಮಾರು 3 ಸಾವಿರ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದ್ದವು. ಕಾಲೇಜು ಹೊರತಾಗಿ ಹೊರಗಿನವರು ಬಂದು ಖಾದ್ಯವನ್ನು ಸವಿದು ಸಂತಸಪಟ್ಟರು. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಉತ್ತಮ ಅಡಿಪಾಯ ಆಗಿದೆ ಎಂದು ಉಪನ್ಯಾಸಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv